ಇಂಗ್ಲೀಷ್ ಬ್ಲಾಗ್ ಗಳಲ್ಲಿ ಸಾಕಷ್ಟು ಜಾಹೀರಾತು ಕಾಣಸಿಗುತ್ತದೆ. ಆದರೆ ಕನ್ನಡ ಬ್ಲಾಗ್ ಗಳಿಗೆ ಜಾಹೀರಾತುದಾರರೇ ಇಲ್ಲ. ಗೂಗಲ್ ನವರು ಆಡ್ ಕೊಟ್ಟರೂ, ಮಾರನೆಯ ದಿನವೇ ಅದು ಕ್ಯಾನ್ಸಲ್ ಮಾಡಲಾಗಿದೆ ಎನ್ನುವ ಉತ್ತರ ಬರುತ್ತದೆ. ಪತ್ರಿಕೆಗಳಿಗಿಂತ ಹೆಚ್ಚು ಪ್ರಭಾವ ಬೀರುತ್ತಿರುವ ಬ್ಲಾಗ್ ಗಳಿಗೆ ಜಾಹೀರಾತಿನ ಕೊರತೆಯಾದರೂ ಏಕೆ ಎನ್ನುವುದು ಅರ್ಥವಾಗುತ್ತಿಲ್ಲ. ಪತ್ರಿಕೆಗಳಲ್ಲಿ ಸಾವಿರಾರು ರೂ ಖರ್ಚು ಮಾಡಿ ಹಾಕಿಸಿದಂತಹ ಜಾಹಿರಾತು ಅದು ಒಂದು ದಿನಕ್ಕೆ ಮಾತ್ರ ಸೀಮಿತ. ಅದೇ ಬ್ಲಾಗ್ ಗಳಲ್ಲಿಯಾದರೆ ದಿನ ನಿತ್ಯವೂ ಓದುಗರು ನೋಡುತ್ತಾರೆ. ಕನಿಷ್ಟ ಶೇ.40 ಭಾಗವಾದರೂ ಆಡ್ ಗೆ ಮೊರೆ ಹೋಗಬಹುದು. ಇದರ ಬಗ್ಗೆ ಆಡ್ ಕಂಪೆನಿಯವರು ಚಿಂತಿಸಿಲ್ಲವೆ. ಎಲ್ಲಾ ಬ್ಲಾಗ್ ಗಳಿಗೂ ಕೊಡಬೇಕಂತಲ್ಲ. ಯಾವುದು ಪ್ರಸಿದ್ದಿ ಹೊಂದಿದಿಯೋ ಅಂತಹುದಕ್ಕಾದರೂ ನೀಡಬಹುದಲ್ಲವೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಯಿದ್ದವರು ದಯವಿಟ್ಟು ತಿಳಿಸಿ. ಕನ್ನಡ ಬ್ಲಾಗ್ ಗಳಿಗೆ ಜಾಹೀರಾತು ಸಿಗುವುದಾದರೆ ಕನಿಷ್ಟ ಪಕ್ಷ ಬರಹಗಾರ ಕೊಂಚ ಮಟ್ಟಿಗಾದರೂ ಮತ್ತಷ್ಟು ಉತ್ಸುಕನಾಗುತ್ತಾನೆ ಎನ್ನುವುದು ನನ್ನ ಅಭಿಪ್ರಾಯ. ಬ್ಲಾಗ್ ಬರೆಯುತ್ತೇನೆ ಆದರೂ ನನಗೆ ಅದರ ಬಗ್ಗೆ ಅಷ್ಟೊಂದು ಮಾಹಿತಿಯಿಲ್ಲ. ದಯವಿಟ್ಟು ಇದರ ಬಗ್ಗೆ ಗೊತ್ತಿದ್ದಂತವರು ತಿಳಿಸಿದರೆ ನನಗೂ ಸಹಾಯವಾಗುತ್ತದೆ. ಹಾಗೇ ಉಳಿದವರಿಗೂ ಕೂಡ.
