ಮೊದಲ ಪ್ರೀತಿ - ಭಾಗ ೪

5

http://sampada.net/blog/inchara123/21/05/2009/20519
http://sampada.net/blog/inchara123/22/05/2009/20559
http://sampada.net/blog/inchara123/27/05/2009/20770

ಅಣ್ಣನ ಮದುವೆ ಬಂದೇ ಬಿಟ್ಟಿತು. ಪ್ರಸಾದ್ ನ ಮನೆಯವರಾರು ಬಂದಿರಲಿಲ್ಲ. ಪ್ರಸಾದ್ ಮಾತ್ರ ಬಂದಿದ್ದ. ಎಲ್ಲರಿಗಿಂತಲೂ ಆಸಕ್ತಿಯಿಂದ, ಬಹು ಮುತುವರ್ಜಿಯಿಂದ, ಜವಾಬ್ದಾರಿಯಿಂದ ಮದುವೆಯ ಕೆಲಸ ಕಾರ್ಯಗಳೆಲ್ಲವನ್ನೂ ನಿರ್ವಹಿಸುತ್ತಿದ್ದ. ನನ್ನನ್ನು ನೋಡಿದಾಗೊಮ್ಮೆ ಅವನ ಕಣ್ಣುಗಳು ಮಿಂಚುತ್ತಿದ್ದದ್ದು ಸುಳ್ಳಲ್ಲ. ಅವನು ಬಂದರೆ ಸಾಕು, ಕುಣಿದಾಡುತ್ತಿದ್ದ ಮನಸ್ಸು, ಅಂದೇಕೋ ಅವನ ಹಿಂದೆ ಹೋಗಲಿಲ್ಲ. ಎಷ್ಟು ಬೇಕೋ ಅಷ್ಟೇ ಮಾತು ಅವನೊಂದಿಗೆ ಆಡುತ್ತಿದ್ದೆ. ಬೇಕಂತಲೇ ಚಿರಾಗ್ ನೊಟ್ಟಿಗೆ ನಗುನಗುತ್ತಾ ಇದ್ದೆ. ಅವನಿಗೆ ಸ್ವಲ್ಪ ಇರಿಸುಮುರಿಸಾದಂತೆ ತೋರುತ್ತಿತ್ತು. ಒಳಮನಸ್ಸು ಮಾತ್ರ ಈಗಲಾದರೂ ಅವನು ನನ್ನನ್ನು ಪ್ರೀತಿಸುತ್ತಿರುವೆ ಎಂದು ಹೇಳಲಿ ಎನ್ನುತ್ತಿತ್ತು. ನಾನು ಚಿರಾಗ್ ನೊಟ್ಟಿಗೆ ಇದ್ದದ್ದನ್ನು ಕಂಡು, ಅವನು ಸ್ವಲ್ಪ ಪೆಚ್ಚಾದಂತೆ ಕಂಡು ಬಂದನೇ ಹೊರತು ಬಾಯಿ ಬಿಟ್ಟು ಏನನ್ನೂ ಹೇಳಲಿಲ್ಲ. ಅವನ ಮನಸ್ಸಿನಲ್ಲಿ ಏನಿತ್ತೋ ಯಾರಿಗೆ ಗೊತ್ತು?

