ಬೀದಿ ನಾಯಿ

4

ಮಗನಿಗೆ ನಾಯಿ ಮರಿ ಸಾಕುವ ಹುಚ್ಚು

ತಂದ ಬೀದಿಯ ಕಪ್ಪು ನಾಯಿಮರಿಯೊಂದನ್ನ

ಅದಕ್ಕೆ ಇನ್ನಿಲ್ಲದ ಉಪಚಾರ

ಇನ್ನಿಲ್ಲದ ಆರೈಕೆ

ಸಸ್ಯಹಾರಿ ಮನೆಯಲ್ಲಿ ಕೋಳಿಯ ಮಾಂಸ

ಅಜ್ಜಿಯ ಹಿಡಿ ಶಾಪ

ಆದರೂ ಬಿಡನು ನಾಯಿಯ ವ್ಯಾಮೋಹ

ಶಾಲೆಯಿಂದ ಬಂದ ಮಗ

ತಂದೆ ತಾಯಿಯ ಬದಲಾಗಿ ನೋಡುವನು ನಾಯಿಯನ್ನು

ಅದು ಕುಯ್ಯಿ ಅಂದರೆ ಬಂದೆ ಎನ್ನುವ ಸನ್ಹೆ

ಕುಯ್ಯೋ ಅಂದರೆ ಅಪ್ಪಾ ಎನ್ನುತ್ತಾನೆ

ಮಗನಿಗೆ ಏನನ್ನೂ ಮಾಡಿಸದ ನನಗೆ

ನಾಯಿಯ ಕರ್ಮವನ್ನು ತೆಗೆಯುವ ದಿನ ನಿತ್ಯದ ಕಾಯಕ

ಪ್ರೀತಿಗೆ ಮಾತ್ರ ಮಗ

ಸ್ವಚ್ಛತೆಗೆ ಅಪ್ಪ

ಎಲ್ಲೋ ಕೆಟ್ಟ ವಾಸನೆ ಬಡಿದರೆ

ರೀ ನಾಯಿ ಏನು ಮಾಡಿದೆ ನೋಡಿ

ಮಡದಿಯ ಪ್ರೀತಿಯ ಮಾತಿಗೆ

ನಾಯಿ ಕಂಕುಳಲ್ಲಿ ಗೋಣಿ ಚೀಲ ಕೈಯಲ್ಲಿ

ಏನೂ ಇಲ್ವೆ, ಸರಿ ಬಿಡಿ.

ಕಂಬ ಕಂಡರೆ ಕಾಲೆತ್ತುವುದು ನಾಯಿಯ ಅಭ್ಯಾಸ

ಬಾಗಿಲೇ ನಾಯಿಗೆ ಕಂಬ

ಬೇಸತ್ತ ಮಡದಿ

ಬಿಡಬಾರದೆ ನಾಯಿಯನ್ನ

ಮಗ ಅಳುತ್ತಾನಲ್ಲಾ

ಇರವುದೊಂದನ್ನು ಸಾಕುವುದೇ ಕಷ್ಟ

ಈಗ ಮತ್ತೊಂದೇ

ಸ್ವಚ್ಛತೆಗೆ ಅಪ್ಪ

ಪ್ರೀತಿಗೆ ಮಗ

ಬೀದಿ ನಾಯಿಗೆ ಬಯಸದೆ ಬಂದ ಭಾಗ್ಯ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಕೋಮಲ್, ಕವನ ಚೆನ್ನಾಗಿದೆ. "ಹೊಸ ನಾಯಿಯನ್ನು ಕೊಳ್ಳಬೇಡಿ, ಒಂದು ಬೀದಿ ನಾಯಿಯನ್ನು ದತ್ತು ಸ್ವೀಕರಿಸಿ" ಎಂಬ ಮಾತಿಗೆ ನಿಮ್ಮ ಕವನ ಸಾಥ್ ನೀಡಬಲ್ಲದು. -ಪ್ರಸನ್ನ.ಎಸ್.ಪಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ಪ್ರಸನ್ನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೋಮಲ್, ನಾಯಿಯನ್ನು ಮನೆಗೆ ತಂದು ಸಾಕುವ ಸಂದೇಶ ಸ್ವಾಗತಾರ್ಹ. ಆದರೆ, <<ಅಜ್ಜಿಯ ಹಿಡಿ ಶಾಪ, ಥೂ ಪ್ರಾರಬ್ದ ಮುಂಡೇದೆ.>> <<ಥೂ ಮುಂಡೇದೇ!>> ಕವನದ ಆಶಯವನ್ನು ಓದುಗನ ಹೃದಯಕ್ಕೆ ಮುಟ್ಟಿಸಲು ಈ ಮೇಲಿನ ಸಾಲುಗಳು ತೀರ ಅಗತ್ಯ ಎಂದನಿಸುವುದೇ? - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<<<<ಇರವುದೊಂದು ಪೀಡೆ ಸಾಕುವುದೇ ಕಷ್ಟ ಈಗ ಮತ್ತೊಂದು ಪೀಡೆಯೇ, ದರಿದ್ರ>>>>> ಬಹುಷಃ ಈ ಸಾಲುಗಳನ್ನೂ ಸ್ವಲ್ಪ ಬದಲಾಯಿಸುವುದು ಒಳ್ಳೆಯದು. -ಪ್ರಸನ್ನ.ಶಂಕರಪುರ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

