ಈ ಪಂಚ ಕನ್ಯೆಯರನ್ನು ನಿತ್ಯವೂ ಸ್ಮರಿಸಿದರೆ ಮಹಾಪಾತಕ ನಾಶನಂ!

4


ಬೆಳಿಗ್ಗೆ ಎದ್ದ ಕೂಡಲೇ ಅಮ್ಮ ಸುಮಾರು ಶ್ಲೋಕಗಳನ್ನು ಹೇಳಿಕೊಡ್ತಿದ್ದಳು.  ಅವುಗಳ ಅರ್ಥದ ಬಗ್ಗೆ ಯಾರೂ ತಲೆಕೆಡಿಸಿಕೊಳ್ತಾರೆ.  ಅವಳು ಹೇಳಿಕೊಡ್ತಿದ್ದಳು. ನಾವು ಹೇಳಿ ಸ್ನಾನಕ್ಕೆ ಓಡಿ ಹೋಗ್ತಿದ್ವಿ. ಆಮೇಲಾಮೇಲೆ ಶಾಲೆ, ಕಾಲೇಜು, ಆಟ, ಪಾಠಗಳ ಮಧ್ಯೆ ಇದೆಲ್ಲಾ ಯಾರಿಗೆ ನೆನಪಿರುತ್ತೆ? ಮರತೇ ಹೋಯಿತು.  ಮೊನ್ನೆ ಯಾವುದೋ ಪುಸ್ತಕ ಹುಡುಕಲು ಹೋದಾಗ ಅಮ್ಮನ ಈ ಹಳತು ಶ್ಲೋಕದ ಪುಸ್ತಕ ಸಿಕ್ಕಿತು.  ಮುಂಜಾನೆ ಎದ್ದು ಹೇಳಲೇ ಬೇಕಾದಂತಹ ಶ್ಲೋಕಗಳು.  ಅದ್ರಲ್ಲಿ ಒಂದು

ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರೀ ತಥಾ!
ಪಂಚಕನ್ಯಾಸ್ಮರೇನಿತ್ಯಂ ಮಹಾಪಾತಕ ನಾಶನಂ.

ಆಶ್ಚರ್ಯವಾಯಿತು.  ಅಮ್ಮನನ್ನು ಹುಡುಕಿಕೊಂಡು ಹೋದೆ.  ಆ ಶ್ಲೋಕ ಕೆಲವರು ಸೀತಾ ಎಂದು ಸೇರಿಸಿ ಹೇಳುತ್ತಾರೆ ಮತ್ತೆ ಕೆಲವರು ಸೀತೆಯ ಬದಲಿಗೆ ಕುಂತೀ ಹೇಳ್ತಾರೆ ಎಂದರು! ನನಗೇ ಈ ಐವರು ಮಹಿಳೆಯರ ಕಥೆಯಲ್ಲಿನ ಸಾಮಾನ್ಯ ಅಂಶಗಳನ್ನು ಗಣನೆಗೆ ತೆಗೆದುಕೊಂಡರೆ, ಸೀತೆಗಿಂತ ಕುಂತಿಯೇ ಹೆಚ್ಚು ಸೂಕ್ತ ಎನಿಸಿತು.  ಈ ಐವರು ಅಂದ್ರೆ ಅಹಲ್ಯಾ, ದ್ರೌಪದೀ, ಕುಂತೀ, ತಾರಾ, ಮಂಡೋದರಿ ಐವರು ಮಹಿಳೆಯರು ಒಬ್ಬನಿಗಿಂತ ಹೆಚ್ಚು ಗಂಡಸರೊಟ್ಟಿಗೆ ದೈಹಿಕ ಸಂಬಂಧವನ್ನು ಇಟ್ಟುಕೊಂಡಿದ್ದವರು! ಅದು ಹೇಗೆ ಮತ್ತೆ ಇವರೆಲ್ಲರೂ ಪಂಚಕನ್ಯೆಯರು?!! ಮತ್ತೆ ಅಮ್ಮನಿಗೆ ಕಾಟ ಕೊಡಲು ಶುರು ಮಾಡಿದೆ.  ನಾವು ಚಿಕ್ಕವರಾಗಿದ್ದಾಗಲೂ ನಮ್ಮ ತಲೆ ತಿಂದಿದ್ದ ಪ್ರಶ್ನೆ ಇದು, ಆದರೆ ನಾವು ನಿಮ್ಮ ತರಹ ಪ್ರಶ್ನೆಗಳನ್ನು ಕೇಳ್ತಾ ಇರಲಿಲ್ಲ, ಸಾಕು ಎದ್ದು ಹೋಗೇ ಎಂದು ಹೇಳಿ ಹೋದಳು.

ಕನ್ಯೆಯರು ಎಂದರೆ ಮದುವೆ ವಯಸ್ಸಿಗೂ ಕೂಡ ಬರದಂತಹ ಕುಮಾರಿಯರು. ಮತ್ತೊಂದು ಅರ್ಥ ತಮ್ಮ ಪಾವಿತ್ರತೆಯನ್ನು ಕಾಪಾಡಿಕೊಂಡಿರುವವರು. ಈ ಐವರೂ ಕುಮಾರಿಯರು ಕೂಡಾ ಅಲ್ಲಾ ಹಾಗೂ  ಪರ ಪುರುಷನೊಟ್ಟಿಗೆ ದೈಹಿಕ ಸಂಬಂಧವಿದ್ದವರು.  ಅದು ಹೇಗೆ ಮತ್ತೆ ಕನ್ಯೆಯರೆನ್ನುತ್ತಾರೆ?  ಸಂದರ್ಭಾನುಸಾರವಾಗಿ ಸಮಯೋಚಿತವಾದ ಹಾಗೂ ಧೀರ ನಿರ್ಧಾರಗಳನ್ನು ಕೈಗೊಂಡಿದ್ದವರು ಈ ಐವರು. ಹಾಗಾಗಿಯೇ ಇಂತಹ ಉನ್ನತ ಪಟ್ಟವನ್ನು ನೀಡಲಾಯಿತೇ? ಅಥವಾ ಪುರುಷ ಪ್ರಧಾನ ಸಮಾಜದಲ್ಲಿ ಈ ಐವರು ಅನುಭವಿಸಿದ್ದು ಅಂತಿಂತಹ ಕಷ್ಟಗಳಲ್ಲ. ಈಗ ಆಗಿದ್ದರೆ ಡೈವೋರ್ಸ್ ಎಂಬ ಸುಲಭದ ಮಾರ್ಗವಿದೆಯಲ್ಲವೇ?  ಮದುವೆಯಾಗಿದ್ದರೂ, ಧೀರೋಧಾತ್ತ ಗಂಡಂದಿರಿದ್ದರೂ, ಪರ ಪುರುಷನ ಸಂಘ ಮಾಡಬೇಕಾಯಿತು. ಪುರುಷನ ಉದಾಸೀನತೆಗೆ,  ದಬ್ಬಾಳಿಕೆಗೆ, ಮೋಸಕ್ಕೆ, ಮಹತ್ವಾಕಾಂಕ್ಷೆಗೆ, ದುರಾಸೆಗೆ ಬಲಿಯಾದವರು ಇವರು.  ಬಹುಶಃ ಅದರಿಂದ ಇವರನ್ನು ಮೇಲಕ್ಕೆ ಕೂರಿಸಿ, ಕಣ್ಣೊರೆಸುವ ತಂತ್ರವಾಯಿತೇ?  ಸಂದರ್ಭಕ್ಕನುಗುಣವಾಗಿ ದೈಹಿಕ ಸಂಬಂಧಗಳನ್ನು ಇಟ್ಟುಕೊಳ್ಳುವುದು ತಪ್ಪೇನಲ್ಲ ಎನ್ನುವುದು ಈ ಶ್ಲೋಕದಲ್ಲಿ ಸೂಚ್ಯವಾಗುತ್ತಿಲ್ಲವೇ? 

