ಭಾನುವಾರದ ಮಳೆ, ಪಾಟೀಲರ ನಾಟಕ

0

ಜಯಲಕ್ಷ್ಮಿ ಪಾಟೀಲರು 'ನನ್ನದೊಂದು ನಾಟಕ ಇದೆ' ಎಂದು ಬರೆದದ್ದು ಸಮುದಾಯದ ಹೊಸಬರಲ್ಲಿ ಅಚ್ಚರಿ ಮೂಡಿಸಿರಲಿಕ್ಕೂ ಸಾಕು. ನಾಟಕದ ಕುರಿತು ನಡೆಸಿಕೊಡುತ್ತಿರುವವರೇ ಬರೆದು ಆಮಂತ್ರಣ ನೀಡುವುದು ಹಲವರಿಗೆ ಹೊಸತೆನಿಸಬಹುದು. ಆದರೆ ಹಲವು ವರ್ಷಗಳ ಕಾಲ ಹಲವು ಸಮುದಾಯಗಳಲ್ಲಿ ಪಾಲ್ಗೊಂಡವರಿಗೆ ಗೊತ್ತಿರುತ್ತದೆ, ಎಲ್ಲರೊಂದಿಗೆ ಬೆರೆತು ಎಲ್ಲರನ್ನೂ ಆಮಂತ್ರಿಸುವ ಈ ರೀತಿ ಸಮುದಾಯಗಳಲ್ಲಿ ಹೊಸತೇನಲ್ಲ ಎಂಬುದು. ಸಮುದಾಯದಲ್ಲಿ ಸಮಾನತೆ ಕಾಣಿಸುವ ಹಲವು ವಿಷಯಗಳಲ್ಲಿ ಇದೂ ಒಂದು.

ಅಂದು 'ನಾಟಕ ಇದೆ, ಬನ್ನಿ' ಎಂದು ಬರೆದ ಲೇಖನ ಸರಿಯಾಗಿ ಪ್ರಕಟವಾಗಿಲ್ಲವೆಂದು ಜಯಲಕ್ಷ್ಮಿಯವರು ಸಂಪರ್ಕಿಸಿದಾಗ ಅದನ್ನು ಸರಿಪಡಿಸುವುದು ಹೇಗೆಂದು ತಿಳಿಸಿ "ನಾವೂ ಬರುತ್ತೇವೆ" ಅಂದಿದ್ದೆ. "ಬರ್ತೀರಾ?" ಎಂದು ಎರಡೆರಡು ಸಾರಿ ಕೇಳಿದ್ದರು, ಇವರೆಲ್ಲ ಕಂಪ್ಯೂಟರ್ ಬಿಟ್ಟು ಹೊರಗೆ ಹೋಗುವುದೇ ನಂಬಲಾಗದು ಎಂಬಂತೆ.

ಭಾನುವಾರ ಬಂತು, ನಾಟಕ ನೋಡೋಕೆ ಹೊರಟಿದ್ದೇನೋ ಸೈ, ಆದರೆ ಎಂದಿನಂತೆ ನಮ್ಮ ಪ್ರೋಗ್ರಾಮಿನಲ್ಲಿ twists ಎಂಡ್ turnsಉ. ಅರವಿಂದ ಮೈಸೂರಿನಿಂದ ಬಂದಿದ್ದ, ಅವ ಹಿಂದಿನ ದಿನ ಫೋನ್ ಮಾಡಿ "ಶ್ರೀನಗರದಲ್ಲಿದೀನಿ, ಸಿಗೋಣ್ವ?" ಅಂದಿದ್ದ.

ದಾರಿಯುದ್ದಕ್ಕು ಮಳೆ ಬೇರೆ ಭೋರ್ ಎಂದು ಹೊಡೆಯುತ್ತಿತ್ತು. ಪಾಲನಿಗೆ "ನೀನು ಆಶ್ರಮ ಬಸ್ ಸ್ಟಾಪಿಗೆ ಬಂದುಬಿಡು" ಎಂದು ಹೇಳಿ ಘಂಟೆಗಳೇ ಆಗಿಹೋಗಿತ್ತು. ಅವ ನಾಲ್ಕೈದು ಕಾಫಿ ಕುಡಿಯುತ್ತ, ನಮಗೆ ಕಾಯುತ್ತ ತಾಳ್ಮೆಯನ್ನು ಪರೀಕ್ಷೆಗೆ ಹಚ್ಚಿದ್ದ.

ಎನ್ ಆರ್ ಕಾಲೋನಿ ಮೇಯ್ನ್ ರೋಡಿನಲ್ಲಿ ಅರವಿಂದನಿಗೆ ಕಾಯುತ್ತಿರುವಾಗ ಧೊಪ್ ಎಂದು ಮರದ ರೆಂಬೆಗಳು ಮುರಿದು ಬೀಳುತ್ತಿದ್ದವು. ಅಲ್ಲೊಬ್ಬ ಮಹಾಶಯನಿಗೆ ಅದೇನು Sixth sense ಬೆಳಗಿತೋ ಸರಿಯಾಗಿ ರೆಂಬೆ ತಲೆಯ ಮೇಲೆ ಬೀಳುವಷ್ಟರಲ್ಲಿ ಬೇರೆ ಕಡೆ ಓಡಿದ್ದ. ನಮ್ಮ ಗ್ಯಾಂಗಿನವರೂ ಇಬ್ಬರು ತಲೆಯ ಮೇಲೆ ಬೀಳಿಸಿಕೊಳ್ಳದಂತೆ ತಪ್ಪಿಸಿಕೊಂಡು ಬಂದ ವಾರ್ತೆ ತಲುಪಿತಾದರೂ ಫುಟೇಜ್ ಸಿಗಲಿಲ್ಲ.

ಇದೆಲ್ಲದರ ನಡುವೆ ಕೊನೆಗೂ ಕಂಪ್ಯೂಟರ್, ಲ್ಯಾಪ್ಟಾಪ್ ಬಿಟ್ಟು ಭಾನುವಾರ ಸಾಯಂಕಾಲ ಹೀಗೇ ಜಯನಗರ, ಬಸವನಗುಡಿ, ಶ್ರೀನಗರಗಳ ನಡುವೆ ಅಲೆದಾಡುವುದಲ್ಲದೆ ಜಯನಗರ ನ್ಯಾಶನಲ್ ಕಾಲೇಜಿನ ಎಚ್ ಎನ್ ಕಲಾಕ್ಷೇತ್ರದಲ್ಲಿ ನಾಟಕವನ್ನೂ ನೋಡಿ ಬಂದೆವು. ಚೆನ್ನಾಗಿತ್ತು. ಬ್ಯಾಕ್ ಸ್ಟೇಜಿನಲ್ಲಿ ಜಯಲಕ್ಷ್ಮಿ ಪಾಟೀಲ್, ದೀಪಾ ರವಿಶಂಕರ್ ಹಾಗು 'ಮುಕ್ತ' ಬಳಗದ ಹಲವರು ಇದ್ದರು. ಕೆಲವು ಫೋಟೋಗಳು ಇಲ್ಲಿವೆ.

ಫೋಟೋಗ್ರಫಿ: ಪಾಲಚಂದ್ರ, ಶಿವು ಮತ್ತು hpn.

