ಯೋಚಿಸಿ ಮಿಸ್ಡ್ ಕಾಲ್ ಕೊಡುವ ಮುನ್ನ

4.4

"ಮನೆ ಹತ್ರ ಬಂದಾಗ ಒಂದು ಮಿಸ್ಡ್ ಕಾಲ್ ಕೊಡು. ನಾ ಬಂದು ನಿನ್ನ ಭೇಟಿಯಾಗ್ತೀನಿ"
"ಬೆಳಿಗ್ಗೆ ಬೇಗ ಹೊರಡಬೇಕು. ನಾನು ಬೇಗ ಏಳೊಲ್ಲ. ನಿಂಗೆ ಎಚ್ಚರ ಆದ್ರೆ ೫ ಗಂಟೆಗೆ ಮಿಸ್ಡ್ ಕಾಲ್ ಕೊಡ್ತೀಯಾ?"
"ನಾನು ವಿಜಯನಗರಕ್ಕೆ ಬಂದಾಗ ಮಿಸ್ಡ್ ಕಾಲ್ ಕೊಡ್ತೀನಿ.ಆಗ ನೀನು ಮನೆಯಿಂದ ಹೊರಡು."
ಹೌದಲ್ಲ... ಇದು ನಾವು ಸಾಮಾನ್ಯವಾಗಿ ಹೇಳುವ ಮಾತು. ಸುಮ್ನೆ ಸಿಗ್ನಲ್ ಕೋಡೋದಕ್ಕೆಲ್ಲಾ ಯಾಕೆ ದುಡ್ಡು ದಂಡ ಮಾಡೋದು ಅಂತ. ೧ ಸೆಕೆಂಡಿಗೆ ೧ ಪೈಸೆ ಚಾರ್ಜ್ ಮಾಡಿದ್ರೂ ಅದನ್ನು ಕಳೆದುಕೊಳ್ಳೋಕೂ ನಾವು ತಯಾರಿಲ್ಲ. ಆದ್ರೆ ಒಂದು ಮಿಸ್ಡ್ ಕಾಲ್ ನಮ್ಮ ಮೊಬೈಲ್ ಇಂದ ನಮ್ಮ ಸ್ನೇಹಿತರ ಮೊಬೈಲ್ ಗೆ ಹೋಗೋದಕ್ಕೆ ಏನೆಲ್ಲಾ ಕೆಲಸಗಳು ನಡೆಯುತ್ತವೆ ಗೊತ್ತಾ?
 
ಮೊಬೈಲ್ ಉಪಕರಣ ತರಂಗಗಳ ಮೂಲಕ ನಮ್ಮ ಮಾತನ್ನು ರವಾನಿಸುತ್ತದೆ ಎಂಬುದು ಬಹುತೇಕರಿಗೆ ಗೊತ್ತು. ಆದರೆ ನಮ್ಮ ಮೊಬೈಲ್ ಇಂದ ಕರೆ ಮಾಡುತ್ತಿರುವವರ ಮೊಬೈಲ್ ವರೆಗೆ ಸಂದೇಶಗಳು ಕೇವಲ ತರಂಗಗಳ ಮೂಲಕ ಗಾಳಿಯಲ್ಲೇ ಹೋಗುತ್ತಾ? ಇದಕೆ ಉತ್ತರ "ಇಲ್ಲ". ಹಾಗಿದ್ರೆ ಮೊಬೈಲ್ ಇಂದ ಮೊಬೈಲ್ ಗೆ ಸಂಪರ್ಕ ಹೇಗೆ? ನಮ್ಮಲ್ಲನೇಕರು ಬಳಸುತ್ತಿರುವ ಜಿ.ಎಸ್.ಎಂ(Global System for Mobile communication) ತಂತ್ರಜ್ಞಾನದಲ್ಲಿ ಮೊಬೈಲ್ ದೂರ‍ಸಂಪರ್ಕ ಸೇವೆ ಲಭಿಸುವುದು ಹೀಗೆ.....

ಮೊಬೈಲ್ ಬಳಕೆ ಪ್ರಾರಂಭವಾದಾಗ ಒಂದು ಅತಿ ಶಕ್ತಿಶಾಲಿ ಆಂಟೆನಾದ ಮೂಲಕ ಸುಮಾರು ೫೦ ಕಿ.ಮೀ. ದೂರದವರೆಗೆ ಸಂದೇಶಗಳನ್ನು ಬ್ರಾಡ್ ಕಾಸ್ಟ್ ಮಾಡಲಾಗುತ್ತಿತ್ತು. ಆದರೆ ಸೆಲ್ಯುಲಾರ್ ತಂತ್ರಜ್ಞಾನದ ಅಭಿವೃದ್ಧಿಯಿಂದ ಒಂದು ಶಕ್ತಿಶಾಲಿ ಆಂಟೆನಾದ ಬದಲಿಗೆ ಅನೇಕ ಕಡಿಮೆ ಶಕ್ತಿಯ ಆಂಟೆನಾಗಳಿಂದ ವ್ಯಾಪ್ತಿ ಪ್ರದೇಶದೊಳಗಿನ ಗ್ರಾಹಕರನ್ನು ತಲುಪುವ ವ್ಯವಸ್ಥೆ ಆರಂಭವಾಯಿತು. ಇಂಥ ಒಂದು ಕಡಿಮೆ ಶಕ್ತಿಯ ಆಂಟೆನಾದಿಂದ ಸಂಪರ್ಕ ಸೇವೆ ಪಡೆಯುವ ಒಂದು ಭೌಗೋಳಿಕ ಪ್ರದೇಶಕ್ಕೆ "ಸೆಲ್" ಎಂದು ಹೆಸರು. ಹಾಗೆ ಈ ಆಂಟೆನಾ ಹಾಗೂ ಅದಕ್ಕೆ ಸಂಬಂಧಿಸಿದ ಸಿಗ್ನಲ್ ಪ್ರೊಸೆಸಿಂಗ್ ಹಾರ್ಡ್ ವೇರ್ ಗೆ ಬೇಸ್ ಟ್ರಾನ್ಸೀವರ್ ಸ್ಟೇಷನ್(BTS) ಎಂಬ ಹೆಸರು.ಒಂದು ಅಥವಾ ಅದಕ್ಕಿಂತ ಹೆಚ್ಚು BTS ಗಳನ್ನು ನಿಯಂತ್ರಿಸುವುದು ಬೇಸ್ ಸ್ಟೇಷನ್ ಕಂಟ್ರೋಲರ್ (BSC) . ಹಲವಾರು BSCಗಳಿಂದ ಪಡೆದ ವಿವರಗಳ ಆಧಾರದ ಮೇಲೆ ಕರೆ ಪೂರ್ಣಗೊಳಿಸುವುದು ಮೊಬೈಲ್ ಸ್ವಿಚಿಂಗ್ ಸೆಂಟರ್ (MSC). ಇಲ್ಲಿ ಕೇವಲ BTS ಮತ್ತು ಮೊಬೈಲ್ ನಡುವೆ ಮಾತ್ರ ಗಾಳಿಯಲ್ಲಿ ತರಂಗಗಳ ಮೂಲಕ ಸಂದೇಶ ರವಾನೆಯಾಗುತ್ತದೆ.

