ಸಂಪದ ಸದಸ್ಯರೊಂದಿಗೆ ಅನಿವಾಸಿಯವರ "ಮುಖಾಮುಖಿ"

0


"ಮುಖಾಮುಖಿ"

ನಿವಾರ ಬೆಳಿಗ್ಗೆಗೆ ಮೊಬೈಲಿನಲ್ಲಿ (ಎಂದಿನಂತೆ)ಏಳೆಂಟು ಅಲಾರ್ಮ್ ಇಟ್ಟುಕೊಂಡಿದ್ದೆ.ರಾತ್ರಿ ಸುಮಾರು ಮೂರುವರೆ ಗಂಟೆಗೆ ಮಲಗಿದ್ದರೂ ಬೆಳಿಗ್ಗೆ ಮೂರನೇ ಅಲಾರ್ಮಿಗೇ ಅದು ಹೇಗೋ ಎಚ್ಚರವಾಗಿಬಿಟ್ಟಿತ್ತು. ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲವಿದ್ದರೂ ಅಷ್ಟು ಬೇಗ ಎಚ್ಚರವಾಗಿದ್ದು ಬಹುಶಃ ಬೆಳಿಗ್ಗೆ ಎಚ್ಚರವಾಗದೆ ಆ ದಿನದ ಈವೆಂಟ್ ಮಿಸ್ ಮಾಡಿಕೊಂಡ್ರೆ ಅವಿವೇಕದ ಕೆಲಸವಾಗತ್ತೆ ಎಂಬ ವಿಷಯ ತಲೆಯಲ್ಲಿದ್ದದ್ದರಿಂದ.

ಸುಮಾರು ಎರಡು ವಾರಗಳ ಹಿಂದೆ ಅನ್ಸತ್ತೆ - ಸುದರ್ಶನ್ ಆಸ್ಟ್ರೇಲಿಯದಿಂದ ಫೋನ್ ಮಾಡಿದ್ದಾಗ "ಬೆಂಗ್ಳೂರಿಗೆ ಬರ್ತಿದ್ದೀರಾ? ಹಾಗಾದ್ರೆ ನಿಮ್ಮ ಸಿನಿಮಾ ಸ್ಕ್ರೀನಿಂಗ್ ಮಾಡ್ಬೋದ್ರೀ... ಚೆನ್ನಾಗಿರತ್ತೆ!" ಅಂದಿದ್ದೆ. ಇವರು ಮಾಡಿರುವ ಸಿನಿಮಾ ಹೇಗಿರಬಹುದು ನೋಡಬೇಕಲ್ಲ ಎಂಬ ಕುತೂಹಲದಿಂದ ಹುರಿದುಂಬಿಸಿದ್ದೆ. ಹೀಗೆ ಸ್ಕ್ರೀನಿಂಗ್ ಮಾಡಿಸಿ ಸುದರ್ಶನರ ಜೋಬಿಗೆ ಸ್ವಲ್ಪ ಕತ್ತರಿ ಹಾಕಿಸಿದರೂ ಮಾಡಿದ್ದು ಬಹಳ ಒಳ್ಳೆಯ ಕೆಲಸ ಎಂದನಿಸಿದ್ದು ನನಗೆ ಸಿನಿಮಾ ನೋಡಿದ ಮೇಲೆ.

"ಅನಿವಾಸಿ"ಯೆಂದೇ 'ಸಂಪದ'ದಲ್ಲಿ ಚಿರಪರಿಚಿತರಾಗಿರುವ ಸುದರ್ಶನ್ ನಿರ್ದೇಶಿಸಿರುವ ಕನ್ನಡ ಚಿತ್ರದ ಹೆಸರು "ಮುಖಾಮುಖಿ".ಚಿತ್ರದ ಡೈಲಾಗಿಗೆ ೨೦೦೬ರ ರಾಜ್ಯ ಪ್ರಶಸ್ತಿ ಬಂದಿದೆ. ಶನಿವಾರ "ಸುಚಿತ್ರ"ದಲ್ಲಿ ಈ ಚಿತ್ರದ ಸ್ಕ್ರೀನಿಂಗ್ ಕಾರ್ಯಕ್ರಮ ಇಟ್ಟುಕೊಂಡಿದ್ದೆವು.

