ಮೊಬೆಲ್ ಗ್ರಾಹಕನ ಗೋಳು.

0

ಈ ದಿನಗಳಲ್ಲಿ ಮೊಬೆಲ್ ಫೋನ್ ಅನಿವಾರ್ಯ. ಈ ಕಾರಣದಿಂದಾಗಿ ನೆಮ್ಮದಿ ಕೆಡಿಸಲು ಬರುವ "ಕಂಪನಿಗಳ " ಎಸ್ ಎಮ್ ಎಸ್ ಗಳನ್ನು ಹಾಗೂ ಫೋನ್ ಕಾಲುಗಳನ್ನು ಅನಿವಾರ್ಯದಿಂದ ಸಹಿಸಿಕೊಂಡಿರುತ್ತೇನೆ.

ಇದು ಮುಫತ್ತಾಗಿ ಬರುತ್ತಿದ್ದರಿಂದ ನಾನು ಅದನ್ನು ಅಳಿಸಿ ಹಾಕಿ ಮರೆತು ಬಿಡುತ್ತೆನೆ.ಆದರೆ ಅದು ನನ್ನ ಬ್ಯಾಲೆನ್ಸಿಗೆ ಕೈಯನ್ನಿಕ್ಕಾಗ ಸುಮ್ಮನಿರಲು ಸಾಧವೇ?

ಕಳೆದವಾರದಿಂದ ಮೂರು ರೂಪಾಯಿ ಕಡಿತವಾದದ್ದಕ್ಕೆ ಪ್ರತಿ ಮೂರುದಿನಕ್ಕೆ ಒಂದು ಎಸ್ ಎಮ್ ಎಸ್ ಬರತೊಡಗಿದೆ. ಇದರ ಮೂಲದ ಉಲ್ಲೇಖವು ಇರುವುದಿಲ್ಲ ಹಾಗೂ ಇದು ಮೊಬೆಲ್ ದಲ್ಲಿ ಸೇವ್ ಆಗಿರುವುದಿಲ್ಲ...

ಕ್ರಿಕೆಟ್ ನ ಬಗ್ಗೆ ದಿನವೂ ಹತ್ತಾರು ಬಾರಿ ನನ್ನ ತಾಳ್ಮೆ ಗೆಡಿಸುತ್ತಿದ್ದ ಕಂಪನಿಯದ್ದು ಈ ಉಪಟಳವು. ಇರಬಹುದೆಂದು ಭಾವಿಸಿ, ಆ ಸಂಖ್ಯೆಗೆ "ಪ್ಲೀಸ್ ಡೋನ್ಟ್ ಸೆಂಡ ಎಸ್ ಎಮ್ ಎಸ್ ” ಎಂದು ಉತ್ತರಿದ್ದೆ. ತತ್ ಕ್ಷಣಕ್ಕೆ ನನಗೆ ಒಂದು ಮರು ಎಸ್ ಎಂ ಎಸ್ ಬಂತು ಸಂತಸದಿಂದ ಓದಿದರೆ ಅದರಲ್ಲಿ , " ನೀವು ಪಡೆದುಕೊಂಡ ಸೇವೆಗಾಗಿ ಎರಡು ರೂಪಾಯಿಗಳನ್ನು ನಿಮ್ಮ ಖಾತೆಗೆ ಕರ್ಚು ಹಾಕಲಾಗಿದೆ.” ಎಂದಿತ್ತು. - ಹೊಟ್ಟೆ ಉರಿದು ಹೋಯಿತು!!

ಸಹಾಯಕ್ಕಾಗಿ ನನ್ನ ಮೊಬಲಿಗೆ ಕೊಡಮಾಡ್ದಿದ ಗ್ರಾಹಕರ ಸೇವೆಗೆ (೯೪೦೦೦ ೨೪೩೬೫)ಗೆ ಮೊಬೆಲ್ ದಿಂದ ಫೋನಮಾಡಿದಾಗ "ಈ ನಂಬರ ಅಸ್ತಿತ್ವದಲ್ಲಿ ಇಲ್ಲ" ಎಂಬ ಉತ್ತರ ಬರುತ್ತದೆ. ಇದೇ ನಂಬರಿಗೆ ಲ್ಯಾಂಡ್ ಲೈನ್ ನಿಂದ ಫೋನ್ ಮಾಡಿದಾಗ ಕಂಪ್ಯೂಟರ್ ಉಲಿಯುವ "ಒಂದು ಒತ್ತಿ ಮೂರುವತ್ತಿ " ಇತ್ಯಾದಿಗಳನ್ನು ಪಾಲಿಸಿದರೂ ನನಗೆ ಬೇಕಾದ ಪರಿಹಾರ ದೊರಕಲಿಲ್ಲ.

