ದೂರದ ಬೆಟ್ಟ

0

ದೂರದಲ್ಲೊಂದು ಸುಂದರ ಬೆಟ್ಟ

ಸನಿಹಕ್ಕೆ ಹೋಗಬೇಕೆಂಬ ಹಂಬಲ

ಅಲ್ಲಿ ಏನಿರ ಬಹುದೆಂಬ ಕುತೂಹಲ

ಬರುವಾಗ ದಾರಿ ತಪ್ಪಿದರೆ ಎನ್ನುವ ಭಯ

ಹೋಗಲೋ, ಬೇಡವೋ ಮನಸ್ಸಿನ ತಳಮಳ.

ಒಲ್ಲದ ಮನಸ್ಸಿನಿಂದ ಬೆಟ್ಟ ತಲುಪಿದೆ

ಬರೀ ಗಿಡ, ಗಂಟೆ, ಕಲ್ಲು, ಮುಳ್ಳು

ದೂರದಿಂದ ಸುಂದರವಾಗಿ ಕಂಡಿದ್ದು ಇದೇನಾ?

ಬೆಟ್ಟ ದೂರದಿಂದಲೆ ಚೆನ್ನ.

ಹೌದು ಎನ್ನಿತು ಮನಸು.

ಕೆಲವು ಸ್ನೇಹಿತರು ಹೀಗೆ

ಮಾತಿನಲ್ಲಿ ಸನಿಹತೆ

ಇನ್ನಿಲ್ಲದ ಸ್ನೇಹ ತೋರ್ಪಡಿಕೆ

ಒಳ ಮನಸ್ಸು ಅರಿತಾಗಲೇ

ದೂರದ ಬೆಟ್ಟವ ಸನಿಹ ತಲುಪಿದ ಅನುಭವ.

ಮತ್ತೆ ಕೆಲವರು ಬೈಯ್ಯುವರು

ಎಲ್ಲರೆದರು ತೆಗಳುವರು

ಒಳ ಮನಸ್ಸಿನಲ್ಲಿ ಪ್ರೀತಿ ಇಟ್ಟವರು

ಇವರಲ್ಲವೆ ನಿಜವಾದ ಕಾಳಜಿಯುಳ್ಳವರು

ಇವರ ಸನಿಹ ಮುಳ್ಳೆನಿಸಿದರೂ

ಕರೆದುಕೊಂಡು ಹೋಗುವರು ಉತ್ತಮ ನಡೆಗೆ!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ನಕ್ಕು ನುಡಿದವ ಹಾಳಾಗೋದನ್ನ ಹೇಳ್ಕೊಟ್ಟ ಬೈದು ನುಡಿದವ ಒಳ್ಳೇದಾಗೋದನ್ನ ಹೇಳ್ಕೊಟ್ಟ :) ನಗು ನಗುತ್ತಾ ಹಗುರವಾಗಿ ನುಡಿದ ಮಾತುಗಳು ಗಂಭೀರವಾಗಿ ಸ್ವೀಕಾರವಾಗುವುದು ಕಡಿಮೆ. - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೋಮಲ್ ರಿಂದ ಒಂದು ಗಂಭೀರ ಕವನ.... ಹೀಗೂ ಉಂಟೆ ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಎಲ್ಲರೆದರು ತ್ಯಗಳುವರು>> ಎಲ್ಲರೆದುರು ತೆಗಳುವರು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನ ಮೆಚ್ಚಿದ ಸುರೇಶ್ ಮತ್ತು ಸಂತೋಷ್ಗೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಛೆ! ಹೀಗೂ ಉ೦ಟೇ! ಕೋಮಲ್, ನಿಮ್ಮನ್ನು ಒಬ್ಬ ಗ೦ಭೀರ ಕವಿಯಾಗಿ ಕಲ್ಪಿಸಿಕೊಳ್ಳಲು ಅದೇಕೋ ಗೊತ್ತಿಲ್ಲ, ಸಾಧ್ಯವೇ ಆಗ್ತಿಲ್ಲ ಕಣ್ರೀ! ಆದರೆ ಕವನ ಚೆನ್ನಾಗಿದೆ, ದುಬೈ ಜೀವನವನ್ನು ನಾನೂ ದೂರದ ಬೆಟ್ಟದ ಥರಾನೆ ಅನ್ಕೊ೦ಡಿದ್ದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭೇಷ್ !! ಕೋಮಲ್ ಉತ್ತಮ ಅನಿಸಿಕೆಯ ಕವನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಜ್ಜನರೊಂದಿಗಿನ ಗುದ್ದಾಟ ಲೇಸೆಂಬುದನ್ನು ಚೆನ್ನಾಗಿ ಹೇಳಿದ್ದೀರಿ, ಕೋಮಲ್. :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾಸ್ಯ ಸಾಹಿತಿಗಳಿಂದ ಗಂಭೀರವಾದ ಕವನ ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯಿಸಿದ ರಾಯರು, ಮಂಜಣ್ಣ,ನಾಗರಾಜರು,ಸುರೇಶ್ರವರಿಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೋಮಲ್ ಸತ್ಯವಾದ ಅನಿಸಿಕೆಗಳ ಸುಂದರ ಕವನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.