ಸಿನಿಮಾ ಇತ್ತೀಚೆಗೆ ನಾ ನೋಡಿದ ಕನ್ನಡ ಸಿನಿಮಾಗಳಿಗಿಂತ ಎಷ್ಟೋ ಉತ್ತಮವಾಗಿದೆ ಎಂದು ನನಗನಿಸಿತು. ಬಜೆಟ್ ಹಾಗೂ ತಂತ್ರಜ್ಞಾನದ ಮಿತಿಯಲ್ಲಿ ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ. ಸಿನಿಮಾ ನೋಡಲು ಬಂದವರ ಸಂಖ್ಯೆ ಬೆಳಿಗ್ಗೆ ಇಟ್ಟುಕೊಂಡ ಸ್ಕ್ರೀನಿಂಗ್ ಮಟ್ಟಿಗೆ ಪರವಾಗಿರಲಿಲ್ಲ. ಬಂದವರು ಸಿನಿಮಾ ನೋಡಿ ಸಂತೋಷಪಟ್ಟದ್ದು ಕಾರ್ಯಕ್ರಮದ ಯಶಸ್ಸನ್ನು ಬಿಂಬಿಸಿದಂತಿತ್ತು.

"mukhamukhi"

ಸಿನಿಮಾ ಮುಗಿದ ನಂತರ ಸುದರ್ಶನ್ ವೀಕ್ಷಕರು ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು. ಸಿನಿಮಾ ನೋಡಿದ ಮೇಲಂತೂ ಇಂತಹ ಸಿನಿಮಾ ಯಾಕೆ ಕರ್ನಾಟಕದಲ್ಲಿ ತೆರೆ ಕಾಣುವುದು ಕಷ್ಟ ಎಂಬುದರ ಬಗ್ಗೆ ಎಲ್ಲರಲ್ಲೂ ಕುತೂಹಲವಿತ್ತು. ಹಾಡು ಕುಣಿತವಿಲ್ಲದ ಇಂತಹ ಗಂಭೀರ ಚಿತ್ರಗಳಿಂದ ಸಿನಿಮಾ ವಿತರಕರು ದೂರ ಓಡುವ ವಿಷಯವನ್ನು ಸುದರ್ಶನ್ ಸೂಕ್ಷ್ಮವಾಗಿ ವಿವರಿಸಿದರು (ಸಿನಿಮಾ ವಿತರಕರು ಒಲ್ಲೆ ಎಂದರೆ ಚಿತ್ರ ತೆರೆಕಾಣುವುದೇ ಇಲ್ಲ. ತೆರೆ ಕಾಣದ ಚಿತ್ರ ಹೆಚ್ಚು ಜನರನ್ನು ತಲುಪದೇ ಹೋಗಿಬಿಡುತ್ತದೆ).

ನಂತರ ಇಸ್ಮಾಯಿಲ್ ಮತ್ತು ನಾನು ಇಬ್ಬರೂ ಸಂಪದ ಫೌಂಡೇಶನ್ ಬಗ್ಗೆ ಮಾತನಾಡಿದೆವು. ನಾನು ತೊದಲುತ್ತ ಸ್ವಲ್ಪ ಅದೂ ಇದೂ ನಮ್ಮ ಸಮುದಾಯದ ಬಗ್ಗೆ ಹೇಳಿದೆ. ನಿದ್ರೆಯಿಲ್ಲದ ಹ್ಯಾಂಗ್ ಓವರ್ ಕಾಡಿತ್ತು. ಇಸ್ಮಾಯಿಲ್ ಬಹಳ ಚೆನ್ನಾಗಿ ಫೌಂಡೇಶನ್ನಿನ ಉದ್ದೇಶದ ಬಗ್ಗೆ, ಮುಂದಿನ ಯೋಜನೆಗಳ ಬಗ್ಗೆ ತಿಳಿಸಿದರು.

