ನಾನು ಹಾಗೂ ಟಿ.ವಿ. ಪ್ರೋಗ್ರಾಮು!

2.5

ಇತ್ತೀಚೆಗಷ್ಟೆ ಕೆಲಸದ ಏಕತಾನತೆಯಿಂದ ಬೇಸರಗೊಂಡು ಬೇರೆ ಕೆಲಸ ಸೇರಿಕೊಂಡಿದ್ದೆ. ಎಲ್ಲರನ್ನೂ ಆಕರ್ಷಕವಾಗಿ ಕಾಣುವಂತೆ, ಅವರ ಸೌಂದರ್ಯವನ್ನು ಇನ್ನೂ ಹೆಚ್ಚಿಸುವ ಒಂದು ಸಂಸ್ಥೆ. ಅಲ್ಲಿ ಮ್ಯಾನೇಜರ್ ಎಂಬ ಪೋಸ್ಟ್ ಬೇರೆ ಆಕರ್ಷಕವಾಗಿ ಕಂಡಿತ್ತು. ಅಲ್ಲಿ ನನ್ನ ಪ್ರತಿಭೆಯನ್ನು ತೋರಿಸಲು ಒಂದು ಅವಕಾಶವೂ ಸಿಗ ಬಹುದೆಂಬ ಆಶಯದಿಂದ ಆ ಸಂಸ್ಥೆಗೆ ಸೇರಿದೆ. ನನಗೊಪ್ಪಿಸಿದ ಕೆಲಸವನ್ನು ಬಹಳ ಅಚ್ಚುಕಟ್ಟಾಗಿ ಮಾಡಲು ಶುರುಮಾಡಿದೆ.

ಇದೇ ಸಂಸ್ಥೆಯ ಬಗ್ಗೆ ಒಂದು ಎಪಿಸೋಡ್ ಮಾಡಲು ಟಿ.ವಿ.ಯೊಂದು ಯೋಜನೆ ಮಾಡಿತು. ಸಂಸ್ಥೆಯಲ್ಲಿ ಕೆಲಸ ಮಾಡುವವರೆಲ್ಲರ ಮಾತೃಭಾಷೆ ಹಿಂದಿ (ನನ್ನನ್ನು ಬಿಟ್ಟು). ನಿರ್ದೇಶಕರು ಕೂಡಾ ಹಿಂದಿಯವರೇ. ಸರಿ! ಯಾರಿದ್ದಾರೆ ಕನ್ನಡದಲ್ಲಿ ಮಾತನಾಡಲು? ನಾನಿಲ್ಲವೇ? ನಾನೇ ಆಯ್ಕೆಯಾದೆ (ಸ್ಪರ್ಧಿಸಲು ಯಾರಾದರಿದ್ದಲ್ಲವೇ :-)) ಬಯಸದೇ ಬಂದ ಭಾಗ್ಯ! ಎಲ್ಲರೆದುರು ನನಗೇನೂ ಇಷ್ಟವಿಲ್ಲ, ನಿಮ್ಮ ದಾಕ್ಷಿಣ್ಯಕ್ಕಾಗಿ ಒಪ್ಪಿಕೊಂಡಿದ್ದೇನೆ ಎನ್ನುವ ಧೋರಣೆ ತೋರಿದರೂ ಒಳಗೊಳಗೆ ಬಹಳ ಖುಶಿ, ನಾನು ಟಿ.ವಿ.ಯಲ್ಲಿ ಬರುತ್ತೀನಿ ಅಂತಾ. ಟಿ.ವಿ. ಶೋಗಳಲ್ಲಿ ಭಾಗವಹಿಸುವುದು, ರೇಡಿಯೋಗಳಲ್ಲಿ ಪ್ರೋಗ್ರಾಮ್ ನೀಡುವುದು (ಚಿಕ್ಕವಳಾಗಿದ್ದಾಗ ಒಂದು ರೇಡಿಯೋ ಕಾರ್ಯಕ್ರಮ ಕೂಡಾ ನೀಡಿದ್ದೆ ;-)), ಪೇಪರಿನಲ್ಲಿ ಫೋಟೋ ಬರುವುದು (ಶ್ರದ್ಧಾಂಜಲಿಯಲ್ಲ ;-)), ಇದೆಲ್ಲವೂ ನಮಗೆ ಎಷ್ಟು ಖುಶಿ ಕೊಡುತ್ತೆ ಅಲ್ಲ್ವಾ :-) ನನಗಂತೂ ಬಹಳ ಖುಶಿಯಾಯಿತು. ಪೀಠಿಕೆನೇ ಜಾಸ್ತಿ ಆಯಿತಲ್ವಾ (ಏನು ಮಾಡೋದು? ಎಲ್ಲಾ ಈ ಧಾರಾವಾಹಿಗಳ ಪ್ರಭಾವ :-) ಹಾಗಂದ ಕೂಡಲೇ ಹೆದರಿಕೊಳ್ಳಬೇಡಿ! ಇದನ್ನಂತೂ ೨-೩ ಕಂತು ಮಾಡೋಲ್ಲ :-))

ಒಂದು ಒಳ್ಳೆಯ ದಿವಸ ಗೊತ್ತಾಯಿತು. ನಾನು ಕೂಡಾ ಜೀವನದಲ್ಲಿ ಮೊದಲ ಬಾರಿಗೆ ಮೇಕಪ್ ಮಾಡಿಕೊಳ್ಳುವ, ಟಿ.ವಿಯಲ್ಲಿ ಕಾಣಿಸಿಕೊಳ್ಳುವ ಸಂಭ್ರಮದಲ್ಲಿ ರಾತ್ರಿಯೆಲ್ಲಾ ನಿದ್ದೆ ಮಾಡದೇ, ಸಂಭಾಷಣೆಯನ್ನು ಪ್ರಾಕ್ಟೀಸ್ ಮಾಡುತ್ತಾ ಕುಳಿತೆ! ಮನೆಯವರ ಕೈಯಲ್ಲಿ ‘ನಿನ್ನದ್ಯಾಕೋ ಅತಿಯಾಯಿತು’ ಎಂದು ಬೈಸಿಕೊಂಡರೂ, ಆ ಬೈಗುಳ ಕಿವಿಯವರೆವಿಗೂ ತಲುಪಲೇ ಇಲ್ಲ :-) ಯಾವಾಗ ಬೆಳಗಾಗುವುದೋ, ಯಾವಾಗ ಮೇಕಪ್ ಮಾಡಿಕೊಳ್ಳುವುದೋ, ಸಂಭಾಷಣೆಯನ್ನು ಒಪ್ಪಿಸುವುದು, ಕನ್ನಡಿಯ ಮುಂದೆ ಪ್ರಾಕ್ಟೀಸ್ ಕೂಡಾ ಮಾಡಿದ್ದಾಯಿತು! ಬೆಳಗೆದ್ದ ಕೂಡಲೇ ಮಾಡಿದ ಮೊದಲ ಕೆಲಸ, ಗೆಳೆಯ-ಗೆಳತಿಯರಿಗೆಲ್ಲಾ ನನ್ನ ಪ್ರೋಗ್ರಾಮ್ ಇದೆ, ನೋಡಿ ಎಂದು ಮೆಸೇಜ್ ಕೂಡಾ ಕಳಿಸಿದ್ದಾಯಿತು. ನಂತರ ಬೇಗ ಬೇಗ ರೆಡಿಯಾಗಿ ಎಲ್ಲರಿಗಿಂತಲೂ ಮೊದಲಿಗೆ ನಮ್ಮ ಸಂಸ್ಥೆಗೆ ಹೋದೆ. ಮೇಕಪ್ ಮಾಡಿಸಿಕೊಂಡೆ. ನನ್ನ ಮುಖದ ಗುರುತು ನನಗೆ ಸಿಗಲಿಲ್ಲ :-) (ಮೊದಲ ಬಾರಿಗೆ ಮೇಕಪ್ ಮಾಡಿದ್ದರಿಂದ ಹೀಗನ್ನಿಸುತ್ತಿದೆ ಅಂತಾ ಎಲ್ಲರೂ ಸಮಾಧಾನ ಮಾಡಿದರು. ನಾನಿನ್ನು ಮಾತಾಡಬೇಕಿತ್ತಲ್ವಾ;-) ಅದಕ್ಕೆ ಬೆಣ್ಣೆ ಹಚ್ಚುತ್ತಿರಬೇಕಂದುಕೊಂಡೆ). ತಿಂಡಿ ತಿಂದು, ನೀರು ಕೂಡಾ ಕುಡಿದು ಮೇಕಪ್ ಗಾಗಿ ಕುಳಿತಿದ್ದೆ. (ಲಿಪ್ ಸ್ಟಿಕ್ ಹೋಗಿಬಿಟ್ಟರೆ) ನಾನು ರೆಡಿಯಾದೆ.

