ಮತ್ತೆ ಒಂದಾಗಬಾರದೇಕೆ?

4.5

ಹಣೆಯ ಸಿಂಗರಿಸುವ ಕಾರ್ಯವಿಲ್ಲ ಹಿಂದಿನ ಬೇಡಿಕೆಯೂ ಇಲ್ಲ
ಗೆಳತಿಯರ ನೋಡಲು ಹೊರಟಿತು ಬೇಸರಗೊಂಡ ಸಿಂಧೂರ.
ಜೊತೆಗೆ ಅವರ ಸ್ಥಿತಿಗತಿ ಏನಾಗಿದೆಯೋ ಎಂಬ ಕಳವಳ
ಆದ್ರೆ ಮನದಲ್ಲಿ ಅವರು ಸಂತಸದಿಂದಿರುವುದನ್ನು ನೋಡುವ ಆಶಯ.

ರಸ್ತೆ ಬದಿಯಲ್ಲಿತ್ತು ದುಂಡು ಮಲ್ಲಿಗೆ
ಆಗ ತಾನೆ ಜಗವ ನೋಡುತಲಿತ್ತು ತನ್ನ ಕಣ್ತೆರೆದು.
ಕೇಳಿತು ಸಿಂಧೂರ "ಹೇಗಿರುವೆ ಗೆಳತಿ
ಹೇಗೆ ಸಾಗಿದೆ ನಿನ್ನ ಜೀವನವಿಂದು?"

"ಏನ ಹೇಳಲಿ ನಾನು?
ದೇವರ ಪೂಜೆಗಷ್ಟೇ ನಾನೀಗ ಸೀಮಿತ.
ಸುಕೋಮಲೆಯರ ಮುಡಿಯೇರುವುದೇ
ನನ್ನ ಈಗಿನ ಇಂಗಿತ."

ಮಾತು ಹೊರಡಲಿಲ್ಲ ಸಿಂಧೂರಕೆ
ಏನು ಹೇಳಿದರದೂ ಕಡಿಮೆಯೇ.
"ಒಂದೇ ದೋಣಿಯ ಪಯಣಿಗರು ನಾವು
ನನಗೂ ಒದಗಿದೆ ನಿನ್ನೀ ಸ್ಥಿತಿಯೇ."

ಘಲ್ ಘಲ್ಲೆನುತ ಊರೆಲ್ಲ ಓಡಾಡುತ್ತಿದ್ದ
ಕಾಲ್ಗೆಜ್ಜೆಯ ನೆನೆಯಿತು ಮನ.
ಮಲ್ಲಿಗೆಯ ಜೊತೆಗೂಡಿ
ಮುಂದುವರೆಸಿತು ತನ್ನ ಪ್ರಯಾಣ.

ಹುಡುಕುತ ಅಲೆದವು ಪುಷ್ಪ-ಸಿಂಧೂರ
ಕೊನೆಗೆ ಕಪಾಟಿನಲ್ಲಿ ಕಂಡಿತು ನೂಪುರ.
ಭೇಟಿಯಾದವು ಹಸಿರ ಗಾಜಿನ ಬಳೆಗಳನ್ನೂ
ಮತ್ತದೇ ಕಪಾಟಿನ ಮೂಲೆಯಲ್ಲಿ.

ಅಂದು ಒಂದರೆಘಳಿಗೆಯೂ ನಿಲ್ಲದಿದ್ದ
ಗೆಜ್ಜೆಯು ಇಂದು ಮೌನದಿ ಮಲಗಿದೆ.
ಎಲ್ಲ ಕಾರ್ಯಗಳಲ್ಲೂ ತನ್ನ ನಿನಾದ ಹೊಮ್ಮಿಸುತ್ತಿದ್ದ
ಗಾಜಿನ ಬಳೆಗಳೂ ಈಗ ಮೂಲೆಗುಂಪಾಗಿವೆ