ಮುಂದುವರೆಯುವುದು

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಅದು 'ಪಂಚಕಾನ್' ಎಂದಾಗಬೇಕು. ಪಂಚಕನ್ಯಾನ್ ಅಲ್ಲ. ಅಂದರೆ ಈ ಐವರನ್ನು ಸ್ಮರಿಸಿದರೆ ಮಹಾ ಪಾತಕಗಳು ನಾಶವಾಗುತ್ತವೆ ಎಂದು ನಾನೂ ಇದೇ ಸಂಶಯವನ್ನು ನಮ್ಮೂರ ಹಿರಿಯರೊಬ್ಬರಲ್ಲಿ ಹೇಳಿದಾಗ ನನ್ನನ್ನು ಈರೀತಿ ಅವರು ತಿದ್ದಿದರು. ಅವರ ಪ್ರಕಾರ ಕನ್ಯೆ ಎಂದರೆ ೮ ವರ್ಷದ ಬಾಲೆ.(ಒಂದು ಶ್ಲೋಕವನ್ನೂ ಅವರು supporting ಆಗಿ ಹೇಳಿದ್ದರು)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Corrected: ಅದು 'ಪಂಚಕಾನ್' ಎಂದಾಗಬೇಕು. ಪಂಚಕನ್ಯಾನ್ ಅಲ್ಲ. ಪಂಚಕಾನ್ ಯಃ ಸ್ಮರೇನ್ ನಿತ್ಯಂ ಮಹಾಪತಕ ನಾಶನಂ ಅಂದರೆ ಈ ಐವರನ್ನು ಸ್ಮರಿಸಿದರೆ ಮಹಾ ಪಾತಕಗಳು ನಾಶವಾಗುತ್ತವೆ. ಪಂಚಕಾನ್ ಯಃ ಸ್ಮರೇನ್ ಎಂಬುದನ್ನು ವೇಗವಾಗಿ ಹೇಳುವಾಗ ಪಂಚಕನ್ಯಾನ್ ಸ್ಮರೇನ್ ಎಂದು ಕೇಳುತ್ತದೆ. :) ನಾನೂ ಇದೇ ಸಂಶಯವನ್ನು ನಮ್ಮೂರ ಹಿರಿಯರೊಬ್ಬರಲ್ಲಿ ಹೇಳಿದಾಗ ನನ್ನನ್ನು ಈರೀತಿ ಅವರು ತಿದ್ದಿದರು. ಅವರ ಪ್ರಕಾರ ಕನ್ಯೆ ಎಂದರೆ ೮ ವರ್ಷದ ಬಾಲೆ.(ಒಂದು ಶ್ಲೋಕವನ್ನೂ ಅವರು supporting ಆಗಿ ಹೇಳಿದ್ದರು)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮಗೆ ಈ ಹಿಂದೆ ಪ್ರತಿಕ್ರಿಯಿಸಲಾಗಿರಲಿಲ್ಲ. ಕ್ಷಮಿಸಿ. ಮೊದಲನೆಯದಾಗಿ ನನಗೆ ಸಂಸ್ಕೃತ ಒಂದಕ್ಷರವೂ ಬರುವುದಿಲ್ಲ. ಈ ಶ್ಲೋಕ ನಮ್ಮಮ್ಮ ನನಗೆ ಹೇಳಿಕೊಡ್ತಿದ್ದದ್ದು. ಅವರ ಚಿಕ್ಕಪ್ಪ ತ್ರಿವೇದಿಗಳು. ಹಾಗಾಗಿ ನನಗೆ ಈ ಶ್ಲೋಕದ ಅರ್ಥ ಕೂಡ ಅಮ್ಮನೇ ಹೇಳಿದ್ದು. ಹಾಗೂ ಒಬ್ಬೊಬ್ಬರ ಅನಿಸಿಕೆಗಳು ಈ ಶ್ಲೋಕದ ಬಗ್ಗೆ ಬೇರೆ, ಬೇರೆ ಇವೆ. ನಿನ್ನೆ, ಮತ್ತೊಬ್ಬ ಗೆಳೆಯ ಹೇಳುತ್ತಿದ್ದ, ಅದು ಪಂಚಕಾನ್ ಕೂಡ ಅಲ್ಲಾ, ಪಂಚಕನ್ಯೆ ಕೂಡ ಅಲ್ಲ, ಪಂಚಕಂ ನಾ ಸ್ಮರೇನಿತ್ಯಂ ಎಂದು! :-) ಇದನ್ನು ಬನ್ನಂಜೆ ಗೋವಿಂದಚಾರ್ಯರು ತಮ್ಮ ಪ್ರವಚನದಲ್ಲಿ ಮೊನ್ನೆ ಹೇಳುತ್ತಿದ್ದರಂತೆ! ಹಾಗಾಗಿ ಈ ವ್ಯಾಖ್ಯಾನಗಳು ಅಥವಾ ಅನಿಸಿಕೆಗಳು ಆಯಾ ವ್ಯಕ್ತಿಯ ದೇಶ, ಕಾಲ, ಅನುಭವ ಹಾಗೂ ಮನಸ್ಥಿತಿಯನ್ನು ಅವಲಂಬಿಸಿ ಇರುತ್ತವೆ ಎಂದಷ್ಟೇ ಹೇಳಬಲ್ಲೆ. :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಮೇಲಿನ ಪಂಚ ಕನ್ಯಯರು ನಮ್ಮ ಅಚ್ಚಗನ್ನಡ ಜನಪದ ಸಂಸ್ಕೃತಿಗೆ ಯಾವ ರೀತಿ ಸಂಬಂಧ ಪತ್ತಿದ್ದಾರೋ ಗೊತ್ತಿಲ್ಲ?! ;) ಈ ಬರಹದ ನೆಪದಲ್ಲಿ ಒಂದು ಪ್ರಶ್ನೆ..... ಯಾರು ಬೇಕಾದರೂ ಉತ್ತರಿಸಬಹುದು. ಪ್ರಶ್ನೆ. ನಮ್ಮ ಕನ್ನಡ ಮೂಲ ಸಂಸ್ಕೃತಿಯಲ್ಲಿ / ಕನ್ನಡ ಜನಪದ ಸಂಸ್ಕೃತಿಯಲ್ಲಿ ಐವರನ್ನು 'ಪಂಚ ಪತಿರ್ವತೆ" ಯಾರನಾಗಿ ಗುರ್ತಿಸಲಾಗಿದೆ. ಅವರು ಯಾರು?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೀತೆ, ಸಾವಿತ್ರಿ, ದಮಯಂತಿ, ಅರುಂಧತಿ, ಇನ್ನೊಬ್ಬಾಕೆ ಸತ್ಯ ಹರಿಶ್ಚಂದ್ರನ ಹೆಂಡತಿ ಇರಬೇಕು. (ಇದರ ಬಗ್ಗೆಯೂ ಒಂದು ಆರ್ಟಿಕಲ್ ಬರೀಬೇಕಂತಿದ್ದೆ :-) )
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇವರೂ ಸಹ ನಮ್ಮ ಕನ್ನಡ ಜನಪದ ಸಂಸ್ಕೃತಿಯ ಗರತಿಯರಲ್ಲ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

[quote]ನಮ್ಮ ಕನ್ನಡ ಮೂಲ ಸಂಸ್ಕೃತಿಯಲ್ಲಿ / ಕನ್ನಡ ಜನಪದ ಸಂಸ್ಕೃತಿಯಲ್ಲಿ ಐವರನ್ನು 'ಪಂಚ ಪತಿರ್ವತೆ" ಯಾರನಾಗಿ ಗುರ್ತಿಸಲಾಗಿದೆ. ಅವರು ಯಾರು?[/quote]

ಕಡ್ಲಿಮಟ್ಟಿಯ ಕಾಶಿಬಾಯಿ

ಭಾಗೀರತಿ (ಕೆರೆಗೆ ಹಾರ)

 

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಬ್ಬ... ಕೊನೆಗೂ ಒಬ್ಬರಾದರೂ ಸರಿ / ಹತ್ತಿರದ ದಾರಿಯಲ್ಲಿ ಯೋಚಿಸಲು ಶುರು ಮಾಡಿದರಲ್ಲ!!!..... ಧನ್ಯವಾದಗಳು. ಕಲ್ಪನೆಯ / ನಮ್ಮದಲ್ಲದ ಪುರಾಣಗಳೇ / ಕಟ್ಟು ಕಥೆಗಳೇ ನಮ್ಮ ಸಂಸ್ಕೃತಿ ಅಂತ ಬೀಗೋ ಜನರ ನಡುವೆ ನಿಮ್ಮ ನೋಡಿ ಖುಷಿ ಆಯ್ತು! ನಿಮ್ಮ ಉತ್ತರ ತಪ್ಪು! http://sampada.net/b...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂಚರ ಏಕೆ ಈ ರೀತಿ ಯೋಚಿಸುತ್ತಿದ್ದೀರಿ ? ಪುರಾಣದ ಕಥೆಗಳನ್ನು ಪ್ರಸ್ತುತ ಕಾಲಮಾನಕ್ಕೆ ಹೋಲಿಸಿದರೆ ಹೇಗೆ. ಆ ಶ್ಲೋಕಗಳೆಲ್ಲ ಆಯಾ ಕಾಲಮಾನದಲ್ಲಿ ರಚಿತವಾಗಿ ಸಾಂದರ್ಪಿಕವಾಗಿತ್ತು. ಈಗ ನಿಮಗೆ ಹಾಗೆನಿಸಿದರೆ ಸಹಜ. ನಮ್ಮ ಜ್ಞಾನಕ್ಕೆ ಮೀರಿದ ವಿಷಯದ ಬಗ್ಗೆ ವಿಮರ್ಷಿಸುವಾಗ ನಾವು ಎಚ್ಚರವಹಿಸಬೇಕಲ್ಲವೆ. <<ಈ ಐವರೂ ಕುಮಾರಿಯರು ಕೂಡಾ ಅಲ್ಲಾ ಹಾಗೂ ಪರ ಪುರುಷನೊಟ್ಟಿಗೆ ದೈಹಿಕ ಸಂಬಂಧವಿದ್ದವರು. ಅದು ಹೇಗೆ ಮತ್ತೆ ಕನ್ಯೆಯರೆನ್ನುತ್ತಾರೆ? >> ಹೇಗೆ ಹೇಳುತ್ತೀರಿ ? ಅಗ್ನಿಯೆ ಪತಿವ್ರತೆ ಎಂದು