ಗ್ರಾಹಕರಿಗೆ ಮೊಬೈಲ್ ಸೇವೆ ಒದಗಿಸುವ ಪ್ರತಿಯೊಂದು ನೆಟ್ ವರ್ಕ್ ತನ್ನದೇ ಆದ BTS, BSC ಹಾಗೂ MSCಗಳನ್ನು ಹೊಂದಿರುತ್ತದೆ. ಒಂದು ನೆಟ್ ವರ್ಕ್ ನ MSC ತನ್ನ ನೆಟ್ ವರ್ಕಿನ ಇತರೆ MSCಗಳೊಂದಿಗೆ ಹಾಗೂ ಇತರೆ ಮೊಬೈಲ್ ಹಾಗೂ ಸ್ಥಿರ ದೂರವಾಣಿ ಸಂಪರ್ಕಗಳ ಎಕ್ಸ್ ಚೇಂಜ್ ಗಳೊಂದಿಗೆ ಸಂಪರ್ಕ ಸಾಧಿಸುತ್ತದೆ.ಇದಲ್ಲದೇ ಪ್ರತಿಯೊಂದು ನೆಟ್ ವರ್ಕ್ ತನ್ನದೇ ಆದ ಕೆಲವು ಮಾಹಿತಿಗಳನ್ನು ಹೋಂ ಲೊಕೇಶನ್ ರೆಜಿಸ್ಟರ್(HLR) ಹಾಗೂ ವಿಸಿಟರ್ ಲೊಕೇಶನ್ ರೆಜಿಸ್ಟರ್(VLR) ನಲ್ಲಿ ಹೊಂದಿರುತ್ತವೆ.ಅನೇಕ MSCಗಳು ಕಾರ್ಯ ನಿರ್ವಹಿಸುತ್ತಿರುವ ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶದಲ್ಲಿನ ಎಲ್ಲಾ ಗ್ರಾಹಕರ ಮಾಹಿತಿಯನ್ನು  HLR ಹೊಂದಿದ್ದರೆ, ಒಂದು MSCಯ ವ್ಯಾಪ್ತಿಗೊಳಪಡುವ ಭೌಗೋಳಿಕ ಪ್ರದೇಶದಲ್ಲಿ ಆ ಸಮಯದಲ್ಲಿರುವ ಗ್ರಾಹಕರ ಮಾಹಿತಿಯನ್ನು VLR ಹೊಂದಿರುತ್ತದೆ.ಪ್ರತಿಯೊಂದು MSCಯೊಂದಿಗೆ ಒಂದು VLR ಇರುತ್ತದೆ.ಯಾವ ಗ್ರಾಹಕ ಯಾವ MSC-VLR ಗೆ ಸೇರಿದ ಪ್ರದೇಶದಲ್ಲಿದ್ದಾನೆ ಎಂಬುದು HLR ಗೆ ತಿಳಿದಿರುತ್ತದೆ. ಗ್ರಾಹಕರಿಗೆ ಸೇವೆ ಒದಗಿಸಲು ಬೇಕಾದ ಎಲ್ಲಾ ಮಾಹಿತಿಗಳನ್ನು HLRನಿಂದ VLR ಪಡೆಯುತ್ತದೆ.

ಪ್ರತಿಯೊಂದು ಅಧಿಕೃತ ಮೊಬೈಲ್ ಹ್ಯಾಂಡ್ ಸೆಟ್ ೧೫ ಅಂಕಿಗಳ IMEI (ಇಂಟರ್ನ್ಯಾಷನಲ್ ಮೊಬೈಲ್ ಎಕ್ವಿಪ್ ಮೆಂಟ್ ಐಡೆಂಟಿಫಿಕೇಶನ್) ನಂಬರ್ ಹೊಂದಿರುತ್ತದೆ. (ನಿಮ್ಮ ಮೊಬೈಲಿನ IMEI ನಂಬರ್ ತಿಳಿಯಲು *#೦೬# ಡಯಲ್ ಮಾಡಿ) . ಎಲ್ಲಾ ಅಧಿಕೃತ ಮೊಬೈಲ್ ಹ್ಯಾಂಡ್ಸೆಟ್ ಗಳ IMEI ನಂಬರ್ ಎಕ್ವಿಪ್ ಮೆಂಟ್ ಐಡೆಂಟಿಫಿಕೇಶನ್ ರೆಜಿಸ್ಟರಿನಲ್ಲಿ( EIR) ದಾಖಲಾಗಿರುತ್ತದೆ. ಮೊಬೈಲ್ ಗ್ರಾಹಕರನ್ನು ಗುರುತಿಸಲು ಪ್ರತಿ ಸಿಮ್ ಕಾರ್ಡ್ ೧೫ ಅಂಕಿಗಳ IMSI(ಇಂಟರ್ನ್ಯಾಷನಲ್ ಮೊಬೈಲ್ ಸುಬ್ಸ್ ಕ್ರೈಬರ್ ಐಡೇಂಟಿಫಿಕೇಶನ್) ನಂಬರ್ ಹೊಂದಿರುತ್ತದೆ. ಇದೇ ನಂಬರ್ ಅಥೆಂಟಿಕೇಶನ್ ಸೆಂಟರ್( AUC) ನಲ್ಲಿಯೂ ದಾಖಲಾಗಿರುತ್ತದೆ.

