ಸತ್ಯ

5

ಸತ್ಯ

ಕಷ್ಟವೇನಲ್ಲ,
ಹುಡುಕಿದರೆ ಸಿಕ್ಕೀತು
ಬದುಕಲಗತ್ಯದ ಪ್ರೀತಿ!

ಕಠಿಣಾತಿ ಕಷ್ಟ,
ಹುಡುಕಿದರೂ ಸಿಕ್ಕದು
ಎಲ್ಲಿಹುದದು ಸತ್ಯ?

ಅಯ್ಯೋ ಮರುಳೆ,
ಪಂಡಿತೋತ್ತಮರೆಂದರು
ದೇವರೇ ಸತ್ಯ!

ದೇವರು? ಸತ್ಯ?
ಎಲ್ಲಿಹುದದು ಸತ್ಯ?
ಇನ್ನು ದೇವರು?

ಸಿಕ್ಕರೂ ಸತ್ಯ,
ಮುಖವಾಡದಡಗಿಹುದು ಸತ್ಯ,
ಅರ್ಥವಾಗದ ಸತ್ಯ!

ಅರ್ಥೈಸಿದರೆ ಸತ್ಯ,
ಪಥ್ಯವಾದರೆ ಸತ್ಯ,
ದೇವನೊಲಿವ, ಸತ್ಯ!
****
-ಕವಿನಾಗರಾಜ್.


ಎಲ್ಲಾ ಸಂಪದಿಗರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಮೋನಮ:,ವೇದಸುಧೆಯಲ್ಲಿಯೇ ಓದಿದ್ದೆ. ಪ್ರತಿಕ್ರಿಯಿಸುವುದನ್ನು ಮರೆತಿದ್ದೆ. ನಮಸ್ಕಾರಗಳೊ೦ದಿಗೆ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ, ನಾವಡರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸತ್ಯ ಸತ್ಯ ಸತ್ಯ ನಿಮ್ಮ ಮಾತು ಸತ್ಯ ಸತ್ಯವೆಂಬುದು ಮೂರುಕಾಲಕ್ಕೂ ಸತ್ಯ ಹೊರಗೆಲ್ಲಾ ಹುಡುಕಿದರೆ ಸಿಗದು ಸತ್ಯ ಒಳಗೇ ಇಣುಕಿದಾಗ ಕಾಣುವುದು ಸತ್ಯ -ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ಸುರೇಶರೇ. ಒಳಗೆ ಇಣುಕಿದರೆ ಕಾಣುವ ಸತ್ಯವನ್ನು ಕಂಡರೂ ಕಾಣದಂತಿರುವುದೂ ನಮ್ಮದೇ ಸತ್ಯ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹತ್ತು ಜನರಿಗೊಳ್ಳೆಯದಾದರೆ ಅದೇ ಸತ್ಯ ಮನಸ್ಸಾಕ್ಷಿಗೊಪ್ಪುವಂತೆ ನಡೆವುದೇ ಸತ್ಯ ಕವಿಯವರೇ ಸರಳ ಸುಂದರ ಕವನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಪ್ರೋತ್ಸಾಹಕ ಪ್ರತಿಕ್ರಿಯೆಗೆ ವಂದನೆಗಳು, ಗೋಪಿನಾಥರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.