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ನೀವೆಲ್ಲ (ನೀವು, ಶಿವು, ಅರವಿಂದ್, ಪಾಲಚಂದ್ರ, ಶ್ರೀನಿಧಿ) ನಾಟಕ ನೋಡಲು ಬಂದದ್ದು ತುಂಬಾ ಖುಷಿ ಆಯ್ತು ಹರಿ. ಜೊತೆಗೆ ಅಷ್ಟೆಲ್ಲ ಫೋಟೋಸ್!! ಥ್ಯಾಂಕ್ಸ್ ನಿಮಗೆಲ್ಲ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅರೆ, ಥ್ಯಾಂಕ್ಸ್ ಎಲ್ಲ ಎಂಥ? ನಾವು ಬಂದರೆ ನಮ್ಮೊಡನೆ ಕ್ಯಾಮೆರಾನೂ ಬರತ್ತೆ. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಟಕಕ್ಕೆ ಬಂದಿದ್ದ ತಮ್ಮೆಲ್ಲರಿಗೂ ಧನ್ಯವಾದಗಳು. ಬರದಿದ್ದವರಿಗಾಗಿ ಮತ್ತೊಮ್ಮೆ ಜಯಲಕ್ಷ್ಮಿ ಪಾಟೀಲರು ಮತ್ತೆ 'ಸರೋಜಾ' ಆಗಲಿದ್ದಾರೆ. ದಿನಾಂಕ ಸ್ಥಳ ಸದ್ಯದಲ್ಲೇ ತಿಳಿಸುತ್ತೇವೆ. ಮಳೆಯ ಕರಣ ಕೊಡಬೇಡಿ ಇನ್ನು. ಮಳೆಗಾಲ ಪ್ರಾರಂಭ ವಾಗಿರೋದ್ರಿಂದ ಸ್ವಲ್ಪ ಮುಂಜಾಗರೂಕತೆ ತೆಗೆದುಕೊಂಡರೆ ಅನುಕೂಲ. ನಾಡಿಗ್, ಪಾಲಚಂದ್ರ, ಶಿವೂ ಬಂದಿದ್ದು ಖುಷಿ ಕೊಟ್ಟಿತು. ನಿಮ್ಮೆಲ್ಲರನ್ನು ಭೇಟಿ ಆಗೋಣ ಅಂತ 'ಸಂಪದಕ್ಕೆ' ಕೈ ಇರಿಸಿದ್ದೇನೆ. ಬನ್ನಿ ನಾಟಕ ನೋಡಿ ಪ್ರೋತ್ಸಾಹಿಸಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಗೂ ನಿಮ್ಮೆಲ್ಲರೂ ಹಾಗೂ ನಾಟಕಾನೂ ನೋಡಿ ಖುಶಿ ಆಯ್ತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಟಕ ಚೆನ್ನಾಗಿತ್ತಂತೆ...!! ನೋಡುವ ಅದೃಷ್ಟ ನನಗಿರಲಿಲ್ಲ.
ಈ ನಾಟಕದಲ್ಲಿ ಕಿತ್ತಳೆ ಬಣ್ಣದ ಸೀರೆಯಲ್ಲಿದ್ದಾರಲ್ಲ ಅವರು ನಮ್ಮ ಮನೆಗೆ ಬಂದಿದ್ದರು.
ಅವರು ಬಹುಷಃ "ಮುಕ್ತ" ಅನ್ನೋ ಧಾರಾವಾಹಿಯಲ್ಲಿ ಅಭಿನಯಿಸ್ತಾರೆ. ಸಂವಾದಕ್ಕೆ ಅಂತ ದಾವಣಗೆರೆಗೆ ಬಂದಿದ್ದರು.
ಯಾವ ಪಾತ್ರ ಅಂತ ಗೊತ್ತಿಲ್ಲ. ನಾನು ಟಿವಿ ನೋಡೋದೇ ಕಡಿಮೆ. ಅವರನ್ನ ನಮ್ಮ ಕಾರಲ್ಲೇ ಮನೆಗೆ ಕರೆತಂದಿದ್ದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಹರ್ಷ ನೀವು ಸೌಮ್ಯಾನ ಅಣ್ಣ ಅಥವಾ ತಮ್ಮನಾ?! ನಾನು ಮುಕ್ತ ದಲ್ಲಿ ಮಂಗಳತ್ತೆ ಪಾತ್ರ ಮಾಡೋದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಹ್...ಅಂದ್ರೆ ಕಿತ್ತಳೆ ಬಟ್ಟೆಯವರು ನೀವೇ...!! ಪ್ರೊಫೈಲ್ ಚಿತ್ರದಲ್ಲಿ ಬೇರೇನೆ ಕಾಣ್ತೀರಿ

ನಾನು ಅಣ್ಣ.... ನಾನು ಅವಳಿಗಿಂತ ಚಿಕ್ಕವನಾಗಿ ಕಾಣಿಸಿದ್ದೆನಾ ? ನಾನು ಧನ್ಯ.
ತಂಗಿಯ ಹೆಸರಿನಿಂದ ಜನ ನನ್ನನ್ನು ಗುರುತಿಸುತ್ತಾರೆ. ಡಬಲ್ ಧನ್ಯ.....!!!!
ಬೇಜಾರು ಮಾಡ್ಕೋಬೇಡಿ.. ನಾನು ಸಿರಿಯಲ್ ನೋಡೋದಿಲ್ಲ. ಆದ್ರಿಂದ ನೀವು ಪಾತ್ರದ ಹೆಸರು ಹೇಳಿದ್ರೂ ಗೊತ್ತಾಗಲ್ಲ...
ಅಂದ ಹಾಗೆ ಬೆಣ್ಣೆ ದೋಸೆ ಹೇಗನಿಸ್ತು ನಿಮಗೆ ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಷ್ಟೆನು ನಿಮ್ಮನ್ನ ನೀವೆ ಮೆಚ್ಕೋಬೇಕಿಲ್ಲ, ನೀವು ಸೌಮ್ಯಾನ ಅಣ್ಣನ ಹಾಗೇನೇ ಕಾಣೋದು.. :-) ಬೆಣ್ಣೆ ದೋಸೆ ಮತ್ತು ನಿಮ್ ತಾಯಿ ನನ್ನ ಪಕ್ಕಾನೇ ಕೂತು ಫೋಟೊ ತೆಗಿಸ್ಕೋಬೇಕು ಅಂದದ್ದು ಎರಡೂ ತುಂಬಾ ಖುಷಿ ಕೊಟ್ಟ ಮತ್ತು ಮರೆಯದ ಸಂಗತಿಗಳು. ನಿಜಕ್ಕು ನಿಮ್ಮ ತಂಗಿ ಒಳ್ಳೆಯ ಲೇಖಕಿ. ಹೌದೂ ಆಕೆ ಯಾಕೆ ಇನ್ನೂ ಸಂಪದಕ್ಕೆ ಬಂದಿಲ್ಲಾ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬೆಣ್ಣೆದೋಸೆ ಯಾರದ್ರೂ ಮೆಚ್ಚಿಕೊಬೇಕು ಬಿಡಿ.... ಅವಳು ಸಕತ್ ಬಿಜಿ... ಕಾಲೇಜು, ಸಿರಿಯಲ್ ಸ್ಕ್ರಿಪ್ಟು ಅಂತ.... ನಾನೇನೋ ಕೆಲಸ ಇಲ್ದೊನು. ಕೆಲ್ಸಕ್ಕೆ ಬಾರದ್ದು ಬರೀತೀನಿ.

