ಸಂಪದಕ್ಕೆ ವಿದಾಯ ಹೇಳಲೇ?

0

ಇತ್ತೀಚೆಗೇಕೋ ನಿರಾಸಕ್ತಿ ಮನಸ್ಸಿಗೆ ಕಾಡುತ್ತಿದೆ. ಮೊದಲಿನಂತೆ ಚಟುವಟಿಕೆಯಲ್ಲಿ ಸಂಪದದಲ್ಲಿ ತೊಡಗಿಕೊಳ್ಳುವುದು ಕೂಡಾ ಸಾಧ್ಯವಾಗುತ್ತಿಲ್ಲ. ಕೆಲಸದ ಒತ್ತಡವೋ, ಬರಿಯ ಆರಂಭಶೂರತ್ವವಿತ್ತೋ ಗೊತ್ತಿಲ್ಲ! ಹೆಚ್ಚು ಕಮ್ಮಿ ೮ - ೯ ಗಂಟೆಗಳು ಆನ್ಲೈನ್ ನಲ್ಲಿ ಸಂಪದದಲ್ಲಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದೆ, ಬ್ಲಾಗ್ ಗಳನ್ನು ಬರೆಯುತ್ತಿದ್ದೆ! ಪ್ರತಿಯೊಂದು ಲೇಖನಗಳು, ಬ್ಲಾಗ್ ಗಳನ್ನು ಬಿಡದಂತೆ ಓದುತ್ತಿದ್ದೆ. ಆದರೆ ಈಗ್ಯಾಕೋ ಅದು ಸಾಧ್ಯವಾಗುತ್ತಿಲ್ಲ. ಯಾವ ಬ್ಲಾಗ್ ಗಳಾಗಲೀ, ಲೇಖನಗಳಾಗಲೀ, ನನಗೆ ವೈಯಕ್ತಿಕವಾಗಿ ಮುದ ನೀಡುತ್ತಿಲ್ಲ. ಪ್ರತಿಕ್ರಿಯಿಸಲು ತೋಚುತ್ತಿಲ್ಲ! ನನ್ನ ಬರವಣಿಗೆಯಂತೂ ನಿಂತೇ ಹೋಗಿದೆ! ಸಂಪದಕ್ಕೆ ಬಂದಾಗ, ‘ಬರುತ್ತಿದ್ದೇನೆ’ ಎಂದು ಹೇಳಿ ಬರಲಿಲ್ಲ. ಹೋಗುವಾಗ ಮಾತ್ರ ಹೀಗ್ಯಾಕೆ ಹೇಳಿ ಹೋಗಲು ಬಯಸುತ್ತಿದ್ದೇನೆ? ಅದು ಕೂಡಾ ಗೊತ್ತಿಲ್ಲ. ಬಹುಷಃ ಪ್ರತಿಕ್ರಿಯೆಗಳು ಯಾವ ರೀತಿ ಬರುತ್ತದೆಂದು ನೋಡಲು ಮನ ಕಾತರಿಸುತ್ತಿದೆಯಾ? ಗೊತ್ತಿಲ್ಲ.

‘ಸಂಪದ’ ನನ್ನ ಬರವಣಿಗೆಗೆ (ಅಷ್ಟು ದೊಡ್ಡ ಪದ ಉಪಯೋಗಿಸಬಹುದಾ?), ನನ್ನ ಅನಿಸಿಕೆಗಳಿಗೆ, ಒಂದು ದೊಡ್ಡ ವೇದಿಕೆ ಕೊಟ್ಟಿತು. ಒಂಟಿಯಾಗಿದ್ದ ನನಗೆ ಒಂದಷ್ಟು ಗೆಳೆಯರು ಸಿಕ್ಕರು. ಬಹಳ ಖುಶಿ ಕೊಟ್ಟಿತು. ಇನ್ನೇನನ್ನು ಬರೆಯಲು ತೋಚುತ್ತಿಲ್ಲ! ಈ ಸಂದರ್ಭದಲ್ಲಿ ಒಂದು ಹಾಡು ನೆನಪಿಗೆ ಬರುತ್ತಿದೆ. ‘ಮನಸ್ಸು ಹೇಳಬಯಸಿದೆ, ತುಟಿಯ ಮೇಲೆ ಬಾರದಿದೆ ಮಾತೊಂದು.................. ವಿದಾಯ ಗೆಳೆಯನೇ, ವಿದಾಯ ಗೆಳತಿಯೇ’ :-(

