ನಾ ಕಳೆದುಹೋದೇನು....

4

ಮನಸಿದು ನನ್ನದು
ಪುಟ್ಟ ಕಂದಮ್ಮನಂತೆ.
ಮುಗ್ಧತೆಯೇ ಎಲ್ಲಾ
ಇನಿತೂ ಕಪಟವಿಲ್ಲ.

ಪುಟ್ಟ ಅಂಗಳದಲ್ಲಿನ
ವಿಹಾರ ಮುಗಿದಾಯ್ತು.
ಪ್ರಪಂಚದೊಳು ಕಾಲಿಡುವ
ಸಮಯ ಬಂದಾಯ್ತು.

ಮನೆಯಿಂದಾಚೆ
ಕಾಲಿರಿಸಲೂ ಅಂಜಿಕೆ.
ಕಾಣದ ಲೋಕವಿದು
ನಾ ಎದುರಿಸಲಿ ಹೇಗೆ?

ಹೊರಗೆ ಕತ್ತಲಲ್ಲೂ ಹೊಳೆವ
ಮಿಣುಕು ದೀಪಗಳ ಮಾಯೆಯೊಳಗೆ
ನಾ ಕುರುಡಿಯಾದೇನು.

ಕ್ಷಣಕೊಂದರಂತೆ ಬದಲಾಗುವ
ಬಿನ್ನಾಣದ ಮಾತುಗಳ ನಡುವೆ
ನಾ ಮೂಕಿಯಾದೇನು.

ಪರಿಚಿತರೂ ಅಜ್ಞಾತರಂತಿರುವ
ಸ್ವಾರ್ಥ ಜನರ ನಡುವೆ
ನಾ ಕಳೆದುಹೋದೇನು.

ನಂಬಿಹೆನು ನಾನು
ಆಸರೆಯು ನೀನೆಂದು.
ಈ ಕ್ರೂರ ಲೋಕದೊಳು
ಬೆಂಗಾವಲೆನಗೆಂದು.

