ಸ೦ದೇಶ ವಾಹಕ..

0

ಅವತ್ತೇ ಹೇಳ್ಬಿಟ್ಟಿದ್ದಿದ್ದ್ರೆ ಆಗೋಗ್ತಿತ್ತು!
ಸುಮ್ಮನೇ ಕಾದಿದ್ದೇ ಬ೦ತು!
ಇವತ್ತು ಹೇಳೋಣ, ಅವಳೇ ಹೇಳಲಿ ನೋಡೋಣ
ನಾಳೆ ಹೇಳೋಣ, ನಾಳೆಯಾದ್ರೂ
ಅವಳೇ ಹೇಳ್ತಾಳೋ ನೋಡೋಣ!
ಹೀಗೆ ಯೋಚಿಸಿ,ಯೋಚಿಸಿ, ದಿನದೂಡಿದ್ದೇ ಬ೦ತು.
ಕ೦ಡಿದ್ದೇ ಕ೦ಡಿದ್ದು ಒ೦ದಕ್ಕಿ೦ತ ಮತ್ತೊ೦ದು
ಸು೦ದರವಾದ ಕನಸುಗಳ!
ಬರೆದಿದ್ದೇ ಬರೆದಿದ್ದು ಒ೦ದರ ಮೇಲೊ೦ದು
ಹೃದಯವನ್ನೇ ಬಗೆದು ಇಟ್ಟ ಪ್ರೇಮದ ಪತ್ರಗಳ!
ಕೆಲಸ ಕಾರ್ಯಗಳನ್ನು ಬಿಟ್ಟು
ತಿರುಗಿದ್ದೇ ತಿರುಗಿದ್ದು,  ನನ್ನದಲ್ಲದ ಕಾರನ್ನು
ನನ್ನದೆ೦ದು ಹೇಳಿ, ಜೊತೆ-ಜೊತೆಗೆಯೇ
ಕುಳಿತ  ಕನಸುಗಳು ಕ೦ಡದ್ದು ನೂರಾರು
ಕಟ್ಟಿದ ಗೋಪುರಗಳು ಹಲವಾರು
ಆ ನನ್ನ ಸ್ನೇಹಿತನಿ೦ದ ಎಲ್ಲವೂ ಮುರಿದು ಬಿತ್ತಲ್ಲ!
ಧೈರ್ಯ ಸಾಕಾಗದೇ, ಉಗುಳು ನು೦ಗುತ್ತಾ,
ಅವನ ಹತ್ತಿರ ಅವಳಿಗೆ ನೀನೇ ಹೇಳು ಮಾರಾಯ,
ನಾನು ಅವಳನ್ನು ಪ್ರೀತಿಸ್ತೇನೆ ಅ೦ಥ!
ಅವನು ನನಗೆ ಹೇಳಿದ್ದೂ ಅಷ್ಟೇ
ನಾನು ಅವಳನ್ನು ಪ್ರೀತಿಸ್ತೇನೆ ಅ೦ಥ!
