ಸೋಲದಿರು

5

ದೂಷಿಸದಿರು ಮನವೆ ಪರರು ಕಾರಣರಲ್ಲ

ತಪ್ಪಾಗಿ ನಿನ್ನೆಣಿಕೆ  ಕಂಡಿರುವೆ ನೋವ |

ವಿಧಿಯು ಕಾರಣವಲ್ಲ ಹಣೆಬರಹ ಮೊದಲಲ್ಲ

ಕೊರಗಿದರೆ ಫಲವಿಲ್ಲ ದಣಿಯದಿರು ಮನವೆ || 

ಉಗ್ರವಾಗಿಹ ಮನವೆ ತಾಳು ತಾಳೆಲೆ ನೀನು

ವಿವೇಕ ನಲುಗೀತು ಕೆರಳದಿರು ತಾಳು |

ವ್ಯಗ್ರತೆಯ ನಿಗ್ರಹಿಸಿ ಸಮಚಿತ್ತದಲಿ ನಡೆಯೆ

ಸೋಲಿನ ಅನುಭವವೆ ಗೆಲುವಿಗಾಸರೆಯು || 

ಮೂಢನಂತಾಡದಿರು ಮತಿಗೆಟ್ಟು ನರಳದಿರು

ಮೈ ಕೊಡವಿ ಮೇಲೆದ್ದು ಅಡಿಯನಿಡು ಧೀರ |

ಸೋಲದಿರೆಲೆ ಜೀವ ಕಾಯ್ವ ನಮ್ಮನು ದೇವ

ಛಲಬಿಡದೆ ಮುನ್ನಡೆದು ಉಳಿಸು ಸ್ವಂತಿಕೆಯ || 

ಲೋಕದೊಪ್ಪಿಗೆ ಬೇಕೆ ಪರರ ಮನ್ನಣೆಯೇಕೆ

ದಾರಿ ಸರಿಯಿರುವಾಗ ಅಳುಕು ಅಂಜಿಕೆಯೇಕೆ |

ಒಳಮನವು ಒಪ್ಪಿರಲು ಚಂಚಲತೆ ಇನ್ನೇಕೆ

ಪಯಣಿಗನೆ ನೀ ಸಾಗು ದಾರಿ ನಿಚ್ಛಳವಿರಲು ||

***************

-ಕ.ವೆಂ.ನಾಗರಾಜ್.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಕವನ ತು೦ಬಾ ಚೆನ್ನಾಗಿದೆ.. ಚಿ೦ತನೆಗೆ ಓರೆ ಹಚ್ಚುವ ಕವನ.. ಅಭಿನ೦ದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ, ಪ್ರಸನ್ನ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ಕಾರ ನಾಗರಾಜ್ ಸರ್ ಎಲ್ಲ ಕವನಗಳು ಚೆನ್ನಾಗಿದೆ ಮತ್ತು ’ಮೂಡ’ ಕಾವ್ಯನಾಮವನ್ನು ಉಪಯೋಗಿಸದಿರುವುದು ಆಶ್ಚರ್ಯ !
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥರೇ, ವಂದನೆ. ಇದು 'ಮೂಢ'ನ ಉವಾಚವಲ್ಲ, ಪ್ರತ್ಯೇಕ ಕವನಗಳೂ ಅಲ್ಲ. ಒಂದೇ ಕವನ, ಸಾರ ರೂಪದಲ್ಲಿ ಸೋತಲ್ಲಿ ಕುಗ್ಗದಿರಲು ನನ್ನನ್ನು ನಾನೇ ಉತ್ತೇಜಿಸಿಕೊಂಡದ್ದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರಿ , 'ಗಳು' ಗಳನ್ನು ವಾಪಸ್ ಪಡೆದಿದ್ದೀನಿ :-) ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ ಹಿಗ್ಗದೆಯೆ ಕುಗ್ಗದೆಯೆ ನುಗ್ಗಿ ನಡೆ ಮುಂದೆ ! ನಿಮ್ಮ ಹೊಸ ಗೆಟ್ ಅಪ್ ಚೆನ್ನಾಗಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:-):)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾನೇ ಚೆನ್ನಾಗಿದೆ ಮೊದಲನೆಯದ್ದು ಮಸ್ತ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ, ಚಿಕ್ಕೂ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಗರಾಜರೆ ಅದ್ಭುತವಾಗಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆ, ಜಯಂತರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಜ್ಜೆ ಹೆಜ್ಜೆಗೂ ಅಳುಕುವ ಒಳಮನವನ್ನು ಬಡಿದೆಬ್ಬಿಸಿ, ಜಾಗ್ರತಗೊಳಿಸಿ ಮುನ್ನಡೆಸುವ ಸಾಲುಗಳು ಇಷ್ಟವಾದವು! -ಆಸು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಿಯ ಸುರೇಶರೇ, ನಿಮ್ಮ ಪ್ರತಿಕ್ರಿಯೆ ನನ್ನ ಅನಿಸಿಕೆ ಸರಿಯೆಂದು ಮುದ್ರೆ ಒತ್ತಿದೆ. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೋತು ಸುಣ್ಣವಾಗಿ,ಆತ್ಮವಿಶ್ವಾಸ ಕಳೆದುಕೊ೦ಡು ಮುದುಡಿ ಕುಳಿತ ಮನಸ್ಸಿಗೆ ಚೇತೋಪಹಾರಿ ಸಾಲುಗಳು!! ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ, ರಾಘವೇಂದ್ರರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.