ಮತ್ತೊಂದು ಭಾನುವಾರ

0
ಬೆಂಗಳೂರಲ್ಲಿ ಎಂತಹ ಒಳ್ಳೇ ಹೋಟೆಲಿನಲ್ಲಿ ಚ್ಯಾಟ್ಸ್ ತಿಂದರೂ ಸ್ವಲ್ಪ ದಿನಗಳಲ್ಲೇ sore throat ಗ್ಯಾರಂಟಿ. ಈ ವಾರ ಎರಡು ಮೂರು ಬಾರಿ ಸ್ನೇಹಿತರೊಂದಿಗೆ ಚ್ಯಾಟ್ಸ್ ಪ್ರೋಗ್ರಾಮ್ ಇಟ್ಟುಕೊಂಡದ್ದರಿಂದ ವಾರಾಂತ್ಯ ಬರುವಷ್ಟರಲ್ಲೇ ನೆಗಡಿ, ಜ್ವರ ಶುರು. ಮೊನ್ನೆ ರಾತ್ರಿಯೇ ಅನಿಸಿತ್ತು... ಮುಂದೆರಡು ದಿನ ಕಷ್ಟ ಆಗಬಹುದೆಂದು.

ಎಂದೂ ಬೇಗ ಏಳದವ ಇವತ್ತು ಮುಂಜಾನೆ ಎದ್ದು ಅತ್ತ ದೆಹಲಿಯಲ್ಲಾದ ಬಾಂಬ್ ಸ್ಪೋಟದ ಬಗ್ಗೆ ವಿವಿಧ ಸುದ್ದಿ ಮಾಧ್ಯಮಗಳ ವರದಿ ಓದುತ್ತಿದ್ದೆ. ನಡುನಡುವೆ ಉಪ್ಪುನೀರು gargle ಮಾಡೋದು, pillsಉ ಟಾನಿಕ್ಕು ಪಕ್ಕದಲ್ಲಿಟ್ಟುಕೊಂಡ ಕಂಪ್ಯೂಟರಿನ ಮುಂದೆ ಕುಳಿತುಕೊಳ್ಳಲು ಬೇಸರವಾದಾಗ ಸ್ವತಃ ಧೂಳು ಹಿಡಿದುಕೊಂಡಿದ್ದ ವ್ಯಾಕ್ಯೂಮ್ ಹಿಡಿದು ಕಸ ಹೊಡೆದದ್ದು. ಹೊರಗೆ ಹೋಟೆಲಿನಲ್ಲಿ ತಿಂದದ್ದಕ್ಕೆ ಇವೆಲ್ಲದರ ನಡುವೆ ನನಗೇ ನಾನೇ ಬೈದುಕೊಂಡದ್ದು.

ಕಳೆದ ವಾರ ಯವುದೋ ಮೀಟಿಂಗ್ ಅಟೆಂಡ್ ಮಾಡೋದಕ್ಕೆಂದು ಹೋಗುವಾಗ ದಾರೀಲಿ ಸೂಪರ್ ಮಾರ್ಕೆಟ್ಟೊಂದರ ಬಳಿ ಗಾಡಿ ನಿಲ್ಲಿಸಿ ಪೆನ್ನು ತಗೊಂಡು ಹೊರಬರುತ್ತಿರುವ ನನಗೆ ಪಕ್ಕದ ಹೋಟೆಲಿನ ಚ್ಯಾಟ್ ಅಂಗಡಿಯ ಗುರುತು ಹಿಡಿದು ಮಾತನಾಡಿಸಿದ. ಸುಮಾರು ದಿನಗಳಿಂದ ಅತ್ತ ಕಡೆ ಹೋಗಿರಲಿಲ್ಲ.  ಅವನ ಜೊತೆ ಮಾತುಕತೆ ಹೀಗಿತ್ತು:
"ಸಾಬ್ಜೀ, ಚ್ಯಾಟ್ಸ್ ಖಾನಾ ಚೋಡ್ ದಿಯಾ?"
"ನಹೀ ಗುರೂ,  ಚೋಡ್ನೇ ಕೆ ಲಿಯೆ ಏಕ್ ಬಾರ್ ಶಾಯದ್ ಬನಾರಸ್ ಜಾನ ಪಡೇಗಾ"

