ಆಭಾಸ

5

                ಆಭಾಸ

ಬದುಕಿನಲಪರಿಮಿತ ಅಭಾಸಗಳ ಕಂಡೆ
ಪರಿತಪ್ತ ಮನಸಾಗಿಹುದು ಅಗ್ನಿಯ ಉಂಡೆ

ಸತ್ಯ ನ್ಯಾಯ ಧರ್ಮಗಳೆಂದು ಕಂಡರೆ ಕನಸ
ಹೀಗಳೆದು ಕಾಲೆಳೆದು ಮಾಡುವರು ಪರಿಹಾಸ

ಹುಂಬರೊಟ್ಟಾಗಿ ಹಂಗಿಸುತ ಜರೆಯುವರು
ಮನೆಮಂದಿಯೇ ಬೆಂಬಲವ ನೀಡದಿಹರು

ನಳನಳಿಸಿ ಚಿಗುರೊಡೆದ ಸಂಬಂಧವೃಕ್ಷದ ಬೇರು
ಹುಳು ಹತ್ತಿ ಧರೆಗುರುಳಿ ಮನಸು ಚೂರು ಚೂರು

ಪೋಷಿಸುವ ಕರಗಳು ನೇಣು ಬಿಗಿದುದ ಕಂಡೆ
ಬೇರು ಮೇಲೆದ್ದು ಚಿಗುರ ನುಂಗಿದುದ ಕಂಡೆ

ಗುರು ಹಿರಿಯರನು ಅವಮಾನಿಸಿದುದ ಕಂಡೆ
ನಂಬಿದವರೇ ಕೊರಳ ಕೊಯ್ದುದನು ಕಂಡೆ

ಮುನ್ನಡೆಯಲಡಿಯಿಟ್ಟ ನೆಲ ಕುಸಿದುದನು ಕಂಡೆ
ನಡೆದೆಡವಿದ್ದೇ ತಪ್ಪೆಂದವರ ಕಂಡು ಮನನೊಂದೆ
***********
-ಕವಿನಾಗರಾಜ್.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಾಗರಾಜ್, ಇದು ಕಲಿಯುಗ. ಕಲಿಯುಗದಲ್ಲಿ ಹೀಗೆಯೇ ಆಗುತ್ತದೆಯೆಂದು ಶ್ರೀಕೃಷ್ಣ ಹೇಳಿದ್ದಾರೆ ಎಂದು ಎಲ್ಲೋ ಓದಿದ/ಕೇಳಿದ ನೆನಪು. -ಆಸು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ, ಆಸುರವರೇ. ಆದರೂ. . . . . . . . ಇದಕ್ಕೆ ಹೊಂದಿಕೊಳ್ಳುವುದು ಸುಲಭವಲ್ಲ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಗರಾಜ್ ಸಾರ್, ಬಹಳ ಸಮಂಜಸವಾಗಿದೆ ಕವಿತೆಯ ಶೀರ್ಷಿಕೆ. ಇಂದಿನ ವಾಸ್ತವತೆ ಇದೇನೆ . ಇದಕ್ಕೆ ಹೊಂದಿಕೊಂಡು ಬದುಕಿ ಊಳಿಯಬೇಕು. ಅದರಲ್ಲಿ ಏನಾದರೂ ಸಾಥಿಸಬೇಕು. ವಂದನೆಗಳು/ಮಧ್ವೇಶ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಿತಕರ ಪ್ರತಿಕ್ರಿಯೆಗೆ ವಂದನೆ, ಮಧ್ವೇಶರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಗರಾಜರೆ, ನಿಜಜೀವನದಲ್ಲಿ ಸ್ವಾರ್ಥವೇ ಮು೦ದೆ ನಿ೦ತಾಗ ನಡೆಯುವ ವಿದ್ಯಮಾನಗಳೆಲ್ಲಾ ಮನವನ್ನು ನೋಯಿಸುವ೦ತಹುದು.ಹೃದಯಸ್ಪರ್ಶಿ ನುಡಿಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು, ರಘುಮುಳಿಯರಿಗೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಮನಸಿನ ಭಾವನೆಗಳನ್ನು ಅಕ್ಷರ ರೂಪಕ್ಕಿಳಿಸಿದ್ದೀರಿ. ಧನ್ಯವಾದಗಳು. ಮು೦ದ? ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಘವೇಂದ್ರರೇ, ವಂದನೆ. ಮುಂದೆ? ಅಂದರೆ, ಈಸಬೇಕು, ಇದ್ದು . . . .!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಗರಾಜರಾಯರೇ, ನಿಮ್ಮ ಜೀವಾನುಭವ ಮತ್ತು ನಿಲುವುಗಳು ನಿಮ್ಮನ್ನು ಅನುಭಾವಕ್ಕೆ ಎಳೆಯುವವು ಅನಿಸುತ್ತದೆ. ಅನುಭವಗಳ ಸುಂದರ ಅಭಿವ್ಯಕ್ತಿಗೆ ಅಭಿನಂದನೆಗಳು! - ಆತ್ರೇಯ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು, ಡಾ.ಮುಳಗುಂದರೇ, ನಿಮ್ಮ ಮಾತು ನಿಜ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವಿಯವರೇ ಅನುಭವ ಕಲಿಸುವಂತಹದ್ದು ಓದಿ ತಿಳಿಯಲಾಗುದಿಲ್ಲ ಅನ್ನುತ್ತಾರೆ. ಅನುಭವದ ಸಾಲುಗಳು ಸೂಪರ್ !!