ಮದುವೆ

4.5

ಮದುವೆಯ ವಯಸು

ಹೆಣ್ಣಿಗಾಗಿ ಎಲ್ಲಡೆ ಶೋಧನೆ

ಜಾತಕ ಸರಿಯಿದ್ದರೆ, ಗೋತ್ರ ಹೊಂದುವುದಿಲ್ಲ

ಬೇಡ ಎನಗೆ ಮದುವೆ

ಬ್ರಹ್ಮಚಾರಿಯಾಗಿಯೇ ಇರುವೆ

ಪೆದ್ದ, ವಯಸ್ಸಾದ ಮೇಲೆ

ಹೆಣ್ಣೊಂದು ಬೇಕು ಆಸರೆಗೆ

ದೇಹಕ್ಕೆ ಕೊಳ್ಳಿ ಇಡಲು ಮಗ ಬೇಕು

ಅಮ್ಮನ ಹಿತ ನುಡಿ

ಅಂತೂ ಸಿಕ್ಕಿದಳು ಒಬ್ಬಳು ಮಡದಿ

ಹೊಸತರಲ್ಲಿ ಮನೆ, ಬಟ್ಟೆಯಲ್ಲಾ ಶುದ್ದಿ

ಕೂತಲ್ಲೇ ಕಾಫಿ, ಇನ್ನಿಲ್ಲದ ಗೌರವ

ಮಗುವಾದ ನಂತರ

"ರೀ" ಹೋಗಿ "ಲೇ "ಬಂತು

ಮನೆ, ಬಟ್ಟೆ ನನ್ನ ಸುಪರ್ದಿಗೆ

ಕೇಳಿದರೆ ಕಾಫಿ ಇರಲಿ ನೀರೂ ಇಲ್ಲ.

ಕಾಲಿಗೆ ಏನು ರೋಗ ಮಡದಿಯ ನಲ್ಮೆಯ ಪ್ರೀತಿಯ ನುಡಿ.

ಸಂಸಾರಿಯಾಗಿರುವ ನಾನು

ಬ್ರಹ್ಮಚಾರಿಯಾಗಿಯೇ ಇದ್ದೇನೆ

ಅಮ್ಮನ ಹಿಂದಿನ ನುಡಿಗಳು ಕೋಪ ತರುಸುತ್ತಿದೆ

ನನ್ನ ಹೆಣಕ್ಕೆ ಕೊಳ್ಳಿ ಇಡಿಸಿಕೊಳ್ಳುವ ಸಲುವಾಗಿ

ಬದುಕಿದ್ದಾಗಲೇ ಸತ್ತಂತೆ ಬಾಳಬೇಕಲ್ಲಾ ಎಂದು.

ಹಿರಿಯರ ಮದುವೆಯಾಗಬೇಡ ಎಂಬ ಹಿತನುಡಿ

ಸತ್ಯ ಎಂದು ಅರಿವಾಗುತ್ತಿದೆ.