ಈಗ ಇದೊಂದು ಭಾನುವಾರವೆ ಸಾಕು ಅನ್ನಿಸುತ್ತಿದೆ :P

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಬರಹ ಚೆನ್ನಾಗಿದೆ ಹರಿ, ಇದು ನಿಜ ಕೂಡ. ಆದ್ರೆ ಸಿಟಿಯ ಜನ ಈ ’ಚಾಟ್ ಸೆಂಟರ್’ಗಳಿಗೆ ಹೇಗೆ ಮುಕುರುತ್ತಾರೆ ಅಂದ್ರೆ ಹೇಳೋ ಹಾಗಿಲ್ಲ. ಹೆಚ್ಚಿನ ಗಾಡಿಗಳು ಅದೇಕೋ ;-)) ದೊಡ್ಡ ಮೋರಿಯ ಪಕ್ಕಾನೇ ಇರತ್ವೆ. ಅವರು ಪ್ಲೇಟ್‌ಗಳನ್ನ ತೊಳೆಯೋ ಚಂದ ನೋಡಿದ್ರೆ, ಅಬ್ಬಾ,.... ಬೇಡ ಬಿಡಿ, ನನ್ನ ವರ್ಣನಾ ವೈಖರಿ ಮುಂದುವರೆದರೆ ಪಾಪದ ಗಾಡಿ ಅಂಗಡಿಯವರು ಬಾಗಿಲು ಮುಚ್ಕೊಂಡು ಮನೆಗೆ ಹೋಗ್ಬೇಕಷ್ಟೆ!! ನಾನು ಮಸಾಲಾ ಪೂರಿ ಅಂತ ಕರೆಯೋದಿಲ್ಲ. "ಮೋರಿ ಪೂರಿ" ಅಂತಾನೇ ಕರೆಯೋದು. :)). ಇದ್ದಿದ್ದರಲ್ಲಿ ಸಣ್ಣ ಸಣ್ಣ ಹೋಟೆಲ್‌ಗಳಲ್ಲಿ ಸ್ವಲ್ಪ ವಾಸಿ. ಆದ್ರೆ ಬೀದಿ ಗಾಡಿಯ ತಿಂಡೀನೇ ಭಾಳ ರುಚಿ ಅಂತ ಯುವಕರ ಅಂಬೋಣ. ತಿಂಡಿತಿಂದ್ರೆ ಮಾತ್ರ ಅಲ್ಲ. ಅವರು ಕೊಡೋ ಹಳೆಯ ನೋಟುಗಳನ್ನು ಕೈಲಿ ಮುಟ್ಟಿದ್ರೆ ಸಾಕು ಯಾವ ಯಾವ ಕಾಯಿಲೆ ಬರತ್ತೋ ಅಂತ ಹೆದ್ರಿಕೆ ಆಗತ್ತೆ.

"ಏರಿದವನು ಚಿಕ್ಕವನಿರಬೇಕು"

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು, ಗಾಡಿಗಳಿಗೇ ಜನ ಮುತ್ತೋದು ಹೆಚ್ಚು. ಆದರೆ ಬೆಂಗಳೂರಲ್ಲಿ ಅದು ultimate riskಉ. ಸ್ವಲ್ಪ ರೋಗಾಣುಗಳು ಹೋದ್ರೆ ದೇಹ ತಡ್ಕೊಳ್ಳತ್ತೆ, ಆದರೆ ಗಾಳೀಲಿರೋ ಆ ಪಾಟಿ ಕಾರ್ಬನ್ (ಮತ್ತಿನ್ನೇನೇನೋ) ಹೊಟೋದ್ರೆ ಏನ್ ಗತಿ, ಒಂದು ರೌಂಡು ಹೋಗಿಬಂದು ಮುಖ ಒರೆಸಿಕೊಂಡ್ರೆ ಕಪ್ಪಗೆ ಸೂಟ್ ಬಂದ ಹಾಗೆ ಬರತ್ತೆ!

ಶಿವಮೊಗ್ಗದಲ್ಲಿ ಹಂದಿಗಳ ಕಾಟ ಇರುತ್ತಿತ್ತು. ಹಂದಿಗಳು ಬಂದು ಪ್ಲೇಟುಗಳ ಸ್ವಲ್ಪ ದೂರದಲ್ಲೆ ಗಲಾಟೆ ಮಾಡುತ್ತ ಬಿದ್ದಿದ್ದರೂ ಲೆಕ್ಕಿಸದೆ ಅಲ್ಲಿ ಜನ ಪಾನಿಪುರಿ ತಿನ್ನುತ್ತಿದ್ದದ್ದು ನೆನಪಿದೆ. ಕೆಲವೊಮ್ಮೆ ಪ್ಲೇಟುಗಳನ್ನು ನಾಯಿಗಳು ಟೇಸ್ಟ್ ಮಾಡಿರಲಿಕ್ಕೂ ಸಾಕು ;-)

- HPN
ನನ್ನ ಬ್ಲಾಗುಗಳು: [:http://sampada.net/blog/hpn|ಪರಿವೇಶಣ] | [:http://hpnadig.net/blog|PariveshaNa]

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

saadhyavaadre corporationnige buddibandre ee chat goodangaligalanna mucchisi, sarakara kaisaala needi arogyakaravada sannagdigalannu shurumaadabahudalla, sarakaaradde franchise maadikollabahudalla?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗುರ್ವಿಂದರ್ ಮಂಗಳೂರಿನವನ ಹಾಗೆ ಬಿಡಿಸಿದ್ದೀರಿ...ಮುಂಡು ಸುತ್ತಿಕೊಂಡು :)
ಕಾರ್ಟೂನ್ ಚೆನ್ನಾಗಿ ಬಂದಿದೆ.
*ಅಶೋಕ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:)

- HPN
ನನ್ನ ಬ್ಲಾಗುಗಳು: [:http://sampada.net/blog/hpn|ಪರಿವೇಶಣ] | [:http://hpnadig.net/blog|PariveshaNa]

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

beega hushaaragappa tamma...:) noorentu salahe kelodide ..;p

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.