೧೧ ಗಂಟೆಗೆ ಬರುವುದಾಗಿ ತಿಳಿಸಿದ್ದ ರೆಕಾರ್ಡಿಂಗ್ ಟೀಮಿನವರು ೧೨.೩೦ ಯಾದರೂ ಬರಲೇ ಇಲ್ಲ. ಫೋನ್ ಮಾಡಿದ್ದಕ್ಕೆ ಬೇರೆ ಕಡೆ ರೆಕಾರ್ಡಿಂಗ್ ನಡೆಯುತ್ತಿದೆ. ಅದು ಮುಗಿದ ತಕ್ಷಣವೇ ಬರುವುದಾಗಿ ತಿಳಿಸಿದರು. ೩ ಗಂಟೆಯಾದರೂ ಪತ್ತೇ ಇಲ್ಲಾ. ಬೆಳಿಗ್ಗೆ ತರಾತುರಿಯಲ್ಲಿ (ಖುಶಿಯಲ್ಲಿ), ಸರಿಯಾಗಿ ತಿಂಡಿ ತಿಂದಿರಲಿಲ್ಲ. ಹೊಟ್ಟೆ ಚುರುಗುಟ್ಟುತ್ತಿತ್ತು. ಊಟ ಮಾಡೋಣವೆಂದುಕೊಂಡರೆ ಮೇಕಪ್ ಬೇರೆ ಕರಗಿಹೋಗುವುದೆಂಬ ಭಯ ಒಂದು ಕಡೆ, ಆತಂಕದಲ್ಲಿ ಪ್ರಾಕ್ಟೀಸ್ ಮಾಡಿದ್ದ ಮಾತುಗಳೆಲ್ಲವೂ ಮರೆತು ಹೋದಂತಾಗುತ್ತಿತ್ತು. ೫ ಗಂಟೆ ಆಯಿತು. ಯಾರ ಸುದ್ದಿಯೂ ಇಲ್ಲಾ. ಕಡೆಗೆ ಧೈರ್ಯ ಮಾಡಿ ನಾನೇ ಫೋನ್ ಮಾಡಿದೆ. ಇವತ್ತ್ಯಾಕೋ ಬರಲು ಸಾಧ್ಯವಾಗುತ್ತಿಲ್ಲಾ. ಕ್ಷಮಿಸಿ. ಇನ್ನೊಮ್ಮೆ ನೋಡುವ ಅಂತಾ ಹೇಳಿಬಿಡೋದಾ!

ಇನ್ನೂ ಯಾವತ್ತು ಮುಹೂರ್ತ ಕೂಡಿ ಬರುತ್ತೋ? :-(

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಅರವಿಂದ್..ನೀವು ನನಗಿಂತ ಒಂದು ಹೆಜ್ಜೆ ಮುಂದೆ..ಚೆನ್ನಾಗಿ ತಮಾಶೆ ಮಾಡ್ತೀರ..!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಪ್ರದೀಪ್ :-) ನನ್ನ ತಪ್ಪುಗಳನ್ನು ತೋರಿಸಿಕೊಟ್ಟಿದ್ದಕ್ಕೆ. ನಾನೆಲ್ಲೂ ತಪ್ಪು ಮಾಡಿಲ್ಲ, ನಾನು ಹೀಗೆಯೇ, ನಾನು ಕನ್ನಡದಲ್ಲೇ ಮಾತಾಡುತ್ತೀನಿ ಅಂತೆಲ್ಲೂ ಹೇಳಿಕೊಂಡಿಲ್ಲ. ಕನ್ನಡದ ಉದ್ಧಾರಕ್ಕಾಗಿ ನಾನು ಹುಟ್ಟಿರುವುದು ಅನ್ನುವ ದುರಭಿಮಾನವೂ ನನಗಿಲ್ಲ. ಕನ್ನಡವನ್ನು ನಾವ್ಯಾರೂ ಉದ್ಧಾರ ಮಾಡಬೇಕಾಗಿಲ್ಲ. ನಾವು ಮಾಡಲಿ, ಮಾಡದಿರಲಿ, ಕನ್ನಡಕ್ಕೆ ಅದರ ಅಸ್ತಿತ್ವ ಇದ್ದೇ ಇದೆ, ಇರುತ್ತದೆ. ಹಾಗೆಯೇ ನಾನೆಲ್ಲೂ ತಮಿಳಿನಲ್ಲಿ ಹೇಳುವುದು ತಪ್ಪು, ಕನ್ನಡದಲ್ಲಿ ಮಾತ್ರ ಬರೆಯಬೇಕು, ಕೊಂಕಣಿಯವರಿಗೆ ಕನ್ನಡದ ಬಗ್ಗೆ ಮಾತಾಡಲು ಹಕ್ಕಿಲ್ಲ, ಅಂತಲೂ ವಾದ ಮಾಡಿಲ್ಲ. ನಾನು ಹೇಳಿದ್ದು, ಹೇಳ್ತಾ ಇರೋದು ಇಷ್ಟೆ, ಕನ್ನಡದ ಬಗ್ಗೆ ಅಭಿಮಾನ ಇರುವವರು, ಉದ್ದಿನವಡೆಗೆ ಮೆದುವಡೆ (ಅದು ತಮಿಳ್ಗನ್ನಡ) ಅನ್ನಬಾರದೂ ಅಂತಾ ವಾದ ಮಾಡಿದವರು, ಬಳಸಿದ ಕಂಗ್ಲೀಷ್ ಬಗ್ಗೆ ನನ್ನ ವಿರೋಧ. ಅದಕ್ಕೆ ಪ್ರತಿಕ್ರಿಯೆಯಾಗಿ ಅವರು ಬಳಸಿದ ಕಂಗ್ಲೀಷನ್ನು ತಪ್ಪೆಂದು ಒಪ್ಪಿಕೊಳ್ಳಬಹುದಿತ್ತು. ಅದು ಬಿಟ್ಟು ನಾನು ಹೀಗೆ ಎಂದು ಹೇಳಿದ ಹಾಗೆ ಆ ಹೋಟೆಲಿನವನು ಕೂಡಾ ಹೇಳಬಹುದಲ್ಲವೇ? ಯಾರೋ ಒಬ್ಬ ಹೋಟೆಲಿನವನು ಉದ್ದಿನವಡೆಗೆ ಮೆದುವಡೆ ಎಂದ ಮಾತ್ರಕ್ಕೆ ಇಷ್ಟು ವಾದ ವಿವಾದಗಳು ನಡೆಯುವುದಾದರೆ, ಇವತ್ತಿನ ದಿವಸ ಕನ್ನಡಮ್ಮನ ಮಕ್ಕಳೆಂದು ಬೀಗುವ ಎಷ್ಟು ಮಂದಿ ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದ ಶಾಲೆಗೆ ಸೇರಿಸಿದ್ದಾರೆ? ಎಷ್ಟು ಮಂದಿ ತಮ್ಮ ಮಕ್ಕಳೊಡನೆ ಕನ್ನಡದಲ್ಲಿ ಮಾತಾಡುತ್ತಾರೆ? ಕಂಗ್ಲೀಷ್ ಸರಿಯಾದರೆ ತಮಿಳ್ಗನ್ನಡವೂ ಸರಿಯೇ! ತೆಲುಗು ಕನ್ನಡವೂ ಸರಿಯೇ! ಇಷ್ಟೇ ನನ್ನ ಉದ್ಧೇಶ :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಹಾ ಇಂಚರ ಅವರೇ..ಎಂಥಾ ವಿಶಾಲ ಮನೊಭಾವ ರೀ ನಿಮ್ಮದು ..ಮೊನ್ನೆ ಸುವರ್ಣ ಚಾನೆಲ್ ನಲ್ಲಿ ಕನ್ನಡಕ್ಕೆ ಡಬ್ಬಿಂಗ್ ಮಾಡಿದ ಒಂದು ತೆಲುಗು ಸಿನಿಮಾ ಪ್ರಸಾರ ಆಯಿತು. ಅದಕ್ಕೆ ಎಲ್ಲಾ ಕಡೆಯಿಂದ ವಿರೋಧ ವ್ಯಕ್ತವಾಗಿ ಕೊನೆಗೆ ಅವರು ಪತ್ರಿಕೆಗಳಲ್ಲಿ ಕ್ಶಮೆಯಾಚಿಸಿದ್ರು..ನಿಮ್ಮ ಪ್ರಕಾರ ಅವರು ಮಾಡಿದ್ದು ಸರಿ ಏಕೆಂದರೆ ಕೇಳೋದಿಕ್ಕೆ ಧ್ವನಿ ಕನ್ನಡದಲ್ಲೆ ಇತ್ತಲ್ವ ಅಥವಾ ಪ್ರತಿಭಟನೆ ಮಾಡಿದವರಿಗೆ ಯಾವ ನೈತಿಕ ಹಕ್ಕು ಇಲ್ಲ ಏಕೆಂದರೆ ಅವರೆಲ್ಲರೂ ಶುದ್ಧ ಕನ್ನಡ ಮಾತನಾಡುವುದಿಲ್ಲ ಮತ್ತೆ ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸಿಲ್ಲ ಎಂದು ನಿಮ್ಮ ಅಂಬೋಣವೇ? ಶುದ್ಧ ಕನ್ನಡ ಮಾತನಾಡುವುದಿಲ್ಲ ಎಂದು ಕನ್ನಡದ ಬಗ್ಗೆ ಹೋರಾಟವನ್ನೆ ಮಾಡಬಾರದೆಂಬ ನೈತಕ ಮಾತನ್ನು ಪ್ರತಿಪಾದಿಸುವ ಹಕ್ಕು ಯಾರಿಗೂ ಇಲ್ಲ..ಇಲ್ಲವಾದರೆ ಜನ ಸುಮ್ಮನೆ ಬಿಡುವುದಿಲ್ಲ..ಹಿಡಿದು ಎಲ್ಲರ ಮುಂದೆ ನಾಲ್ಕು ಬಿಗಿಯುತ್ತಾರೆ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರದೀಪ್ ಹಾಗು ಇಂಚರ ಅವರೆ,

