ಮನುಜ

4

ಸುತ್ತ ಜೇಡರ ಬಲೆ
ಸಿಕ್ಕಿಹಾಕಿಕೊಂಡೇನೆಂಬ ಭಯ
ಈಗಾಗಲೇ ಬಲೆಯಲ್ಲಿ ಬಿದ್ದಾಗಿದೆ ಎಂಬ ಭ್ರಮೆ
ಹೊರ ಬರುವುದು ಹೇಗೆ
ತಿಳಿದವರು ಹೇಳುತ್ತಾರಾ?
ಗೊತ್ತಿಲ್ಲ.
ಮತ್ತೆ ಬದುಕಿ ಬಿಡುತ್ತಾನೆಂಬ ಕಿಚ್ಚು
ನನ್ನವರು ಯಾರು ಇಲ್ಲವೇ?

ಪ್ರಪಂಚದಲ್ಲಿ ಇರುವವರಲ್ಲಿ
ಸ್ವಾರ್ಥಕ್ಕಾಗಿ ಬದುಕುವರು ಹಲವರು
ಅನ್ಯರಿಗಾಗಿ ಬದುಕುವರು ಕೆಲವರು
ಕಷ್ಟದಲ್ಲಿದ್ದಾಗ ಬರುವರು ಕೆಲವರು ಮಾತ್ರ
ಕುಹಕವನ್ನಾಡುವರು ಹಲವರು
ಹಾಗಾದರೆ ಪ್ರಪಂಚ ಜೇಡರ ಬಲೆಯೇ?
ಗೊತ್ತಿಲ್ಲ.

ಇದ್ದಾಗ ಅನ್ಯರಿಗಾಗಿ ಬದುಕು ಎಂದವಳು ಅಮ್ಮ
ನಡೆಯುತ್ತಿರುವುದು ಹಾಗೆಯೇ
ಸಹಾಯವನ್ನು ದುರ್ಬಳಕೆ ಮಾಡಿಕೊಂಡು
ನನ್ನನ್ನೇ ಬಲೆಯಲ್ಲಿ ಸಿಕ್ಕಿಸಿದಂಥವರು ಹಲವರು
ನನ್ನವರೇ ಪರರೇ?
ಅದೂ ಗೊತ್ತಿಲ್ಲ.

ಮನುಜ ಜನ್ಮ ಅಪರೂಪವಂತೆ
ಹಾಗಂದದ್ದು ಪೂರ್ವಜರು
ಮನುಜನಾದ ಮೇಲೆ ಅವನ ಕರ್ತವ್ಯವಾದರೂ ಏನು?
ಅನ್ಯರಿಗೆ ತೊಂದರೆ ಕೊಟ್ಟು
ಸಂತಸ ಪಡುವುದೇ?

ಇಂತಹ ಮನುಜ ಜನ್ಮ ಎನಗಂತೂ ಬೇಡವೇ ಬೇಡ,
ಇದು ನನ್ನ ಅಸಹಾಯಕತೆಯಲ್ಲ,
ಬದಲಾಗಿ ನನ್ನ ಪ್ರಾರ್ಥನೆ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಕೋಮಲ್ ರವರೆ, <<ಪೂರ್ವಿಜರು>> ಪೂರ್ವಜರು -ಈ ಪದ ಗಮನಿಸಿ. ನಿಮ್ಮ ಕವನ ಕಟ್ಟುವ ಕ್ರಿಯೆ ಮುಂದುವರಿಯಲಿ.ಪದ ಜೋಡಿಸುವ ಕ್ರಮದ ಬಗ್ಗೆ ಗಮನ ಹರಿಸಿದರೆ ನೀವು ಉತ್ತಮ ಕವಿಯಾಗಿ ರೂಪುಗೊಳ್ಳಬಹುದು. ನನ್ನ ಈ ಅಭಿಪ್ರಾಯವನ್ನು ನೀವು ಸಕಾರಾತ್ಮಕವಾಗಿ ಪ್ರೀತಿಯಿಂದ ಸ್ವೀಕರಿಸುವಿರೆಂಬ ನಂಬಿಕೆಯೊಂದಿಗೆ _ ಭಾಗ್ವತ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಾಗ್ವತರವರೆ, ಪೂರ್ವಿಜರು - ಪೂರ್ವಿಕರು ಬಗ್ಗೆ ಅನುಮಾನವಿದೆ. ಬೇರೆ ಯಾರಾದರೂ ತಿಳಿಸುತ್ತಾರಾ ನೋಡುತ್ತಿದ್ದೇನೆ. ನಿಮ್ಮ ಸಲಹೆಯನ್ನು ಖಂಡಿತಾ ಸ್ವೀಕರಿಸುತ್ತೇನೆ. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೋಮಲ್ ರವರೆ ನಿಮ್ಮ ಹಾಸ್ಯ ಬರೆಹ ಓದುತ್ತೇನೆ ಅವು ಇಷ್ಟವಾಗುತ್ತದೆ. ನಿಮ್ಮ ಈ ಕವನವೂ ಸುಂದರವಾಗಿದೆ. ಅದರಂತೆ ನಿಮ್ಮಿಂದ ಕವನಗಳು ಮೂಡಿ ಬರಲಿ ಎಂಬುದು ನನ್ನ ಆಶಯ. ಇದು ಸಲಹೆ ಅನ್ನುವದಕ್ಕಿಂತ ಆಶಯ ಎನ್ನುವದೇ ಸರಿ. _ಪೂರ್ವಜ-(ನಾ) ಹಿರಿಯ, ಹಿಂದಿನವ, ಅಗ್ರಜ, ಪುರಾತನ ಕಾಲದ. ಎಂಬರ್ಥವಿದೆ. ಬಲ್ಲವರು ತಿಳಿಸುವರೆಂಬ ನಿರೀಕ್ಷೆಯೊಂದಿಗೆ..... -ಭಾಗ್ವತ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೋಮಲ್ ರವರೆ, ಈ ಕವನವನ್ನು ಹೀಗೆ ... ಕಟ್ಟಬಹುದೇ ? ಇದೇ ಸರಿ ಎನ್ನುವದೂ ನನ್ನ ಅಭಿಪ್ರಾಯವಲ್ಲ. ( ಕವಿಯ ಕ್ಷಮೆ ಕೋರಿ ) ಸುತ್ತ ಜೇಡರ ಬಲೆ ಸಿಕ್ಕಿಹಾಕಿಕೊಂಡನೆಂಬ ಭಯ..! ಬಲೆಯಲ್ಲಿ ಬಿದ್ದಿರುವೆನೆಂಬ ಭ್ರಮೆ ತಿಳಿದವರು ಹೇಳುವರೇ ? ಹೊರ ಬರುವ ಕ್ರಮ ಗೊತ್ತಿಲ್ಲ....... ಬದುಕಿ ಬಿಡಬಹುದೀತನೆಂಬ ಕಿಚ್ಚು ನನ್ನವರು ಯಾರಿಹರು ? ಜಗದಿ...ಇರುವವರಲ್ಲಿ ಹಲವರದು ಸ್ವಾರ್ಥದ ಬದುಕು ಕೆಲವರದು ಅನ್ಯರಿಗಾಗಿ ಬದುಕು ಸಂಕಟದಿ ಮಾತ್ರ ಕೆಲವರೇ..! ಕುಹಕವನ್ನಾಡುವರು ಹಲವರು ಜಗವು ಜೇಡರ ಬಲೆಯೇ? ಅರಿವಿಲ್ಲ....! ಬದುಕಿರುವವರೆಗೆ ಅನ್ಯರಿಗಾಗಿ ಬದುಕು ಎಂಬುದು ಅಮ್ಮನ ಮಾತು... ಹಾಗೆಯೇ ನಡೆಯುತ್ತಿರುವೆ. ಆದರೆ.... ನನ್ನ ನೆರವು ಪಡೆದವರಿಂದ ನಾನೀಗ ಬಲೆಯಲ್ಲಿ ನನ್ನವರೇ, ಪರರೇ ಅದೂ ಗೊತ್ತಿಲ್ಲ ಅಪರೂಪವಿದು ಮನುಜ ಜನ್ಮ ಎಂಬ ಪೂರ್ವಜರ ಮಾತು ! ಯಾವುದು ಮನುಜನ ಕರ್ತವ್ಯ .. ಅನ್ಯರನು ಹಿಂಸಿಸಿ ಸಂತಸ ಪಡುವುದೇ..? ಬೇಡ.ನನಗೆ ಇಂತಹ ಮಾನವ ಜನ್ಮ ಇದು ನನ್ನ ಅಸಹಾಯಕತೆಯಲ್ಲ ಬದಲಾಗಿ ಪ್ರಾರ್ಥನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಕವನಕ್ಕಿಂತ ನಿಮ್ಮ ಕವನವೇ ಹೆಚ್ಚು ಚೆನ್ನಾಗಿದೆ. ಇದು ಅತಿಶಯೋಕ್ತಿಯಲ್ಲ. ಸತ್ಯ. ಸೂಪರ್ ಭಾಗ್ವತರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೋಮಲ್ ರವರೆ, ನನ್ನ ಅನಿಸಿಕೆಯನ್ನು ಓರ್ವ ಸಹೃದಯ ಮಿತ್ರನಂತೆ ಸ್ವೀಕರಿಸಿರುವ ತಮ್ಮ ವಿಶಾಲತೆಗೆ ನನ್ನ ವಂದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೋಮಲ್ ಏನ್ರಿ ಇದು? ರಿವರ್ಸ್ ಗೇರ್ ? ಹಾಸ್ಯ ಚಕ್ರವರ್ತಿ ಅಂತ ಮೊನ್ನೆ ಬರ್ದಿದ್ದೆ..