ಒಬ್ಬರನ್ನೊಬ್ಬರು ಬಿಟ್ಟಿರದಿದ್ದ ಇವರೆಲ್ಲ ಎಷ್ಟೋ ವರುಷಗಳ
ನಂತರ ಸಂಧಿಸಿದ್ದರೂ ಮಾತೇಕೆ ಒಂದೂ ಇಲ್ಲ?
ಮಾತು ಬೇಕೇ ಇವರ ನಡುವಲ್ಲಿ
ಎಲ್ಲರೂ ತಮಗೊದಗಿರುವ ಸ್ಥಿತಿಗೆ ಕೊರಗುತಿರುವಲ್ಲಿ

ಎಲ್ಲರೊಳಿದ್ದ ಪ್ರಶ್ನೆಗಳಿಷ್ಟೇ
ಬದಲಾಯಿಸಿದ್ದೇನು ನಮ್ಮನ್ನೆಲ್ಲ ಒಂದಾಗಿಸಿದ್ದ "ಆಕೆ"ಯನ್ನು
ಬಿಟ್ಟಿರಲಾಗದಿದ್ದ ನಂಟನ್ನೂ ಕಿತ್ತೆಸೆಯುವಂತೆ
ಭಾವನೆಗಳನ್ನೆಲ್ಲ ಭಸ್ಮ ಮಾಡಿದ್ದು "ಆಕೆ"ಗೆ ಕಂಡೂ ಕಾಣದಂತೆ?

ನಾವೇರದೆತ್ತರಕ್ಕೆ "ಆಕೆ" ಬೆಳೆದಿರುವಳೇ?
ನಮಗೇ "ಆಕೆ"ಯ ಸಿಂಗರಿಸುವ ಅರ್ಹತೆಯಿಲ್ಲವೇ?
ಉತ್ತರಿಸುವವರು ಯಾರು ಈ ಪ್ರಶ್ನೆಗಳಿಗೆ?
ಕೇಳಿಸೀತೇ ಈ ಪ್ರಶ್ನೆಗಳು "ಆಕೆ"ಗೆ?

ಪ್ರಶ್ನೆಗಳಿಗೆ ಉತ್ತರ ಕೊಡದಿದ್ದರೂ ಚಿಂತೆಯಿಲ್ಲ
ನಮ್ಮೆಲ್ಲರನ್ನೊಮ್ಮೆ ನೋಡು ಗೆಳತಿ.
ಬಿಂಕ ಬಿಗುಮಾನವ ಬಿಟ್ಟು ಒಂದಾಗುವ ನಾವೆಲ್ಲರೂ
ಆ ಹಿಂದಿನ ವೈಭವ ನೆನಪಿಸುವ ನೋಡುವವರ ಕಂಗಳಿಗೂ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಹೆ... ಇಂದು ಸಕತ್ ಕವನ..
ಶುಭ ಸಂಧರ್ಭಗಳಲ್ಲಾದರೂ ಎಲ್ಲರನು ಒಂದು ಮಾಡಲೇ ಬೇಕು.. (ನಾನ್ಯಾರನ್ನು ಬಿಟ್ಟಿಲ್ಲ.. :) )

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದಿವ್ಯಾ..... ಸದಾ ಕಾಲ ಒಂದಾಗಿರುವ ಬಯಕೆ ನಮ್ಮ ಮನಗಳಿಗೆ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ,
ಇಂದುಶ್ರೀ ಯವರೇ ಬಹಳ ಅರ್ಥವತ್ತಾಗಿ ಬರೆದಿದ್ದೀರಿ
ಮನುಷ್ಯ ಹೀಗೆಕಾದ ತನ್ನದೆಲ್ಲವನ್ನು ಬಿಟ್ಟು -
ತನ್ನದಲ್ಲದ ಅರ್ಥವಿಲ್ಲದ ಯಾವುದೊ ಹೊಸ ಬದುಕಿನತ್ತ
ನಡೆಯತೊಡಗಿದ್ದಾನೆ ,.,.,. ?????