ಬೆಳಗ್ಗೆ ಮಧ್ಯಾಹ್ನದೆಡೆಗೆ ಓಡುತ್ತಿದ್ದಂತೆ, ನನ್ನಂತೆ "ಮಲಗೋದು ಲೇಟು ಏಳೋದೂ ಲೇಟು" ಅನ್ನೋ ಜೀವನಶೈಲಿಗೆ ಅಂಟಿಕೊಂಡ ಹಲವರು "ಲೇಟಾಯ್ತು, ಬರಲಾಗಲಿಲ್ಲ" ಎಂದು ಮೆಸೇಜ್ ಮಾಡಿದರು, ಕೆಲವರು ಫೋನ್ ಮಾಡಿ ತಿಳಿಸಿದರು. ಇವರಿಗೆಲ್ಲ ಉತ್ತರಿಸುವಾಗ ನಾನು ಮಾತ್ರ ಇವತ್ತು ಈ ಕಾರ್ಯಕ್ರಮ ಮಿಸ್ ಮಾಡಿಕೊಳ್ಳಲಿಲ್ಲ ಎಂಬ ಖುಷಿಯಲ್ಲಿ ಹಲ್ಲು ಕಿರಿದಿದ್ದೆ. ಒಂದು ವಾರ ಮುಂಚಿತ ಅನೌನ್ಸ್ ಮಾಡಿದ್ದು ತಡ ಆಯ್ತು ಎಂದೂ ಸಲಹೆಗಳು ಕೇಳಿಬಂದವು. ಈ ಸಾರಿ ಹೆಚ್ಚು ಸಮಯವಿಲ್ಲದ್ದರಿಂದ ಅಡಾಉಡಿಯಲ್ಲಿ ಮಾಡಿದ್ದಾಯ್ತು - ಮುಂದೊಮ್ಮೆ ಸ್ಕ್ರೀನಿಂಗ್ ಹಮ್ಮಿಕೊಂಡರೆ ಇನ್ನೂ ಮುಂಚಿತವಾಗಿ ಅನೌನ್ಸ್ ಮಾಡಬಹುದು.

"ಮುಖಾಮುಖಿ"

ಒಟ್ಟಾರೆ ಸಂಪದದ ಹಲವು ಸದಸ್ಯರನ್ನು ಅವರ ಯೂಸರ್ ಐಕಾನ್ ನೋಡಿ ಅಥವ ಯೂಸರ್ ಐಡಿ ನೋಡಿ ಈ ಸೈಬರ್ ಜಗತ್ತಿನಲ್ಲಿ ಗುರುತಿಸುತ್ತಿದ್ದ ಎಲ್ಲರಿಗೂ ಅವರುಗಳ ಮುಖಪರಿಚಯ ಆಯ್ತು. ಒಂದು ಉತ್ತಮ ಸಿನಿಮಾ ನೋಡುತ್ತ ಕಳೆದ ಸಮಯ ನೆನಪಿನ ಪುಟದಲ್ಲಿ (ಜೊತೆಗೆ ಈ ಬ್ಲಾಗಿನಲ್ಲಿ) ಅಚ್ಚಾಯ್ತು.

 

ಚಿತ್ರಗಳು: [:http://www.sampada.net/user/sunil_jayaprakash|ಸುನೀಲ]

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಒಂದು ಅರ್ಥಪೂರ್ಣ ಪ್ರಯತ್ನ ಹಾಗೂ ಅದರಕುರಿತ ಚರ್ಚೆಗೆ ಆಸ್ಪದ ನೀಡಿದ ಸಂಪದಕ್ಕೂ ಅನಿವಾಸಿಗಳಿಗೂ ಧನ್ಯವಾದ. ಹಣದ ಮಿತಿ, ಅರ್ಥ ಪೂರ್ಣ ಸಿನೆಮಾದ ದ್ವೇಶಿಯಾದಂಥಾ ವ್ಯವಸ್ಥೆ ನಮ್ಮಲ್ಲಿರುವಾಗ ಇಂಥಾ ಚಿತ್ರಗಳ ನಿರ್ಮಾಣ ನಿಜಕ್ಕೂ ಶ್ಲಾಘನೀಯವೇ. ಅನಿವಾಸಿಗಳ ಮುಂದಿನ ಕೃತಿಗೆ ಕಾಯುತ್ತಿರುವವರಲ್ಲಿ ನಾನೂ ಒಬ್ಬ.

