ಬಡವ-ಸಿರಿವಂತ

0

ಬಡತನ ಎನ್ನುವುದು ಕೇವಲ ಶಬ್ದವೇ?

ಇಲ್ಲ, ಜೀವನದ ಒಂದು ಪರಿಧಿ

ಇದು ಕೆಲವರಿಗೆ ಮಾತ್ರ ಸ್ವಂತದ್ದು

ಮತ್ತಿತರರಿಗೆ ಅರಸಿ ಬಂದು

ಬಿಡಿಸಿಕೊಳ್ಳಲಾಗದಂತೆ ಬಾಚಿ ಅಪ್ಪಿಕೊಳ್ಳುತ್ತದೆ.

ಸಿರಿತನ ಬಡತನದ ಮಧ್ಯ ಇರುವ ಅಂತರ

ಅಹಂಕಾರ,ಸ್ವಾರ್ಥ,ಪ್ರೀತಿ, ಮದ, ಮಾತ್ಸರ್ಯ

ಹಣವಿದ್ದವರೆಲ್ಲಾ ಸಿರಿವಂತರಲ್ಲ

ಹಣವಿಲ್ಲದವರು ಬಡವರೂ ಅಲ್ಲ

ಹಾಗಿದ್ದರೂ ಇದಕ್ಕೊಂದು ಇದ್ದೇ ಇದೆ ಮಧ್ಯದ ಅಂತರ.

ಬಡವನಾದವನಿಗೆ ಎಲ್ಲವನ್ನೂ ಪಡೆಯುವ ಆಸೆ

ಸಿರಿವಂತನಿಗೆ ಇರುವುದನ್ನು ತ್ಯಜಿಸುವ ಆಸೆ

ಸಿರಿವಂತ ಬಡವ ಸೇರಿದರೆ

ಕೈಗೂಡುತ್ತದೆಯೆ ಇವರೀರ್ವರ ಮನದ ಆಸೆ

ಉತ್ತರವನ್ನು ಬಲ್ಲವನೇ ಬಲ್ಲ!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

>>ಸಿರಿವಂತ ಬಡವ ಸೇರಿದರೆ ಕೈಗೂಡುತ್ತದೆಯೆ ಇವರೀರ್ವರ ಮನದ ಆಸೆ<< ಇಬ್ಬರು ಸೇರಿದರೂ ಅವರಿಬ್ಬರೂ ತಮ್ಮ ಇರುವ ಆಸೆಗಳನ್ನು ಕೈಗೂಡಿಸಿಕೊಳ್ಳುವುದಕ್ಕಿ೦ತ, ಇನ್ನೂ ಹೊಸ-ಹೊಸ ಆಸೆಗಳನ್ನು ಕಲ್ಪಿಸಲು ಯಾ ಮನಸ್ಸಿನಲ್ಲಿ ಹುಟ್ಟುಹಾಕಲೇ ಹೆಚ್ಚಿನ ಸಮಯ ಕಳೆಯುತ್ತಾರೆ ಎ೦ದು ನನ್ನ ಅನಿಸಿಕೆ. ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ ನಿಜ. ಪ್ರತಿಕ್ರಿಯೆಗಾಗಿ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೋಮಲ್, ಕವನದ ಭಾವಾರ್ಥ ಚೆನ್ನಾಗಿದೆ. ನಾವಡರ ಅಭಿಪ್ರಾಯಕ್ಕೆ ನನ್ನ ಸಹಮತವಿದೆ. ಆದರೆ ಸಿರವ೦ತ ಹೋಗಿ "ಸಿರಿವ೦ತ" ಆಗಬೇಕಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜಣ್ಣ ಬದಲಾಯಿಸಿದ್ದೇನೆ. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಡವ ಸಿರಿವಂತ - ಹಣದ ಮೂಲಕ ಇವನ್ನು ವಿವರಿಸಬಹುದೇ ಹೊರತು ಗುಣ ವಿವರಿಸಲು ಆಗದು. ಏಕೆಂದರೆ ವೈರುಧ್ಯಗಳೂ ಬೇಕಾದಷ್ಟು ಸಿಗುತ್ತವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಖಂಡಿತ ಸಂತೋಷ್, ಪ್ರತಿಕ್ರಿಯೆಗಾಗಿ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.