ನನ್ನ ಪ್ರೀತಿಯ ಚಿತ್ರಾನ್ನ

0

ಪದಾರ್ಥಗಳು:
೧ ಲೋಟ ಅಕ್ಕಿಗೆ ೨ ಲೋಟ ನೀರನ್ನು ಕುಕ್ಕರಲ್ಲಿ ಹಾಕಿ ಒಲೆಯ ಮೇಲೆ ಬೇಯಲು ಇಡಿ.
ಎರಡು ವಿಷಲ್ ಗೆ ಇಳಿಸಿಬಿಡಿ
ಅನ್ನ ಬೇಯಲು ೧೦ ನಿಮಿಷಗಳ ಕಾಲಾವಕಾಶ ಬೇಕು
ಆ ಸಮಯದಲ್ಲಿ,
ಈರುಳ್ಳಿ - ೧ ,
ಮೆಣಸಿನ ಕಾಯಿ (ಕಾರವಿಲ್ಲದಿದ್ದಲ್ಲಿ) - ೪
ಬೆಳ್ಳುಳ್ಳಿ - ನಾಲ್ಕು ಎಸಳು
ಕಡಲೆ ಬೇಳೆ - ೧ ಚಮಚ
ಶೇಂಗಾ ಬೀಜ - ಒಂದು ಸಣ್ಣ ಹಿಡಿ
ಸಾಸಿವೆ - ೧/೨ ಚಮಚ
ಜೀರಿಗೆ - ೧/೨ ಚಮಚ
ಹಳದಿ ಪುಡಿ - ೧/೨ ಚಮಚ
ಕೊತ್ತಂಬರಿ ಸೊಪ್ಪು - ೧/೪ ಕಟ್ಟು
ಕರಿ ಬೇವು - 5 - 6 ಎಲೆ
ನಿಂಬೆ ಹಣ್ಣು - ೧
ಉಪ್ಪು - ೨ ಚಮಚ
ಒಳ್ಳೆಣ್ಣೆ - ೪ ಚಮಚ

ವಿಧಾನ:
ಮೊದಲಿಗೆ ಇ ಮೇಲಿನ ತರಕಾರಿಗಳನ್ನ ಹೆಚ್ಚಿ, ಇನ್ನೊದು ಒಲೆಯಲ್ಲಿ ಒಂದು ತಾವಾ ದಲ್ಲಿ ೪ ಚಮಚ ಎಣ್ಣೆಯನ್ನು ಹಾಕಿ, ೧ ನಿಮಿಷದ ನಂತರ ಜೀರಿಗೆ, ಸಾಸಿವೆ, ಶೇಂಗ, ಕಡಲೆ ಬೀಜವನ್ನು ಹಾಕಿ.. ಶೇಂಗ ಬೀಜ ಮತ್ತು ಕಡಲೆ ಬೀಜ ಸ್ವಲ್ಪ ಕೆಂಪಾಗುವವರೆಗೂ ಅದನ್ನ ಹುರಿಯಬೇಕು.. ಆಮೇಲೆ ಬೆಳ್ಳುಳ್ಳಿಯ ಎಸುಳನ್ನು
ಹಾಗು ಮೆಣಸಿನ ಕಾಯಿ ಮತ್ತು ಈರುಳ್ಳಿಯನ್ನು ಹಾಕಿ ಒಂದು ೫ ನಿಮಿಷಗಳ ಕಾಲ ಬೇಯಿಸ ಬೇಕು...
ಹಾಗೆ ೨ ಚಮಚ ಉಪ್ಪನ್ನು ಮತ್ತು ೧/೨ ಚಮಚ ಹಳದಿ ಪುಡಿಯನ್ನು ಹಾಕಿ ಮಿಕ್ಸ್ ಮಾಡಬೇಕು..
ಇದಾದ ನಂತರ ಕೊತ್ತಂಬರಿ ಸೊಪ್ಪನ್ನು ಹಾಕಿ ಒಲೆಯನ್ನು ಬಂದ್ ಮಾಡಿ ಒಂದು ೫ ನಿಮಿಷಗಳ ಕಾಲ ಆರಲು ಬಿಡಿ.. ಈಗ ಒಗ್ಗರಣೆ ರೆಡಿ......
ಅನ್ನವನ್ನು ಸ್ವಲ್ಪ ಆರಲು ಬಿಟ್ಟು, ಸ್ವಲ್ಪ ಆರಿದ ನಂಥರ ಅದಕ್ಕೆ ನಿಂಬೆ ಹುಳಿಯನ್ನು ಹಿಂಡಿ, ರೆಡಿ ಮಾಡಿದ ಒಗ್ಗರಣೆಯನ್ನು ಅನ್ನಕ್ಕೆ ಕಲಸಿ ಬಿಟ್ಟರೆ ರುಚಿಯಾದ ಚಿತ್ರಾನ್ನ ರೆಡಿ....
ಇವತ್ತೇ ಪ್ರಯತ್ನಿಸಿ, ಸಹಾಯ ಬೇಕಿದ್ದಲ್ಲಿ ನನ್ನ ದೂರವಾಣಿ ಸಂಖೆ ೯೮೪೫೦ ೨೯೨೦೮ ಗೆ ಕರೆ ಮಾಡಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