ಬ್ರಹ್ಮಚಾರಿಗಳೆ ಮದುವೆಯಾಗಬೇಡಿ

ಮದುವೆಯಾದಗಲೇ ಮದುವೆಯ ಅನುಭವವಾಗುವುದಲ್ಲವೆ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಕೋಮಲ್, ಮದುವೆಯ ಬಗ್ಗೆ ನಿಮ್ಮ ಕವನ ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಮದುವೆ ಆಗಿರಬೇಕಾಗಿತ್ತು ಓರ್ವ ನಾರಿಯ ಜೊತೆಗೆ ಆದರೆ ಯಾಕೋ ಆಗಿರುವಂತಿದೆ ಓರ್ವ ಮಾರಿಯ ಜೊತೆಗೆ :) - ಆಸು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:())) ಸಕ್ಕತ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೋಮಲ್, ಕವನ ಅರ್ಥಪೂರ್ಣವಾಗಿದೆ. ಹಾಗೆಯೇ ಒಂದೆರಡು ಸಣ್ಣ ಪದದೋಷ "ತರುಸುತ್ತಿದೆ" ತರಿಸುತ್ತಿದೆ ಆಗಬೇಕಿತ್ತು ಹಾಗೂ "ಮದುವೆಯಾದಗಲೇ" ಮದುವೆಯಾದಾಗಲೇ ಎಂದು ಆಗಬೇಕಿತ್ತು. ನನ್ನ ಹೆಣಕ್ಕೆ ಕೊಳ್ಳಿ ಇಡಿಸಿಕೊಳ್ಳುವ ಸಲುವಾಗಿ ಬದುಕಿದ್ದಾಗಲೇ ಸತ್ತಂತೆ ಬಾಳಬೇಕಲ್ಲಾ ಎಂದು. ಈ ಎರಡು ಸಾಲುಗಳು ತುಂಬಾ ಇಷ್ಟ ಆಯ್ತು. ಧನ್ಯವಾದಗಳೊಂದಿಗೆ -ಪ್ರಸನ್ನ.ಶಂಕರಪುರ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯಿಸಿದ ಮಹನೀಯರೆಲ್ಲರಿಗೂ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೋಮಲ್ ಚೆನ್ನಾಗಿದೆ ಮದುವೆ ಕವನ ಅಂತೂ ಅನುಭವಿಸಲೇ ಬೇಕಲ್ಲ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೋಮಲ್, (ಮದುವೆಯಾಗಿದ್ದರೆ) ಪತ್ನಿಗೆ ಈ ಕವನ ತೋರಿಸಿದರೆ ಸುಕೋಮಲವಾಗಿ ಪ್ರತಿಕ್ರಿಯಿಸಿಯಾಳು! :-) [[ತರುಸುತ್ತಿದೆ]] ತರಿಸುತ್ತಿದೆ [[ಮದುವೆಯಾದಗಲೇ]] ಮದುವೆಯಾದಾಗಲೇ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೋಮಲ್ ಅವರು ಹಾಸ್ಯ ಬರಹಗಳು ಮಾತ್ರ ಅಲ್ಲದೆ ಹಾಸ್ಯ ಕವನ ಸಹಾ ಬರೆದಿರುವರು ಅಂತ ಆಕಸ್ಮಿಕವಾಗಿ ಗೊತ್ತಾಯ್ತು... ಹಾಗೆಯೇ ಎಲ್ಲೆಡೆ ಸ್ವ ರಚಿತ ಚಿತ್ರ) ಹಾಕುವ ನೀವ್ ಇಲ್ಲಿ ಚಿತ್ರ ಹಾಕದೆ ಇದ್ದುದು ಅಚ್ಚರಿ..!! ಚೆನ್ನಾಗಿದೆ.. ಪ್ರತಿಕ್ರಿಯೆಗಳು ಅದರಲ್ಲೂ ಅಸು ಹೆಗ್ಡೆ ಅವರದು ಸೂಪರ್.... ಶುಭವಾಗಲಿ.. ಮತ್ತೆ ಬಾ ಕೋಮಲ್ ಅಣ್ಣ... --- -- - - - -- - - - -- -- - - -- - ಹೋಳಿ ಹಬ್ಬದಲ್ಲಿ ಸಗಣಿ ಎರಚಿದ್ದು http://sampada.net/b... ಮೊನ್ನೆ ಮೊನ್ನೆ ಕಾಮನ ಹಬ್ಬದ ಬಗ್ಗೆ ಬರಹ ಬರೆದು ಮತ್ತೆ ಎಸ್ಕೇಪ್..!!)... http://komal1231.blo... \\\\||||////
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಪ್ತಗಿರಿ ಯವರೇ ತಾವು ಹಳೆಯ ಬರಹಗಳಿಗೆ ಪ್ರತಿಕ್ರಿಯಿಸಿ ನಾವು ಓದುವಹಾಗೆ ಮಾದುತ್ತಿರುವ ತಮಗೆ ಅನ0ತಾನ0ತ ವ0ದನೆಗಳು ನೀಳಾ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀಲಾ ದೇವಿ ಅವರೇ- ನನ್ನ ಬರಹ ಒಂದಕ್ಕೆ ಬಹು ಹಿಂದೆ ಪ್ರತಿಕ್ರಿಯಿಸ್ ಹೋದವರು ಈಗ ಪ್ರತ್ಯಕ್ಷ ಆಗಿದ್ದೀರಿ...?? ಓಲ್ಡ್ ಈಸ್ ಗೋಲ್ಡ್ ಅದ್ಕೆ- ನಾ ಯಾವ್ಯಾವ್ದು ಓದಿಲ್ಲವೋ ಅದನ್ನು ಓದಿ ಮತ್ತೊಮ್ಮೆ ಸಂಪದಿಗರು(ಹಳಬರು-ಹೊಸಬರು) ಓದಲಿ ಎಂದು ಹಳೆಯ ಬರಹಗಳ ಮಂಥನ ಮಾಡುತ್ತಿರುವೆ... ತಮ್ಮ ಅಭಿಮಾನದ ನುಡಿಗೆ ನನ್ನಿ ಶುಭವಾಗಲಿ... \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಕವನವನ್ನೋದಿ ಹಾಸ್ಯ ಕಥೆಯೊಂದು ಹೇಳಬೇಕೆನಿಸಿದೆ. ಎರಡು ಇಲಿಗಳ ಕಥೆ: ಇಲಿಯೊಂದು ಈರುಳ್ಳಿ ಭಜಿಯ ಆಸೆಯಿಂದ ಬಲಿಯೊಳಗೆ ಬಿದ್ದಿತ್ತಂತೆ, ಹೊರಗಿರುವ ಇನ್ನೊಂದು ಇಲಿ ಬಲಿಯೊಳಗೆ ಬೀಳುವ ಪ್ರಯತ್ನದಲ್ಲಿ ಇದ್ದುದನ್ನು ಕಂಡು ಬಲಿಯ ಒಳಗಿರುವ ಇಲಿ ಬುದ್ಧಿ ಹೇಳಿತಂತೆ " ನಾನು ಒಳಗೆ ಬಂದು ಪರಿತಪಿಸುತ್ತಿರುವೆ, ನೀನೂ ಒಳ ಬರಬೇಡ, ಬಂದು ಪರಿತಪಿಸಬೇಡ" ಎಂದು, ಅದಕ್ಕೆ ಹೊರಗಿರುವ ಇಲಿ ಉತ್ತರಿಸಿತಂತೆ,"ಆಹಾ, ಈರುಳ್ಳಿ ಭಜಿಯನ್ನು ನೀನೊಬ್ಬನೇ ತಿನ್ನಬೇಕೆನ್ನುತೀಯ, ನಾನು ಬಂದರೆ ನಿನಗೆಲ್ಲಿ ಕಡಿಮೆಯಾಗುವುದೋ ಎಂದು ನನಗೆ ಬರಬೇಡ ಎಂದು ಹೇಳುತ್ತೀಯ" ಎಂದು, ಹೀಗೆ "ಲೋಕೋ ಭಿನ್ನರುಚಿ" ನಿಮ್ಮ ಕವನದ ಕೊನೆಯ ಸಾಲು ಈ ಕಥೆಯನ್ನು ಹೇಳುತ್ತಿಲ್ಲವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.