ಪ್ರಸಾದ್ ನಿಗೆ ದೂರದ ಪುಣೆಯಲ್ಲಿ ಕೆಲಸ ಸಿಕ್ಕಿತ್ತು. ಅಮ್ಮನ ಆಶೀರ್ವಾದ ಪಡೆದು, ನನಗೆ ತಿಳಿಸಿ ಹೋಗಲು ಮನೆಗೆ ಬಂದ. ಅಣ್ಣನ ಮದುವೆಯ ದಿವಸ, ನಾನು ಸರಿಯಾಗಿ ಮಾತಾಡಲಿಲ್ಲವೆಂದು ಹಾಗೂ ನನ್ನ ಫ್ರೆಂಡ್ಸ್ ಗಳೊಂದಿಗೆ ಇದ್ದನೆಂದು ನನ್ನನ್ನು ಆಕ್ಷೇಪಿಸಿದ. ನನಗೆ ಯಾರು ಗೆಳತಿಯರಿದ್ದರು? ನಾನು ಮಾತಾಡುತ್ತಿದ್ದದ್ದು ಚಿರಾಗ್ ನೊಟ್ಟಿಗೆ! ಆತನೇ ನನ್ನನ್ನು ಪ್ರೀತಿಸುವೆನೆಂದು ಹೇಳಲಿ ಎಂದು ಕಾದೆ. ಊಹುಂ, ಬಾಯಿ ಬಿಡಲೊಲ್ಲ. ಅವನ ಕಣ್ಣುಗಳಲ್ಲಿ ನನಗೆ ಪ್ರೀತಿ ಕಾಣಿಸುತ್ತಿತ್ತು. ಆದರೂ ಹೀಗೇಕೆ ಬಿಗುಮಾನ? ಅಥವಾ ನನಗೆ ಹೇಳಲಾರದಂತಹ ಕಾರಣವೇನಿರಬಹುದು? ಮನಸ್ಸಿನ ಗೊಂದಲಕ್ಕೆ, ತಳಮಳಕ್ಕೆ ಕೊನೆಯೇ ಇರಲಿಲ್ಲ. ಕೊನೆಗೊಮ್ಮೆ ಹೋಗುವ ಮುನ್ನಾ ಒಂದು ಬಾರಿ ಕೈ ಹಿಡಿದು, "ಏನಾದರೂ ಹೇಳುವುದಿದೆಯೇ" ಎಂದ. ನನ್ನ ಕಣ್ಣು ಹನಿಗೂಡಿತು. ನಾನೇನನ್ನೂ ಹೇಳಲಿಲ್ಲ. ಅವನು ತಾನೇ ಹೇಳಬೇಕಿದ್ದುದ್ದು? ನಿಟ್ಟುಸಿರುಬಿಟ್ಟು ಹೊರಟೇ ಹೋದ. ನನ್ನನ್ನೇ ನಾನು ಕಳೆದುಕೊಂಡೆ. ತೀರಾ ಒಂಟಿಯಾಗಿಬಿಟ್ಟೆ. ಮದುವೆಯಾದ ಮೇಲೆ ಅಣ್ಣನೂ ಸ್ವಲ್ಪ ಬದಲಾದಂತೆ ಅನಿಸುತ್ತಿತ್ತು.

ಮೊದಲ ಬಾರಿಗೆ ಪ್ರಸಾದನನ್ನು ಕೇಳದೇ ನನ್ನ ಜೀವನದ ಅತ್ಯಮೂಲ್ಯ ನಿರ್ಣಯವನ್ನು ನಾನೊಬ್ಬಳೇ ತೆಗೆದುಕೊಂಡುಬಿಟ್ಟೆ. ಚಿರಾಗ್ ನನ್ನು ಮದುವೆಯಾಗಲೂ ನಿಶ್ಚಯಿಸಿದೆ. ಅದು ಆದಷ್ಟು ಬೇಗನೇ ನಡೆಯಲಿ ಎಂದು ಕೂಡ ಅಮ್ಮನಿಗೆ ಹೇಳಿದೆ. ತಡವಾದರೆ ಮನಸ್ಸು ಹಿಂಜರಿಯುವುದು ಎನ್ನುವ ಭಯವಿತ್ತೇನೋ? ನಿಶ್ಚಿತಾರ್ಥ ಬೇಡವೇ ಬೇಡ, ಮದುವೆಯೇ ಅಗಿಬಿಡಲಿ ಎಂದು ಹಟಕ್ಕೆ ಬಿದ್ದೆ. ಚಿರಾಗ್ ಅವನ ಮನೆಯವರನ್ನು ಒಪ್ಪಿಸಿ ಹುಡುಗಿ ನೋಡುವ ಕಾರ್ಯಕ್ರಮಕ್ಕೆ ಕರೆದುಕೊಂಡು ಬಂದ. ಸ್ವಲ್ಪ ಅವನ ಅಮ್ಮನಿಗೆ ನಾವು ಬಡವರೆಂಬ ಅಸಮಾಧಾನವೋ ಇಲ್ಲವೇ ಮಗನೇ ಆರಿಸಿಕೊಂಡ ಅನ್ನುವ ಕೋಪವೋ ಇತ್ತೆಂದು ಕಾಣುತ್ತದೆ. ಬಂದವರೇ ಸ್ವಲ್ಪ ಅಸಮಾಧಾನದಿಂದ ಅಷ್ಟು ಬಂಗಾರ, ಬೆಳ್ಳಿ ಕೊಡಬೇಕು ಎಂದೆಲ್ಲಾ ಲೆಕ್ಕ ಹಾಕಿದರು. ಚಿರಾಗ್ ನಿಗೆ ಇವರ ವರ್ತನೆ ಸ್ವಲ್ಪ ಬೇಸರ ತಂದಿತು. ಅವನು ಇದನ್ನು ನಿರೀಕ್ಷಿಸಿರಲಿಲ್ಲ. ಎಲ್ಲರೂ ಹೋದ ಮೇಲೆ ಅಮ್ಮನ ಪರವಾಗಿ ಕ್ಷಮೆ ಕೇಳಿ, ಮದುವೆ ಆದಷ್ಟು ಸರಳವಾಗಿರಲಿ ಎಂದು ನನಗೆ ಹೇಳಿ ಹೋದ. ಅವನಿಗೂ ನನ್ನನ್ನು ಮದುವೆಯಾಗುವ ಆತುರವಿತ್ತೇನೋ?