ನಾವು ಒಂದು ನೆಟ್ ವರ್ಕ್ ಇಂದ ಸೇವೆ ಪಡೆಯಲು ಅರ್ಜಿ ಸಲ್ಲಿಸಿ ಸಿಮ್ ಕಾರ್ಡ್ ಪಡೆದಾಗ ನಮ್ಮ ವಿವರಗಳು,ನಾವು ಪಡೆದಿರುವ ಸರ್ವೀಸಸ್ ನ ವಿವರಗಳು ಹಾಗೂ ನಾವು ಸಬ್ಸ್ ಕ್ರೈಬ್ ಮಾಡಿರುವ ಪ್ಲಾನ್ ಎಲ್ಲಾ ಆ ನೆಟ್ ವರ್ಕಿನ ಹೋಂ ಲೊಕೇಶನ್ ರೆಜಿಸ್ಟರಿನಲ್ಲಿ(HLR) ದಾಖಲಾಗುತ್ತದೆ. ನಮ್ಮ ಮೊಬೈಲ್ ಉಪಕರಣದೊಳಗೆ ನಾವು ಸಿಮ್ ಅಳವಡಿಸಿದಾಗ ಅದು ಎಲ್ಲಾ ನೆಟ್ ವರ್ಕ್ ಗಳಿಗೆ ಸೇರಿರುವ BTSಗಳಿಗೆ ಸಂದೇಶ ರವಾನಿಸುತ್ತದೆ.ಸಂದೇಶ ರವಾನಿಸುತ್ತಿರುವ ಸಿಮ್ ನಲ್ಲಿರುವ IMSI ನಂಬರನ್ನೂ ತನ್ನ HLR ಅಲ್ಲಿರುವ ಮಾಹಿತಿಯನ್ನೂ ಪರಿಶೀಲಿಸಿ ಅಧಿಕೃತ ನೆಟ್ ವರ್ಕ್ ತನ್ನ ಸೇವೆ ಒದಗಿಸಲು ಸಿದ್ಧವಾಗುತ್ತದೆ. ಗ್ರಾಹಕರ ಮಾಹಿತಿಯನ್ನು ಗೌಪ್ಯವಾಗಿಡಲು ಟೆಂಪೊರರಿ ಮೊಬೈಲ್ ಸಬ್ಸ್ ಕ್ರೈಬರ್ ಐಡೆಂಟಿಫಿಕೇಶನ್(TMSI) ನಂಬರ್ ಗಳನ್ನು ನೀಡಲಾಗುತ್ತದೆ.

ನಾವು ಮೊಬೈಲನ್ನು ಬಳಸದಿದ್ದಾಗಲೂ ಅದು ಆನ್ ಆಗಿದ್ದಲ್ಲಿ ಮೊಬೈಲ್ ನಿಯಮಿತವಾಗಿ BTSಗಳಿಗೆ ಸಂದೇಶ ರವಾನಿಸುತ್ತಿರುತ್ತದೆ. ನಮ್ಮ ಮೊಬೈಲ್ ತನ್ನ ಸುತ್ತಲಿನ ಗರಿಷ್ಟ ೬ BTSಗಳಿಂದ ಸಂದೇಶಗಳನ್ನು ಸ್ವೀಕರಿಸಲು ಶಕ್ತವಾಗಿರುತ್ತದೆ. ಸ್ವೀಕರಿಸಿದ ಸಿಗ್ನಲ್ ಗಳ ವಿವರವನ್ನು ಪುನಃ BTSಗಳ ಮುಖಾಂತರ BSC ಪಡೆಯುತ್ತದೆ. ಹಾಗೂ ಗರಿಷ್ಟ ಶಕ್ತಿ ಹೊಂದಿರುವ ಸಿಗ್ನಲ್ ಯಾವ BTSನಿಂದ ಮೊಬೈಲನ್ನು ತಲುಪುತ್ತಿರುತ್ತದೆಯೋ ಅದರ ಮೂಲಕ ಸೇವೆ ಒದಗಿಸುತ್ತದೆ.ನಾವು ಯಾವ BTSನಿಂದ ಸೇವೆ ಪಡೆಯುತ್ತಿದ್ದೇವೆ ಎಂಬುದರ ಆಧಾರದ ಮೇಲೆ ವಿಸಿಟರ್ ಲೊಕೇಶನ್ ರೆಜಿಸ್ಟರ್(VLR)ನಲ್ಲಿ ನಾವೀಗಿರುವ ಸ್ಥಳದ ಮಾಹಿತಿ ಅಪ್ಡೇಟ್ ಆಗುತ್ತದೆ. ಒಂದು BTS ಮುಖೇನ ಸೇವೆ ಪಡೆಯುತ್ತಿದ್ದರೂ ಮೊಬೈಲ್ ತನ್ನ ಸುತ್ತಲಿನ ಇತರೆ BTSಗಳಿಂದ ಪಡೆಯುತ್ತಿರುವ ಸಿಗ್ನಲ್ ಬಗೆಗಿನ ಮಾಹಿತಿಯನ್ನು ನಿಯಮಿತವಾಗಿ BSCಗಳಿಗೆ ರವಾನಿಸುತ್ತಿರುತ್ತದೆ. ಇದು Idle state.

