ಊಟದ ಪದ್ದತಿಗಳು ಹಾಗೂ ಊಟದ ಅನುಭವಗಳು ಭಾಗ ೪

4.75
 • ನನ್ನ ಮಡದಿ ತವರಿಗೆ ಹೋಗಿದ್ದಳು. ಆಗ ನನ್ನ ಹಿಂದಿನೂರಿನ ಪರಿಚಯಸ್ತರೊಬ್ಬರು. ತಮ್ಮ ಸಂಗಾತಿಯನ್ನು ಕರೆದುಕೊಂಡು ಬಂದಿದ್ದರು. ಅವರು ಊಟದ ಬುತ್ತಿಯನ್ನು ತಂದಿದ್ದು ನನಗೂ ಅದರಲ್ಲೇ ಊಟಮಾಡಲು ಹೇಳಿದರು. ಒಟ್ಟಿಗೆ ಊಟಕ್ಕೆ ಕುಳಿತಿದ್ದೆವು. ಮೊದಲನೆಯ ರೌಂಡ್ ವಿಶೇಷವೆನಿಸಲಿಲ್ಲ. ಮುಂದೆ ನಮ್ಮೊಡನೆ ಊಟಕ್ಕೆ ಕುಳಿತಾಕೆಯು ಬಲಗ್ಸೈಯಲ್ಲಿ ಬಡಿಸ ತೊಡಗಿದಳು!. ನಾನು ಸಹಜವಾಗಿ ಉಂಡೆ!!. ಯಾಕೆಂದರೆ ಎಂಜಲು ಕೈಯಲ್ಲಿ ಬಡಿಸುವಾಗ ಅವರಲ್ಯಾವ ದುರುದ್ದೇಷವೂ ಇರಲಿಲ್ಲ. ಮುಕ್ಯವಾಗಿ, ಅವರು ನನ್ನನ್ನು ನೆನಪುಟ್ಟು ಹುಡಿಕಿಕೊಂಡು ನಮ್ಮ ಮನೆಗೆ ಬಂದಿದ್ದವರು. *** ನನ್ನ ಹಿರಿಯ ಅಧಿಕಾರಿಗಳು ತಮಗೆ ಇದೇರೀತಿ ಆದ ಅನುಭವವನ್ನು, ಒಮ್ಮೆ ಹೇಳಿದರು ನನಗೆ ಅನುಭವ ಮಾಡಿಸಿದಾಕೆ ಒಬ್ಬ ಆರೋಗ್ಯ ಕಾರ್ಯಕರ್ತೆ! ಹಿರಿಯ ಅಧಿಕಾರಿಗಳಿಗೆ ಅನುಭವವನ್ನು ಮಾಡಿಸಿದವಳು ಆರೋಗ್ಯಾಧಿಕಾರಿ.!! ( ಎಮ್ ಬಿ ಬಿ ಸ್ ವೈದ್ಯ ದಂಪತಿಗಳು)

 • ಹಾಸನ ಜಿಲ್ಲೆಯ ಅರಸಿಕೆರೆಯಲ್ಲಿ. ನಾವಿದ್ದೆವು. ಹಲವು ಕಾಲದನಂತರ ಯಾವುದೋಕಾರಣಕ್ಕೆ ಅರಸಿಕೆರೆಗೆ ಹೋದಾಗ ಅಲ್ಲಿಯ ಹಳೆ ಪರಿಚಯದವರೊಬ್ಬರ ಮನೆಗೆ ಹೋಗಿದ್ದೆವು. ಲೋಕಾರೂಡಿ ಮಾತನಾಡುತ್ತಾ ಸಹಜವಾಗಿ ನಿಮ್ಮ ಮಗ ಈಗ ಎಲ್ಲಿ ಕೆಲಸದಲ್ಲಿ ಇದ್ದಾನೆ ಎಂದಿದ್ದೇ ತಡ, ಅವರು ಮೈಮೇಲೆ ಬಂದವರಂತೆ, ಮಾತನಾಡತೊಡಗಿದರು. “ ಆ ಸೂಳೆ ಮಗ ಇದೇ ಊರಿಗೇ ಟ್ರಾನ್ಸಫರ್ ಆಗಿ ಬಂದಿದ್ದಾನೆ. ಆ ಹಲ್ಕಟ್ ರಂಡೆ ಮಾತು ಕೇಳಿ ಇಲ್ಲೇ ಬೇರೇ ಮನೆ ಮಾಡ್ಕೊಂಡಿದ್ದಾನೆ” ಮುಂತಾಗಿ ಸಿಟ್ಟಿನಿಂದ, ನೋವಿನಿಂದ ಹೇಳತೊಡಗಿದರು.. ವಿಷಯ ಏನೆಂದರೆ - ತಮ್ಮ ಮನೆ ಆಹಾರವನ್ನ್ನು ಬಿಟ್ಟು ಅವರು ತಮ್ಮದಲ್ಲದ ಬೇರೆ ಆಹಾರ ಪದ್ಧತಿಯನ್ನು ಅವಲಂಬಿಸಿದ್ದಾರೆ.. ಸೊಸೆ ಸಿದ್ಧಿ ಸಮಾಧಿ ಯೋಗ' ದ ಅನುಯಾಯಿಯಾಗಿ. ಉಳ್ಳಾಗಡ್ಡೆ ಬೆಳ್ಲುಳ್ಳಿ ಇತ್ಯಾದಿಗಳನ್ನೂ ತಿನ್ನುವುದನ್ನು ಬಿಟ್ಟಿದ್ದಾಳೆ. ಅವಳು ಹಾಳಾಗಿ ಹೋಗಲಿ ತನ್ನ ಮೊಮ್ಮಕ್ಕಳಿಗೆ ತಿನ್ನಗೊಡುವುದಿಲ್ಲ, ಎಂಬುದು ಅಜ್ಜನ ಸಂಕಟ. ಅಜ್ಜನ ಮನೆಗೆ ಬಂದಾಗ ಇವರು ತಿನ್ನಿಸಿ ಬಿಡಬಹುದೆಂದು ಇಲ್ಲಿಗೂ‌ ಕಳುಹಿಸಿ ಕೊಡುವುದಿಲ್ಲ. "ಹೀಗೆ ಮಾಡಿದರೆ ಹೇಗೆ? ಆ ಪುಳಿಚಾರ ಅನ್ನದಲ್ಲಿ ಏನಿರುತ್ತದೆರೀ?” ಎನ್ದು ಹಂದಿ ಮಾಂಸದ  ಸೊಗಸಿನ ಕುರಿತು, ನನ್ನನ್ನೇ ಕೇಳಿದರು. ಮೊಮ್ಮಕ್ಕಳಿಗೆ ಹಂದೀ ಮಾಂಸ ಸಿಗುವುದಿಲ್ಲ ಎಂದು ಕೊರಗುವ ಆ ಅಜ್ಜನಿಗೆ ನಾನು ಬ್ರಾಹ್ಮಣ ಎನ್ನುವುದೂ ಆಗಳಿಗೆಯಲ್ಲಿ ಗಮನಕ್ಕೆ ಇರಲಿಲ್ಲ.!

