hpn ರವರ ಬ್ಲಾಗ್

ಜರ್ಮನಿಯ ಕಲಾವಿದನ ಕಣ್ಣಲ್ಲಿ ಬೆಂಗಳೂರ ಆಟೋ

ಜರ್ಮನ್ ಕಲಾವಿದ ಕ್ಸೇವರ್ ಕ್ಸೈಲಫನ್ ಬೆಂಗಳೂರ ಆಟೋ ನೋಡಿ ರೆಡಿ ಮಾಡಿರುವ ಪುಟ್ಟ ಅನಿಮೇಶನ್ ವಿಡಿಯೋ ನೋಡಿ.
ನಿಮಗೇನನ್ನಿಸಿತು? ತಿಳಿಸಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.6 (5 votes)
To prevent automated spam submissions leave this field empty.

“ಬರವಣಿಗೆ ಚೆಂದ ಇರಲಿ”

ಕೆಲವೊಮ್ಮೆ ಯಾವುದೋ ಒಂದು ನೆನಪು ಥಟಕ್ಕನೆ ಮನಸ್ಸಿಗೆ ಬಂದು  ಈಗ ಅಷ್ಟೇನೂ relevant ಅಲ್ಲದಿದ್ದರೂ  ಕಸಿವಿಸಿ ಉಂಟು ಮಾಡುತ್ತದೆ.
ಈ ರೀತಿಯೇ ಇತ್ತೀಚೆಗೊಮ್ಮೆ ಕನ್ನಡದಲ್ಲಿ ಏನೋ ಟೈಪ್ ಮಾಡಿಟ್ಟುಕೊಳ್ಳುತ್ತಿರುವಾಗ ನಮ್ಮ ಕನ್ನಡ ಮೇಷ್ಟ್ರು ಶಾಲೆಯಲ್ಲಿ “ಬರವಣಿಗೆ ಚೆಂದವಾಗಿರಲಿ” ಎಂದು ಜೋರು ಮಾಡಿ ಹೇಳುತ್ತಿದ್ದುದು ಥಟಕ್ಕನೆ ನೆನಪಾಗಿ ಒಮ್ಮೆ ಕಸಿವಿಸಿಯಾಯಿತು. ಏಕೆಂದರೆ ಆ ದಿನ ಅದ್ಯಾವುದೋ ವಿಚಿತ್ರ ಫಾಂಟ್ ಬಳಸಿ ಟೈಪ್ ಮಾಡಿಟ್ಟುಕೊಳ್ಳುತ್ತಿದ್ದೆ. ಅಕ್ಷರ ದುಂಡಗೆ ಮೂಡುವುದಿರಲಿ, ಟೈಪ್ ಮಾಡಿಟ್ಟುಕೊಂಡದ್ದನ್ನು ಓದಲು ನನಗೇ ಕಷ್ಟವಾಗುತ್ತಿತ್ತು. ಆದರೆ ಈ ಬಾರಿ ಬರವಣಿಗೆ ಚೆಂದಪಡಿಸಲು ಮತ್ತೊಮ್ಮೆ ಬರೆದಿಡುವುದು ಬೇಕಾಗಲಿಲ್ಲ - ಟೈಪ್ ಮಾಡಿಟ್ಟುಕೊಂಡದ್ದರ ಫಾಂಟ್ ಬದಲಾಯಿಸಿದೆ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬಹಳ ದಿನಗಳ ನಂತರ ಹೀಗೊಂದು ಸ್ಕೆಚ್

ಬಹಳ ದಿನಗಳ ನಂತರ ಹೀಗೊಂದು ವ್ಯಂಗ್ಯಚಿತ್ರ ಬಿಡಿಸಿದೆ. ಚಿತ್ರ ಮೂಡಿಬಂದ ರೀತಿ ನನಗೇ ಅಷ್ಟು ಇಷ್ಟವಾಗಲಿಲ್ಲ. ಆದರೆ ಚಿತ್ರ ಬಿಡಿಸಲು ಕಳೆದ ಸಮಯ ಖುಷಿ ಕೊಟ್ಟಿತು.

ಬಿಹಾರದಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಶಾಲೆಯಲ್ಲಿ ತಯಾರಿಸಿದ ಆಹಾರ ತಿಂದು ಸತ್ತು ಹೋದ ಮಕ್ಕಳ ಸುದ್ದಿ ನಿಮಗೆಲ್ಲ ಗೊತ್ತೇ ಇದೆ. ಕರ್ನಾಟಕದಲ್ಲಿ ಬಹುಶಃ ಚಿತ್ರದಲ್ಲಿರುವಂತೆ ಆಗುತ್ತಿರಬಹುದು.

‍‍(ದೊಡ್ಡ ಗಾತ್ರದ ಚಿತ್ರವನ್ನು ವೀಕ್ಷಿಸಲು ಬಲಭಾಗದಲ್ಲಿರುವ ಪುಟ್ಟ ಚಿತ್ರದ‍ ಮೇಲೆ ಕ್ಲಿಕ್ ಮಾಡಿ).

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.2 (11 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕತ್ತಲು ಮತ್ತು ಬೆಳಕು

ಬೆಳಕು, ಕತ್ತಲೆ. ಇವೆರಡರ ನಡುವೆ ಜೀವನ.

ಬೆಳಕು ಇದ್ದಲ್ಲಿ ಕತ್ತಲೆ ಆವರಿಸಿಲ್ಲದಿಲ್ಲ.

ಬೆಳಕಲ್ಲಿ - ಕಾಣುವ, ಕಾಣದ ಕತ್ತಲೆಯ ಛಾಯೆ.

ಬೆಳಕಿನ ಸ್ವರೂಪ ಕತ್ತಲೆಯಿಂದಲೇ.

ಬೆಳಕಿಲ್ಲದ ಕತ್ತಲೆಗೆ ಬೆಳಕಿನದೇ ಆಸರೆ.

ಒಲವಿನ ಆಶ್ರಯದಲ್ಲಿ ಬೆಳಕು ಕತ್ತಲಾಗಬಹುದು,

ಕತ್ತಲು ಬೆಳಕಾಗಬಹುದು.

ಕತ್ತಲೆ, ಬೆಳಕು ಮತ್ತೆಲ್ಲವೂ ಇವೆರಡರ ನಡುವೆಯೇ.

(ಪೂರ್ಣ ಚಿತ್ರ ವೀಕ್ಷಿಸಲು ಚಿತ್ರದ ಮೇಲೆ ಕ್ಲಿಕ್ ಮಾಡಿ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (8 votes)
To prevent automated spam submissions leave this field empty.

ಸಿಡಿ ಮದ್ದು

ಆಗ ಬಹುಶಃ ನಾನು ಐದನೇ ಕ್ಲಾಸಿನಲ್ಲಿ ಓದುತ್ತಿದ್ದೆ. ದೀಪಾವಳಿ ಹತ್ತಿರ ಬಂತೆಂದರೆ ಕ್ಲಾಸಿನ ಹುಡುಗರಲ್ಲೆಲ್ಲ ಪಟಾಕಿಯದೇ ಮಾತು. ಪಾಠ ನಡೆಯುತ್ತಿರುವ ಹೊತ್ತೂ ಗುಸುಗುಸು ಎಂದು ಅದನ್ನೇ ಮಾತನಾಡುತ್ತಿದ್ದರು. ಕಳೆದ ವರ್ಷ ಯಾವ ರೀತಿ ಪಟಾಕಿ ಹೊಡೆದಿದ್ದೆವು, ಈ ವರ್ಷ ಹೊಸ ರೀತಿಯ ‍ಪಟಾಕಿ ಯಾವುದು ಬರಲಿದೆ ಎಂಬುದರ ಬಗ್ಗೆ ‍ಆಳವಾದ ಚರ್ಚೆ ನಡೆಯುತ್ತಿತ್ತು. ‍‍ದೀಪಾವಳಿ ಇನ್ನೂ ಹದಿನೈದು ದಿನಗಳಿರುವಂತೆಯೇ ಪ್ರಾರಂಭವಾಗುತ್ತಿದ್ದ ಈ ಚರ್ಚೆ ಪಟಾಕಿ ಬಗ್ಗೆ ಅಷ್ಟೇನೂ ಒಲವಿಲ್ಲದ ಹುಡುಗರಿಗೂ ದೀಪಾವಳಿಯ ದಿನ ಪಟಾಕಿ ಸಿಡಿಸುವ ಕಾತುರ ಮೂಡಿಸುತ್ತಿತ್ತು.