ಈ ವಿಚಾರದ ಚರ್ಚೆ ನನ್ನ ಲೇಖನದಲ್ಲಿ / ಲೇಖನದಿಂದ ಶುರು ಆಗಿದ್ದು. ಹಾಗಾಗಿ ಆ ವೇದಿಕೆಯಲ್ಲೇ ನಡೆದರೆ ಸೂಕ್ತ ಎಂದು ನನ್ನ ಭಾವನೆ.

ವಿ.ಸೂ : ಈ ಕಾರಣದಿಂದ ನನ್ನ ಲೇಖನಕ್ಕೆ ಭೇಟಿ ಕೊಟ್ಟವರ ಸಂಖ್ಯೆ ಜಾಸ್ತಿ ಆಗುತ್ತದೆ ಅಥವ ವಿಮರ್ಶೆಗಳ ಸಂಖ್ಯೆ ಹೆಚ್ಚುತ್ತದೆ ಎಂಬ ದುರಾಸೆ ನನಗಿಲ್ಲ.
ಒಂದೇ ವೇದಿಕೆಯಲ್ಲಿ ನಡೆದರೆ ಚರ್ಚೆಯನ್ನು ಹಿಂಬಾಲಿಸುವುದಕ್ಕೆ ಅನುಕೂಲವಾಗುತ್ತದೆ ಎಂದು ನನ್ನ ಭಾವನೆ.

ಶಂಕ್ರ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವ್ಯಾರು ಹೇಳಲೇ ಇಲ್ಲ! ಮತ್ಯಾಕೆ ವಿ.ಸೂ :-) ನಮ್ಮನ್ನು ಕಂಡ್ರೆ ಅಷ್ಟೊಂದು ಭಯಾನಾ :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಏನ್ರೀ ಪ್ರದೀಪ್! ಕಾಂಪ್ಲಿಮೆಂಟ್ ಮೆಲೆ ಕಾಂಪ್ಲಿಮೆಂಟ್ ಕೊಡ್ತಿದ್ದೀರಿ. ಏನು ಸಮಾಚಾರ ;-) (ಬುದ್ಧಿಜೀವಿ ಅಂದ್ರಿ, ಈಗ ನೋಡಿದ್ರೆ ವಿಶಾಲ ಮನೋಭಾವ ಅಂತಿದ್ದೀರಿ) ಬಹಳ ಖುಷಿಯಾಯಿತು. ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂಚರಕ್ಕ ಸಕತ್ ಹಿ ಹೀ ;) , ನಾನು ಮೇಧಾವಿಯಂತೆ ಹೇ ಹೀ ;) :) :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಬರೆಯುತ್ತಿರುವ ಈ ಪ್ರತಿಕ್ರಿಯೆ ಇಂಚರ, ಆಸು ಹೆಗ್ಡೆ, ವಿನುತ, ವಿನಯ, ಗುರು ಬಾಳಿಗ, ಮಂಸೋರೆ, Mr. ಕನ್ನಡಿಗ, ನಾಗೇಂದ್ರ ಎಲ್ಲರಿಗೂ ಅನ್ವಯಿಸುತ್ತದೆ.
ಇಂಚರ ಅವರು ಬರೆದಿರುವ ಈ ಲೇಖನದಲ್ಲಿ ಆಂಗ್ಲ ಪದಗಳು ಇಲ್ಲವೇ ? ಇದ್ದಾರೆ ಅದನ್ನು ಅವರು ಹೇಗೆ ಸಮರ್ಥಿಸಿಕೊಳ್ತಾರೆ? ಗುರು ಬಾಳಿಗ ಬರೆದಿರುವ ಸಣ್ಣ ಕಥೆಯಲ್ಲಿ ಕೂಡ ಆಂಗ್ಲ ಪದಗಳ ಬಳಕೆ ಧಾರಾಳವಾಗೆ ಆಗಿದೆ. ಇದನ್ನು ಯಾರಾದರೂ ಪ್ರಶ್ನಿಸುವ ಗೋಜಿಗೆ ಹೋದಿರಾ?
ನಾನು ಕಂಗ್ಲಿಷಿನಲ್ಲಿ ಬರೆದರೆ ಭಾಷಾಭಿಮಾನ, ಭಾಷಾ ಶುದ್ಧತೆಯ ಕೊರತೆ ಇತ್ಯಾದಿ. ಅದೇ, ನೀವು ಬರೆದರೆ ಅದು ಆಡುಭಾಷೆ, ತುಂಬಾ ಸ್ವಾಭಾವಿಕವಾಗಿ ಮೂಡಿಬರಲು ಬರೆಯುವ ರೀತಿ.
ಯಾಕೆ ಈ ರೀತಿಯಾಗ ಇಬ್ಬಗೆಯ ನೀತಿ ಅನುಸರಿಸುತ್ತೀರಾ ನೀವು? ಇನ್ನು ಮುಂದೆ ನನ್ನ ಲೇಖನಗಳಲ್ಲಿ ಆಂಗ್ಲ ಪದಗಳು ಇದ್ದಲ್ಲಿ ಅದನ್ನು ಪ್ರಶ್ನಿಸುವ ಅಥವಾ ಟೀಕಿಸುವ ನೈತಿಕ ಹಕ್ಕು ನಿಮಗೆ ಇರುವುದಿಲ್ಲ.
ಇನ್ನು ಮುಂದೆ ನೀವು ಟೀಕಿಸುತ್ತೀರಾ ಅನ್ನೋ ಕಾರಣಕ್ಕೆ ನಾನು ಅಚ್ಚ ಕನ್ನಡದಲ್ಲಿ ಬರೆಯುವುದಕ್ಕೆ ಶುರು ಮಾಡೋದಿಲ್ಲ.
ನಾನು ಮಾತನಾಡುವ ಭಾಷೆ, ಬರೆಯುವ ಭಾಷೆ ಎಷ್ಟು ಶುದ್ಧ ಇದೆ ಎನ್ನುವುದು ನನಗೆ ಗೊತ್ತು. ನಿಮ್ಮ ಮಾಪನ ನನಗೆ ಬೇಕಾಗಿಲ್ಲ. ನಿಮ್ಮಂಥವರನ್ನೇ ಆಂಗ್ಲ ಭಾಷೆಯಲ್ಲಿ HYPOCRITES ಎಂದು ಕರೆಯುವುದು.

ಶಂಕ್ರ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಂಕರರೇ ನನ್ನ ಹೆಸರು ಇಲ್ಲಿ ಇರೋದರಿಂದ ಉತ್ತರಿಸುತಿದ್ದೇನೆ :
" ಯಾರು ನಿಮಗೆ ಕಂಗ್ಲಿಷ್ ಉಪಯೋಗಿಸಬೇಡಿ ಅಂತ ಹೇಳಿಲ್ಲ , ಕನ್ನಡದ ಬಗ್ಗೆ ನಿಮ್ಮ ಬರಹ ಇದೆ ಎಂದ ಮೇಲೆ ಅಲ್ಲಿ ಅನ್ಯ ಭಾಷೆಯ ಪದಗಳ ಬಳಕೆ ಏಕೆ? ಇಷ್ಟೇ ಎಲ್ಲರ ಪ್ರಶ್ನೆ ಆಗಿತ್ತು . ನೀವು ಅದನ್ನ ಒಪ್ಪಿಕೊಳ್ಳೋದು ಬಿಟ್ಟು , ಸುಮ್ಮನೆ ವಾದಕ್ಕೆ ಇಳಿದಿರಿ ಅನ್ಸುತ್ತೆ . ನನ್ನ ಬರ್ಮುಡಾ ತ್ರಿಕೋನ ಲೇಖನದಲ್ಲೇ ಹಲವಾರು ಕಂಗ್ಲಿಷ್ ಪದಗಳಿವೆ , ಯಾರು ಯಾಕೆ ಅಂತ ಕೇಳಿಲ್ಲ , ನಿಮ್ಮನ್ನೇ ಕೇಳಿದ್ದಾರೆ ಅಂದ್ರೆ ಅರ್ಥ ಮಾಡ್ಕೊಳ್ಳಿ. ವೈಯಕ್ತಿಕವಾಗಿ ನಿಮ್ಮನ್ನು ನಿಂದಿಸುವ ಉದ್ದೇಶ ಯಾರಲ್ಲೂ ಇಲ್ಲ. ತನ್ನ ಕಲ್ಬುಡ ಬಿಟ್ಟು ಬೇರೆಯವರದ್ದು ತೋರಿಸೋದು ಎಷ್ಟು ಚೆನ್ನ ನೀವೇ ಯೋಚಿಸಿ . ಇದಕ್ಕಿಂತ ಹೆಚ್ಚೇನು ಹೇಳ ಬಯಸುವುದಿಲ್ಲ .ಹೇಳಿದರೂ ಪ್ರಯೋಜನವಿಲ್ಲ ಅನ್ಸುತ್ತೆ ".