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಯಾಕ್ರೀ ಇಂಚರ ಹೀಗ್ ಹೇಳ್ತಿದೀರ?
ನೀವೇ ಒಳ್ಳೆಯ ಲೇಖನಗಳನ್ನ ಬರೀರಿ.. ನೀವ್ ಇನ್ನು ನಿಮ್ ಕಾದಂಬರಿ ಮುಗ್ಸಿಲ್ಲ.. ನೆನಪಿರಲಿ... ;-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಾಕೋ ಗೊತ್ತಿಲ್ಲ ಸಂಪದಾದ ತುಂಬ ಬರೀ ವಿದಾಯದ ಮಾತು...ಕೇಳಿ ಬೇಜಾರಾಯಿತು ಹಿರಿಯರಾದ ಹೆಗಡೆ ಅವ್ರು ಹೇಳಿದಹಾಗೆ "ಸಂಪದಕ್ಕೆ ನಾವು ಅನಿವಾರ್ಯ ಅಲ್ಲ" ಹೀಗಿದ್ದೂ ಯಾಕೆ ಬೇಜಾರು, ಈ ವಿದಾಯದ ಮಾತು ಗೊತ್ತಾಗ್ತಾ ಇಲ್ಲ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇತ್ತೀಚೆಗೆ ಯಾಕೋ ಏನು ಬರೆಯೋದಿಕ್ಕೂ ತೋಚದೇ ಇಲ್ಲ ಶೋಭಾ. (ಮುಂಚೆನೂ ಬರೀತಿರಲಿಲ್ಲ :-)) ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

[quote]ಇತ್ತೀಚೆಗೇಕೋ ನಿರಾಸಕ್ತಿ ಮನಸ್ಸಿಗೆ ಕಾಡುತ್ತಿದೆ. ಮೊದಲಿನಂತೆ ಚಟುವಟಿಕೆಯಲ್ಲಿ ಸಂಪದದಲ್ಲಿ ತೊಡಗಿಕೊಳ್ಳುವುದು ಕೂಡಾ ಸಾಧ್ಯವಾಗುತ್ತಿಲ್ಲ.[/quote]

"ಒಮ್ಮೊಮ್ಮೆ ಹಾಗನಿಸುವದುಂಟು , ಅದಕ್ಕೆಲ್ಲ ಗಮನ ಕೊಡಬೇಡಿ ( http://sampada.net/article/2183 ) :)

