hpn ರವರ ಬ್ಲಾಗ್

ಆಕಾಶ ಮಲ್ಲಿಗೆ ಹೂ, ಅಮ್ಮನ ನಾಸ್ಟಾಲ್ಜಿಯಾ

ಸಂಜೆಯ ವೇಳೆ ವಾಕಿಂಗ್ ಮಾಡುವುದೆಂದರೆ ನಾವಿರುವಲ್ಲಿ (ಬೆಂಗಳೂರಿನ ಪಶ್ಚಿಮ ಭಾಗ) ಸೂರ್ಯಾಸ್ತದ ಚೆಂದದ ಫೋಟೋ ಸೆರೆಹಿಡಿಯಲು ಸಿಗುತ್ತದೆ. ಹೀಗಾಗಿ ವಾಕಿಂಗ್ ಎಂದು ಹೊರಡುವಾಗ ಕ್ಯಾಮೆರಾ ಹಿಡಿದುಕೊಂಡು ಹೋಗುವುದು ಕಷ್ಟವಾದರೂ ಮೊಬೈಲನ್ನಾದರೂ ಜೊತೆಗೆ ಹಿಡಿದುಕೊಂಡು ಹೋಗುವ ಹವ್ಯಾಸ.

ಆ ದಿನ ಎಂದಿನಂತೆ ಡಾಕ್ಟರರ ಸಲಹೆಯನ್ನು ಪಾಲಿಸುವ ಸಲುವಾಗಿ ಹಾಗೆಯೇ ಅಮ್ಮನ ಮನೆಯ ಕಡೆ ವಾಕ್ ಹೊರಟಿದ್ದೆ. ಅಮ್ಮನ ಮನೆ ಹತ್ತಿರ ತಲುಪುತ್ತಿರುವಂತೆ ನನ್ನನ್ನು ನೋಡಿ ಅಕ್ಕನ ಮಗಳು ಓಡೋಡಿ ಬಂದಳು. ಅವಳಿಗೆ ಯಾರೋ ಹೊಸ 'ಫ್ರೆಂಡು' ಸಿಕ್ಕಿದ್ದಳಂತೆ. ಅದನ್ನು ತಿಳಿಸಲು ರೋಡು ದಾಟಿ ಓಡಿಕೊಂಡು ಬಂದಳು.  ಅವಳ "ಹೊಸ ಫ್ರೆಂಡ್" ಕಥೆ ನನಗೆ ಆಗ ಅಷ್ಟಾಗಿ ಅರ್ಥವಾಗದಿದ್ದರೂ ಅವಳು ಓಡಿಬಂದ ದಾರಿಯಲ್ಲಿಯೇ ಸಾಲಾಗಿ ಮರದ ಕೆಳಗೆ ಬಿದ್ದಿದ್ದ ಹೂವುಗಳು  ನನ್ನ ಗಮನ ಸೆಳೆಯಿತು. ಅವು ಆಕಾಶ ಮಲ್ಲಿಗೆ ಮರದ ಹೂವುಗಳು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ಮನಸ್ಸು, ಆರೋಗ್ಯ

ಕಳೆದ ಎರಡು ಮೂರು ವಾರ ಆರೋಗ್ಯ ಸರಿ ಇಲ್ಲದೆ ಮಲಗಿದ್ದೆ. ಆಫೀಸು, ಕಂಪ್ಯೂಟರು ಎಷ್ಟೋ ವರ್ಷಗಳಲ್ಲಿ ಮೊದಲ ಬಾರಿ ಸಂಪೂರ್ಣವಾಗಿ ದೂರ ದೂರ! ನಿದ್ರೆ ಮಾಡದ ಹೊತ್ತು ಬಹಳಷ್ಟು ಸಮಯ ಕಂಪ್ಯೂಟರ್ ಜೊತೆಗೇ ಇರುತ್ತಿದ್ದ ನನಗೆ ಈ ಲೋಕದ ಸಂಪರ್ಕ ಒಂದಷ್ಟು ದಿನ ಕಡಿದುಬಿದ್ದಿತ್ತು.  ನಿತ್ಯದ ಕೆಲಸ ಮನಸ್ಸನ್ನು ಆವರಿಸಿ ಬಿಡುವಿಲ್ಲದಂತಿರುವಾಗ ಹತ್ತಿರವೂ ಸುಳಿಯದ ಆಲೋಚನೆಗಳು ಈ ಸಮಯದಲ್ಲಿ ತಲೆ ಹೊಕ್ಕವು. ಉಸಿರಾಡಲೂ ಕಷ್ಟವಾಗುವ ಸಮಯ ಬೇರೊಂದು ವಿಷಯದ ಕುರಿತು ಆಲೋಚನೆ ಕೂಡ ಮಾಡಲಾಗದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (3 votes)
To prevent automated spam submissions leave this field empty.