ನಾನು ಬಿ ಎಸ್ ಎನ್ ಎಲ್ ಸೇವೆಯನ್ನು ಹೊರತುಪಡಿಸಿ ಬೇರೆ ಯಾವ ಕಂಪನಿಯ ಸೇವೆಗೂ ಚಂದಾದಾರನಾಗಿರುವುದಿಲ್ಲ.. ಹೀಗಾಗಿ ಪರಿಹಾರಕ್ಕಾಗಿ ಬಿ ಎಸ್ ಎನ್ ಎಲ್ ಖಚೇರಿಗೆ ಹೋದೆ. ಈ ಕುರಿತು ಸಹಕರಿದುವುದಾಗಿ ಹೇಳುತಲೇ, ತಮ್ಮ ಅಸಹಾಯಕತೆಯನ್ನು ವ್ಯಕ್ತ ಪಡಿಸುತ್ತ ಇಂತಹ ಘಟನೆಗಳು ಸಾಕಷ್ಟು ಸಂಖ್ಯೆಯಲ್ಲಿ ಘಟಿಸುತ್ತಿರುವುದಾಗಿ ಸಿಬ್ಬಂದಿಗಳು ಅಭಿಪ್ರಾಯ ಪಟ್ಟರು..

ನನ್ನ ಪ್ರಶ್ನೆ ಏನೆಂದರೆ ಗ್ರಾಹಕರ ಮೇಲೆ ಯಾರುಬೇಕಾದರೂ ಸವಾರಿ ಮಾಡಬಹುದೇ? ರಾಜಧಾನಿಯಲ್ಲಿ ಕುಳಿತ ಬಿ ಎಲ್ ಎನ್ ಎಲ್ ಅಧಿಕಾರಿಗಳಿಗೆ ಈ ಕುರಿತು ಯಾವುದೇ ತರಹದ ಹೊಣೆಗಾರಿಕೆಗಳು ಇಲ್ಲವೇ?

ಈ ರೀತಿ ಕನ್ನಕ್ಕೊಳಗಾಗುವವರು ಕೇವಲ ಬಿ ಎಸ್ ಎನ್ ಎಲ್ ಗ್ರಾಹಕರು ಮಾತ್ರವಲ್ಲ . ನಿನ್ನೆ ನನ್ನ ಹತ್ತಿರದವರೊಬ್ಬರ ಮೊಬೆಲ್ ಗೆ ಇದ್ದಕ್ಕಿದ್ದಂತೆ ಹದಿನೈದು ರೂಪಾಯಿ ಕಡಿತವಾಗಿದೆ.ಅದಕ್ಕೇನು ಕಾರಣವೋ ಗೊತಿಲ್ಲ.  ಊರಲ್ಲೇ ಚಿತ್ರ ಮಂದಿರಕ್ಕೆ ಹೋಗೆದೇ ಹತ್ತಿಪತ್ತು ವರ್ಷವಾದ ನನ್ನ ಅಣ್ಣನನಿಗೆ ದಿನಕ್ಕೆ ನಲವತ್ತು ರೂಪಾಯಿ ಕಡಿತವಾಗುತ್ತಿತ್ತು. ಅವನಿಗೆ ಲಂಡನ ಚಿತ್ರ ಮಂದಿರದಲ್ಲಿ ಚಿತ್ರ ಬಿಡುಗಡೆಯಾಗುದ್ದಕ್ಕೆ ಮಾಹಿತುಯು ಬರುತ್ತಿತ್ತು! ನನ್ನ ಭಾವನ ಮೊಬೆಲ್ ಗೆ ತಿಂಗಳ ನಲವತ್ತು ರೂಪಾಯಿ ಕಡಿತ ಬರುತ್ತಿತ್ತು. ಅದು ಅವನು ಆಲಿಸದೆ ಬೇರೆಯವರು ಆಲಿಸಲು ಉತ್ಸುಕರಾಗಿರದ ರಿಂಗ್ ಟೊನ್ ಗಾಗಿ ಆಗಿತ್ತು.