ಮತ್ತೆ ಬೇಗ ಆಸಕ್ತಿ ಮೂಡಲಿ ; ಮತ್ತೆ ಇಲ್ಲಿ ಬರೆಯಿರಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಹಳ ಚೆನ್ನಾಗಿದೆ ಸರ್. ನಾನು ಬೇಸರದಲ್ಲಿದ್ದೀನಿ ಅಂತಾ ಗೊತ್ತಿದ್ದರೂ ಹೀಗಾ ಆಡಿಕೊಳ್ಳೋದು! ಓದಿದ ತಕ್ಷಣ ನಗು ಬಂತು. ಆಮೇಲೆ ನೆನಪು ಮಾಡಿಕೊಳ್ಳಬೇಕಾಯಿತು. ಅರೆ! ನಾನು ಬೇಸರದಲ್ಲಿದ್ದೆ ಅಲ್ಲವೇ ಅಂತಾ :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) :) :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಲ್ಪ ದಿನ ಬ್ರೇಕ್ ತಗೊಳ್ಳಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಲ್ಲೋ ಮೇಡಮ್ಮ್.....
ವಿದಾಯ ಹೇಳಿ ಇಲ್ಲಿ ಇರೋದು ಬಿಡೋದು ನಿಮಗೆ ಬಿಟ್ಟಿದ್ದು... ನನ್ನ ಅನುಭವಕ್ಕೆ ಬಂದಂತೆ ಸಂಪದದ ಚಟ ಹತ್ತಿದವರು ಇದನ್ನು ಬಿಟ್ಟು ಹೋಗೋದಿಕ್ಕೆ ಸಾದ್ಯವಿಲ್ಲಾ.. ಹಾ ಸ್ವಲ್ಪ ಗ್ಯಾಪಂತೂ ತಗೊಂತಾರೆ... ;) ಗ್ಯಾಪಲ್ಲಿ ಬಂದು ಹಂಗಂಗೆ ಕಣ್ಣ್ ಹಾಯಿಸಿ ಹೋಗ್ತಾನೆ ಇರ್ತಾರೆ.. :)
ಆದರೆ ಹೋಗೋಕ್ ಮುಂಚೆ ದಯವಿಟ್ಟು ನಿಮ್ಮ ಸೀರಿಯಲ್(ಕಿಲ್ಲರ್ ಅಲ್ಲಾ) ಕಥೆಗೆ ಕ್ಲೈಮ್ಯಾಕ್ಸ್ ಹೇಳಿ ಹೋಗಿ.... :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಂದೊಂದು ಸಲ ಹೀಗಾಗೋದು ಉಂಟು. ಸ್ವಲ್ಪ ದಿನ ಬ್ರೇಕ್ ತಗೊಳ್ಳಿ, ಎಲ್ಲ ಸರಿ ಹೋಗುತ್ತೆ. ಎಲ್ಲರಿಗೂ ಒಂದಲ್ಲ ಒಂದು ಸಲ ಹೀಗನಿಸೋದು ಸಹಜ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂಚರಾ,
ಸಂಪದ ಹಾಗೇ, ಹೀಗೆ ಅಂತ ಹೇಳ್ತಾ ಇದ್ದ ನೀವು ಹೀಗೆ ಹೋಳೋದಾ..?
ನಿಮ್ಮ ಬರಹಗಳಿಗೆ ಎಷ್ಟೊಂದು ಜನ ಪ್ರತಿಕ್ರಿಯೆ ನೀಡ್ತಾ ಇದ್ರು, ನಿಮ್ಮ ಬರಹಗಳು ಸಹ ಅಷ್ಟೇ ಚೆನ್ನಾಗಿದ್ದವು ಅದನ್ನೆಲ್ಲಾ ಬಿಟ್ಟು ಹೋಗೋದಕ್ಕೆ ಮನಸ್ಸು ಹೇಗೆ ಬರತ್ತೆ..... ;)
ಸ್ವಲ್ಪ ದಿನ ವಿರಾಮ ತಗೊಂಡು ಮತ್ತೆ ಓಡಿ ಬನ್ನಿ ನಿಮ್ಮ ಬರಹಗಳಿಗೆ ಕಾಯ್ತಾ ಇರ್ತೀವಿ..........

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು, ಅರವಿಂದ ಹಾಗೂ ಮಂಸೋರೆಯವರಿಗೆ. ನೀವು ಹೇಳಿದ್ದು ಸರಿ, ಒಮ್ಮೆ ಸಂಪದದ ಚಟ ಹತ್ತಿದವರಿಗೆ, ಬಿಟ್ಟು ಹೋಗೋದು ಬಹಳ ಕಷ್ಟ. ಕಥೆ ಕ್ಲೈಮಾಕ್ಸ್ ಯೋಚನೆ ಮಾಡಿ, ಮಾಡಿ, ಮಾಡಿ ಬೇಸರ ಬಂದು ಬಿಡ್ತಾ :-) ಗೊತ್ತಿಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಲ್ತೇ, ಚಲ್ತೇ, ಮೇರೆ ಏ ಗೀತ್, ಯಾದ್ ರಖ್ ನಾ
ಕಭಿ ಅಲ್ವಿದ ನಾ ಕೆಹನಾ

