ಪರಶುರಾಮ ಸೃಷ್ಟಿ

2.5

ಪರಶುರಾಮ

ಸೋಮೇಶ್ವರ ಬೀಚಿನ ಬಳಿ ಪರಶುರಾಮ ವಿಗ್ರಹ.

 

ಪರಶುರಾಮ ಕರಾವಳಿಯ ದೈವ. ಕರಾವಳಿಯನ್ನು ಪರಶುರಾಮ ಸೃಷ್ಟಿಯೆಂದು ಕರೆಯುತ್ತಾರಂತೆ. ಸಮುದ್ರವನ್ನು ಹಿಂದಕ್ಕೆ ಅಟ್ಟಿ ಕರಾವಳಿ ಸೃಷ್ಟಿಸಿದ ಪರಶುರಾಮ ಕರಾವಳಿಯನ್ನು ನೋಡಿಕೊಳ್ಳುತ್ತಿರುವನು ಎಂದು ಅಲ್ಲಿದ್ದ ಪುರೋಹಿತರೊಬ್ಬರು ಹೇಳುತ್ತಿದ್ದರು.

ನಿಮಗೆ ಈ ಕಥೆ ಗೊತ್ತಿದೆಯೇ? ಗೊತ್ತಿದ್ದರೆ ಬರೆದು ತಿಳಿಸಿ!

 

ಚಿತ್ರ: ಹರಿ ಪ್ರಸಾದ್ ನಾಡಿಗ್

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಪರಶುರಾಮನ ಅಪ್ಪನ ಆಶ್ರಮದಲ್ಲಿ ಕಾಮಧೇನು ಇರುತ್ತೆ. ಕಾರ್ತಿವೀರ್ಯಾರ್ಜುನ ಮಹಾ ಕ್ಷತ್ರಿಯ. ಒಮ್ಮೆ ಅವನ ಅಗಾಧ ಸೈನ್ಯ ಜಮದಗ್ನಿ ಆಶ್ರಮದ ಕಡೆ ಬಂದಾಗ ಆ ದೊಡ್ಡ ಸೈನ್ಯಕ್ಕೆಲ್ಲ ಈ ಅಶ್ರಮದಲ್ಲಿ ಮೃಷ್ಣಅನ್ನ ಬೋಜನ ಸಿಗುತ್ತೆ. ಯಕಶ್ಚಿತ್ ಒಬ್ಬ ಸನ್ಯಾಸಿ ತನ್ನೆಲ್ಲ ದೊಡ್ಡ ಸೈನ್ಯಕ್ಕೆ ಹೇಗೆ ಇಷ್ಟು ಉಪಚಾರ ಮಾಡಿದ ಅಂತ ವಿಚಾರಿಸಿದಾಗ ಕಾರ್ತಿವೀರ್ಯಾರ್ಜುನನಿಗೆ ಆಶ್ರಮದಲ್ಲಿನ ಕಾಮಧೇನು ಇದನ್ನು ಸಾಧ್ಯ ಮಾಡಿತು ಅನ್ನೋದು ಗೊತಾಗುತ್ತೆ. ಸರಿ ಈ ಸಹಸ್ರಬಾಹುವಿಗೆ ಕಾಮಧೇನು ಮೇಲೆ ಕಣ್ಣು ಬಿದ್ದು ಅದನ್ನು ತನ್ನ ಆಸ್ತಾನಕ್ಕೆ ಕೊಡಲು ಕೇಳ್ತಾನೆ. ಜಮದಗ್ನಿ ಒಪ್ಪಲ್ಲ. ಬಲಾತ್ಕಾರವಾಗಿ ಕಾಮಧೇನುವನ್ನು ಕೊಂಡೊಯ್ಯಲು ಪ್ರಯತ್ನಿಸಿದಾಗ ಈ ಕಾಮಧೇನು ಇಡೀ ಸೈನವನ್ನೇ ನಾಶ ಮಾಡುತ್ತೆ. ಉಪಾಯವಾಗಿ.. ಕಾಮಧೇನುವನ್ನು ಕೊಂಡೊಯ್ಯಲು ದಾರಿ ಯಾವುದು ಎಂದು ರೇಣುಕೆಯನ್ನು ಕೇಳಿದಾಗ ಕಾಮಧೇನು ಜಮದಗ್ನಿ ಇರುವಲ್ಲಿ ಮಾತ್ರ ಇರುತ್ತೆ ಅನ್ನೋದು ರಹಸ್ಯ ಹೇಳ್ತಾಳೆ. ಕಾರ್ತಿವೀರ್ಯಾರ್ಜುನ ಜಮದಗ್ನಿಯಾ ತಲೆ ಕತ್ತರಿಸಿಕೊಂಡು ತೆಗೆದುಕೊಂಡು ಹೋಗ್ತಾನೆ. ಕಾಮಧೇನು ಅವನನ್ನು ಹಿಂಬಾಲಿಸುತ್ತೆ. ..................... ಪರಶುರಾಮ ಆಶ್ರಮಕ್ಕೆ ವಾಪಸಾದಾಗ ಆತನಿಗೆ ರೇನುಕೆಯಿಂದ ವಿಷ್ಯ ತಿಳಿಯುತ್ತೆ. ಕೊನೆಗೆ ಅವನು ಸಹಸ್ರವೀರ್ಯನನ್ನು ಕೊಲ್ಲುತ್ತಾನೆ. ಅಷ್ಟೇ ಅಲ್ಲ ಆತನಿಗೆ ಇಡೀ ಕ್ಷತ್ರಿಯ ಕುಲದ ಬಗ್ಗೆಯೇ ಸಿಟ್ಟು ಬರುತ್ತೆ. ಇಡೀ ಭೂಮಂಡಲವನ್ನು ೨೪ ಸಾರಿ ಪ್ರದಕ್ಷಿಣೆ ಹಾಕಿ ಎಲ್ಲ ಕ್ಷತ್ರಿಯರನ್ನು ಮಟ್ಟ ಹಾಕುತ್ತಾನೆ. ( ರಾಮನೇ ಕೊನೆಯವ!). ಕೊನೆಗೆ ತನ್ನೆಲ್ಲ ಭೂಮಿಯನ್ನು ದಾನ ಮಾಡುತ್ತಾನೆ. ................... ಕೊನೆಗೆ ತಪಸ್ಸಿಗೆ ನಿಲ್ಲಲು ಹೊರಟಾಗ ತೆನ್ನೆಲ್ಲ ಭೂಮಿಯನ್ನು ದಾನ ಮಾಡಿರುವುದು ಗೊತ್ತಾಗುತ್ತೆ. ಆಗ ತನ್ನದ ನೆಲವನ್ನು ಮಾಡಿಕೊಳ್ಳಲು ತನ್ನ ಪರಶುವನ್ನು ಸಮುದ್ರದೆಡೆಗೆ ಎಸೆಯುತ್ತಾನೆ. ಸಮುದ್ರ ಹಿಂದೆ ಸರಿದು ಜಾಗ ಆಗುತ್ತೆ. ಅಲ್ಲಿಯ ಆತ ತಪಸ್ಸಿಗೆ ನಿಲ್ತಾನೆ. ಇದೆ ಕಾರಣಕ್ಕೆ ಕೇರಳವನ್ನು ( ಮತ್ತು ಕರಾವಳಿಯನ್ನು) "Gods own country " ಅಂತಾರೆ!!! .................. ನಾನು ತುಂಬಾ ಚಿಕ್ಕವನಾಗಿದಾಗೆ ಓದಿದ ಕಥೆ. ಸಂಕ್ಷಿಪ್ತಾವಾಗಿ ಇಲ್ಲಿ ಇಟ್ಟಿದ್ದೇನೆ. ಇನ್ನೂ ವಿವವರಾಗಿ ಬರೆಯಬಹುದು. ನೋಡೋಣ ಯಾರದ್ರೂ ಬರೀತರೆನೋ! .... ಕೊಸರು... cutting edge tehnology ಮೇಲೆ ಕೆಲಸ ಮಾಡಿದ ಮೊದಲಿಗ ನಮ್ಮ ಪರಶುರಾಮ ಅನೋ theme ಇಟ್ಕೊಂಡು ತಮಷೆ ಬರಹ ಬರೀಬೇಕು ಅನ್ಕೊಂದಿದ್ದೋನು ..