 • ಇದು ಅರಸೀಕೆರೆಯಲ್ಲಿ ಇರುವಾಗಿನ ಕಥೆ. ನಮ್ಮ ಮನೆಗೆ ಮಿತ್ರದಂಪತಿಗಳು ಬರುವವರಿದ್ದರು. ನನ್ನ ಹೆಂಡತಿ ಖುಷಿ ಖುಷಿಯಾಗಿ ಅಡಿಗೆ ಮಾಡಿದ್ದಳು. ಊರಿನಿಂದ ಬರುವಾಗ ತಂದ ಗಮ್ಮನ ಇಂಗನ್ನು ಸಾರಿಗೆ ಒಗ್ಗರಣೆ ಹಾಕಿದ್ದಾಳು. ವಾಸನೆಗೇ ಬಾಯಿ ನೀರೂರುವಂತಿತ್ತು! ಆದರೆ ಆ ಅತಿಧಿ ಸಾದ್ವಿ ಊಟ ಮಾಡಲೇ ಇಲ್ಲ. ಥೂ! ಇಂಗಿನ ವಾಸನೆ ಎಂದು ವಾಕರಿಸಿದಳು.!! (ಇದೇ ಮಾತನ್ನು ಬ್ರಾಹ್ಮಣರು ಬೆಳ್ಳುಳ್ಳಿಗೆ ಹೇಳುತ್ತಾರೆ. )

 • ಒಂದು ಉದ್ದರಣೆ ನೀರನ್ನು ಅಂಗೈಯಲ್ಲಿ ಹಾಕಿಕೊಂಡು “ಅಮ್ರುತೋ ಪಿದಾನಮಸಿ ಸ್ವಾಹಾ” ಎಂದು ಕುಡಿದರೆ ಅಲ್ಲಿಗೆ ಬ್ರಾಹ್ಮಣರ ಊಟ ಮುಗಿಯುತ್ತದೆ. ಅಥವಾ ಅನಿವಾರ್ಯವಾಗಿ ಮಧ್ಯದಲ್ಲೇ ಎದ್ದರೆ ಅವನ ಆ ಹೊತ್ತಿನ ಊಟ ಅಲ್ಲಿಗೇ ಮುಗಿದಂತೆಯೇ. ಉತ್ತರ ಕರ್ನಾಟಕದ ಬ್ರಾಹ್ಮಣೇತರರು ಊಟದ ಮಧ್ಯೆ ನೀರನ್ನು ಕುಡಿಯುವುದ್ದಿಲ್ಲ. ಉಂಡು ಕೈತೊಳೆದು ಗಟ ಗಟ ಎಂದು ಇಡೀ ತಂಬಿಗೆ ನೀರನ್ನು ಕುಡಿದುಬಿಡುತ್ತಾರೆ. ಹೀಗಾಗಿ ಅವರ ಪಂಕ್ತಿಯಲ್ಲಿ ನೀರಿನ ಲೋಟ ಇರುವುದಿಲ್ಲ.

  ಒಮ್ಮೆ ಒಂದೂರಿನ ಒಂದು ಮನೆಯಲ್ಲಿ ಏನು ಕಾರಣವೋ ಗೊತ್ತಿಲ್ಲ. ಹೊಟ್ಟೆ ತುಂಬ ಬಡಿಸಲೇ ಇಲ್ಲ. ನನ್ನ ಜೊತೆಗಿದ್ದ ಶಿಕ್ಷಕರೊಬ್ಬರು ನನಗೆ ಸಲಹೆ ಕೊಟ್ಟರು, 'ನೀರು ಕುಡಿಯ ಬೇಡಿರಿ. ಶಾಲೆಗೆ ಬರುವಾಗ ಬುತ್ತಿ ತಂದಿದ್ದೇನೆ. ಅಲ್ಲೇ ಉಂಡು ನೀರು ಕುಡಿಯೋಣ'. ಅವರ ನಂಬಿಗೆಯಂತೆ ಎದ್ದು ಹೋಗುವುದು, ಊಟದ ಮುಕ್ಟಾಯವಲ್ಲ. ನೀರು ಕುಡಿದರೆ ಆ ಹೊತ್ತಿನ ಊಟ ಮುಗಿದಂತೆ.

