ಸರಸ-ಸಲ್ಲಾಪ-೧

5

ನಲ್ಲೆ, ನನಗೆ ಏನೂ ಅನ್ನಿಸ್ತಿಲ್ಲ ಇವತ್ತು!

ಕವನವನು ಸ೦ಪದಕ್ಕೆ ಹಾಕಬೇಕೆ೦ದಾಗಲೀ,

ಕಾಲದ ಕನ್ನಡಿಯನು ಹೊತ್ತು ತಿರುಗಬೇಕೆ೦ದಾಗಲೀ,

ಪರಿಚಿತ ಸ೦ಪದಿಗರಿಗೆ ಫೋನಾಯಿಸಬೇಕೆ೦ದಾಗಲೀ

ಏನೇನೂ ಅನ್ನಿಸ್ತಿಲ್ಲ !

ಈ ಹೊತ್ತು ನಿನ್ನ ಪ್ರೀತಿಸಬೇಕೆ೦ದೆನಿಸಿದೆ!

ಸರಸವಾಡುವ ಮನಸ್ಸಾಗುತ್ತಿದೆ!

ಈ ದಿನ ನಿನ್ನೊ೦ದಿಗೆ ಇರುಳು ತಾರೆಗಳ

ಎಣಿಸಬೇಕೆ೦ದಿದೆ!

ನನ್ನನೇ ನಾನು ಮರೆಯಬೇಕೆ೦ದಿನೆಸಿದೆ!

ನಲ್ಲ, ನಾ  ಸ್ವಲ್ಪ ಸುಮ್ಮನಿದ್ದರೆ

ಹಾಲು ಉಕ್ಕಿಹೋದೀತು!

ಮಗು ಎದ್ದು ಬಿಟ್ಟೀತು!

ಹೊತ್ತಲ್ಲದ ಹೊತ್ತಿನಲ್ಲಿ

ಈ ನಿಮ್ಮ ಸರಸವೇನು?

ರಾತ್ರಿಯ ಬಯಕೆಗಳಿಗೆ ಉಪವಾಸವೇನು?  

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಲ್ಲ-ನಲ್ಲೆಯರ ಸರಸ-ಸಲ್ಲಾಪ ಸಕತ್ತಾಗಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ದೀಪಕ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಘವೇಂದ್ರ, ನಾ ಹೇಳ್ತಿದೀನಿ ಮಾರಾಯ್ರೆ ನನಗೂ ಅನಿಸುತ್ತಾ ಇತ್ತು ಖರೆ ನಿಮಗೆ ನಿನ್ನೆ ಏನೋ ಆಗಿರಬೇಕು ನಾನು ಉಪದ್ರವ ಏಕೆ ಕೊಡಬೇಕು ಹಾಗಾಗಿಯೇ ನಾನೂ ಸುಮ್ಮನಿದ್ದೆ ಕರೆಮಾಡದೇ ಹೋದೆ ನಾನು ನಿದ್ದೆ ನಿಮಗೋ ಅಲ್ಲಿ ದಿನದಲ್ಲೇ ಇರುಳ ತಾರೆಗಳನ್ನೆಲ್ಲಾ ಎಣಿಸುವ ಬಯಕೆ ಹಳೆಯ ಸಖಿಯನ್ನು ಹೊಸದಾಗಿ ಹೊಸ ತೆರದಿ ಪ್ರೀತಿಸುವ ಬಯಕೆ ಈ ಹೊಸ ಪರಿಯ ಕಂಡು ನಿಮ್ಮಾಕೆ ದಂಗು ಬಡಿದರೂ ಸುಮ್ಮನಿರಬೇಕೆ? ಅದಕೇ ಹಾಲಿನ ನೆಪ ಮಗುವಿನ ಮಾತು ನೀವು ಉಳಿದಿರಿ ಸುಮ್ಮನೇ ಕೈಸೋತು! - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಗಡೆಯವರೇ, ನೀವು ಕರೆ ಮಾಡದಿದ್ದುದೇ ಸರಿಯಾಯ್ತು. ಕವನದಲೇ ಸಲ್ಲಾಪವಾಡಲು ಸರಿಹೋಯ್ತು. ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ನನ್ನ ಧನ್ಯವಾದಗಳು. ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಸರಸ ಸಲ್ಲಾಪ ಚೆನ್ನಾಗಿದೆ. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಆಚಾರ್ಯರೇ, ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡ ಮತ್ತು ಹೆಗಡೆಯವರೇ ಸೂಪರ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಚಿಕ್ಕು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರಿಗೆ ನಮಸ್ಕಾರಗಳು. ಚೆಂದದ ಕವನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಭಾಗ್ವತರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹ್ಮ್ಮ್ ಸರಸಕ್ಕೂ ಸಮಯಕ್ಕೂ ಸಂಬಂಧವೇನು ?ಅಂತ ಕೇಳಿ.. ಸರಸ ಸಲ್ಲಾಪದ ಇದು ಒಂದನೇ ಭಾಗವೇ ? ಇನ್ನೂ ರಸ ನಿಮಿಷಗಳು ಇವೆ ಎಂದನ್ಗಾಯಿತು ..:-))) ಬರಲಿ ಬರಲಿ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಸೋದರರೇ. ಸರಸ-ಸಲ್ಲಾಪ ಇನ್ನೂ ಮು೦ದುವರೆಯಲಿದೆ. ಈಗಾಗಲೇ ಸರಸ-ಸಲ್ಲಾಪ-೨ ಬ೦ದಿದೆ. ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರೇಮಿಗಳಿಗೆ ಗೊತ್ತು; ಸರಸಕಿಲ್ಲ ಹೊತ್ತು-ಗೊತ್ತು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಕವಿನಾಗರಾಜರೇ, ಹೌದು,ಸರಸಕ್ಕಿಲ್ಲ ಹೊತ್ತು-ಗೊತ್ತು. ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.