>>ಅಣ್ಣ ಬೇಯಲು
ಪಾಪ ನಿಮ್ಮಣ್ಣ :D

>>ಎಣ್ಣೆ - ೪ ಚಮಚ
ಎಳ್ಳೆಣ್ಣೆ, ಒಳ್ಳೆಣ್ಣೆ, ತೆಂಗಿನೆಣ್ಣೆ, ಹರಳೆಣ್ಣೆ ಎಲ್ಲಾ ಒಂದೊಂದ್ ಚಮಚಾನ?

>>ಬೇವಿನ ಸೊಪ್ಪು - ೧೦ ಎಲೆ
ಬೇವಿನ ಸೊಪ್ಪು? ಚಿತ್ರಾನ್ನಕ್ಕೆ?

[quote]ಮೊದಲಿಗೆ ಎ ಮೇಲಿನ ಎಲ್ಲಾ ಥರಕರಿಗಲ್ಲು ಹೆಚ್ಚಿ, ಇನ್ನೊದು ಒಲೆಯಲ್ಲಿ ಒಂದು ತಾವಾ ದಲ್ಲಿ ೪ ಚಮಚ ಎಣ್ಣೆಯನ್ನು ಹಾಕಿ, ೧ ನಿಮಿಷದ ನಂತರ ಜೀರಿಗೆ, ಸಾಸಿವೆ, ಶೇಂಗ, ಕಡಲೆ ಬೀಜವನ್ನು ಹಾಕಿ.. ಸ್ವಲ್ಪ ಕೆಂಪಾಗುವವರೆಗೂ ಅದನ್ನ ಹುರಿಯಬೇಕು.. ಆಮೇಲೆ ಬೆಳ್ಳುಳ್ಳಿಯನ್ನು ಹಾಗು ಮೆಣಸಿನ ಕಾಯಿ ಮತ್ತು ಈರುಳ್ಳಿಯನ್ನು ಹಾಗು ಮೆಣಸಿನಕಾಯನ್ನು ಹಾಕಿ ಒಂದು ೫ ನಿಮಿಷಗಳ ಕಾಲ ಬೇಯಿಸ ಬೇಕು...[/quote]
:D

[ತಮಾಷೆಗೆ]

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿತ್ರಾನ್ನ ಮಾಡೊ ನೆಪದಲ್ಲಿ ಕನ್ನಡವನ್ನ ಚಿಂದಿ ಚಿತ್ರಾನ್ನ ಮಾಡಿ ಹಾಕಿದಾರೆ ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು

ಈಗ ಸರಿಪಡಿಸಿದ್ದೇನೆ
ನನ್ನ ತಪ್ಪಿಗೆ ಕ್ಷಮೆ ಇರಲಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ನನ್ನ ತಪ್ಪಿಗೆ ಕ್ಷಮೆ ಇರಲಿ
ನೀವು ಸರಿ ಮಾಡಿದ್ರಲ್ಲ ಸಾಕು ಬಿಡಿ, ಕ್ಷಮೆ ಎಲ್ಲಾ ಎಂತದ್ದು?
ಅಂದಹಾಗೇ ಚಿತ್ರಾನ್ನ ತಮ್ಮ ಆಲ್ ಟೈಮ್ ಫೇವರೈಟ್ ಅನ್ಸುತ್ತೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಚಿತ್ರಾನ್ನ ನನ್ನ ಪ್ರಿಯವಾದ ತಿಂಡಿ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿತ್ರಾನ್ನ.... ಚಿತ್ರಾನ್ನ .. ಚಿತ್ರ ,ಚಿತ್ರ ಚಿತ್ರಾನ್ನ...ಚಿತ್ರಾನ್ನ!!!!!!!!!!!!!!!!!!!!!!. ;)
ಚಿತ್ರಾನ್ನ ನನಗೆ ಪ್ರಿಯ ಅಲ್ವೇ ಅಲ್ಲಾ... ಆದ್ರೂ ನಾನು ವಾರದಲ್ಲಿ ಮೂರು ದಿನ ಅದನ್ನೇ ಮಾಡಿ ತಿಂತೀನಿ... ಅದನ್ನ ಬಿಟ್ರೆ ಅಶ್ಟು ಸುಲುಭವಾಗಿ ಬೇಗ ಮಾಡ್ಕೊಳ್ಲೋ ತಿಂಡಿ ಮಾಡೋದು ಗೊತ್ತಿಲ್ಲಾ.. :(

ಸಂಪದಕ್ಕೆ ಸ್ವಾಗತ. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈಗ ಸರಿಪಡಿಸಿದ್ದೇನೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

sar,
ನೀವು ಬೇವಿನ ಎಲೆ ಎಂದದ್ದು ಕರಿ ಬೇವಿಗೆ ಅನಿಸುತ್ತೆ. ಇನ್ನು ಕಹಿ ಬೇವು ಹಾಕಿ ಚಿತ್ರಾನ್ನ ತಿಂದರೆ (figure rice(?!)) ದೇವರೇ ಗತಿ.

ಸಾತ್ವಿಕ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜಗದೀಶ

>ಅಣ್ಣ ಬೇಯಲು ೧೦ ನಿಮಿಷಗಳ ಕಾಲಾವಕಾಶ ಬೇಕು
ಅಣ್ಣ ಬೇಯಲು :D

>ಮೆಣಸಿನ ಕಾಯಿ (ಕಾರವಿಲ್ಲದಿದ್ದಲ್ಲಿ) - ೪
ಕಾರ ವಿದ್ದರೆ ?

>ಬೆಳ್ಳುಳ್ಳಿ - ೪
ನಾಲ್ಕು ಬೆಳ್ಳುಳ್ಳಿ? ಅಂದ್ರೆ ಇಡೀ ಊರಿಗೆ ಊಟಕ್ಕೆ ತಯಾರು ಮಾಡ್ತಾ ಇದೀರಿ ಅಂತಾಯ್ತು!
ನಾಲ್ಕು ಎಸಳು / ಹೋಳು ಅಂದ್ರೆ ಸರಿಯೇನೋ?

>ಶೇಂಗಾ ಬೀಜ - ೨ ಚಮಚ
ಒಂದು ಸಣ್ಣ ಹಿಡಿ ಅಂದ್ರೆ ಸಾಕಲ್ವ?

>ಬೇವಿನ ಸೊಪ್ಪು - ೧೦ ಎಲೆ
ನಮಸ್ಕಾರ :P

>ಮೊದಲಿಗೆ ಎ ಮೇಲಿನ ಎಲ್ಲಾ ಥರಕರಿಗಲ್ಲು ಹೆಚ್ಚಿ, ಇನ್ನೊದು ಒಲೆಯಲ್ಲಿ ಒಂದು ತಾವಾ ದಲ್ಲಿ
ಅಂದ್ರೆ ಒಂದು ಒಲೆಯಲ್ಲಿ ತರಕಾರಿಗಳನ್ನು ಹೆಚ್ಚಬೇಕು?! ;)

>ಸ್ವಲ್ಪ ಕೆಂಪಾಗುವವರೆಗೂ ಅದನ್ನ ಹುರಿಯಬೇಕು.
ಏನು ಕೆಂಪಾಗುವವರೆಗೆ?