ನಾವು ಕರೆ ಮಾಡಲು ಡಯಲ್ ಮಾಡಿದಾಗ ನಮ್ಮ ಮೊಬೈಲ್ ಇಂದ BSCಗೆ ಹಾಗೂ ಅಲ್ಲಿಂದ MSCಗೆ ಸಂದೇಶ ಹೋಗುತ್ತದೆ. ನಮ್ಮ ಕರೆ MSCಗೆ ತಲುಪಿದಾಗ ಕರೆ ಪೂರ್ಣಗೊಳಿಸುವ ಮೊದಲು EIR ನಲ್ಲಿ ನಮ್ಮ ಮೊಬೈಲ್ ಸೆಟ್ ನ IMEI ದಾಖಲಾಗಿದೆಯೇ ಎಂದು ಪರಿಶೀಲಿಸುತ್ತದೆ. AUCಯಲ್ಲಿರುವ ಕೆಲವು ರಾಂಡಮ್ ಸಂಕೇತಗಳನ್ನು ನಮ್ಮ ಮೊಬೈಲ್ ಗೆ ಕಳುಹಿಸುತ್ತದೆ. ಅದಕ್ಕುತ್ತರವಾಗಿ ನಮ್ಮ ಮೊಬೈಲ್ ಕಳುಹಿಸಿದ ಸಂಕೇತಗಳ ಆಧಾರದ ಮೇಲೆ ನಾವು ಅಧಿಕೃತ ಗ್ರಾಹಕರೆಂಬುದನ್ನು ದೃಢೀಕರಿಸುತ್ತದೆ.(ಗ್ರಾಹಕರ ಕರೆಗೆ ಸುರಕ್ಷತೆ ಒದಗಿಸುವುದು ಇದರ ಉದ್ದೇಶ. ಈ ಸಂಕೇತಗಳು ಒಂದು ಕರೆಯಿಂದ ಮತ್ತೊಂದಕ್ಕೆ ಬದಲಾಗುತ್ತಿರುತ್ತವೆ. ಹಾಗಾಗಿ ಒಂದು ಕರೆಯ ಸಂಕೇತಗಳು ತಿಳಿದರೂ ಪ್ರಯೋಜನವಿಲ್ಲ.) HLR ನಲ್ಲಿರುವ ಡಾಟಾಬೇಸ್ ನ ಮಾಹಿತಿಯನ್ನನುಸರಿಸಿ ನಾವು ಮಾಡುತ್ತಿರುವ ಕರೆ ನಾವು ಪಡೆದಿರುವ ಸೇವೆಯ ವ್ಯಾಪ್ತಿಗೆ ಬರುತ್ತದೆಯೇ ಎಂಬುದನ್ನು ಪರಿಶೀಲಿಸುತ್ತದೆ.

ಈ ಎಲ್ಲಾ ದೃಢೀಕರಣದ ನಂತರ MSC ಕರೆ ಸ್ವೀಕರಿಸಬೇಕಾದ ವ್ಯಕ್ತಿಗೆ ಸೇವೆ ಒದಗಿಸುತ್ತಿರುವ MSCಯ ಆಧಾರದ ಮೇಲೆ ಮುಂದಿನ ಕೆಲಸವನ್ನು ನಿಭಾಯಿಸುತ್ತದೆ. ಕರೆ ಸ್ವೀಕರಿಸುತ್ತಿರುವ ವ್ಯಕ್ತಿ ಕೂಡ ಅದೇ MSC VLR ಪ್ರದೇಶಕ್ಕೆ ಸೇರಿದವನಾದರೆ ಆ ವ್ಯಕ್ತಿಯ ಮೊಬೈಲ್ ಹಾಗೂ ಸರ್ವಿಸ್ ನ ದೃಢೀಕರಣವನ್ನು ತನ್ನ AUC ,EIR, HLR VLR ನ ಮೂಲಕ ಮುಗಿಸಿ ನಂತರ ಆ ವ್ಯಕ್ತಿಯ ಮೊಬೈಲ್ ಗೆ ಸೇವೆ ಒದಗಿಸುತ್ತಿರುವ BTS ಮುಖೇನ ಆ ವ್ಯಕ್ತಿಯ ಮೊಬೈಲ್ ಗೆ ಸಂಪರ್ಕವನ್ನೇರ್ಪಡಿಸುತ್ತದೆ. ಬೇರೆ MSC ಗೆ ಸೇರಿದವನಾದರೆ ಗೇಟ್ ವೇ MSCಗೆ ಸಂದೇಶ ಹೋಗುತ್ತದೆ. ಗೇಟ್ ವೇ MSC ತನ್ನಲ್ಲಿರುವ  ಮಾಹಿತಿಗನುಗುಣವಾಗಿ ಆ ವ್ಯಕ್ತಿಯ ಮೊಬೈಲ್ ಗೆ ಸೇವೆ ಒದಗಿಸುತ್ತಿರುವ MSCಗೆ ಸಂದೇಶ ರವಾನಿಸುತ್ತದೆ. ಆ ವ್ಯಕ್ತಿಯ ಮೊಬೈಲ್ ಹಾಗೂ ಸರ್ವೀಸ್ ದೃಢೀಕರಣದ ನಂತರ BTS ಮುಖೇನ ಆ ವ್ಯಕ್ತಿಯ ಮೊಬೈಲ್ ಗೆ ಸಂಪರ್ಕವೇರ್ಪಡುತ್ತದೆ.  ಒಮ್ಮೆ ನಮ್ಮ ಕರೆಗೆ ಒಂದು ಸಂಪರ್ಕ ಕೊಂಡಿ ಏರ್ಪಟ್ಟ ಮೇಲೆ ಕರೆ ಸ್ವೀಕರಿಸುತ್ತಿರುವ ಮೊಬೈಲ್ ರಿಂಗಣಿಸುತ್ತದೆ. ಕರೆ ಸ್ವೀಕರಿಸಿದರೆ  MSC ಕರೆಯ ಸಮಯ, ಕಾಲಾವಧಿ ಹಾಗೂ ನಮ್ಮ ಪ್ಲಾನ್ ನ ಆಧಾರದ ಮೇಲೆ ನಮ್ಮ ಕರೆಗೆ ಚಾರ್ಜ್ ಗಳನ್ನು ವಿಧಿಸುತ್ತದೆ. ಕರೆ ಸ್ವೀಕರಿಸದಿದ್ದರೆ ಅದು ಮಿಸ್ಡ್ ಕಾಲ್.

ನೋಡಿ ನಾವು ಕರೆ ಮಾಡಿದ್ರೂ ಮಿಸ್ಡ್ ಕಾಲ್ ಕೊಟ್ರೂ ಈ ಎಲ್ಲಾ ಸಿಗ್ನಲ್ಲಿಂಗ್ ನಡೆಯಲೇಬೇಕು. ಹಾಗಾಗಿ ಮುಂದೆ ನೀವು ಮಿಸ್ಡ್ ಕಾಲ್ ಕೊಡುವ ಮುನ್ನ ಒಂದು ಮಿಸ್ಡ್ ಕಾಲ್ ಗೆ ಎಷ್ಟೆಲ್ಲಾ ಸಿಗ್ನಲ್ಲಿಂಗ್ ವ್ಯರ್ಥವಾಗುತ್ತದೆಂಬುದನ್ನು ಯೋಚಿಸಿ.