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ, ಕಾಮತರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನ ತುಂಬಾ ಚೆನ್ನಾಗಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆ, ಚಿಕ್ಕೂ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಭಾಸ ಆಗ ಬೇಕಾಗಿದೆ. ಅಭಾಸ ಆಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು, ಸುರೇಶರೇ. ಸರಿಪಡಿಸಿಕೊಂಡಿದ್ದೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅರ್ಥಪೂರ್ಣ ಸಾಲುಗಳು .....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು, ಗೋಪಾಲ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮತ್ತೊಂದು ಕಾವ್ಯ ಮುತ್ತನ್ನಿಟ್ಟ ಕವಿ ನಾಗರಜರಿಗೆ ಸಂಪದಿಗರೆಲ್ಲರ ಪರವಾಗಿ ದನ್ಯವಾದಗಳೆಂಬ ಪ್ರಶಂಸೆ ಯ ಮತ್ತು ಅಲ್ಲ ಮುತ್ತನ್ನು ಕೊಡಲು ಆಶಿಸಿ ಇತ್ತಿದ್ದೇನೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಮಮೋಹನರೇ, ನಿಮ್ಮ ಪ್ರತಿಕ್ರಿಯೆಯಿಂದ ಬಹಳ ಹಿತವೆನಿಸಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಗರಾಜ್ ರವರೇ ಎಷ್ಟು ಸುಂದರವಾಗಿ ಜೀವನದ ಮೌಲ್ಯಗಳನ್ನನುಸರಿಸದ ಆಭಾಸಗಳನ್ನು ಚಿತ್ರಿಸಿದ್ದೀರಿ. ಅಭಿನಂದನೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಗರತ್ನರವರೇ, ನಿಮ್ಮ ಹಿತಕರ ಪ್ರತಿಕ್ರಿಯೆಗಾಗಿ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಗರಾಜ್ ಸರ್ ನಿಜವಾಗು ಪ್ರತಿಕ್ರಿಯೆ ನೀಡಬೇಕೆಂದು ಅನ್ನಿಸುತ್ತಿದೆ ಆದರೆ ಏನೆಂದು ? ತಿಳಿಯುತ್ತಿಲ್ಲ ? -ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದಕ್ಕಿಂತ ಪ್ರತಿಕ್ರಿಯೆ ಬೇಕೆ? ವಂದನೆಗಳು, ಪಾರ್ಥರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವಿ ನಾಗರಾಜರೆ, ಪ್ರಸ್ತುತ ಜಗದಲ್ಲಿ ನಡೆಯುತ್ತಿರುವುದೆಲ್ಲವೂ ನಿಮ್ಮ ಕವನದಲ್ಲಿ ವ್ಯಕ್ತವಾಗಿದೆ. ಸು೦ದರ ಕವನ, ಎಲ್ಲಾ ಕಲಿಗಾಲದ ಮಹಿಮೆ ಅನ್ನೋಣವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಿಯ ಮಂಜು, ಕಲಿಗಾಲದ ಮಹಿಮೆ ಅನ್ನುವುದು ಒಂದು ರೀತಿಯಲ್ಲಿ ಸರಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವಿಯವರೇ ಬದಲಾದ ಜೀವನ, ಜನರು ಮನಸ್ಸು ತುಂಬಾ ನೊಂದು ಹೋಗುತ್ತೆ ಈ ರೀತಿ ಎಣಿಸಿದರೆ ಇಲ್ಲಿಯವರಲ್ಲ ನಾವು ಸ್ಪಷ್ಟ ಸ್ಪರ್ಷೀ ಕವನ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೋಪಿನಾಥರೇ, ಸಾಂತ್ವನವೀಯುವ ಪ್ರತಿಕ್ರಿಯೆಗೆ ವಂದನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆದರೂ ನಿನ್ನಲ್ಲಿ ನಂಬಿಕೆಯಿಟ್ಟೆ ನಾನು ಎಲ್ಲರಂತಾಗದೆನ್ನನು ನಡೆಸಿರುವೆ ನೀನು! ಜೀವನಾನುಭವಕ್ಕೆ ಅಕ್ಷರ ರೂಪ ಕೊಟ್ಟಿದ್ದೀರಿ ಕವಿನಾಗರಾಜರೇ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಹಳ ತಡವಾಗಿ ಉತ್ತರಿಸಿರುವೆ. ಧನ್ಯವಾದ ಕೇಶವರೇ.