kamala belagur ರವರ ಬ್ಲಾಗ್

ಹಸಿರ ದಾರಿಯಲೀ..

ರಸ್ತೆಗಳೇ ಹೀಗೆ ಯಾರಿಗೂ
ಏನನ್ನೂ ಹೇಳುವುದಿಲ್ಲ.
ಅಳಿಸಿ ಹೋದ ಹೆಜ್ಜೆಯ
ಗುರುತು, ಗತಿಸಿದ ನೆನಪುಗಳ
ಲೆಕ್ಕ ವಿಟ್ಟುಕೊಳ್ಳುವುದಿಲ್ಲ..
ಗುರಿ ಕಾಣುವ ಸಾಮರ್ಥ್ಯ,
ಅಚಲ ವಿಶ್ವಾಸ ನಿನ್ನಲ್ಲಿದ್ದರೆ
ಕತ್ತಲಲ್ಲಿಯೂ ದಾರಿ ಕಾಣಬಲ್ಲೆ..

ಹೆಜ್ಜೆ ಗುರುತಿಲ್ಲದ ಹಾದಿಯಲ್ಲಿ
ಕನಸಿನ ದೀವಿಗೆ ಹೊತ್ತು
ಕವಲುಗಳಿಲ್ಲದ ಹಾದಿಯಲ್ಲಿ
ನಿನ್ನ ಮುಗಿಯದ ಪಯಣ.
ಮರುಗದಿರು ಸಾಗುವ ಹಾದಿ
ದುರ್ಗಮವೆಂದು, ಹಿಮ್ಮೆಟ್ಟದಿರು
ಸೂರ್ಯ ದಹಿಸಿದಾಗಲೇ
ತಣ್ಣನೆಯ ಚಂದ್ರಮನ ಅನುಭಾವ.
ಶ್ರಮದ ಫಲದ ಸಿಹಿಯ
ಸವಿಯು ಅಮೂಲ್ಯ ,ಅನನ್ಯ..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ಮೋಹಕ ತಿರುವು..

ಪಾರ್ವತಿ ಒಲೆಯ ಮುಂದೆ ಕುಳಿತು ರೊಟ್ಟಿ ಮಾಡ್ತಿದ್ದಾಳೆ. ಯಾಂತ್ರಿಕವಾಗಿ ಕೈ ಕೆಲಸಮಾಡುತ್ತಿದ್ದರೂ ಮನಸ್ಸು ಗಾಢವಾದ ಯೋಚನೆಯಲ್ಲಿ ಸಿಲುಕಿದೆ. ಕಣ್ಣು ಗಳು ಉರಿಯನ್ನೇ ದಿಟ್ಟಿಸಿ ನೋಡುತ್ತಿವೆ. ಮನಸ್ಸು ಮಗನ ಬಗ್ಗೆ ಯೋಚಿಸುತ್ತಾ ಕೊರಗುತ್ತಿದೆ. ಮಗನ ಸಂಸಾರವನ್ನು ನೋಡುತ್ತಾ ಕಣ್ತುಂಬಿಸಿಕೊಳ್ಳಬೇಕೆಂಬ ಆಸೆ ಆಸೆಯಾಗಿಯೇ ಉಳಿದುಬಿಟ್ಟಿದೆ. ಪಾರ್ವತಿ ವಿಧವೆ. ಮಗ ಸೋಮು ಪ್ರತಿಭಾವಂತ. ಚಿಕ್ಕಂದಿನಲ್ಲಿಯೇ ಅಪ್ಪನನ್ನು ಕಳೆದುಕೊಂಡು ಬೆಳೆದ ಅವನಿಗೆ ಅಮ್ಮನೇ ಸರ್ವಸ್ವ. ಅಪ್ಪನ ಕೊನೆಯ ಆಸೆಯಂತೆ ಅವರ ಸ್ನೇಹಿತರ ಮಗಳೊಂದಿಗೆ ಅವನ ಬಾಲ್ಯ ವಿವಾಹವಾಗಿರುತ್ತದೆ. ತಂದೆಯ ಮರಣಾನಂತರ ಎರಡೂ ಕುಟುಂಬಗಳು ಕಾರಣಾಂತರಗಳಿಂದ ದೂರಾಗಿರುತ್ತವೆ. ಹತ್ತನೆಯ ತರಗತಿಗೇ ತನ್ನ ವಿದ್ಯಾಭ್ಯಾಸ ಕೊನೆಗೊಳಿಸಿ ಮಗ ಕೆಲಸಕ್ಕೆ ಸೇರಿದ್ದಾನೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಮುಗಿಯದಿರಲೀ ಜಲದೊರತೆಯ ಆಯುಷ್ಯವು !..

ಸಭ್ಯ ಸಂಸ್ಕೃತಿಯ
ಹೆಗ್ಗುರುತು ನೀರು;
ಬಾಯಾರಿದವರಿಗೆ
ಅಮೃತ ಸ್ವರೂಪಿ ನೀರು;
ಪ್ರಕೃತಿಯ ವರದಾನ
ನೀರು; ಜೀವ ಜಂತುಗಳ
ಜೀವದಾಯಿನಿ ನೀರು...

