ಒ೦ದು ಸ್ವಗತ..

5

ಆಗಿ೦ದಲೇ ಬಿಚ್ಚಿ ಗ೦ಟುಗಳ

ಒ೦ದೊ೦ದಾಗಿ ಹುಡುಕುತ್ತಲೇ ಇದ್ದೇನೆ

ಎಲ್ಲಾ ಗ೦ಟುಗಳೂ ಭರಪೂರ ತು೦ಬಿವೆ!

ನನ್ನದ್ಯಾವುದು, ನನ್ನ ಭಾಗವೆಷ್ಟು?

ಜೀವನ ನನ್ನದಾದರೂ

ನಡೆದ ಹಾದಿ ನನ್ನದಲ್ಲ!

ಯಾವುದೋ ಬಸ್ಸುಗಳು

ಎಲ್ಲೆಲ್ಲಿಯೋ ಕೆಲವೊ೦ದು ಆರ್ಸೀಸಿಯದ್ದಾದರೆ

ಮತ್ತೆ ಕೆಲವೊ೦ದು ಹೆ೦ಚಿನ ನಿಲ್ದಾಣಗಳು

ಹೆಚ್ಚಿನದ್ದೆಲ್ಲಾ ಬಟಾಬಯಲೇ!

ಗುರುತಿರದ ಪ್ರಯಾಣಿಕರು

ಬೇಕೆ೦ದು ಎಲ್ಲರದನ್ನೂ ನಾನೇ ತು೦ಬಿಕೊ೦ಡಿದ್ದೇನೆ,

ಪರರಿಗಾಗಿ ಬದುಕಿದ ಬದುಕೇನೂ  ನನ್ನದಲ್ಲ

ಸ್ವ೦ತದ್ದೇನಿಲ್ಲ ನನ್ನದೆ೦ದು,

ನನ್ನದಲ್ಲದ ಒ೦ದು ಊರುಗೋಲು  

ಜೊತೆಗಿನ ಗ೦ಟುಗಳು ಮಾತ್ರವೇ,

ಯಾವ್ಯಾವ ಗ೦ಟುಗಳು ಯಾರ್ಯಾರದ್ದೋ?

ಬದುಕಿನ ಸತ್ಯಾನ್ವೇಷಣೆಯ ಹಾದಿಯಲ್ಲಿದ್ದೇನೆ.

ಊರುಗೋಲು? ಬೇಕು, ನಡೆಯುವಾಗ

ಎಡವಿದರೆ ಬೇಕಲ್ಲವೇ? ಎಲ್ಲವನ್ನೂ ಮರಳಿಸಿದ್ದೇನೆ

ಇದೊ೦ದು ಗ೦ಟು ಯಾರದ್ದೆ೦ದು ಗೊತ್ತಾದರೆ ಸಾಕು

ಕೊಟ್ಟು ಮು೦ದೆ ನಡೆಯುವವನಿದ್ದೇನೆ!

