ನಗುವಿನಲ್ಲಿ ಬಗೆ

5

ಕೆಲವರು ನಕ್ಕರೆ

ಪಕ್ಕದಲ್ಲಿ ಭೂ ಕಂಪನವಾದಂತೆ

ಮತ್ತಿರರು ನಕ್ಕರೆ

ದೇಹದಲ್ಲಿನ ಯಾವುದೋ ಊನತೆ ತೋರಿಸುವಂತೆ                                         

ಮತ್ತೆ ಕೆಲವರು ನಗುವುದೇ ತಿಳಿಯುವುದಿಲ್ಲ

ಸೌಂಡ್ ಇಲ್ಲದೆ ಬಾಂಬ್ ಸಿಡಿದಂತೆ                                          

ಅನ್ಯರನ್ನು ಅಣಕವಾಡಿ ನಗುವುದು

ದೇಹದ ನ್ಯೂನ್ಯತೆ ನೋಡಿ ನಗುವುದು

ನಕ್ಕರೆ ಕಣ್ಣಲ್ಲಿ ನೀರು

ಬಾಯಲ್ಲಿ ಜೊಲ್ಲು

ಪಕ್ಕದಲ್ಲಿದ್ದವರಿಗೆ ಒದೆ:

ಎದೆಯಲ್ಲಿನ ಕಫ ಕರಗಿದಂತೆ                          

ನಗುವಾಗ ತಲೆಯಾಡಿಸುವುದು

ಹಿಂದೆ ಹೋಗುವುದು

ಮುಂದೆ ಬಗ್ಗಿ ನಗುವುದು

ಮೇಲೆ, ಕೆಳಗೆ ನೋಡಿ ನಗುವುದು.

ಅಪಹಾಸ್ಯ,ತಿಳಿ ಹಾಸ್ಯ

ನಗುವಿನ ಬಗೆ

ಸಣ್ಣ ಹಾಸ್ಯಕ್ಕೆ ಹಾ,ಹಾ,ಹಾ,ಹಾ

ಭಾರಿ ಹಾಸ್ಯಕ್ಕೆ ಹಿ,ಹಿ,ಹಿ

ಹಲ್ಲಿಲ್ಲದವರು ಫೆ>>>>>

ದಮ್ಮಿದ್ದವರು ಗುಕ್,ಗುಕ್, ಆ....ಥೂ

ಇದೇ ನಗುನಾ

ಹುಸಿ ನಗು, ಮುಸಿ ನಗು.

ನಗೆಗಳಲ್ಲಿ ಅನೇಕ ಪ್ರಕಾರ

ನಗೆಗೆ ಇತಿ ಮಿತಿ ಇದೆಯಾ?

ಇಂತಹ ಕಡೆ ಇಂತಹುದೇ ರೀತಿಯಲ್ಲಿ ನಗಬೇಕು

ಸರ್ಕಾರ ಆಜ್ಞೆ ಹೊರಡಿಸಿದ್ದರೆ

ಸಾಕಷ್ಟು ಹಣ ಸಂದಾಯವಾಗುತ್ತಿತ್ತೆನೋ!

ಅಬ್ಬಾ ನಕ್ಕೂ ನಕ್ಕೂ ಸಾಕಾಯಿತು!

ಚಿತ್ರಕೃಪೆ - ಅಂತರ್ಜಾಲದಿಂದ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಇದ್ರಲ್ಲಿ ನಿಮ್ ಗೌಡಪ್ಪನ್ ನಗು ಯಾವ್ ಬಗೆ?? :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಟೋ,ಬಸ್ ಅಕ್ಕಪಕ್ಕ ಹೋದರೆ ಯಾವ ಸವಂಡ್ ಬತ್ತದೋ ಅದೇ ಸವಂಡ್ ನಮ್ಮ ಗೌಡಪ್ಪನದು. ಧನ್ಯವಾದಗಳು ಮಂಜಣ್ಣ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೋಮಲ್ ನಗೆಯ ಬಗೆಗಳು ಹಲವು-ಮೆಚ್ಚುನಗೆ, ಚುಚ್ಚುನಗೆ, ಮುಗುಳು ನಗೆ,ರಸ ನಗೆ, ಮೂದಲಿಕೆ ನಗೆ, ಕಟಕಿ ನಗೆ,ಕುಚೇಷ್ಟೆ ನಗೆ, ನಗೆಗೆ ಅನಂತ ಕೊಂಡಿಗಳು, ಮೆಲು ನಗೆ, ನಸುನಗೆ,ಎಳೆನಗೆ,ಹುಸಿನಗೆ, ಹುಚ್ಚು ನಗೆ,ಗಹಗಹಿಸುವ ನಗೆ,ಕೊಂಕು ನಗೆ, ನಗೆಯನ್ನು ಈರುಳ್ಳಿಗೆ ಹೋಲಿಸ ಬಹುದು. ನಿಮ್ಮ ಕವನ ಇಷ್ಟವಾಯಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಗೆಯ ವಿವಿಧ ಬಗೆಗಳನ್ನು ತಿಳಿಸಿದ ತಮಗೆ ಧನ್ಯವಾದಗಳು ಭಾಗ್ವತರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೋಮಲ್ ಚೆನ್ನಾದ ವಿವರಣೆಯುಳ್ಳ ಕವನ Keep It Up!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಗೆ ಧನ್ಯವಾದಗಳು ಗೋಪಿನಾಥರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಹಹಹಹಹಹಹಹಹಾ ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಗುವ, ನಗಿಸುವ ಬಗ್ಗೆ ಚಿಂತಿಸುವ ಕೋಮಲ್ ಗೆ ನನ್ನ ಹೃತ್ಪೂರ್ವಕ ಹಾರೈಕೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯಿಸಿದ ಸರ್ವರಿಗೂ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.