ಇಷ್ಟೆಲ್ಲಾ ಮನೆಯಲ್ಲಿ ನಡೆಯುತ್ತಿದ್ದರೂ, ಪ್ರಸಾದ್ ನಿಗೆ ನಾನು ಕಾಗದ ಬರೆಯುತ್ತಿದ್ದೆ. ಆದರೆ ನನ್ನ ಮದುವೆಯ ವಿಷಯವನ್ನು ಮಾತ್ರ ಗುಟ್ಟಾಗಿಟ್ಟೆ. ಹಾಗೇಕೆ ಮಾಡಿದೆ? ಅನ್ನುವ ಪ್ರಶ್ನೆಗೆ ಈಗಲೂ ನನ್ನಲ್ಲಿ ಉತ್ತರವಿರಲಿಲ್ಲ. ಬಹುಶಃ ಅವನ ಉತ್ತರಕ್ಕೆ ಕಾಯುತ್ತಿದ್ದೇನಾ? ಗೊತ್ತಿಲ್ಲ! ಮದುವೆಯ ದಿವಸ ಹತ್ತಿರ ಬರುತ್ತಿದ್ದಂತೆ ಮನಸ್ಸಿನ ಕಳವಳ ಹೆಚ್ಚಾಯಿತು. ಚಿರಾಗ್ ನ ಮನೆಯಲ್ಲಿ ಅದ್ಭುತ ಸ್ವಾಗತವಿರುವುದಿಲ್ಲ ಅನ್ನುವುದು ಅವನ ಅಮ್ಮನ ವರ್ತನೆಯಿಂದ ಗೊತ್ತಾಗಿತ್ತು. ಹಿಂದಿನಂತೆ ಇಲ್ಲಿ ಅಮ್ಮನ ಮಾತಿಗೆ ಅಷ್ಟು ಬೆಲೆಯಿರಲಿಲ್ಲ. ನನ್ನ ನಿರ್ಣಯದ ಬಗ್ಗೆ ಬಹಳ ಗೊಂದಲವಿತ್ತು. ಪರಿಹರಿಸುವವರು ಯಾರು? ಧೈರ್ಯ ಮಾಡಿ ಪ್ರಸಾದ್ ನಿಗೆ ಆಮಂತ್ರಣ ಪತ್ರಿಕೆಯನ್ನು ಕಳಿಸಿದೆ. ಅವನು ಅದಕ್ಕೆ ಉತ್ತರವಾಗಿ ಚೆಂದದ ಶುಭಾಶಯ ಪತ್ರವನ್ನು ಕಳಿಸಿದ. ಮೊದಲ ಬಾರಿಗೆ ಪತ್ರದಲ್ಲಿ ಏನು ಬರೆದಿರಲಿಲ್ಲ. ನಿರಾಶೆಯಾಯಿತಾ ಅವನಿಗೆ? ಗೊತ್ತಿಲ್ಲ. ನನ್ನನ್ನು ಅವನು ನಿರಾಕರಿಸಿದ್ದರೂ ನನಗೆ ಅಷ್ಟು ನೋವಾಗುತ್ತಿರಲಿಲ್ಲ. ಆದರೆ ಏಕೆ ಏನನ್ನು ಹೇಳಲೇ ಇಲ್ಲ? ಜೀವದ ಜೀವವೇ ಆಗಿದ್ದ ಅವನು ದೂರವಾಗಿಬಿಟ್ಟನಲ್ಲಾ ಎಂದೆನಿಸಿ ಅತ್ತೆ. ನನ್ನನ್ನು ಸಂತೈಸುವವರು ಯಾರು? ಯಾರೊಂದಿಗೆ ನನ್ನ ನೋವನ್ನು ಹೇಳಿಕೊಳ್ಳಲಿ? ಅದೇ ಅವನ ಕಡೆಯ ಪತ್ರವಾಗಿತ್ತು.

ಮನೆಗೆ ಬಂದ ನೆಂಟರೊಬ್ಬರಿಂದ ಪ್ರಸಾದ್ ನ ಮದುವೆಯೂ ನಿಶ್ಚಯವಾಗಿದ್ದು ತಿಳಿಯಿತು. ಅವನು ಕೂಡ ನಿಶ್ಚಿತಾರ್ಥವೇನೂ ಬೇಡವೆಂದು ಹೇಳಿದನೆಂದು, ಮದುವೆ ಸರಳವಾಗಿ ದೇವಸ್ಥಾನದಲ್ಲಿ ಆದಷ್ಟು ಬೇಗ ನಡೆಯುವುದಾಗಿಯೂ ಹೇಳಿದರು. ಅವನ ಮನೆಯ ಕಡೆಯಿಂದ ನಮಗೆ ಅವನ ಮದುವೆಯ ಆಮಂತ್ರಣ ಪತ್ರಿಕೆ ಬಂತು. ನಾನದನ್ನು ನೋಡಲೂ ಇಲ್ಲ. ಹೀಗೇಕೆ ಮಾಡಿದ? ನನಗೆ ಕಾಗದ ಕಳಿಸಿರಲೇ ಇಲ್ಲ! ಕೊನೆಯ ಆಸೆಯೂ ಕಮರಿ ಹೋಯಿತು. ಆದಂತಾಗಲಿ ಎಂದು ಮನಸ್ಸನ್ನು ಕಠಿಣಗೊಳಿಸಿದೆ. ನನ್ನ ಮದುವೆಗೆ ಬರುವನೇನೋ ಎಂದು ಕಾದೆ. ಊಹುಂ, ಬರಲಿಲ್ಲ. ನಮ್ಮ ಮದುವೆಯ ದಿನದಂದೂ ಚಿರಾಗ್ ನ ಅಮ್ಮ ಸ್ವಲ್ಪ ಬಿಗಿದುಕೊಂಡೇ ಇದ್ದರು. ಅದನ್ನು ನೋಡಿ ನನಗೆ ಇನ್ನೂ ಕಳವಳ ಜಾಸ್ತಿಯಾಯಿತು. ಚಿರಾಗ್ ನನ್ನು ನಾನಿನ್ನೂ ಅರ್ಥ ಮಾಡಿಕೊಂಡಿರಲಿಲ್ಲ. ಹೇಗೆ ಹೊಂದಿಕೊಂಡು ಹೋಗುವುದೆಂಬ ಚಿಂತೆ ಶುರುವಾಯಿತು. ಅದೇ ಪ್ರಸಾದ್ ಆಗಿದ್ದರೆ, ಎಷ್ಟೇ ಕಷ್ಟವಾದರೂ ತಡೆದುಕೊಳ್ಳಬಹುದಾಗಿತ್ತು. ಮದುವೆಯೂ ಆಯಿತು. ನನ್ನನ್ನು ಮನೆಗೆ ತುಂಬಿಸಿಕೊಂಡಿದ್ದು ಆಯಿತು.

ನನ್ನ ಮದುವೆಯಾದ ಕೆಲದಿನಗಳಲ್ಲೆ ಪ್ರಸಾದ್ ನ ಮದುವೆಯಾಯಿತಂತೆ. ಅಮ್ಮ ಹೋಗಿ ಬಂದವರು ಹುಡುಗಿ ಬಹಳ ಚೆಂದ ಇದ್ದಾಳೆಂದು ವರ್ಣಿಸುತ್ತಿದ್ದರೆ ಹೊಟ್ಟೆ ಉರಿಯುತ್ತಿತ್ತು!

[ನನಗೆ ಚೆನ್ನಾಗಿ ಗೊತ್ತು, ಸಂಪದಿಗರೆಲ್ಲರೂ ನನ್ನನ್ನು ಹುಡುಕಿ ಹೊಡೆಯುತ್ತೀರಿ. ದಯಮಾಡಿ ನನ್ನನ್ನು ಕ್ಷಮಿಸಿ. ೧೦೦% ಮುಂದಿನ ಕಂತಲ್ಲಿ ಕಥೆ ಮುಗಿಸಿಬಿಡ್ತೀನಿ:-)]

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಇಂಚರಾ

ಸದ್ಯ ಪ್ರಸಾದ್ ಬಚಾವಾದಾ ಅನ್ಸುತ್ತೆ ಅಲ್ವಾ ;)

ಪರವಾಗಿಲ್ಲ, ಕಥೆಯ ಸ್ವಾರಸ್ಯ ಮುಖ್ಯ ಮುಂದುವರೆಸಿ, ಕಾದಂಬರಿಗೆ ಕಾದಂಬರಿಯ ಸಾಧನೆಯನ್ನೇ ಮುರಿದುಬಿಡಿ.

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಾಕ್ರೀ ಹಾಗಂತೀರಾ ಅರವಿಂದ್. ನಮ್ಮ ವಸುಧಾ ಬಹಳ ಒಳ್ಳೆಯವಳು. ಚೆನ್ನಾಗಿ ನೋಡಿಕೊಳ್ಳುತ್ತಿದ್ದಳು. ಅವನಿಗೆ ಅದೃಷ್ಟವಿರಲಿಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಾವ ಗ್ಯಾರೆಂಟಿ ;)

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಬ್ಬಾ!!! ಚೆನ್ನಾಗ್ ಬರಿತಿದೀರ ಕಣ್ರೀ!
ನಾಲ್ಕೂ ಭಾಗಗಳ್ನ ಒ೦ದೇ ಉಸಿರಲ್ಲಿ ಓದ್ಬಿಟ್ಟೆ! :D :D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದಾ? ಧನ್ಯವಾದಗಳು. ಜಾಸ್ತಿ ಹೊಗಳಬೇಡಿ. ಆಮೇಲೆ ಸ್ಪೂರ್ತಿ ಉಕ್ಕಿ ೫ ಕಂತುಗಳಲ್ಲಿ ಮುಗಿಸಬೇಕೆಂದುಕೊಂಡಿರುವುದು..... ಎಳೆದು, ಎಳೆದು... ಆಮೇಲೆ ಎಲ್ಲರಿಗೂ ಕಷ್ಟ. :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಾಕ್ ಹೊಡಿತಾರೆ ಇಂಚರ.. ಕಥೆ ಚೆನ್ನಾಗಿ ಮುಂದುವರಿತಾ ಇದೆ.

ಚೆನ್ನಾಗಿದೆ..
:-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವೇನೋ ಚೆನ್ನಾಗಿದೆ ಅಂತಿದ್ದೀರಿ. ಎಷ್ಟು ಜನ ಕೊರಿತಿದ್ದಾಳೆ ಅಂತಂದುಕೊಂಡಿದ್ದಾರೋ ಗೊತ್ತಿಲ್ಲ :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನಂತು ಅಂದಿಲ್ಲ ;)

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಗರಾಜ್

ನಾನು ಏನಾದ್ರೂ ಹೇಳಬೇಕಾ ;)

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>>ನಾನು ಏನಾದ್ರೂ ಹೇಳಬೇಕಾ<<<<
ಗುಟ್ಟಾಗಿರಬೇಕು ಅದೆಲ್ಲಾ ಇಲ್ಲಿ ಹೇಳಬೇಡ :D :D

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾಗಾದ್ರೆ ನೀವೇ ಮೊದಲನೆಯವರು ಅಂತಾಯಿತು. :-) ಅರವಿಂದ್ ಎರಡನೆಯವರು ;-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಏನೂ ಹೇಳಲ್ಲಾ.. :) :(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂಚರ ಕಥೆ ಚೆನ್ನಾಗಿದೆ.....ಮುಂದುವರೆಸಿ..
ನಾನು ಸ್ಪಟಿಕ ಏಸ್ಟೇಟ್ ಅಂತ ಕಾದಂಬರಿ ಶುರುಮಾಡ್ದೆ..ಯಾಕೊ ಯಾರಿಂದಲು ಪ್ರತಿಕ್ರಿಯೆ ಬರಲಿಲ್ಲ ಬೇಸರವಾಯಿತು ನಿಲ್ಲಿಸಿದೆ..
http://sampada.net/blog/malathi-shimoga/05/05/2009/19901
http://sampada.net/blog/malathi-shimoga/06/05/2009/19934
http://sampada.net/blog/malathi-shimoga/08/05/2009/20002
http://sampada.net/blog/malathi-shimoga/27/05/2009/20748

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಸ್ಪಟಿಕ ಎಸ್ಟೇಟ್ ಚೆನ್ನಾಗೇ ಮೂಡಿ ಬಂದಿದೆ. ಒಂದು ಕಂತು ಓದಿದೆ. ಬಾಕಿ ಉಳಿದದ್ದನ್ನು ಓದಿ ಖಂಡಿತವಾಗಿಯೂ ಅಲ್ಲೇ ಪ್ರತಿಕ್ರಿಯಿಸುವೆ. ನಾನಾಗ ಊರಿನಲ್ಲಿರಲಿಲ್ಲ. ಇದ್ದಿದ್ದರೆ ನನ್ನ ಪ್ರತಿಕ್ರಿಯೆಯಂತೂ ಬರುತ್ತಿತ್ತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಇಂಚರ ಮುಂದುವರೆಸುತ್ತೀನಿ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾಲತಿ,
ನಾನು ಈ ಕಥೆಯ ಎಲ್ಲ ಕಂತುಗಳನ್ನ ಓದಿದ್ದೇನೆ. ಆದರೆ ಹೇಗೋ ಪ್ರತಿಕ್ರಿಯಿಸಲಾಗಿರಲಿಲ್ಲ.
ಚೆನ್ನಾಗಿ ಮೂಡಿ ಬರ್ತಿದೆ ರೀ.. ನೀವ್ ನಿಲ್ಸಿಬಿಟ್ರ? ನಾನ್ ಮುಂದಿನ ಕಂತಿಗೆ ಕಾಯ್ತಿದ್ದೆ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಖುಷಿಯಾಯಿತು ಶೋಭಾ ನಿಮ್ಮ ಪ್ರತಿಕ್ರಿಯೆ ಓದಿ.....ಖಂಡಿತ ಮುಂದುವರೆಸುತ್ತೀನಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>..ಯಾಕೊ ಯಾರಿಂದಲು ಪ್ರತಿಕ್ರಿಯೆ ಬರಲಿಲ್ಲ ಬೇಸರವಾಯಿತು ನಿಲ್ಲಿಸಿದೆ..<<