ಇಂತಿ
ವಿನಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಂಕರರೇ... ದನ್ಯೋಸ್ಮಿ...(ಸಂಸ್ಕೃತ)
ನನ್ನನ್ನು... ನೀವು ಇಲ್ಲಿ ಸೇರಿಸಿದ್ದೀರಿ... ಒಳ್ಲೇದು.. :) ನೀವು ನಿಮ್ಮ ಆಡು ಭಾಷೆಯಲ್ಲಿ ಕಂಗ್ಲೀಶ್ ಸರಿ ಎನ್ನುತ್ತೀರಾ.. ಇನ್ನೊಬ್ಬರಿಗೆ ಸರಿ ಅಲ್ಲ ಎನಿಸುತ್ತದೆ... ಅದು ನಿಮ್ ನಿಮ್ಮ್ ಇಷ್ಟ... ಹೆಂಗಾದ್ರು ಕಚ್ಚಾಡಿ... ನನ್ಗೇನಾಗ್ಬೇಕು... ನಾನ್ ಬೇಕಂದ್ರೆ ಕನ್ನಡದಲ್ಲಿ ತೆಲುಗುಲೋನು ರಾಸ್ತಾನು.. ಕಾದು ಟೈಪು ಚೇಸ್ತಾನು.. ನಾಕಿ ಎವಡಿನುಂಚಿ ಸರ್ಟಿಫಿಕೆಟ್ ಅವಸರಮ್ ಲೇದು... ಎವಡೋ ಚೆಬಿತೆ ಕಾನಿ ನೇನು ಕನ್ನಡಿಗ ಕಾಲೇನು... ಅಲಾ ನಾಪೈನ ಎವಡು ಪ್ರಶ್ನಿಂಚೆ ಹಕ್ಕು ಲೇದು... ಇದು ನಿಮ್ ಉತ್ತರಾನೆ... ಅದೇನೊ<<< HYPOCRITES>>> ಅನ್ನಾರು ಕದಾ ಅಷ್ಟ್ತು ದೊಡ್ಡ ಪದಗಳು ನನಗೆ ಅರ್ಥ ಆಗೋಲ್ಲಾ.. ಅರ್ಥಮ್ ಚೇಸುಕುನೆ ಅವಸರಮು ನಾಕಿ ಲೇದು... ಇಬ್ಬಗೆ ನೀತಿಯ ಬಗ್ಗೆ ಮಾತಾಡ್ತೀರಾ.. ಅದು ಇಬ್ಬಗೆ ನೀತಿ ನೀವ್ ಅನ್ಕೊಂಡ್ರೆ....... ಬಿಟ್ರೆ... ಅದನ್ನ ಯ್ಯಾರು ಯಾಕ್ ಬಿಟ್ಟೆ ಅಂತ ಕೆಳಲ್ಲಾ... ಅವ್ರು ನಿಮ್ಮನ್ನ್ ಕೇಳಿದ್ರು ಇನ್ನೊಬ್ರನ್ನ ಬಿಟ್ರು... ಇಲ್ಲಿ ಸಂಪದಲ್ಲಿ ಇಂತಹ ತೋರಿಕೆಯ ಕನ್ನಡ ಪ್ರೇಮಿಗಳು.. ಅಮರ ಮ್ರೇಮಿಕುಲು ಚಾಲಾ ಮಂದಿ ಇದ್ದಾರೆ.. ಅವ್ರನ್ನ ಕಟ್ಕೊಂಡ್ ಯಾರೇನು ಮಾಡ್ಬೇಕಾಗಿಲ್ಲಾ... ಇಲ್ಲಿ ಕನ್ನಡನ ಯ್ಯಾರು ಕೊಂಡ್ಕೊಂಡಿಲ್ಲಾ ಅದು ಯಾರಪ್ಪನ ಆಸ್ತಿನೂ ಅಲ್ಲಾ... ಅಂತಹ ಆಸ್ತಿ ಇದೆ ಅನ್ನೋದಾದ್ರೆ ಅವರಷ್ಟು ಮೂರ್ಖರು ಇನ್ಯಾರು ಇಲ್ಲಾ... ಸರಿ ಅನಾವಶ್ಯಕ ವಿಶಯಗಳಿಗೆ ಅನಾವಶ್ಯಕವಾಗಿ ಕಚ್ಚಾಡ್ತಾ ಇದೀರಾ ಕಛ್ಛಾಡಿ.. ನಮ್ಗೂ ಒಳ್ಳೇ ಸಮಯ ಕಳೆದಂಗಾಗುತ್ತದೆ.. ( time pass)... ನನ್ ಕಮೆಂಟ್ ಪ್ರತಿಕ್ರಿಯೆಗೆ ದ್ವಜ ತೋರಿಸ್ತೀರಾ ತೋರಿಸಿ... ನನಗೇನೂ ಅಭ್ಯಂತರ ಇಲ್ಲಾ... ಎಂಜಾಯ್.. :) :) :) :D :D :D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಧ್ವಜ ಯಾರ ವಿಮರ್ಶೆಗೂ ತೋರಿಲ್ಲ. ಆದ್ರೆ ನಾನು ಬರೆದ ವಿಮರ್ಶೆಗಳಿಗೆ ಆಗ್ಲೇ ಸುಮಾರು ಮಂದಿ ತೋರಿದ್ದಾರೆ.
ನಿಮ್ಮ ಹಾಗೆ ಎಲ್ರೂ ಇದ್ದಿದ್ರೆ ಎಲ್ಲಾ ಸರಿ ಇರುತ್ತ ಇತ್ತು. ಬರೆದ ಲೇಖನವನ್ನು ಅರ್ಥ ಮಾಡಿಕೊಂಡು ಇರಬಹುದಿತ್ತು. ಅದನ್ನು ಬಿಟ್ಟು ಸುಮ್ನೆ ಅದು ಸರಿ ಇಲ್ಲ, ಇದು ಸರಿ ಇಲ್ಲ ಅಂತಾ ಕ್ಯಾತೆ ತೆಗೆದರು.
ಮುಂದಕ್ಕೆ ಅವರು ಮಾಡಿದ್ದೇನು ? ಹೀಗೆ ನಾನು ಪ್ರಶ್ನೆ ಹಾಕಿದ್ದಕ್ಕೆ ಉರಿ ಕಿತ್ಕೊಂಡು ಎಳೆಯೋಕ್ಕೆ ಶುರುವಾಯ್ತು.

మీకు ఏమి కావాలో దాన్ని రాయండి. మాకి ఏమి అభ్యంతరము లేదు.
ಸರಿ ನಾ ಅಯ್ಯಾ ??