ಮುಗಿಸುವ ಮುನ್ನ: ನಿಮ್ಮ  ಮೊಬೈಲಿನ IMEI ನಂಬರನ್ನು ತಿಳಿದುಕೊಂಡು ಅದನ್ನು ಒಂದೆಡೆ ಜೋಪಾನವಾಗಿಟ್ಟುಕೊಳ್ಳಿ. ಅಕಸ್ಮಾತ್ ದುರದೃಷ್ಟವಶಾತ್ ನಿಮ್ಮ ಮೊಬೈಲ್ ಕಳೆದುಹೋದರೆ ಆ ನಂಬರನ್ನು ಬಳಸಿ EIR ನಲ್ಲಿ ಅದನ್ನು ಬ್ಲಾಕ್ ಲಿಸ್ಟ್ ಮಾಡಬಹುದು. ಆಗ ಕದ್ದವರೂ ನಿಮ್ಮ ಮೊಬೈಲನ್ನು ಬಳಸಲಾರರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.4 (5 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಇಂದುಶ್ರೀ ಉತ್ತಮ ಮಾಹಿತಿಗಾಗಿ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮತ್ತೊಮ್ಮೆ ಕಾಲೇಜ್ ನಲ್ಲಿ ಒಂದ್ ಪಿರಿಯಡ್ ಕೇಳಿದ ಹಂಗಾಯ್ತು ..........ಚೆನ್ನಾಗಿದೆ ಪಾಠ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಉಪಕರಣದಲ್ಲುಂಟಾಗಿದ್ದ ತಾಂತ್ರಿಕ ಸಮಸ್ಯೆಯಿಂದಾಗಿ ದೂರವಾಣಿ ಸಂಖ್ಯೆಯೇ ಕಳೆದು ಹೋಗಿದೆ... ಇನ್ನು ಮಿಸ್ಡ್ ಕಾಲ್ ಹೇಗೆ ಕೊಡಲಿ...?! :) ಈಗ ಏನಿದ್ದರೂ ಅತ್ತಣಿಂದ ಎಂದಾದರೂ ಕರೆ ಬರಬಹುದೇನೋ ಎನ್ನುವ ನಿರೀಕ್ಷೆ ನನಗೆ...!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೊನೆಗೂ ಅತ್ತಣಿಂದ ಸಂದೇಶ ಬಂದೇ ಬಿಡ್ತು ಅಂತೂ ನನ್ನ ಸಮಸ್ಯೆ ಪರಿಹಾರ ಆಯ್ತು. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

EIR ನಲ್ಲಿ ಅದನ್ನು ಬ್ಲಾಕ್ ಲಿಸ್ಟ್ ಮಾಡುವುದು ಹೇಗೆ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಉತ್ತಮ ಹಾಗೂ ಪರಿಪೂರ್ಣ ಮಾಹಿತಿಗಳು.. ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

@ಕೋಮಲ್ ಕುಮಾರ್ @ರಘು @ವಿಜಯ್ @ಪ್ರಸನ್ನ ಧನ್ಯವಾದಗಳು @ ಆಸು ಹೆಗಡೆ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

@ವಿಕಾಸ್ ಹೆಗಡೆ ನನಗಿರುವ ಮಾಹಿತಿ ಪ್ರಕಾರ, ಮೊಬೈಲ್ ಕಳೆದು ಹೋದಾಗ ಮೊದಲು ನೀವು ಪೋಲೀಸರಿಗೆ ದೂರು ನೀಡಬೇಕು. ಅವರು FIR ದಾಖಲಿಸಿ ನಿಮಗೆ FIR number ಕೊಡುತ್ತಾರೆ. ಈ ನಂಬರಿನೊಂದಿಗೆ ನೀವು ನಿಮ್ಮ ನೆಟ್ ವರ್ಕ್ ಪ್ರೊವೈಡರ್ (ಏರ್ ಟೆಲ್, ವೊಡಾಫೋನ್ , ಬಿ.ಎಸ್.ಎನ್.ಎಲ್. ಇತ್ಯಾದಿ) ಬಳಿ ಹೋಗಿ ಮತ್ತೊಂದು ದೂರು ದಾಖಲಿಸಿದರೆ IMEI ನಂಬರಿನ ಆಧಾರದ ಮೇಲೆ ನಿಮಗೆ ನಿಮ್ಮ ಮೊಬೈಲ್ ಹಿಂದಿರುಗಿಸುವ ವ್ಯವಸ್ಥೆ ಮಾಡುತ್ತಾರೆ. ಇಲ್ಲವಾದಲ್ಲಿ ನಿಮ್ಮ ಮೊಬೈಲನ್ನು ಬ್ಲಾಕ್ ಲಿಸ್ಟ್ ಮಾಡುತ್ತಾರೆ. (BSNL summer trainingಅಲ್ಲಿ ನನಗೆ ದೊರೆತ ಮಾಹಿತಿ ಇಷ್ಟೇ. ಇನ್ನೂ ಹೆಚ್ಚಿನ ಮಾಹಿತಿಗೆ ನಿಮ್ಮ ನೆಟ್ ವರ್ಕ್ ಪ್ರೊವೈಡರ್ ಅನ್ನು ಸಂಪರ್ಕಿಸಿ)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಳ್ಳೆಯ ಲೇಖನ. ಆದರೆ ನಿಮ್ಮ ಮಿಸ್ಡ್ ಕಾಲ್ ಬಗೆಗಿನ ತಾಕೀತನ್ನು ಒಪ್ಪುವುದಿಲ್ಲ. ೧. GSM ನೆಟ್ವರ್ಕ್ ನಲ್ಲಿ ೨ ರೀತಿಯ ಚಾನೆಲ್ಗಳು ಇವೆ. ಅ) Traffic ಚಾನೆಲ್ ಬ) ಕಂಟ್ರೋಲ್ ಚಾನೆಲ್ ನೀವು ಹೇಳಿದ ಪ್ರಾಸೆಸಿಂಗ್ ಎಲ್ಲಾ ಕಂಟ್ರೋಲ್ ಚಾನೆಲ್ಲಿನ ಕೆಲಸ. ಆದರೆ ಮಾತಾಡುವಾಗ ಉಪಯೋಗಕ್ಕೆ ಬರುವುದು traffic ಚಾನೆಲ್. ನೀವೇ ಹೇಳಿದಂತೆ ಕಂಟ್ರೋಲ್ ಚಾನೆಲ್ನಲ್ಲಿ ಯಾವಾಗಲೂ ನೆಟ್ವರ್ಕ್ ಸಂಬಂಧಿತ (synchronization, ನೆಟ್ವರ್ಕ್ ಮತ್ತು ಚಾನೆಲ್ ಮ್ಯಾನೆಜ್ಮೆಂಟ್) ಕೆಲಸಗಳು ನಡೆಯುತ್ತಲೇ ಇರುತ್ತವೆ. ಇದಕ್ಕೆ ನಾವು ನೆಟ್ವರ್ಕ್ ಓವರ್ಹೆಡ್ ಅನ್ನುತ್ತೇವೆ. ಇದನ್ನು ಸುಲಭವಾಗಿ ಕಡಿಮೆ ಮಾಡಲಾಗುವುದಿಲ್ಲ. ಆದರೆ ಮಾತಾಡುವಾಗ Traffic ಚಾನೆಲ್ ಸಾಕಷ್ಟು ವಿದ್ಯುತ್ ಹಾಗೂ ಸಮಯ ತಿನ್ನುತ್ತದೆ. ಆದರಿಂದ ಜನ ಜಾಣತನ ಉಪಯೋಗಿಸಿ ಬರೀ ಮಿಸ್ಡ್ ಕಾಲ್ನಲ್ಲೇ ಕೆಲಸ ಮುಗಿಸಿಕೊಂಡರೆ ತಪ್ಪೇನೂ ಇಲ್ಲ. ಅಲ್ಲದೆ ಈ ತರ್ಲೆ ಮಾಡುತ್ತೇವೆ ಅಂತಲೇ ಮೊಬೈಲ್ ಸೇವೆದಾರರು ನಮ್ಮಿಂದ ಒಂದು ಕನಿಷ್ಠ ದರ ವಸೂಲಿ ಮಾಡಿರುತ್ತಾರೆ. "base charges " ಅನ್ನೋ ಹೆಸರಿನಲ್ಲಿ. ಹಾಗಾಗಿ ಖುಷಿಯಿಂದ ಮಿಸ್ಡ್ ಕಾಲ್ ಕೊಡಿ! ಯಾರಿಗೂ ಯಾವ ನಷ್ಟ ಆಗೋದಿಲ್ಲ.

