ಊಟದ ಪದ್ದತಿಗಳು ಹಾಗೂ ಊಟದ ಅನುಭವಗಳು -- ಕೊನೆಯ ಭಾಗ

5
 • ಹಳ್ಳಿಗಳ ಬಡವರ ಮನೆಯಲ್ಲಿ ಮದುವೆ ಮುಂಜಿ ಇತ್ಯಾದಿಗಳು ನಡೆಯುತ್ತಿರುತ್ತವೆ. ಜಾತಿಯ ವ್ಯತ್ಯಾಸದಿಂದ ಅಥವಾ ಅಂತಸ್ಥಿನ ವ್ಯತ್ಯಾಸದಿಂದ ಊರಿನ ಗೌಡ ಕುಲಕರ್ಣಿ ಸಾಹುಕಾರ ಮುಂತಾದವರನ್ನು ತಮ್ಮ ಮನೆಗೆ ಆಹ್ವಾನಿಸಿ ಸನ್ಯಾನಿಸಲು ಆಗುವುದಿಲ್ಲ. ಹೀಗಾಗಿ ಆ ದಿನದಂದು ಅವರ ಮನೆಗಳಿಗೆ ಬೇಳೆ ಬೆಲ್ಲ ಅಕ್ಕಿ ಗಳನ್ನು ಕೊಡುತ್ತಾರೆ. ಅದಕ್ಕೆ ಸೀದಾ ಕೊಡುವುದು ಎಂದು ಹೆಸರು.

 • ಮದುವೆ ಮುಂಜಿ ಮುಂತಾದವುಗಳ ಊಟಕ್ಕೆ ಆಹ್ವಾನ ಕೊಡುವುದಕ್ಕೆ ಭಿನ್ನಾಕೊಡೋದು ಎನ್ನುತ್ತಾರೆ. ಈರೀತು ಭಿನ್ನಾ ಕೊಡಲು ಮನೆಯ ಯಜಮಾನ ಅಥವಾ ಅವನ ಪ್ರತಿನಿಧಿಯು ಇರುವುದಿಲ್ಲ. "ಐನೋರು" ಅಥವಾ ತತ್ಸಮರಾದ ವ್ಯಕ್ತಿಗಳು ಬೆಳಿಗ್ಗೆಯೇ ಬಂದು ಬಿನ್ನಾಕೊಟ್ಟು ಹೋಗುತ್ತಾರೆ. ("ಬಿನ್ನಹ" ಪದವು ಭಿನ್ನ ಆಗಿದೆ ಎಂಬುದಾಗಿ ನನ್ನ ಭಾವನೆ)

  • ಇತರೇ ಜನರು ಮುಕ್ಯವಾಗಿ ಮಾಂಸಾಹಾರಿ ಜನರು ಹಬ್ಬಕ್ಕಿಂತ ಹೆಚ್ಚಾಗಿ ಹಬ್ಬದ ಮರುದಿವಸವನ್ನು ಇಷ್ಟಪಡುತ್ತಾರೆ. ಮರುದಿವಸವನ್ನು "ಹಬ್ಬದ ಕರಿ" ಎಂದು ಕರೆಯುತ್ತಾರೆ. ಹಬ್ಬ ಉಂಡು ಬಾಯಿ ಸಪ್ಪಗೆ ಆಗಿದೆ ಎಂದು ಹೇಳುತ್ತ, ತಮಗಿಷ್ಟವಾದದ್ದನ್ನು ಕರಿದು ಹುರಿದು ತಿನ್ನುತ್ತಾರೆ. ಹಬ್ಬದ ಮರುದಿನವನ್ನೇ, ದೊಡ್ಡ ಪ್ರಮಾಣದಲ್ಲಿ ಆಚರಿಸುತ್ತಾರೆ.

