ಬಾಳು ಒಂದು ಬೆಳಕಿನಾಟ - ರಾಜು ಅನಂತಸ್ವಾಮಿ

0

ಬಾಳು ಒಂದು ಬೆಳಕಿನಾಟ, ಆಸೆಯೊಂದು ಕತ್ತಲಾಟ
ಸಾಗಿದೆ ಇದರೊಡನೆ, ಬೆಳಕು ಕತ್ತಲೋಟ

ಹಕ್ಕಿ ರೆಕ್ಕೆ ಬಿಚ್ಚಿ ತಾನು ... ಹರುಷದಲ್ಲಿ ಹಾರುವಂತೆ
ಮನಸು ತನ್ನ ಆಸೆ ಹೊತ್ತು , ಸಾಗುತಿಹುದು ಎತ್ತರಕೆ
ಎಲ್ಲೆ ಇಲ್ಲ ಬಾನಿಗಲ್ಲಿ, ಹಕ್ಕಿಗಿಲ್ಲ ನೆಲೆಯು ಅಲ್ಲಿ ..
ಕೊನೆಯೇ ಇಲ್ಲ ಆಸೆಗೆಂದು, ತಿಳಿಯದೇಕೆ ಮನಸಿಗಿಂದು ...

ನದಿಯು ಕಡಲ ಸೇರಲೆಂದು, ತವಕದಲ್ಲಿ ಓಡುವಂತೆ..
ಓಡುತಿಹುದು ಮನಸು ಏಕೆ, ಆಸೆ ಎಂಬ ಕಡಲಿಗಿಂದು..
ಯಾವ ನದಿಯು ಆದರೇನು, ಕಡಲಿನೊಳಗೆ ಸಿಗುವುದೇನು..
ಆಸೆ ತನ್ನ ಮಿತಿಯು ಮೀರಿ, ನೂಕುತಿಹುದು ಆಳದಲ್ಲಿ...

ಬಾನಿಗಿಲ್ಲ ಎಲ್ಲೆ ಅಲ್ಲಿ, ಆಸೆಗಿಲ್ಲ ಕೊನೆಯು ಇಲ್ಲಿ
ಏಕೆ ಕನಸು ಕಾಣುತಿಹುದು, ಮನಸು ತಾನು ನೋವಲಿಂದು
ನಿಜವನರಿತು ಸಾಗುತಿರಲು, ಹರುಷವಿಂದು ಬಾಳಿನಲ್ಲಿ
ತಾಪವಿಲ್ಲ ಸೆಳೆಸವಿಲ್ಲ, ಆಸೆತೋರೆದ ಮನಸಲೆಂದು

ಬಾಳು ಒಂದು ಬೆಳಕಿನಾಟ, ಆಸೆಯೊಂದು ಕತ್ತಲಾಟ
ಸಾಗಿದೆ ಇದರೊಡನೆ, ಬೆಳಕು ಕತ್ತಲೋಟ

-- ರಾಗ ಸಂಯೋಜನೆ ಮತ್ತು ಗಾಯನ ರಾಜು ಅನಂತಸ್ವಾಮಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಜಗದೀಶ್, ಈ ಹಾಡನ್ನು ಮೊದಲು ಬಾರಿ ಇವತ್ತು ಕೇಳಿದೆ. ತುಂಬ ಚೆನ್ನಾಗಿದೆ. ಗೂಗಲ್ಲಿನಲ್ಲಿ ಸಾಹಿತ್ಯ ಹುಡುಕುವಾಗ ಇದೇ ಪುಟ ಸಿಕ್ಕಿತು. ಸಾಹಿತ್ಯ ಯಾರದ್ದು ಗೊತ್ತ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.