ಅ ಆ ಇ ಈ ಕನ್ನಡದ ಅಕ್ಷರಮಾಲೆ...

5

ಮಕ್ಕಳಿಗೆ ಕನ್ನಡ ಈ ರೀತಿ ಪಾಠ ಹೇಳಬೇಕು..

ನೆನಪಿದೆಯೆ.. ನಾವು ಚಿಕ್ಕವರಿದ್ದಾಗ ಅಂಕಲಿಪಿ ತಗೊಂಡು ಅದರಲ್ಲಿರೋ ಚಿಕ್ಕ ಪುಟ್ಟ ಪದಗಳನ್ನು ಓದುತ್ತಿದುದು.
ಅದರಲ್ಲಿರುವ ಅ ಅಳಿಲು, ಆ ಆನೆ, ಇ ಇಲಿ, ಈ ಈಶ....ನಮ್ಮಮ್ಮ ಇದನ್ನೆ ಹೇಳಿಕೊಡುತ್ತಿದ್ದರು...
ಅದರ ಜೊತೆಗೆ ಅವುಗಳಲ್ಲಿರುವ ಪಾಪೆಗಳು ಕೂಡ ಮುದಕೊಡುತ್ತಿದ್ದುವು..

ಜ ಜಳಕ ಎಂದಾಗ ನಲ್ಲಿ ಕೆಳಗೆ ಕೂತು ಜಳಕ ಮಾಡೋ ಬಾಲಕನ ಪಾಪೆ ನೋಡಿ ನಾನು ನಲ್ಲಿ ಕೆಳಗೆ ಕೂತಾಗ ಅಮ್ಮ ತಣ್ಣೀರಲ್ಲಿ ಜಳಕ ಮಾಡಬೇಡ ಅಂತ ಬೈದಿದ್ದು ಇದೆ..
ಮತ್ತೆ ಅದರಲ್ಲಿರುವ ಮಗ್ಗಿಗಳೋ ನನಗೆ ಮುವತ್ತರ ತನಕ ಬಾಯಿಪಾಟ ಮಾಡಲೇಬೇಕು ಅಂತ ಅಂದುಕೊಂಡರೂ ಕೊನೆಗೆ 25ರ ತನಕವೇ ಆಗಿದ್ದು.. ಆದರೂ ಶಾಲೆಯಲ್ಲಿ ಎಲ್ಲರಿಗಿಂತ ನಾನು ಮತ್ತು ರಾಮುವೇ ಮುಂದು.. ಹುಂ...

ನನಗೆ ಬೆನ್ನ ಹಿಂದಿನ ಪಾಟೀಚೀಲ ಅದರಲ್ಲಿ ಕಲ್ಲಿನ ಪಾಟಿ.. ಚಿಕ್ಕ ಚಿಕ್ಕ ಬಳಪಗಳು ಬಲು ಖುಷಿಕೊಡುವ ದಿನಗಳವು...
ಮನೆಯಲ್ಲಿ ಮಾಡಿದ ಮನೆಪಾಠ ಬರೆದಿದ್ದು ಪಾಟಿಯಲಿ ಅಳಿಸಿ ಹೋಗಬಾರದೆಂದು ಕೈಯಲ್ಲಿ ಹಿಡಿದು ಹೋಗಿದ್ದು..
ಆಮೇಲೆ ಒಂದನೆ ಇಯತ್ತೆ/ತರಗತಿಯಲ್ಲಿರುವ ರವಿಯು ಅಜ್ಜನ ಮನೆಗೆ ಹೋದನು ಪಾಠದಲ್ಲಿ ಬರುವ ಅಜ್ಜನ ಊರಿನ ನೆನಪು, ಅಲ್ಲಿರುವ ಎತ್ತಿನ ಬಂಡಿ, ಅವುಗಳ ಘಲ್ ಘಲ್ ಘಂಟಾ ನಾದ..
ಮನೆಯ ಹಿಂದಿನ ಕೈತೋಟ.. ಅಬ್ಬ ಮತ್ತೆ ಚಿಕ್ಕವನಾಗಬೇಕು ಅನಿಸುತ್ತೆ... ಅಜ್ಜಿ ಕೊಡುವ ಉಂಡಿ ತಿಂದು ಊರ ಹೊರಗೆ ಆಡಲು ಹೋಗ್ತಿದ್ದು.. ಸಕ್ಕತ..

ಕೇಳಿ ಮರೆತು ಹೋದ ಈ ಕೆಳಗಿನ ಹಾಡು ..

ಮತ್ತೆ ಇನ್ನೊಂದು...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ತಾಯಿ ಶಾರದೆ.. ..... .... .... ಚನ್ನಾಗಿದೆ.. ಇನ್ನೂ ಪೂರ್ತಿ ಕೇಳಿಲ್ಲ.. ಇವಾಗಲೇ ತುಂಬಾ ಇಷ್ಟ ಆಯ್ತು...
ಇದೇ ಮೊದಲನೇಬಾರಿಗೆ ಈ ಹಾಡನ್ನು ಕೇಳುತ್ತಿದ್ದೇನಿ... ಧನ್ಯವಾದಗಳು

ವಿನಾಯಕ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ಕಾರ ವಿನಾಯಕ,

ಈ ಹಾಡು ನನಗೂ ಬಲು ಇಷ್ಟವಾದ ಹಾಡು.

ನಿಮ್ಮ್ ಪ್ರತಿಕ್ರಿಯೆಗೆ ನನ್ನಿ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈಗ ಇದೆಲ್ಲ ನಡೆಯೊದಿಲ್ಲ ... ಈ ಈಶ, ತಾಯಿ ಶಾರದೆ ಯನ್ನು ಸೇರಿಸಿದರೆ ಕೇಸರಿಕರಣ ಆಗುತ್ತದೆ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಾಲ್ಯದ ಮಧುರವಾದ ದಿನಗಳನ್ನು ನೆನಪಿಸಿಕೊಳ್ಳುವಂತೆ ಮಾಡಿದ್ದಕ್ಕೆ ಧನ್ಯವಾದಗಳು ಖ.ವಿ. ? ಇದು ನಿಮ್ಮ ಹೆಸರಾ >... ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.