‍ಆ ವರುಷ ಅಪ್ಪನ ಆಫೀಸಿನಲ್ಲಿ ಎಲ್ಲರೂ ಸೇರಿ ಶಿವಕಾಸಿಯಿಂದ ಪಟಾಕಿ ತರಿಸುವುದೆಂದು ಚಂದಾ ವಸೂಲಿ ಮಾಡಿದ್ದರಂತೆ. ಪ್ರತಿ ವರ್ಷ ಹೀಗೆಯೇ ಹಣ ಒಟ್ಟುಗೂಡಿಸಿ ಪಟಾಕಿ ತರಿಸುತ್ತಿದ್ದರಂತೆ. ಆದರೆ ಅದು ಶಿವಕಾಸಿಯದ್ದೋ ಅಥವ ಇಲ್ಲೇ ಕೊಯಂಬತ್ತೂರಿನದ್ದೋ ಯಾರಿಗೂ ಗೊತ್ತಿರಲಿಲ್ಲ. ಗೊತ್ತಿದ್ದದ್ದು ಇಷ್ಟು - ಪಟಾಕಿ ಒಟ್ಟಾಗಿ ಕೊಂಡಲ್ಲಿ ಕಡಿಮೆ ಬೆಲೆಗೆ 'ಗಿಫ್ಟ್ ಪ್ಯಾಕ್' ರೂಪದಲ್ಲಿ ಸಿಗುತ್ತದೆಂಬುದು. ಅಪ್ಪನ ಆಫೀಸಿನಲ್ಲಿ ಕೆಲಸಮಾಡುತ್ತಿದ್ದ ಎಲ್ಲ ಅಪ್ಪ ಅಮ್ಮಂದಿರು ಪಟಾಕಿ ಬೇಕು ಎಂಬ ಮಕ್ಕಳ ಹಠಕ್ಕೆ ಇದೊಂದು ಸುಲಭದ ದಾರಿ ಕಂಡುಕೊಂಡಿದ್ದರು. ಸುಮಾರು ಇನ್ನೂರು ರೂಪಾಯಿಗಳಿಗೆಲ್ಲ ಒಂದು ಬಾಕ್ಸ್ ತುಂಬ ಪಟಾಕಿ ಸಿಗುತ್ತಿತ್ತು. ಬಾಕ್ಸೊಂದರಲ್ಲಿ ಎಲ್ಲ ರೀತಿಯ ಪಟಾಕಿಗಳನ್ನೂ ಒಂದಿಷ್ಟು ತುಂಬಿ ಕಳುಹಿಸುತ್ತಿದ್ದರು. ಸುರ್ ಸುರ್ ಬತ್ತಿ, ಆನೆ ಪಟಾಕಿಯಿಂದ ಹಿಡಿದು ರಾಕೆಟ್, ಲಕ್ಷ್ಮಿಯ ಚಿತ್ರವಿರುವ ಲಕ್ಷ್ಮೀ ಪಟಾಕಿ, ಹಸಿರು ನಿಶಾನೆಯಿದ್ದು ವಿಪರೀತ ಸದ್ದು ಮಾಡುವ ಹೈಡ್ರೋಜನ್ ಬಾಂಬ್ ವರೆಗೂ ಎಲ್ಲ ಇರುತ್ತಿದ್ದವು. ಇಂಥದ್ದೊಂದು ಬಾಕ್ಸ್ ಚಂದಾ ಹಣ ಕಟ್ಟಿದ್ದ ಅಪ್ಪನಿಗೂ ಬಂದಿತ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.6 (7 votes)
To prevent automated spam submissions leave this field empty.

Pages

Subscribe to RSS - hpn ರವರ ಬ್ಲಾಗ್