ಯಾಕೋ ಅದು ಇನ್ನೂ ಕೈ ಕುದುರಿಲ್ಲ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<<ಇದೇ ಕಾರಣಕ್ಕೆ ಕೇರಳವನ್ನು ( ಮತ್ತು ಕರಾವಳಿಯನ್ನು) "Gods own country " ಅಂತಾರೆ!!! >>> ಸುಳ್ಳು! ಇದು ಕೇರಳದ ಪ್ರವಾಸೋದ್ಯಮ ಇಲಾಖೆಯ 'ಘೋಷವಾಕ್ಯ'ವಾಗಿತ್ತು. (ಮಲೆಯಾಳದಲ್ಲಿ ಹಾಗೆಯೇ ಹೇೞುತ್ತಾರೆ, ನನ್ನ ಸಂಸ್ಕೃತ ಪ್ರೀತಿಯಿನ್ದ ನಾನು ಹೇೞುತ್ತಿರುವುದಲ್ಲ.) ಕೇರಳಿಗರಿಗೆ ಅದು ಹಿಡಿಸಿದ ಕಾರಣ ಬಲು ಬೇಗನೆ ಒಪ್ಪಿ ಅಪ್ಪಿಕೊಣ್ಡು ಬೞಕೆಗೆ ತನ್ದರು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಬರೆದ ಪರಶುರಾಮ ಕಾರ್ತಿವೀರ್ಯಾರ್ಜುನರ ಕಥೆಯೂ, ಒಬ್ಬ ಮನುಷ್ಯ ತನ್ನ ಕೊಡಲಿಯಿಂದ ಸಮುದ್ರವನ್ನು ಹಿಮ್ಮೆಟ್ಟಿಸಿದ್ದು!, ಸುಳ್ಳೋ ನಿಜನೋ?! ಗೊತ್ತಿಲ್ಲ. ಅದು ಕಥೆ ಅಷ್ಟೇ. ............. ಕೇರಳದ ಪ್ರವಾಸೋದ್ಯಮ ಇಲಾಖೆಯು ಈ ವಾಕ್ಯವನ್ನು 'ಘೋಷವಾಕ್ಯ' ಮಾಡಿಕೊಂಡ 'ಹಿನ್ನಲೆ' ಏನು ತಿಳಿದಿದ್ದರೆ ಬರೆಯಿರಿ. ( ಇಲ್ಲಿಂದ ಯಾರು ಹೇಗೆ ತೆಗೆದುಕೊಂಡರು ಅಂತ ನಂತರ ಮಾತಾಡುವ!!) ಆ 'ಹಿನ್ನಲೆ' / 'ಮೂಲ' ನಾನು ಮೇಲೆ ಬರೆದ ಕಥೆಯೇ ಇರಬಹುದು ಅನ್ನೋದೇ ನನ್ನ ಊಹೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

http://en.wikipedia.... ಊಹೆ ತಪ್ಪಾಗಿದೆ. ಕೇರಳದ ಸ್ನೇಹಿತರಿದ್ದರೆ ಕೇಳಿ ನೋಡಿರಿ. ಈ ವಿಷಯದಲ್ಲಿ ಇದು ಕೊನೆಯ ಕಮೆಣ್ಟು. http://en.wikipedia.... The Kerala Government Tourism Department, a government department in charge of promoting tourism in the Indian state of Kerala has adopted the slogan God's Own Country for its campaigns.[4] http://en.wikipedia....