<<ನಿಜಕ್ಕು ನಿಮ್ಮ ತಂಗಿ ಒಳ್ಳೆಯ ಲೇಖಕಿ>>
ಯಾರ ತಂಗಿ ಹೇಳಿ ;)

ನನ್ನ ಗೆಳೆಯನೂ ನಿಮ್ಮನ್ನ ತೋರಿಸಿ ಇವ್ರು ಸಕ್ಕತ್ತಾಗಿ ಆಕ್ಟಿಂಗ್ ಮಾಡ್ತಾರೆ ಅಂದಿದ್ದ. ನಿಮ್ಮ ಅಭಿನಯ ನೋಡ್ಲಿಕ್ಕಾದ್ರು ಒಂದು ಸಾರಿ ಆ ಸಿರಿಯಲ್ ನ ನೋಡ್ತೀನಿ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮುಕ್ತದಲ್ಲಿ ಮಂಗಳತ್ತೆ ಪಾತ್ರ ;)

ಮಳೆಯಿಂದಾಗಿ ನಾಟಕ ಮಿಸ್ ಆಯ್ತು :) ಒಳ್ಳೆಯ ಫೊಟೊಗಳು HPN !!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಳೆಯಿಂದಾಗಿ ನಮಗೂ ನಾಟಕ ಮಿಸ್ ಆಗೋದರಲ್ಲಿತ್ತು. ಫೋಟೋಗಳು ಹಲವರಿಗೆ ಇಷ್ಟವಾದದ್ದು ಖುಷಿಕೊಟ್ಟಿತು. :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹರಿಯವರೆ,
ಫೋಟೋಗಳಿಗೆ ಮತ್ತು ಬರಹಕ್ಕೆ ಧನ್ಯ,

ಜಯಲಕ್ಶ್ಮಿ, ನಿಮಗೆ ನಾಟಕದ ಯಶಸ್ಸಿಗೆ ಅಭಿನಂದನೆ (ನನಗು ನಾಟಕ, ಕಥೆ ಎಲ್ಲದರ ಬಗ್ಗೆ ಹುಚ್ಚು ಜಾಸ್ತಿ). ನಾನು ಜುಲೈ ನಲ್ಲಿ ಬೆಂಗಳೂರಿಗೆ ಬರುತ್ತೇನೆ, ನಿಮ್ಮೆಲ್ಲರನ್ನ ಮತ್ತು ಸಾಧ್ಯವಾದರೆ, ನಿಮ್ಮ ನಾಟಕವನ್ನು ನೋಡುವ ಆಸೆ. ನಿಮ್ಮ ಸಂಪರ್ಕ ಮಾಹಿತಿ ಕೊಡಿ (ಸಾಧ್ಯವಾದರೆ).

ನನ್ನಿ ಮತ್ತೊಮ್ಮೆ,
ಮೀನಾ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನಿ ಮೀನಾ.. ಖಂಡಿತ ಭೇಟಿಯಾಗೋಣ. ನನ್ನ ಮೆಲ್ ಐಡಿ ಕೊಡ್ತೀನಿ ನಿಮಗೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.