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತನ್ನದಲ್ಲದುದಕ್ಕೆ ಮನದ ತುಡಿತ... ಎಲ್ಲವನ್ನೂ ತನ್ನದಾಗಿಸಿಕೊಳ್ಳುವ ಓಟದಲ್ಲಿ ತನ್ನದೆಂಬುದು ಏನಿದೆಯಂಬುದನ್ನೆ ಆತ ಮರೆತ......

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂದುಶ್ರೀ,

ನಾನು ಇತ್ತೀಚಿನ ದಿನಗಳಲ್ಲಿ ಓದಿದ (ಬರೆದದ್ದನ್ನು ಸೇರಿಸಿ) ಕವನಗಳಲ್ಲಿ, ಅತ್ಯಂತ ಅರ್ಥಗರ್ಭಿತ ಹಾಗೂ ಭಾವನಾತ್ಮಕವಾದ ಕವನಗಳಲ್ಲೊಂದು ನಿಮ್ಮ ಈ ಕವನ.

ಅಭಿನಂದನೆಗಳು...ಅಭಿವಂದನೆಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಗೆ ಧನ್ಯವಾದಗಳು ಸರ್......

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನಾ.. ."
ಈ ಸಾಲು ನೆನ್ಪಾಗ್ತಾಯಿದೆ..

ಹಾಗೆನೇ ಡಿ.ವಿ.ಜಿ ಅವರ ಒ೦ದು ಕಗ್ಗ...

ಹಳೆ ಸೂರ್ಯ ಹಳೆ ಚ೦ದ್ರ ಹಳೆ ಭೂಮಿ ಹಳೆ ನೀರು|
ಹಳೆ ಹಿಮಾಚಲ ಗ೦ಗೆ ಹಳೆ ವ೦ಶ ಚರಿತೆ ||
ಹಳೆಯವಿವು ನೀನಿದರೊಳಾವುದನು ಕಳೆದೀಯೋ?
ಹಳದು ಹೊಸತರೊಳಿದೆ - ಮ೦ಕುತಿಮ್ಮ ||

ಹಳೆದನ್ನೆಲ್ಲ ಮು೦ದೊ೦ದು ದಿನ ಕಳ್ಕೊತೀವಾ??

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಳೆದುಕೊಳ್ಳುವುದು/ಉಳಿಸಿಕೊಳ್ಳುವುದು ನಮ್ಮ ಕೈಯಲ್ಲೆ ಇದೆ ಅಲ್ವಾ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೂಪರ್ ಇಂದು.. ನಾನು ಇವರ್ಯಾರನ್ನು ಮರೆತಿಲ್ಲ...
ಅವಾಗಾವಾಗ ಒಂದು ಮಾಡುತ್ತಿರುತ್ತೀನಿ....
ತುಂಬಾ ಭಾವನಾತ್ಮಕವಾಗಿದೆ ನಿಮ್ಮ ಕವನ..ಯಾರೊ ನಮ್ಮವರೆ (ಬಳೆ, ಕಾಲ್ಗೆಜ್ಜೆ, ಕೊಂಕುಮ...ಹೂ )ನೋವನ್ನು ಅನುಭವಿಸಿದ್ದನ್ನು ಕೇಳಿದಂತಾಯಿತು....
ಹಾಗೆ ಸೀರೆಯನ್ನು ಸೇರಿಸಬೇಕಿತ್ತು
ಈ ರೀತಿಯ ಕಲ್ಪನೆ ಮೂಡಲು ಯಾರು ಸ್ಪೂರ್ತಿ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಈ ರೀತಿಯ ಕಲ್ಪನೆ ಮೂಡಲು ಯಾರು ಸ್ಪೂರ್ತಿ?>>
ಮೊನ್ನೆ ರೆಡಿಯೋ ಮಿರ್ಚಿಯಲ್ಲಿ "ಹಸಿರು ಗಾಜಿನ ಬಳೆಗಳೇ" ಹಾಡು ಕೇಳ್ತಿದ್ದೆ... ಕೈಯಲ್ಲಿದ್ದ ಮೆಟಲ್ ಬಳೆ ತೆಗೆದುಹಾಕಿ ಹಸಿರು ಗಾಜಿನ ಬಳೆ ಹಾಕಿಕೊಂಡೆ... ಎಲ್ಲರೂ ಏನು ವಿಶೇಷನಮ್ಮ ಈ ಬಳೆ ಹಾಕಿದ್ದೀಯಾ ಅಂತ ಕೇಳೋರೆ.... ಕೇವಲ ವಿಶೇಷ ಸಂದರ್ಭಗಳಿಗಷ್ಟೆ ಇವು ಸೀಮಿತವಾಗಿವೆಯೆ ಎನಿಸಿತು. ನಮ್ಮ ಕಾಲೇಜಿಗೆ ಮಲ್ಲಿಗೆ ಹೂವು ಮುಡಿದುಕೊಂಡು ಹೋದಾಗಲೆಲ್ಲ ಮತ್ತೆ ಇದೇ ಸನ್ನಿವೇಶ.... ಆಗ ಬರೆಯಬೇಕೆನಿಸಿತು....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಹಳ ಚೆನ್ನಾಗಿ ಬರೆದಿದ್ದೀರಿ ಇಂದುಶ್ರೀ. ನಾನು ಯಾವುದನ್ನೂ ಮರೆತಿಲ್ಲ. ಆದರೆ ಕೆಲಸದ ಒತ್ತಡದ ಕಾರಣ ಧರಿಸಲು ಸಾಧ್ಯವಾಗುವುದಿಲ್ಲ. ಈ ಕವನದಲ್ಲಿ ಇನ್ನೊಂದು ವಿಷಯ ಮರೆತಿದ್ದೀರಿ ಅನಿಸಿತು. ಈಗ ಯಾರಿಗೂ ಜಡೆಯೇ ಇಲ್ಲ, ಇನ್ನೂ ಮಲ್ಲಿಗೆ ಮುಡಿಯುವ ಮಾತೆಲ್ಲಿ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಈಗ ಯಾರಿಗೂ ಜಡೆಯೇ ಇಲ್ಲ, ಇನ್ನೂ ಮಲ್ಲಿಗೆ ಮುಡಿಯುವ ಮಾತೆಲ್ಲಿ?