  • "ಬೇಡಿಕೊಂಡು ತಿನ್ನುವುದು" ಎಂದು ಹಂಗಿಸಿಕೊಳ್ಳುತ್ತಿದ್ದ ಬಫೆ ಪದ್ದತಿಯು ಈಗ ಸಹಜ ಪದ್ಧತಿಯಾಗಿ ಎಲ್ಲರಿಂದಲೂ ಒಪ್ಪಿತವಾಗಿದೆ. ಜೆನರಲ್ ಇಲೆಕ್ಟಿಕ್ ಕಂಪನಿಯಲ್ಲಿ ಅದರ ವಾರ್ಷಿಕ ದಿನದಂದು ಬಫೇ ಇಟ್ಟಿದ್ದರು. ಅಲ್ಲಿಯ ಎಲ್ಲಾ ತಿನಿಸುಗಳನ್ನು ರುಚಿ ನೋಡಲು ನನಗೆ ಹಾಗೂ ನನ್ನ ಹೆಂಡತಿಯಿಂದ ಸಾಧ್ಯವಾಗಲಿಲ್ಲ. ನನ್ನ ಮಿತ್ರನ ಮಗನ ಮದುವೆಯಲ್ಲೂ ಇದೇ ಪರಿಸ್ಥಿತಿ. ಅಲ್ಲಿ ನಾವೊಂದು ಉಪಾಯವನ್ನು ಕಂಡುಕೊಂಡೆವು. ನಾನು + ನನ್ನ ಹೆಂಡತಿ+ ನನ್ನ ಮಗ ಒಟ್ಟಿಗೆ ಇರುತ್ತಿದ್ದೆವು. ಮಸಾಲೆದೋಸೆ ಪಾನಿಪುರಿ ರುಮಾನಿ ರೋಟಿ ಇತ್ಯಾದಿಗಳನ್ನು ,ಒಂದರಲ್ಲಿ ಮೂರು ಭಾಗವನ್ನು ಮಾಡಿ ಮೂರೂ ಜನ ತಿನ್ನುತ್ತಿದ್ದೆವು. ಬೆಂಗಳೂರಿನಲ್ಲಿ, ಮೊನ್ನೆ ನಮ್ಮ ನೆಂಟರ ಮಗಳ ರೆಸೆಪ್ಶನ್ ನಲ್ಲಿ ಇವೆಲ್ಲವುಗಳ ಜೊತೆಗೆ ತೊಡೆದೇವು ಪತ್ರೊಡೆಗಳೂ ಉತ್ತರ ಕರ್ನಾಟಕದ ಊಟದ ಪ್ರತ್ಯೇಕ ವಿಭಾಗವೂ ಇದ್ದವೆಂದು ಉಂಡು ಬಂದವರು ವರ್ಣಿಸುತ್ತಿದ್ದರು.

  • ಬೆಳಗಾವಿಯಲ್ಲಿ ಜರುಗಿದ ಐತಿಹಾಸಿಗ ವಿಧಾನ ಮಂಡಳದಲ್ಲಿ ಇಂತಹದೇ ಊಟವನ್ನು ವಾರಗಟ್ಟಲೆ ಸವಿಯಲು ನನಗೆ ಅವಕಾಶ ಸಿಕ್ಕಿತ್ತು. ನಮಗೆ ಆಫೀಸರ ಊಟದ ಮನೆಯಲ್ಲಿ ವ್ಯವಸ್ಥೆ . ಎರಡಕ್ಕಿಂತ ಹೆಚ್ಚು ಸ್ಮೀಟುಗಳು ಬಜ್ಜಿ ಬೊಂಡಾ ಮುಂತಾದ ಪದಾರ್ಥಗಳು ಶಾಖಾಹಾರ ಮಾಂಸಾಹಾರವು ಭಪೆ ಪದ್ಧತಿಯಲ್ಲಿ ಲಭ್ಯ ವಿದ್ದವು. ಇದಕ್ಕಿಂತಲೂ ಉತ್ಕ್ುಷ್ಠ ಭೋಜನವನ್ನು ಶಾಸಕರು ಹಾಗೂ ಮಂತ್ರಿಗಳ ಊಟದ ಹಾಲ್ ನಲ್ಲಿ ಬಡಿಸಲಾಗುತ್ತಿತ್ತು. ಟೇಬಲ್ ಮೇಲೆ ಹಾಸೊಂದನ್ನು ಹಾಸಿ ಅದರಮೇಲೆ ಹೂದಾನಿಯಿಂದ ಶ್ುಂಗರಿಸಿ, ಕೂಡ್ರುವ ಖುರ್ಚಿಗೆ ಶುಭ್ರ ಬಿಳೆಯ ಕವರನ್ನು ಹಾಕಿ, ಸಂಗೀತ ಸುಧೆಯನ್ನೂ ಜೊತೆಗಿಟ್ಟು ಅತ್ಯಂತ ನೀಟಾಗಿ ಡ್ರೆಸ್ ಮಾಡಿಕೊಂಡ ವೇಟರ್ ಗಳು ಸಿಸ್ಥಿನಿಂದ ಬಡಿಸುತ್ತಿದ್ದರು. ಶಾಸಕರು ಹಾಗೂ ಮಂತ್ರಿಗಳಿಗಾಗಿ ರಾತ್ರೆ ಇನ್ನೂ ವಿಷೇಶ ವಿರುತ್ತಿತ್ತು. ಅರ್ಥ ಕ್ರಿಕೆಟ್ ಗ್ರೌಂಡ ನಷ್ಟು ವಿಶಾಲವಾದ ಹೂದೋಟದಲ್ಲಿ ದೂರದೂರ ಟೇಬಲಗಳನ್ನಿಟ್ಟು, ಗಿಡ ಮರಗಳಿಗೆ ಬಲ್ಬನ್ನು ಹಚ್ಚಿ, ಹೊನಲು ಬೆಳಕಿನಿಂದ ಹಗಲನ್ನೇ ಸ್ುಷ್ಟಿಸಿ ಗಂಧರ್ವ ಲೋಕವನ್ನೇ ಧರೆಗಿಳಿಸಿದ್ದರು.