ಶಂಕ್ರ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀ. ಶಂಕರ ಪ್ರಸಾದರೆ, ನಿಮ್ಮ ಕೆಲಸವನ್ನು ಮೆಚ್ಚಿ ಮೆಚ್ಚುಗೆ ಸೂಚಿಸಿ ಬರೆದವರಲ್ಲಿ ಮೊದಲಿಗ ನಾನೆ ಅಂತ ಹೇಳಿದರೆ ನಿಮಗೆ ಆಶ್ಚರ್ಯ ಆಗಬಹುದು.. ಇರಲಿ, ಮತ್ತೊಮ್ಮೆ ನನ್ನ ಮೊದಲ ಪ್ರತಿಕ್ರಿಯೆ ಓದಿ..
<< Mr. ಕನ್ನಡಿಗ, ನಾಗೇಂದ್ರ >> ಧನ್ಯವಾದಗಳು...
ಕೋತಿ ಬೆಣ್ಣೆ ತಿಂದು, ಸ್ವಲ್ಪ ಆಡಿನ ಬಾಯಿಗೆ ಹಚ್ಚಿ ಹೋಯ್ತಂತೆ.. ಹಂಗಾಯ್ತು ನಿಮ್ ಕಥೆ..
ಇನ್ನೊಮ್ಮೆ ನನ್ನ ಬಗ್ಗೆ ಬರೆಯುವುದಕ್ಕೆ ಮುಂಚೆ, ದಯವಿಟ್ಟು ಸಂಜೆಯವರೆಗೆ ಕಾಯಿರಿ(ಸ್ವಲ್ಪ ಕೆಲಸ ಇದೆ)..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೀ, ಶಂಕರ ಪ್ರಸಾದ್ - ದಯವಿಟ್ಟು ನಮ್ಮ ಪ್ರತಿಕ್ರಿಯೆಗಳನ್ನು ಇನ್ನೊಮ್ಮೆ ಓದಿ. ನಾನು ಆಂಗ್ಲ ಪದಗಳನ್ನು ಹಾಗೂ ಕಂಗ್ಲೀಷ ಪದಗಳನ್ನು ಬಳಸಿರುವುದರ ಬಗ್ಗೆ ಎಲ್ಲೂ ಸಮರ್ಥನೆ ಕೊಟ್ಟಿಲ್ಲ. ನಾನು ನನ್ನ ತಪ್ಪುಗಳನ್ನು ಒಪ್ಪಿಕೊಂಡಿದ್ದೀನಿ. ಹೌದು ನಾನು ಅದನ್ನು ಬಳಸುವುದು ತಪ್ಪು. ನಿಮ್ಮ ಪ್ರಶ್ನೆಗಳಲ್ಲಿ, ನಿಮ್ಮ ಬ್ಲಾಗಿನಲ್ಲಿ ಬರೆದಿರುವ ವಿಷಯಕ್ಕೂ, ನೀವು ಬಳಸಿರುವ ಕಂಗ್ಲೀಷ್ ಪದಗಳಿಗೂ ಹೊಂದಿಕೆಯಾಗುವುದಿಲ್ಲ. ನೀವು ಆ ವ್ಯಕ್ತಿ ಮೆದುವಡೆ ಎಂದು ಬರೆದಿದ್ದ ಎಂದು ಆಕ್ಷೇಪಣೆ ಮಾಡುವುದಾದರೆ, ನೀವು ಬಳಸುವ ಕಂಗ್ಲೀಷ್ ಕೂಡಾ ತಪ್ಪೇ ಎಂದು ಹೇಳುತ್ತಿರುವುದು. ನಾನು ನನ್ನ ತಪ್ಪುಗಳನ್ನು ಒಪ್ಪಿಕೊಂಡಿದ್ದೀನಿ. ನಾನು ಹಾಗೆಯೇ, ಹಾಗೇ ಬರೆಯೋದು ಎನ್ನುವ ದಾರ್ಷ್ಟ್ಯ ತೋರಿಸಿಲ್ಲ (ನಿಮ್ಮ ಹಾಗೆ :-)) ನೀವು ಒಪ್ಪಿಕೊಂಡಿದ್ದೀರಾ? ನೀವೇನು ಪರೀಕ್ಷೆ ಬರೆಯುತ್ತಿಲ್ಲ, ನಾವು ಅದನ್ನು ಮಾಪನ ಮಾಡಲು! ನಿಮ್ಮ ಪರಿಚಯದಲ್ಲಿ ಹೇಳಿಕೊಂಡಿದ್ದ ಹಾಗೆ ನೀವು ನಿಮ್ಮ ಕಡಿತ ತೀರಿಸಿಕೊಳ್ಳಲು (ಕ್ಷಮಿಸಿ, ಬರೆಯುವ ಕಡಿತ ತೀರಿಸಿಕೊಳ್ಳಲು :-)) ಬರೆಯುತ್ತೀರಿ. ನೀವು ನನ್ನನ್ನು ಹೀಗಳೆದರೂ, ಹೊಗಳಿದರೂ ನಾನೇನೂ ಬದಲಾಗುವುದಿಲ್ಲ, ಹಾಗೆಯೇ ನಿಮ್ಮನ್ನು ಕೂಡಾ ಬದಲು ಮಾಡಲು ಸಾಧ್ಯವಿಲ್ಲ ಎನ್ನುವ ಅರಿವಿದೆ. ಆದ್ರೆ ಯಾರ ಬಗ್ಗೆಯಾದರೂ ಕಮೆಂಟ್ ಮಾಡುವ ಮುನ್ನಾ ಸಾಧ್ಯವಾದಷ್ಟು ಸಮಾಧಾನದಲ್ಲಿ ಅವರೇನು ಬರೆದಿದ್ದಾರೆ? ಎನ್ನುವುದನ್ನು ಅರಿತು ಮಾತನಾಡಿದರೆ ನಿಮಗೆ ಇಷ್ಟು ಅಸಹನೆ ಕಾಡುವುದಿಲ್ಲ :-) ನಾನೇನಾದ್ರೂ ತಪ್ಪು ಮಾಡಿದ್ದರೆ ದೊಡ್ಡವರು, ತಿಳಿದವರು:-) ಕ್ಷಮಿಸಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರದೀಪ್ ಅವರೇ ಬಹಳ ಚೆನ್ನಾಗಿ ಹೇಳಿದಿರ ನೀವು.... ಇವರೆಲ್ಲರೂ ಹೊರಗೊಂದು ಒಳಗೊಂದು ಮಾತು ಆಡುತಿದಾರೆ ಅನ್ಸುತೆ ... ನಾನ್ ಗೊತ್ತಿಲ್ದೆ ಅಂಗ್ಲ ಭಾಷೆನಲ್ಲಿ ಬರೆದಿದಕ್ಕೆ ವಿನಯ ಅವರು ತಾವು ದೊಡ್ಡ ಮೇಧಾವಿಯಂತೆ ನನಗೆ ಏನೋ ಬರೆದಿದ್ರು ... ಇಗ ಯಾಕೆ ಮಂಕಾಗಿದಾರೆ ಅಂತ ಗೊತ್ ಆಗ್ತಾ ಇಲ್ಲ.... ಇಂಥವರಿಂದ ಕನ್ನಡಕ್ಕೂ ಗೌರವ ಇಲ್ಲ ಇತ್ಲಾಗೆ ಅಂಗ್ಲ ಭಾಷೆಗೂ ಗೌರವ ಇಲ್ಲ.... ಅಂಗ್ಲ ಭಾಷೆಯಾ ಸಹಾಯ ಇಲ್ದೆ ಈ ಬ್ಲಾಗ್ ಹೆಂಗ್ ಶುರುಮಾಡಿದರು ಅಂಥ ಸಂದೇಹ ನಂಗೆ ...

ಸಂಪದಕ್ಕೆ ಹೊಸಬ್ನಾಗಿದ್ರು ಅದರ ಬಗ್ಗೆ ಇದ್ದ ಗೌರವ ಇಂಥ ಇಬ್ಬಗೆ ನೀತಿ ತೋರುವ ಜನರಿಂದ ಕಡಿಮೆ ಆಗ್ತಾ ಇದೆ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ನಾನ್ ಗೊತ್ತಿಲ್ದೆ ಅಂಗ್ಲ ಭಾಷೆನಲ್ಲಿ ಬರೆದಿದಕ್ಕೆ ವಿನಯ ಅವರು ತಾವು ದೊಡ್ಡ ಮೇಧಾವಿಯಂತೆ ನನಗೆ ಏನೋ ಬರೆದಿದ್ರು>>
ನಾನು ಮೇಧಾವಿ ಅಂತ ಬರೆದಿದ್ದಲ್ಲ . ನೀವೇ ಹೇಳಿದ್ದಿರ ಹೊಸಬ ಅಂತ , ಅಂದಮೇಲೆ ಮೊದಲು ಇದರ ಪೂರ್ತಿ ರೂಪ ತಿಳಿದು ಉತ್ತರಿಸಬೇಕಿತ್ತು . ಸಿಲ್ಲಿ ಪಲ್ಲಿ ಹಲ್ಲಿ ಅಂತ ಹಾಕೋ ಅವಶ್ಯಕತೆ ಇತ್ತೇ ? ಗೌರವ ಕೊಟ್ಟು ಪಡೆಯಬೇಕು .
ಹೊಸಬ ಅಂತ ಹೇಳಿದ್ದಿರಿ ನಿಮಗೆ ಆತ್ಮೀಯವಾದ ಸ್ವಾಗತ .