boredom ಅನ್ನೋದು ಸಹಜ ಇಂದಿನ ಬದುಕಿನಲ್ಲಿ ಆದರೆ ಅದಕ್ಕೆ ಓಗೊಟ್ಟು ಬದುಕನ್ನು ನಿಲ್ಲಿಸುವುದು ಬೇಡ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂಪದವು ಸಂಪದ್ಭರಿತವಾಗಿರಬೇಕೆಂಬುದು ಅನೇಕರ ಆಸೆ. ಆದರೆ ಯಾಕೋ ಏನೋ ಕೆಲವು ದಿನಗಳಿಂದ ಕೆಲವು ಫೋಟೋಗಳಿಂದ ಸ್ವಲ್ಪ ಸಮಾಧಾನವಾಗಿದೆ ಎಂಬುದನ್ನು ಬಿಟ್ಟರೆ ಅಂತ ಹೇಳಿಕೊಳ್ಳುವ ಲೇಖನಗಳು ಕಾಣುತ್ತಿಲ್ಲವೆಂಬುದು ನನ್ನ ಅನಿಸಿಕೆ, ಇದು ಸಾರ್ವತ್ರಿಕ ಅಲ್ಲ.ಹೀಗೇಕೆ? ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವುದು ಉತ್ತಮ.ವಿದಾಯ ಹೇಳುವುದು ಪರಿಹಾರವಲ್ಲ.ಇಂಚರ,ಇದು ನಿಮಗೆ ನೆನಪಿರಲಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂಚರ,
>>ಯಾವ ಬ್ಲಾಗ್ ಗಳಾಗಲೀ, ಲೇಖನಗಳಾಗಲೀ, ನನಗೆ ವೈಯಕ್ತಿಕವಾಗಿ ಮುದ ನೀಡುತ್ತಿಲ್ಲ.
ಹರಿಹರಪುರಶ್ರೀಧರ್,
>>ಅಂತ ಹೇಳಿಕೊಳ್ಳುವ ಲೇಖನಗಳು ಕಾಣುತ್ತಿಲ್ಲವೆಂಬುದು ನನ್ನ ಅನಿಸಿಕೆ,
-ಒಂದೆರಡು ದಿನ ಕಾದುನೋಡಿ.. :)
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಯ್ತು, ಕಾಯ್ತೀನಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಶ್ರೀಧರ್ ಸರ್ ಹಾಗೂ ಗಣೇಶರವರಿಗೆ. ಕಾಯ್ತಾ ಇದ್ದೀನಿ. ನಿಮ್ಮ ಲೇಖನದ ನಿರೀಕ್ಷೆಯಲ್ಲಿ :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಿಸ್ಟಂ ನಿಧಾನವಾದರೆ ರೀಬೂಟ್ ಮಾಡುವ ಹಾಗೆ, ನಿಮ್ಮ ಮನಕ್ಕೂ ರೀಬೂಟ್ ಬೇಕಾಗಿದೆ ಅನ್ನಿಸುತ್ತೆ.
ಯಾವುದಾದರೂ ಕ್ಷೇತ್ರ ದರ್ಶನ ಅಥವಾ ಪ್ರಕೃತಿದಾಣಕ್ಕೆ ಭೇಟಿ ನೀಡಿ ... ಮನ ಮುದಗೊಳ್ಳುತ್ತೆ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇತ್ತೀಚೆಗೆ ತಾನೇ ವೈಷ್ಣೋದೇವಿ, ದೆಹಲಿ ಮತ್ತಿತರ ಸ್ಥಳಗಳಿಗೆ ಹೋಗಿ ಬಂದಿದ್ದೆ. ಆದ್ರೂ ಯಾಕೋ ಬೇಸರ ಕಾಡಿತು :-(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಧಾರಾವಾಹಿ ಕತೆ ಮುಗಿಸಲಾಗದ್ದಕ್ಕೆ ಪಲಾಯನವೇ ಇಂಚರ
ಕತೆ ಮುಗಿಸಿ ಪ್ರತಿಕ್ರಿಯೆ ನೋಡಿ, ಆಗ ಹೋಗಲಾರಿರಿ ಈ ತರ
:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೋಗೋ ಮುಂಚೆ ವಸುಧಾಗೆ ಮದ್ವೆ ಮಾಡ್ಸಿ ಹೋಗ್ರಿ ;)
ನನಗೂ ಇತ್ತೀಚಿಗೆ ಸಂಪದದಲ್ಲಿ ಅಂತ ಒಳ್ಳೆ ಲೇಖನ,ಚರ್ಚೆ,ಪ್ರತಿಕ್ರಿಯೆಗಳು ಕಾಣ ಸಿಗುತ್ತಿಲ್ಲ , ಆದ್ರೆ ಈ ವಿದಾಯ ಹೇಳೋ ಮಾತೆಲ್ಲ ಇಲ್ಲ ಬಿಡಿ.
ನೀವು ಇಲ್ಲೇ ಇರ್ರಿ ಇಂಚರ ಎಲ್ಲಿಗೆ ಹೋಗ್ತಿರಾ? :)

ರಾಕೇಶ್ ಶೆಟ್ಟಿ :)
'ಎಲ್ಲರೊಳಗೊಂದಾಗು - ಮಂಕು ತಿಮ್ಮ||'