 • ಬಾಳೆ ಎಲೆಯನ್ನು ಕುಡಿ ಎಡಕ್ಕೆ ಬರುವಾಹಾಗೇ ಇಡಬೇಕು. ಬೆಂಗಳೂರಿನ ಒಂದು ಬ್ರಾಹ್ಮಣರ ಮನೆಯ ಊಟದಲ್ ಲಿ, ಒಬ್ಬ ಬಲಕ್ಕೆ ಕುಡಿ ಮಾಡಿ ಇಡುತ್ತಿದ್ದ. ಅವನಿಗೆ ಎಡಕ್ಕೆ ಕುಡಿ ಬರುವಂತೆ ತಿಳಿಸಿದೆ. ಎಡಕ್ಕೆ ಕುಡಿಮಾಡುವುದೇ ಸರಿ ಎಂಬ ನನ್ನ ಭಾವನಗೂ ಒಮ್ಮೆ, ಧಕ್ಕೆ ಬಂದಿತು..ನನ್ನ ಪಕ್ಕದಲ್ಲಿ ಕುಳಿತಾತ ಎಲೆ ಇಟ್ಟ ಪದ್ದತಿ ಸರಿ ಇಲ್ಲ ಎಂದು ನನ್ನ ಗಮನಸೆಳೆದ. ಪಂಕ್ತಿಯನ್ನು ಪರಿಶೇಲಿಸಿದಾಗ ಎಲ್ಲವೂ ಎಡಕ್ಕೆ ಕುಡಿಯಾಗೇ ಇತ್ತು. ಅವನ ಆಚಾರದ ಪ್ರಕಾರ ಕುಡುಯು ಮುಂದೆ ಬರಬೇಕು. ಅವನು ತನ್ನ ಪದ್ದತಿಯಂತೆ ಕುಡಿಯನ್ನು ಮುಂದೆಮಾಡಿಕೊಂಡೇ ಊಟ ಮುಗಿಸಿದ್ದ. ದೇವರಿಗೆ ಎಡೆ ಇಡುವುದು ಮುಂತಾದ ಸಮಯದಲ್ಲಿ ಹೀಗೆ ಎಲೆಯ ಕುಡಿಯನ್ನು ಮುಂದೆ ಮಾಡುವುದಿದೆ.

 • ಸಾಧಾರಣವಾಗಿ ಮದು ಮಕ್ಕಳಿಗೆ ಊಟಬಡಿಸುವಾಗ ರಂಗೋಲಿ ಹಾಕುವುದಿದೆ. ಹರಿಹರ ಭಾಗದಲ್ಲಿ ಇಡೀ ಪಂಕ್ತಿಗೇ ರಂಗೋಲಿ ಹಾಕುತ್ತಾರೆ. ಈ‌ಭಾಗದ ಜನರಿಗೆ ಊಟವಾಗಲೀ ಉಪ್ಪಿಟ್ಟಾಗಲಿ ಚಟ್ನೆಪುಡಿ ಅವಸ್ಯವಾಗಿ ಬಡಿಸಲೇ ಬೇಕು. ಮಕ್ಕಳು ಬೋರ್ನವಿಟಾ ಕುಡಿಯುವುದಿದ್ದರೂ ಚಟ್ನಿಪುಡಿ ಬೇಕೇ ಬೇಕು!!

 • "ಊಟಕ್ಕೆ ಬಾಡು ಇದ್ದರೇ ಸೊಗಸು.” ಈ ಮಾತನ್ನು, ಉತ್ತರ ಕರ್ನಾಟಕದ ಒಕ್ಕಲಿಗನೂ ಹೇಳುತ್ತಾನೆ. ದಕ್ಷಿಣ ಕರ್ನಾಟಕದ ಒಕ್ಕಲಿಗನೂ ಹೇಳುತ್ತಾನೆ. ಆದರೆ ನೆನಪಿರಲಿ ದಕ್ಷಿಣ ಕರ್ನಾಟಕದಲ್ಲಿ ಬಾಡು ಎನ್ದರೆ ಮಾಂಸದ ಅಡಿಗೆ. ಉತ್ತರ ಕರ್ನಾಟಕದಲ್ಲಿ ತರಕಾರಿಗೆ ಬಾಡು ಎನ್ನುತಾರೆ. ರೊಟ್ಟಿ ಇತ್ಯಾದಿಗಳನಡುವೆ ಬಾಯಿ ಆಡಿಸಿಕೊಳ್ಳಲು ಉಪಯೋಗಿಸಸುವ ಮೂಲಂಗಿ ಗಜ್ಜರಿ ಇತ್ಯಾದಿಗಳು ಬಾಯಾಡು= ಬಾಡು. ಉತ್ತರ ಕರ್ನಾಟಕದ ಒಕ್ಕಲಿಗರು ಶುದ್ಧ ಸಸ್ಯಾಹಾರಿಗಳು. ದಕ್ಷಿಣ ಕರ್ನಾಟಕದ ಒಕ್ಕಲಿಗರು ಮಾಂಸಾಹಾರಿಗಳು

 • ದಕ್ಷಿಣ ಭಾಗವನ್ನು ಕಂಡು ಬಂದ ರೊಟ್ಟಿ ಉಂಣ್ಣುವ ಜನರ ಬಾಯಲ್ಲಿ ದಕ್ಷಿಣದ ಜನರ ಊಟದ ಬಗ್ಗೆ ಟಿಪ್ಪಣೆಗಳು ಹೀಗಿವೆ.--- 'ಬೆಕ್ಕು ಹಾರಬಾರದು' ಅಷ್ಟು ಎತ್ತರ ಅನ್ನದ ರಾಸಿ ಹಾಕಿಕೊಳ್ಳುತ್ತಾರಿ. ಮಧ್ಯದಲ್ಲಿ ಒಂದು ಬಾವಿ ತೋಡಿಕಳ್ಳುತ್ತಾರೆ. ಅದರಲ್ಲಿ ಸಾಂಬಾರ ಸುರಿದಿಕೊಂಡು ಸರಾಬರಾ ಸುರಿಯುತ್ತಾರೆ.. ಅನ್ನವನ್ನು ಮುಷ್ಟಿಕಟ್ಟಿ .ಕಿವಚುತ್ತಾರೆ. ಬೆರಳ ಸಂಧಿಯಲ್ಲಿ ಗಿಜಿಗಿಜಿ ಹರಿಯುತ್ತದೆ.