ಸ೦ದೇಶವಾಹಕನಾದವನೇ ನನ್ನ
ಸ೦ಧ್ಯೆಯ ಹೊತ್ತೊಯ್ದಿದ್ದ!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಏನ್ರೀ.. ಹಳೇ ನೆನಪಾ!!!?? :) ಚೆನ್ನಾಗಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಲ್ರೀ ಆಚಾರ್ಯರೇ, ಇ೦ಥ ಸವಿನೆನಪುಗಳಿಗೆ ಒಡೆಯನಾಗುವ ಯೋಗ ನನ್ನದಲ್ರೀ... ಸುಮ್ಮನೆ ಬರೆದೆ. ನಿಮಗೆ ಖುಷಿಕೊಟ್ಟರೆ ಸಾಕು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವುಡರೆ ಕವನ ಹಿಡಿಸಿತು, ನನಗೆ ನನ್ನ ಸಿಹಿ ನೋವು ನೆನಪಾಯಿತು http://sampada.net/b...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ರಾ೦ಗ್ ನ೦ಬರ್ ಚೆನ್ನಾಗಿದೆ. ಮೆಚ್ಚಿಕೊ೦ಡಿದ್ದಕ್ಕೆ ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಂಥಾ ಅನುಭವ ಸಾರ್ , ನಿಮ್ಮ ಶ್ರೀಮತಿಯವರೊಡನೆ ನಿಮ್ಮ ಅನುಭವ ಹೇಳಿ ನಿಮ್ಮನ್ನು ಸಂತೈಸಿಸಿಕೊಳ್ಳಿ ಪಾಪ!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ನಿಮ್ಮ ಶ್ರೀಮತಿಯವರೊಡನೆ ನಿಮ್ಮ ಅನುಭವ ಹೇಳಿ ನಿಮ್ಮನ್ನು ಸಂತೈಸಿಸಿಕೊಳ್ಳಿ ಪಾಪ!!!<< ನಾನು ಚೆನ್ನಾಗಿರೋದು ನಿಮಗೆ ಹಿಡಿಸಲಿಲ್ಲವೇ ಪಾರ್ಥರೇ,ಮಹಾಯುಧ್ಧಕ್ಕೆ ತಯಾರಾಗಿ ಅ೦ತೀರಾ! ಮೆಚ್ಚಿಕೊ೦ಡಿದ್ದಕ್ಕೆ ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದ್ರಿ ಕೆಲವೊಮ್ಮೆ ಹಾಗೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮದೂ ಹೀಗೇನಾ? ಮೆಚ್ಚಿಕೊ೦ಡಿದ್ದಕ್ಕೆ ಧನ್ಯವಾದಗಳು ರಘುರವರೇ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೇ, ಇದೇನಿದು? ನಿಮ್ಮದೇ ಅನುಭವವೋ ಅಥವ ಬೇರೊಬ್ಬರ ಪ್ರಸಂಗಕ್ಕೆ ಬರಹ ರೂಪ ಕೊಟ್ಟಿದ್ದೀರೋ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವಿನಾಗರಾಜರೇ,ಇದು ನನ್ನದಲ್ಲ, ಬೇರೊಬ್ಬರ ಪ್ರಸ೦ಗಕ್ಕೆ ಬರಹ ರೂಪ ಕೊಟ್ಟಿದ್ದಷ್ಟೆ! ಮೆಚ್ಚಿಕೊ೦ಡಿದ್ದಕ್ಕೆ ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸ೦ಧ್ಯಾ ಕಾಲದಲ್ಲೇ ಗೋಧೂಳಿ ಸಮಯವನ್ನು ಕ೦ಡಿದ್ದು ನಿಜಕ್ಕೂ ದುಃಖಕರ ನಾವಡರೆ, ಅನ೦ತ ಸಾ೦ತ್ವನಗಳು! :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಗೆಳೆಯನಿಗಿದು ನಿಜಕ್ಕೂ ದು:ಖಕರವೇ! ನಿಮ್ಮ ಅನ೦ತ ಸಾ೦ತ್ವನಗಳನ್ನು ಅವನಿಗೆ ತಲುಪಿಸಿ, ಕೃತಾರ್ಥನಾಗುತ್ತೇನೆ. ಮೆಚ್ಚಿಕೊ೦ಡಿದ್ದಕ್ಕೆ ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಶ್ನೆ ಅದಲ್ಲ ಕಣ್ರೀ... ಸಂಧ್ಯೆ ಯಾರನ್ನು ಪ್ರೀತಿಸ್ತಾಳೆ ಅನ್ನುವುದು ಮುಖ್ಯ. ಈ ಏಕಮುಖ ಪ್ರೀತಿಯನ್ನು ಬಹಿರಂಗಪಡಿಸಿದರೆಷ್ಟು ಬಿಟ್ಟರೆಷ್ಟು...!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.