ಜೀವನ

0

ಯಾರಿಗಾಗಿ ಇಲ್ಲಿಗೆ ಬಂದಿರುವೆ?

ತಿಳಿಯದ ನೀನು

ನಡೆಸುತ್ತಿರುವ ಬದುಕಾದರೂ ಏನು?

 

ಅರಿತಿಹೆಯಾ.

ಜೀವನಕ್ಕಾಗಿ ನೂರಾರು ದಾರಿಗಳು

ಬದುಕುವುದಕ್ಕೆ ಉತ್ತಮ ಹಾದಿ ಮುಖ್ಯ.

 

ಎಲ್ಲರೂ ಬದುಕುತ್ತಾರೆ

ಜಗದೊಳಗೆ ಜೀವನ ನಡೆಸುತ್ತಾರೆ

ಬಾಳುವ ರೀತಿ ಮಾತ್ರ ಬೇರೆ

ಕೆಲವರು ಹಣಕ್ಕಾಗಿ

ಮತ್ತಿತರರು ಗೌರವಕ್ಕಾಗಿ.

ಇದು ನಿಜವೇ?

 

ಹಸಿವಿದ್ದರೂ ತೋರ್ಪಡಿಸದೆ

ಬದುಕುವುದು ನಮ್ಮನ್ನು ನಾವು ವಂಚಿಸಿದಂತೆ

ಹೊಟ್ಟೆ ತುಂಬಿದರೂ

ಹಸಿವು ಇದ್ದಂತೆ ನಟಿಸುವುದು

ಮೋಸವಂತೆ.

 

ಹಾಗಾದರೆ ಇವರೆಡನ್ನೂ

ತುಲನೆ ಮಾಡಿದಾಗ

ನಮಗೆ ಸಿಗುವುದು

ನೈಜ ಜೀವನವೇ?

ಅದನ್ನ ಅವರವರೇ ಅರಿಯಬೇಕು!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.