  ಇನ್ನೊಬ್ಬನ ಪದ್ದತಿಯೇ ಬೇರೆ --ಅನ್ನವನ್ನು , ಕ್ರಿಕೆಟ್ ಬಾಲ್ ನ ಆಕಾರದಲ್ಲಿ ಕಟ್ಟಿಕೊಂಡು ಬಾಯಿಗೆ ತುರುಕುತ್ತಾರೆ.

  ಹೀಗೆ ಅನ್ನವನ್ನು ಸರಾಬರಾ ಸುರಿಯುವವನೂ ಕ್ರಿಕೆಟ್ ಬಾಲ್ ತುರುಕುವವನೂ ಒಬ್ಬರನ್ನು ಒಬ್ಬರು ದೂಷಿಸುತ್ತಾ ಊಟಮಾಡಿದ ಪ್ರಸಂಗವೊಂದನ್ನು ಮಿತ್ರರೊಬ್ಬರು ವರ್ಣಿಸಿದರು.

  ಉತ್ತರ ಕರ್ನಾಟಕದ ಬಹಳ ಜನರು ಊಟಮಾಡಿದಮೇಲೂ ಅಂಗೈಗೆ ಏನೂ ಮೆತ್ತದ ರೀತಿಯಲ್ಲಿ ಬೆರಳ ತುದಿಯಲ್ಲೆ ಊಟ ಮುಗಿಸುತ್ತಾರೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ತುಂಬಾ ಚೆನ್ನಾಗಿದೆ . ಇದು “ಅಮ್ರುತೋ ಪಿದಾನಮಸಿ ಸ್ವಾಹಾ” ಸರಿ ನಾ ಅಥವಾ “ಅಮ್ರುತೋಪಿ ದಾನಮಸಿ ಸ್ವಾಹಾ” ಇದು ಸರಿ ನ ಸರ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಕ್ಕತ್... ನಾನು ಬಹಳ ತಲೆ ಕೆರೆದುಕೊಂಡರೂ ಇದೇನೆಂದು ಅರಿವಾಗಲಿಲ್ಲ. ನಿಮ್ಮ ಉತ್ತರ ನೊಡಿ ತಿಳಿಯಿತು. ತಾರಾ ಬಾಯಿ ತೆರೆದಾಳ (ತಾರಾಬಾಯಿ ತೆರೆದಾಳ), ಟೀ ಕಿಸಿದರು(ಟೀಕಿಸಿದರು) ಇತ್ಯಾದಿ ಇದೇ ರೀತಿಯ ಅಧ್ವಾನಗಳು!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>>>ತಾರಾ ಬಾಯಿ ತೆರೆದಾಳ>>>> ಮೊದಲನೆಯ ಸುತ್ತಿನಲ್ಲಿ ಅರ್ಥವಾಗಲಿಲ್ಲ.. ಎರಡನೆಯ ಸುತ್ತಿನಲ್ಲೂ ಊ ಹೂ. ಮೂರನೇಸುತ್ತಿನಲ್ಲಿ ಉಧ್ಘಾರ.*** ಸಕತ್ ***
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>>>“ಅಮ್ರುತೋ ಪಿದಾನಮಸಿ ಸ್ವಾಹಾ”>>>> >>>>“ಅಮ್ರುತೋಪಿ ದಾನಮಸಿ ಸ್ವಾಹಾ”>>>> ಇವೆರಡೂ ತಪ್ಪು. ಹೀಗಾಗಿ ನಾವು ನೀವು ಒಬ್ಬರಿಗೆ ಒಬ್ಬರು sorry ಹೇಳಿಕೊಳ್ಳೋಣ :) :) "ಅಮ್ರುತ ಅಪಿಧಾನಮಸಿ ಸ್ವಾಹಾ"ಎಂಬುದು, ಸರಿಯಾದ ಉತ್ತರವು. ಮೈಸೂರಿನಲ್ಲಿರುವ ಸಂಸ್ಕ್ುತ ಪಂಡಿತರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಈ ಮಾಹಿತಿ ಪಡೆದಿದ್ದೇನೆ. ಮಾಹಿತಿ ನೀಡಿದವರಿಗೆ ಕ್ುತಜ್ನತೆಗಳು. ಮುಂದು ವರೆಸಿ ಅದರ ಅಥವನ್ನು ವಿವರಿಸಿದರು. ಅವರು ಹೇಳುತ್ತಿರುವಾಗ ನನಗೆ ಅಥವಾಯಿತು. ಈಗ ಅವೆಲ್ಲಾ ಮರೆತು ಹೋಯಿತು!! ಮಂತ್ರದ ತಾತ್ಪರ್ಯವೇನೆಂದರೆ --- ಊಟದ ಪ್ರರಂಭದಲ್ಲಿ ಹೇಳಿದ ಪ್ರಾಣ ಅಪಾನ ವ್ಯಾನ ಉದಾನ ಸಮಾನ ಗಳಿಗೆ ಸ್ವಾಹಾ ಮಾಡಿಸಿದರ ಜೊತೆಗೆ ಈಗ ಅಮ್ುತವನ್ನೂ ಸ್ವಾಹಾ ಮಾಡಿಸುತ್ತಿದ್ದೇನೆ. ನನ್ನನ್ನು