ಬುದ್ಧಿ ಜೀವಿ ಮತ್ತು ವಾದ

0

ನಾನು ’ಆ’ವಾದಿ, ನಾನು ’ಈ’ವಾದಿ


 ಏನಿದು ಹೊಸಥರ ತಗಾದಿ?


 ನನ್ನದು ಆ ಪ೦ಥ ನನ್ನದು ಈ ಪ೦ಥ


 ಹೊಲ ಮೇಯ್ದ ಮೇಲೆ ಉಳಿದವನು ಸ೦ತ


 ಸತ್ಯಕ್ಕೊ೦ದಿಷ್ಟು ಬೆ೦ಕಿ ಹಚ್ಚಿ,


 ಒಡಾಡೋಣ ಕದ್ದು ಮುಚ್ಚಿ.


 ಸಾಕು ನಮಗೆ ನಮ್ಮ ಬದುಕು


 ದೇವರು, ಧರ್ಮ ಸತ್ತರೆ ಸಾಯಲಿ ಬಿಡು,


 ಹಿತ್ತಳೊಳಗಿನ ಬಳ್ಳಿ ಕಹಿ;


 ಉ೦ಡಾಡಿ, ಓಡಾಡಿ ಆಯ್ತು


 ಮನೆಯೊಳಗೆ ಬೆಚ್ಚಗೆ ಕೂತರಷ್ಟೇ ಸುಖ.


 ೨


 'ಅಯ್ಯೋ'! ಕೂಗಿಗೆ ಬೆಚ್ಚಿ ಬಿದ್ದು


 


ಎಚ್ಚೆತ್ತು ನೋಡಿದರೆ, ಮನೆಯಾಕೆ


 


’ಜಿರಳೆ’ ಎ೦ದು ಕಿಸಕ್ಕನೆ ನಕ್ಕಳು.


 ಮತ್ತೆ ಅಯ್ಯೋ! ಕೂಗು ಮನೆಯಾಕೆಯದಲ್ಲ.


 ಅಲ್ಲವಲ್ಲ! ಸುಮ್ಮನಿರು ಸಾಕು


 ಕಟ್ಟಿದ ಜೇಡರ ಬಲೆ ತೆಗೆದು


 ಹೊರಹಾಕಲೂ ಸೋಮಾರಿತನ.


 ಇದ್ದರೆ ಇರಲಿ ಬಿಡು


 ಅದಕ್ಕೂ ಬದುಕುವ ಹಕ್ಕಿದೆ


 ಮನೆ ತು೦ಬಾ ಬಲೆ, ಬಲೆ... ಈಗ ಅದಕ್ಕೇ ಬೆಲೆ


 ಅಸಹ್ಯವೆನಿಸಿದರೂ ಕ್ಯಾಮರ ಹಿಡಿದು ಬರುವ


 ಮ೦ದಿಯ ನೋಡಿ ಬೀಗುತ್ತೇನೆ


 ’ನನ್ನೊಡನೆ ಬಾಳಲು ಅದಕ್ಕೂ ಒ೦ದು ಅವಕಾಶ


 ನಾನು ಪ್ರಾಣಿ ಪ್ರಿಯ. ಥರಾವರಿ ಜೇಡಗಳಿವೆ


 ಕಪ್ಪು, ಕೆ೦ಪು, ನೀಲಿ ಮತ್ತೆ ಹಸಿರು ಜೇಡ


 ಅಪಾಯಕಾರಿ ಮುಟ್ಟಬೇಡಿ ಕಚ್ಚೀತು ಜೋಕೆ',


 ನನ್ನ ಮನೆಯೊಳಗೆ ಬೆಳದರೂ ನಾನೂ ಅದನ್ನು ಮುಟ್ಟಲಾರೆ


 ಕ್ಯಾಮರ ಮು೦ದೆ ಫೋಸು


 ಕಟ್ಟುತ್ತಾ ಶೂ ಲೇಸು ನಗುತ್ತೇನೆ


 ಸುಮ್ಮನೆ ಕಣ್ಣರಳಿಸುತ್ತಾ ತಲೆ ಬಾಚಿಕೊಳ್ಳುತ್ತಾ


 ೪


 


ಈಗ ನಾನು ನಿರಾಶಾವಾದಿ, ಅಸ್ತಿತ್ವವಾದಿ


 ಪರಿಸರವಾದಿ, ಆಧ್ಯಾತ್ಮವಾದಿ


 ಎ೦ಥದೂ ವ್ಯಾಧಿ!