ಕಲಿಯುಗದ ಐರಾವತ

ಮೈಸೂರಿನಿಂದ ಮನೆಗೆ ಡ್ರೈವ್ ಮಾಡುತ್ತ ಬರುವಾಗ ದಾರಿಯಲ್ಲಿ ಕಂಡ ಒಂದು ಹೋಟೆಲ್ ಹೆಸರು "ಶ್ರೀರಾಮ ದರ್ಶನ"(ಅಥವ ದರ್ಶಿನಿಯೋ ಇರಬೇಕು). ಮೈಸೂರಿನ ನನ್ನ ಗೆಳೆಯನೊಬ್ಬ ಇಂದು ನನ್ನೊಂದಿಗೆ ಕುಳಿತಿದ್ದರೆ "ಆ ಹೋಟೆಲಿಗೆ ಹೋದರೆ ಶ್ರೀರಾಮನ ದರ್ಶನ ಮಾಡಿಸುತ್ತಾರೆ ಅನ್ನಿಸುತ್ತೆ. ಅದಕ್ಕೇ ಹಾಗೆ ಹೆಸರಿಟ್ಟಿರೋದು. ಅದೇ, ಅಲ್ಲಿ ಊಟ ಮಾಡಿದರೆ ನೇರ ಶ್ರೀರಾಮನ ದರ್ಶನವೇ..." ಎಂದು ಮೇಲಕ್ಕೆ ಕೈ ಮಾಡಿ ತೋರಿಸಿ ನಗಿಸುವ ಪ್ರಯತ್ನ ಮಾಡುತ್ತಿದ್ದ. ಇವತ್ತು ಈ‌ ಹೋಟೆಲಿನ ಹೆಸರು ನೋಡಿದಾಗ ಅದೇ ನೆನಪಾಗಿ, ಗೆಳೆಯ ನಗಿಸಲೆಂದು ಹೇಳುತ್ತಿದ್ದ "ದೇವರ ದರ್ಶನ" ಈಗ ಅಲ್ಲಿಲ್ಲಿ ತಿಂದು ಆಗಬೇಕಿಲ್ಲ, ಮೈಸೂರಿನಿಂದ ಬೆಂಗಳೂರಿಗೆ ತೆರಳುವ ರಸ್ತೆಯುದ್ದಕ್ಕೂ ಎಲ್ಲಿ ಬೇಕಾದರೂ ಆಗಬಹುದು ಅನ್ನಿಸಿತು!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.

ಮುಳ್ಳು ಹರಿವೆ

ಹರಿವೆ ಸೊಪ್ಪು ಅಡುಗೆಗೆ ಬಳಸುತ್ತಾರೆ. ಆದರೆ ಇದು ಮುಳ್ಳು ಹರಿವೆ. ಹರಿವೆ ಸೊಪ್ಪಿನಂತೆಯೇ ಇರುವ ಎಲೆಗಳ ನಡುವೆ ಮುಳ್ಳು ಬೆಳೆದಿರುವುದು ಕಾಣಸಿಗುತ್ತದೆ.

 

ಪ್ರಶ್ನೆ: ಮುಳ್ಳು ಹರಿವೆಯನ್ನೂ ಅಡುಗೆಗೆ ಬಳಸುವುದುಂಟೋ?

 

ಚಿತ್ರ: ಹರಿ ಪ್ರಸಾದ್ ನಾಡಿಗ್, ೬/೬/೨೦೧೧

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

'ಗುಮ್ಮನೆಲ್ಲಿಹ ತೋರಮ್ಮ'

ನಿನ್ನೆ, ಸೋಮವಾರ ಸಂಜೆ ಅವಿನಾಶ್ ಕಾಮತ್ ಹಾಗು ಮುಂಬೈ ಕರ್ನಾಟಕ ಸಂಘದ ಹಲವರು ಕಲಾವಿದರು ರವೀಂದ್ರ ಕಲಾಕ್ಷೇತ್ರದಲ್ಲಿ ಶ್ರೀರಂಗರ 'ಗುಮ್ಮನೆಲ್ಲಿಹ ತೋರಮ್ಮ' ನಾಟಕದ ರಂಗಪ್ರಯೋಗ ನಡೆಸಿಕೊಟ್ಟರು. ಕೆಲವು ಚಿತ್ರಗಳು ಇಲ್ಲಿವೆ.

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

Pages

Subscribe to RSS - hpn ರವರ ಬ್ಲಾಗ್