ನಿಮ್ಮದು ಜಕಾಸ್ ಚಿಂದಿ ಚಿತಾನ್ನ! :)

ಮುಂದಿನ ಅಡುಗೆ ಯಾವುದು?. ( ಅರೋಗ್ಯ ವಿಮೆ ಯಿರುವವರು ಮಾತ್ರ ಪ್ರಯತ್ನಿಸಿ ಅಂತ ಒಂದು ಕಡೆ * ಹಾಕಿ ಬರೀರಿ.)

.............................

ಮೇಲಿನದ್ದೆಲ್ಲ ಸೀರಿಯಸ್ಸಾಗಿ ತಗೋಬೇಡಿ. ಇದು ನಿಮ್ಮ ಮೊದಲ ಕನ್ನಡದಲ್ಲಿನ ಬ್ಲಾಗಾದ್ದ್ರಿಂದ , ಇದು ಒಂದು ಉತ್ತಮ ಪ್ರಯತ್ನ ವೆಂದೆ ಹೇಳುತ್ತೇನೆ. ಮುಂದುವರೆಸಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಇದು ನನ್ನ ಮೊದಲ ಪ್ರಯತ್ನ..
ಈಗ ನನಗೆ ಸಾದ್ಯವಾದಷ್ಟು ಸರಿ ಪಡಿಸಿದ್ದೇನೆ.. ತಪ್ಪಿದ್ದಲ್ಲಿ ತಿಳಿಸಿ...
ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜಗದೀಶ್,
ಸಂಪದಕ್ಕೆ ಸ್ವಾಗತ, ಮೊದಲ ಬರಹಕ್ಕೆ ಅಭಿನಂದನೆ. ಚಿತ್ರಾನ್ನ ಹಾಲು/ಹಾಳು ಮಾಡಬೇಡಿ.. ಹೀಗೆ ಬರೀತಾ ಇರಿ, ತಪ್ಪು ಕಮ್ಮಿ ಆಗುತ್ತೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜಗದೀಶ್

ಸಂಪದಕ್ಕೆ ಸ್ವಾಗತ. ಏನು ಬರ್ ಬರ್ತಾನೆ ಚಿತ್ರಾನ್ನ ತಂದಿದೀರಿ. ಇನ್ನೂ ಮುಂದೆ ಏನೇನೆಲ್ಲಾ ತರ್ತೀರೋ ? :-)

ಶ್ಯಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ಯಾಮಲಾರವರೆ...
ಮೊದಲಿಗೆ ನನ್ನ ಧನ್ಯವಾದಗಳು..
ನನಗೆ ಮಾಡಲು ಬರುವ ಅಡುಗೆಗಳು
ಚಿತ್ರಾನ್ನ
ಮೊಸರನ್ನ
ಪುಲಾವ್
ಅವಲಕ್ಕಿ
ತಿಳಿ ಸಾರು
ಚಪಾತಿ - ಟೊಮೇಟೊ ಗೊಜ್ಜು
ಸ್ವಲ್ಪ ಮಟ್ಟಿಗೆ ಬೇಳೆ ಸಾರು
:-) :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜಗದೀಶ್

ಚಿತ್ರಾನ್ನ ಚಿತ್ರಾನ್ನ ಹಾಡಿನ ಪ್ರೇರಣೇನಾ ;)

ಮನೇಲೂ ಚಿತ್ರಾನ್ನ ತಿಂದು ಸಾಕಾಗಿದೆ, ಇಲ್ಲೂ ಅದೇ ಹೇಳಿಕೊಡ್ತಿದ್ದಿರಾ

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜಗದೀಶ್ ಅವರೇ.....
ಚಿತ್ರಾನ್ನ ಮಾಡುವ ವಿಧಾನ ಚೆನ್ನಾಗಿದೆ. ನಾನು ಇದುವರೆಗೆ ಅನೇಕ ಬಾರಿ ಚಿತ್ರಾನ್ನ ತಯಾರಿಸಿದ್ದರೂ ಯಾವತ್ತೂ ಎಷ್ಟು ನಿಮಿಷ ಹಿಡಿಯುತ್ತೆ ಅಂತ ಲೆಕ್ಕ ಹಾಕಿರಲಿಲ್ಲ. ನೀವು ಎಲ್ಲದಕ್ಕೂ ಇಷ್ಟಿಷ್ಟು ನಿಮಿಷ ಅಂತ ಹೇಳಿದ್ದೀರ....ಕಲಿಯುವವರಿಗೆ ಸಹಾಯ ಆಗುತ್ತೆ......