ಕಣ್ಣು ಹಾಯಿಸಿದೆಡೆ
ಹಸಿರು; ದಟ್ಟ ಕಾಡು
ಹರಿವ ನೀರಿನ ಜುಳು ಜುಳು
ನಿನಾದ; ಪಕ್ಷಿ ಸಂಕುಲದ
ಚಿಲಿಪಿಲಿ ಗಾನ ಎಲ್ಲವೂ
ಕಾಣೆಯಾಗಿಹುದಿಲ್ಲಿ....

ಮಾನವ ನಿರ್ಮಿತ
ಗಗನ ಚುಂಬಿ ಕಟ್ಟಡಗಳು,
ಹೂಳು ತುಂಬಿದ ಕೆರೆಕಟ್ಟೆಗಳು,
ಗುಳೆ ಹೋದ ಪಕ್ಷಿ ಸಂಕುಲ
ಮಾಯವಾದ ಮಳೆ
ಬಟ್ಟ ಬಯಲಾದ ಕಾಡುಮೇಡು
ಬರಿದಾದ ಭೂದೇವಿಯ ಒಡಲು...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

'ಈ ಹೊತ್ತಿನ ತಲ್ಲಣ'

ಮನದಲ್ಲಿ ವಿಚಾರ
ಮಂಥನ ನಡೆದಿರಲು
ಮೂಡಿದ ಜಗದ
ತಲ್ಲಣಗಳು,ಸವಾಲುಗಳು
ಸಾವಿರಾರು...

ಸಮಾಜದಲ್ಲಿ ಹೆಚ್ಚುತ್ತಿರೋ
ಭ್ರಷ್ಠಾಚಾರದ ಬಗ್ಗೆ
ಬರೆಯಲೇ, ಅಹಿಂಸೆಯ
ನಾಡು ಆತಂಕವಾದದ ಸುಳಿಗೆ
ಸಿಕ್ಕು ಭಯದ ನೆರಳಲ್ಲಿ
ಬದುಕು ದೂಡುತ್ತಿರುವ
ಜನರ ಬಗ್ಗೆ ಬರೆಯಲೇ,
ದಿನೇ ದಿನೇ ಹೆಚ್ಚುತ್ತಿರೋ
ಪ್ರದೂಷಣೆ,ದಿನೇ ದಿನೇ
ಕುಸೀತಿರೋ ಮಾನವ
ಮೌಲ್ಯಗಳ ಬಗ್ಗೆ ಬರೆಯಲೇ...

ಬದುಕ ಯಾಂತ್ರಿಕತೆ,
ಆತಂಕಕಾರೀ ಆಧುನಿಕ
ವಿಚಾರ ಧಾರೆಯ ನೆರಳಲ್ಲಿ
ಮಾಯವಾದ ಬಾಲ್ಯದ
ಮುಗ್ಧತೆ, ಕುಸಿದ ಸಾಮಾಜಿಕ
ಬದ್ಧತೆ, ಕಳಕಳಿ,ಹೆಚ್ಚುತ್ತಿರುವ
ಪಾಶವೀ ಪ್ರವೃತ್ತಿ, ಇದುವೇ
ಬದಲಾದ ಕೌಟುಂಬಿಕ ಮುಖ ಚಿತ್ರಣ....

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.6 (5 votes)
To prevent automated spam submissions leave this field empty.

ಕಡಲೂ ನಿನ್ನದೆ ಒಡಲ ಕಿಚ್ಚೂ ನಿನ್ನದೆ ಮುಳುಗದಿರಲಿ....

ಮನದ ತುಂಬ
ಕತ್ತಲು ಮುಸುಕಿದೆ
ಯಾವುದೋ ಮಾಯಾ
ರಾಗದ ಜಾಲದಿ ಬಂದಿತ
ಏಕಾಕಿ ಮನ ಹೊರಟಿದೆ
ಸಾಗರದಲೆಗಳ
ನಡುವೆ ನಾವಿಕನಿಲ್ಲದ
ನಾವೆಯಲ್ಲಿ ದೂರ
ದಡದ ಗೂಡನರಸಿ...

ಸುತ್ತಾ ನೀರು ಮೇಲೆ
ನೀಲ ನಭದ ವಿಸ್ತಾರ.
ಬೀಸುವ ಗಾಳಿಗೆ ದೀಪದ
ಕೆನ್ನಾಲಿಗೆ ನಾವೆಯ
ಆವರಿಸಿ ಏಳುತ್ತಾ ಬೀಳುತ್ತಾ
ಸಾಗುತ್ತಿರಲು ದೂರದಿಂದ
ಅಲೆಯಲೆಯಾಗಿ ತೇಲಿ
ಬರುತಲಿದೆ ಇಂಪಾದ ಗಾನ...

ಇದೇನು ಕನಸೋ ನನಸೋ
ಅರಿಯದಾಗಿದೆ ಮನ...
ನಾವಿಕನಿಲ್ಲದ ನಾವೆ
ಮುಳುಗುವುದು ಖಚಿತ
ಸಾಗುವಷ್ಟು ಸಮಯ ಸಾಗಲಿ
ಉಳಿಸುವ ಅಳಿಸುವ ಜವಾಬ್ದಾರಿ
ಕಡಲಿನದ್ದೇ...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.

Pages

Subscribe to RSS - kamala belagur ರವರ ಬ್ಲಾಗ್