ಇದರಿಂದ ಪಾರಾಗಲು ಸುಲಭ ಉಪಾಯ ಎಂದರೆ ಹೊಸ ಸಿಮ್ ಹಾಕಿಕೊಳ್ಳುವುದು.! ಆದರೆ ಅನಂತರ ಸಾವಿರಾರು ಜನರಿಗೆ ಹೊಸ ಸಂಖ್ಯೆಯನ್ನು ತಿಳಿಸುವುದು ಅಸಾಧ್ಯದ ಮಾತು.!!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಬಹುಶಃ ಗೊತ್ತಿದ್ದೋ ಗೊತ್ತಿಲ್ಲದೆಯೋ ಏನಾದರೂ serviceಗಳನ್ನು ಹಾಕಿಕೊಳ್ಳುತ್ತೇವೆ. ಸಮಸ್ಯೆ ಪ್ರಾರಂಭವಾಗುವುದು ಅಲ್ಲಿಂದ. BSNL ಬಗ್ಗೆ ನನಗೆ ಗೊತ್ತಿಲ್ಲ.Airtel ಪ್ರಿಪೇಡ ಕಸ್ಟಮರ್ ಕೇರ್ ಚೆನ್ನಾಗಿಯೇ ಕೆಲಸ ಮಾಡುತ್ತದೆ. ಅದರಲ್ಲೂ ಹಣ ಒಂದು ವೇಳೆ ಹೋದರೂ ಅದಕ್ಕೆ ಕಾರಣ ಗೊತ್ತಾಗುತ್ತದೆ. ಸರಿಯಾಗಿ ಜಗಳ ಮಾಡಿದರೆ ಹಣ ವಾಪಾಸು ಬಂದಿದ್ದೂ ಉಂಟು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<<ಸರಿಯಾಗಿ ಜಗಳ ಮಾಡಿದರೆ ಹಣ ವಾಪಾಸು ಬಂದಿದ್ದೂ ಉಂಟು.>>>> ಸಂಯೋಶರವರೇ. ಯಾರೊಂದಿಗೆ ಜಗಳ ಆಡಬೇಕು ಎಂಬುದೇ ನನಗೆ ಗೊತ್ತಿಲ್ಲ. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಿ ಎಸ್ ಎನ್ ಎಲ್ ಕಸ್ಟಮರ್‍ ಕೇರ್‍ ನಂಬರ್‍ ಬದಲಾಗಿದೆ. 94000 24365 ಬದಲಿಗೆ 1503 ಡಯಲ್ ಮಾಡಬೇಕು. ನನಗಂತೂ ಈ ರೀತಿಯ ಯಾವುದೇ ತೊಂದರೆಗಳಿಲ್ಲ. -ಪ್ರಸನ್ನ.ಎಸ್.ಪಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಸನ್ನರವರೇ, ಕಸ್ಟಮರ ಕೇರ್ ನಂಬರ ಬದಲಾದದ್ದರ ಬಗೆಗೆ ಕಛೇರಿಯ ಅಧಿಕಾರಿಗಳಿಗೇ ಮಾಹಿತಿ ಇಲ್ಲ. :) ನೀವು ಕೊತ್ಟ ಸಂಖ್ಯೆಯನ್ನು ಪ್ರಯತ್ನಿಸಿ ನೋಡುತ್ತೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಸನ್ನರವರೇ, ೧೫೦೩ ಕ್ಕೆ ಫೋನಾಯಿಸಿದೆ. ಅಲ್ಲೂ ಒಂದು ಒತ್ತಿರಿ ಮೂರುವತ್ತಿರಿ ಇತ್ಯಾದಿ ಇನಿದನಿಯ ಉಲಿ ಬಂದಿತು. ಅಲ್ಲಿ ನನ್ನ ತೊಂದರೆಗೆ ಪರಿಯಾರ ಇಲ್ಲ. ನಾನು ಫೋನನ್ನು ಡಿಸ್ ಕನೆಕ್ಟ್ ಮಾಡಿದ ಕೂಡಲೇ ಒಂದು ಎಸ್ ಎಮ್ ಎಸ್ ಬಂದಿತು.