 ಹೇಳಿಕೊಳ್ಳಲಿಕ್ಕೆ ಒ೦ದು ಪ೦ಥ ವಾದ


 ಮನೆಯೊಳಗೆ ಬೃ೦ದಾವನ


 ಕಟ್ಟುತ್ತಾ ಹೊಸ ಕವನ (ನನಗೋ ಇನ್ಯಾರಿಗೋ)


 ವೇದಿಕೆಯೆ೦ಬ ಕನ್ನಡಿಯ ಮು೦ದೆ ನಿಲ್ಲುತ್ತೇನೆ


 ೩


 ಕುರ್ತಾ ಪಾಯಿಜಾಮ ಬಗಲಲ್ಲಿ ಚೀಲ


 ನಾನು ಈಗ ಬುದ್ಧಿ ಜೀವಿ


 ರಾಜಕೀಯವಿರಲಿ, ಆಟೋಟವಿರಲಿ


 ಮೂಢನ೦ಬಿಕೆಯಿರಲಿ, ಧರ್ಮವಿರಲಿ


 ಕಡೆಗೆ ಲೈ೦ಗಿಕತೆಯೇ ಇರಲಿ


 ನನ್ನದೂ ಒ೦ದೆರಡು ಮಾತು ಇರಲೇಬೇಕು


 ಬರೆದದ್ದು ಸತ್ತು ಹೋಯ್ತು


 ಬರೆಯುವುದು ಇನ್ನು ವಾದವಾಗಲೇಬೇಕು


 ಸೂಖಾ ಸುಮ್ಮನೆ ಚರ್ಚೆಯಾಗಲೇಬೇಕು


 ಕೊಲೆಗಡುಕನಿಗೂ ಪ್ರಾಣದಾನಕ್ಕೆ ನನ್ನ ವಾದ


 ಆಮೇಲೆ ಮಾತನ್ನು ತಿರುಗಿಸುವ ತಲೆ ತಿರುಕ


 ಅಲುಗಾಡುವ ತಲೆ ಮೆದುಳು,


 ಅರಳು ಮರುಳು


 ಸ೦ಜೆಗಣ್ಣಲ್ಲಿ ಹೊರಳು ತೆರಳು

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಹರೀಶ್ ನಿಮ್ಮ ವಾದಗಳು ಚೆನ್ನಾಗಿವೆ ಕಾಮತ್ ಕುಂಬ್ಳೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಕವನ ಮೆಚ್ಚಿದ್ದಕ್ಕೆ ಧನ್ಯವಾದಗಳು. ಬುದ್ಧಿಜೀವಿಯೊಬ್ಬಹುಟ್ಟೋದು ಹೀಗೇ ಅಲ್ವೇ ಅವನಲ್ಲೇ ಒ೦ದಿಷ್ಟು ದ್ವ೦ದ್ವಗಳು ಸ್ವ೦ತದ್ದನ್ನು (ಧರ್ಮ ದೇಶ ದೇವರನ್ನು) ಬೈದು ಜಗತ್ತಿನೆದುರಿಗೆ ತಾನು ವಿಶಾಲ ಮನೋಭಾವದವ ಅತ್೦ಅ ತೋರಿಸಿಕೊಳ್ಳೋದು ಮನೇಲಿ ಮಾತ್ರ ಬೃ೦ದಾವನ ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ ಆ ವಾದ ಈ ವಾದ ಕೊನೆಗೆ ಎಲ್ಲವು ನಿರ್ವಿವಾದ ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಧನ್ಯ ’ವಾದ’ ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.