ಇದು ನನ್ನ ಬ್ಲಾಗ್ : http://www.komal1231.blogspot.com/
- komal kumar1231's blog
- Log in or register to post comments
- 1723 ಹಿಟ್ಸ್
ಪ್ರತಿಕ್ರಿಯೆಗಳು
ಉ: ಕನ್ನಡ ಬ್ಲಾಗ್ ಗಳಿಗೆ ಜಾಹೀರಾತು ಇಲ್ಲವೆ.
1. ಗೂಗಲ್ AdSense/AdWord ಕನ್ನಡ ತಾಣಗಳಿಗೆ ಜಾಹಿರಾತು ನೀಡುವುದಿಲ್ಲ. Ad ಗಾಗಿ ಕೋರಿಕೆ ಸಲ್ಲಿಸಿದಾಗ ನಿಮ್ಮ ಅಕೌಂಟ್ approve ಆಗುವ ಮೊದಲು ಸಾರ್ವಜನಿಕ ಸೇವಾ ಜಾಹೀರಾತುಗಳನ್ನು ನೀಡುತ್ತದೆ. ಆದರೆ ಇದರಿಂದ ದುಡ್ಡು ಬರುವುದಿಲ್ಲ. ನಂತರ ತಾಣ ಕನ್ನಡದಲ್ಲಿದೆ ಎಂದು ಗೊತ್ತಾದ ಕೂಡಲೆ ಈ ಭಾಷೆಗೆ ಜಾಹೀರಾತು ನೀಡಲು ಸಾಧ್ಯವಿಲ್ಲ ಎಂದು ಸಂದೇಶ ಕಳುಹಿಸುತ್ತಾರೆ. ಅವರು ಜಾಹೀರಾತು ನೀಡುವ ಭಾಷೆಗಳ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.
2. ಮುದ್ರಿತ ಮಾಧ್ಯಮಕ್ಕಾದರೆ ಎಷ್ಟು ಜನ ಓದುತ್ತಾರೆ ಎಂಬ ಬಗ್ಗೆ ಒಂದು ಐಡಿಯಾ ಇರುತ್ತದೆ. ಹಾಗಾಗಿ ಅದರಲ್ಲಿ ಜಾಹೀರಾತು ನೀಡಿದರೆ ಹೆಚ್ಚು ಜನಕ್ಕೆ ತಲುಪಬಹುದು. ಆದರೆ ಅಂತರ್ಜಾಲ ತಾಣಗಳಿಗೆ ಅದರಲ್ಲೂ ಬ್ಲಾಗ್ಗಳಿಗೆ ಇಷ್ಟೇ ಸಂಖ್ಯೆಯ ಓದುಗರಿರುತ್ತಾರೆ ಎಂಬ ಬಗ್ಗೆ ಯಾವುದೇ ಗ್ಯಾರೆಂಟಿ ಇರುವುದಿಲ್ಲ. ಓದುಗರ ಸಂಖ್ಯೆ ಪ್ರತಿದಿನವೂ ಬದಲಾಗುತ್ತಿರುತ್ತದೆ.
3. ಕನ್ನಡ ತಾಣಗಳಿಗೆ ಓದುಗರ ಸಂಖ್ಯೆ ಏನೇನೂ ಸಾಲದು. ಬ್ಲಾಗಿನಿಂದ ದೊಡ್ಡ ಮಟ್ಟದಲ್ಲಿ ದುಡ್ಡು ಮಾಡಬೇಕೆಂದರೆ ತಿಂಗಳಿಗೆ ಕನಿಷ್ಟವೆಂದರೂ 10,000 page views ಇರಬೇಕು. ಕನ್ನಡ ಬ್ಲಾಗ್ ಅಷ್ಟೊಂದು ಜನಪ್ರಿಯವಾಗುವುದು ಕಷ್ಟಸಾಧ್ಯ.