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಗ್ಡೆ ಸರ್, ರಾಕೇಶ್ - ನಿಜವಾಗಲೂ ನನ್ನ ಆ ಕಥೆಯನ್ನು ಇಷ್ಟು ಜನ ಮಿಸ್ ಮಾಡಿಕೊಳ್ತಾ ಇದ್ದಾರಾ ಅಂತಾ ಆಶ್ಚರ್ಯವಾಗ್ತಾ ಇದೆ. ನಾನು ಸಿಕ್ಕಾಪಟ್ಟೆ ಸೀರಿಯಲ್ ತರಹ ಎಳೀತಾ ಇದ್ದೀನಿ ಅಂತಾ ಮುಂದುವರಿಸಲಿಲ್ಲ. ನೀವೆಲ್ಲರೂ ನನ್ನನ್ನು ಕಥೆ ಮುಂದುವರೆಸಿ ಅಂತಾ ಪ್ರಚೋದಿಸಿ ಸಿಕ್ಕಿಕೊಳ್ತಾ ಇದ್ದೀರಿ, ಜೋಕೆ :-) ಆಮೇಲೆ ಎಲ್ಲರೂ ಒಂದೊಂದು ಬ್ಲಾಗ್ ಬರೆಯಬೇಕಾದೀತು. ಪ್ಲೀಸ್ ಇಂಚರಾ, ಕಥೆ ನಿಲ್ಲಿಸಮ್ಮಾ ಅಂತಾ :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮತ್ತೆ ಹುಟ್ಟಿಬರಲಿ ನವಜೀವನೋತ್ಸಾಹ
ಕರಗಿಹೋಗಲಿ ನಿರಾಶೆಯ ಕಾರ್ಮೋಡ

ಆಗದೆಂದೆನುವ ಮಾತು ನೀನಾಡಬೇಡ
ನೀ ಮಾಡದ ಹೊರತು ಸಾಗದು ಕೆಲಸನೋಡ

ನಿನ್ನ ಕನಸುಗಳಿಂದು ಗರಿಬಿಚ್ಚಿ ಹಾರಲಿ
ಕೀಳುರಿಮೆಯ ಕೊಳೆ ತೊಳೆದುಹೊಗಲಿ

ಮುಂದೆಸಾಗಲಿ ಹೀಗೆ ಗುರಿಯೆಡಗೆ ಪಯಣ
ತಿರುಗಿ ನೋಡದಿರು ಹಿಂದೆ,ನಡೆ ಮತ್ತದೇ ಪಯಣ

ಸೋಲಿನಲಿ ಗೆಲುವಿನಲಿ ಆ ದೇವ ಜೊತೆಗುಂಟು
ಚಿಂತೆಯಾಕಿನ್ನು ಬಿಡು, ಮನಕುಗ್ಗಿಸುವ ಮಾತು

ಗುರಿ ತಲುಪುವ ಭರದಿ ಗುರಿಯೆಡೆಗೆ ಸಾಗು
ಬೀಳುಗಳ ಕಡೆಗಣಿಸಿ ಮುನ್ನುಗ್ಗಬೇಕು

ಹಾಕು ಹೆಜ್ಜೆಯ ಹಾಕು,ಹುಟ್ಟಿಬರಲಿ ನವಜೀವನೋತ್ಸಾಹ
ಕರಗಿಹೋಗಲಿ ನಿರಾಶೆಯ ಕಾರ್ಮೋಡ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾಯ್ ಇಂಚರಾ.......
ಬೇಸರ ಆದರೆ ಅದಕ್ಕೆ ಕಾರಣ ಹುಡುಕುವುದು ಬಿಟ್ಟು, ಮೈದಾನ ಬಿಟ್ಟು ಓಡಿ ಹೋಗ್ತೀನಿ ಅನ್ನೋದು ಸರಿ ಅಲ್ಲ ಗೆಳತಿ..
ಪ್ರಭಾಕರ್ ರವರು ಬರೆದಿರುವಂತೆ "ಆಗದೆಂದೆನುವ ಮಾತು ನೀನಾಡಬೇಡ ನೀ ಮಾಡದ ಹೊರತು ಸಾಗದು ಕೆಲಸನೋಡ"........., ನಿಮ್ಮ ಮನದ ಬೇಸರವನ್ನು ಹೊಡೆದೋಡಿಸಿ, ಅದನ್ನು ಮತ್ತೆ ಮುದ್ದು ಮಾಡಿ, ಗೆದ್ದು, ನಿಮ್ಮ ಹಿಡಿತದಿಲ್ಲಿಟ್ಟುಕೊಳ್ಳುವುದು, ನಿಮ್ಮಿಂದಲೇ ಆಗಬೇಕಾದ ಕೆಲಸ. ಕೆಲವೊಮ್ಮೆ ಹೀಗಾಗತ್ತೆ, ಹಾಗಂತ, ಸಂಪದ ಬಿಟ್ಟು ಹೋಗಿಬಿಟ್ಟರೆ, ಎಲ್ಲವೂ ಸರಿಯಾಗುವುದಿಲ್ಲ..... ಇರುವ ತಾಣದಲ್ಲೇ, ನಮ್ಮ ಪರಿವಾರದವರೊಂದಿಗೇ, ಬದುಕಿ, ಅವರೆಲ್ಲರನ್ನೂ ಪ್ರೀತಿಸಿ, ನಮ್ಮನ್ನೂ ಅವರೆಲ್ಲರೂ ಪ್ರೀತಿಸುವಂತೆ ಮಾಡುವುದೇ ಬದುಕಲ್ಲವೇ ಗೆಳತೀ........ ಹೋಗುವ ಮಾತಾಡಬೇಡ, ಕಥೆ ಮುಂದುವರೆಸುವ ದಿಕ್ಕಿನಲ್ಲಿ ಯೋಚಿಸು..., ಕಾಯುತ್ತಿದ್ದೇವೆ.......