ಹೌದು ಇಂಚರ... ಮರೆತಿದ್ದೆ.. ಜಡೆಯಿದ್ದವರೂ ಮುಡಿಯುವುದಿಲ್ಲವಲ್ಲ :(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವೂ ಸಹ ಅವುಗಳನ್ನೆಲ್ಲ ಬೇಡವೆನ್ನುತ್ತಿರುವ ಹುಡುಗಿಯರ ಓರಗೆಯವರೇ
(ಅಲ್ಲವೇ?:-) ) ಆಗಿದ್ದು ಹೀಗೆ ಬರೆದುಬಿಟ್ಟಿದ್ದೀರಿ !!!!
ನೀವು ಎಲ್ಲರಂತಲ್ಲ. ತುಂಬಾ ಸಂತೋಷ.
ಕವನ ಚೆನ್ನಾಗಿದೆ. ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲರಂತಲ್ಲ ಆದರೆ ಎಲ್ಲರೊಳಗೊಂದಾಗಿ ಬಾಳುವ ಆಸೆಯಿರುವವಳು...
ಆದ್ರೆ ನಿಜ ಹೇಳ್ತೀನಿ ನಂಗೆ ಬಳೆ ಹಾಕಿಕೊಳ್ಳೊದು, ಹೂವು ಮುಡಿಯೋದು ತುಂಬಾ ಇಷ್ಟ... ನಮ್ಮ ತರಗತಿಯಲ್ಲಿ ಬಳೇ ಧರಿಸುವ ಕೆಲವೇ ಹುಡುಗಿಯರಲ್ಲಿ(೧೫ ಜನರಲ್ಲಿ ಸುಮಾರು ೨-೩) ನಾನೂ ಒಬ್ಬಳು...... ಕಾಲ್ಗೆಜ್ಜೆ ಕಾಲಲ್ಲೆ ಇರುತ್ತೆ.... ಹಣೆಗೆ ಬೊಟ್ಟು ಇಟ್ಟುಕೊಳ್ಳದೆ ಹೊರಗೆ ಹೋಗುವುದೇ ಇಲ್ಲ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯರೇ ನಿಮ್ಮ ಕವನ ಓದಿದೆ. ಒಂದು ಸುಂದರವಾದ ಕವನ ನಮ್ಮಲ್ಲಿ ಒಂದು ಗಾದೆ ಇದೆ " ಜನರಿಗೆ ಹುಚ್ಚೋ ಜಾತ್ರೆಗೆ ಹುಚ್ಚೋ ಎಂದು"
ಹಾಗಾಗಿದೆ ಈಗಿನ ಜನರಿಗೆ ಆಧುನಿಕತೆಯ ಹಿಂಬಾಲಕರಾಗಿ ಅದರ ಹಿಂದೆ ಹುಚ್ಚರಂತೆ ಓಡುತ್ತಿದ್ದಾರೆ. ಛೆ! ನೋಡಲಾದಿತೇ? ಭಾರತೀಯ ನಾರಿಯ ಅಲಂಕಾರ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಛೆ! ನೋಡಲಾದಿತೇ? ಭಾರತೀಯ ನಾರಿಯ ಅಲಂಕಾರ?
ಪುರುಷರದ್ದು?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದು "ಜನ ಮರುಳೋ ಜಾತ್ರೆ ಮರುಳೋ" ಅಂತ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೂಪರ್ ಆಗಿದೆ ಇಂದುಶ್ರೀ ,
ನಿನ್ನ ಈ ಕವನ "ಹಸಿರು ಕಾಲುಂಗುರ ಶ್ರೀಮತಿಗೆ ಸುಂದರ ........."
ಹಾಡನ್ನು ನೆನಪಿಸಿತು .