+೧. ನನಗೂ ಈ ಸಾಲುಗಳು ಅಗತ್ಯವಿರಲಿಲ್ಲ ಅನ್ನಿಸಿತ್ತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆತ್ತ ಮಗುವನ್ನೇ ಪೀಡೆಯೆಂಬ ಹತಾಶೆಯೇ? ಒಂದೇ ಮಗುವಿಗೆ ಈ ಸ್ಥಿತಿಯಾದರೆ... :(
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೋಮಲ್ ಚೆನ್ನಾಗಿದೆ ಕವನ. <<ನಾಯಿಯ ಕರ್ಮವನ್ನು ತೆಗೆಯುವ ದಿನ ನಿತ್ಯದ ಕಾಯಕ>> ದಿನ ನಿತ್ಯ ತೆಗೆದರೆ ಕೊನೆಗೆ ಗಬ್ಬುನಾತ ಗೌಡ೦ಗೆ ಕಾ೦ಪಟಿಶನ್ ಗ್ಯಾರ೦ಟಿ:-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<<<<ದಿನ ನಿತ್ಯ ತೆಗೆದರೆ ಕೊನೆಗೆ ಗಬ್ಬುನಾತ ಗೌಡ೦ಗೆ ಕಾ೦ಪಟಿಶನ್ ಗ್ಯಾರ೦ಟಿ:-)>>>>> ಹ್ಹ..ಹ್ಹ.. ಚೆನ್ನಾಗಿದೆ.. ಕೋಮಲ್, ಬಳ್ಳಾರಿ ಪಾದಯಾತ್ರೆಗೆ ಹೋದ ಗೌಡಪ್ಪನ ಕಥೆ ಬರ್ಲೇ ಇಲ್ವಲ್ರಿ. -ಪ್ರಸನ್ನ.ಶಂಕರಪುರ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬದಲಾಯಿಸಿದ್ದೇನೆ. ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೋಮಲ್ ಚೆನ್ನಾಗಿದೆ ನಾಯಿ ಕವನ ನಾನೇನೋ ನಾಯಿಯ ಹಾಸ್ಯ ಲೇಖನ ಅಂದ್ಕೊಂಡಿದ್ದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಇನ್ನಿಲ್ಲದ ಹಾರೈಕೆ>>ಇದ್ನ ಒಸಿ ಅ೦ಗೆ "ಆರೈಕೆ" ಅ೦ತ ಬದ್ಲಾಯ್ಸು ಸಿವಾ! ಎರಡರ ಅರ್ಥಾನೂ ಬ್ಯಾರೇನೇ ಐತೆ. ಎಲ್ಲಿ ನಿಮ್ ಗಬ್ಬುನಾತಪ್ಪ ಗೌಡ?? ಕಾಯ್ತಾ ಇದೀನಿ ನಾನಿಲ್ಲಿ ಮರಳ್ಗಾಡ್ನಾಗೆ! ಅವು೦ದು ಆ ಅಳ್ಸೋದ್ ಫಳಾವ್ ವಾಸ್ನೆ ಇಲ್ದೆ ಸ೦ಪದ ಭಣ್ಗುಡ್ತಾ ಐತೆ. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೌಡಪ್ಪ ಪಾದಯಾತ್ರೆ ಹೋಗವ್ನೆ. ಬ್ಲಾಗ್ ನಾಗೆ ಐತೆ ನೋಡಿ ಮಂಜಣ್ಣ. ರಾಯರೆ, ಮಂಜಣ್ಣ ಪ್ರತಿಕ್ರಿಯೆಗಾಗಿ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೋಮಲ್, ನನ್ನ ಮಕ್ಕಳು ಚಿಕ್ಕವರಿದ್ದಾಗ ಬೀದಿ ನಾಯಿಮರಿ ಸಾಕಿದ್ದು ನೆನಪಾಯಿತು. ಅಮ್ಮ ಬಯ್ಯುತ್ತಾಳೆಂದು ನಾಯಿಮರಿ ಸುತ್ತಲೂ ಇಟ್ಟಿಗೆ ಜೋಡಿಸಿ ಮೇಲೆ ತಗಡು ಮುಚ್ಚಿದ್ದರು. ನಾನು ನೋಡಿ ಒಂದು ಭಾಗ ತೆಗೆದು ನಾಯಿಮರಿಗೆ ಉಸಿರಾಡಲು, ಓಡಾಡಲು ಅವಕಾಶ ಮಾಡಿಕೊಟ್ಟ ಸಂಗತಿ ನೆನೆಸಿಕೊಳ್ಳುವಂತೆ ಮಾಡಿದ್ದಕ್ಕೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಗರಾಜರೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.