ನಾನು ತಿದ್ದಿಕೊLLಅಲು ಸಹಾಯಮಾಡಿದ್ದಕ್ಕಾಗಿ ಕ್ುತಜ್ನತೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಅಮ್ರುತೋಪಿ ದಾನಮಸಿ ಸ್ವಾಹಾ>> ಇದು ತಪ್ಪಲ್ಲ. ಕ್ಷಮೆ ನೀವು ಕೇಳಬೇಕೆ ಹೊರತು ಗೋಪಾಲ್ ಅವರಲ್ಲ. ಅಮೃತ+ಅಪಿ= ಅಮೃತೋಪಿ (ಗುಣಸಂಧಿ.) ಇಲ್ಲಿ ವಿಸರ್ಗ ಲೋಪವಾಗುತ್ತದೆ. ನೀವು ಹೇಳಿದ್ದು ಪದವಿಭಾಗ ಮಾತ್ರ! ಪದವಿಭಾಗ ಮಾಡಿ ಸಂಧಿಯನ್ನು ತಪ್ಪು ಎಂದರೆ ಅದೆಂಥದು?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ಅಮೃತೋಪಿ ದಾನಮಸಿ ಸ್ವಾಹಾ" ಇದು ಸರಿ ಅನ್ನಿಸುತ್ತೆ. ನಾನು ಪುಸ್ತಕದಲ್ಲಿ ಓದಿದ ನೆನಪು.ಶ್ರೀ ಹರ್ಷ ಹೇಳಿದ ಹಾಗೆ ಗುಣಸಂಧಿ ಇರಬಹುದು. ಒಬ್ಬರಿಗೆ ಒಬ್ಬರು sorry ಹೇಳಿಕೊಳ್ಳೋದೆನು ಬೇಡ ಬಿಡಿ ಶಾಸ್ತ್ರಿಗಳೇ. ನಾನು ತುಂಬಾ ತಪ್ಪು ಮಾಡುತ್ತೇನೆ ನೀವು ನನ್ನನ್ನು ತಿದ್ದಿ. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>>>ಕ್ಷಮೆ ನೀವು ಕೇಳಬೇಕೆ ಹೊರತು ಗೋಪಾಲ್ ಅವರಲ್ಲ.>>>> ಹರ್ಷರವರೇ, sorry ಸಹಜವಾಗಿ ನಾನು ಹೇಳಿದಮಾತು ಅದಾಗಿತ್ತು. ಗೋಪಾಲರನ್ನು ಸೋಲಿಸುವುದಕ್ಕಲ್ಲ sorry.. ಅಪಿಧಾನಮಸಿ ಎನ್ನುವದು ಏಕ ಪದ . ಅಮ್ರುತಕ್ಕೆ ಅದನ್ನು ಸೇರಿಸಿದಾಗ ಅಮ್ರುತೋಪಿಧಾನಮಸಿ ಆಗಬಹುದು. ಅಮ್ರುತೋಪಿ + ಧಾನಮಸಿ / ದಾನಮಸಿ ಅಲ್ಲಿ ಅದು "ದಾ" ಅಲ್ಲ "ಧಾ"*** ಸಂಸ್ಕ್ುತ ಪಂಡಿತರೊಡನೆ ಮಾತನಾಡಿಡಿದ್ದಾಗ ಈ ಪದದ ಬಗ್ಗೆ ಖಾತ್ರಿ ಮಾಡಿಕೊಂಡಿದ್ದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದಯವಿಟ್ಟು ನನ್ನ ಸಂದೇಹ ಪರಿಹರಿಸಿ... ಗುಣ ಸಂಧಿ ಆಗೋದು.. ಅ + ಇ/ಈ = ಏ ಆದಾಗ..ಗಣೇಶ ಅ + ಉ/ಊ = ಓ ಆದಾಗ.. ಅರುಣೋದಯ ಅಂತ ಓದಿದ್ದೆ... ಅ + ಅ ಸೇರಿದರೆ, ಓ ಆಗೋದು ಕೇಳಿರಲಿಲ್ಲ; ಅ + ಅ/ಆ ಸೇರಿದರೆ, ಆ ಆಗೋದು ಕೇಳಿದ್ದೆ. ಅದು ಸವರ್ಣ ದೀರ್ಘ ಸಂಧಿ... ಇತೀ, ಉಉನಾಶೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಳ್ಳೆಯ ಸಂದೇಹ :) ಪದ ವಿಭಾಗ ಹೀಗೆ- ಅಮೃತಾ , ಪಿಧಾನಂ , ಅಸಿ. ಒಟ್ಟಿಗೆ- ಅಮೃತಾಪಿಧಾನಮಸಿ ಸ್ವಾಹಾ. ಊಟದ ಮೊದಲು- ಅಮೃತೋಪಸ್ತರಣಮಸಿ ಜುಹೋಮಿ ಸ್ವಾಹಾ. ಇದು ಭೋಜನವನ್ನು ಯಜ್ಞವೆಂದು ಪರಿಭಾವಿಸಿ ಮಾಡುವ ಕ್ರಿಯೆ. ಒಂದು ವಾಕ್ಯದಲ್ಲಿ ಇದನ್ನು ವಿವರಿಸಲಾಗದು, ವಿವರವಾಗಿ ಇನ್ನೊಮ್ಮೆ ಬರೆಯಲು ಪ್ರಯತ್ನಿಸುವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೊಸತನ್ನು ತಿಳಿಯುವುದು ಯಾವಾಗಲೂ ಸಂತಸವನ್ನು ನೀಡುತ್ತದೆ. ದಯವಿಟ್ಟು ಅಂತಃ ಸಂತಸವನ್ನು ಬೇಗ ಒದಗಿಸಿಕೊಡಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಉಮೇಶರವರೇ, ನನ್ನ ಮಟ್ಟಿಗೆ ವ್ಯಾಕರಣ ಎಂದರೆ ಕುಲಕರಣಿಮನೆ ಶೀಕರಣಿ ಮಾತ್ರ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈಶ್ವರಶಾಸ್ತ್ರಿಯವರು ಹೇಳುವಂತೆ ಅಪಿಧಾನಮಸಿ ಏಕಪದವಾದರೆ ಅಮೃತೋಪಿಧಾನಮಸಿ ಪೂರ್ವರೂಪ ಸಂಧಿ ಆದರೆ ಮಧ್ಯೆ ಅವಗ್ರಹ ಚಿಹ್ನೆ ’ऽ’ ಬರಬೇಕು अमृतॊ + अपिधानमसि = अमृतॊऽपिधानमसि
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಹೇಳಿದ್ದು ಸರಿ ಇಂದುಶ್ರೀ ಅವರೆ . अमृतॊ + अपिधानमसि = अमृतॊऽपिधानमसि ಇದು ಪೂರ್ವರೂಪ ಸಂಧಿ ಆಗುತ್ತದೆ. ಇಲ್ಲಿ ಪರಪದದ ಮೊದಲ ಅಕ್ಷರ ’ಅ’ ದ ಮೇಲೆ ಪೂರ್ವಪದದ ಕೊನೆಯ ಅಕ್ಷರ dominate ಮಾಡುತ್ತದೆ ಅದಕ್ಕೆ ಇದು ಪೂರ್ವರೂಪ ಸಂಧಿ .ಅಲ್ಲಿ ಪರಪದದ ’ಅ’ ಕಾರ ಲೋಪವಾಗಿದ್ದಕ್ಕೆ ನನ್ನನ್ನು ಯಾಕೆ ತಿಂದೆ ಎಂದು ಬೈಯ್ಯುತ್ತಾ ಬುಸುಗುಡುವ 's' (ಅವಗ್ರಹ) ಬರುತ್ತದೆ . ಸುಮಂತ ಶ್ಯಾನುಭಾಗ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂದುಶ್ರೀ ಅವರೇ ಮತ್ತು ಸುಮಂತ್ ಅವರೇ, ಅನಂತೇಶ ಅವರು ಅಂದಂತೆ, ಅದು 'ಅಮೃತಾಪಿಧಾನಮಸಿ'. 'ಅಮೃತೋಪಿಧಾನಮಸಿ' ಅಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಸಂಧಿಯು ಈ ಸಂದಿಗೊಮ್ಮೆ ಆ ಸಂದಿಗೊಮ್ಮೆ ಓಡಾಡುತ್ತಿದೆ. ನೀವು ಹೇಳಿದ ಶಬ್ದವಾದರೆ ಅದು ಸವರ್ಣ ದೀರ್ಘ ಸಂಧಿ ಆಗುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಉತ್ತರ ಕರುನಾಡ ಕಡೆ ಊಟ ಬಹಳ ನಾಜೂಕು, ಆದರೆ ಸಂಪ್ರದಾಯಗಳ ಕಟ್ಟಳೆಯಿಲ್ಲ. ನಾಲಗೆಯ ಮತ್ತು ಹೊಟ್ಟೆಯ ಹರುಷಕ್ಕೆ ಹೆಚ್ಚಿನ ಆದ್ಯತೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಾಲೀಮಠರವರೇ, ತಮ್ಮ ಮಾತು ಸತ್ಯ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರ್.. ಧನ್ಯವಾದಗಳು.. ಒಳ್ಳೆ ವಿಚಾರ ಹಂಚಿಕೊಂಡದ್ದಕ್ಕೆ.. ನನ್ನ ನೆನಪಿನ ಒಂದು ಘಟನೆ ಇಲ್ಲಿ ಹಂಚಿಕೊಳ್ಳೋಣ ಅನ್ನಿಸುತ್ತಾ ಇದೆ.. ನಾನು ಮೊದಲ ಬಾರಿ ಪೂನ sify company ಆಫೀಸ್ನಲ್ಲಿ ಕೆಲಸ ಮಾಡಲು ಹೋದಾಗ, ಮದ್ಯಾಹ್ನ ಊಟದ ಸಮಯದಲ್ಲಿ ಎಲ್ಲರೂ ಒಟ್ಟಿಗೆ ಊಟ ಮಾಡಲು ಕರೆದಾಗ, ನಾನು "ಪ್ಯಾಂಟ್ರಿ"ಗೆ ಹೋದಾಗ ಊಟಕ್ಕೆ ಮೊದಲೇ ನನ್ನ ಅಭ್ಯಾಸದಂತೆ.. ಎಂಜಲು ನಾನು ತಿನ್ನಲ್ಲ ಅಂದಾಗ.. ಎಲ್ಲರೂ ನನ್ನ ವಿಚಿತ್ರವಾಗಿ ನೋಡಿದ್ದರು.. ಇಬ್ಬರಂತು (ಹುಡುಗಿಯರು) ನನ್ನ ಮೇಲಿಂದ ಕೆಳಗಿನವರೆಗೆ.. ಹೆಚ್ಚು ಕಡಿಮೆ ಎರಡು ಬಾರಿ ಫುಲ್ ಸ್ಕ್ಯಾನ್ ಮಾಡಿದ್ದರು. ಇನ್ನು ಕೆಲವರು.. ಅಲ್ಲಲ್ಲ ಹಲವರು.. "ಎಂಜಲು" ಹಾಗಂದ್ರೆ? ಅಂತ ನನ್ನೇ ಕೇಳಿದ್ದರು.. ವಿವರಿಸಿ ಹೇಳಿದ ಮೇಲೆ.. "ಯಾಕೆ?" ಅನ್ನೋ ಪ್ರಶ್ನೆ.. ನನಗೋ ಏನು ಹೇಳಬೇಕಪ್ಪ ಇವರಿಗೆ ಅಂತ ತಲೆ ಬಿಸಿ.. ಓಹ್.. ವಿಚಿತ್ರ ಒದ್ದಾಟ ಅನುಭವಿಸಿದ್ದೆ.. ಒಟ್ಟಿನಲ್ಲಿ ಪ್ರತಿದಿನ ನಾನು ಊಟಕ್ಕೆ ಬಂದಾಗ.. ನಾನೊಬ್ಬ "ವಿಚಿತ್ರ ಜೀವಿ" ಅನ್ನೋ ರೀತಿಯಲ್ಲಿ ನನಗೆ ಟ್ರೀಟ್.. ಅಂತು.. ಈಗ ಅರಾಮಾಗಿದ್ದೇನೆ. ಅಲ್ಲಿಲ್ಲ..ಸದ್ಯಕ್ಕೆ.. ನಿಮ್ಮೊಲವಿನ, ಸತ್ಯ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸತ್ಯಚರಣರವರೇ, ನಿಮ್ಮ ಅನುಭವವನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇ೦ದುಶ್ರೀ ಮೇಡ೦, ಚೆನ್ನಾಗಿದೀರ? ನನಗನಿಸುತ್ತೆ, ನನ್ನ ತಿಳುವಳಿಕೆಯ ಪ್ರಕಾರ ಅದು `` ಅಮೃತಾಪಿಧಾನಮಸಿ ಸ್ವಾಹಾ`` ಅ೦ತ. ಅದು ಸವರ್ಣದೀರ್ಘ ಸ೦ಧಿ ಇರಬೇಕು. ಪೂರ್ವರೂಪ ಸ೦ಧಿ ಎ೦ದರೆ ಯಾವುದು? ಅದರ ಗುಣಲ಼ಕ್ಶಣಗಳೇನು? ಸ್ವಲ್ಪ ಮಾಹಿತಿ ನೀಡಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಚೆನ್ನಾಗಿದ್ದೀನಿ ಈ ಶ್ಲೋಕವನ್ನು ನಾನು ಈ ಮುಂಚೆ ಕೇಳಿಲ್ಲ.. ಹಾಗಾಗಿ ಪದವಿಭಾಗ ಹೀಗೆ ಇರಬಹುದು ಎಂದು ಊಹಿಸಿದ್ದಷ್ಟೇ.... ಆ ಪದ ಅಮೃತೋऽಪಿಧಾನಮಸಿ ಆದರೆ ಅದು ಪೂರ್ವರೂಪ ಸಂಧಿಯಾಗುತ್ತದೆ. ಅಮೃತಾಪಿಧಾನಮಸಿಯಾದರೆ ಸವರ್ಣದೀರ್ಘಸಂಧಿಯಾಗುತ್ತದೆ. ಇನ್ನು ಪೂರ್ವರೂಪ ಸಂಧಿಯ ಬಗ್ಗೆ ವಿವರಣೆಯನ್ನು ಸುಮಂತ್ ಅವರು ಈಗಾಗಲೇ ಹೇಳಿದ್ದಾರೆ... ಅದನ್ನೇ ಮತ್ತೆ ಹೇಳುತಿದ್ದೇನೆ... ಇದು ಸಂಸ್ಕೃತ ಸ್ವರ ಸಂಧಿಗಳಲ್ಲೊಂದು ಪೂರ್ವಪದದ ಕೊನೆಯಲ್ಲಿರುವ ए ಅಥವಾ ओ ಕಾರಗಳಿಗೆ ಉತ್ತರಪದದ ಆದಿಯಲ್ಲಿ ಹ್ರಸ್ವ अ ಕಾರವು ಪರವಾದಾಗ अ ಕಾರದ ಸ್ಥಾನದಲ್ಲಿ ಪೂರ್ವರೂಪವು (ಅವಗ್ರಹ ಚಿಹ್ನೆ - ऽ ) ಆದೇಶವಾಗಿ ಬರುವುದಕ್ಕೆ ಪೂರ್ವರೂಪ ಸಂಧಿ ಎನ್ನುತ್ತೇವೆ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