ಇಂತಿ
ವಿನಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದು "ಹಸಿರು ಕಾಲುಂಗುರ" ಅಲ್ಲ ವಿನಯ ಅವರೆ..
ಬೆಳ್ಳಿ ಕಾಲು೦ಗುರ.. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕ್ಷಮಿಸಿ ಏನೋ ಬರೆಯಲು ಹೋಗಿ ಇನ್ನೇನೋ ಆಯಿತು
ನಾನು ಹಸಿರು ಗಾಜಿನ ಬಳೆಗಳೇ ಹಾಡು ತಲೆಯಲ್ಲಿ ಇಟ್ಟುಕೊಂಡು ಇದನ್ನ ಬರೆದೆ :D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದನ್ನ ಬೆಳ್ಳಿ ಕಾಲುಂಗುರ ಅಂತ ಬದಲಿಸಿಕೊಳ್ಳಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಖಂಡಿತ... ಕವನ ಮೆಚ್ಚಿದ್ದಕ್ಕೆ ಧನ್ಯವಾದಗಳು...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬೊಂಬಾಟ್ ಕವನ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಮಂಜು ಅವರೇ......

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಂದಾಗ್ಬೇಕು, ನಂದೂ ಅದೇ ಆಸೆ. ನನ್ ತಂಗೀರೆಲ್ಲ ಇದ್ಯಾವ್ದೂ ಬಿಟ್ಟಿಲ್ಲ. ಗೆಳತಿಯರಲ್ಲಿ ಕೆಲವರು ಇದನ್ನೆಲ್ಲ ಮರ್ತಿದಾರೆ, ಅವ್ರಿಗೆ ಆವಾಗಾವಾಗ ಬೈತಿರ್ತೀನಿ. ವಿಶೇಷವಾಗಿ, ಹಣೆಗೆ ಬೊಟ್ಟು ಇಟ್ರೆ ಹುಡುಗೀರ ಮುಖಕ್ಕೆ ಕಳೆ ಬರತ್ತೆ ಅಂತ ನನ್ಗನ್ಸತ್ತೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ವಿಶೇಷವಾಗಿ, ಹಣೆಗೆ ಬೊಟ್ಟು ಇಟ್ರೆ ಹುಡುಗೀರ ಮುಖಕ್ಕೆ ಕಳೆ ಬರತ್ತೆ ಅಂತ ನನ್ಗನ್ಸತ್ತೆ.
ಶೇ.೧೦೦% ನಿಜ ವಿನಯ ಅವರೆ......

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನಕ್ಕೆ ಮನ ಸೆಳೆಯುವ ಗುಣ ತುಂಬಿದೆ. ಇಂದಿನ ಆಧುನಿಕ ಸ್ತ್ರೀಯರಲ್ಲಿ ಭಾರತೀಯ ನಾರಿಯರನ್ನು ಹುಡುಕಲು ಸಾಧ್ಯವಿಲ್ಲ ಬಿಡಿ..... ಹೆಣ್ಣಿನ ಅಂದವ ಹೆಚ್ಚಿಸಲು ಹಣೆಗೆ ಸಿಂಧೂರ, ಮುಡಿಗೆ ಮಲ್ಲಿಗೆ, ಕೈಗಳಿಗೆ ಗಾಜಿನ ಬಳೆಗಳು, ಕಾಲಿಗೆ ಗೆಜ್ಜೆ ಬೇಕೇ ಬೇಕು ಎಂಬ ಭಾವನೆ ನನ್ನದು.. ಇವೆಲ್ಲದ್ದರ ಜೊತೆಗೆ ಲಕ್ಷಣವಾದ ಸೀರೆ ಉಟ್ಟರೆ ಬಲು ಚೆಂದ.. ಆಧುನಿಕತೆಯ ಪ್ರಭಾವದಲ್ಲಿ ಸೀರೆ ಉಡುವುದನ್ನೇ ಮರೆತ್ತಿದ್ದಾರೆ ನಮ್ಮ ಹೆಣ್ಣು ಮಕ್ಕಳು....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮ್ಮ ಕಡೆಯೆಲ್ಲಾ ಮದುವೆಯಾದ ನಂತರವೇ ಸೀರೆ ಉಡೋದು.... ನಾನಿನ್ನು ಉಟ್ಟೂಕೊಂಡಿಲ್ಲವಲ್ಲ ಅದಕ್ಕೆ ಅದನ್ನು ಸೇರಿಸಲಿಲ್ಲ.... :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ಕಾರ ಇಂದುಶ್ರಿ,

ನಿಜವಾಗಿಯೂ ತುಂಬಾ ಅರ್ಥಪೂರ್ಣ ಕವನ, ನಾನು ನಮ್ಮ ಆಪೀಸ್ನಲ್ಲಿರೊ ಹುಡುಗೀರಗೆ ಇದನ್ನೆ ಹೇಳತಿರತೀನಿ.