ಮಾಲತಿ,
ನೀವು ಓದುಗರಿಗಾಗಿ ಎಂದೂ ಬರೆಯದಿರಿ
ಪ್ರತಿಕ್ರಿಯೆಗಳನೆಂದೂ ನೀವು ನಿರೀಕ್ಷಿಸದಿರಿ

ಬರೆದಾಗ ನಿಮಗೆ ಸಿಗುವ ಆನಂದವಷ್ಟೇ ನಿಮ್ಮದು
ಓದುಗರ ಭಾವಕ್ಕೆ ಬರೆಯತೊಡಗಿದರೆ ಏನಿಹುದು

ಪ್ರತಿಕ್ರಿಯೆ ಬಾರದಿದ್ದಾಗ ಬೇಸರ ಪಟ್ಟುಕೊಂಡೆ ಅನ್ನುವುದು ಸರಿಯಲ್ಲ.
ಈ ಪ್ರತಿಕ್ರಿಯೆಗಳಿಗೆಲ್ಲಾ ಒಗ್ಗಿಕೊಂಡು ನಿಮ್ಮನ್ನಿಲ್ಲಿ ಬಂಧಿಸಿಡಬೇಡಿ
ಈ ಪ್ರತಿಕ್ರಿಯೆಗಳ ಪರಿಧಿಯಿಂದ ಹೊರಬಂದು ನಿಮಗಾಗಿ ಬರೆಯಿರಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಸರ್. ನೀವು ಹೇಳಿದ್ದು ಸತ್ಯ.