Abhaya Simha
www.rlp.in

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಭಯ್ ನಿಮ್ಮಂನ್ನ ಒಂದು ಕೇಳೋದಿತ್ತು, ಕಾರ್ನಾಡರ ಒಂದಾನೊಂದು ಕಾಲದ ವಿಮರ್ಷೆ ಬರೀತೀರ?

best action movie in kannada of all time and perhaps the coolest tribute to ಕುರೋಸಾವ ಸೆವನ್ನ್ ಸಮುರಾಯಿ ever in any language.
ನಮಗೆ ronin ಗೆ ಸಮ ಪದ ಬೇಕು ಆದರೆ but who knew ಸಮುರಾಯಿ == ಬಂಟ!!!

ಸ್ವಾಳಿಮಗಂದು ಎರಡು ತಿಂಗಳಿಂದ ಸುಂದರ ಕ್ರುಶ್ಣ ಅರಸ್ ಪೆರುಮಾಡಿ, ಚಂದಾವರ್ಕರನ ಸಂಗೀತ, ಜೊಶಿ ಡಯಲಾಗೂ ನನ್ನ ತಲೆ ಒಳಗಿಂದ ಹೊಗವಲ್ಲದು.

ಚಂದಾವರ್ಕರನ ಸಂಗೀತ: ಹಾಂ... ಟ್ರಕ್ ಟ್ರಕ್ಕ್ ... oh! man so much of the suspense is all about the music in the background. coolest stuff i have heard ever.

and that scene where ಪೆರುಮಾಡಿ begs ಗಂಡುಗಲಿ to kill him, its been giving me sleepless nights. ದೇವರಾಣೆ, ಏಷ್ಟೊಂದ್ ರಾತ್ರಿ ಕನಸಲ್ಲಿ ಬಂದಿದೆ ಆ ಸೀನು, ಕ್ಯಾಮೆರ ಅರಸು ಮುಖದಮೇಲೆ. ಅವರ ಕಣ್ಣು. its just too much chivalry. (ಉಳಕೀ ಜನಕ್ಕೆ--- ಹಿರೇಬಂಟ ಪೆರುಮಾಡಿನ ಯುವ ಬಂಟ ಗಂಡುಗಲಿ ಸೆರೆ ಹಿಡೀತಾನೆ, ಹಿಡಿದು ಹೊಗು ಅಂತ ಬಿಡ್ತಾನೆ, ಹೊಗು ಅಂದ್ರೆ ಎಲ್ಲಿ ಹೊಗಬೇಕು ಹಿರೇಬಂಟ? ದಣಿ ಮುಂದೆ ನಿಲ್ಲಕ್ಕಾಗುತ್ತ? ಯಾವ ಮುಖ ಇಟ್ಟ್ಕೊಂಡು ಹೊಗ್ತಾನೆ ದಣಿ ಮುಂದೆ? ಅದಕೆ, ಪೆರುಮಾಡಿ ಬೇಡ್ಕೊತಾನೆ, ಕಣ್ಣಲ್ಲಿ ನೀರು ಬರೂದೊಂದು ಬಾಕಿ, ಗಂಡುಗಾಲಿ ನನ್ನ ಅಳಿಸಿಬಿಡು, ಸುಮ್ಮ್ನೆ ಬಿಡಬ್ಯಾಡ ಅಂತ. ಯಪ್ಪ ಸಿವಾ ಯಂತಾ ಸೀನು!! ಹೊಟ್ಟೆಲಿ ಚುರ್ರ್ ಅನ್ನುತ್ತೆ.

