ಗೆಳತಿ ನಿನ್ನ ನೆನಪಲ್ಲಿ

0

ಗೆಳತಿ ನಿನ್ನರಸಿ ದೂರದ ಊರಿಂದ ನಾ ಬಂದೆ

ನೀ ಎಲ್ಲಿಗೂ ಹೋಗುವುದಿಲ್ಲವೆಂದು

ನಾ ಹತ್ತಿರ ಬಂದಾಗ ದೂರ ಸರಿಯುವೆ

ನೀ ಬಹು ದೂರ ಹೋದೆ ಎಂದು ತಿಳಿದಾಗ

ಮನಸ್ಸು ಅಲ್ಲೋಲ ಕಲ್ಲೋಲವಾಯಿತೆಂದು

ಗೆಳತಿ ನಮ್ಮಿಬ್ಬರ ಸ್ನೇಹ ಜನ್ಮಾಂತರದ್ದು

ಅದು ಸುಳ್ಳು ಎಂದು ದೂರ ನೀ ಹೋದಾಗಲೇ ತಿಳಿದೆ

ಆದರೂ ಸನಿಹಕ್ಕೆ ಬರುವೆ ಎಂಬ ಆಶಯ

ಕಾಡುತ್ತಿದೆ ಎಂದೆಂದು

ಗೆಳತಿ ನಮ್ಮಿಬ್ಬರ ಬಾಲ್ಯ ಅಜರಾಮರ

ಅದರ ನೆನಪು ಕಾನನದ ಪಕ್ಷಿಯ ಚೀತ್ಕಾರವಿದ್ದಂತೆ

ನೀ ಅಗಲಿದ ನೆನಪು ಮರುಭೂಮಿಯಂತೆ

ಅದರಲ್ಲೂ ಕಾಣುವ ಮರೀಚಿಕೆಯಂತೆ

ನಿನ್ನನ್ನೂ ಎಂದಿಗೂ ಹುಡುಕುತ್ತಲೇ ಇರುವೆ.

ಇದು ಸತ್ಯ ಗೆಳತಿ, ಇದು ಸತ್ಯ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಏನಣ್ಣಾ, ಪಕ್ಸಾ೦ತ್ರ ಮಾಡ್ತಿದೀಯಾ? ಇ೦ಗಾದ್ರೆ ಆ ಗೌಡಪ್ಪನ್ ಕಥೆ???.........:) ತಮಾಷೆ ಮಾಡಿದೆ ಕೋಮಲ್, ಕವನ ತು೦ಬಾ ಚೆನ್ನಾಗಿದೆ, ಜೊತೆಗಿರುತ್ತೇನೆ೦ದು ಭರವಸೆ ಕೊಟ್ಟು ನನ್ನನ್ನು ಬಿಟ್ಟು ಓಡಿ ಹೋದ ಗೆಳತಿ ನೆನಪಾದಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜಣ್ಣ ಹಾಸ್ಯ ಲೇಖನ ಎಲ್ಲರಿಗೂ ಇಷ್ಟವಾಗುವುದಿಲ್ಲ ಅನ್ನಿಸಿತು. ಆಮೇಲೆ ನಿಮ್ಮ ಫ್ಲಾಷ್ ಬ್ಯಾಕ್ ಹೇಳಲೇಬೇಕು. ಆ ಸವಿ ನೆನಪು ಕೇಳಬೇಕೆಂಬ ಕಾತುರ. ಆದಷ್ಟು ಶೀಘ್ರದಲ್ಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೋಮಲ್, ನಿಮ್ಮ ಕವನದ ಮೂಲಕ, ಅದೂ ಜನ್ಮದಿನದ ಮರುದಿನವೇ, ಮರೆತಿದ್ದವಳನ್ನು ಮತ್ತೆ ನೆನಪಿಸಿದ್ದೀರಿ. ನಾ ಮರೆತೇನೆ೦ದರೂ ಅವಳನ್ನು ಮರೆಯಲಿ ಹೆ೦ಗ! ಈ ಫ್ಲಾಷ್ ಬ್ಯಾಕ್ ಅದಾವಾಗಲೋ ಸ೦ಪದದಲ್ಲಿ ನನ್ನ ನೆನಪಿನಾಳದಿ೦ದ ಬ೦ದಿದೆ. ಕೆಳಗಿನ ಕೊ೦ಡಿಯಲ್ಲಿ ನೋಡಿ. http://sampada.net/a...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪರವಾಗಿಲ್ವೇ ಕೋಮಲ್ಲೂ!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.