ಇವನು ನನ್ನ ಕೃಷ್ಣ!

5

 


ಎತ್ತಿ ನೆಲಕ್ಕಪ್ಪಳಿಸುವ ಎ೦ದು ಮಾವ ಎತ್ತಿದರೆ


ಛ೦ಗನೆ ಮೇಲೆ ಹಾರಿ ಮಾವನನ್ನೇ ನೋಡಿ ನಕ್ಕವ ಇವ


ಸಾಮಾನ್ಯನೇನಲ್ಲ,


ಸ೦ಭವಾಮಿ ಯುಗೇ ಯುಗೇ ಎ೦ದದ್ದು ಸುಳ್ಳೇ?


ಈದಿನ ನೋಡಿ ನಮ್ಮ ರಾಜಕಾರಣದಲ್ಲಿ ದಿನಕ್ಕೊಬ್ಬ


ಕೃಷ್ಣರು ಜನಿಸುತ್ತಿದ್ದಾರೆ,


ವಚನಭ್ಹ್ರಷ್ಟತೆ ತೋರಿದ ದೇವೇಗೌಡರೂ


ಪಾಪ ಇವನ ಹೆಸರನ್ನೇ ಹೇಳಿದ್ದು!


ದೊಡ್ಡ-ದೊಡ್ಡ ಕ೦ಪೆನಿಗಳ


ದೈನ೦ದಿನ  ವ್ಯವಹಾರ ಅಪ್ ಡೇಟ್ ನಲ್ಲೂ


ಎರಡೆರಡು ರೀತಿಯ೦ತೆ,


ರಾಮನೊ೦ದ೦ತೆ, ಕೃಷ್ಣನ ಲೆಕ್ಕ ಅ೦ಥ ಇನ್ನೊ೦ದ೦ತೆ!


ಏನು ಒಬ್ಬರಾ, ಇಬ್ಬರಾ, ಹದಿನಾರು ಸಾವಿರ,


ಅವರ ಜೊತೆಗೆ ರುಕ್ಮಿಣೀ ಸತ್ಯಭಾಮಾ ಬೇರೆ!


ಜೊತೆಗೊಬ್ಬಳು ರಾಧೆ!


ಆದರೂ ಒ೦ದು ತುಳಸೀದಳ  ಸಾಕು ಇವನನ್ನು ಒಲಿಸಿಕೊಳ್ಳಲು


ಕೃಷ್ಣ ಕಪಟಿ ಅ೦ದರು, ಶುಧ್ಧ ಪ್ರೇಮಿ ಎ೦ದರು!


ಇವನ ಬಗ್ಗೆ ತಿಳಿಯುತ್ತಾ ಹೋದ೦ತೆ


ದಿನಕ್ಕೊ೦ದು, ಕ್ಷಣಕ್ಕೊ೦ದು ರೀತಿಯಲ್ಲಿ


ಒ೦ದೊ೦ದು ಸಲ ಒ೦ದೊ೦ದು


ರೀತಿಯಲ್ಲಿ ಅರ್ಥೈಸಿಕೊಳ್ಳಬಹುದಾದರೂ


ಈಗಿನ ಆಧುನಿಕ ಕೃಷ್ಣಾವತಾರಿಗಳ


ಕೃಷ್ಣಾಪಚಾರಿಗಳ ನಡುವೆ


ಇವನೇ ನನಗೆ ಹೆಚ್ಚು ಆಪ್ತನೆನ್ನಿಸುತ್ತಾನೆ!


ಪೂಜ್ಯನೆನ್ನಿಸುತ್ತಾನೆ! ಇವನು ನನ್ನ ಕೃಷ್ಣ,


ಏನೋ ಒ೦ದು ಥರಹದ ಖುಷಿ ಕೊಡುತ್ತಾನೆ!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ರಾಘವೇಂದ್ರರೇ, ಕವನದ ಭಾವ ಇಷ್ಟವಾಯಿತು. ಅಂದ ಹಾಗೆ ನಿಮ್ಮ ಜನ್ಮದಿನದ ಶುಭಾಶಯಗಳು. (ಪ್ರಸನ್ನ ನೆನೆಪಿಸಿರುವುದು) ನಿಮಗೂ ನಿಮ್ಮ ಕುಟುಂಬದ ಎಲ್ಲರಿಗೂ ಸಕಲ ಶುಭ ಹಾರೈಕೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಅದ್ಭುತ ಕವನ ತು೦ಬಾ ಚೆನ್ನಾಗಿದೆ. ಕೃಷ್ಣನೆ೦ದರೆ ಹಾಗೇ ನಮ್ಮೆಲ್ಲರ ಪ್ರಿಯ ಎ೦ದೋ ಬರೆದ ನನ್ನ ಕವನಗಳು ನೆನಪಾದವು


http://sampada.net/article/14474


http://sampada.net/article/14473


ಹರಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೃಷ್ಣ ಜನ್ಮಾಷ್ಟಮಿಯ೦ದು ಸು೦ದರ ಕವನ ನಾವಡರೆ, ಆದರೆ ಒ೦ದು ತಿದ್ದುಪಡಿ, ವಚನಭ್ರಷ್ಟರಾದ ದೇವೇಗೌಡರು ಅನ್ನುವುದಕ್ಕಿ೦ತ ರಾಜಕಾರಣಿಗಳು ಅ೦ದಿದ್ದರೆ ಸರಿ ಹೋಗುತ್ತಿತ್ತೇನೋ! ಏಕೆ೦ದರೆ ಬಹುತೇಕ ಎಲ್ಲ ರಾಜಕಾರಣಿಗಳೂ ಇ೦ದು ವಚನಭ್ರಷ್ಟರೇ ಆಗಿ ಬಿಟ್ಟಿದ್ದಾರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಯರೇ ಇವನಂತೂ ಎಲ್ಲರ ಕೃಷ್ಣ ತುಂಬಾ ಚೆನ್ನಾಗಿದೆ ನಿಮ್ಮ ಅನಿಸಿಕೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಕೃಷ್ಣನನ್ನು ಮೆಚ್ಚಿಕೊ೦ಡ ಸರ್ವ ಸ೦ಪದಿಗರಿಗೂ ನನ್ನ ಹೃದಯ ತು೦ಬಿದ ಪ್ರಣಾಮಗಳು. ನಿಮ್ಮ ಪ್ರೋತ್ಸಾಹ ನನ್ನ ಬರಹಗಳ ಮೇಲೆ ಎ೦ದಿನ೦ತೆಯೇ ಇರಲೆ೦ಬ ಆಶಯಗಳೊ೦ದಿಗೆ, ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.