  • ಇಂತಹ ಸ್ವರ್ಗಸುಖದ ಊಟದಲ್ಲೂ ನನಗೆ ಕಬಾಬ ಮೆ ಹಡ್ಡಿಯಹಾಗೆ ಕೆಟ್ಟ ಅನುಭವ ವಾಯಿತು. ಭಫೆ ಊಟವಾದರೂ ಉಪ್ಪು ಉಪ್ಪಿನಕಾಯಿ ಹಪ್ಪಳ ಸಂದಿಗೆ ಹೀಗೆ ಪದ್ದತಿ ಪ್ರಕಾರ ಹೋಗುವಾಗ ಮೊಸರನ್ನೂ ನೀಡುತ್ತಿದ್ದರು. ಆ ಮೊಸರನ್ನು ಶೆಂಗಾ ಹಿಂಡಿ ಮೊದಲಾದವುಗಳೊಂದಿಗೆ ಖಾಲಿ ಮಾಡಿಕೊಂಳ್ಳುತ್ತಿದ್ದೆ. ಊಟದ ಮುಕ್ತಾಯಕ್ಕೆ ಮೊಸರನ್ನ ಉಣ್ಣುವುದುನನಗೆ ರೂಡಿ. ಹೀಗಾಗಿ ತುದಿಯಲ್ಲಿ ಅನ್ನ ಬಡಿಸಿಕೊಂಡು ಮೊಸರನ್ನು ಬಡಿಸಿಕೊಳ್ಳಲು ಹೋದಾಗ ಮೊಸರು ಬಡಿಸುವಾಕೆ "ಮೊದಲಷ್ಟೇ ಮೊಸರು ಬಡಿಸುವುದು. ಮತ್ತೊಮ್ಮೆ ಬಡಿಸುವುದಿಲ್ಲ ” ಎಂದು ಸ್ಪಷ್ಟವಾಗಿ ನಿರಾಕರಿಸಿದಳು. ಅವಳೊಂದಿಗಿನ ಜಗಳ ಫಲ ನೀಡಲಿಲ್ಲ. ಮರುದಿನದಿಂದ, ಮೊದಲು ನೀಡಿದ ಮೊಸರನ್ನೇ ತುದಿಯ ವರೆಗೂ ಇಟ್ಟುಕೊಂಡು ಮೊಸರನ್ನವನ್ನು ಊಟಮಾಡುವುದನ್ನು ಪ್ರಾರಂಭಿಸಿದೆ.

  • ಧರ್ಮ ಯಾವುದೇ ಆಗಿರಲಿ, ಜಾತಿ ಯಾವದೇ ಅಗಿರಲಿ, ದೇಶಯಾವುದೇ ಆಗಿರಲಿ ದೇವರನ್ನು ಬಿಟ್ಟು ಊಟ ಉಣಿಸು ಇಲ್ಲ. ಹಿಂದುಗಳು ಅಡಿಗೆ ಮಾಡಿ ಅದನ್ನು ದೇವರಿಗೆ ಎಡೆ ಇಡುತ್ತಾರೆ, ಮುಸಲ್ಮಾನರು ದೇವರಿಗೆ ಎಡೆಮಾಡಿದ್ದನ್ನು ಅಡಿಗೆಮಾಡಿ ಉಣ್ಣುತ್ತಾರೆ. ಕ್ರಿಶ್ಚಿಯನ್ನರು ಇಂದಿನ ಊಟವನ್ನು ಕೊಟ್ಟ ದೇವರನ್ನು ಕ್ರುತಜ್ನನ್ತೆಯಿಂದ ಸ್ಮರಿಸುತ್ತಾರೆ.