--ಅನ್ನವನ್ನು , ಕ್ರಿಕೆಟ್ ಬಾಲ್ ನ ಆಕಾರದಲ್ಲಿ ಕಟ್ಟಿಕೊಂಡು ಬಾಯಿಗೆ ತುರುಕುತ್ತಾರೆ. ಇದರಲ್ಲಿ ಗಮನವೀಯ ಬೇಕಾದ ಅ೦ಶವೆ೦ದರೆ, ಬ್ರಾಹ್ಮಣರಲ್ಲಿ ಊಟ ಮಾಡುವಾಗ ಅನ್ನವನ್ನು ಉ೦ಡೆ ಕಟ್ಟುವುದಿಲ್ಲ.ನಮ್ಮಲ್ಲಿ ಅನ್ನವನ್ನು ಉ೦ಡೆಯಾಕಾರದಲ್ಲಿ ಕಟ್ಟುವುದೆ೦ದರೆ ಪಿತೃಗಳ ಶ್ರಾಧ್ಢದಲ್ಲಿ ಮಾತ್ರ.ಬ್ರಾಹ್ಮಣರು ಅ೦ಥಲ್ಲ.ಯಾರಲ್ಲಿಯೂ ಅನ್ನವನ್ನು ಉ೦ಡೆ ಕಟ್ಟುವುದು ನಿಷಿಧ್ಧವೇ. ಬೆಳ್ಳುಳ್ಳಿ ಮತ್ತು ಇ೦ಗು ಎರಡೂ ಗ್ಯಾಸ್ಟ್ರಿಕ್ ಗೆ ಒಳ್ಳೆಯದು. ಎರಡೂ ದೇಹದಿ೦ದ ಗ್ಯಾಸ್ ಅನ್ನು ಹೊರ ಹಾಕುತ್ತವೆ.ಪಕ್ಕದಲ್ಲಿ ಇರುವವನ ಮೂಗಿಗೆ ನೆಗಡಿ ಆಗರಬೇಕಷ್ಟೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡಾರವರೇ, <<<<ಯಾರಲ್ಲಿಯೂ ಅನ್ನವನ್ನು ಉ೦ಡೆ ಕಟ್ಟುವುದು ನಿಷಿಧ್ಧವೇ.>>>> ಗೆ ಸಂಬಂಧಪಟ್ಟಹಾಗೆ ಹೇಳುತ್ತಿದ್ದೇನೆ.;- ಹೀಗೆ ಊಟಮಾಡುವವರನ್ನು ಒಂದಕ್ಕಿಂತ ಹೆಚ್ಚುಸಾರೆ ನಾನು ನೋಡಿದ್ದೇನೆ. ಅದೂ ಸಾಮೂಹಿಕ ಪಂಗ್ತಿಯಲ್ಲಿ. ಸ್ಪಶ್ಟವಾಗಿ ನೆನಪಾಗುತ್ತಿಲ್ಲವಾದರೂ ಅವರು ಊತಕ್ಕೆ ಕುಳಿತಾಗ ಅಂಗಿಯನ್ನು ಹಾಕಿಕೊಂಡಿರಲಿಲ್ಲ ಎನ್ನಿಸುತ್ತದೆ. ಒಂದು ಜಾಗ ಸ್ಪಷ್ಟವಾಗಿ ನೆನಪಿದೆ. ಅದು ಬಾಲ್ಯದ ನೆನಪು.ಅದು ಹುಬ್ಬಳಿಯ ಒಂದು ಪ್ರಸಿದ್ಧ ಹೋಟೆಲ್. ಖಾನವಳಿ ಅಲ್ಲ. ಆದ್ದರಿಂದ ಅದು ಉಡಪಿಹೋಟೆಲ್ ವರ್ಗಕ್ಕೆ ಸೇರಿದ ಹೋಟೆಲ್ ಆಗಿರವಹುದು. ಅಲ್ಲಿಯ ಸಿಬ್ಬಂಧಿಯೊಬ್ಬನ ಊಟಮಾಡುವುದನ್ನು ನೋಡಿದ ನಾನೂ ನನ್ನ ಅಣ್ಣನೂ ಅದೇರೀತಿ ಪಿಂಡಕಟ್ಟಿ ಊಟವನ್ನು, .ಮನೆಗೆ ಬಂದಮೇಲೆ ಮಾಡಲು ಸುರುವಾಡಿ ಹಿರಿಯರಿಂದ ಬೈಸಿಕೊಂಡಿದ್ದೇವೆ! ಕೆಲವು ಕ್ರಿಕೆಟ್ ಬೌಲರುಗಳು ಬಾಲ್ ಮಾಡುವುದಕ್ಕೆ ಮುಂಚೆ ಬಾಲನ್ನು ಸಣ್ಣ ಪ್ರಮಾಣದಲ್ಲಿ ಹಾರಿಸಿ, (ಚಿನಿವಾರನು ನಾವುಕೊಟ್ಟ ಬಂಗಾರದ ಚೈನನ್ನು ಪರೀಕ್ಷಿಸುವಂತೆ) ಹಾರಿಸಿ ಹಿಡಿಯುವುದಿದೆ. ಹೀಗೆ ಊಟಮಾಡುವವರೂ ಪಿಂಡವನ್ನು ಹೀಗೆಯೇ ಹಾರಿಸಿ ಹಾರಿದಿ ಹಿದಿದು ಬಾಯಿಗೆ ತುರುಕುವುದಿದೆ. ಅಂದಹಾಗೆ ಆ ಹೋಟೆಲ್ ನ ಕೆಲಗಾರನಾಗಿದ್ದನೋ? ಆಡಿಗೆಯವನಾಗಿದ್ದನೋ? ನನಗೆ ಗೊತ್ತಿಲ್ಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.