ಬಸವಾ!! ತಲೆ ಕೇಡಸ್ಕೋಂಡು ಕುತೀದೀನಿ, ಇಂತ ಫಿಲಿಂ ಕನ್ನಡದಲ್ಲಿ ಇದ್ರೂ ಕ್ಯಾರೆ ಅನ್ನೋರಿಲ್ಲ ಅಂತ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

’೭೮ ಫಿಲಿಂ ’೦೭ ಅಲೂ ಮಿಂಚುತ್ತೆ!! ದಾಂಡೆಲಿ ಸೆರೆ ಹಿಡಿದ ಎ.ಕೇ. ಬೀರ್ ಕ್ಯಾಮೆರ. ****** ಒಂದು ಪ್ರಿಂಟಾದ್ರು ಸರೀಗಿಟ್ಟಿಲ್ಲ. ಯಾವುದೊ ಡಬ್ಬ ಫಿಲಿಂ ಎಲ್ಲ ಉಳಸ್ಕೋಂಡು ಕೂತಿದಾರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರೀತಿಯ ಹರಿಯವರೇ,
ಇ೦ತಹ ಒ೦ದು ಕಾರ್ಯಕ್ರಮ ಹಮ್ಮಿಕೊ೦ಡಿದ್ದಕ್ಕೆ ತಮಗೂ, ಇಸ್ಮಾಯಿಲ್ ಅವರಿಗೂ ಹಾಗೂ 'ಅನಿವಾಸಿ'ಯವರಿಗೂ ತು೦ಬಾ ದನ್ಯವಾದಗಳು. ಈ ಕಾರ್ಯಕ್ರಮ ಸ೦ಪದದ ಕೆಲವು ಸದಸ್ಯರುಗಳ ಜೊತೆಗೆ 'ಮುಖಾಮುಖಿ'ಗೆ ಅನುವು ಮಾಡಿಕೊಟ್ಟಿತು.

ಇನ್ನು ಸಿನಿಮಾ ಬಗ್ಗೆ ಹೇಳುವುದಾದರೆ, ನನಗೆ ಬಹಳ ಇಷ್ಟವಾದದ್ದು ಸಿನಿಮಾದ ಕಥಾವಸ್ತು ಹಾಗೂ 'ದತ್ತಣ್ಣ' ನವರ ಅಬಿನಯ. ಎಲ್ಲ ನಟರೂ ಬಹಳ ಚಿನಾಗಿ ನಟಿಸಿ ಪಾತ್ರಗಳಿಗೆ ಜೀವ ತು೦ಬಿದ್ದಾರೆ.
ಅ೦ತೂ ಒ೦ದು ಅರ್ಥಪೂರ್ಣ ಸಿನಿಮಾ ವೀಕ್ಷಣೆ ಹಾಗೂ ಸ೦ಪದ ಸದಸ್ಯರುಗಳ ಮುಖಾಮುಖಿ ಈ ವಾರಾ೦ತ್ಯವನ್ನಆರ್ಥಪೋರ್ಣಗಿ ಕಳೆಯುವ೦ತೆ ಮಾಡಿತು.

ಮತ್ತೊಮ್ಮೆ ದನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂಪದ ಈ ಕಾರ್ಯಕ್ರಮ ಹಮ್ಮಿಕೊಂಡದ್ದಕ್ಕೆ ನಾನು ಋಣಿ.
ಅಂದು ಎಲ್ಲರ ಜತೆ ನಡೆದ ಚರ್ಚೆ ನಂತರ ಊಟ ಮಾಡುವಾಗಲೂ ನಿಲ್ಲದೆ ಮುಂದುವರೆದಿದ್ದು - ನನ್ನಂಥ ದೂರ ದೇಶದಲ್ಲಿ ಇರೋರಿಗೆ ತುಂಬಾ ಖುಷಿ ಕೊಡೋ ವಿಷಯ.
ಇನ್ನು ತುಂಬಾ ದಿನದವರೆಗೂ ಸವಿಯೋದಂತು ಖಂಡಿತ.