ಶ್ಯಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಪ್ರಭಾಕರ್ ರವರೇ. ನಿಮ್ಮ ಕವನ ನಿಜವಾಗಲೂ ಸ್ಪೂರ್ತಿದಾಯಕವಾಗಿದೆ. ಶ್ಯಾಮಲ - ನಿಮ್ಮ ಪ್ರತಿಕ್ರಿಯೆ ಓದಿ ಹೃದಯ ತುಂಬಿ ಬಂತು. ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೀ ಇಂಚರ ನೋಡ್ರಿ ಎಷ್ಟು ಸಂಪದಿಗರು ಹೇಳ್ತಾ ಇದಾರೆ (ನಾನು ಕೂಡ) ಎಲ್ಲಿಗೋಕ್ತೀರ, ಮೊನ್ನೆ ಇನ್ನು ನಿಮ್ಮ ಕಥೆಯ ಮೊಂದಿನ ಭಾಗ ಬರ್ಲೆ ಇಲ್ವಲ್ಲ ಅಂತ ನೆನುಸ್ಕೊತಿದ್ದೆ.......fresh ಆಗಿ ಮತ್ತೆ ಬರ್ರಿ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂಚರಕ್ಕ, ಫುಲ್ ಸೆಂಟಿ! ನಿಮಗೆ ಸೂಟ್ ಆಗಲ್ಲಾ ಇದು. ಚೇಂಜ್ ಮಾಡಿ. ನಿಮ್ಮ ಯುಗಾದಿ ಒಬ್ಬಟ್ಟು, ಕಟ್ಟು ಸಾರು ನಾನು ಟ್ರೈ ಮಾಡಿ ಎಷ್ಟು ಮಜಾ ಬಂದಿತ್ತು! ಹೀಂಗೆ ಹೊಂಟ್ ಬಿಟ್ರೆ ಹ್ಯಾಂಗೆ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದ್ರಿ ಮಿನ್ನಿ. ನನಗೂ ಈ ಸೆಂಟಿಗೂ ಆಗಿ ಬರೋಲ್ಲ ಅಂತಾ ಗೊತ್ತಾಯಿತು. ಅದಕ್ಕೆ ಮತ್ತೆ ವಾಪಾಸ್ಸು ಫುಲ್ ಜೋಶ್ ನಲ್ಲಿ! ಒಬ್ಬಟ್ಟು, ಸಾರು ಚೆನ್ನಾಗಿ ಆಗಿತ್ತಾ, ಹೇಳಲೇ ಇಲ್ಲ ಮತ್ತೆ. ನಿಮ್ಮ ಪಾಕ ಪ್ರಯೋಗದ ಬಗ್ಗೆ ಬ್ಲಾಗ್ ಬರೀರಿ. ನಮಗೂ ಬಹಳ ಖುಶಿಯಾಗುತ್ತೆ :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂಪದ ಎನ್ನುವುದು ಒಂದು ವೇದಿಕೆ. ಇದು ಬರೆಯುವರಿಗೆ, ಓದುವವರಿಗೆ, ವಿಚಾರ ಹಂಚಿಕೊಳ್ಳುವವರಿಗೆ, ಸ್ನೇಹವನ್ನು ಬೆಳಸುವವರಿಗೆ, ತಮ್ಮ ಭಾವನೆಗಳನ್ನು ವ್ಯಕ್ತ ಪಡಿಸುವವರಿಗೆ ಹೀಗೆ.............. ಇಲ್ಲಿ ಒಂದು ವಿಚಾರ ನೋಡಿಕೊಂಡರೂ ಎಲ್ಲವೂ ನಮಗೆ ದೊರೆಯುತ್ತವೆ. ಸಂಪದ ಎಂದ ಮಾತ್ರಕ್ಕೆ ಬರೆಯಬೆಕು ಎಂದಲ್ಲ ತಾನೇ ಆತ್ಮೀಯರೇ ದೂರ ಯಾಕೆ ಹೋಗುತ್ತೇರಾ? ಸಂಪದದಲ್ಲಿ ಪ್ರಕಟವಾದ ವಿಚಾರ ಓದಿ ಪ್ರತಿಕ್ರಿಯಿಸಿ ...............