ನಿರೀಕ್ಷೆ ಇಟ್ಟುಕೊಳ್ಳಬಾರದೆಂದರೂ ಪ್ರತಿಕ್ರಿಯೆ ಸಿಕ್ಕಾಗ ಆಗುವ ಆನಂದವೇ ಬೇರೆ. ಅಂದ್ರೆ ಹೊಗಳಿಕೆ ಅಂತಲ್ಲಾ, ನಾವು ಬರೆದದ್ದನ್ನು ಬೇರೆಯವರು ನೋಡುತ್ತಿದ್ದಾರೆ ಅಂದಾಗ ಆಗುವ ಖುಷಿ. ಅಲ್ಲವೇ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಗ್ಡೆಯವರೆ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು,
(ಬರೆದಾಗ ನಿಮಗೆ ಸಿಗುವ ಆನಂದವಷ್ಟೇ ನಿಮ್ಮದು)
ನಾ ಬರೆಯಬೇಕೆಂದಿರುವ ಕಥೆಯ ಸಂಪೂರ್ಣ ಚಿತ್ರ ನನ್ನ ಮನದಲ್ಲಿದೆ ಅದರಿಂದ ಆನಂದವನ್ನು ನಾನು ಅನುಭವಿಸಿದ್ದೇನೆ....
(ಪ್ರತಿಕ್ರಿಯೆ ಬಾರದಿದ್ದಾಗ ಬೇಸರ ಪಟ್ಟುಕೊಂಡೆ ಅನ್ನುವುದು ಸರಿಯಲ್ಲ.)
ಅದನ್ನು ಓದುಗರ ಮುಂದಿಡಬೇಕೆಂದು ನನ್ನ ಆಸೆಯಾಗಿತ್ತು ಅದನ್ನು ಅವ್ರು ಓದಲಿ ಎಂಬುದು ನನ್ನ ಆಸೆಯಾಗಿತ್ತು....ನನ್ನ ಈ ಆಸೆ ಅವ್ರ ಪ್ರತಿಕ್ರಿಯೆಯ ಮೇಲೆ ಅವಲಂಭಿತವಾಗಿದೆ......
(ಈ ಪ್ರತಿಕ್ರಿಯೆಗಳ ಪರಿಧಿಯಿಂದ ಹೊರಬಂದು ನಿಮಗಾಗಿ ಬರೆಯಿರಿ)
ಆ ಕಥೆಯನ್ನು ನಾನು ಮುಂದುವರೆಸಿದ್ದೇನೆ ಆದರೆ ಸಂಪದಕ್ಕೆ ಹಾಕಿಲ್ಲ....
ಆದರು ನಿಮ್ಮ ಮಾತುಗಳು ಒಪ್ಪುವಂತಾದ್ದೆ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ನಿಮ್ಮ ಕಥೇನ ಮಹೇಂದೆರ್ ಅಥವಾ ಸಾಇ ಪ್ರಕಾಷ್‍ಗೆ ಕಳಿಸ್‌ಬಹುದು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಹೇಂದರ್ ರವರು, ಅವರ ಫ್ಯಾಮಿಲಿ ಕಥೆನೇ ಈ ಬಾರಿ ನಿರ್ದೇಶಿಸುವುದಂತೆ. ‘ಕೈ ಕೊಟ್ಟ ಪತ್ನಿ’ ಅಂತ ಹೆಸರು :-). ಇನ್ನೂ ಸಾಯಿ ಪ್ರಕಾಶ್ ಗೆ ರಾಧಿಕಾ ನೇ ನಾಯಕಿಯಾಗಿ ಬೇಕಂತೆ. ರಾಧಿಕಾ ಬೇರೆ ಕಡೆ ಬುಸಿ. ಹಾಗಾಗಿ ನೀವೇ ಪ್ರೊಡ್ಯುಸರ್ ಆದರೆ ನಾನೇ ನಿರ್ದೇಶಿಸುತ್ತೀನಿ. ಏನಂತೀರಿ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದು ಕತೆಯಾ? ಮೆಗಾ ಧಾರಾವಾಹಿಯಾ? ಜೀವನ ಚರಿತ್ರೆಯಾ?ಏನೇ ಆಗಿರಲಿ, ಘಟನೆಗಳ ಸರಣಿಯನ್ನು ಪೋಣಿಸಲು ಹೆಚ್ಚು ಗಮನ ಹರಿಸಿ, ನಿರೂಪಣೆ ಬಡವಾಗಿ ಹೋಗಿದೆ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದ್ರಿ ವಿನಯ್. ನನಗೂ ಹಾಗೇ ಅನಿಸುತ್ತಿದೆ. ಆದರೆ ಕೆಲಸದ ಒತ್ತಡದಿಂದ ಬರೆಯಲು ಸಾಧ್ಯವಾಗುತ್ತಿಲ್ಲ. ನೀವು ಕೂಡ ಮುಂದುವರೆಸಬಹುದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನಗನ್ನಿಸುವುದು, ಕತೆ ಮುಗಿಸಲು ನೀವು ಸ್ವಲ್ಪ ಆತುರ ಪಡುತಿದ್ದೆರೇನೋ ಅಂತ. ಅದಕ್ಕಾಗಿಯೇ ಅಣ್ಣನ ಮದುವೆ, ವಸುಧಾಳ ಮನ ಪರಿವರ್ತನೆ, ಅವಳ ಮದುವೆ, ಪ್ರಸಾದನ ಮದುವೆ ಎಲ್ಲಾ ಒಂದೇ ಕಂತಿನಲ್ಲಿ ಮುಗಿಸಿಬಿಟ್ಟಿದೀರ.. ಇದೆಲ್ಲಾ ಒಂದೊಂದು ಕಂತಾಗಬಹುದಿತ್ತು.. ಸಂಪದಿಗರು ಏನನ್ನುವರೋ ಎಂಬ ಕಳವಳ ಬೇಡ. ನಿಧಾನಿಸಿ. ಕುತೂಹಲ ನಮ್ಮಲ್ಲಿ ಉಳಿಯುವಂತಿದ್ದರೆ ಚೆನ್ನ.
ಪ್ರತಿಕ್ರಿಯೆ ಜಾಸ್ತಿ ಅನ್ನಿಸಿದರೆ ಕ್ಷಮಿಸಿ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಮಾತು ಅಕ್ಷರಶಃ ನಿಜ. ಕಥೆ ಬೇಗ ಮುಗಿಸೋಣ ಅಂತಲೇ ಹಾಗೇ ಮಾಡಿದ್ದು. ಒಂದೊಂದು ಕಂತು ಮಾಡಿದರೆ ಎಲ್ಲರೂ ಸೇರಿ ನನ್ನನ್ನು ಹುಡುಕಿ, ನನಗೊಂದು ಗತಿ ಕಾಣಿಸುವರೆಂಬ ಭಯ;-). ಆದರೆ ಇನ್ನೂ ನಾ ತಿಳಿಸಬೇಕೆಂದಿದ್ದ ವಿಷಯ ಬೇಕಾದಷ್ಟಿದೆ. ಹಾಗೂ ಮೊದಲ ಬಾರಿಗೆ ಬರೆಯುತ್ತಿರುವುದರಿಂದ ಹೇಗಿರುವುದೋ, ತುಂಬಾ ಎಳೆಯುತ್ತಿದ್ದೀನಾ ಅನ್ನುವ ಗೊಂದಲವೂ ಇದೆ.

