ಅಮ್ಮನಿಗೊಂದು ಪತ್ರ

0

ನನ್ನ ಪ್ರತಿ ಸುಖ ದುಃಖಗಳಲ್ಲೂ ಜೊತೆಗಿರುವೆ

ನಿನ್ನ ಋಣ ತೀರಿಸುವ ಪರಿಯಾದರೂ ಏನು? ಅರಿಯೆ ನಾ

ಏನು ಬೇಕು? ನಿಸ್ವಾರ್ಥ ಮನದಿಂದ "ಕಂದಾ ನೀ ಚೆನ್ನಾಗಿರು"

ಪರರಿಗಾಗಿ ಹಾರೈಸುವ ಮಹಾನ್ ಸಾಧ್ವಿ.

ನಿನಗಾಗಿ ಏನು ಬೇಡವೇ

ನೀವೆಲ್ಲಾ ಇರುವಾಗ ಮತ್ತೇನು ಬೇಕು ಹಸನ್ಮುಖಿಯಾಗಿ ಅಂದವಳು ನೀನು.

ಬಾಲ್ಯದಲ್ಲಿ ಬಿದ್ದಾಗ ನನಗಿಂತ ಮೊದಲು ಅತ್ತವಳು

ಹಸಿವಾದಾಗ ಬಚ್ಚಿಟ್ಟಿದ್ದನ್ನು ಸೆರಗಲ್ಲಿ ಮುಚ್ಚಿ ಕೊಡುತ್ತಿದ್ದವಳು

ದೇಹದ ಆರೋಗ್ಯದ ಪರಿವೆ ಇಲ್ಲೆದೆಯೇ ಮಕ್ಕಳಿಗೆಂದು ದುಡಿದವಳು 

ಲವಲವಿಕೆಯಿಂದ ಓಡಾಡುತ್ತಾ ಉಣ ಬಡಿಸುತ್ತಿದ್ದವಳು

ನಿನ್ನಿಂದ ಕಲಿತ ದಾನ, ಧರ್ಮದ ಪಾಠಗಳು ಅವೆಷ್ಟೋ.

ಕಣ್ಣು ಮುಚ್ಚಿದಾಗ ಕಾಣುವ ನೀ. ನನ್ನ ಸರ್ವಸ್ವ

ನೀನಿಲ್ಲದ ಲೋಕ ಬೇಡವೇ ಬೇಡವೆನಿಸುತ್ತಿದೆ.

ನೀನು ಇತರರಂತೆ ಜರಿದು ದೂರವಿಟ್ಟಿದ್ದರೆ

ಚೆನ್ನಾಗಿರುತ್ತಿತ್ತು. ಈಗ ಅನ್ನುತ್ತಿದೆ  ಮನಸು.

ಆದರೆ ನಿನ್ನ ಮೆಚ್ಚುಗೆಯ ನುಡಿಗಳು, ಬಿಸಿ ಆಲಿಂಗನ.

ಉತ್ತುಂಗ ಸ್ಥಾನಕ್ಕೆ ಏರಿಸಿರುವುದಂತೂ ಸತ್ಯ

ಅದನ್ನು ನೋಡಲು ನೀನೆ ಇಲ್ಲವೆ.

ಇನ್ಯಾಕೆ ಬೇಕು ಈ ಬಂಗಲೆ, ಕಾರು, ಹಣ, ಗೌರವ, ಜೀವನ

ನೀನೊಬ್ಬಳು ಇದ್ದಿದ್ದರೆ ನನಗದೇ ಸಾಕಾಗಿತ್ತು.

ನೀ ಯಾವತ್ತೂ ಹಿಂತಿರುಗಿ ಬರಲಾರೆ

ಇದು ಸತ್ಯ. ನಮ್ಮ ತಪ್ಪನ್ನು ಮನ್ನಿಸಿ

ಒಮ್ಮೆಯಾದರೂ ನನ್ನಲ್ಲಿಗೆ ಬರಬಾರದೇ?

ಖಂಡಿತಾ ನೀ ಇದ್ದಲ್ಲಿಗೆ ನಾನೇ ಬರುತ್ತೇನೆ

ತೊಡೆಯ ಮೇಲೆ ಮಲಗುವ ಮಹಾದಾಸೆ

ತಲೆ ನೇವರಸಿಕೊಳ್ಳುವ ಆಸೆ

ಬಾಲ್ಯದ ದಿನಗಳನ್ನು ಮತ್ತೊಮ್ಮೆ ನಿನ್ನಿಂದ ನೆನಪಿಸಿಕೊಳ್ಳುವ ಆಸೆ

ಅಮ್ಮಾ ನಾನು ಬರುತ್ತೇನೆ

ನಿನ್ನ ಜೊತೆ ಖಂಡಿತಾ ಸೇರುತ್ತೇನೆ.

ಇಲ್ಲ ಎನ್ನಬೇಡ ಅಮ್ಮಾ!