ಇದೊ೦ದು ಗ೦ಟು ಯಾರದೆ೦ದು ಗೊತ್ತಾದರೆ ಸಾಕು.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಜೀವನ ನನ್ನದಾದರೂ ನಡೆದ ಹಾದಿ ನನ್ನದಲ್ಲ! ಏಕೆಂದರೆ ಎಷ್ಟೋ ಜನ ಈ ಹಾದಿಯಲ್ಲಿ ನಡೆದಿದ್ದಾರಲ್ಲ ಎಲ್ಲವನ್ನೂ ಹಂಚಿ ಬಿಡಲು ಆಗುವುದಿಲ್ಲ. ಸನ್ಯಾಸಿ ಎನ್ನುವವನೂ ಬಟ್ಟೆಯ ತಾನು ತೊಟ್ಟಿರುವನಲ್ಲ! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು, ಎಲ್ಲವನ್ನೂ ನೀಡಲಾಗುವುದಿಲ್ಲ ಹಾಗೆಯೇ ಎಲ್ಲವನ್ನೂ ಗಳಿಸಲಾಗುವುದೂ ಇಲ್ಲ! ಪ್ರತಿಕ್ರಿಯೆಗೆ ಧನ್ಯವಾದಗಳು. ನಮಸ್ಕಾರಗಳೊ೦ದಿಗೆ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, ಸು೦ದರ ಕಲ್ಪನೆ, ನಮ್ಮ ಕಡೆ "ಗ೦ಟು ಇರುವವರೊಡನೆ ನೆ೦ಟು ಬೆಳೆಸಿ" ಅ೦ತಾರೆ. ಒ೦ದಾದರೂ ಗ೦ಟು ಕೈಯಲ್ಲಿರಲಿ ಬಿಡಿ. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗೆ ಧನ್ಯವಾದಗಳು ಮ೦ಜಣ್ಣ. ನಮಸ್ಕಾರಗಳೊ೦ದಿಗೆ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿಂತಿಸದಿರಿ ಹಗಲಿರುಳೂ ಯಾರದ್ದೆಂದು ಆ ಕೊನೆಯ ಗಂಟು ಯೋಚಿಸಿ ನೋಡಿ ಯಾರೊಂದಿಗೆ ಬೆಳೆದಿದೆ ಆ ಹೊಸ ನಂಟು ನಂಟು ಇರುವ ತನಕವಷ್ಟೇ ಇರುತ್ತದೆ ಗಂಟಿನ ಹೊರೆಯ ಭಾರ ನಂಟು ಕಳಚಿಕೊಂಬುದಕ್ಕೆ ಕಷ್ಟವಾದರೂ ಮಾಡಬೇಕು ನಿರ್ಧಾರ ನಾವಾಗಿ ನಾವೇ ಬಿಡಿಸಿಕೊಂಡರೆ ಅದರಿಂದ ಮನಸ್ಸಾದೀತು ಹಗುರ ತಾನಾಗಿ ತಾನೇ ಬಿಡಿಸಿಕೊಂಡರೆ ಈ ಮನಸ್ಸು ಆದೀತು ಇನ್ನೂ ಭಾರ - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹುಡುಕುತ್ತಲಿದ್ದೇನೆ ದಿನವೆಲ್ಲ ಕೇಳುತ್ತಲಿದ್ದೇನೆ ಮನಸ್ಸನ್ನು ಗ೦ಟು ಯಾರದೆ೦ದು? ಅರಿವಾದ ಕೂಡಲೇ ಗ೦ಟು ನೀಡಿ ಹೊರಡುವುದು ಈ ಗಾಡಿ! ಪ್ರತಿಕ್ರಿಯೆಗೆ ಧನ್ಯವಾದಗಳು. ನಮಸ್ಕಾರಗಳೊ೦ದಿಗೆ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮದಲ್ಲದಿರೆ ನಿಮ್ಮ ಜವಾಬ್ದಾರಿ ಜಾಸ್ತಿ ಬರುವರು ಬಿಡಿ ಎಂದಾದರೊಮ್ಮೆ ಅದರ ನಿಜ ವಾರಸುದಾರ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಾಗಿ ವ೦ದನೆಗಳು ಗೋಪಿನಾಥರೇ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಘವೇಂದ್ರರೇ, ಅರ್ಥ ಮಾಡಿಕೊಳ್ಳಲು ಗೊಂದಲವಾಯಿತು. ಬಂದ ಪ್ರತಿಕ್ರಿಯೆಗಳು, ನಿಮ್ಮ ಉತ್ತರ ನೋಡಿ ತಿಳಿಯಿತು, ನಿಮ್ಮ ಕವನದಲ್ಲಿರುವುದೂ ಗೊಂದಲವೆಂದು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು! ಕವಿನಾಗರಾಜರೇ, ನಾನು ಬರೆದಿರುವ ಕವನಗಳ ಅ೦ತರಾಳವನ್ನು ಅರಿಯಲು ಓದುಗರಿಗೆ ಬಿಟ್ಟುಬಿಡುತ್ತೇನೆ ಗೊ೦ದಲಗಳು, ಬದುಕಿನಲ್ಲಿನ ಮಾನವನ ದ್ದ್ವ೦ದಗಳು ಮು೦ತಾದ ಕವನಗಳು ನನ್ನ ಲೇಖನಿಯಿದ ಹೆಚ್ಚೆಚ್ಚಾಗಿ ಬರುತ್ತಿವೆ, ನಾನೂ ಅದಕ್ಕೆ ತೀರಾ ಕ್ಲೀಷ್ಟವಾದ ಪದಗಳನ್ನು ಉಪಯೋಗಿಸಿ, ಮಾರ್ಮಿಕ ಅರ್ಥಗಳನ್ನು ಅದರೊಳಗೆ ತು೦ಬುವ ಸಾಹಸ ಮಾಡುತ್ತಿದ್ದೇನೆ, ಆರೀತಿ ನಿಮಗ್ವೆಲ್ಲರಿಗೂ ಮುದನೀಡಿರುವ ಸಒತಸವು ನಿಮ್ಮ ಪ್ರತಿಕ್ರಿಯೆಯ್೦ದ ನನಗೆ ಅರಿವಾಗುತ್ತಿದೆ. ನನ್ನಲ್ಲಿ ಉಧ್ಬವಿಸುತ್ತಿರುವ ಪ್ರಶ್ನೆಗಳಿಗೆ ಸ೦ಪದಿಗರಿ೦ದ ಪ್ರತಿಕ್ರಿಯೆಗಳನ್ನು ನಿರೀಕ್ಷಿಸುತ್ತಾ ಗೊ೦ದಲಗಳಿಗೆ ಪರಿಹಾರವನ್ನು ಪಡೆಯುವುದು ನನ್ನ ಉದ್ದೇಶ. ನಾನೂ ಈ ಥರಹದ ಬದುಕಿನ ಗೊ೦ದಲಗಳಿಗೆ ಸ೦ಪೂರ್ಣ ಪರಿಹಾರವನ್ನು ಬಯಸುತ್ತಿದ್ದೇನೆ. ಕವನವನ್ನು ಮೆಚ್ಚಿಕೊ೦ಡು ಮ್ಪ್ರತಿಕ್ರಿಯಿದ್ದಕ್ಕೆ ನನ್ನ ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.