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ
ಸ೦ಪದ ಒ೦ದು ವೇದಿಕೆ ನಿಜ ಬೇಕಾದಾಗ ಬ೦ದು ಭಾಷಣ ಮಾಡಿ ಆಮೇಲೆ ಇಳಿದು ಹೋಗಿಬಿಡಬಹುದು
ಆದ್ರೆ ಕೇಳುಗರು ಇಷ್ಟ ಪಟ್ಟ ಭಾಷಣಕಾರ ಮತ್ತೆ ಮತ್ತೆ ವೇದಿಕೆ ಹತ್ತಲೇಬೇಕು ತನ್ನ ಭಾವನೆಗಳನ್ನ ಅಥವಾ ವಿಷಯಗಳನ್ನ
ಜನರ ಮು೦ದಿಡಲೇಬೇಕು.ಅದು ಅವನಿಗೂ ಸ೦ತೋಷವನ್ನ ಕೊಡುತ್ತೆ.ಮತ್ತೆ ಕೇಳುಗನಿಗೂ ಸಹ.
ಭಾಷಣಕಾರ ಅನಾಮತ್ತಾಗಿ ಕೇಳುಗನ ಕಡೆ ಬೆನ್ನು ತಿರುಗಿಸಿಕೊ೦ಡು ಹೋಗಿಬಿಡಲ್ಲ/ಬಿಡಬಾರದು.ಅಲ್ವಾ?
ತಾನೇ ಗಳಿಸಿಕೊ೦ಡ ಜನಗಳ ಪ್ರೀತಿಯನ್ನ ’ಬ್ಯಾಡ ನ೦ಗೆ’ ಅ೦ತ ಎದ್ದು ಹೋಗಿಬಿಡೋದು ತಪ್ಪು ಅನ್ಸುತ್ತೆ
ಬೇಜಾರಾಗಿದ್ರೆ ಸ್ವಲ್ಪ ಹೊತ್ತು/ದಿನ ಯಾವುದಾದ್ರೂ ಮಗುವಿನ ಜೊತೆ ಕಳೆಯಿರಿ.ದೀಪದ ಬೆಳಕನ್ನ ನೋಡಿ
ನಿಮಗೊ೦ದು ತಾಜಾತನ ಸಿಗುತ್ತೆ ಅ೦ದುಕೊ೦ಡಿದ್ದೀನಿ.ಇ೦ಚರ ಎಲ್ಲೂ ಹೋಗಲ್ಲ ಅ೦ತ ಆಶಿಸ್ತಾ
ಹರೀಶ ಆತ್ರೇಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಖಂಡಿತವಾಗಿಯೂ ಇಂತಹಾ ನಿರ್ಧಾರವನ್ನು ತೆಗೆದು ಕೊಳ್ಳಬೇಡಿ ಇಂಚರಾ...ಅಂದೊಮ್ಮೆ ನಾನು ಕೂಡಾ ಇದೇ ರೀತಿಯ ತೀರ್ಮಾನ ತೆಗೆದುಕೊಂಡಿದ್ದೆ. ಅದರೆ ಮತ್ತೆ ಮನಸ್ಸಿನ ನಿರ್ಧಾರ ಬದಲಾಯಿತು. ಒಂದಿಷ್ಟು ಸಮಯ ಬ್ರೇಕ್ ತೆಗೆದುಕೊಳ್ಳಿ. ಎಲ್ಲವೂ ಸರಿ ಹೋಗುತ್ತದೆ. ಸಂಪದದಿಂದ ಒಂದಿಷ್ಟು ದಿನ ದೂರವಿದ್ದು ನೋಡಿ, ಏನೋ ಕಳೆದುಕೊಂಡ ಭಾವನೆ ಬರುತ್ತದೆ. ಮತ್ತೆ ನೀವು ಸಂಪದತ್ತ ಬಂದೇ ಬರುತ್ತೀರಿ. ಅಂತಾ ಒಂದು ಆಕರ್ಷಣೆ ನಮ್ಮ ಸಂಪದಕ್ಕಿದೆ ಎಂದರೆ ಅತಿಶಯೋಕ್ತಿಯಾಗಲಾರದು.