ಈಗ ಗಂಭೀರ ಕವನ ಕೊಟ್ರ್ಯಲ್ಲ.. ಇರಲಿ.. ಕವನ ಚೆನ್ನಾಗಿದೆ,ಅಸಹಾಯಕತೆ,ಕಳಕಳಿ ಬಿಂಬಿಸುತ್ತದೆ.. ಸಿದ್ದೆಸನಾಣೆಗೂ ಬೋ ಪಸಂದಾಗೈತೆ..!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಕಾಂತ್ ಹಾಸ್ಯದ ಜೊತೆ ಸ್ವಲ್ಪ ಸೀರಿಯಸ್. ಮಿರ್ಚ್ ಮಸಾಲ ಇದ್ದಂಗೆ. ನಿಮ್ಮ ಅಭಿಮಾನಕ್ಕೆ ಕೃತಜ್ಞತೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೋಮಲ್ ಕವನ ಬೋ ಪಸಂದಾಗೈತೆ ನಾವಿರುವುದು ಯಾರಿಗೆ? ನಮಗಾ ಬೇರೆಯವರಿಗಾ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಯರೆ, ನಾನು ಯಾರಿಗೆ ಸಹಾಯ ಮಾಡುತ್ತೇನೋ ಸಾಮಾನ್ಯವಾಗಿ ಅವರೇ ನನಗೆ ಮೋಸ ಮಾಡಿದ್ದಾರೆ. ಯಾಕೆ ಹೀಗೆ ಎನ್ನುವ ಪ್ರಶ್ನೆ ಹಲವು ದಿನದಿಂದ ಕಾಡುತ್ತಿತ್ತು. ಆದರೂ ಅಮ್ಮನ ನುಡಿಗಳನ್ನು ಪಾಲಿಸುತ್ತಲೇ ಇದ್ದೇನೆ. ಹಾಗಾಗಿ ಈ ಕವನ ಬರೆದೆ. ನಿಮ್ಮ ಪ್ರತಿಕ್ರಿಯೆಗೆ ಹೃತ್ಪೂರ್ವಕ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ ಕೋಮಲ್ ಬೇಸರವಾಗುತ್ತೆ , ಆದರೆ ನಮ್ಮ ಅಭ್ಯಾಸವನ್ನು ಬಿಡಲಾಗುದಿಲ್ಲವಲ್ಲ. ಅದು ಅವರ ಅಭ್ಯಾಸ, ಇದು ನಮ್ಮ ಅಭ್ಯಾಸ.. ಅಷ್ಟೇ ಪ್ರಾಯಶಃ ನಾವು ಇನ್ನೊಬ್ಬರ ಮೇಲೆ ಜಾಸ್ತಿಯೇ ಭರವಸೆ , ಆಸೆ ಇಟ್ಟಿರುತ್ತೇವೆ ಅದಕ್ಕೇ ಹೀಗಾಗುತ್ತೆ ಅಂತ ಕಾಣ್ಸುತ್ತೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುತ್ತ ಜೇಡರ ಬಲೆ ಸಿಕ್ಕಿಹಾಕಿಕೊಂಡೇನೆಂಬ ಭಯ ಈಗಾಗಲೇ ಬಲೆಯಲ್ಲಿ ಬಿದ್ದಾಗಿದೆ ಎಂಬ ಭ್ರಮೆ ಹೊರ ಬರುವುದು ಹೇಗೆ ತಿಳಿದವರು ಹೇಳುತ್ತಾರಾ? ಗೊತ್ತಿಲ್ಲ. ಮತ್ತೆ ಬದುಕಿ ಬಿಡುತ್ತಾನೆಂಬ ಕಿಚ್ಚು ನನ್ನವರು ಯಾರು ಇಲ್ಲವೇ? ಪ್ರಪಂಚದಲ್ಲಿ ಇರುವವರಲ್ಲಿ ಸ್ವಾರ್ಥಕ್ಕಾಗಿ ಬದುಕುವರು ಹಲವರು ಅನ್ಯರಿಗಾಗಿ ಬದುಕುವರು ಕೆಲವರು ಕಷ್ಟದಲ್ಲಿದ್ದಾಗ ಬರುವರು ಕೆಲವರು ಮಾತ್ರ ಕುಹಕವನ್ನಾಡುವರು ಹಲವರು ಹಾಗಾದರೆ ಪ್ರಪಂಚ ಜೇಡರ ಬಲೆಯೇ? ಗೊತ್ತಿಲ್ಲ. ಇದ್ದಾಗ ಅನ್ಯರಿಗಾಗಿ ಬದುಕು ಎಂದವಳು ಅಮ್ಮ ನಡೆಯುತ್ತಿರುವುದು ಹಾಗೆಯೇ ಸಹಾಯವನ್ನು