ನಿಮ್ಮ

ವೀರಭದ್ರಪ್ಪ ಅಂಗೂರ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನ ಮೆಚ್ಚಿದ್ದಕ್ಕೆ ಧನ್ಯವಾದಗಳು ವೀರಭದ್ರಪ್ಪನವರೇ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ವಿಷಯದಲ್ಲಿ ಗಂಡ್ಮಕ್ಳು ಹಿಂದೆ ಇಲ್ಲ. ಈಗ ಯಾರ್ ಲುಂಗಿ ಪಂಚೆ ಉಡ್ತಾರೆ ಹೇಳಿ? ಮನೆಯಲ್ಲೂ ಅಷ್ಟೇ ಚಡ್ಡಿ, ಶಾರ್ಟ್ಸ್, ತ್ರೀ ಫೋರ್ಥ್ ಏನೇನೂ ಹಾಕ್ಕೋತಾರೆ. ಎಲ್ಲ ಕಾಲಕ್ಕೆ ತಕ್ಕಂತೆ ಬದಲಾವಣೆ ಸರ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ನಿಮ್ಮ ಮಾತು ನಿಜ ಶೋಭಾರವರೇ...... ನೀವೇ ಯೋಚನೆ ಮಾಡಿ ಬದಲಾವಣೆ ಯಾವ ತರಹದಲ್ಲಿ ಇರಬೇಕು ಅಂತ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂದು ಶ್ರೀ ಯವರೆ ನಿಮ್ಮ ಈ ಕವನ ನನಗೆ ತುಂಬಾ ಹಿಡಿಸಿತು ನಾನು ಓದಿದ ನಿಮ್ಮ ಮೊದಲನೇ ಕವನ "ಚಂದಮಾಮ" ನಾನಿನ್ನು ಮರೆತಿಲ್ಲ ತುಂಬಾ ಭಾವಪೂರ್ಣವಾಗಿ ಈ ಕವನವನ್ನ ಬರೆದಿದ್ದೀರಿ ಅನ್ನಿಸುತ್ತೆ ಅಥವಾ ಕವನ ಭಾವಪೂರ್ಣವಾಗಿದೆ.ಅಂದಹಾಗೆ ನನಗೆ ನೀವು ಮೂಗುತಿಯನ್ನ ಗೆಳತಿಯರ ಸಂಗಾತಿಯಾಗಿಸಿದ್ದರೆ ಚಂದಿತ್ತು ಯಾಕೆಂದರೆ ಮೂಗುತಿಯ ಹೊರತಾಗಿ ಒಬ್ಬ ಸುಂದರವಾದ ಹೆಣ್ಣನ್ನು ಕಲ್ಪಿಸಿಕೊಳ್ಳುವುದಕ್ಕೂ ನನ್ನ ಕೈಲಿ ಸಾಧ್ಯವಾಗುತ್ತಿಲ್ಲ ಇದು ನನ್ನ ವೈಯುಕ್ತಿಕ ಅಭಿಪ್ರಾಯ.ಮತ್ತೊಮ್ಮೆ ಇಂತಹ ಅದ್ಬುತ ಕವನ ನೀಡಿದಕ್ಕೆ ಧನ್ಯವಾದಗಳು.ಅಸು ಸಾರ್ ಹೇಳಿದ ಮಾತು ಸರಿ ಅನ್ಸುತ್ತೆ(ಸಂಪದದಲ್ಲಿ ಯಾಕಿರಬೇಕು).ಇಂತಹ ನಿಧಿಯನ್ನ ಯಾರು ತಾನೆ ಕಳೆದುಕೊಳ್ಳಲು ಬಯಸುತ್ತಾರೆ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಮಂಜುನಾಥ್ ಅವರೇ.. ನಮ್ಮಮ್ಮನದ್ದು ಒಂದು ಸಂಪ್ರದಾಯ... ಸೋದರ ಮಾವ ಮೂಗು ಚುಚ್ಚಿಸಬೇಕಂತೆ...ನಮ್ಮ ಮಾವ ಇನ್ನೂ ಚುಚ್ಚಿಸಿಲ್ಲ. ಅದಕ್ಕೆ ನಾನು ಮೂಗುತಿ ಹಾಕುತ್ತಿಲ್ಲ :( ಹಾಗಾಗಿ ಅದರ ಬಗ್ಗೆ ನಾನು ಬರೆದಿಲ್ಲ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.