ನಾನು ಉಣಬಡಿಸಿದ ಊಟದಬಗ್ಗೆ ವಾಕರಿಕೆ ಬರದವರು ಉತ್ತರಕರ್ನಾಟಕ ಊಟಗಳಬಗ್ಗೆ ನಾನು ಈ ಹಿಂದೆ ಬರೆದ ಬ್ಲಾಗನ್ನು ಇಲ್ಲಿ ಸವಿಯಬಹುದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಐನೋರು ಅಥವಾ ಸ್ವಾಮೇರು ಅಂತಾರೆ. ನಾನೂ ಕೆಲವು ಕಡೆ ಬಿನ್ನಕ್ಕೆ ಹೊಗಿದ್ದಿದೆ. ನಾವು ಗದ್ದುಗೆಯ ಮೇಲೆ ಕೂತು ಪೂಜೆ ಮಾಡಿ ಪ್ರಸಾದವನ್ನು ಸ್ವೀಕರಿಸಿದ ಮೇಲೆ ಐನೋರ ಪಾದೋದಕವನ್ನು ಸ್ವೀಕರಿಸಿ ಭಕ್ತರು ಪ್ರಸಾದ ತೆಗೆದುಕೊಳ್ಳುತ್ತಾರೆ. ಬಿನ್ನದ ನಂತರ ಕೊಡುವ ಕಾಣಿಕೆಗಳಿಂದ ಐನೋರು ತೃಪ್ತಿಯಾದ ಮೇಲೆ ಪಾಪಗಳು ತೊಳೆದುಹೋಗುತ್ತವೆ ಅವೆಲ್ಲ ಪಾಪಗಳು ಐನೋರ ತಲೆಯ ಮೇಲೆ ಅಂಥ ಪ್ರತೀತಿ ಇದೆ. ಬಿನ್ನಕ್ಕೆ ಹಾಕುತ್ತಿದ್ದ ಭಕ್ತರು ನನಗೆ ಐದು ರೂಪಾಯಿ ನಾಲ್ಕಾಣೆ ದಕ್ಷಿಣೆ ಇಡುತ್ತಿದ್ದರು. ಹೆಚ್ಚಿನ ಹಣ ಕೇಳಿದರೆ ಐನೋರು ಹಣದಾಸೆ ಮಾಡಲ್ಲ ಅಂತ ಬುದ್ದಿ ಹೇಳೋರು. "ಪಾಪ ಮಾಡಿ ಲಕ್ಷ ಲಕ್ಷ ದುಡೀತೀರಾ. ಅದೇ ಪಾಪನ ನಮ್ಮ ತಲೆ ಮೇಲೆ ಕಟ್ಟುತ್ತೀರಾ. ಆ ಪಾಪ ತಲೆ ಮೇಲೆ ಹೊತ್ತುಕೊಳ್ಳೋಕೆ ಕಾಸು ಕೊಡಲಿಕ್ಕೂ ತತ್ವಾರ ಮಾಡುತ್ತೀರಾ **ಮಕ್ಕಳಿರಾ! ಹಾಳಾಗಿ ಹೋಗಿ" ಅಂತ ಬೈದು ಹಣ ತೆಗೆದುಕೊಳ್ಳದೇ ಬಂದೆ. ನನಗೇ ಅಚ್ಚರಿಯೆನಿಸುವುದೆಂದರೆ ಈಗ ನನ್ನ ಹತ್ತಿರ ಶಾಪ ಹಾಕಿಸಿಕೊಂಡವನ ಚೆನ್ನಾಗಿ ನಡೆಯುತ್ತಿದ್ದ ಬಿಸಿನೆಸ್ ಕೈಕೊಟ್ಟು ದಿವಾಳಿಯಾಗಿ ಹೋದ. ಈಗ ಬೆಂಗಳೂರಿನ ಅಂಗಡಿಯೊಂದರಲ್ಲಿ ಲೆಕ್ಕಿಗನಾಗಿ ಕೆಲಸ ಮಾಡುತ್ತಿದ್ದಾನೆ. ಇದು ಹೇಗೆ? ನಿಜಾನಾ ಎಂಬುದು ನನಗೆ ನಂಬಲಿಕ್ಕೆ ಸಾಧ್ಯವಾಗುತ್ತಿಲ್ಲ. ಇದಕ್ಕೆ ಏನು ಬೇಕಾದರೂ ಅರ್ಥಯಿಸಿಕೊಳ್ಳಿ. ನಡೆದಿದ್ದಂತೂ ಇದು ನಿಜ! ನನ್ನ ಶಾಪ ನಿಜವಾಯಿತು ಎಂದು ನಾನು ಹೇಳುತ್ತಿಲ್ಲ. ಆದರೆ ನಾನು ನನ್ನ ಜೀವನದಲ್ಲಿ ನೋಡಿದ ಸತ್ಯ ಇದು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಿಯ ಸಾಲೀಮಠರೇ **ಮಕ್ಕಳಿರಾ! ಹಾಳಾಗಿ ಹೋಗಿ" --- ನೀವು ಅನ್ನಬಾರದಿತ್ತು ಎಂಬುದು ಸಹಜ ಪ್ರತಿಕೆಇಯೆ. ಆಸರೆ ಆ ಪರಿಸ್ಥಿತಿಯಲ್ಲಿ ಆ ಮಾತು ಸಹಜವಾಗಿ ಹೊರಹೊಮ್ಮುತ್ತದೆ. ಎನ್ನುವುದು ವಾಸ್ಥವ . ಕಾಸಿನೊಳಗೆ ಕೋಟಿ ಪುಣ್ಯ ಬರಬೇಕೆಂಬುದಾಗಿ ಎಲ್ಲರ ಆಸೆ. ದೇವಸ್ಥಾನದ ಪೂಜಾರಿಗೆ ಹಾಕಲು ಪೈಸೆಗಳಿಗಾಗಿ ಕಿಸೆ ತಡಕಾಡುತ್ತೇವೆ. ಹೊರಗೆ ಚಪ್ಪಲಿ ಕಾಯುವವನಿಗೆ ಮಾತನಾಡದೇ ಘಟ್ಟಿ ರೂಪಾಯಿಯನ್ನು ನೀಡುತ್ತೇವೆ.! ಸಾವಿರಗಟ್ಟಲೆ ರೂಪಾಯಿ ಖರ್ಚುಮಾಡಿ ಸತ್ಯನಾರಾಯಣ ಪೂಜೆಮಾಡಿ ನೂರಾರು ಜನರಿಗೆ ಭೂರಿ ಭೋಜನ ಬಡಿಸಿ "ಸಂತಸ" ಪಡುತ್ತೇವೆ.!. ಪೂಜೆಮಾಡಿದ ಬಡ ಬ್ರಾಹ್ಮಣನಿಗೆ ದಕ್ಷಿಣೆ ಕೊಡುವಾಗ "ಸಂಕಟ" ಪಡುತ್ತೇವೆ.. ನಮ್ಮೆಲ್ಲರ ಕಾರ್ಯಗಳೂ ಕಾಟಾಚಾರಕ್ಕೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಾಲಿಮಠರೇ, ನಮಸ್ಕಾರ. ನನಗೂ ಹಾಗೇ ಅನ್ನಿಸಿದ್ದಿದೆ. ನನಗೆ ಹಲವಾರು ಅನುಭವಗಳೂ ಆಗಿವೆ. ಅದೂ ಸ್ವತ: ನಮ್ಮ ತ೦ದೆಯಿ೦ದಲೇ. ಅದಕ್ಕೆ ಹಿರಿಯರು ಹೇಳ್ತಾರೆ- `` ನೊ೦ದು ಬೆ೦ದವನ ಬೇಸರದ ನುಡಿಗಳು ಶಾಪವಾಗಿ ಪರಿಣಮಿಸುತ್ತವ೦ತೆ`` ನಮ್ಮಿ೦ದ ತೀರಾ ಬೇಸರಗೊ೦ಡು ನಮಗೆ ಶಾಪಹಾಕುವವರ ನುಡಿಗಳು ನಮ್ಮನ್ನು ತಾಗುತ್ತದ೦ತೆ! ಆದ್ದರಿ೦ದಲೇ ನಮ್ಮಲ್ಲಿ ಸಾಮಾನ್ಯ ನೋಡಿ ಹೇಳ್ತಿರ್ತಾರೆ- `` ಬೈ ಮಾರಾಯ, ಶಾಪ ಮಾತ್ರ ಹಾಕ್ಬೇಡ`` ಅ೦ಥ! ಅಲ್ಲವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.