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಧನ್ಯವಾದಗಳು....
ಇದು ನನ್ನ ಪ್ರೀತಿಯ ತಿನಿಸು... ನನ್ನ ಕೈಯಾರ ಮಾಡಿರುವ ಚಿತ್ರಾನ್ನ ತಿನ್ನಲು ನನಗೆ ಬಾರಿ ಇಷ್ಟ... ನಿಮಗೆ ಬೇಕಾದಲ್ಲಿ ಹೇಳಿ.. ನಿಮಗೆ ಪಾರ್ಸೆಲ್ ಕಲಿಹಿಸುವ ವ್ಯವಸ್ಥೆ ಮಾಡ್ತೀನಿ.. :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಜಗದೀಶ್....
ನಂಗೂ ನನ್ನ ಕೈಯಡುಗೆ ತುಂಬಾ ಇಷ್ಟ... :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಏನೇನು ಅಡುಗೆ ಮಾಡುತೀರ...?!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಾರ್ ನಾನಾ?
ಅನ್ನ, ಬೇಳೆ ಹುಳಿ, ಮುದ್ದುಳಿ, ಮಜ್ಜಿಗೆ ಹುಳಿ, ಕಾಯ್ಹುಳಿ, ಬೋಳ್ ಹುಳಿ, ಪಪ್ಪು, ತಿಳಿ ಸಾರು, ಮಾವಿನ ಕಾಯಿ ಸಾರು, ಚಪ್ಪೆ ಸಾರು, ಚಟ್ನಿ, ಗೊಜ್ಜು, ಪಲ್ಯ
ಅಕ್ಕಿ ರೊಟ್ಟಿ, ರಾಗಿ ರೊಟ್ಟಿ, ಚಪಾತಿ, ದೋಸೆ, ಚಿತ್ರಾನ್ನ, ಮೊಸ್ರನ್ನ, ವಾಂಗೀ ಬಾತ್, ಹುಗ್ಗಿ, ಪಲಾವ್, ಬಿ.ಬೆ.ಬಾ, ಚಟ್ಟಿ
ಗೋಳಿ ಬಜೆ, ಬನ್ಸು, ಬಜ್ಜಿ
ಕ್ಯಾರೆಟ್ ಹಲ್ವ, ಪಾಯಸ...

ಇನ್ನು ತುಂಬಾ ಇದೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೀ ಪಾಲ ಹೋಟ್ಲು ಎನಾದರು ಹಿಟ್ಕಂಡಿದೀರ.....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೀ "ಹಿಟ್ಕಂಡಿದೀರ.....", ಇಟ್ಕೊಂಡಿದೀರ ಅದು.. ಯಾಕ್ರೀ ಮನೇಲಿ ಮಾಡ್ಕೊಂಡ್ ತಿನ್ಬಾರ್ದಾ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಲ ಹೋಟ್ಲು ಅಂದ್ರೆ..?!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೋಟೆಲ್ = ಹೋಟ್ಲು
ಬಟ್ಟಲು = ಬಟ್ಲು
ಕೂತುಕೋ = ಕುರ್ಲಾ
................................ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