ಇಂತಿ ನಿನ್ನ ಮಗ

ಕೋಮಲ್

ಅಮ್ಮ ತೀರಿ ಸೆಪ್ಟಂಬರ್ಗೆ ಎರಡು ವರ್ಷ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಕೋಮಲ್, ನನ್ನ ನೆನಪುಗಳನ್ನು ಕೆದಕಿ ನನ್ನ ನಿದ್ದೆ ಕೆಡಿಸುವ ಪ್ರತಿಜ್ಞೆ ಮಾಡಿದ್ದೀರೋ ಹೇಗೆ? ಜನ್ಮದಿನದ ಮರುದಿನ ನಿಮ್ಮ ಗೆಳತಿಯ ಕವನದಿ೦ದ ನನ್ನ ನೆಮ್ಮದಿ ಕೆಡಿಸಿದಿರಿ, ಎರಡನೆಯ ದಿನ ಈಗ ಅಮ್ಮನ ಕವನದಿ೦ದ ನನ್ನ ಕಣ್ಗಳು ಹನಿಗೂಡುವ೦ತೆ ಮಾಡಿದ್ದೀರಿ, ನಾನು ನಗುತ್ತಾ ಇರುವುದು ನಿಮಗೆ ಇಷ್ಟವಿಲ್ಲವೇ?? ನಿಮ್ಮ ಕವನ ಅಗಲಿದ ಅಮ್ಮನನ್ನು ನೆನಪಿಸಿತು, ಆ ನೆನಪುಗಳಿ೦ದ ಮನಕ್ಕೆ ನೋವಾಯಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದೇನೋ ಗೊತ್ತಿಲ್ಲ ಮಂಜಣ್ಣ, ಈ ಕವನ ಬರೆಯುತ್ತಾ ಜೋರಾಗಿ ಅಳಲು ಆರಂಭಿಸಿದ್ದೆ. ತಕ್ಷಣವೇ ಕಣ್ಣೀರನ್ನ ಒರೆಸಿಕೊಂಡೆ. ಇದೇ ಅಲ್ಲವೆ ನಿಸ್ವಾರ್ಥ ಅಮ್ಮನ ಪ್ರೀತಿ. ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೋಮಲ್, ಅಲ್ಲಿ ಅದು ಕವನಕ್ಕೆ ನನ್ನ ಪ್ರತಿಕ್ರಿಯೆ: "ಬರೀ ಮೌನ. ಶಬ್ದಗಳ ಅವಶ್ಯಕತೆ ಕಂಡಿಲ್ಲ ನನಗೆ". ಇಲ್ಲಿ ಇದು ತಪ್ಪೊಪ್ಪು. ಈ ಸಾಲುಗಳನ್ನೊಮ್ಮೆ ನೋಡಿ. ನಿನ್ನಿಂದ ಕಲಿತ ದಾನ, ಧರ್ಮದ ಪಾಠಗಳು ಅವೆಷ್ಟೋ ಕಣ್ಣು ಮುಚ್ಚಿದಾಗ ಕಾಣುವ ನೀ ನನ್ನ ಸರ್ವಸ್ವ ನೀನು ಇತರರಂತೆ ಜರಿದು ದೂರವಿಟ್ಟಿದ್ದಿದ್ದರೆ ಚೆನ್ನಾಗಿರುತ್ತಿತ್ತು, ಈಗ ಅನ್ನುತ್ತಿದೆ ಮನಸ್ಸು ಉತ್ತುಂಗ ಸ್ಥಾನಕ್ಕೆ ಏರಿಸಿರುವುದಂತೂ ಸತ್ಯ ಅದನ್ನು ನೋಡಲು ನೀನೇ ಇಲ್ಲವೆ ಒಮ್ಮೆಯಾದರೂ ನನ್ನಲ್ಲಿಗೆ ಬರಬಾರದೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಹಳ ಅರ್ಥಪೂರ್ಣ. <<ತೊಡೆಯ ಮೇಲೆ ಮಲಗುವ ಮಹಾದಾಸೆ ತಲೆ ನೇವರಸಿಕೊಳ್ಳುವ ಆಸೆ ಬಾಲ್ಯದ ದಿನಗಳನ್ನು ಮತ್ತೊಮ್ಮೆ ನಿನ್ನಿಂದ ನೆನಪಿಸಿಕೊಳ್ಳುವ ಆಸೆ. >> ಸಾಲುಗಳು ಮನ ಕಲುಕಿತು....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಗೆ ಧನ್ಯವಾದಗಳು ಸುಧೀಂದ್ರ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

. . .
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಾಗಿ ಧನ್ಯವಾದಗಳು. ತಪ್ಪನ್ನು ಸರಿಪಡಿಸಿದ್ದೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಅಮ್ಮನ ವಿಷಯವೇ ಹಾಗೆ, ತಕ್ಷಣ ಮನಸ್ಸಿಗೆ ತಟ್ಟುತ್ತೆ , ನಿಮ್ಮಮ್ಮ ಬದುಕಿದ್ದಾಗ ಈ ಪತ್ರ ಬರೆದಿದ್ರೆ, ಬಾಚಿ ತಬ್ಬಿ , ಇಷ್ಟೊತ್ತಿಗೆ ತೊಡೆಯ ಮೇಲೆ ಮಲಗಿಸಿಕೊಂಡಿರುತ್ತಿದ್ದಳು. ಕಳೆದುಕೊಂಡರೆ ಮರಳಿ ಪಡೆಯಲಾಗದು ಅಮ್ಮ ಮತ್ತು ಅಮ್ಮನ ಪ್ರೀತಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚಿದ್ದಕ್ಕೆ ಧನ್ಯವಾದಗಳು ರಘು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಮ್ಮನ ಕುರಿತ ನಿಮ್ಮ ಕೋಮಲತೆ ಸುಕೋಮಲ. ಇಷ್ಟವಾಯಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾಸ್ಯ ಸಾಹಿತಿಗಳೆ, ನಮ್ಮನ್ನೂ ಅಳಿಸಿಬಿಟ್ಟರಲ್ಲಾ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೋಮಲ್ ಅಮ್ಮನ ಬಗ್ಗೆ ಉತ್ತಮ ಕವನ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಗರಾಜ್,ಸುರೇಶ್, ಗೋಪಿನಾಥ್ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.