ಪ್ರತಿಕ್ರಿಯೆ ಮುಗಿಲು ಮುಟ್ಟಿದಾಗ...

0


ನಾವಂದುಕೊಂಡದ್ದು ೫೦ ಜನ. ವಾರವೊಂದರಲ್ಲೇ ನೂರಾಯ್ತು. ನಮಗೆಲ್ಲ ಆಶ್ವರ್ಯವಾಗಿತ್ತು. ಬಹಳ ಖುಷಿಯಾಗಿತ್ತು! ಎರಡು ಸೆಶ್ಶನ್ ಇಟ್ಟುಕೊಳ್ಳೋಣ ಅಂತ ಮಾತನಾಡಿಕೊಂಡಿದ್ದೆವು.

ಇವತ್ತು ನೂರಾರು ನೋಂದಣಿಗಳು. ನಮಗೆಲ್ಲ ಒಮ್ಮೆ ಭಯವಾಯ್ತು. ಗ್ನು/ಲಿನಕ್ಸ್ ಬಗ್ಗೆ ಇಷ್ಟೊಂದು ಜನ ಆಸಕ್ತಿ ವಹಿಸುವರೆಂಬುದನ್ನು ಕನಸು ಮನಸ್ಸಿನಲ್ಲೂ ನಾವುಗಳು ಎಣಿಸಿರಲಿಲ್ಲ.

ಇಂದು ಬೆಳಿಗ್ಗೆ ವಿ.ಕ ಹಾಗೂ ಕನ್ನಡಪ್ರಭದಲ್ಲಿ ಕಾರ್ಯಕ್ರಮದ ಕುರಿತು ಬಂದ ಲೇಖನಗಳಿಂದ ಕೆಲವೇ ಘಂಟೆಗಳಲ್ಲಿ ನೋಂದಣಿ ಇಮ್ಮಡಿಯಾಗಿ ೩೦೦ ದಾಟಿ ಹೋಯ್ತು!

ಆದರೆ ಕಾರ್ಯಕ್ರಮ ಇಟ್ಟುಕೊಂಡಿರುವ ಜಾಗದಲ್ಲಿ ಹೆಚ್ಚು ಜನರಿಗೆ ಅನುವು ಮಾಡಿಕೊಡುವುದಕ್ಕೆ ಅನುಮತಿ ನಮಗಿಲ್ಲ. ನಮ್ಮೆಲರ ದುಗುಡ ಹೇಳತೀರದು! ಹೀಗಾಗಿ ನಿಜವಾಗಲೂ installationನಲ್ಲಿ ಭಾಗವಹಿಸುವವರು ಮಾತ್ರ ಬನ್ನಿ ಎಂದು ಎಲ್ಲರಿಗೂ ಕೊನೆ ಘಳಿಗೆಯಲ್ಲಿ ತಿಳಿಸಿದೆವು.

ಈ ಬಗ್ಗೆ ನಮ್ಮೆಲ್ಲರ ಪರಿಸ್ಥಿತಿ ಅರಿತು ಸ್ಪಂದಿಸಿದ ಎಲ್ಲರಿಗೂ ಅನಂತ ವಂದನೆಗಳು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಹರಿ, ಮತ್ತು ಉಳಿದ ತಂಡದವರಿಗೆ,

ಹಬ್ಬ ಚೆನ್ನಾಗಾಗಲಿ!

-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ನನ್ನ ಪಾಡ್ ಕಾಸ್ಟ್ ಗಳು :- http://hamsanandi.mypodcast.com/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಬ್ಬ ಚೆನ್ನಾಗಿ ನಡೆಯಲಿ. ಶುಭಾಶಯಗಳು
ಹ್ಯಾಗಾದರೊ ಮಾಡಿ ಅಟೆಂಡ್ ಮಾಡಬೇಕು ಅಂತಂದುಕೊಂಡಿದ್ದೆ ಆದರೆ ಕಾರಣಾಂತರಗಳಿಂದ ಆಗಲಿಲ್ಲ

ರೂಪ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿನ್ನೆಯೇ house full ಬೋರ್ಡ್ ನೋಡಿದ್ದೆ.

ಸಂತೋಷವಾಯಿತು.

ಹಬ್ಬದ ವರದಿ,ಚಿತ್ರಪುಟಗಳನ್ನು ನೋಡಲು ಕಾತರನಾಗಿದ್ದೇನೆ.
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಓದುಗರೆಲ್ಲರಿಗೂ ಲಿನಕ್ಸ್ ಹಬ್ಬದ ಹಾರ್ದಿಕ ಶುಭಾಶಯಗಳು :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.