ಮಡದಿಯ ಆಸೆ

4

ರೀ, ಇವತ್ತು ಮೈಸೂರಿಗೆ ಹೋಗೋಣವೇ?

ಧಾರಾಕಾರ ಮಳೆಯಲ್ಲಿ ಪ್ರಯಾಣವೆ

ಕಾರಿನ ವೈಪರ್ ಸರಿಯಿಲ್ಲ, ಟೈರಿನಲ್ಲಿ ಗಾಳಿಯಿಲ್ಲ

ಇದೊಂದು ನೆಪ. ಸತ್ಯ ಚಿನ್ನ.

ಅಲ್ಲಿ ನೋಡುವುದಾದರೂ ಏನು

ಅದೇ ಅರಮನೆ, ಪ್ರಾಣಿಗಳಿಲ್ಲದ ಜೂ

ಅದಕ್ಕಾಗಿ ಅಲ್ಲಿಗೆ ಹೋಗಬೇಕೇ?

ಎನ್ನ ಮನಯೇ ಅರಮನೆ, 

ನೀನೇ ಎನಗೆ ವಿಚಿತ್ರ ಪ್ರಾಣಿ

ಮತ್ಯಾಕೆ ಚಿನ್ನ ಮೈಸೂರು.

ನೆಂಟರ ಮನೆಗೆ ಹೋಗೋಣವೇ?

ಚಿನ್ನ ಅವರಿಗೂ ಇಂದು ರಜೆ

ಅವರಲ್ಲೂ ಕೆಲವರು ರಜಾ

ಅವರಿಗ್ಯಾಕೆ ತೊಂದರೆ

ಇದು ಸರಿಯೇ.

ಚಲನಚಿತ್ರಕ್ಕೆ ಹೋಗೋಣವೇ?

ಅದೇ ಗೋಳು, ಅದೇ ಯುದ್ದ, ಅದೇ ಕಥೆ

ಮನೆಯಲ್ಲೇ ದಿನ ನಿತ್ಯ ವಿವಿಧ ಚಲನಚಿತ್ರ ಪ್ರದರ್ಶನ

ಮತ್ಯಾಕೆ ಮತ್ತೊಂದು ಚಿತ್ರ ಚಿನ್ನ.

ಮತ್ತೆಲ್ಲಿಗೆ ಹೋಗುವುದು?

ಎಲ್ಲಿಗೂ ಹೋಗದೆ

ಮನೆಯಲ್ಲೇ ತಯಾರಿಸಿದ ಭೂರಿ ಭೋಜನ ಸ್ವೀಕರಿಸಿ

ಟಿವಿ ಮುಂದೆ ಕೂತು

ಪ್ರಪಂಚವನ್ನೇ ನೋಡಬಹುದಲ್ಲವೆ ನನ್ನ ಚಿನ್ನ!

ಹೌದು, ತಮ್ಮನ್ನು ವರಿಸಿದ ದಿನದಿಂದ

ನೋಡಿದ್ದು ತವರು ಬಿಟ್ಟರೆ ಗಂಡನ ಮನೆ.

ಪ್ರಪಂಚವನ್ನು ನೋಡಿದ್ದೆಲ್ಲಾ ಟಿವಿಯಲ್ಲಿ

ಮನೆಯಲ್ಲಿ ಇರುವುದು ಡೈನೋಸಾರಸ್

ಮೂತಿ ತಿವಿದು ಎದ್ದಳು ಮಡದಿ.

ಇಂದು ಚಿತ್ರಾನ್ನವೇ ಗತಿ.!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಕೋಮಲ್ ಅವರೇ ಕವನ ಸಕತ್ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<ನೀನೇ ಎನಗೆ ವಿಚಿತ್ರ ಪ್ರಾಣಿ> :) ಪ್ರತಿ ದಿನ ಚಿತ್ರಾನ್ನ ತಿಂದು ಹೊಟ್ಟೆ ಹಾಳು ಮಾಡ್ಕೋಬೇಡಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂತೋಷ್ ಮದುವೆ ಆಗಿ. ಕಷ್ಟ ಏನೂ ಅಂತಾ ಗೊತ್ತಾಯ್ತದೆ. ಚಿತ್ರಾನ್ನ ಕಣ್ರೀ, ಅಂತಾ ನನ್ನ ಹೆಂಡರು ಹೇಳಿದರೆ ಸಾಕು. ಆಫೀಸಿಗೆ ಟೇಂ ಆಗಿದೆ ಅಂತಾ ಓಡ್ತಾ ಇರ್ತೀನಿ. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<<ಅದೇ ಅರಮನೆ, ಪ್ರಾಣಿಗಳಿಲ್ಲದ ಜೂ>>> ಮುಂಚೆ ಜೂನಲ್ಲಿ ಕೆಲಸಕ್ಕಿದ್ದವರನ್ನು ಪರಿಚಯಿಸಿದರೊಬ್ಬರು ಹೀಗೆ, "ಇವರು ಜೂನಲ್ಲಿದ್ರು" ! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಕತ್ ಕೋಮಲ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೋಮಲ್ ಕವನ ತುಂಬಾ ಇಷ್ಟವಾಯಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಹಹ್ಹ ಚೆನ್ನಾಗಿದೆ ಕೋಮಲ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂದು ಮಾಡಿದೆ ತಪ್ಪೊಂದ, ಮಡದಿಯ ಕರೆದು ತೋರಿಸಿದೆ ಈ ಕವನವನ್ನ! ಇನ್ನು ಗತಿ ನನಗೆ ಚಿತ್ರಾನ್ನ !!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಾಸ್ತ್ರಿಗಳೆ ಮತ್ತೊಮ್ಮೆ ಈ ತಪ್ಪನ್ನು ಮಾಡಬೇಡಿ. ಈಗ ಚಿತ್ರಾನ್ನ ನಾಳೆ ಅದೂ ಇಲ್ಲ. ಯಾವುದಕ್ಕೂ ಹುಷಾರಾಗಿರಿಪ್ಪಾ, ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯಿಸಿದ ಗೋಪಿನಾಥ್,ಚೇತನ್, ಪ್ರಸನ್ನ, ಭಾಗ್ವತ, ದಿವ್ಯರಿಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಕತ್ ಕೋಮಲ್, ಮಡದಿಯ ಸಿಟ್ಟು ಮನೆಯಿ೦ದ ಮನೆಗೆ ಭಿನ್ನ ಹೇಗಿದ್ದರೂ ಏನಾದರೂ ಪತಿಯಾಗುವ ಚಿತ್ರಾನ್ನ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಖಂಡಿತ ಮಂಜಣ್ಣ, ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಕವನಾನು ಮಸ್ತ್ ಇದೆಯಲ್ಲಾರೀ ಕೋಮಲ್ ರವರೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಿ.ಆರ್.ಲಕ್ಷ್ಮಣರಾಯರ ಕವನದ ಸ್ಫೂರ್ತಿಯೇ? [ನಮ್ಮ ಹಳೆಯ ಸ್ಕೂಟರನ್ನೇರಿ]
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:-) ಡೈನೋ ಸಾರಸ್ = ಡೈನ್ ಮಾಡೋರು ನೀವು, ಸಾರಿಸೋಳು ನಾನು ಎಂಬರ್ಥದಲ್ಲಿ ಹೇಳಿರಬಹುದು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.