ಹೋಳಿ ಹಬ್ಬದಲ್ಲಿ ಸಗಣಿ ಎರಚಿದ್ದು
ಬೆಳಗ್ಗೆನೇ ನಮ್ಮ ಗೌಡಪ್ಪ ಎಲ್ಲರಿಗೂ ಪೋನ್ ಮಾಡ್ದ. ಇನ್ನೂ ಕೆರೆತಾವ ಇದ್ದಂಗೆನೇ ಪೋನ್ ಬಂತು. ಅದು ವೈಬ್ರೇಟಿಂಗ್ ಮೋಡಲ್ಲಿ ಮಡಗಿದ್ದೆ. ಎಲ್ಲೆಲ್ಲೀ ನಡುಗಿತ್ತು. ಏನ್ರೀ ಗೌಡ್ರೆ ಅಂದೆ. ನೋಡ್ಲಾ, ಈ ಬಾರಿ ಸಾನೇ ಜೋರಾಗಿ ಹೋಳಿ ಹಬ್ಬ ಮಾಡುವಾ, ಎಲ್ಲಾರೂ ಪಂಚಾಯ್ತಿ ಕಟ್ಟೆ ತಾವ ಬರ್ರಲಾ ಅಂದ. ಏನ್ಲಾ ಅದು ಢರ್ ಬುರ್ ಸವಂಡ್ ಬತ್ತಾ ಐತೆ ಅಂದ ಗೌಡಪ್ಪ. ಅದಾ ಹಳಸಂಧಿ ಕಾಳು ಪ್ರಭಾವ, ಅದು ಬೇಡ ಬುಡಿ ಬತ್ತೀನಿ ಅಂದೆ. ಸರಿ ಎಲ್ಲಾರೂ ಪಂಚಾಯ್ತಿ ಕಟ್ಟೆ ತಾವ ಸೇರಿದ್ವಿ. ಗೌಡಪ್ಪ ಬಂದು ನೋಡ್ರಲಾ, ಈಗ ನಮ್ಮ ಯಡೂರಪ್ಪಂಗೆ ಮತ್ತೆ ಮುಕ್ಕಮಂತ್ರಿ ಆಗೋ ಚಾನ್ಸ್ ಐತೆ. ಹಂಗಾಗಿ ನಾವು ಹಬ್ಬ ಜೋರಾಗಿ ಆಚರಿಸಿ, ಪೇಪರ್ನಾಗೆ ಬಂದ್ರೆ, ನಂಗೆ ಯಾವುದಾದ್ರೂ ನಿಗಮ ಮಂಡಳಿ ಅಧ್ಯಕ್ಸ ಸ್ಥಾನ ದೊರಿತದೆ , ನಿಮ್ಮ ಸಹಕಾರ ಬೇಕು ಕನ್ರಲಾ ಅಂದ.
- 4 ಪ್ರತಿಕ್ರಿಯೆಗಳು
- Log in or register to post comments
- 1707 ಹಿಟ್ಸ್