4. ಕನ್ನಡ ಒಂದು ಪ್ರಾಂತೀಯ ಭಾಷೆ, ಆದರೆ ಇಂಗ್ಲೀಷ್ ಎಲ್ಲ ಕಡೆಯೂ ಬಳಸಲ್ಪಡುತ್ತದೆ. ಹಾಗಾಗಿ ಇಂಗ್ಲೀಷ್ ತಾಣಗಳಿಗೆ ಹೆಚ್ಚು ಜನ ಭೇಟಿ ನೀಡುತ್ತಾರೆ. ಸಹಜವಾಗಿ ಇಂಗ್ಲೀಷ್ ತಾಣಗಳಲ್ಲಿ ಜಾಹೀರಾತು ನೀಡಿದರೆ ಹೆಚ್ಚು ಅನುಕೂಲ. ಹಾಗಾಗಿ ಜಾಹೀರಾತುದಾರು ಕನ್ನಡ ತಾಣಗಳ ಬಗ್ಗೆ ಆಸಕ್ತಿ ತೋರಿಸುವುದಿಲ್ಲ.
5. ಕಂಪ್ಯೂಟರ್/ಅಂತರ್ಜಾಲದ ಬಗ್ಗೆ ಈಗಲೂ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಅರಿವಿಲ್ಲ. ಆದರೆ ಮುದ್ರಿತ ಮಾಧ್ಯಮವು ಪ್ರತಿಯೊಂದು ಹಳ್ಳಿ ಪಟ್ಟಣವನ್ನೂ ತಲುಪುತ್ತದೆ. ಮುದ್ರಿತ ಮಾಧ್ಯಮದ ಜನಪ್ರಿಯತೆ/circulation ಬ್ಲಾಗ್ಗಳಿಗಿಂತ ಸಾವಿರಾರು ಪಟ್ಟು ದೊಡ್ಡದಿದೆ. ಅದರಲ್ಲಿ ಜಾಹೀರಾತು ನೀಡಿದರೆ ಎಲ್ಲರಿಗೂ ತಲುಪಿಯೇ ತಲುಪುತ್ತದೆ. ಆದರೆ ಬ್ಲಾಗ್ನಲ್ಲಿ ಇದರ ಬಗ್ಗೆ ಭರವಸೆ ಇರುವುದಿಲ್ಲ. ಅಲ್ಲದೇ ಪತ್ರಿಕೆಗಳ ಜಾಹೀರಾತು ಒಂದೇ ದಿನಕ್ಕೇ ಸೀಮಿತವಾದರೂ ಅಷ್ಟರೊಳಗೆ ಅದು ಸಾಕಷ್ಟು ಪ್ರಭಾವ ಬೀರಿರುತ್ತದೆ. ಹಾಗಾಗಿ ಜಾಹೀರಾತುದಾರರು ಪತ್ರಿಕೆಯಗಳಿಗೇ ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆ.
6. ಜಾಹೀರಾತಿನಿಂದ ದುಡ್ಡು ಮಾಡುವುದು ಅವುಗಳನ್ನು ಆರಿಸಿಕೊಳ್ಳುವ ಜಾಣತನದ ಮೇಲೆ ನಿಂತಿದೆ. ಗೂಗಲ್ AdSenseನಿಂದಲೂ ಮೋಸವಾಗುತ್ತದೆ. ಅದರ ಬಗ್ಗೆ ಜನರು ಬರೆದ reviewಗಳನ್ನು ಒಮ್ಮೆ ನೋಡಿ (ಅದರ ಬಗ್ಗೆ ಗೂಗಲ್ನಲ್ಲೇ ಹುಡುಕಬಹುದು!). ಯಾವುದೇ ಜಾಹೀರಾತುಗಳನ್ನು ಬ್ಲಾಗಿನಲ್ಲಿ ಹಾಕುವುದಾದರೂ Terms and conditions ಸರಿಯಾಗಿ ಓದಿಕೊಳ್ಳಬೇಕು. ಇಲ್ಲದಿದ್ದರೆ ಮೋಸ ಹೋಗುವುದು ಗ್ಯಾರೆಂಟಿ!
ನನಗೆ ಗೊತ್ತಿರುವಷ್ಟು ಬರೆದಿದ್ದೇನೆ. ಹೆಚ್ಚಿನ ಮಾಹಿತಿ ಇದ್ದವರು ದಯವಿಟ್ಟು ತಿಳಿಸಿ.
-ಪ್ರಸನ್ನ.ಎಸ್.ಪಿ
ಉ: ಕನ್ನಡ ಬ್ಲಾಗ್ ಗಳಿಗೆ ಜಾಹೀರಾತು ಇಲ್ಲವೆ.