ಅಕ್ಕರೆಯಿಂದ,

ರಶ್ಮಿ.ಪೈ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ರಶ್ಮಿ. ನೀವಂದದ್ದು ಸರಿ. ಬಿಟ್ಟು ಬಿಡುವ ನಿರ್ಧಾರ ಮಾಡಿದ ಮೇಲೆ ಸಂಪದದ ಮೇಲಿನ ಆಕರ್ಷಣೆ ಹೆಚ್ಚಾಯಿತು ಎಂದರೆ ತಪ್ಪಾಗಲಾರದು. ಹಾಗಾಗಿಯೇ ವಾಪಾಸ್ಸು ಬಂದು ಬಿಟ್ಟೆ. ಧನ್ಯವಾದಗಳು ರಶ್ಮಿ, ಮಾಲತಿ, ಹರೀಶ್ ಹಾಗೂ ನಾಗರಾಜ್ ರವರಿಗೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ಕಾರ ಇಂಚರ,

ಏನ್ರಿ ಹಿಂಗ ಹೇಳತಿರಿ ಈಗ ನನ್ನೇ ನೊಡಿ ನಾನು ಯಾವುದೇ ಲೇಖನ ಬರಿಯೋದಿಲ್ಲ Comment ಯಾವಾಗಲ್ಲೊ ಒಮ್ಮೆ ಬರಿತೀನಿ ಆದರೆ ಬೇರೆಯವರು ಬರೆದಿರೊದನ್ನ ಓದತಾ Njoyಮಾಡತೆನಿ.

Angur

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂದೇನೂ ಕೆಲಸ ಮಾಡಲು ತೋಚುತ್ತಿರಲಿಲ್ಲ. ಅಭ್ಯಾಸಬಲದಿಂದಾಗಿ, ಅರಿವಿಲ್ಲದೆ ಮನವು ಸಂಪದದ ಕಡೆ ಹೊರಳಿತು. ಸಂಪದಿಗರ ಕಾಳಜಿ ನೋಡಿ ಹೃದಯ ತುಂಬಿ ಬಂತು. ನನಗೂ ಈ ಬೇಸರಕ್ಕೂ ಜೊತೆ ಆಗಿ ಬರುವುದಿಲ್ಲ ಎಂಬುದರ ಅರಿವು ನನಗಾಗಿದೆ. (ಯಾವ ಬೋಧಿ ವೃಕ್ಷದ ಕೆಳಗೂ ಕೂಡದೆ! ;-)) ಗೆಳತಿಯೊಬ್ಬಳು ನನ್ನ ಬೇಸರದ ಕಥೆ ಕೇಳಿ ಹೇಳಿದಳು ‘ನಿನಗಾಗಿರುವುದು ಬ್ಲಾಗೋಫೋಬಿಯಾ’ ವೆಂದು! ಹೌದೇ? ಯಾರಾದರೂ ಉತ್ತರ ಹೇಳಿ ಪ್ಲೀಸ್ :-). ಮತ್ತೊಬ್ಬ ಗೆಳೆಯ ಹೇಳಿದ ‘ಸಂಪದ’ ಕುಡಿತದ ಹಾಗೆ ಚಟವಂತೆ. ಒಮ್ಮೆ ಹಿಡಿದುಕೊಂಡರೆ ಪಕ್ಕನೆ ಬಿಡದು! ಸತ್ಯ. ಹಾಗಾಗಿ ಮತ್ತೆ ವಾಪಾಸ್ಸು ಬಂದಿದ್ದೇನೆ :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.