ಹಿಡಿಯುವೆನು ಬಿಗಿಯಾಗಿ
ನಾ ನಿನ್ನ ಕೈಯನ್ನು.
ನಡೆಯದಿರು ದೂರಾಗಿ
ಸಡಿಲಿಸಿ ಹಿಡಿತವನ್ನು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಇಂದುಶ್ರೀ ಯವರೆ, ನಿಮ್ಮ ಕವನ ಇಷ್ಟವಾಯಿತು. <<ಪರಿಚಿತರೂ ಅಜ್ಞಾತರಂತಿರು ಸ್ವಾರ್ಥ ಜನರ ನಡುವೆ ನಾ ಕಳೆದುಹೋದೇನು.>.> ಈ ಸಾಲು ತುಂಬಾ ಇಷ್ಟವಾಯಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಾವಾರ್ಥ ಚೆನ್ನಾಗಿ ಮೂಡಿ ಬಂದಿದೆ ಸುಂದರ ಕವಿತೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ <<ಹಿಡಿಯುವೆನು ಬಿಗಿಯಾಗಿ ನಾ ನಿನ್ನ ಕೈಯನ್ನು. ನಡೆಯದಿರು ದೂರಾಗಿ ಸಡಿಲಿಸಿ ಹಿಡಿತವನ್ನು>> ಈ ಕವನವನ್ನು ನಿಮ್ಮ ತ೦ದೆಯವರನ್ನುದ್ದೇಶಿಸಿ ಬರೆದದ್ದು ಹೌದೇ(?) . ಅದಕ್ಕುತ್ತರ ಕೈ ಹಿಡಿಸು ನಡೆಸಲು ನೀನೀಗ ಮಗುವಲ್ಲ ಮಗಳೇ ನಿನಗೆ ನಿನ್ನದೇ ವ್ಯಕ್ತಿತ್ವವಿದೆ ಜವಾಬ್ದಾರಿಯಿದೆ ಅಷ್ಟನ್ನೂ ನಿನಗೆ ಹೇಳಿಕೊಟ್ಟಿದ್ದೇನೆ ಇನ್ನು ನೀನು ನಿನ್ನದೇ ಕಣ್ಣಲ್ಲಿ ಜಗವ ನೋಡು ಮತ್ತು ಅಳೆದುಬಿಡು ಸುತ್ತ ಕಾಣುವ ಮ೦ದಿ ಕಣ್ಣೊಳ ಬೀಳುವ ಧೂಳೂ ಹೌದು ಆನ೦ದ ಬಾಷ್ಪವೂ ಹೌದು ಧೂಳನ್ನು ತೆಗೆಯುವ ಕೈ ನಿನ್ನದು ಬೀಳದ೦ತೆ ತಡೆಯಿಡಿಯುವ ಮನವೂ ನಿನ್ನದು ನಾನು ಕೇವಲ ನೋಡುಗ ಮತ್ತು ಪುಟ್ಟ ನಿರ್ದೇಶಕ ನಟನೆ ನಿನ್ನದು ಫಲವೂ ನಿನ್ನದು ಹೊರಗೆಲ್ಲೂ ಹೋಗದಿರು ಮಗಳೇ ಕತ್ತಲಿದೆ ಎನ್ನುವ ಕಾಲ ಇನ್ನಿಲ್ಲ ನೀನೀಗ ಪ್ರಬುದ್ಧೆ ಮತ್ತು ನನ್ನ ಹಾಗೆಯೇ ನಿನ್ನ ಮನವೂ ಎಚ್ಚರಿಕೆಯ ಗೂಡು ಮುಖವಾಡಗಳ ನಡುವೆ ಮೂಕಿಯಾಗದಿರು. ಮತ್ತು ಮುಗ್ಧೆಯಾಗದಿರು. ಕಾಣು ಎಲ್ಲವನು ಕಣಸಿಸು ಎಲ್ಲವನು ನೀ ನೀನಾಗಿರು ನಾ ಇದ್ದರೂ ಇಲ್ಲದಿದ್ದರೂ ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂದುಶ್ರೀ, ಈ ಅಂಜಿಕೆ ಅನುಮಾನಗಳು ಸ್ವಾಭಾವಿಕ ಇವುಗಳಿಲ್ಲದೇ ಇದ್ದಲ್ಲಿ ಅದು ಅಸ್ವಾಭಾವಿಕ ಇದೀಗ ಮುಂಜಾನೆ, ನಿಮ್ಮ ಈ ಸುಂದರ ಕವನವನ್ನು ಓದಿ ಮುದಗೊಂಡು, ವಿಚಾರಮಗ್ನವಾದ ಆಸುಮನದಲ್ಲಿ ಮೂಡಿದ ಭಾವನೆಗಳಿಗೆ, ಅಕ್ಷರಗಳ ರೂಪ ಕೊಟ್ಟಾಗ ಈ ಪುಟ ತೆರೆದುಕೊಂಡಿತು. ಒಮ್ಮೆ ಓದಿ ನೋಡಿ. http://sampada.net/b... - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧೈರ್ಯವಿರಲಿ,ಅ೦ಜಿಕೆ ಬೇಡ. ಚೆ೦ದದ ಮನಸ್ಸಿನ ಭಾವನೆಗಳನ್ನು ನೇರವಾಗಿ ತೆರೆದಿಟ್ಟ ಸಾಲುಗಳು. ಇಷ್ಟವಾಯ್ತು. ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಚೆನ್ನಾಗಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಉತ್ತಮ ಪದ ಪುಂಜಗಳ ಪ್ರಯೋಗ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

@ ಭಾಗ್ವತ @ಗೋಪಿನಾಥ್ @ಗೋಪಾಲ್ @ರಘು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು @ಕವಿನಾಗರಾಜ್ :-) @ಹರೀಶ್ ಮುಗ್ಧತೆಯನ್ನು ಉಳಿಸಿಕೊಂಡೇ ವಿಶ್ವಾಸ ಪಡೆದು ಮುಂದೆ ಹೋಗ್ತೀನಿ @ಆಸು ಹೆಗ್ಡೆ ಸಜ್ಜನ ಸದ್ಗ್ರಂಥಗಳ ಸಾಮೀಪ್ಯದಲಿದ್ದು ವಿಮರ್ಶಾ ಶಕ್ತಿ ಬೆಳೆಸಿಕೊಂಡು ಆ ಸರ್ವಶಕ್ತನ ಆಸರೆಯನ್ನು ನಂಬಿ ದಿಟ್ಟ ಹೆಜ್ಜೆಯಿಡುತ್ತೇನೆ. @ರಾಘವೇಂದ್ರ ಸರಿ ಧೈರ್ಯದಿಂದಿರುತ್ತೇನೆ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.