ಘೋಷಿಸಿದ ಸೀತೆ ಯನ್ನು ನೀವು ಸಲೀಸಾಗಿ ಪರಪುರುಷನ ಜೊತೆ ಸಂಬಂದವಿದ್ದ ಹೆಣ್ಣಿಗೆ ಹೋಲಿಸುತ್ತೀರಿ , ನಿಮಗೆ ಯಾವ ಆದಾರವಿದೆ ? ಮತ್ತೆ ಆ ಶ್ಲೋಕವನ್ನು ಹೇಗೆ ರಚಿಸಿದ್ದಾರೆ ಮತ್ತು ಅವರು ಹೇಗೆ ಪತಿವ್ರತೆಯರು ಅಂತ ವಿವರ ಬೇಕಾದಷ್ಟು ಪುಸ್ತಕಗಳಲ್ಲಿ ವಿವರಿಸಲಾಗಿದೆ ನೀವು ಅದನ್ನೆಲ್ಲ ಓದಿದ್ದೀರಾ? ನಿಮ್ಮಗೆ ಖಂಡಿಸಲು ನಾನು ಇದನ್ನು ಹೇಳುತ್ತಿಲ್ಲ ಆದರೂ ಪುರಾಣಗಳು ದರ್ಮಗ್ರಂಥಗಳನ್ನು ಓದಿದಾಗ ಈ ರೀತಿಯ ಅನೇಕ ಚರ್ಚಾಸ್ಪದ ವಿಷಯಗಳು ಸಿಗುತ್ತವೆ ಆದರೆ ಧರ್ಮ ದೇವರು ಅನ್ನುವುದು ಅವರವರ ನಂಬಿಕೆಯ ವಿಷಯವಷ್ಟೆ. ಅವರು ಹೇಗೆ ಪತಿವ್ರತೆಯು ಅನ್ನುವುದು ನಂಬುವವರ ನಂಬಿಕೆ. ಈ ರೀತಿಯ ವಿಷಯಗಳು ಹಿಂದೂ ಧರ್ಮಕ್ಕಷ್ಟೆ ಸಿಮಿತವಲ್ಲ ಪ್ರಪಂಚದ ಬಹುತೇಕ ಧರ್ಮಗಳಲ್ಲಿ ಇದೆ. ಆದರೆ ಅಲ್ಲಿ ಚರ್ಚೆಗೆ ಸ್ವಾತಂತ್ರವಿಲ್ಲ. ಸರಿ ನಿಮಗೊಂದು ಪ್ರಶ್ನೆ ಕೇಳಲ ? ದೇವದೂತ ಏಸುವಿನ ತಂದೆ ಯಾರು ? ಏಸುವಿನ ತಾಯಿಯಾದರು ಸಹ ಮಾತೆ ಮೇರಿಯನ್ನು 'vergin mery' ಅಂದರೆ ಕನ್ಯೆ ಮೇರಿ ಅಂತಲೆ ಗುರುತಿಸುವುದೇಕೆ ? ಏಸುವಾದರೆ ದೇವದೂತ , ಸೂರ್ಯನ ಮಂತ್ರ ಪಠಣದಿಂದ ಹುಟ್ಟಿದ ಕರ್ಣನಾದರೆ ಏನು ಕಾನಿನನ? ಈರೀತಿ ವಿಷಯಗಳಿಂದ ಕೆದಕುವದರಿಂದ ಏನು ಪ್ರಯೋಜನವಿಲ್ಲ ಇಂಚರ ಅವರೆ ? ವಾದದಿಂದ ವಾದ ಹುಟ್ಟುತ್ತದೆ -ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:-) ಇಷ್ಟೊಂದು ಆವೇಶವೇಕೆ? ಪುರಾಣದ ಕಥೆಗಳು ಅಂದ್ರೇನು? ಆ ಕಾಲಮಾನದಲ್ಲಿ ನಡೆದಂತಹ ಘಟನೆಗಳನ್ನು ಆಧರಿಸಿದ ಕಥೆಗಳಲ್ಲವೇ? ಅಂದರೆ ಆಗಲೂ ಕೂಡ ಇಂತಹ ವಿವಾಹೇತರ ಸಂಬಂಧಗಳು ಇದ್ದವು ಎಂದರ್ಥ ಅಲ್ಲವೇ? ಹಾಗೂ ಅದನ್ನು ಆಗ ಮಾನ್ಯ ಮಾಡಲಾಗಿತ್ತು ಎಂದಲ್ಲವೇ? ಮತ್ತು ನಾನು ಇಲ್ಲಿ ಎಲ್ಲಿಯೂ ವಿಮರ್ಶಿಸಿಲ್ಲ. ನಾನು ಪ್ರಶ್ನೆಗಳನ್ನು ಕೇಳುತ್ತಿದ್ದೇನೆ. ನಾನು ಸಂದರ್ಭ ಹಾಗೂ ನಾಲ್ವರ ಸಾಮಾನ್ಯ ಅಂಶಗಳನ್ನು ಗಣನೆಗೆ ತೆಗೆದುಕೊಂಡಾಗ ಸೀತೆ ಇರಲಾರದು. ಬಹುಶಃ ಕುಂತಿ ಇರಬೇಕು ಎಂದು ತಿದ್ದುಪಡಿ ಕೂಡ ಮಾಡಿದ್ದೇನೆ. ನೀವು ಪೂರ್ತಿ ಓದಲಿಲ್ಲ ಎಂದೆನಿಸುತ್ತದೆ. ನಾನಿಲ್ಲಿ ಹಿಂದೂ ಧರ್ಮವನು ತಂದಿಲ್ಲ. ದೇವರನ್ನು ಕೂಡ ತೆಗಳಿಲ್ಲ. ಯಾರ ನಂಬಿಕೆಗೂ ಅಡ್ಡ ಬಂದಿಲ್ಲ. ಅಹಲ್ಯಾ, ದ್ರೌಪದಿ, ಕುಂತಿ, ತಾರಾ, ಮಂಡೋದರಿ ಇವರ ಕಥೆಯ ಹಿನ್ನೆಲೆ ನೋಡಿದರೆ ಈ ಐವರಿಗೂ ತಮ್ಮ ಗಂಡನನ್ನು ಬಿಟ್ಟು ಪರಪುರುಷರೊಂದಿಗೆ ಸಂಬಂಧವಿತ್ತು ಅನ್ನುವುದು ಗೊತ್ತಾಗುತ್ತದೆ. ಇದಕ್ಕೆ ಆಧಾರವೇಕೆ ಬೇಕು? ತಾಳ್ಮೆಯಿಂದ ನಾನು ಬರೆದದ್ದು ಮತ್ತೊಮ್ಮೆ ಓದಿ ನೋಡಿ ಪ್ರತಿಕ್ರಿಯಿಸಿ ಎಂದಷ್ಟೇ ಹೇಳಬಲ್ಲೆ :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನಗೆ ಯಾವ ಆವೇಶವು ಇಲ್ಲ ಇಂಚರ ನಾನು ಹೇಳಬಯಸಿದ್ದು ನೀವು ಯಾವುದೆ ಪುರಾಣಗಳಗಲಿ ಯಾವುದೆ ಧರ್ಮದ ಕಥೆಗಳಾಗಲಿ ಈರೀತಿಯ ನಂಬಿಕೆಗಳಿರುತ್ತವೆ ಎಂದಷ್ಟೆ ಇನ್ನು ನೀವು ಹೇಳಿದ ಪಂಚಕನ್ಯೆಯರ ನಂಬಿಕೆಯ ವಿವರಣೆ ಕಳೆದ ವಾರವಷ್ಟೆ ಓದಿದ ನೆನಪು ಸಾದ್ಯವಾದಲ್ಲಿ ಹುಡುಕಿ ಸಂಪದಕ್ಕೆ ತರುತ್ತೇನೆ ಹಾಗಾಗಿಯೆ ಏನೊ ನಮ್ಮ ಪೂರ್ವಿಕರು ಹೇಳುತ್ತಿದ್ದರು ಋಷಿ ಮೂಲ ನದಿ ಮೂಲ ಪುರಾಣಗಳ ಮೂಲ ಕೆದಕಬಾರದು ... ಸರಿ ನೀವು ಮುಂದುವರೆಯಿರಿ ... ರೈಟ್ - ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕ್ಷಮಿಸಿ. ನಾನು ಹೇಳ ಹೊರಟಿದ್ದೇನೆಂದರೆ ಈ ರೀತಿಯ ವಿವಾಹಬಾಹಿರ ಸಂಬಂಧಗಳು, ವಿವಾಹೇತರ ಸಂಬಂಧಗಳು, ಬಹು ಪತಿತ್ವ, ಎಲ್ಲವೂ ಪುರಾಣ ಕಾಲದಿಂದಲೂ ಆಚರಣೆಯಲ್ಲಿತ್ತು. ಅದು ಈಗಿನ ತಂತ್ರಜ್ಞಾನದ ಕಾಲದಲ್ಲಿ ನಡೆಯುತ್ತಿರುವುದು ಹೊಸತೇನಲ್ಲ ಎಂದಷ್ಟೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಕನ್ಯೆ ಎ೦ದುದರಲ್ಲೆ ತಪ್ಪಿಲ್ಲ. ಯಾವ ಹೆಣ್ಣು ಕೇವಲ ಸ೦ತಾನೋತ್ಪತ್ತಿಗೆ ಮಾತ್ರ ಕಾಮವನ್ನು ಅಪೇಕ್ಷಿಸುವಳೋ ಮತ್ತು ಇನ್ನುಳಿದ೦ತೆ ಕಾಮಾಪೇಕ್ಷೆ ಇಲ್ಲದೆ ಇರುವಳೋ ಆಕೆಯನ್ನು ಕನ್ಯೆಯೆ೦ದೇ ಕರೆಯಬೇಕು. ಇದು ಗ೦ಡಿಗೂ ಅನ್ವಯಿಸುತ್ತದೆ. ಋಷಿಗಳು ಮದುವೆಯಾದರೂ ಬ್ರಹ್ಮಚಾರಿಗಳೇ ಎನ್ನುತ್ತಾರೆ ಅದು ಮೇಲೆ ಹೇಳಿದ೦ತೆಯೇ. ಅವರೆಲ್ಲರೂ ಕನ್ಯೆಯರೇ ಅದರಲ್ಲೆ ತಪ್ಪಿಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೊದಲನೆಯದಾಗಿ ಈ ಐವರೂ ಕೂಡ ಸಂತಾನೋತ್ಪತ್ತಿಗೆ ಕಾಮವನ್ನು ಅಪೇಕ್ಷಿಸಿದವರಲ್ಲ. ಹಾಗಾಗಿಯೇ ನಾನು ಪ್ರತಿಯೊಬ್ಬರ ಕಥೆಯನ್ನು ಇಲ್ಲಿ ಬರೆಯುತ್ತಿರುವುದು. ಅಹಲ್ಯೆಗೆ ಸಂತಾನವಿತ್ತು. ಆಕೆ ಇಂದ್ರನಲ್ಲಿ ಕೂಡಿದ್ದು ಕಾಮಾಪೇಕ್ಷೆಯಿಂದಾಗಿಯೇ. ಹಾಗೂ ಇಲ್ಲಿ ಈ ಐವರು ನಿಮಿತ್ತ ಮಾತ್ರ. ಈ ಕಥೆಗಳಿಂದ ನಮಗೆ ಕಂಡುಬರುವ ಅಂಶ ಆಗಿನ ಕಾಲದಲ್ಲಿಯೂ ಇದೆಲ್ಲವೂ ನಡೆಯುತ್ತಿತ್ತು. ಗಂಡು, ಹೆಣ್ಣಿನ ನಡುವೆ ದೈಹಿಕ ಆಕರ್ಷಣೆಗಿಂತಲೂ ಮಿಗಿಲಾದ ಆಕರ್ಷಣೆಯೂ ಇತ್ತು ಎನ್ನುವುದಷ್ಟೆ. ದೈಹಿಕ ಆಕರ್ಷಣೆ ಸಂತಾನೋತ್ಪತ್ತಿಗಾಗಿ. ಇದನ್ನು ಎಲ್ಲಾ ಥಿಯರಿಗಳೂ ಒಪ್ಪುತ್ತವೆ. ಆದರೆ ಅದಕ್ಕೂ ಮೀರಿದ ಆಕರ್ಷಣೆಗಳು ಆಗಲೂ ಇತ್ತು ಅನ್ನುವ ನಿದರ್ಶನಕ್ಕಾಗಿ ಮಾತ್ರ ನಾನು ಇವರನ್ನು ಹೆಸರಿಸುತ್ತಿದ್ದೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೊದಲನೆಯದಾಗಿ ಕನ್ಯೆ ಎ೦ದರೆ ಹದಿನಾಲ್ಕು ವರ್ಷ ಮೇಲ್ಪಟ್ಟ ವಿವಾಹಯೋಗ್ಯೆಯನ್ನ ಕನ್ಯೆ ಎನ್ನುತ್ತಾರೆ. ಎ೦ಟು ವರ್ಷದ ಒಳಗಿನ ಮಗುವನ್ನು ಗೌರಿ ಎ೦ತಲೂ ಎ೦ಟರಿ೦ದ ಹದಿನಾಲ್ಕು ವರ್ಷದವಳನ್ನು ಕುಮಾರಿ ಎ೦ತಲೂ ಕರೆಯಬೇಕು. ಸುಪ್ರೀತ್ ಇ೦ದಿನ ಕಾಲದಲ್ಲು ದೈಹಿಕ ಸ೦ಪರ್ಕ ಒ೦ದು ತೆವಲು. ಆದರೆ ಹಿ೦ದೆ ದೈಹಿಕ ಸ೦ಪರ್ಕ ಒ೦ದು ತಪಸ್ಸು. ನಾನು ಮೊದಲೇ ಹೇಳಿದ೦ತೆ ಸ೦ತಾನಾಪೇಕ್ಷೆಯಿ೦ದ ಮಾತ್ರ ದೈಹಿಕ ಸ೦ಪರ್ಕ ಮಾಡುತ್ತಿದ್ದರು ಎನ್ನುವುದು ನಿಜ. ಅವರನ್ನು ಸ೦ದರ್ಶಿಸಲು ಈಗ ಅವರಿಲ್ಲ. ಅದು ಬೇರೆ ವಿಚಾರ. ನಾನು ನಿಷ್ಕರ್ಷೆ ಮಾಡುವುದೇನು ಬ೦ತು? ನಿಷ್ಕರ್ಷೆ ಮಾಡುವುದಕ್ಕೆ ನಾನ್ಯಾರು ಅಲ್ಲವೇ. ಕನ್ಯೆ ಎನ್ನುವುದಕ್ಕೆ ಇರುವ ಅರ್ಥವನ್ನಷ್ಟೇ ಹೇಳಿದ್ದೇನೆ. ಕಾಮವೆ೦ದರೆ ಆಸೆ, ಇಷ್ಟ ಎನ್ನುವುದು ಎಲ್ಲರಿಗೂ ತಿಳಿದ ಅರ್ಥವೇ? ಮಗುವನ್ನು ಪಡೆಯಬೇಕೆ೦ಬ ಆಸೆಯಿ೦ದ ಇಬ್ಬರೂ ಕೂಡುತ್ತಿದ್ದುದು ಮತ್ತು ಉಳಿದ ಸಮಯಗಳಲ್ಲಿ ಪ್ರವಚನ ಉಪದೇಶ ಮನೆಕೆಲಸ ಇತ್ಯಾದಿಗಳಲ್ಲಿ ತೊಡಗಿಕೊ೦ಡಿರುತ್ತಿದ್ದರು. ಟಿವಿ ನೋಡಿ ಟೆ೦ಪ್ಟ್ ಆಗಿ ದೈಹಿಕ ಸುಖ ಪಡೆಯಬೇಕೆನ್ನುವ ಚ೦ಚಲ ಮನಸ್ಸಿನವರಲ್ಲ ಅವರು. ಎ೦ಬುದಷ್ಟೇ ನನ್ನ ವಾದ. ಇನ್ನು ಅಹಲ್ಯೆಯ ಕಥೆ ಇ೦ದ್ರ ಮೋಸದಿ೦ದ ಆಕೆಯನ್ನು ಕಾಮಪರವಶಳಾಗುವ೦ತೆ ಮಾಡುತ್ತಾನೆ ಇದರಲ್ಲಿ ಅಹಲ್ಯೆಯ ತಪ್ಪಾದರೂ ಏನು? ಅವಳು ಬ೦ದವನು ಗ೦ಡನೆ೦ದೇ ನ೦ಬಿ ಅವನು ಮತ್ತೊ೦ದು ಮಗುವನ್ನು ಪಡೆಯಲು ಅಪೇಕ್ಷೆ ಪಡುತ್ತಿದ್ದಾನೆ ಎ೦ದು ಭಾವಿಸಿ ಅವನೊಡನೆ ಸೇರಿದಳು. ಮೋಸ ಮಾಡಿದ್ದು ಇ೦ದ್ರ ಜಗದ ದೃಷ್ಟಿಯನ್ನು ಪಾತಿವ್ಯತ್ಯವನ್ನು ಹಾಳು ಮಾಡಿಕೊ೦ಡಿದ್ದು ಅಹಲ್ಯೆ ಎ೦ದು ಇದ್ಯಾವ ನ್ಯಾಯ? ವಿಷಯ ಅದಲ್ಲ. ಗ೦ಡನಿಗೆ ನಿಷ್ಟಳಾಗಿದ್ದು ಮತ್ತು ಮಾನಸಿಕ ಚ೦ಚಲತೆಯಿಲ್ಲದೆ (ಸದಾ ಲೈ೦ಗಿಕಾರ್ಷಣೆಯಿ೦ದ ತುಡಿಯದೆ) ಇರುವ ಮತ್ತು ಕೇವಲ ಸ೦ತಾನೋತ್ಪತ್ತಿಗಾಗಿ ದೈಹಿಕ ಸುಖವನ್ನು ಅನುಭವಿಸುವ ಹೆಣ್ಣನ್ನು ಕನ್ಯೆಯೆ೦ದೂ ಗ೦ಡನ್ನು ಬ್ರಹ್ಮಚಾರಿಯೆ೦ದೇ ಕರೆಯಬೇಕು. ಕೃಷ್ಣನನ್ನು ಬ್ರಹ್ಮಚಾರಿಯೆ೦ದೂ ಕರೆಯುತ್ತಾರೆ. ೧೬ ಸಾವಿರ ಹೆ೦ಡಿರನ್ನು ಹೊ೦ದಿದ್ದೂ ಅವನು ಬ್ರಹ್ಮಚಾರಿ ಹೇಗಾದ? ಉ೦ಡು ಉಪವಾಸಿ ಬಳಸಿ ಬ್ರಹ್ಮಾಚಾರಿ ಎ೦ಬ ಮಾತನ್ನು ಕೇಳಿರುತ್ತೀರಿ ಏನು ಹೀಗೆ೦ದರೆ? ಇದಕ್ಕೂ ಕನ್ಯೆಗೂ ಸ೦ಬ೦ಧವಿದೆ . ಇನ್ನೊಮ್ಮೆ ಇದನ್ನು ಹೇಳುತ್ತೇನೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕ್ಷಮಿಸಿ, ಹರೀಶ್. ಇಲ್ಲಿ ಕನ್ಯೆ, ಕುಮಾರಿ ಅಥವಾ ವಿವಾಹಿತಳು, ಪತಿವ್ರತೆ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿಲ್ಲ. ಹಾಗೂ ಇಲ್ಲಿರುವ ಐದು ಮಂದಿಯರು ಕೂಡ ಸಂತಾನಾಪೇಕ್ಷೆಯಿಂದ ಪರಗಂಡಸರನ್ನು ಕೂಡಿರುವುದಿಲ್ಲ. ಅಹಲ್ಯೆ ಆಗಿರಬಹುದು ಅಥವಾ ಕುಂತಿಯಾಗಿರಬಹುದು ಕುತೂಹಲದಿಂದಲೇ ಪರಪುರುಷರ ಸಂಘ ಮಾಡಿರುವುದು. ಅಹಲ್ಯೆ ಕಥೆ ಈಗಾಗಲೇ ಬರೆದಿದ್ದೇನೆ. ಆಕೆಗೆ ಇಂದ್ರ ತನ್ನ ಗಂಡನ ವೇಷ ಧರಿಸಿ ಬಂದಿರುವುದು ತಿಳಿದೇ ಆಕೆ ಅವನೊಟ್ಟಿಗೆ ಕೂಡುತ್ತಾಳೆ. ಇದಕ್ಕೆ ಮತ್ತೊಂದು ಕಥೆಯಿದೆ. ಗೌತಮ ಮುನಿ ಸಂಧ್ಯಾವಂದನೆ ಮಾಡಲು ನದಿ ತಟಕ್ಕೆ ಹೋಗುವುದು ತಿಳಿದಿದ್ದ ಇಂದ್ರ, ಆಕೆಯನ್ನು ಕೂಡಲು ಅದೇ ಸರಿಯಾದ ಸಂದರ್ಭವೆಂದು ತಿಳಿದು, ಸೂರ್ಯನ ಬಳಿ ಹೋಗಿ ಬೇಗ ಮುಳುಗಲು ಕೇಳಿಕೊಳ್ಳುತ್ತಾನೆ. ಇದಕ್ಕೆ ಸೂರ್ಯ ಒಪ್ಪುವುದಿಲ್ಲ. ನಂತರ ಚಂದ್ರನ ಬಳಿ ಇಂದ್ರ ಹೋಗಿ ಕೇಳಿಕೊಂಡಾಗ, ಇಲ್ಲವೆನ್ನಲಾಗದೇ ಆತ ಒಪ್ಪಿಕೊಳ್ಳುತ್ತಾನೆ. ಚಂದ್ರ ಒಂದು ಹುಂಜದ ರೂಪದಲ್ಲಿ ಬಂದು ಕೂಗಿಕೊಂಡಾಗ, ತಡವಾಯಿತೆಂದು ತಿಳಿದ ಗೌತಮ ಮುನಿ, ನದಿ ತಟಕ್ಕೆ ಹೊರಡುತ್ತಾನೆ. ಇತ್ತ ಇಂದ್ರ ಗೌತಮ ಮುನಿಯ ವೇಷದಲ್ಲಿ ಅಹಲ್ಯೆಯ ಬಳಿ ತನ್ನ ಅಪೇಕ್ಷೆಯನ್ನು ಹೇಳಿಕೊಳ್ಳುತ್ತಾನೆ. ಸಂತಾನಾಪೇಕ್ಷೆ ಇಲ್ಲದೇ ಸಂಭೋಗ ಬೇಡುತ್ತಿರುವ ಈತ ತನ್ನ ಗಂಡನಲ್ಲವೆಂದು ಆಕೆಗೆ ತಿಳಿದರೂ, ಕುತೂಹಲದಿಂದ ಹಾಗೂ ಕಾಮ ಪರವಶಳಾಗಿಯೇ ಆಕೆ ಒಪ್ಪುತ್ತಾಳೆ. ಅತ್ತ ಗಂಗೆ, ಈ ಮೋಸದ ಬಗ್ಗೆ ಗೌತಮ ಮುನಿಗೆ ತಿಳಿಸುತ್ತಾಳೆ. ಕೋಪದಿಂದ ಬಂದ ಗೌತಮ ಮುನಿಗೆ ಬಾಗಿಲ ಬಳಿ ಕಾಯುತ್ತಿರುವ ಹುಂಜ (ಚಂದ್ರ) ಕಾಣುತ್ತದೆ. ತನ್ನ ವಸ್ತ್ರದಿಂದ ಅದಕ್ಕೆ ಹೊಡೆಯುತ್ತಾನೆ. ಅದಕ್ಕೆ ಈಗಲೂ ಚಂದ್ರನಲ್ಲಿ ಕಲೆ ಇರುವುದೆಂಬುದು ಪ್ರತೀತಿ :-) ಗೌತಮ ಮುನಿ ಬಂದದನ್ನು ತಿಳಿದ ಅಹಲ್ಯೆ ಬೇಗ, ಬೇಗ ಹಿಂದಿನ ಬಾಗಿಲಿನಿಂದ ಇಂದ್ರನನ್ನು ಹೊರ ಹೋಗಲು ಹೇಳುತ್ತಾಳೆ. ಸಿಕ್ಕಿಬಿದ್ದ ಇಂದ್ರನನ್ನು ನೋಡಿದ ಕೂಡಲೇ ಆತನಿಗೂ, ಹಾಗೂ ತಿಳಿದು, ತಿಳಿದು ಕೂಡಿದ ಅಹಲ್ಯೆಗೂ ಆತ ಕೋಪದಿಂದ ಶಾಪ ನೀಡುತ್ತಾನೆ. ಇದು ವಾಲ್ಮೀಕಿ ರಾಮಾಯಣದಲ್ಲಿ ಇರುವ ಕಥೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂಚರ, :::: ಬಹುಶಃ ಅದರಿಂದ ಇವರನ್ನು ಮೇಲಕ್ಕೆ ಕೂರಿಸಿ, ಕಣ್ಣೊರೆಸುವ ತಂತ್ರವಾಯಿತೇ? :::: ಯಾರ ಕಣ್ಣೊರೆಸುವ ತಂತ್ರ? ಆ ಐವರದ್ದೇ ಅಥವಾ ನಂತರ ಜನಿಸಿದ ಮಹಿಳೆಯರದ್ದೇ? ಆ ಐವರದ್ದು ಆಗಿರಲಾರದು ಏಕೆಂದರೆರೆ, ಆ ಐವರು ಒಂದೇ ಕಾಲದಲ್ಲಿ ಜೀವಿಸಿದ್ದವರಲ್ಲ. ಹಾಗಾಗಿ, ಈ ಹೇಳಿಕೆ ಅವರೆಲ್ಲಾ ಕಾಲವಾದ ನಂತರ ಹೊರಹೊಮ್ಮಿರಬಹುದು. ಇನ್ನು ನಂತರ ಜನಿಸಿದ ಮಹಿಳೆಯರ ಕಣ್ಣೊರೆಸುವ ತಂತ್ರವೇ ಆಗಿದ್ದರೆ, ಈ ಮಹಿಳೆಯರು ಕಣ್ಣೀರು ಹರಿಸುತ್ತಿರುವುದೇಕೆ? ಅದನ್ನು ಅನ್ಯರು ಒರೆಸುತ್ತಿರುವುದೇಕೆ? ಇದಕ್ಕೆ ಇಂಚರರಿಂದಷ್ಟೇ ಪ್ರತಿಕ್ರಿಯೆಯ ನಿರೀಕ್ಷೆ ನನಗೆ. - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಹಳ ಕಷ್ಟದ ಪ್ರಶ್ನೆ!. ಇದಕ್ಕೆ ಖಂಡಿತವಾಗಿಯೂ ಈಗ ನನಗೆ ಉತ್ತರಿಸಲು ಸಾಧ್ಯವಾಗದು. ಬಹುಶಃ ಪೂರ್ತಿ ಬರೆದ ನಂತರ ಉತ್ತರಿಸುವೆನೆಂಬ ಭರವಸೆ ಕೊಡುವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂಚರಾ, ನೀವು ಈ ಪ್ರಬಂಧವನ್ನು ಯಾವುದೋ ಹಳೆಯ ಶ್ಲೋಕವನ್ನು ಸುಳ್ಳು ಎಂದು ಪ್ರತಿಪಾದಿಸುವುದಕ್ಕಾಗಲೀ, ಅಥವಾ ಕೇವಲ ವಾದಕ್ಕಾಗಿ ಬರೆಯುತ್ತಿಲ್ಲ ಮತ್ತು ಈ ವಿಷಯ ಕೇವಲ ಸ್ತ್ರೀ ತತ್ವಗಳ ವಿಶ್ಲೇಷಣೆಗಾಗಿ ಎಂದು ಭಾವಿಸಿ ಈ ಉತ್ತರ ಬರೆಯುತ್ತಿದ್ದೇನೆ. ತತ್ವಗಳ ಬಗ್ಗೆ ಬರೆಯುವುದರ ಮೊದಲು, ಸಣ್ಣದೊಂದು ವಾದ..:) ೧. ಸಂಸ್ಕೃತದಲ್ಲಿ ಕನ್ಯಾ ಎಂಬುದು ಆಕಾರಾಂತ ಸ್ತ್ರೀ ಲಿಂಗ ಪದ. ವ್ಯಾಕರಣದ ಕಣ್ಣಿನಿಂದ ನೋಡಿದರೆ ಕನ್ಯೆಯರನ್ನು ಎನ್ನುವುದಕ್ಕೆ ಸರಿಯಾದ ವಿಭಕ್ತಿ ದ್ವಿತೀಯ ವಿಭಕ್ತಿ ಬಹುವಚನ : ' ಕನ್ಯಾಃ '. ಆದರೆ ಈ ಶಬ್ದವನ್ನು ಸೇರಿಸಿದರೆ ಮೊದಲಿನ ಸಾಲಿಗೂ ಎರಡನೇ ಸಾಲಿಗೂ ಎರಡು ಮಾತ್ರೆಗಳ ವ್ಯತ್ಯಾಸ ಬರುತ್ತದೆ. ಹೀಗಾಗಿ ಕನ್ಯಾಃ ಶಬ್ದವನ್ನು ಇಲ್ಲಿ ಪ್ರಯೋಗಿಸಿರಲು ಸಾಧ್ಯವೇ ಇಲ್ಲ. ಇದನ್ನು ಅನ್ವಯ ಮಾಡುವಾಗ ಪಂಚಕಾನ್ ಯಃ ಎಂದು ಬರೆಯಬೇಕಾಗುತ್ತದೆ. ಹೀಗಾಗಿ ಈ ಶ್ಲೋಕದಲ್ಲಿ ಯಾರನ್ನೂ ಕನ್ಯೆಯರು ಎಂದು ಕರೆದಿಲ್ಲ.. ಇವರ್ಯಾರೂ ಪಂಚಕನ್ಯೆಯರಲ್ಲ.. ೨. ನಿಮ್ಮ ವಾದ ಸೀತೆಯ ಬದಲು ಕುಂತೀ ಸೇರಿಸುವುದು.. ಮತ್ತು ಕಾರಣ ಪರಪುರುಷರ ಸಂಗ.. ನೀವು ಹೆಸರಿಸಿರುವ ಮಂಡೋದರಿ ಪರ ಪುರುಷರ ಸಂಗದ ಬಗ್ಗೆ ಎಲ್ಲೂ ಆಧಾರಗಳಿಲ್ಲ.. (ಅಥವಾ ನನಗೆ ದೊರಕಿಲ್ಲ..!) ರಾಮಾಯಣದಲ್ಲಿ ವಿಭೀಷಣನ ಜೊತೆಗೆ ರಾಜಕೀಯ ಒಪ್ಪಂದದ ಬಗ್ಗೆ ಬರುತ್ತದೆಯೇ ವಿನಃ ದೈಹಿಕ ಸಂಬಂಧದ ಬಗ್ಗೆ ವಿವರಣೆ ಇಲ್ಲ. ಹೀಗಾಗಿ ನೀವು ಮಂಡೋದರಿ ಯನ್ನೂ ಗುಂಪಿನಿಂದ ಹೊರಗೆ ಸೇರಿಸಬೇಕಿತ್ತು.. ಅಹಲ್ಯಾ ಹುಟ್ಟಿದ್ದು ಬ್ರಹ್ಮನ ಮನಸ್ಸಿನಿಂದ.. ಅಪ್ಸರೆಯರ ಅಂಶಗಳನ್ನು ಒಂದಾಗಿಸಿ ಬ್ರಹ್ಮ ಸೃಷ್ಟಿಸಿದ ಅಪ್ರತಿಮ ಸುಂದರಿ ಅಹಲ್ಯಾ.. ದ್ರೌಪದಿ ಹುಟ್ಟಿದ್ದು ಯಜ್ಞಕುಂಡದಿಂದ..ಸೀತಾ ಸಿಕ್ಕಿದ್ದು ಹೊಲದಲ್ಲಿ..ಮಂಡೋದರಿಯ ಉಗಮ ಅಪ್ಸರೆಯರಿಂದ.. ತಾರಾ ಜನಿಸಿದ್ದು ಸಾಗರದಲ್ಲಿ.. ಇವರ್ಯಾರೂ ಮಾನವಾಂಶಗಳಿಂದ ಹುಟ್ಟಿದವರಲ್ಲ... ಎಲ್ಲರೂ ಮಾಯೆಯ ಸೃಷ್ಟಿ.. ಹೀಗೆ ಅಹಲ್ಯಾ , ದ್ರೌಪದಿ, ಸೀತಾ , ಮಂಡೋದರಿ ಮತ್ತು ತಾರಾ ಇವರ ಹುಟ್ಟಿನ ಬಗ್ಗೆ ಗಮನ ಹರಿಸಿದರೆ ಇನ್ನೊಂದು ವಿಧದ ಹೊಂದಾಣಿಕೆ ಸಿಗುವುದು.. ಆದರೆ ಕುಂತಿ ಹಾಗಲ್ಲ.. ಈ ರೀತಿ ನೋಡಿದರೆ ಸೀತೆಯೇ ಸರಿ ಎನಿಸುವುದಿಲ್ಲವೇ..? ನಮಗೆ ಬೇಕಾದ ವಿಷಯಗಳಿಗೆ ಬೇಕಾದವರನ್ನು ಸೇರಿಸುವುದು ತಪ್ಪಲ್ಲವೇ? ಕುಂತಿಯೇ ಇರಲಿ ಸೀತೆಯೇ ಇರಲಿ .. ಚರ್ಚೆ ಇರುವುದು ಹೆಣ್ಣಿನ ಸ್ವಾತಂತ್ರ್ಯ ಮತ್ತು ಅವಳು ಏನು ಮಾಡಿದರೆ ತಪ್ಪು ಮತ್ತು ಏನು ಮಾಡಿದರೆ ಸರಿ ಎಂಬುದರ ಬಗ್ಗೆ.. <<ಮತ್ತೊಂದು ಅರ್ಥ ತಮ್ಮ ಪಾವಿತ್ರತೆಯನ್ನು ಕಾಪಾಡಿಕೊಂಡಿರುವವರು. ಈ ಮಹಾಸತಿಯರೆಲ್ಲಾ ತಮ್ಮ ಪಾವಿತ್ರ್ಯತೆಯನ್ನು ಕಾಪಾಡಿಕೊಂಡವರೇ.. ಪರಪುರುಷರ ಜೊತೆಗೆ ಸಂಪರ್ಕ ಇಟ್ಟುಕೊಂಡರೂ ತಮ್ಮ ಮಾನಸಿಕ ಪಾವಿತ್ರ್ಯತೆಯನ್ನು ದೀಪದಂತೆ ಬೆಳಗಿದವರು ಇವರು.. ನಮ್ಮ ಪುರಾಣಗಳಲ್ಲಾಗಲೀ. ಮಹಾಕಾವ್ಯಗಳಲ್ಲಾಗಲೀ ಮನಸ್ಸಿನ ಹಿರಿಮೆಗೆ ಮಹತ್ವ ಕೊಟ್ಟಿದ್ದಾರೆಯೇ ಹೊರತು, ದೈಹಿಕವಾಗಿ ನಡೆಸುವ ಕಾರ್ಯಗಳಿಗಲ್ಲ.. << ಈ ಐವರೂ ಕುಮಾರಿಯರು ಕೂಡಾ ಅಲ್ಲಾ ಹಾಗೂ ಪರ ಪುರುಷನೊಟ್ಟಿಗೆ ದೈಹಿಕ ಸಂಬಂಧವಿದ್ದವರು ನಿಮ್ಮ ಪ್ರಕಾರ ಪರ ಪುರುಷರು ಯಾರು? ಪಾಂಚಾಲಿಗೆ ಯಾರು ಪರ ಪುರುಷರು? << ಮದುವೆಯಾಗಿದ್ದರೂ, ಧೀರೋಧಾತ್ತ ಗಂಡಂದಿರಿದ್ದರೂ, ಪರ ಪುರುಷನ ಸಂಘ ಮಾಡಬೇಕಾಯಿತು ಕುಂತಿಗೆ ಕರ್ಣನನ್ನು ಪಡೆಯುವಾಗ ಅವಳಿನ್ನೂ ಕನ್ಯೆ..!! << ಪುರುಷನ ಉದಾಸೀನತೆಗೆ, ದಬ್ಬಾಳಿಕೆಗೆ, ಮೋಸಕ್ಕೆ, ಮಹತ್ವಾಕಾಂಕ್ಷೆಗೆ, ದುರಾಸೆಗೆ ಬಲಿಯಾದವರು ಇವರು. ನೀವು ಹೇಳಿದಂತೆ ಇವರ್ಯಾರೂ ಪುರುಷ ಪ್ರಧಾನ ಸಮಾಜದಿಂದ ತುಳಿತಕ್ಕೊಳಗಾದವರಲ್ಲ.. