ವಿಶ್ವ ಚಕ್ಷು (ಚತುರೋಕ್ತಿ ೪)

0

 




ಹೊರಗಿನೊಳಗನ್ನು ಹೊರಗೆಳೆಯಬೇಕು

ಆ ದಾರದಾಧಾರದ ಸಾಧಾರ ಸಾಧಾರಣವಲ್ಲ
ದಾರವಿಲ್ಲದೆ ದಡ ಎ೦ದಿಗೂ ಒ೦ದಲ್ಲ

ಕಣ್ಹಾಯಿಸು ಅಗಲ, ಊರಗಲ, ಜಗದಗಲ
ಅಲುಗಿನ ಚೂಪು ಚೂಪು ತುದಿ ನಿನ್ನ ಅ೦ತಃಚಕ್ಷು
ಹಿಡಿಯೊಳಗಿನ ಮನಕ್ಕೆ ಕಾಣುವುದು ಇಷ್ಟೇ, ಬಿಕ್ಷೆ

ಇದಿರುಗೊ೦ಡವನುದರದೊಳಗೇನಿದೆಯೋ ಕಾಣು
'ಚಕ್ಷುರ್ಯಜ್ಞೇನ ಕಲ್ಪತಾ೦'. ಕಿಡಿ ಹತ್ತಿಸು, ಉರಿಸು
ಗವಿಯೊಳಗವಿತು ಕುಳಿತದ್ದು ಸಾಕು. ಇನ್ನು ಏಳಬೇಕು
ಭೂಮಿಯಾಗಸವ ಸೇರಿಸುವ ದಾರ ನಾವಾಗಬೇಕು


--


 


 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಸೂಪರ್ ಹರೀಶ್ <<<<<<<<<<ಹೊರಗಿನೊಳಗನ್ನು ಹೊರಗೆಳೆಯಬೇಕು ಗವಿಯೊಳಗವಿತು ಕುಳಿತದ್ದು ಸಾಕು. ಇನ್ನು ಏಳಬೇಕು ಭೂಮಿಯಾಗಸವ ಸೇರಿಸುವ ದಾರ ನಾವಾಗಬೇಕು>>>>>>>>>>>> ತುಂಬಾ ಚೆನ್ನಾಗಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅತೀ ಉತ್ತಮ. ನಿಮ್ಮ ಚತುರೋಕ್ತಿಗಳು ಖುಷಿ ಕೊಡುವ ಹಾಗೆಯೇ ವಿಚಾರಕ್ಕೆಳೆಸುವ ಸಾಲುಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹರೀಶ್ ಏನಿದು ಒಳ್ಳೊಳ್ಳೆಯ ಚತುರೋಕ್ತಿಯನ್ನು ಪ್ರಾರಂಭಿಸಿದ್ದೀರ. ಸಂತೋಷ. ಒಳ್ಳೆಯ ಪ್ರೇರಣಾತ್ಮಕ ಮಾತುಗಳು... ಹೀಗೆ ಮುಂದುವರಿಯಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ತೇಜಸ್ವಿ ಅ೦ದ್ರೆ ಇಷ್ಟು ದಿವ್ಸದ ಕವನಗಳು ಚೆನ್ನ್ನಾಗಿರ್ಲಿಲ್ವಾ? :) ಮೆಚ್ಚಿಕೆಗೆ ಧನ್ಯವಾದಗಳು ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹ್ಹ ಹ್ಹ ಹ್ಹ ....ಇಲ್ಲ ಗುರು ನೀವ್ ಬರೆಯೋ ಕವನಗಳು ಚೆನ್ನಾಗಿರದೆ ಇರ್ತಾವ???...ಆದರೆ ಚತುರೋಕ್ತಿಗಳ ಹಾಗೆ ಬುದ್ದಿವಾದದ ಮಾತುಗಳು ಈಗ ಶುರು ಮಾಡಿರುವಿರಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚತುರನ ಉಕ್ತಿಗಳು ವಿಚಾರಪೂರಿತವಾಗಿವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.