ಇಂತಿ
ವಿನಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂಪದಕ್ಕೆ ಸ್ವಾಗತ ಕೊರಿದಕ್ಕೆ ಧನ್ಯವಾದಗಳು ವಿನಯ ಅವರೇ... ವಿಷಯ ಎಲ್ಲಿದ ಎಲ್ಲೆಲ್ಲೊ ಹೋಗ್ತಾ ಇತ್ತು ನನ್ನಂತೆ ಹೊರದೇಶದಲ್ಲಿ ಸಾವಿರಾರು ಕನ್ನಡಿಗರು ಸಂಪದವನ್ನು ಓದುತಿರುತಾರೆ ... ಇಲ್ಲಿ ಒಬ್ಬ ಲೇಖಕನ ಶೈಲಿಯನ್ನು ಹಿಡಿದು ಶುರುವಾದ ಟೀಕೆ ಎಲ್ಲೆಲ್ಲಿಗೆ ಹೋಗಿದೆ ಅಂತ ನಿಮಗೂ ಗೊತ್ತು ...ಕನ್ನಡಿಗರಾಗಿ ಈ ವಿಷಯ ಕೊಡಗು ಕೋಲಾರ ಬೇರ್ಪಡಿಸುವವರೆಗೂ ಹೋಯ್ತು ... ನಮ್ಮ ಮನೆ ವಿಷಯ ಹೀಗೆ ಅಂತರ್ಜಾಲದಲ್ಲಿ ಯದ್ವ ತದ್ವ ಹಳಿ ತಪ್ಪಿ ಹೋಗ್ತಾ ಇದ್ದಾಗ ಸಿಲ್ಲಿ ಪಲ್ಲಿ ಅನ್ನದೆ ಏನು ಹೇಳೋದು? ಬೇಸರದಿಂದ ವ್ಯಕ್ತ ಪಡಿಸಿದ ಅಭಿಪ್ರಾಯವೇ ಹೊರತು ವಯಕ್ತಿಕವಾಗಿ ಟೀಕಿಸಿದಲ್ಲ... ಅದೇ ಬೇಜಾರನ್ನು ನೀವು ನನ್ನ ಹಿಂದಿನ ಅಭಿಪ್ರಾಯದಲ್ಲಿ ನೋಡಿರುತಿರ ಅಷ್ಟೇ... ನಿಮಗೇ ಬೇಸರವಗಿದ್ದಲ್ಲಿ ನನ್ನ ದೃಷ್ಟಿಯಿಂದಲೂ ನೋಡಿ .... ಹಿಂಗಿದ್ದಾಗ ಸಂಪದದ ಕಟ್ಟುಪಾಡುಗಳನ್ನು ನೋಡದೆ ನಾನು ನನ್ನ ಅಭಿಪ್ರಾಯವನ್ನು ಅಂಗ್ಲ ಭಾಷೆಯಲ್ಲಿ ಬರೆದೆ ಅಷ್ಟೇ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೋಡಿ ಅಭಿಜಿತ್ ರವರೆ ಇಲ್ಲಿ ಯಾರಿಗೂ ವೈಯಕ್ತಿಕ ಟೀಕೆ ಮಾಡ್ಬೇಕು ಅಂತ ಇಲ್ಲ (ಒಪ್ಪಿಕೊಳ್ಳುತ್ತೇನೆ ಕೆಲವರನ್ನು ಬಿಟ್ಟು , ಮುಂದೆ ನಿಮಗೆ ತಿಳಿಯುತ್ತೆ ). ಹಾಗೆಯೇ ಚರ್ಚೆ ಒಳ್ಳೆಯದೇ , ಅದು ಒಂದು ಪರಧಿ ಮೀರಬಾರದು . ನೀವು ಇಷ್ಟು ನಾಡು ನುಡಿ ಜಾತಿ ಬಗ್ಗೆ ನೋಡಿಯೇ ಸುಸ್ತ ಆಗಿದ್ದಿರ , ಇನ್ನು ಕೆಲವೊಂದು ನೋಡಿದರೆ ದಂಗು ಬಿದ್ದು ಬಿಡುತ್ತಿರೆನೋ. ಏನೇ ಇರಲಿ ನಾನು ಏನ ಹೇಳ ಹೊರಟಿದ್ದೆ ಅನ್ನೋದು ಅರ್ಥವಾದರೆ ಸಾಕು .
ಇಲ್ಲ ಅಂದ್ರೆ ಪುಕ್ಸಟೆ ಮೇಧಾವಿ ಪಟ್ಟ ಬಂದು ಬಿಡುತ್ತೆ (ತಮಾಷೆಗೆ ) :) :)
ಇಂತಿ
ವಿನಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಭಿಜಿತ್ ..ಮೇಧಾವಿ ಅಲ್ಲ..ಇಲ್ಲಿ ಇರೋ ಬಹಳ ಮಂದಿ ಬುದ್ಧಿಜೀವಿಗಳು..ನಾನು ಮೊದಲ ಬಾರಿ ಸಂಪದ ಗೆ ಬಂದಿದ್ದು ನೆನ್ನೆಯೇ..ಅದೂ ನನ್ನ ಒಬ್ಬ ಗೆಳೆಯ ಹೇಳಿದ್ದರಿಂದ..ಇಲ್ಲಿ ಬಂದ ಮೇಲೆ ಶಂಕರ ಅವರ ಮೇಲೆ ಇಲ್ಲಿರೋ ಬುದ್ಧಿಜೀವಿಗಳು ಟೀಕೆ ಮಾಡಿದ್ದನ್ನ ನೋಡಿ ದಂಗಾಗಿ ಹೋದೆ..ಅದಕ್ಕೆ ಸ್ವಲ್ಪ ಇಲ್ಲಿರೊ ಸದಸ್ಯರುಗಳ ಬ್ಲಾಗ್ ಗಳ ಮೇಲೆ ಕಣ್ಣು ಹಾಯಿಸಿದೆ. ನಂತರ ತಿಳಿಯಿತು ಇಲ್ಲಿರೋದು ಕೂಡ ಬರಿ ಹುಳುಕೆಂದು..ಇಲ್ಲಿರೋ ಇಬ್ಬಗೆ ನೀತಿ ನೋಡಿ ನನಗೇ ಬೇಜಾರಗುತ್ತಿದೆ..ಇಂಥ ಕನ್ನಡ ವೆಬ್ ಸೈಟ್ ಗಳು ನಮ್ಮಂಥ ಕನ್ನಡಿಗರನ್ನು ಪ್ರೋತ್ಸಾಹಿಸಬೇಕು..ಹೀಗಾದರೆ ದೇವರಾಣೆಗೂ ಇಲ್ಲಿನ ಓದುಗರ ಸಂಖ್ಯೆ ಹೆಚ್ಚಾಗುವುದಿಲ್ಲ..ನಾನು ಖಂಡಿತವಾಗಿಯೂ ನನ್ನ ಯಾವ ಗೆಳೆಯರಿಗೂ ಸಂಪದ ಗೆ ಭೇಟಿ ನೀಡಿ ಎಂದು ಹೇಳುವುದಿಲ್ಲ..ಇಲ್ಲಿ ಇರೋ ವಿನಯ, ಬಾಳಿಗ, ಇಂಚರ ಅವರು ಹೇಗೆ ಅಂದರೆ ಆಚಾರ ಹೇಳೋಕೆ..ಬದನೆಕಾಯಿ ತಿನ್ನೋಕೆ ಅಂಥಾರಲ್ಲ ಹಾಗೆ..ಶಂಕರ ಅವರ ಬ್ಲಾಗ್ನಲ್ಲಿ ವಿನಯ ಮತ್ತೆ ವಿನುತ ಅವರ ವಿಮರ್ಶೆಗೆ ಉತ್ತರಿಸಿದ್ದೇನೆ..ಸಮಯ ಸಿಕ್ಕರೆ ಒಂದು ಸಲ ಕಣ್ಣು ಹಾಯಿಸಿ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಮರು ಉತ್ತರಿಸಿದ್ದೇನೆ ನಿಮಗೂ ಸಮಯ ಸಿಕ್ಕರೆ ಕಣ್ಣಾಯಿಸಿ .
ನನಗೊಂದು ಗಾದೆ ನೆನಪಾಯಿತು "ಆತುರಗಾರನಿಗೆ ಬುದ್ದಿ ಮಟ್ಟ " ಅಂತ , ದೊಡ್ಡವರು ತಿಳಿದೇ ಹೇಳಿದ್ದಾರೆ :) :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರಿಯಾಗಿ ಹೇಳ್ತಾ ಇದ್ದೀರಿ ಪ್ರದೀಪ್. ಹಾಗೂ ಧನ್ಯವಾದಗಳು ನಮ್ಮನ್ನು ಬುದ್ಧಿಜೀವಿಗಳೆಂದು ಕರೆದಿದ್ದಕ್ಕೆ :-) ಇಷ್ಟು ದಿವಸಗಳ ತನಕ ಯಾರೂ ನನ್ನನ್ನು ಆ ರೀತಿ ಕರೆದಿರಲಿಲ್ಲ :-) ಹುಳುಕು ಎಲ್ಲ ಕಡೆಯೂ ಇರುತ್ತೆ. ಆದ್ರೆ ಹುಳುಕೆಂದು ಬೇರೆಯವರು ತೋರಿಸಿಕೊಟ್ಟಾಗ ಒಪ್ಪಿಕೊಳ್ಳುವ ಮನಸ್ಸು ಬೇಕು. ಇಬ್ಬಗೆ ನೀತಿ ಅನ್ನುವ ಅರ್ಥ ಗೊತ್ತಿದ್ದವರಿಗೆ ಯಾರದು ಇಬ್ಬಗೆ ನೀತಿ ಅನ್ನುವುದು ಕೂಡಾ ಗೊತ್ತಾಗುತ್ತೆ. ನಾವು ಹೇಳ್ತಾ ಇರೋದು ಇಷ್ಟೆ ‘ಶಂಕರ್ ಅವರಿಗೊಂದು ನೀತಿ, ಆ ಹೋಟೆಲಿನವನಿಗೊಂದು ನೀತಿ ಬೇಡ’ ‘ ಆ ಹೋಟೇಲಿನವನದು ತಪ್ಪು ಅನ್ನುವುದಾದರೆ, ಶಂಕರ್ ಅವರದು ತಪ್ಪು, ಹಾಗೆಯೇ ನಾನು ಪ್ರೋಗ್ರಾಮ್ ಎಂದು ಬರೆದದ್ದು ಕೂಡಾ ತಪ್ಪೇ. ಇಲ್ಲಿ ಹೋಟೇಲಿನವನದು ತಪ್ಪು ಎಂದು ಬ್ಲಾಗ್ ನಾನು ಹಾಕಿದ್ದಾದರೆ ನಾನು ಕೂಡಾ ಆಂಗ್ಲ ಪದಗಳನ್ನು ಬಳಸುವುದು ಕೂಡಾ ತಪ್ಪೇ. ಇದನ್ನು ಇಬ್ಬಗೆ ನೀತಿಯೆಂದು ಹೇಳುತ್ತಾರೆ. ಆಚಾರ ನಾವು ಹೇಳಿದ್ದಲ್ಲ, ಹಾಗಾಗಿ ನಾವು ಬದನೆಕಾಯಿ ತಿಂದರೆ ತಪ್ಪಿಲ್ಲ :-) ಆಚಾರ ಹೇಳಿದವರು ದಯವಿಟ್ಟು ಇದನ್ನು ಪರಾಮರ್ಶಿಸಲಿ :-) ಹಾಗೂ ಸಮಯ ನಮಗೆ ಸಿಗುವುದಿಲ್ಲ. ನಾವು ಸಮಯ ಮಾಡಿಕೊಳ್ಳಬೇಕು. :-) ಚರ್ಚೆ ಮುಂದುವರಿಸಲು ತಮಗೆ ಸಮಯವಿಲ್ಲ. ದಯವಿಟ್ಟು ಸಮಯ ಮಾಡಿಕೊಂಡು, ಉತ್ತರಿಸಿ :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂಚರ ಅವರೆ,

