ಅಮಲು.......

0

ಇಳಿ-ಸಂಜಿ ಹೊತ್ನ್ಯಾಗ, ನಿನ್ ಕಣ್ಣು ನಿಚ್ಚಳಾ,
ಬಾಟ್ಲಿಯಂಡಿಗೆ ಅಂಗೈಯ್ಯಾಗ ಎರ್ಡ್ಗುದ್ದಿದ್ರ,
ಬಂತ್ ನೋಡ ಸಪ್ಪಳಾ,
ಬೂಚ್ ತಿರವಿ, ಗ್ಲಾಸಿಗ್ ಬಗ್ಗಿಸಿ, ಬಾಯಾಗ ಸುರಕಂಡ್ರ.....

ನಿ ಹಚ್ಚ ಬೆಂಕಿಗ್ಯ ಯಲ್ಲಾ ಹಚ್-ಹಚ್ಚಗ,
ನಿ ಗಂಟ್ಲಾಗ್ ಕೊಚ್ಕಂಡ್ರ ಯಲ್ಲಾ ಬೆಚ್-ಬೆಚ್ಚಗ,
ಕರುಳಾಗ ಹೊಕ್ಕಂಡು, ಸಣ್ಕರುಳ ಯರದು,
ರಕುತಾನ ನೀನ..? ನೀ ರಕುತಾನ..?
ನರ್-ನರದಾಗು ಮುಣಿಗಿ, ತ್ಯಲ್ಯಾಗ ಯದ್ದು,
ತ್ಯಲೀನ ಯತ್ತಿ, ಯತ್ತೆತ್ಲಾಗ ಒಗ್ದ್ಯಂದ್ರ.....

ನಿ ಯಾರ? ಯಾವೂರ ? ಎನಾಗದೈತಿ...
ನಿನ್ ದೇವ್ರು, ನಿನ್ ದಿಂಡ್ರು ಎಲ್ ಹೋಗ್ಯೇತ್ಯ...
ಕಣ್-ಮಂಜ, ಕಿವಿ ಮಂದ, ತೊದ್-ತೊದ್ಲ ಬಾಯಿ,
ಮತ್-ಮತ್ತ ಗ್ಲಾಸಿಗ್ ಬಗ್ಗಿಸ್ಕ್ಯಂತವ ನಡುಗ ಕೈಯಿ....

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಹರ್ಷ

ಪ್ರಯತ್ನ ಚೆನ್ನಾಗಿದೆ. ರತ್ನನ ಪದಗಳ Inspiration ಏನು ? ;)

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<ಪ್ರಯತ್ನ ಚೆನ್ನಾಗಿದೆ.>

ನನ್ನಿ ಅರವಿಂದ್..

<ರತ್ನನ ಪದಗಳ Inspiration ಏನು ? >

ಅಲ್ಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಮಲು ಯಾರ್ದೊ? ಕವಿತೆ ಚೆನ್ನಾಗಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<ಅಮಲು ಯಾರ್ದೊ?>

ನಂದೇ,

ಮೆಚ್ಚಿದ್ದಕ್ಕೆ ನನ್ನಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈಚಲ್ ಮರದಲ್ಲಿ ಮಲಗಿದ ಹೆಂಡ ಕಟ್ಟಿದ ಮಡಕೆಗೆ ಹರಿದು,
ಭಾರಿ ಪಿಪಾಯ್ನಾಗಿಲ್ಕೊಂಡು ತುಮ್ಬೋಕೊಂಡ್ತೈತೆ ಸುರುದು,
ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ, ಪೀಪಾಯ್ನಲ್ಲಿ ಉಲ್ಲಾಡಿ,
ಕುಡುಕನ ಬುಂಡೆ ತುಮ್ಬ್ಕೊಂತೈತೆ, ಎಂಥ ಜನ್ಮ ನೋಡು - J. P. ರಾಜ ರತ್ನಂ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.