೧ ಪ್ಲೇಟ್ ಅಕ್ಕಿ ರೊಟ್ಟಿ , ೧ ಪ್ಲೇಟ್ ವಾಂಗೀ ಬಾತ್ , ೧ ಪ್ಲೇಟ್ ಕ್ಯಾರೆಟ್ ಹಲ್ವ

ಸಾಕು ನಂಗೆ ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜವಾಗಲು ನಿಮ್ಮ ಮನೆ ಒಡತಿ ಪುಣ್ಯ ಮಾಡಿದಾರೆ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಕ್ಕತ್.. :)
ಚೆನ್ನಾಗಿದೆ..ಅರ್ರಂಗೇಟಂ.. (..ಪದ ಸರಿ ಇದೆ ಅನ್ಕೋತೀನಿ) :)
ಚಿತ್ರಾನ್ನದ ಜೊತೆ ಬಂದ.. ಜಗದೀಶರಿಗೆ ಸುಸ್ವಾಗತ..ಸಂಪದ ಬರಹಕ್ಕೆ..
ನನಗೂ ಫೇವರೆಟ್.. ಈ ಚಿತ್ರಾನ್ನ..
ಅದರಲ್ಲಿ.. ಇನ್ನೇನೋ ಬಗೆಗಳಿವೆಯಲ್ಲಾ? ಮಾವಿನ ಕಾಯಿ ತುರಿ ಹಾಕಿದ್ದು..
ಮಮ್.. ಜ್ಞಾಪಕ ಬರ್ತಿಲ್ವೆ..
ಸಂಪದಿಗರೇ.. ಸಹಾಯ ಮಾಡಿ.. ಇನ್ಯಾರಿಗಾದರೂ ಇನ್ಯಾವುದಾದರೂ ಜ್ಞಾಪಕ ಬರ್ತಿದೆಯೇ?

ನಿಮ್ಮೊಲವಿನ,
ಸತ್ಯ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಚರಣ್ ರವರಿಗೆ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮ್ಮ ಮನೆಯಲ್ಲಿ ಅಮ್ಮ ಮಾಡೋದು ನಿಂಬೆಹಣ್ಣು ಚಿತ್ರಾನ್ನ (ಇದರಲಿ ೨ ಥರದ್ದು- ಈರುಳ್ಳಿ ಹಾಕಿರೋದು ಒಂದು... ಹಾಕದೇ ಇರೋದು ಇನ್ನೊಂದು) , ಎಳ್ಳೀಕಾಯಿ ಚಿತ್ರಾನ್ನ , ಹುಣಸೆ ಹಣ್ಣಿನ ಚಿತ್ರಾನ್ನ , ಮಾವಿನಕಾಯಿ ಚಿತ್ರಾನ್ನ

ನಾನು ಮಾಡಿರೋದು ಮೊದಲೆರಡನ್ನು ಮಾತ್ರ.. ಉಳಿದವನ್ನು ಯಾವತ್ತೂ ಮಾಡೋಕೆ ಪ್ರಯತ್ನ ಪಟ್ಟಿಲ್ಲ... ಮಾಡಿದ್ರೂ ಕೆಟ್ಟದಾಗಿರೊಲ್ಲ ಅನ್ನೋ ನಂಬಿಕೆ ಇದೆ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿತ್ರಾನ್ನಕ್ಕೆ ಟೊಮೇಟೊ ಹಾಕೊದಿಲ್ವೆನ್ರಿ ಜಗದೀಶ್ ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾಕದೇ ಕೂಡಾ ಚಿತ್ರಾನ್ನ ಮಾಡ್ತಾರೆ....ನಮ್ಮ ಮನೆಯಲ್ಲಿ ಹಾಕೊಲ್ಲ.... ಒಮ್ಮೆ ಅಮ್ಮ ಊರಿಗೆ ಹೋಗಿದ್ದಾಗ ನಮ್ಮ ಚಿಕ್ಕಪ್ಪ ಚಿತ್ರಾನ್ನ ಮಾಡ್ತೀನಿ ಅಂದ್ರು... ನಾವು ಬೇಡ ಅಂದ್ವಿ... ಸರಿ ಟೊಮೆಟೋ ಬಾತ್ ಮಾಡ್ತೀನಿ ಅಂತ ಹೇಳಿ ಚಿತ್ರಾನ್ನಕ್ಕೆ ಟೊಮೆಟೋ ಹಾಕಿ ಕೊಟ್ಟಿದ್ರು... ಅದು ಒಮ್ಮೆ ಮಾತ್ರ ನಾನು ಟೋಮೆಟೋ ಹಾಕಿರೋ ಚಿತ್ರಾನ್ನ ತಿಂದಿದ್ದು....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಸರಿ ಟೊಮೆಟೋ ಬಾತ್ ಮಾಡ್ತೀನಿ ಅಂತ ಹೇಳಿ ಚಿತ್ರಾನ್ನಕ್ಕೆ ಟೊಮೆಟೋ ಹಾಕಿ ಕೊಟ್ಟಿದ್ರು
ಹಿ ಹಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