ಒಳ್ಳೆಯ ಲೇಖನ. ಆದರೆ ನಿಮ್ಮ ಮಿಸ್ಡ್ ಕಾಲ್ ಬಗೆಗಿನ ತಾಕೀತನ್ನು ಒಪ್ಪುವುದಿಲ್ಲ. GSM ನೆಟ್ವರ್ಕ್ ನಲ್ಲಿ ೨ ರೀತಿಯ ಚಾನೆಲ್ಗಳು ಇವೆ. ಅ) Traffic ಚಾನೆಲ್ ಬ) ಕಂಟ್ರೋಲ್ ಚಾನೆಲ್ ನೀವು ಹೇಳಿದ ಪ್ರಾಸೆಸಿಂಗ್ ಎಲ್ಲಾ ಕಂಟ್ರೋಲ್ ಚಾನೆಲ್ಲಿನ ಕೆಲಸ. ಆದರೆ ಮಾತಾಡುವಾಗ ಉಪಯೋಗಕ್ಕೆ ಬರುವುದು traffic ಚಾನೆಲ್. ನೀವೇ ಹೇಳಿದಂತೆ ಕಂಟ್ರೋಲ್ ಚಾನೆಲ್ನಲ್ಲಿ ಯಾವಾಗಲೂ ನೆಟ್ವರ್ಕ್ ಸಂಬಂಧಿತ (synchronization, ನೆಟ್ವರ್ಕ್ ಮತ್ತು ಚಾನೆಲ್ ಮ್ಯಾನೆಜ್ಮೆಂಟ್) ಕೆಲಸಗಳು ನಡೆಯುತ್ತಲೇ ಇರುತ್ತವೆ. ಇದಕ್ಕೆ ನಾವು ನೆಟ್ವರ್ಕ್ ಓವರ್ಹೆಡ್ ಅನ್ನುತ್ತೇವೆ. ಇದನ್ನು ಸುಲಭವಾಗಿ ಕಡಿಮೆ ಮಾಡಲಾಗುವುದಿಲ್ಲ. ಆದರೆ ಮಾತಾಡುವಾಗ Traffic ಚಾನೆಲ್ ಸಾಕಷ್ಟು ವಿದ್ಯುತ್ ಹಾಗೂ ಸಮಯ ತಿನ್ನುತ್ತದೆ. ಆದರಿಂದ ಜನ ಜಾಣತನ ಉಪಯೋಗಿಸಿ ಬರೀ ಮಿಸ್ಡ್ ಕಾಲ್ನಲ್ಲೇ ಕೆಲಸ ಮುಗಿಸಿಕೊಂಡರೆ ತಪ್ಪೇನೂ ಇಲ್ಲ. ಅಲ್ಲದೆ ಈ ತರ್ಲೆ ಮಾಡುತ್ತೇವೆ ಅಂತಲೇ ಮೊಬೈಲ್ ಸೇವೆದಾರರು ನಮ್ಮಿಂದ ಒಂದು ಕನಿಷ್ಠ ದರ ವಸೂಲಿ ಮಾಡಿರುತ್ತಾರೆ. "base charges " ಅನ್ನೋ ಹೆಸರಿನಲ್ಲಿ. ಹಾಗಾಗಿ ಖುಷಿಯಿಂದ ಮಿಸ್ಡ್ ಕಾಲ್ ಕೊಡಿ! ಯಾರಿಗೂ ಯಾವ ನಷ್ಟ ಆಗೋದಿಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ನಿಜ....ನಾನು ಹೇಳ್ತಾ ಇರೋದು ಸುಮ್ನೆ ತಮಾಷೆಗೆ ಅಂತ ಕಾಲ್ ಮಾಡಿ ಕಟ್ ಮಾಡೋದು ಬೇಡ ಅಂತಷ್ಟೇ....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂದುಶ್ರಿ... ನಿವೆಂದಾದರು ಮಿಸ್ ಕಾಲ್ ಕೊಡೋವ ಮುನ್ನ ಯೋಚಿಸಿದ್ದಿರೆನು, ಸಿಗ್ನಲ್ಲಿಂಗನ ಮಹತ್ವ ಚೆನ್ನಾಗಿದೆ, ಸಾಕಷ್ಟು ಬಾರಿ ನಮ್ಮ ಜನ ಸಿಗ್ನಲ್ಲಿಗೆ ಎಷ್ಟು ಸಾರಿ ಶಾಪ ಹಾಕುತ್ತ್ತರೋ ನಾ ಕಾಣೆ , ತುಂಬ ಉಪಯುಕ್ತ ಮಾಹಿತಿ..... ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಿಸ್ಡ್ ಕಾಲ್ ಗೂ ಇಷ್ಟೆಲ್ಲಾ ಸಿಗ್ನಲ್ಲಿಂಗ್ ಅವಶ್ಯಕತೆಯಿದೆ ಅಂತ ಗೊತ್ತಾದ ಮೇಲೆ ಯೋಚಿಸ್ತಾ ಇದ್ದೀನಿ. ಜನ ಶಾಪ ಹಾಕೋ ಸಿಗ್ನಲ್ ಕೊರತೆ, ಕಾಲ್ ಬ್ಲಾಕಿಂಗ್, ಕಾಲ್ ಡ್ರಾಪಿಂಗ್, ಹ್ಯಾಂಡ್ ಆಫ್ ಇನ್ನೂ ಎಷ್ಟೋ ಇದೆ ಮೊಬೈಲ್ ತಂತ್ರಜ್ಞಾನದಲ್ಲಿ.... ಮುಂದೊಮ್ಮೆ ಬರೆಯೋ ಮನಸಾದ್ರೆ ಬರೀತೀನಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂದುಶ್ರಿ... ನಿವೆಂದಾದರು ಮಿಸ್ ಕಾಲ್ ಕೊಡೋವ ಮುನ್ನ ಯೋಚಿಸಿದ್ದಿರೆನು, ಸಿಗ್ನಲ್ಲಿಂಗನ ಮಹತ್ವ ಚೆನ್ನಾಗಿದೆ, ಸಾಕಷ್ಟು ಬಾರಿ ನಮ್ಮ ಜನ ಸಿಗ್ನಲ್ಲಿಗೆ ಎಷ್ಟು ಸಾರಿ ಶಾಪ ಹಾಕುತ್ತ್ತರೋ ನಾ ಕಾಣೆ , ತುಂಬ ಉಪಯುಕ್ತ ಮಾಹಿತಿ..... ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂದುಶ್ರಿ... ನಿವೆಂದಾದರು ಮಿಸ್ ಕಾಲ್ ಕೊಡೋವ ಮುನ್ನ ಯೋಚಿಸಿದ್ದಿರೆನು, ಸಿಗ್ನಲ್ಲಿಂಗನ ಮಹತ್ವ ಚೆನ್ನಾಗಿದೆ, ಸಾಕಷ್ಟು ಬಾರಿ ನಮ್ಮ ಜನ ಸಿಗ್ನಲ್ಲಿಗೆ ಎಷ್ಟು ಸಾರಿ ಶಾಪ ಹಾಕುತ್ತ್ತರೋ ನಾ ಕಾಣೆ , ತುಂಬ ಉಪಯುಕ್ತ ಮಾಹಿತಿ..... ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂದುಶ್ರಿ... ನಿವೆಂದಾದರು ಮಿಸ್ ಕಾಲ್ ಕೊಡೋವ ಮುನ್ನ ಯೋಚಿಸಿದ್ದಿರೆನು, ಸಿಗ್ನಲ್ಲಿಂಗನ ಮಹತ್ವ ಚೆನ್ನಾಗಿದೆ, ಸಾಕಷ್ಟು ಬಾರಿ ನಮ್ಮ ಜನ ಸಿಗ್ನಲ್ಲಿಗೆ ಎಷ್ಟು ಸಾರಿ ಶಾಪ ಹಾಕುತ್ತ್ತರೋ ನಾ ಕಾಣೆ , ತುಂಬ ಉಪಯುಕ್ತ ಮಾಹಿತಿ..... ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂದುಶ್ರಿ... ನಿವೆಂದಾದರು ಮಿಸ್ ಕಾಲ್ ಕೊಡೋವ ಮುನ್ನ ಯೋಚಿಸಿದ್ದಿರೆನು, ಸಿಗ್ನಲ್ಲಿಂಗನ ಮಹತ್ವ ಚೆನ್ನಾಗಿದೆ, ಸಾಕಷ್ಟು ಬಾರಿ ನಮ್ಮ ಜನ ಸಿಗ್ನಲ್ಲಿಗೆ ಎಷ್ಟು ಸಾರಿ ಶಾಪ ಹಾಕುತ್ತ್ತರೋ ನಾ ಕಾಣೆ , ತುಂಬ ಉಪಯುಕ್ತ ಮಾಹಿತಿ..... ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂದುಶ್ರಿ... ನಿವೆಂದಾದರು ಮಿ