ತರಲೆಸುಬ್ಬರೆ-
"ಒಂದಾನೊಂದು ಕಾಲದಲ್ಲಿ" ವಿಸಿಡಿ ಸಿಗತ್ತೆ. ನಾನು ಒಂದೆರಡು ವರ್ಷದ ಹಿಂದೆ ಹುಡುಕಿ ತಂದಿದ್ದೆ. ನನಗೂ ಆ ಚಿತ್ರ ತುಂಬಾ ಹಿಡಿಸಿತು. ನಮ್ಮಲ್ಲಿ ಚಲನಚಿತ್ರವನ್ನು ಬರೀ ಇಂಡಸ್ಟ್ರಿಯಾಗಿ ಮಾತ್ರ ನೋಡಿದರೆ ಆ ಚಿತ್ರಗಳನ್ನು ನಾವು ಬಹು ಬೇಗ ಮರೀತೀವಿ. ಅದನ್ನು ನಮ್ಮ ಸಂಸ್ಕೃತಿಯ ಕುರುಹು ಎಂದು ಗಮನಿಸಿ ಒಂದು ಕಡೆ ಒಟ್ಟು ಹಾಕುವ ಕೆಲಸ ಆಗಬೇಕು. ಎಪ್ಪತ್ತರ ದಶಕದ ಇನ್ನೂ ಹಲವು ಚಿತ್ರಗಳೂ ಹೀಗೆ ನಾಪತ್ತೆಯಾಗಿಬಿಟ್ಟರೆ ಚಿತ್ರಪರಂಪರೆಯ ನೆನಪು ನಮಗೆ ಇಲ್ಲವಾಗುವುದು ಖಂಡಿತ. ವಿಸಿಡಿಗಳಿಂದಾದರೂ ಒಂದಷ್ಟು ಚಿತ್ರಗಳು ಈಗ ಸಿಗಬಹುದು...
ಅಲ್ಲದೆ, ಆಗಾಗ ಕನ್ನಡದ ಒಳ್ಳೆಯ ಹಳೆಯ ಚಿತ್ರಗಳ ಉತ್ಸವ ನಡೆದರೆ ತೆರೆಯ ಮೇಲೆ ನೋಡುವ ಅವಕಾಶವೂ ಸಿಗುತ್ತದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಿನಿಮಾ ಸಿಗದಿದ್ದರೂ, ಒಳ್ಳೆ ಮಂದಿಯನ್ನ ನೋಡದೇ ಬಿಡಲಿಲ್ಲ ಅನ್ನುವ ಸಂತಸ ನನ್ನದು : )

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಸಿನಿಮಾನೂ ನೋಡಲಿಲ್ಲಾ. ಊಟಾ ಕೂಡಾ ಮಾಡಲಿಲ್ಲಾ,, ಮಾತು ಕೂಡಾ ಆಡಲಿಲ್ಲಾ...ಅ೦ದರೇ ಕಣ್ಣೂ, ಹೊಟ್ಟೆ, ಕಿವಿ,, ಎಲ್ಲಕ್ಕೂ ಮೋಸವಾಯ್ತು... ಕೊನೆಗೆ ಎದೆಗೆ ಮೋಸವಾಗಿಲ್ಲಾ ಅನ್ನೋದು ನೆಮ್ಮದಿ ತ೦ದಿರಬೇಕು.. ಅಲ್ವೇ ??

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಸಂಪದ,
ನಿಮ್ಮ ಸಂಪದ ತಂಡವನ್ನು ಎಷ್ಟು ಹೊಗಳಿದರೂ ಸಾಲದು. ಕನ್ನದವಿಲ್ಲದ ಈ ದೂರದ ದೇಶದಲ್ಲಿ ದಿನಾಲೂ ಕನ್ನಡದ ಸಾಹಿತ್ಯ, ಹರಟೆ, ಚರ್ಚೆಗಳನ್ನು ಓದುವುದು ಎಂಥಹ ಖುಷಿಯ ಕೆಲಸವೆಂದು ಕರ್ನಾಟಕದಲ್ಲಿರುವವರಿಗೆ ಅರ್ಥವಾಗುವುದು ಸಾದ್ಯವಿಲ್ಲ. ನಾನೂ ಚಕ್ಕೆಂದು ಬ್ರಿಟನ್ನಿನಿಂದ ಹಾರಿ ಸಂಪದ ಗೆಳೆಯರ ಕೂಟಕ್ಕೆ ಸೇರುವಂತಿದ್ದರೆ? ಮುಖಾಮುಖಿಯೂ ಸಿಗುತ್ತಿತ್ತು, ನಿಮ್ಮೆಲ್ಲರ ಭೇಟಿಯೂ ಆಗುತ್ತಿತ್ತು!
ಕೇಶವ
Visit my blog:
http://kannada-nudi.blogspot.com

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.