[quote]ಟೊಮೆಟೋ ಬಾತ್ ಮಾಡ್ತೀನಿ ಅಂತ ಹೇಳಿ ಚಿತ್ರಾನ್ನಕ್ಕೆ ಟೊಮೆಟೋ ಹಾಕಿ ಕೊಟ್ಟಿದ್ರು[/quote]

:D :D

ಪಾಪ , ಅವರು ಅಷ್ಟು ಪ್ರೀತಿಯಿಂದ ಟೊಮೇಟೊ ಬಾತ್ ಮಾಡಿಕೊಟ್ರೆ ಹಿಂಗಂತಿರಲ್ರಿ ಇಂದುಶ್ರೀ ;)

ನಾನಂತೂ ಟೊಮೇಟೊ ಇಲ್ಲದೆ ಚಿತ್ರಾನ್ನ ಮಾಡೋದೇ ಇಲ್ಲ, ಅದರ ಬಗ್ಗೆ ಹಿಂದೆ ಒಮ್ಮೆ ಬರೆದಿದ್ದೆ ನೋಡಿ
http://sampada.net/blog/rakesh-shetty/03/11/2008/13247

ರಾಕೇಶ್ ಶೆಟ್ಟಿ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದು ನಡೆದಿದ್ದು ನಾನು ಯು.ಕೆ.ಜಿ.ಯಲ್ಲಿದ್ದಾಗ ರಾಕೇಶ್... ಅದೇ ಟೊಮೆಟೋ ಬಾತ್ ಅಂತ ನಂಬಿದ್ದೆ. ಇದಾದ ನಂತರ ಅಮ್ಮ ಟೊಮೆಟೋ ಬಾತ್ ಮಾಡಿದಾಗಲೂ ಇದು ಟೋಮೆಟೋ ಬಾತಲ್ಲ ಬೇರೇನೋ ಅಂತ ವಾದಿಸಿದ್ದೆ.... :D :D :D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಟೊಮ್ಯಾಟೊ ಹಾಕಿನು ಮಾಡಬಹುದು.. ಆದ್ರೆ ನಿಂಬೆ ಹುಳಿಯನ್ನು ಉಪಯೋಗಿಸಬಾರದು...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನ್ ಎರಡು ಹಾಕೇ ಮಾಡೋದು ;)
ಚೆನ್ನಾಗೆ ಇರುತ್ತೆ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಪ್ರಯತ್ನಿಸುತ್ತೇನೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂದುರವರೆ.....
ಟೊಮ್ಯಾಟೊ ಹಾಕಿನು ಮಾಡಬಹುದು.. ಆದ್ರೆ ನಿಂಬೆ ಹುಳಿಯನ್ನು ಉಪಯೋಗಿಸಬಾರದು... ತುಂಬಾ ಚೆನ್ನಾಗಿ ಇರುತ್ತೆ.. ಪ್ರಯತ್ನಿಸಿ..
ಒಂದೆಂತು ನಿಜ .. ರುಚಿಯಂತು ಹಾಳು ಆಗೋದಿಲ್ಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮ್ಮ ಚಿಕ್ಕಪ್ಪ ಮಾಡಿದ್ದಾಗ ನಿಂಬೆಹಣ್ಣು ಟೊಮೆಟೋ ಎರಡೂ ಹಾಕಿದ್ದರೂ ಅನ್ನೊ ನೆನಪು.....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂದು ರವರೆ... ನಿನ್ನೆ ನನ್ನ ಸ್ನೇಹಿತನ ಮನೆಗೆ ಹೋದಾಗ ಚಿತ್ರಾನ್ನ ಮಾಡಬೇಕಾದ ಪ್ರಸಂಗ ಬಂತು... ಆಗ ನಾನು ಟೊಮೇಟೊ ಮತ್ತು ನಿಂಬೆ ಹುಳಿ ಎರಡನ್ನು ಹಾಕಿ ನೋಡಿದೆ ... ರುಚಿಯಾಗೆ ಇತ್ತು....
ಅಂದ್ರೆ ಇದಕ್ಕೆ " ಟೊಮೇಟೊ ಲೆಮನ್ ರೈಸ್ " ಅಂತ ಹೆಸರು ಕೊಡಬಹುದು. :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.