ಪ್ರತಿಕ್ರಿಯೆಗಳು ಯಾವಾಗಲೂ ಜಾಸ್ತಿ ಅನ್ನಿಸುವುದಿಲ್ಲ. ನಮ್ಮೊಳಗಿನ ಬೆಳವಣಿಗೆಗಳು ಈ ತರಹದ ವಿಮರ್ಶೆಗಳಿಂದಲೇ ಆಗುವುದು ಅನ್ನುವುದು ನನ್ನ ಅನಿಸಿಕೆ. ಹಾಗಾಗಿ ಕ್ಷಮಿಸುವುದಿಲ್ಲ. ಬದಲಿಗೆ ಧನ್ಯವಾದಗಳು ಎನ್ನುತ್ತೇನೆ :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಸಂತೋಷ. ಮುಂದಿನ ಕಂತಿಗೆ ಕಾಯುವೆ. ಯಾವುದೇ ಒತ್ತಡಗಳಿಲ್ಲದ ಸಂಪೂರ್ಣ ನಿಮ್ಮದೇ ಕಂತಿಗೆ..
:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂಚರ

[quote]ನನಗೆ ಚೆನ್ನಾಗಿ ಗೊತ್ತು, ಸಂಪದಿಗರೆಲ್ಲರೂ ನನ್ನನ್ನು ಹುಡುಕಿ ಹೊಡೆಯುತ್ತೀರಿ[/quote]
ನಿಮ್ಮ ಅಡ್ರೆಸ್ ಹೇಳಿ ;)

ಕಥೆ ಚೆನ್ನಾಗಿದೆ , ಮುಂದಿನ ಕಂತಿನಲ್ಲು ಸಹ ಮುಗಿಯದಿರಲಿ ಎಂದು ಹಾರೈಸುವೆ :)

ರಾಕೇಶ್ ಶೆಟ್ಟಿ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಡ್ರೆಸ್ ಹೇಳಲ್ಲಾ. ಭಯವಾಗುತ್ತೆ. :-). ಕಥೆ ಮುಂದುವರಿಸೋದಿಕ್ಕೆ ಏನಾದರೂ ಐಡಿಯಾ ಕೊಡ್ರಿ. ಸುಮ್ಮನೆ ಹಾರೈಸಿಬಿಟ್ಟರೆ ಸಾಕಾ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವೋ ನಾನ್ ಐಡಿಯಾ ಕೊಡಲಿಲ್ಲ ಅಂದ್ರೆ , ನೀವು ಮುಂದಿನ ಕಂತಿನಲ್ಲಿ ಮುಗಿಸಿಬಿಡ್ತಿರಾ? .. ಇಲ್ಲ ಬಿಡಿ ;)

ಐಡಿಯಾ ಬೇಕೇ ಬೇಕು ಅಂದ್ರೆ , ಅವರಿಬ್ಬರಿಗೂ ಮಕ್ಕಳಾಗಿ, ಆ ಮಕ್ಕಳು ಶಾಲೆಯಲ್ಲೋ ,ಕಾಲೇಜಿನಲ್ಲೋ ಪರಿಚಯವಾಗಿ,ಪರಿಚಯ ಪ್ರೇಮವಾಗಿ... ಹೀಗೆ ... ಮುಂದುವರೆಸಿ ;) (ಐಡಿಯಾ ಕೆಟ್ಟದಾಗಿದ್ದರೆ ಹೊಟ್ಟೆಗೆ ಹಾಕ್ಕೊಳ್ಳಿ ;) )

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಓದುಗರನ್ನು ಒಂದು ಮದುವೆ ಮನೆಯಿಂದ ಇನ್ನೊಂದು ಮದುವೆ ಮನೆಗೆ ಸಾಗ ಹಾಕ್ತಾನೇ ಇದ್ದೀರಲ್ರೀ...ಇನ್ನು ಎಷ್ಟು ಮದುವೆ ಬಾಕಿ ಇದೇರೀ ಇಂಚರಾ? ಇನ್ನೊಂದೆರಡು ಕಂತುಗಳಲ್ಲಿ...ಕೆಲ ಓದುಗರ ಮದುವೇನೂ ಮುಗಿಯುತ್ತೋ ಏನೋ...
:D

ಬೇಗ ಬೇಗ ಮುಂದುವರಿಸಿ...ಮುಗಿಸಲೇಬೇಕೆಂದೇನೂ ಇಲ್ಲ...ನಿಜಕ್ಕೂ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲಾ ಮದುವೆ ವಯಸ್ಸಿಗೆ ಬಂದವರೇ. ಅದಕ್ಕೆ ಬೇಗ ಬೇಗ ಮದುವೆಯಾಗ್ತಿದೆ. ಅಪ್ಪ ಅಮ್ಮಂದಿರಿಗೆ ಟೆನ್ಶನ್ ಬೇಡಾಂತ :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<< ೧೦೦% ಮುಂದಿನ ಕಂತಲ್ಲಿ ಕಥೆ ಮುಗಿಸಿಬಿಡ್ತೀನಿ:>>>
ಹಾಗಾದರೆ ನೀವಿನ್ನು ೧% ಕಥೆ ಕೂಡ ಹೇಳಿಲ್ಲ ಅಂತ ಆಯಿತು
:D :D
ಅಂದಹಾಗೆ ಚೆನ್ನಾಗಿದೆ ಇಂಚರಕ್ಕ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.