ಓಹ್ ಇದು ವೀಕೆಂಡ್!!

0

ಮೊನ್ನೆ, ಭಾನುವಾರ ನನ್ನ ಸ್ಕೂಲಿನ ಗೆಳೆಯರನ್ನು ಭೇಟಿ ಮಾಡೋಕ್ಕೆ ಅಂತ ಫೋರಮ್ ಮಾಲ್ ಗೆ ಹೋಗಿದ್ದೆ. ಅಲ್ಲಿಯ ಜನ ಸಾಗರವನ್ನು ಕಂಡು ಬೆರಗಾಗಿ ಹೋದೆ. ನಾನು ಚಿಕ್ಕವನಾಗಿದ್ದಾಗ ಭಾನುವಾರದಂದು ಅಮ್ಮ ಏನಾದ್ರೂ ಸಿಹಿ ಮಾಡೋರು. ಅದೇ ನಮಗೆ ಸ್ಪೆಷಲ್ ಆಗೋದು, ಆದ್ರೆ ಇವತ್ತು ನನಗನ್ನಿಸುತ್ತೆ ಬಹುತೇಕ ಬೆಂಗಳೂರಿಗರು ಶನಿವಾರ ಭಾನುವಾರಗಳನ್ನು ಕೇವಲ ಈ ರೀತಿಯ ಮಾಲ್ ಗಳಲ್ಲಿ ಕಳೆಯುತ್ತಾ, ದರ್ಶಿನಿಗಳಲ್ಲಿ ಊಟ ಮಾಡಿ ರಾತ್ರಿ ನಿದ್ದೆಯ ಸಮಯಕ್ಕೆ ಸರಿಯಾಗಿ ಮನೆಗೆ ತೆರಳುತ್ತಾರೆ. ಇದರಿಂದಲೇ, ಮನೆಯ "ಆ" ವಾತಾವರಣ ಇಂದು ಮಾಯವಾಗುತ್ತಿದೆ. ಮನೆಯ ಎಲ್ಲರೂ ಒಟ್ಟಾಗಿ ಕುಳಿತು ಊಟ ಮಾಡಿ, ಮನೆಯ ಸಮಸ್ಯೆಗಳಿಗೆ ಸಮಾಧಾನ ಹುಡುಕುವ ಆ ಸೊಗಸಾದ ವಾತಾವರಣ ಇಂದು ಮಾಯವಾಗುತ್ತಿದೆ. ಜಾಗತೀಕರಣ ಕೇವಲ ಭಾರತೀಯ ಮಾರುಕಟ್ಟೆಯಲ್ಲದೆ, ಭಾರತೀಯರ ಮನೆ ಮನಗಳ ಮೇಲೆಯೂ ಬಹಳವಾಗಿ ಪರಿಣಾಮ ಬೀರುತ್ತಿದೆ. ಭಾನುವಾರದಂದು ಮನೆಯವರೆಲ್ಲ ಒಟ್ಟಾಗಿ ಕುಳಿತು ಕಷ್ಟ ಸುಖ ಹಂಚಿಕೊಳ್ಳುವ ಆ ಸುಂದರ ಕ್ಷಣಗಳು ನಿಜಕ್ಕೂ ವರ್ಣಿಸಲು ಸಾಧ್ಯವಿಲ್ಲ, ಅದನ್ನು ಅನುಭವಿಸಿಯೇ ಪಡೆಯಬೇಕು. ನಾನು ಈ ವಿಚಾರದಲ್ಲಿ ತುಂಬಾ ಭಾಗ್ಯಶಾಲಿ ಎಂದು ಅಂದುಕೊಳ್ಳುವಷ್ಟರಲ್ಲೇ, ನನ್ನ ಓದಿನ ಸಲುವಾಗಿ, ಕೆಲಸದ ಸಲುವಾಗಿ ಈ ಊರಿಗೆ ಬರುವಂತಾಯ್ತು. ಇಲ್ಲಿಗೆ ಬಂದ ಮೇಲೆ ನಾನೂ ಈ ವೀಕೆಂಡ್ ಬೆಂಗಳೂರಿಗರಲ್ಲಿ ಒಬ್ಬನಾಗಿದ್ದೇನೆ. ಆದರೂ ನನ್ನ ಆ ಹಳೆಯ ಅಸ್ತಿತ್ವವನ್ನು ಕಂಡುಕೊಳ್ಳುವ ಪ್ರಯತ್ನ ಇನ್ನೂ ಮುಂದುವರಿಸಿದ್ದೇನೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಕಾರ್ತಿಕ್
ಇದು ಸರ್ವೇ ಸಾಮಾನ್ಯ ಆಗಿದೆ. ಶನಿವಾರ, ಭಾನುವಾರಗಳಂದು ಯಾರನ್ನೂ ಬೇಟಿಯಾಗಲು ಸಾಧ್ಯವಾಗೋಲ್ಲ.. ಇಲ್ಲೂ appointment ಸಂಸ್ಕೃತಿ ಬಂದಿದೆ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಮಾತು ನಿಜಕ್ಕೂ ಸತ್ಯವಾದದ್ದು. ಇದೇ ಊರಿನಲ್ಲಿದ್ದೂ ಗೆಳೆಯರು ಸಿಗಲಾರದೆ ಪರಿತಪಿಸಿದ ಎಷ್ಟೋ ಉದಾಹರಣೆಗಳಿವೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ನಾಟಕಕ್ಕೆ ಕರೆದರೆ ಎಲ್ರೂ ಒಂದೊಂದು ಕಾರಣ ಹೇಳಿ ತಪ್ಪಿಸ್ಕೊತಾರೆ. ಆದ್ರೆ ಫೋರಮ್ ಮಲ್ಟಿಪ್ಲೆಕ್ಸ್ ಅಂದ್ರೆ ಎಲ್ರೂ ಸಿದ್ಧ.. ನನಗನ್ನಿಸೋದು ಇದು ವಯೋಸಹಜ.. ಈ ವಯಸ್ನಲ್ಲಿ ಅಲ್ಲಿ ಬಣ್ಣ ಬಣ್ಣದ ಚಿಟ್ಟೆಗಳು ನೋಡೊದು, ಶ್ರೀಮಂತಿಕೆಯ ಅಮಲನ್ನು ಸ್ವಲ್ಪ ಸವಿಯೋದು ಚೆನ್ನ ಹಲವರಿಗೆ. ಕಂಪನಿ ಇಲ್ದೇ ಎಲ್ಲೂ ಒಬ್ನೇ ಹೋಗೋ ಅಭ್ಯಾಸ ಇಲ್ದೇ ಇರೋ ನನ್ನಂತೋರು...>
ಎಲ್ಲರೊಳಗೊಂದಾಗು ಮಂಕುತಿಮ್ಮ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ನಿಮ್ಮತರಾನೇ ರೀ...
ಕಂಪನಿ ಇಲ್ಲಾಂದ್ರೆ ಚಹಾ ಕುಡಿಯೋಕೂ ಮನಸ್ಸಾಗಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಊಹೆ ಸರಿಯಾಗಿದೆ. ಆದರೆ ನಾವು ಈ ರೀತಿ ಮಾಡುತ್ತಾ, ಏನೋ ವಿಶೇಷವಾದದನ್ನೇ ಕಳೆದುಕೊಳ್ಳುತ್ತಿದೇವೆ ಎಂದು ಅನಿಸುತ್ತದೆ ಅಲ್ಲವೇ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.