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಸ್ವಾತಂತ್ರ್ಯ ಎಷ್ಟರಮಟ್ಟಿಗಿತ್ತು ಎಂಬುದನ್ನು ಪ್ರತಿಪಾದಿಸಿದವರು. ಅಂತಹ ಸಮಾಜದಲ್ಲಿ ಹೆಣ್ಣಿನ ಮಹತ್ವವೇನು ಮತ್ತು ಕರ್ತವ್ಯಗಳೇನು ಎಂದು ಹೇಳಿದವರು.. ಅಹಲ್ಯೆ ಕಾಮಾಸಕ್ತಳಾಗಿ ಇಂದ್ರನ ಜೊತೆಗೂಡುವ ಧೈರ್ಯ ಮಾಡಿದ್ದು , ದ್ರೌಪದಿ ಕುರುವಂಶದವರ ನಿರ್ಮೂಲನೆಗೆ ಕಾರಣವಾಗಿದ್ದು, ಸೀತೆ ರಾವಣನ ಅಂತ್ಯಕ್ಕೆ ನಾಂದಿ ಹಾಡಿದ್ದು, ಕೆಟ್ಟ ಗಂಡಂದಿರ ಸರಿ ಮಾಡಲು ಪರಿ ಪರಿಯಾಗಿ ಹೇಳಿದ ಮಂಡೋದರಿ ತಾರಾ ಇವೆಲ್ಲಾ ಸ್ತ್ರೀ ತತ್ವಗಳಿಗೆ ವಿರುದ್ಧವಾದದ್ದು ಅಲ್ಲ.. ಅಹಲ್ಯೆಯನ್ನು ಮಗಳಾಗಿ ಬೆಳೆಸಿದ ಗೌತಮ ಕಾಮದಲ್ಲಿ ನಿರಾಸಕ್ತನಾಗಿದ್ದರಲ್ಲಿ ಆಶ್ಚರ್ಯವೇನು? ಪಾಪಕ್ಕೆ ಪ್ರಾಯಶ್ಚಿತವೇ ಪರಿಹಾರ ಎಂಬುದನ್ನು ಸೂಚಿಸಲು ಅಹಲ್ಯೆ ಕಲ್ಲಾದಳು.. ದಿನವೂ ಮಾಡಿದ ತಪ್ಪಿಗೆ ಅಳುತ್ತಾ ಕೊರಗಲು ಬಿಡದೆ ಕಲ್ಲು ಮಾಡಿದ ಗೌತಮ ಕೊಟ್ಟದ್ದು ವರವೋ ಶಾಪವೋ? ಸೀತೆಯನ್ನು ಪರೀಕ್ಷಿಸಿದ ದುಷ್ಟ ರಾಮ ಸ್ತ್ರೀವಾದಿಗಳಿಗೆ ವನವಾಸಕ್ಕೆ ಹೊರಟಾಗ ಸೀತೆಯನ್ನು ಬರಲೇ ಬೇಡ ಎಂದು ಕೇಳಿಕೊಂಡ ಕಳಕಳಿಯ ರಾಮನಾಗಿ ಯಾಕೆ ಕಾಣುವುದಿಲ್ಲಾ..? Polygamy ಸಕ್ರಮವಾಗಿದ್ದ ಆ ಕಾಲದಲ್ಲಿ Polyandry ಯನ್ನು ನಡೆಸಿದ ಪಾಂಚಾಲಿ ಸಮಾಜದಲ್ಲಿ ಬಹಿಷ್ಕಾರಕ್ಕೆ ಒಳಗಾಗಿಲ್ಲ.. ಅಂದರೆ ಪುರುಷರಿಗೆ ಎಷ್ಟು ಅಧಿಕಾರ ಇತ್ತೋ ಅಷ್ಟೇ ಸ್ತ್ರೀಯರಿಗೂ ಕಲ್ಪಿಸಿದ ಸಮಜಾವಲ್ಲವೇ ಅದು.. ಪುರುಷನ ಉದಾಸೀನತೆಗೆ, ದಬ್ಬಾಳಿಕೆಗೆ, ಮೋಸಕ್ಕೆ, ಮಹತ್ವಾಕಾಂಕ್ಷೆಗೆ, ದುರಾಸೆಗೆ ಬಲಿಯಾದವರು ಇವರಲ್ಲ.. ಹೆಣ್ಣಿಗೆ ತನಗೆ ಬೇಕಾದುದನ್ನು ಮಾಡುವ ಸ್ವ್ವಾತಂತ್ರ್ಯ ಮೊದಲೂ ಇತ್ತು.. ಈಗಲೂ ಇದೆ.. ಸಂದರ್ಭಾನುಸಾರ ದೈಹಿಕ ಸಂಬಂಧ ಇಟ್ಟುಕೊಳ್ಳುವುದನ್ನೂ ಒಪ್ಪಿದ ಸಮಾಜ ನಮ್ಮದು.. ಆದರೆ ಮಾನಸಿಕ ಸಂಬಂಧವನ್ನು ಖಂಡಿತ ನಿರಾಕರಿಸಿದೆ.. ಆದರೆ ಹೆಸರೇ ಹೇಳುವಂತೆ ಅದು ಮಾನಸಿಕ.. ವ್ಯಕ್ತಿತ್ವ.. ಇಡೀ ಸಮಾಜವನ್ನು ರೂಪಿಸುವ ಶಕ್ತಿಯಿರುವ ಹೆಣ್ಣು ನಿರ್ಧರಿಸಬೇಕು .. ತನಗೆ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂದು.. ಹಿಂದೆ ಮಾಡಿದ್ದರು ಅದಕ್ಕೆ ಇಗಲೂ ಮಾಡುತ್ತೇನೆ ಅಥವಾ ಹಿಂದೆಂದೂ ಮಾಡಿಲ್ಲಾ ಹೀಗಾಗಿ ಈಗಲೂ ಮಾಡುವುದಿಲ್ಲ ಎಂಬ ವಿಚಾರ ಬೇಡ .. ಈ ಐವರು ಇಂತಹ ನಿರ್ಧಾರಗಳನ್ನು ಕೈಗೊಂಡ ಶಕ್ತಿಗಳು.. ಬದಲಾಗಿ ಈ ಶ್ಲೋಕದಲ್ಲಿ ಇರುವವರು ಪಂಚಕನ್ಯೆ ಯರೂ ಅಲ್ಲ.. ಈ ಶ್ಲೋಕದಲ್ಲಿ ಸೂಚಿಸ ಹೊರಟದ್ದು ದೈಹಿಕ ಸಂಬಂಧದ ಬಗ್ಗೂ ಅಲ್ಲ .. ಮಾನಸಿಕ ಸ್ಥೈರ್ಯದ ಬಗ್ಗೆ.. ಸರಿ ಎನಿಸಿದರೆ ನಿತ್ಯವೂ ಪಠಿಸಿ.. ಮಾಹಾ ಪಾತಕ ನಾಶನಂ ಆಗಬಹುದು.. ಅಂತಹ ಮಹಾ ಪಾತಕಗಳು ನಮ್ಮಿನ್ದಾಗದಿರಲಿ ಎಂದು ಈ ಐವರನ್ನೂ ಪ್ರಾರ್ಥಿಸಿ.. ಈಗ ಸೀತೆಯನ್ನು ಇಡುತ್ತೀರೋ ಅಥವಾ ಕುಂತಿಯನ್ನು ಇಡುತ್ತೀರೋ ಎಂಬುದು ಮಹತ್ವವಲ್ಲ. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಸಣ್ಣ ವಾದದಲ್ಲಿ ನನ್ನದೊಂದು ಪುಟ್ಟ ಸಂಶಯ :) >> ಕನ್ಯೆಯರನ್ನು ಎನ್ನುವುದಕ್ಕೆ ಸರಿಯಾದ ವಿಭಕ್ತಿ ದ್ವಿತೀಯ ವಿಭಕ್ತಿ ಬಹುವಚನ : ' ಕನ್ಯಾಃ '. ಆದರೆ ಈ ಶಬ್ದವನ್ನು ಸೇರಿಸಿದರೆ ಮೊದಲಿನ ಸಾಲಿಗೂ ಎರಡನೇ ಸಾಲಿಗೂ ಎರಡು ಮಾತ್ರೆಗಳ ವ್ಯತ್ಯಾಸ ಬರುತ್ತದೆ. ಹೀಗಾಗಿ ಕನ್ಯಾಃ ಶಬ್ದವನ್ನು ಇಲ್ಲಿ ಪ್ರಯೋಗಿಸಿರಲು ಸಾಧ್ಯವೇ ಇಲ್ಲ. ಶ್ಲೋಕ ಅನುಷ್ಟುಪ್ ಛಂದಸ್ಸಿನಲ್ಲಿದೆ, ಆದ್ದರಿಂದ 5 ನೇ ಅಕ್ಷರ ಲಘು, 6 ಗುರು ಮತ್ತು 7 ಗುರು (3 ನೇ ಪಾದವಾದ್ದರಿಂದ) ಇದ್ದರೆ ಸಾಕಲ್ಲವೇ? "ಪಂಚಕನ್ಯಾಃ ಸ್ಮರೇನ್ನಿತ್ಯಂ" ಎಂಬುದರಲ್ಲಿ ವ್ಯಾಕರಣ ದೋಷ ಇಲ್ಲ ! ಅಲ್ಲದೆ, ಸಂಸ್ಕೃತ ಸಾಹಿತ್ಯದಲ್ಲಿ ಅನೇಕ ಅನುಷ್ಟುಪ್ ಶ್ಲೋಕಗಳಲ್ಲಿ ನಿಯಮ ಉಲ್ಲಂಘನೆ ಆಗಿರುವುದನ್ನು ಗಮನಿಸಬಹುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಪ್ಪಿಕೊಂಡೆ.. ಧನ್ಯವಾದಗಳು.. ನಮ್ಮ ವಿಚಾರಗಳನ್ನು ಹೇಳುವಾಗ ನಮಗೆ ಬೇಕಾದ ಹಾಗೆ ಉಪಯೋಗಿಸಿಕೊಳ್ಳುತ್ತೇವೆ ಅನ್ನುವುದಕ್ಕೆ ಉದಾಹರಣೆ. ಈ ಛಂದಸ್ಸಿನಲ್ಲಿ 'ಪಂಚಕಾನ್ಯಃ' ಕೂಡಾ ಹೊಂದಿಕೆಯಾಗುತ್ತದೆ. ಸಾಧಾರಣ ಪ್ರಸಿದ್ಧ ರಚನೆಗಳಲ್ಲಿ ಮಾತ್ರಾ ಸಮನ್ವಯ ಇರುವುದರಿಂದ ಆ ವಿಧಾನದಲ್ಲೊಂದು ವಿವರಣೆ ನೀಡಿದೆ ಅಷ್ಟೇ.. ಅಸಲಿಗೆ ಪಂಚಕಾನ್ ಶಬ್ದದ ಬಗ್ಗೆಯೂ ಗೊಂದಲವಿದೆ.. ಗೊತ್ತಿದ್ದರೆ ತಿಳಿಸಿ.. ತಿಳಿದವರೊಬ್ಬರನ್ನು ಕೇಳಿದಾಗ ಅವರು ಹೇಳಿದ್ದು ಹೀಗೆ: ಅದು ಪಂಚಕಂ ನಾಃ ಸ್ಮರೆನ್ನಿತ್ಯಂ .. ಐವರು ನಾರಿಯರನ್ನು ಎಂಬರ್ಥದಲ್ಲಿ.. ಸಂಸ್ಕೃತದ ಈ ರೀತಿಯ ಸಾಮರ್ಥ್ಯದಲ್ಲಿ ನಮ್ಮ ವ್ಯಾಕರಣ ವಾದಗಳು ಸರಿ ಬರುವುದಿಲ್ಲ ಎಂದು ಕೈಮುಗಿದೆ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು. ನಿಮ್ಮ ಊಹೆ ಭಾಗಶಃ ಸರಿಯಾಗಿದೆ. ನನಗೆ ಈ ಶ್ಲೋಕದ ನೀತಿ, ನಿಜಾಯಿತಿಯ ಬಗ್ಗೆ ಚರ್ಚೆ ಮಾಡುವುದು ಖಂಡಿತವಾಗಿಯೂ ಬೇಕಿಲ್ಲ. ಹೌದು. ನನಗೆ ಸ್ತ್ರೀ ತತ್ವಗಳ ಬಗ್ಗೆ, ಸ್ತ್ರೀಯರ ಭಾವನೆಗಳ ಬಗ್ಗೆ ಅಥವಾ ಅವರು ಇಂತಹ ಸಂದರ್ಭಗಳಲ್ಲಿ ಹೇಗೆ ರಿಯಾಕ್ಟ್ ಮಾಡುತ್ತಾರೆ ಎನ್ನುವುದರ ಬಗ್ಗೆ ಕುತೂಹಲವಿದೆ. ಆಗಿನಿಂದಲೂ ಅಂದರೆ ನಡೆದಿದ್ದೆಲ್ಲವೂ ಸತ್ಯವೆಂದಲ್ಲ, ಇವರೆಲ್ಲರೂ ಇದ್ದರೋ, ಇಲ್ಲವೋ, ನಡೆದಿತ್ತೋ, ಇಲ್ಲವೋ ಇವುಗಳ ಬಗ್ಗೆ ನನಗೆ ಗೊಂದಲವೂ ಇಲ್ಲ, ಕುತೂಹಲವೂ ಇಲ್ಲ. ಇದನ್ನೊಂದು ಕಲ್ಪನೆಯ ಕಥೆ ಎಂದುಕೊಂಡರೆ, ಅದನ್ನು ಈಗಿನ ಪ್ರಸ್ತುತ ಪರಿಸ್ಥಿತಿಗೆ ಹೋಲಿಸಿ ಬರೆದಾಗ, ಈ ಮಾಯ, ಆತನ ವೇಷ ಧರಿಸಿ ಈತ ಬರುವುದು, ಅದು ಅಹಲ್ಯೆಗೆ ತಿಳಿಯದೇ ಇರುವುದು ಅಥವಾ ಕುಂತಿಗೆ ದೂರ್ವಾಸರು ಬೋಧಿಸಿದ ಮಂತ್ರ ಮಾತ್ರದಿಂದಲೆ ಆಕೆಗೆ ಕರ್ಣನ ಜನನ, ಇವೆಲ್ಲವೂ ಕೂಡ ಕಲ್ಪನೆಯಲ್ಲಿ ವಿಕಸಿತಗೊಂಡಿರುವುದಾಗಿಬಿಡುತ್ತದೆ. ನಮ್ಮ ಕನಸಿನಲ್ಲಿ ಯಾರು, ಹೇಗೆ, ಏನು ಬೇಕಿದ್ದರೂ ಮಾಡಬಹುದೋ ಹಾಗೇ! ಇಲ್ಲಿ ಅಹಲ್ಯೆ ಅಥವಾ ಇನ್ಯಾರೇ ಆದರೂ ಮೆಟಫರ್ ಆಗಿ ಮಾತ್ರ ನಾನಿಲ್ಲಿ ಅವರನ್ನು ಬಳಸಿಕೊಂಡಿರುವುದು. ಸೀತೆಯನ್ನು ಬಿಟ್ಟು ಕುಂತಿಯನ್ನು ಸೇರಿಸಿಕೊಂಡಿರುವ ನಿಮ್ಮ ಆಕ್ಷೇಪದ ಬಗ್ಗೆ ನನ್ನ ಉತ್ತರ, ಕೆಲವರು ಕುಂತಿ ಹೆಸರನ್ನು ಸೇರಿಸಿ ಶ್ಲೋಕ ಹೇಳಿದರೆ, ಮತ್ತೆ ಕೆಲವರು ಸೀತೆಯನ್ನು ಹೆಸರಿಸಿ ಹೇಳುತ್ತಾರೆ ಎಂಬುದು ನನಗೆ ಗೊತ್ತಾಗಿದ್ದು ಅಮ್ಮನಿಂದ. ಇದನ್ನು ನಾನು ಇಂಟರ್ ನೆಟ್ ನಲ್ಲಿ ಕೂಡ ಹುಡುಕಿದಾಗ ನನಗೆ ಎರಡು ಶ್ಲೋಕಗಳು ಕೂಡ ಸಿಕ್ಕವು. ಇದಕ್ಕಿಂತ ಹೆಚ್ಚಿಗೆ ನನಗೆ ಈ ಶ್ಲೋಕಗಳ ಬಗ್ಗೆ ಅರಿವಿಲ್ಲ. ಕ್ಷಮಿಸಿ. ಮಂಡೋದರಿಯ ಪಾವಿತ್ರತೆ ಬಗ್ಗೆ ಅಮ್ಮ ಹೇಳಿದ್ದು, ಸೀತೆ ಆಕೆಯ ಮಗಳಂತೆ! ರಾವಣ ಋಷಿಗಳ ಯಾಗ, ಹೋಮ, ಹವನಗಳನ್ನು ನಾಶ ಮಾಡುತ್ತಿದ್ದಾಗ, ಅವರ ರಕ್ತ ಸೇವಿಸಿ ಹುಟ್ಟಿದ ಮಗಳು ಸೀತೆಯಂತೆ. ಹಾಗಾಗಿಯೇ ತಂದೆಯೇ ಮಗಳನ್ನು ಮೋಹಿಸಿದ ಅಪಕೀರ್ತಿಗೆ ರಾವಣ ಒಳಗಾದನಂತೆ. ಇದರ ಸತ್ಯಾಸತ್ಯತೆಯನ್ನು ಬಲ್ಲವರಾರು? ಮಂಡೋದರಿಯ ಬಗ್ಗೆ ಮತ್ತೊಂದು ಮಾಹಿತಿ, ಆಕೆ ವಿಭೀಷಣನನ್ನು ಮದುವೆಯಾದಳು ಎಂಬುದು ಕೂಡ. ಇದಕ್ಕಿಂತ ಹೆಚ್ಚಿನ ವಿಷಯ ಅಥವಾ ಮಂಡೋದರಿಯ ಕಥೆಯನ್ನು ನಾನು ಕೂಡ ಹುಡುಕುತ್ತಿದ್ದೇನೆ. ಹಾಗಾಗಿಯೇ ಅಹಲ್ಯೆಯ ಕಥೆಯನ್ನು ಬರೆದು ನಿಲ್ಲಿಸಿಬಿಟ್ಟೆ. ಇನ್ನೂ ಪಾಂಚಾಲಿಯ ಕಥೆ - ಆಕೆ ತನ್ನ ಮದುವೆಯಾದ ಮೇಲೆ ಪ್ರತಿ ಗಳಿಗೆಯೂ ಕರ್ಣನನ್ನು ನೆನಪಿಸಿಕೊಳ್ಳುತ್ತಿದ್ದಳೆಂಬುದು ಅರ್ಧರ್ಧ ಗೊತ್ತು. ಪೂರ್ತಿ ತಿಳಿದ ಮೇಲೆ ಅವಳ ಕಥೆಯನ್ನು ಕೂಡ ಬರೆಯುತ್ತೇನೆ. ಅದಕ್ಕಾಗಿ ಬಲ್ಲವರ ಬಳಿ ಮಾಹಿತಿ ಪಡೆಯುತ್ತಿದ್ದೇನೆ. ನಾನು ಬರೆದಿರುವ ಪುರುಷನ ಉದಾಸೀನತೆಗೆ (ಗೌತಮ ಮುನಿಯ ಅಹಲ್ಯೆಯ ಮೇಲಿನ ಉದಾಸೀನತೆ), ದಬ್ಬಾಳಿಕೆ (೫ ಜನರು ಪತಿಯರಾಗಲು ಬಯಸಿದ್ದನ್ನು!), ಮೋಸ (ಪಾಂಡು ರಾಜನ ಅಶಕ್ತತೆ), ಮಹತ್ವಾಕಾಂಕ್ಷೆ (ಸುಗ್ರೀವ ರಾಜನಾಗಬೇಕೆಂಬ ಬಯಕೆ), ಮಂಡೋದರಿ (ರಾವಣನ ಪರಸ್ತ್ರೀ ಮೋಹ), ಈ ತರಹ ಅಂದೇನೋ ಊಹಿಸಿಕೊಂಡು ಬರೆದಿದ್ದೆ. ಈಗ ನೆನಪಾಗುತ್ತಿಲ್ಲ. ಖಂಡಿತ ಇದರ ಬಗ್ಗೆ ಎಲ್ಲಾ ಬರೆದ ಮೇಲೆ, ಎಲ್ಲರ ವಾದ ವಿವಾದಗಳೂ ಮುಗಿದ ಮೇಲೆ ಮತ್ತೊಮ್ಮೆ ಎಲ್ಲವನ್ನೂ ಸೇರಿಸಿ ಮತ್ತೊಂದು ಲೇಖನ ಬರೆಯುತ್ತೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಾವ ಒಂದು ಹೇಳಿಕೆಯಾಗಲಿ ಅಥವ ಘಟನೆಯಾಗಲಿ ಅದು ಎಲ್ಲಾ ಕಾಲಕ್ಕು ಸಕ್ತವಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಂದು ಸಣ್ಣ side note - ಪುರಾಣದ ಕಥೆಗಳ ಬಗ್ಗೆ ಇಷ್ಟೆಲ್ಲ ತಲೆಕೆಡಿಸಿಕೊಳ್ಳುವ ಬದಲಾಗಿ ಹರಿಹರಪುರ ಶ್ರೀಧರರ ವೇದಸುಧೆ ಬ್ಲಾಗಿನಲ್ಲಿ ಭಾಗವಹಿಸುವುದು ಉಚಿತ ಎನಿಸುತ್ತಿದೆ. ಅದರಿಂದ ಏನಾದರೂ ಉಪಯೋಗವಾಗಬಹುದು. ಪುರಾಣಗಳ ಸರಿ ತಪ್ಪುಗಳನ್ನು ವರ್ಷಗಟ್ಟಳೆ ವಾದಿಸಿ ಎಳೆದಾಡಲು ಸಾಕಷ್ಟು ವಿದ್ವಾಂಸರಿದ್ದಾರೆ. ಆದರೆ ವೇದದಲ್ಲೇನಿದೆ ಎಂದು ಚಿಂತಿಸುವವರು ಬೆರಳೆಣಿಕೆಯಷ್ಟು. ಅದಕ್ಕೆ ನಮ್ಮ ಸಮಯ/ಪ್ರಯತ್ನಗಳನ್ನು ಆ ನಿಟ್ಟಿನಲ್ಲಿ ಹರಿಸಿದರೆ ಹೇಗೆ ಎನ್ನುವ ಯೋಚನೆ ನನ್ನದು. ಅಲ್ಲದೆ ಪುರುಷ ಪ್ರಧಾನ ಸಮಾಜದ ಬಗ್ಗೆ ನೊಂದಿರುವ (ವಿನಾಕಾರಣ/ಸಕಾರಣ) ಮಹಿಳೆಯರಿಗೂ ಮತ್ತು ವರ್ಗ ಸಂಘರ್ಷಗಳಿಂದಾಗಿ ಅವಕಾಶವಂಚಿತರಾಗಿರುವ ಕೆಳವರ್ಗದವರಿಗೂ ಈ ಪುರಾಣಗಳಲ್ಲಿ ಯಾವ ಸಮಾಧಾನವೂ ಸಿಗದು. ಸಿಗುವುದಿದ್ದರೆ ಅದು ವೇದದಲ್ಲಿ ಮಾತ್ರ. ಹಾಗಿದ್ದಲ್ಲಿ ಅಲ್ಲೇ ಯಾಕೆ ಹುಡುಕಬಾರದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:-) ಪುರಾಣದ ಕಥೆಗಳ ಬಗ್ಗೆ ನಾನು ತಲೆಯನ್ನು ಕೆಡಿಸಿಕೊಂಡಿಲ್ಲ ಅಥವಾ ಕುತೂಹಲವೂ ಇಲ್ಲ. ಆಗಿನ ಸ್ತ್ರೀಯರ ಆಲೋಚನೆಗಳು ಹೇಗಿದ್ದಿರಬಹುದು? ಇಂದಿಗೆ ಅದು ಎಷ್ಟು ಬದಲಾಗಿರಬಹುದು? ಅಥವಾ ಬದಲಾಗೇ ಇಲ್ಲವೇ? ಇವುಗಳ ಬಗ್ಗೆ ಮಾತ್ರ ನನ್ನ ಕುತೂಹಲ. ಇನ್ನೂ ವೇದಸುಧೆ ಬ್ಲಾಗಿನಲ್ಲಿ ಭಾಗವಹಿಸಿದ ಮಾತ್ರಕ್ಕೇ ಇವೆಲ್ಲ ಅನುಮಾನಗಳು ಬದಲಾಗಿ ಪುರಾಣದ ಕಥೆಗಳೆಲ್ಲವನ್ನೂ ಪ್ರಶ್ನಿಸಲೇಬಾರದೆಂಬ ಮನಸ್ಥಿತಿಗೆ ನಾನಂತೂ ಖಂಡಿತವಾಗಿಯೂ ಹೋಗುವುದಿಲ್ಲ. ಹಾಗೂ ನಮ್ಮ ಸಮಯದ ಬೆಲೆ, ಅದನ್ನು ನಾವು ಖರ್ಚು ಮಾಡುವುದರ ಬಗ್ಗೆ ಬೇರೆಯವರಿಗಿಂತ ನಮಗೆ ಅದರ ಅರಿವು ಚೆನ್ನಾಗಿರುತ್ತದೆ ಎನ್ನುವುದು ನನ್ನ ಆಲೋಚನೆ. ಪುರುಷ ಪ್ರಧಾನ ಸಮಾಜದ ಬಗ್ಗೆ ನೊಂದಿರುವ ಮಹಿಳೆಯರಿಗೂ ಮತ್ತು ವರ್ಗ ಸಂಘರ್ಷಗಳಿಂದಾಗಿ ಅವಕಾಶವಂಚಿತರಾಗಿರುವ ಕೆಳವರ್ಗದವರಿಗೂ ಈ ಪುರಾಣಗಳಲ್ಲಿಯೂ, ಚರ್ಚೆಗಳಲ್ಲಿಯೂ ಅಥವಾ ಸರ್ಕಾರದ ಘೋಷಿತ ಯೋಜನೆಗಳಲ್ಲಿಯೂ ಅಥವಾ ಇನ್ನಾವುದೇ ಇನ್ನಿತರ ಮಾರ್ಗಗಳಲ್ಲಿಯೂ ಸಮಾಧಾನವೂ ಸಿಗದು, ಖಂಡಿತವಾಗಿಯೂ ವೇದದಲ್ಲಿಯಂತೂ ಸಿಗದು. ನನ್ನ ತಾತ ತ್ರಿವೇದಿ (ಅವರು ಚತುರ್ವೇದಿಯಾಗಿದ್ದರು, ಆದರೆ ಅಥರ್ವಣ ವೇದ ಓದಿದ್ದಾರೆಂದು ಹೇಳಲು ಸಂಕೋಚ ಪಟ್ಟರೆಂದು ಅಮ್ಮ ಹೇಳುತ್ತಾಳೆ). ಇಂತಹ ನನ್ನ ತಾತನ ಅನೇಕ ಮಕ್ಕಳು, ಬುದ್ಧಿವಂತರಾಗಿದ್ದರೂ, ಬುದ್ಧಿ ಸ್ಥಿಮಿತ ಕಳೆದುಕೊಂಡು ತೀರಿಕೊಂಡರು. ನನ್ನ ಅತ್ತೆ (ಅವರ ಮಗಳು) ಕೂಡ ಮಾನಸಿಕವಾಗಿ ಅಸ್ವಸ್ಥಳಾಗಿ ಆತ್ಮಹತ್ಯೆ ಮಾಡಿಕೊಂಡಳು. ಹಾಗಾದರೆ ಇದೆಲ್ಲವೂ ಏಕಾಯಿತು? ಬಿಡಿ, ನನಗೆ ವೇದ ಸರಿ, ಇಲ್ಲ ಎನ್ನುವ ಚರ್ಚೆಯಲ್ಲಿ ಆಸಕ್ತಿಯಿಲ್ಲ. ನೀವು ಮುಂದುವರೆಸಿದರೂ ನಾನಿನ್ನೂ ಈ ಬಗ್ಗೆ ಉತ್ತರಿಸಲಾರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಯ್ಯೋ ನಾನೇನೋ ಹೇಳಕ್ಕೆ ಹೋಗಿ ನೀವೇನೋ ಅಂಕೊಂಡ್ರಲ್ಲ! ನನ್ನ ಪ್ರತಿಕ್ರಿಯೆಯನ್ನು ಒಂದು side note ಎಂದು ಮೊದಲೇ ಹೇಳಿದ್ದೆ. ಅದರ ಮೇಲಾಗೂ ನೀವು ಅದನ್ನು provocative ಆಗಿ ಅರ್ಥೈಸಿದರೆ ನಾನೇನು ಮಾಡಲಿ. ಇಲ್ಲಿ ಬರೆದದ್ದೇ ತಪ್ಪಾಯಿತು. ಇನ್ನು ನೀವು ಉತ್ತರಿಸುವುದಿಲ್ಲ ಎಂದು ಹೇಳಿದ್ದರಿಂದ ನಿಮ್ಮ ಪ್ರತಿಕ್ರಿಯೆಗೆ ನಾನು ಏನೂ ಬರೆಯ ಹೋಗುವುದಿಲ್ಲ. ನಿಮ್ಮ ಬರಹಕ್ಕೊಂದು ದೊಡ್ಡ ನಮಸ್ಕಾರ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಯಾವಾಗಲೂ ಹಿಂದೂ ಧರ್ಮ, ವೇದ ಅಂದ್ರೆ ತೀರಾ ಪ್ರೊವೋಕೇಟಿವ್ ಅಥವಾ ಭಾವಾವೇಶದಿಂದ ಉತ್ತರಿಸುತ್ತಿದ್ರಿ. ಹಾಗಾಗಿ ನಾನು ಮೊದಲೇ ಮುನ್ನೆಚ್ಚರಿಕೆ ತೆಗೆದುಕೊಂಡೆ ಅಷ್ಟೆ. ದಾಳಿ ಶುರುವಾಗುವ ಮುನ್ನವೇ ಎದುರಾಳಿಯನ್ನು ಹೊಡೆದುಬಿಡುವ ಪ್ರಯತ್ನವಷ್ಟೆ :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<<ಅಲ್ಲದೆ ಪುರುಷ ಪ್ರಧಾನ ಸಮಾಜದ ಬಗ್ಗೆ ನೊಂದಿರುವ (ವಿನಾಕಾರಣ/ಸಕಾರಣ) ಮಹಿಳೆಯರಿಗೂ ಮತ್ತು ವರ್ಗ ಸಂಘರ್ಷಗಳಿಂದಾಗಿ ಅವಕಾಶವಂಚಿತರಾಗಿರುವ ಕೆಳವರ್ಗದವರಿಗೂ ಈ ಪುರಾಣಗಳಲ್ಲಿ ಯಾವ ಸಮಾಧಾನವೂ ಸಿಗದು. ಸಿಗುವುದಿದ್ದರೆ ಅದು ವೇದದಲ್ಲಿ ಮಾತ್ರ>> ಜಾಹೀರಾತು ನೀಡಿದಂತಿದೆ! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದಿನಾ ನೂರಾರು ಜಾಹೀರಾತು ನೋಡುತ್ತಿಲ್ಲವೇ ಟಿವಿ ಪತ್ರಿಕೆಗಳಲ್ಲಿ. ಇದನ್ನು ಅವುಗಳಲ್ಲಿ ಒಂದು ಎಂದು ತಿಳಿದು ಹೊಟ್ಟೆಗೆ ಹಾಕಿಬಿಡಿ. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

andina samajada paatragaLanna indina samajada neeti nadavaLigaLa hinaleyalli noduvudu aprastuta mattu asangata annisatte.. droupadige 5 gandadirno sariye, adare avru 'para purushara'? sankuchitavagide abhipraya
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.