--- ಅದರಲ್ಲಿ ಕರೆಮಾಡಿದ್ದಕ್ಕೆ ಧನ್ಯವಾದಗಳನ್ನು ತಿಳಿಸುತ್ತಾ, ಬಿ ಎಸ್ ಎನ್ ಎಲ್ ಸೇವೆಯ ತ್ರಪ್ತಿಯ ಬಗ್ಗೆ ನಾಲ್ಕು ಅಭಿಪ್ರಾಯ ತಿಳಿಸಲು ಸೂಚಿಸಿದ್ದಾರೆ. ೪ ೩ ೨ ೧ ಎಂದು ರೇಟಿಂಗನ್ನು ಆಯ್ಕೆಗಾಗಿ ಕೊಟ್ಟಿದ್ದಾರೆ. ನಾನು ೨ ನ್ನು ಆಯ್ಕೆ ಮಾಡಲೋ ೧ ನ್ನು ಆಯ್ಕೆ ಮಾಡಲೋ ಎಂದು ದ್ವಂದ್ವದಲ್ಲಿ ಬಿದ್ದು ಕೊನೆಗೆ ೧ ನ್ನೇ ಆಯ್ಕೆ ಮಾಡಿಕೊಂಡೆ. ಏಕೆಂದರೆ ಆಯ್ಕೆ ಎರಡರಲ್ಲಿ dissatisfied ಹಾಗೂ ಒಂದರಲ್ಲಿ very dissatisfied ಎಂದಿತ್ತು ಹೀಗಾಗಿ ಒಂದನ್ನು ಆಯ್ಕೆ ಮಾಡಿಕೊಂಡೆ. ಭಯದಿಂದಲೇ ಎಸ್ ಎಮ್ ಎಸ್ ಮಾಡಿದೆ ಏಕೆಂದರೆ ಎಲ್ಲಿ ನನ್ನ ಬ್ಯಾಲೆನ್ಸಿಗೆ ಪುನಃ ಕನ್ನ ಬಿದ್ದೀತೇ ಎಂಬ ಭಯ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

1503 ಗೆ ಕರೆಮಾಡಿ, ನಂತರ ಕನ್ನಡಕ್ಕೆ 1 ಒತ್ತಿರಿ, ಮೈನ್ ಮೆನುಗೆ 2 ಒತ್ತಿರಿ, ನಂತರ ಕಸ್ಟಮರ್‍ ಕೇರ್‍ ಅಧಿಕಾರಿಗಳ ಬಳಿ ಮಾತನಾಡಲು 9ನ್ನು ಒತ್ತಿರಿ. ಅವರಲ್ಲಿ ನಿಮ್ಮ ಸಮಸ್ಯೆ ಹೇಳಿ, ಅವರಿಂದ ಏನಾದರೂ ಉತ್ತರ ದೊರೆಯಬಹುದು. -ಪ್ರಸನ್ನ.ಎಸ್.ಪಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಸನ್ನರವರೇ, ಧನ್ಯವಾದಗಳು. ನೀವು ಹೇಳಿದಂತೆ ಮಾಡಿದಾಗ ಮಾತನಾಡಲೊಂದು ಮನುಷ್ಯ ಸಿಕ್ಕಿದ. ಅವನಿಗೆ ವಿವರಿಸಿದೆ. ಸರಿಸುಮಾರು ಅರ್ಧಗಂಟೆ ನಾನು ಲೈನನ್ನು ಹಿಡಿದುಕೊಳ್ಳಬೇಕಾಯಿತು. ಬೆಳಿಗ್ಗೆಯೇ ನನ್ನ ಮೊಬೆಲ್ ನಲ್ಲಿ ಬ್ಯಾಟರಿ ಕೊನೆಯ ಕಡ್ಡಿ ತೋರಿಸುತ್ತಿತ್ತು. ಹೀಗಾಗಿ ಚಾರ್ಜರ್ ಹಾಕಿಕೊಂಡೇ ಮಾತನಾಡಿದೆ. ನಾನು ಊಹಿಸಿದಂತೆ ಅದು ಕ್ರಿಕಟ್ಟಿನ ಆವಾಂತರ ಅಗಿತ್ತು. ಆ ಸಂಖ್ಯೆಗೆ unsub cri ಎಂದು ಕಳುಹಿಸಿದರೆ ಇನ್ನು ೨೪ ಗಂಟೆಯಲ್ಲಿ ಅದು de activate ಆಗುವುದಾಗಿ ಆತ ತಿಳಿಸಿದ್ದಾನೆ. ನಾನು ಅವನು ಹೇಳಿದಹಾಗೆ ಮಾಡಿದ್ದೇನೆ. .......ಕಾದು ನೋಡೋಣ. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಸನ್ನ, ನನ್ನದು ಏರ್ ಟೆಲ್ ಮೊಬೈಲ್. ನನಗೂ ಇದೇ ರೀತಿ ಎಸ್.ಎಮ್.ಎಸ್ ಗಳು ಬರುತ್ತಿದೆ. ಹಾಗೇ ಹಣ ಕಡಿತ ಮಾಡಲಾಗುತ್ತಿದೆ. ಒಮ್ಮೆ ಏರ್ ಟೆಲ್ನ ಕೇಂದ್ರ ಕಚೇರಿಗೆ ದೂರವಾಣಿ ಮುಖೇನ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಏನು ಮಾಡಬೇಕು ಹೇಳುತ್ತೀರಾ.p
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರೀಪೇಡ್ ಆದರೆ 9845098450, ಪೋಸ್ಟ್ ಪೇಡ್ ಆದರೆ 9845012345 ಕ್ಕೆ ಕರೆ ಮಾಡಿ ನೋಡಿ. ಅಥವಾ 121@airtelindia.com ಕ್ಕೆ ಒಂದು ಮೇಲ್ ಕಳುಹಿಸಿ ನೋಡಿ. ಏನಾದರೂ ಪರಿಹಾರ ಸಿಗಬಹುದು. http://www.airtel.in...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

೨೪ ಗಂಟೆಯ ಒಳಗೆ ಸಂಬಂಧ ಪಟ್ಟ ಎದ್ ಎಮ್ ಎದ್ ನಿಶ್ಕ್ರಿಯ ಗೊಳ್ಳುವುದಾಗಿ ತಿಳಿಸಿದ್ದರು. ಇಂದು ಸಾಯಂಕಾಲ್ ೧೭-೨೨ ಗಂಟೆಯವರೆಗೂ ಕ್ರಿಕೆಟ್ ನ ಮಾಹಿತಿ ಬರುತ್ತಲೇ ಇದೆ. - ಇನ್ನೂ ಕಾದು ನೋಡುತ್ತೇನೆ- ಅವಶ್ಯಬಿದ್ದರೆ ಮಾತನಾಡುವ ಗೊಂಬೆಯೊಂದಿಗೆ ಮಾತನಾಡಿ ವಿಚಾರಿಸಿಕೊಳ್ಳುತ್ತೇನೆ ಜೊತೆಗೆ ಮುಖ್ಯವಿಷಯ ಎಂದರೆ ಮೂರುದಿನಕ್ಕೆ ಈ ಹಿಂದೆ ಮೂರು ರೂಪಾಯಿಗಳಂತೆ ಖರ್ಚು ಬೀಳುತ್ತಿತ್ತು. ನಿನ್ನೆ ಮೂರುರೂಪಾಯಿ ಖರ್ಚು ಬಿದ್ದಿತ್ತು. ಇಂದೂ ಸಹ ಬೆಳಿಗ್ಗೆ ಮೂರು ರೂಪಾಯಿ ಖರ್ಚು ಬಿದ್ದಿದೆ. ನಿನ್ನೆ deactivate ಮಾಡಿದಾಗ ಎರಡು ರೂಪಾಯಿ ಖರ್ಚು ಬಿದ್ದಿದೆ. ನಾನು ಇಲ್ಲಿ ರೂಪಾಯಿಯ ಬಗ್ಗೆ ಕಾಳಜಿ ವಹಿಸಿ ಮಾತನಾಡುತ್ತಿಲ್ಲ. ಅದರೆ ಗ್ರಾಹಕನಮೇಲೆ ನಡೆಯುವ ಸವಾರಿಯಬಗ್ಗೆ ನನ್ನ ಕಾಳಜಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದು ವರೆಗೂ ಎದ್ ಎಮ್ ಎಸ್ ಬರುತ್ತಲೇ ಇದೆ. ಇಂದು ಮಧ್ಯಾಹ್ನ ಪುನಃ ಗ್ರಾಹಕರ ಸೇವೆಗೆ ಫೋನಾಯಿಸಿದೆ. ಒಂದು ಮಾತನಾಡುವ ಹೆಣ್ಣುಗೊಂಬೆ ಸಿಕ್ಕಿದಳು. ಪುನಃ ಅವಳೆದರು ನನ್ನ ಗೋಳುಗಳನ್ನು ಗಳಹಿದೆ. ನನ್ನ್ ಕಂಪ್ಲೇಂಟನ್ನು ದಾಖಲಿಸಿಕೊಂಡು ನನಗೆ ನಂಬರನ್ನು ಇತ್ತಿದ್ದಾಳೆ. ಇನ್ನು ಇಪ್ಪತ್ನಾಲ್ಕು ತಾಸು ಕಾದು ನೋಡಬೇಕು. ಇದುವುದರಲ್ಲೇ ನನಗೆ ಒಂದು ಸಮಾಧಾನ. ನನಗೆ ದಿನಕ್ಕೆ ಒಂದು ರೂಪಾಯಿಮಾತ್ರ್ ಕಡಿತವಾಗುತ್ತಿದೆ. ಕೆಲವರಿಗೆ ದಿನಕ್ಕೆ ಆರು ರೂಪಾಯಿ "ಚೌರ ' ಆಗುತ್ತಿರುವುದರ ಬಗ್ಗೆ ಇಂದಿನ ಸ್ಥಾನಿಕ ಪತ್ರಿಕೆಯಲ್ಲಿ ಬಂದಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<<<ಇರುವುದರಲ್ಲೇ ನನಗೆ ಒಂದು ಸಮಾಧಾನ. ನನಗೆ ದಿನಕ್ಕೆ ಒಂದು ರೂಪಾಯಿಮಾತ್ರ್ ಕಡಿತವಾಗುತ್ತಿದೆ.>>>> ಸಾಯಂಕಾಲದವರೆಗೆ ಈ ಸಮಾಧಾನ ಉಳಿಯಲಿಲ್ಲ. ಸಾಯಂಕಾಲ ಮೂರು ರೂಪಾಯಿ ಕದಿತವಾದದ್ದಕ್ಕೆ ಎಸ್ ಎಮ್ ಎಸ್ ಬಂದಿರುತ್ತದೆ!! ಈಗ ಮೂರುದಿವಸಗಳಿಂದ ದಿನವೂ ಮೂರು ರೂಪಾಯಿ ಕಡಿತವಾಗುತ್ತಿದೆ. ಇದುವರೆಗೂ ಎಸ್ ಎಮ್ ಎಸ್ ಬರುತ್ತಲೇ ಇದೆ. ಕಾದು ನೋಡಬೇಕಾಗಿದೆ-- ಇನ್ನೂ ೨೪ ತಾಸು ಆಗಿಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂದು ಸಾಯಂಕಾಲದವರೆಗೂ ಎಸ್ ಎಮ್ ಎಸ್ ಬರುತ್ತಲೇ ಇದೆ. ಹೀಗಾಗಿ ಕಷ್ಟಮರ್ ಕೇರ್ ಗೆ ಫೋನಾಯಿಸಿ. ನಿನ್ನೆ ಕೊಟ್ಟ ಕಮ್ಪ್ಲೇಟ್ ನಂಬರ ತಿಳಿಸಿದೆ. ಅವನು ಹತ್ತು ಮಿನಿಟ್ಟು ನನ್ನನ್ನು ಕಾಯಿಸಿ. "ನಿಮ್ಮ ಮೊಬೆಲ್ ಗೆ ಯಾವುದೇ ದುಡ್ಡು ಕಡಿತವಾಗುತ್ತಿಲ್ಲವಲ್ಲ" ಎಂದು ಉತ್ತರಿಸಿದ. ಸುಳುಸುಳ್ಳೆ ನಿಮಗೆ ಫೋನ್ ಮಾಡಲು ನನಗೇನು ಹುಚ್ಚೇ ? (ನಿಜವಾಗಿಯೂ ನನಗೆ ಆಗ ಹುಚ್ಚು ಹಿಡಿದಿತ್ತು!!) ಎಂದು ಕೇಳಿದೆ. ಅವನು ತನ್ನ ಮೇಲಾಧಿಕಾರಿಗೆ ಫೋನನ್ನು ವರ್ಗಾಯಿಸಿದ. "ನೀವು ಈಗ ಕ್ಯೂದಲ್ಲಿ ಇದ್ದೀರಿ" ಎಂದು ಮೂರು ಭಾಷೆಗಳಲ್ಲೂ ಸರದಿಯಲ್ಲಿ ಫೋನು ಉಲಿಯುತ್ತಲೇ ಇತ್ತು. ಇಪ್ಪತ್ತು ನಿಮಿಷಗಳ ಈ ಶಿಕ್ಷ್ಹೆಯ ನಂತರ ಹಿರಿಯಧಿಕಾರಿ ಹೇಳಿದ "ನೀವು ಸ್ಮಾಲ್ ಲೆಟರ ದಲ್ಲಿ unsub cri ಎಂದು ಕಳುಹಿಸಿರಬೇಕು. ಈಗ ದೊಡ್ಡ ಅಕ್ಷರಗಳಲ್ಲಿ ಬರೆದು ಕಳುಹಿಸಿ." ಎಂದು ಉಪದೇಶಿಸಿದ. ಹೀಗೆ ಏಕೆ ಆಯಿತು ಎಂದು ಕೇಳಿದರೆ ಆತನಲ್ಲ್ಲಿ ಉತ್ತರವಿಲ್ಲ.