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದರಲ್ಲಿ ಚರ್ಚೆ / ವಾದ ಮಾಡುವುದು ಏನೂ ಇಲ್ಲ. ಕೇರಳದವರಾದ ನಿಮ್ಮ ಮಾತು ಸರಿಯಿರಬಹುದು. ಕೆಲ ವರ್ಷಗಳ ಹಿಂದೆ ನನ್ನೊಬ್ಬ christian ಮಲಯಾಳಿ ಸ್ನೇಹಿತ "Gods own country " ಯ christian version ಕೊಟ್ಟಿದ್ದ. ( ಈಗ ಆ ಕಥೆ ಅಸ್ಪಷ್ಟವಾಗಿದೆ. ಮುಂದೊಮ್ಮೆ ಆತ ಸಿಕ್ಕರೆ ಕೇಳಿ ಬರಿತೀನಿ.) ....................... ಸಾಮಾನ್ಯವಾಗಿ ಯಾವ ಸಂಘಟನೆಯಾಗಲಿ ಒಂದು ಘೋಷ ವಾಕ್ಯ ನಿರ್ಮಾಣ ಮಾಡಿಕೊಳ್ಳಲು ಒಂದು relavent ವಿಚಾರದ ಸುತ್ತ ಕಟ್ಟಿದ ವಾಕ್ಯವನ್ನು ಅತ್ವ ತನ್ನ ಹಿರಿಯ ಸಂಸ್ಕೃತಿಯನ್ನು ಪ್ರತಿನಿಧಿಸುವ ವಾಕ್ಯವನ್ನು ನಿರ್ಮಾಣ ಮಾಡಿಕೊಳ್ಳುತ್ತೆ. ಕೇರಳಕ್ಕೆ ಪರಶುರಾಮ ಸೃಷ್ಟಿ ಅನ್ನೋ ಪೌರಾಣಿಕ ಹಿನ್ನಲೆ ( ಮತ್ತು ಈ ಕಥೆ ತುಂಬಾ ಇತೀಚಿನದೂ ಆಗಿರಬಹುದು.. ಯಾವ ಕಾಲದಲ್ಲಿ ಈ ಕಥೆ ಬರೆಯಲ್ಪಟ್ಟಿತು ಅಂತ ತಿಳಿದವರು ಬರೆಯಿರಿ) ) ಇದೆ...ಮತ್ತು ಈ ಕಥೆ ಅಲ್ಲಿನವರಿಗೆ ತಮ್ಮ ಘೋಷವಾಕ್ಯವನ್ನು ಸೃಷ್ಟಿಸಿಕೊಳ್ಳಲು ಪ್ರೇರೇಪಣೆ ಆಗಿರಬಹುದು ಅನ್ನಬಹುದಷ್ಟೇ. ಆಗಿರದೇನೂ ಇರಬಹುದು!!. ನಮ್ಮ ನಮ್ಮ ನಾಡಿನ ಬಗ್ಗೆ ನಾವು ಹೇಳಿಕೊಳ್ಳುವಾಗ ಅಲ್ಲಿ ಭಾವನಾತ್ಮಕ ಹೇಳಿಕೆಗಳಿಗೆ ಪ್ರಮುಖ ಜಾಗ ಇರುತ್ತೆ. ಅಂತಹ ಭಾವನಾತ್ಮಕ ಹೇಳಿಕೆಗಳಲ್ಲಿ ಈ "Gods own country " ಯೂ ಆಗಿದೆ ಅನ್ನೋದರಲ್ಲಿ ನನಗೆ ಯಾವ ಸಂದೇಹವಿಲ್ಲ. (ನಮ್ಮ ಕರ್ನಾಟಕ / ಕನ್ನಡ ದ ಹೆಸರಿನ ಮೂಲ ಕೆದಕುತ್ತ ಹೋದಾಗ....