ಗಜ-ಹಂಸ

5

ಕೆಳದಿ ರಾಮೇಶ್ವರ ದೇವಾಲಯ ಒಂದು ಪ್ರಸಿದ್ಧವಾದ ಹಳೆಯ ದೇವಾಲಯ. ಕೆಳದಿ ಅರಸರು ನಿರ್ಮಿಸಿದ ಈ ದೇವಾಲಯದ ಪ್ರಮುಖ ದೇವರುಗಳೆಂದರೆ ರಾಮೇಶ್ವರ (ಲಿಂಗ), ವೀರಭದ್ರದೇವರು ಮತ್ತು ಪಾರ್ವತಿ ದೇವಿ. ಈ ದೇವಾಲಯವನ್ನು ಭಾರತ ಸರ್ಕಾರದ ಪ್ರಾಚ್ಯವಸ್ತು ಇಲಾಖೆಯವರು ಸಂರಕ್ಷಿಸಿದ್ದಾರೆ. ಉತ್ತಮವಾಗಿ ನಿರ್ವಹಣೆ ಮಾಡಿದ್ದಾರೆ. ಶಿಲ್ಪಕಲಾ ಕೋನದಿಂದಲೂ ಸಂದರ್ಶಿಸಬಹುದಾದ ದೇವಾಲಯವಿದು. ಪ್ರಾಂಗಣದ ಒಳಗೆ ಸುಂದರ ನಾಗದೇವತೆಗಳ ಮತ್ತು ವಿವಿಧ ಭಂಗಿಗಳಲ್ಲಿ ನಿಂತಿರುವ ಅನೇಕ ಸಂಗೀತ ಕಲಾವಿದರ ಶಿಲ್ಪಗಳು ಮನಸೆಳೆಯುತ್ತವೆ. ದೇವಸ್ಥಾನದ ಹೊರಮುಖದಲ್ಲಿ ಲಿಂಗದ ಮೇಲೆ ಕ್ಷೀರಾಭಿಷೇಕ ಮಾಡುತ್ತಿರುವ ಹಸು, ವಾಸ್ತುಪುರುಷ ಮತ್ತಿತರ ಆಕರ್ಷಕ ವಿಗ್ರಹಗಳ ಜೊತೆ ಈ ಗಜ-ಹಂಸದ ಕೆತ್ತನೆಯನ್ನು ನೋಡಬಹುದಾಗಿದೆ. ಮುಖ ಆನೆಯ ಸೊಂಡಿಲದ್ದಾದರೆ, ದೇಹ ಹಂಸದ್ದು. ಬಹುಶ: ಆನೆಯ ಗಂಭೀರ ಮತ್ತು ಹಂಸ ಪ್ರತಿನಿಧಿಸುವ ಶಾಂತಿ ಮತ್ತು ಜ್ಞಾನದ ಪ್ರತೀಕ ಈ ಕೆತ್ತನೆ ಇರಬಹುದು. ಮತ್ತೊಂದು ವಿಶೇಷವೆಂದರೆ ಈ ಗಜ-ಹಂಸ ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾನಿಲಯದ ಅಧಿಕ್ಋತ 'ಲೋಗೋ'!

ಕೆಳದಿಗೆ ಭೇಟಿ ಇತ್ತಾಗ ಖಂಡಿತ ಒಮ್ಮೆ ನೋಡಿ ---

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.