- ಅವರೂ ಅಸಹಾಯಕರು . ಈ ಸನ್ನಿಬೇಶಕ್ಕೆ ಒಂದು ಒಳ್ಳೆಯ ಅತಿ ಕೆಟ್ಟ ಪದವನ್ನು ಉಪಯೋಗಿಸಲು ಹೊರಟರೆ ತಾ ಮುಂದು ತಾಮುಂದು ಎಂದು ಹತ್ತಾರು ಪದಗಲು ಓಡಿ ಬಂದವು. ಹೀಗಾಗಿ ಸುಮ್ಮನಾಗಿದ್ದೇನೆ ನಾಳೆ ಸಾಯಂಕಾಲದವರೆಗೂ ಕಾಯುತ್ತೇನೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿನ್ನೆ ರವಿವಾರವಾದುದ್ದರಿಂದ ನಾನೂ ರಜೆ ತೆಗೆದುಕೊಂಡೆ. ಆದರೆ ಕಡಿತವು ವಿಷಮ ಶೀತ ಜ್ವರ ಏರಿದ ಹಾಗಿ ಆರು ರೂಪಾಯಿಗೆ ಏರಿದೆ. ಇಂದು ಕಸ್ಟಮರ ಕೇರಿಗೆ ಫೋನ್ ಮಾಡಿದೆ. ಆತ "ಕ್ಯಾರೇsssss" ಅನ್ನಲಿಲ್ಲ. ತನ್ನ ಸರ್ವರ ಕೆಟ್ಟಿದ್ದಕ್ಕೆ ಗೋಳೋ ಅಂತ ಅತ್ತ. "ಉಪ್ಪಿನವನು ಅತ್ತಿದ್ದಕ್ಕೆ ತಿಂಗಿನಕಾಯಿವನೂ ಅತ್ತನಂತೆ." "ನಿಂದು ಸರಿಯಾದಮೇಲೆ ನನಗೆ ನೀನೇ ಫೋನ್ ಮಾಡು ಎಂದು" ಹೇಳಿದ್ದೇನೆ. ಪರಿಣಾಮ ನಿರೀಕ್ಷಿತ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಾರ್‍, ನಿಮ್ಮದು ಪ್ರೀ ಪೇಡ್ ಕನೆಕ್ಷನ್ ಅದರೆ ಒಂದೇ ಸಲಕ್ಕೆ ಇದ್ದ ಬದ್ದ ಬ್ಯಾಲೆನ್ಸ್‌‌ಎಲ್ಲಾ ಖಾಲಿ ಮಾಡಿಬಿಡಿ. ಆಮೇಲೆ ಒಂದು ವಾರ ಕರೆನ್ಸಿ ಹಾಕಿಸಬೇಡಿ. ಮೆಸೇಜ್ ಬರೋದು ತಾನಾಗಿಯೇ ನಿಂತು ಹೋಗುತ್ತೆ. ಆಮೇಲೆ ಸ್ವಲ್ಪ ಕರೆನ್ಸಿ ಹಾಕಿಸಿ. ತದನಂತರವೂ ಮೆಸೇಜ್ ಬಂದು ದುಡ್ಡು ಕಡಿತವಾದರೆ, UNSUB CRI ಕಳುಹಿಸಿ ನೋಡಿ. ಯಾವುದಕ್ಕೂ ಮತ್ತೊಮ್ಮೆ ಕಸ್ಟಮರ್‍ ಕೇರ್‌ಗೆ ಕರೆಮಾಡಿ ವಿಚಾರಿಸಿ. -ಪ್ರಸನ್ನ.ಎಸ್.ಪಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಸನ್ನನವೆರೇ, ನಿಮ್ಮ ಈ ಸಲಹೆ <<<<ಒಂದೇ ಸಲಕ್ಕೆ ಇದ್ದ ಬದ್ದ ಬ್ಯಾಲೆನ್ಸ್‌‌ಎಲ್ಲಾ ಖಾಲಿ ಮಾಡಿಬಿಡಿ>>>> ಬಲು ಕಷ್ಟದ್ದಾಗಿದೆ. ಹಾಲಿ ಇರುವ ಬ್ಯಾಲೆನ್ಸನ್ನು ಖರ್ಚುಮಾಡಲು ನಾನು ಹೆಚ್ಚುಕಡಿಮೆ ಏಳು ಗಂತೆಯಷ್ಟು ಮಾತನಾಡಬೇಕಾಗಿ ಬರುತ್ತಿದೆ. ನನ್ನ ಗೊಳಿನಬಗ್ಗೆ ಸ್ಪಂದಿಸಿದ್ದಕ್ಕೆ ಧನ್ಯವಾದಗಳು. ಎಸ್ ಎಮ್ ಎಸ್ ಬರುತ್ತಲೇ ಇದೆ. ಆದರೆ ನಿನ್ನೆ ಕಡಿತವಾಗಿದೆಯೋ ಇಲ್ಲವೋ ಗೊತ್ತಾಗಲಿಲ್ಲ. ನಾನು ಅಜಾಗರೂಕತೆಯಿಂದ ಮೊಬೆಲ್ ನ್ನು ಓಪನ್ ಮಾಡಿದಾಗೆ ಸ್ಕ್ರೀನಿನ ಮೇಲಿರುವ ಬರೆಯಗಳು ಅಳಿಸಿಹೋದವು ಅದು ಏನಾಗಿತೆಂಬುದು ಗೊತ್ತಾಗಲಿಲ್ಲ ಏಕೆಂದರೆ ಫೋಣಿನಲ್ಲಿ ಮಾತನಾದಿ ಕಟ್ ಮಾಡಿದ ತಕ್ಷಣ ಸ್ಕ್ರೀನಿನ ಮೇಲೆ ಆ ಈ ಕರೆಗೆ ಆದ ವೆಚ್ಚ ಹಾಗೂ ಖಾತೆಯಲ್ಲಿ ಉಳಿದ ಹಣದ ವಿವರಗಳು ಅದರ ಮೇಲೆ ದಾಖಲಾಗಿರುತ್ತವೆ. ನನ್ನ ಮೊಬೆಲ್ ಈಗ ಆಟೋ ಲಾಕ್ ಆಗುವುದಿಲ್ಲ. ಈ ಸುವಾರ್ತೆಯನ್ನು ಓದುವವೆಗೂ ಅದು ಅಲ್ಲೇ ಇರುತ್ತದೆ. ಇದೊಂದು ತಲೆ ಹಾಳು ಮಾಡುವ ಸೌಲಭ್ಯವಾಗಿದೆ. >>>>UNSUB CRI ಕಳುಹಿಸಿ ನೋಡಿ>>> ಈಗಾಗಲೇ ಎರಡುಸಾರೆ ಕಳುಹಿಸಿದ್ದೇನೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮ್ಮಪ್ಪನ ಮೊಬೈಲಿನಲ್ಲೂ ಇದೇ ರೀತಿ ಆಗಿತ್ತು. ಬಹಳ ಕಷ್ಟ ಪಟ್ಟು ಪರಿಹರಿಸಿದ್ವಿ :) - ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ತೊಂದರೆಗೆ ದೂರು ನೀಡಲು ಈ ಜಾಲಕೊಂಡಿಯಲ್ಲಿ ಸಹಾಯ ಸಿಗಬಹುದು. ಇದು TRAI ನ ಜಾಲತಾಣ. http://www.trai.gov.... ಈ pdf ನಲ್ಲಿ ದೂರು ನೀಡಬಹುದಾದ ಅಧಿಕಾರಿಗಳ ಸಂಖ್ಯೆಗಳಿವೆ. http://www.trai.gov....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೊಂಡಿ ನೀಡಿದ್ದಕ್ಕೆ ಧನ್ಯವಾದಗಳು. ಪುರುಸೊತ್ತು ಮಾಡೆಇಕೊಂಡು ಪ್ರಯತ್ನಿಸುತ್ತೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಳೆದ ಮೂರು ದಿನಗಳಿಂದ ಕನ್ನ ಬೀಳುತ್ತಾ ಇಲ್ಲ ಎಸ್ ಎಮ್ ಎಸ್ ಬರುವುದೂ ನಿಂತಿದೆ. ಪ್ರತಕ್ರಿಯಿಸಿದ ಸರ್ವರಿಗೂ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.