ಇಷ್ಟು ದಿನಗಳಿಂದ ಇಲ್ಲದೆ ಇದ್ದ ಮೆದು ವಡಾ ಎಂಬ ಹೆಸರು ಈಗ ಹೋಟೆಲನ್ನು ನವೀಕರಿಸಿದ ಮೇಲೆ ಯಾಕೆ ?
ಇದಕ್ಕೆ ಮುಂಚೆ ಉದ್ದಿನ ವಡೆ ಎಂದು ಹಾಕಿದ್ದಾಗ ಎಲ್ಲಾ ಜನರು ಬಂದು ತಿನ್ನುತ್ತಾ ಇರಲಿಲ್ವೇ? ನಾನು ಇಲ್ಲಿ ಮಾತಾಡ್ತಾ ಇದ್ದದ್ದು ಕನ್ನಡಕ್ಕೆ ಸಿಗಬೇಕಾದ ಪ್ರಾಮುಖಯತೆ ಬಗ್ಗೆ.
ಇದನ್ನು ಬಿಟ್ಟು ನನ್ನ ಮೇಲೆ ಮುಗಿದು ಬಿದ್ದಿದೀರಲ್ಲಾ ಎಲ್ರೂ. ಯಾಕೆ ? ನಾನು ಕನ್ನಡದ ಹೆಸರನ್ನು ಹಾಕು ಎಂದು ಹೇಳಿದ್ದು, ಅದನ್ನು ಲೇಖನದಲ್ಲಿ ಈ ರೀತಿಯಾಗಿ ಕಂಗ್ಲಿಷಿನಲ್ಲಿ ಬರೆದಿದ್ದಕ್ಕೆ
ತಲೆದಂಡ ಕೇಳುವ ಹಾಗಿದೆ. ದಿನನಿತ್ಯದ ಜೀವನದಲ್ಲಿ ಅಚ್ಚ ಕನ್ನಡದಲ್ಲಿ ಮಾತನಾಡುವುದು ನಿಜಕ್ಕೂ ಕಷ್ಟ. ಎಲ್ಲರೂ ಕಂಗ್ಲಿಷಿನಲ್ಲೇ ಮಾತನಾಡೋದು. ಹಾಗೆ ಕೂಡಾ ನಾನು.
ಹೀಗಾಗಿ ಆ ಹೋಟೆಲಿನವನ ಜೊತೆ ನಾನು ತಿಂಡಿಯ ಹೆಸರನ್ನು ಕನ್ನಡದಲ್ಲಿ ಬರೆಸಿ ಎಂದು ದಬಾಯಿಸಿದ್ದು ಕಂಗ್ಲಿಷಿನಲ್ಲೇ. ಇದು ತಪ್ಪು ಅನ್ನೋದಾದ್ರೆ ನಾನು ಏನೂ ಮಾಡೋಕ್ಕಾಗಲ್ಲ.
ಹೋರಾಟದ ರೀತಿ ಬೇರೆಯಾದರೂ ಗಮ್ಯ ಒಂದೇ ಇರುತ್ತದೆ ಅಲ್ವೇ? ನಾನು ಕಂಗ್ಲಿಷಿನಲ್ಲಿ ಬರೆದಿದ್ದನ್ನು ಹುಳುಕು ಎಂದು ಹೇಳಲಾದರೆ, ಇಡೀ ಸಂಪದ ಹುಳುಕುಮಯವಾಗಿದೆ.

ಶಂಕ್ರ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೋಟೆಲ್ ನ ಹೆಸರೇ ಕಂಗ್ಲೀಶ್ ಮಯ ‘ಸೌತ್ ತಿಂಡೀಸ್’ ಅದಕ್ಕೆ ನಿಮ್ಮ ವಿರೋಧವಿಲ್ಲ. ನೀವು ಬರೆದಿರುವ ಬ್ಲಾಗ್ ಕೂಡಾ ಕಂಗ್ಲೀಶ್ ಮಯ, ಅದಕ್ಕೂ ನಿಮ್ಮ ವಿರೋಧವಿಲ್ಲ, ಇನ್ನೂ ನಾನು ಬರೆದಿರೋದು ಕೂಡ ಕಂಗ್ಲೀಶ್ ಮಯ, ಅದಕ್ಯಾಕೆ ಇಷ್ಟೊಂದು ವಿರೋಧ? ಚೆನ್ನಾಗಿ ಬರೆದಿದ್ದೀನಿ ಅಂತಾ ಅಸೂಯೆಯೇ? ಇಲ್ಲಾ ಇಷ್ಟೊಂದು ಪ್ರತಿಕ್ರಿಯೆಗಳು ಬಂದುಬಿಡ್ತು ಅಂತಲೇ? ಬೇಸರ ಮಾಡಿಕೊಳ್ಳಬೇಡಿ. ಎಲ್ಲಾ ಸರಿಹೋಗುತ್ತೆ :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೀ ಅಭಿಜಿತ್, ನಿಮಗೆ ಪ್ರದೀಪ್ ಅವರು ಮೇಧಾವಿ ಅಲ್ಲ ಅಂತಿದ್ದಾರೆ :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದ್ರೀ ನಮಗೆ ಯಾವುದಕ್ಕೂ ಗೌರವ ಕೊಟ್ಟು ಗೊತ್ತಿಲ್ಲ, ಯಾರಿಗೂ ಕೂಡಾ :-) ಆದ್ರೆ ನಾವು ಕನಿಷ್ಟ ಪಕ್ಷ ಕನ್ನಡದಲ್ಲಿ ಬರೆಯುವಾಗ ತಪ್ಪಿಲ್ಲದೆ ಬರೆಯಲು ಪ್ರಯತ್ನ ಪಡುತ್ತೇವೆ. :-) ಯಾರಾದರೂ ತಪ್ಪಿದೆ ಎಂದು ಹೇಳಿದಾಗ ಕ್ಷಮೆ ಕೂಡಾ ಕೇಳುತ್ತೇವೆ. ನಮಗೆಲ್ಲಾ ಗೊತ್ತಿದೆ, ನಾವೇ ಮೇಧಾವಿಗಳು ಎನ್ನುವ ಅಹಂಕಾರವೂ ಇಲ್ಲ :-) ದೊಡ್ಡವರು, ನಿಮ್ಮಂತಹವರು ನಮಗೆ ಬುದ್ಧಿ ಹೇಳಿದರೂ, ನಮ್ಮ ತಪ್ಪು ತಿಳಿ ಹೇಳಿದರೂ ತಿದ್ದಿಕೊಳ್ಳುತ್ತೇವೆ. :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಹಾ ಇಂಚರ ಅವರೇ..ಎಂಥಾ ವಿಶಾಲ ಮನೊಭಾವ ರೀ ನಿಮ್ಮದು ..ಮೊನ್ನೆ ಸುವರ್ಣ ಚಾನೆಲ್ ನಲ್ಲಿ ಕನ್ನಡಕ್ಕೆ ಡಬ್ಬಿಂಗ್ ಮಾಡಿದ ಒಂದು ತೆಲುಗು ಸಿನಿಮಾ ಪ್ರಸಾರ ಆಯಿತು. ಅದಕ್ಕೆ ಎಲ್ಲಾ ಕಡೆಯಿಂದ ವಿರೋಧ ವ್ಯಕ್ತವಾಗಿ ಕೊನೆಗೆ ಅವರು ಪತ್ರಿಕೆಗಳಲ್ಲಿ ಕ್ಶಮೆಯಾಚಿಸಿದ್ರು..ನಿಮ್ಮ ಪ್ರಕಾರ ಅವರು ಮಾಡಿದ್ದು ಸರಿ ಏಕೆಂದರೆ ಕೇಳೋದಿಕ್ಕೆ ಧ್ವನಿ ಕನ್ನಡದಲ್ಲೆ ಇತ್ತಲ್ವ ಅಥವಾ ಪ್ರತಿಭಟನೆ ಮಾಡಿದವರಿಗೆ ಯಾವ ನೈತಿಕ ಹಕ್ಕು ಇಲ್ಲ ಏಕೆಂದರೆ ಅವರೆಲ್ಲರೂ ಶುದ್ಧ ಕನ್ನಡ ಮಾತನಾಡುವುದಿಲ್ಲ ಮತ್ತೆ ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸಿಲ್ಲ ಎಂದು ನಿಮ್ಮ ಅಂಬೋಣವೇ? ಶುದ್ಧ ಕನ್ನಡ ಮಾತನಾಡುವುದಿಲ್ಲ ಎಂದು ಕನ್ನಡದ ಬಗ್ಗೆ ಹೋರಾಟವನ್ನೆ ಮಾಡಬಾರದೆಂಬ ನೈತಕ ಮಾತನ್ನು ಪ್ರತಿಪಾದಿಸುವ ಹಕ್ಕು ಯಾರಿಗೂ ಇಲ್ಲ..ಇಲ್ಲವಾದರೆ ಜನ ಸುಮ್ಮನೆ ಬಿಡುವುದಿಲ್ಲ..ಹಿಡಿದು ಎಲ್ಲರ ಮುಂದೆ ನಾಲ್ಕು ಬಿಗಿಯುತ್ತಾರೆ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<<ಮೊನ್ನೆ ಸುವರ್ಣ ಚಾನೆಲ್ ನಲ್ಲಿ ಕನ್ನಡಕ್ಕೆ ಡಬ್ಬಿಂಗ್ ಮಾಡಿದ ಒಂದು ತೆಲುಗು ಸಿನಿಮಾ ಪ್ರಸಾರ ಆಯಿತು. ಅದಕ್ಕೆ ಎಲ್ಲಾ ಕಡೆಯಿಂದ ವಿರೋಧ ವ್ಯಕ್ತವಾಗಿ ಕೊನೆಗೆ ಅವರು ಪತ್ರಿಕೆಗಳಲ್ಲಿ ಕ್ಶಮೆಯಾಚಿಸಿದ್ರು.>>>>
ಹಾಗಾದ್ರೆ ಇಲ್ಲಿನ ಡಬ್ಬಾ ಸಿನಿಮಾಗಳನ್ನ ತೆಲುಗಲ್ಲಿ ತಮಿಳಲ್ಲಿ ವಾಯ್ಸ್ ಡಬ್ ಮಾಡಿ ಅಲ್ಲಿ ಹಾಕ್ದಾಗ ಅಲ್ಲಿ ಯಾರು ಗಲಾಟೆ ಮಾಡ್ಲಿಲ್ಲಾ... ಅವರ ಭಾಷಾ ಅಭಿಮಾನ ನಿಮ್ಮ್ ತೋರಿಕೆಯ ಅಭಿಮಾನಕ್ಕಿಂತ ದೊಡ್ದೋ ಚಿಕ್ದೋ ಅಂತ ಯಾರೇನು ಹೇಳ್ಬೇಕಾಗಿಲ್ಲಾ ಅದು ಎಲ್ಲರಿಗೂ ಗೊತ್ತಿರೋ ವಿಶಯಾನೇ... ಪಾಪ್ ಅವ್ರು ಚಾನೆಲ್ನೋರು ಗೊತ್ತಿದ್ದೋ ಗೊತ್ತಿಲ್ದೇ ನೊ ಹಾಕಿದ್ದಕ್ಕೆ ಅವ್ರ್ ಮೇಲೆ ಹಿಂಗೆಲ್ಲಾ ಎಗರಾಡಿ ತಮ್ಮ್ ಕನ್ನಡ ಪ್ರೇಮ ತೋರ್ಸ್ಕೊಳ್ಲೋದಿಕ್ಕೆ ಇಲ್ಲಿನ ಕನ್ನಡ ಪ್ರೇಮಿಗಳು ಕಮ್ಮೀನೆ ಇಲ್ಲಾ.. :( :(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೀ ಇಂಚರ..ನಮ್ಮ ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕರಾದ ರವಿ ಬೆಳೆಗೆರೆ ಅವರ ಲೇಖನಗಳು ಕೂಡ ಆಂಗ್ಲ ಮಿಶ್ರಿತ ಕನ್ನಡವೇ..ಇಲ್ಲಿ ಕೆಲವರು ಅವರ ಅಭಿಮಾನಿಗಳು ಕೂಡ ಇರಬಹುದು..ಹಾಗೆಂದು ನೀವು ಅವರನ್ನೂ ಕೂಡ ಯಾವ ನೈತಿಕತೆಯ ಮೇಲೆ ನಿಮ್ಮ ಪತ್ರಿಕೆನಲ್ಲಿ ಕನ್ನಡವನ್ನು ಉಳಿಸಿ ಮತ್ತು ಬೆಳೆಸಿ ಎನ್ನುತ್ತೀರಾ ಎಂದು ಪ್ರಶ್ನಿಸಿ ಹೀಗೆ ಟೀಕಿಸುತ್ತೀರಾ? ಇಂಥ ಪ್ರಶ್ನೆಗಳನ್ನು ಕೇಳಿದ ತಕ್ಶ್ಣ್ ನಮ್ಮ ಬಾಳಿಗಾ ಅವರು ಅದೇಕೊ ಮೌನಕ್ಕೆ ಶರಣಾಗಿದ್ದಾರೆ...ನಿಮಗೆ ಒಳ್ಳೇ ಸ್ನೇಹಿತರು ಅನ್ಸುತ್ತೆ..ನಿಮಗೆ ಸಿಕ್ಕಿದರೆ ಸ್ವಲ್ಪ ಹೇಳಿ ಇಲ್ಲಿರೊ ಟೀಕೆಗಳಿಗೆ ಸ್ವಲ್ಪ ಉತ್ತರಿಸಿ ಅಂಥ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಹಳ ಚೆನ್ನಾಗಿ ಮಾತಾಡ್ತೀರಿ ಅಭಿಜಿತ್ ನೀವು. ಆದ್ರೆ ಸ್ವಲ್ಪ ಕನ್ನಡ ಸ್ಪೆಲಿಂಗ್ ಮಿಸ್ಟೇಕ್ ;-) (ಕಂಗ್ಲೀಷ್ ಬಳಸಬಹುದು ಅಂತಾ ಹೇಳಿದ್ದಾರಲ್ಲವಾ, ಅದಕ್ಕೆ ಉಪಯೋಗಿಸಿದೆ :-)) ಮತ್ತೆ ಇದರ ಬಗ್ಗೆ ಕಮೆಂಟ್ ಹಾಕಬೇಡ್ರೀ, ನನಗೆ ಸಮಯವಿಲ್ಲ, ಉತ್ತರಿಸೋದಿಕ್ಕೆ! ನಾನು ಕೂಡಾ ಬಹಳ busy, ನಿಮ್ಮ ಹಾಗೆ :-).

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Pages