ಅಲ್ಲಿ ಭಾವನಾತ್ಮಕ, ಭೌಗೋಳಿಕ, ಜನಾಂಗೀಯ ಇತ್ಯಾದಿ ವಿವಿಧ derivations ಸಿಗುತ್ತವೆ. ಇವುಗಳಲ್ಲಿ ಭಾವನಾತ್ಮಕ ಹೇಳಿಕೆಯೇ / derivitions ಏ ಹೆಚ್ಚು ಪ್ರಸಿದ್ದವಾಗಿದೆ.) ..................... ನಾನು ಕೇರಳದ tourism department ನ ಘೋಷವಾಕ್ಯ ಇದು ಅನ್ನೋದನ್ನು ಅಲ್ಲಗೆಳೆಯುತ್ತಿಲ್ಲ. ಆದರೆ ಈ tourism department ತನ್ನ ರಾಜ್ಯಕ್ಕೆ ಪ್ರವಾಸಿಗಳನ್ನು ಆಕರ್ಷಿಸಲು ಮಾಡಿಕೊಂಡ ಸ್ಲೋಗನ್ ಹಿಂದೆ, ಪ್ರೇರೇಪಣೆಯಾಗಿ ಈ ಕಥೆ ಇರಬಹುದು ಅಂದಷ್ಟೇ ಹೇಳಬಲ್ಲೆ. ಚರ್ಚೆ ಮಾಡಿ ಪ್ರಯೋಜನವಿಲ್ಲ ಬಿಡಿ. ನಿಮ್ಮ ಮಾಹಿತಿಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾಹಿತಿ... ನನ್ನ ಹತ್ತಿರವಿರುವ ಕೇಂದ್ರ ಪ್ರವಾಸೋದ್ಯಮ ಇಲಾಖೆಯ ಕಾಫಿ ಟೇಬಲ್ ಬುಕ್ ನಿಂದ.. - 'God's own country' ಘೋಶ ವಾಕ್ಯ ಪ್ರಸಿದ್ಧವಾಗಿದ್ದು, ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕಾಣಲಾರಂಭಿಸಿದ್ದು 90ರ ದಶಕದಲ್ಲಿ. - ಇದು ಹುಟ್ಟಿದ್ದು ಕೇರಳವನ್ನು ಸ್ವರ್ಗ , ಪ್ರವಾಸಿಗರಿಗೆ ಪರಿಪೂರ್ಣ ತಾಣ ಎಂದು ಬಿಂಬಿಸುವ ನಿಟ್ಟಿನಲ್ಲಿ. ಕೇರಳದ ನಗರಗಳು, ಸಣ್ಣ ಪಟ್ಟಣಗಳು, ಹಳ್ಳಿಗಳು..ಅಲ್ಲಿರುವ ಸಮುದ್ರ ತೀರ, ಹಿನ್ನೀರು, ಸಾಂಸ್ಕೃತಿಕ-ಪ್ರಾಕೃತಿಕ- ಆಹಾರ ವೈವಿದ್ಯತೆ, ಶತಮಾನಗಳಿಂದ ಪಾಲಿಸಿಕೊಂಡು ಬರುತ್ತಿರುವ ಆಯುರ್ವೇದ ಇವೆಲ್ಲಕ್ಕೆ ಮಾರುಕಟ್ಟೆ ಒದಗಿಸಿಕೊಡುವ ಉದ್ದೇಶದಿಂದ ಬಳಸಲು ಪ್ರಾರಂಭವಾಗಿದ್ದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸವಿತೃ, ನಮ್ಮಲ್ಲಿನ ಪೌರಾಣಿಕ ಕಥೆಯ ಪ್ರಕಾರ ನಿಮ್ಮ ಕಥೆ ಸರಿ. ಕೇರಳವನ್ನು ಪರಶುರಾಮ ಸೃಷ್ಟಿಸಿದ, ಅದರಿ೦ದಲೇ ಅದನ್ನು ದೇವರ ಸ್ವ೦ತ ಜಾಗ ಎ೦ದು ಕರೆಯುತ್ತಾರೆನ್ನುವುದೂ ಸರಿ! ನಾನು ದುಬೈನಲ್ಲಿದ್ದಾಗ ಸಾಕಷ್ಟು ಕೇರಳೀಯರ ಜೊತೆ ಮಾತುಕತೆ ನಡೆಯುತ್ತಿದ್ದಾಗ ನನಗೆ ತಿಳಿದು ಬ೦ದ ವಿಚಾರವೇನೆ೦ದರೆ, ತನ್ನ ಕೊಡಲಿಯನ್ನು ಸಾಗರಕ್ಕೆಸೆದು ಭೂಮಿಯನ್ನು ಸೃಷ್ಟಿಸಿ ತಪಸ್ಸಿಗೆ ನಿ೦ತ ಪರಶುರಾಮನ ಬಗ್ಗೆ ಕೇರಳದ ಜನಮಾನಸದಲ್ಲಿ ಸಾಕಷ್ಟು "ಪೋಲಿ" ಜೋಕುಗಳಿವೆ!! ಪರಶುರಾಮನ ಕೇರಳದ ಕಥೆಯ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಇಲ್ಲಿ ಚಿವುಟಿ. http://www.ananthapu...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹರಿಪ್ರಸಾದ್ ನಾಡಿಗ್ ಕೇಳುತ್ತಿರುವುದು ಉಳ್ಳಾಲ ಸಮೀಪದ ಸೋಮೇಶ್ವರ ಕಡಲ ದಣ್ಡೆಯ ಕುಱಿತಾಗಿ. ಹರಿ, "ಸಮುದ್ರವನ್ನು ಹಿಂದಕ್ಕೆ ಅಟ್ಟಿ ಕರಾವಳಿ ಸೃಷ್ಟಿಸಿದ, ಕರಾವಳಿಯನ್ನು ನೋಡಿಕೊಳ್ಳುತ್ತಿರುವ ಪರಶುರಾಮನ" ವಿವರ ನಿಮಗೆ ಬೇಕಾದರೆ 'ಗ್ರಾಮ ಪದ್ಧತಿ' ಎಂಬ ಪುಸ್ತಕದಲ್ಲಿ ಸಿಕ್ಕುವುದು. ಈ ಪುಸ್ತಕ ತಾಡವಾಲೆಯಲ್ಲಿ ರಚನೆಗೊಣ್ಡಿದ್ದು ನಾಲ್ಕು ಬಗೆಯ ಪಾಠಾನ್ತರಗಳನ್ನೊಳಗೊಣ್ಡಿದೆ. ಇದನ್ನು ಆಧರಿಸಿದ ಆಧುನಿಕ ಗ್ರಂಥಗಳೂ ಲಭ್ಯವಿವೆ. ವಿವರ ಬೇಕಾದರೆ ಒದಗಿಸಬಲ್ಲೆ. ನಾನು ಕೆಲವು ತಿಂಗಳ ಹಿನ್ದೆ ಇದರ ಕುಱಿತು ಓದಿದ್ದೆ. ವಿಶೇಷವೇನೆನ್ದರೆ ಈ ವಿಷಯದಲ್ಲಿ ಮಲೆಯಾಳ ಮತ್ತು ತುಳು ಐತಿಹ್ಯಗಳು ಒನ್ದನ್ನೊನ್ದು ಹೋಲುತ್ತವೆ. ಕಾಲದ ಕುಱಿತ ನಿರ್ದಿಷ್ಟ ವಿವರಗಳು ಮೂಲಗ್ರಂಥದಲ್ಲಿಲ್ಲದಿದ್ದರೂ ಅಲ್ಲಿ ಹೇೞಿರುವ ವಂಶಾವಳಿಗಳ ಪಟ್ಟಿಯ ಸಹಾಯದಿನ್ದ ಆಧುನಿಕ ಕಾಲದಲ್ಲಿ ಪುಸ್ತಕದ ಕಾಲದ ನಿರ್ಣಯವಾಗಿದೆಯೆನ್ದು ತಿಳಿಯುವುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.