ಇಂದುಶ್ರಿ... ನಿವೆಂದಾದರು   ಮಿಸ್ ಕಾಲ್ ಕೊಡೋವ ಮುನ್ನ  ಯೋಚಿಸಿದ್ದಿರೆನು,  ಸಿಗ್ನಲ್ಲಿಂಗನ ಮಹತ್ವ ಚೆನ್ನಾಗಿದೆ,   ಸಾಕಷ್ಟು ಬಾರಿ    ನಮ್ಮ ಜನ ಸಿಗ್ನಲ್ಲಿಗೆ ಎಷ್ಟು ಸಾರಿ ಶಾಪ ಹಾಕುತ್ತ್ತರೋ  ನಾ ಕಾಣೆ ,    ತುಂಬ ಉಪಯುಕ್ತ ಮಾಹಿತಿ..... ಚೆನ್ನಾಗಿದೆ.

ಸ್ ಕಾಲ್ ಕೊಡೋವ ಮುನ್ನ ಯೋಚಿಸಿದ್ದಿರೆನು, ಸಿಗ್ನಲ್ಲಿಂಗನ ಮಹತ್ವ ಚೆನ್ನಾಗಿದೆ, ಸಾಕಷ್ಟು ಬಾರಿ ನಮ್ಮ ಜನ ಸಿಗ್ನಲ್ಲಿಗೆ ಎಷ್ಟು ಸಾರಿ ಶಾಪ ಹಾಕುತ್ತ್ತರೋ ನಾ ಕಾಣೆ , ತುಂಬ ಉಪಯುಕ್ತ ಮಾಹಿತಿ..... ಚೆನ್ನಾಗಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂದುಶ್ರಿ... ನಿವೆಂದಾದರು ಮಿಸ್ ಕಾಲ್ ಕೊಡೋವ ಮುನ್ನ ಯೋಚಿಸಿದ್ದಿರೆನು, ಸಿಗ್ನಲ್ಲಿಂಗನ ಮಹತ್ವ ಚೆನ್ನಾಗಿದೆ, ಸಾಕಷ್ಟು ಬಾರಿ ನಮ್ಮ ಜನ ಸಿಗ್ನಲ್ಲಿಗೆ ಎಷ್ಟು ಸಾರಿ ಶಾಪ ಹಾಕುತ್ತ್ತರೋ ನಾ ಕಾಣೆ , ತುಂಬ ಉಪಯುಕ್ತ ಮಾಹಿತಿ..... ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂದುಶ್ರಿ... ನಿವೆಂದಾದರು ಮಿಸ್ ಕಾಲ್ ಕೊಡೋವ ಮುನ್ನ ಯೋಚಿಸಿದ್ದಿರೆನು, ಸಿಗ್ನಲ್ಲಿಂಗನ ಮಹತ್ವ ಚೆನ್ನಾಗಿದೆ, ಸಾಕಷ್ಟು ಬಾರಿ ನಮ್ಮ ಜನ ಸಿಗ್ನಲ್ಲಿಗೆ ಎಷ್ಟು ಸಾರಿ ಶಾಪ ಹಾಕುತ್ತ್ತರೋ ನಾ ಕಾಣೆ , ತುಂಬ ಉಪಯುಕ್ತ ಮಾಹಿತಿ..... ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಾಂತ್ರಿಕ ದೋಷ..... ಕ್ಷಮಿಸಿ........
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆ ದಿನ ಪ್ರತಿಕ್ರಿಯೆ ಬರೆದು ಉಳಿಸುವಾಗ Fatal error ಎಂದು ಬರುತ್ತಿತ್ತು. ಎಷ್ಟು ಬಾರಿ ಪೇಜ್ ರಿಫ್ರೆಷ್ ಮಾಡಿದ್ದಾರೋ ಅಷ್ಟು ಸಲ ಪ್ರತಿಕ್ರಿಯೆಗಳು ಬಂದಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಉಪಯುಕ್ತ ಮಾಹಿತಿ ಇಂದುಶ್ರಿರವರೆ. ಮೋಬೈಲ್ ಸಂಖೇತ ರವಾನೆಯಾಗಲು ಎಷ್ಟೊಂದು ತಿರುವುಗಳಲ್ಲಿ ಚಲಿಸಬೇಕೆಂಬುದನ್ನು ತುಂಬಾ ಅರ್ಥಪೂರ್ಣವಾಗಿ ವಿವರಿಸಿದ್ದೀರ ಧನ್ಯವಾದಗಳು. ವಸಂತ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇ೦ದು, ಉತ್ತಮ ಮಾಹಿತಿಯುಕ್ತ ಲೇಖನ ಹಾಗೂ ಶ್ರೀನಿಧಿಯವರ ಪ್ರತಿಕ್ರಿಯೆಯೂ ಉತ್ತಮ ಮಾಹಿತಿಯಿ೦ದ ಕೂಡಿದೆ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಂತ್ರಜ್ಞಾನದ ವಿಧ್ಯರ್ಥಿನಿ ಯಾಗಿ ಅದರ ಅರಿವು ಇರವ ನೀವು ಮೊಬೈಲ್ ಬಗ್ಗೆ ಅದರ ನೆಟ್ವರ್ಕ್ ಇತ್ಯಾದಿ ಬಗ್ಗೆ ಬಹಳ ಸರಳವಾಗಿ ಬರೆದಿದ್ದೀರ... ನಮ ಒಂದು ಮಿಸ್ ಕಾಲು, ಕಾಲು ಹಿಂದೆ ಇಸ್ಟೆಲ್ಲಾ ಪ್ರೋಸೆಸ್ಸ್ ಇರ್ತೆ ಅಂತ ಈಗಲೇ ಗೊತ್ತಾಗಿದ್ದು... ನಾ ಮಿಸ್ಸು ಕಾಲು ಕೊಟ್ಟದ್ದು ಬಹಳ ಕಮಿ, ಆದರೆ ನನಗೆ ಬೇಜಾನ್ ಮಿಸ್ಸು ಕಾಲು ಬಂದಿವೆ.. ಮಾಹಿತಿ ಪೂರ್ಣ ಬರಹ.. ವಂದನೆಗಳು.. ಹೊಸ ವರ್ಷದ ಶುಭಶಯಗಳು.......
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಷ್ಟು ಪುಣ್ಯವಂತರಪ್ಪಾ ನೀವು ಸಪ್ತಗಿರಿಗಳು; ಬೇಜಾನ್ 'ಮಿಸ್' ಕಾಲುಗಳು ನಿಮ್ಮ ಮೊಬೈಲಿಗೆ ಬರುತ್ತವೆ. :))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೋ ನೋ ;ಮಿಸ್' ಅಲ್ಲಲ ಮಿಸ್ಸು ಕಾಲುಗಳು.....!! ಅದ್ಕೆ ನಾ ಏನು ಮಾಡ್ತೀನಿ ಗೊತ್ತ?. . . . . ಎಲ್ಲವನ್ನು ರಿಜೆಕ್ಟ್ ಲಿಸ್ಟ್ಗೆ ಹಾಕಿ..........ಗಿ ಇದ್ದು ಬಿದ್ವೆ, ಆಮೇಲೆ ಆ ಕಾಲು ಬರೋದೆ ಇಲ್ಲ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.