ದುರ್ಬಳಕೆ ಮಾಡಿಕೊಂಡು ನನ್ನನ್ನೇ ಬಲೆಯಲ್ಲಿ ಸಿಕ್ಕಿಸಿದಂಥವರು ಹಲವರು ನನ್ನವರೇ ಪರರೇ? ಅದೂ ಗೊತ್ತಿಲ್ಲ. ಮನುಜ ಜನ್ಮ ಅಪರೂಪವಂತೆ ಹಾಗಂದದ್ದು ಪೂರ್ವಜರು ಮನುಜನಾದ ಮೇಲೆ ಅವನ ಕರ್ತವ್ಯವಾದರೂ ಏನು? ಅನ್ಯರಿಗೆ ತೊಂದರೆ ಕೊಟ್ಟು ಸಂತಸ ಪಡುವುದೇ? ಇಂತಹ ಮನುಜ ಜನ್ಮ ಎನಗಂತೂ ಬೇಡವೇ ಬೇಡ, ಇದು ನನ್ನ ಅಸಹಾಯಕತೆಯಲ್ಲ, ಬದಲಾಗಿ ನನ್ನ ಪ್ರಾರ್ಥನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬದಲಾಯಿಸಿದ್ದೇನೆ ಸುರೇಶ್. ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪರಿಷ್ಕರಿಸಿದ ಕವನದ ಸಾರ ಸೊಗಸಾಗಿದೆ. ಕೋಮಲ್, ಹಾಸ್ಯಲೇಖನಗಳನ್ನೂ ಮುಂದುವರೆಸಿರಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಗರಾಜರೆ ಧನ್ಯವಾದಗಳು, ಗೌಡಪ್ಪನ ಪಾದೆಯಾತ್ರೆ ಬ್ಲಾಗ್ನಲ್ಲಿ ಇದೆ. ನಿಮ್ಮ ಅಭಿಮಾನಕ್ಕೆ ಯಾವಾಗಲೂ ಋಣಿ. ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮನುಜ ಜನ್ಮ ಅಪರೂಪವಂತೆ, ನನಗೂ ಗೊತ್ತಿಲ್ಲ. ಆದರೆ ನಗುತ್ತೇನೆ ನಾನೂ ಒಮ್ಮೊಮ್ಮೆ ಇನ್ನೊಬ್ಬರ ನಗಿಸುತ್ತಾ ಅತ್ತಾಗಲೆಲ್ಲಾ ಹೆಗಲ ಆಸರೆ ಕೊಡುತ್ತೇನೆ ಬದುಕು ಸರಿ ಪಡಿಸುವೆ ಎಂದಲ್ಲ ಆದರೂ ಬದುಕು ಬಿಡದಂತೆ ತಡೆಯುವೆ ನನಗೋ ನಾನು ಬೆಳೆಯಬೇಕೆಂದು ಆಸೆ ನೋಡಿದರೆ ಎಲ್ಲರಿಗೂ ಅದೇ ಆಸೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯಿಸಿದ ಸರ್ವರಿಗೂ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಪ್ರತಿಕ್ರಿಯಿಸಿದ ಸರ್ವರಿಗೂ ಧನ್ಯವಾದಗಳು>> ಇಲ್ಲಿ "ಸರ್ವರ್" ಯಾರು? :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಸ೦ಪದ ಸರ್ವರ್ (server) ಗೂ ಅ೦ತ ಅವರು ಹೇಳೀದ್ದು :) ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮನುಜ ಎಂಬ ಕವನಕ್ಕೆ ಪ್ರತಿಕ್ರಿಯಿಸಿದ ಸಂಪದದ ಮಿತ್ರರೆಲ್ಲರಿಗೂ ಧನ್ಯವಾದಗಳು. ಸರಿನಾ ಸುರೇಶ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.