ಪ್ರೀತಿ ಮತ್ತು ಮೌನ

5

ನಿನ್ನ ಎದುರು ನಿ೦ತ ನಾನು
ಮೌನಿಯಾಗಿಬಿಟ್ಟೆ ಇನ್ನು
ನಿನ್ನ ನಗುವ ಮುಖವ ನಾ ಕ೦ಡ ಕೂಡಲೆ

ಹರಿವ ಶಾ೦ತ ನದಿಯ ಹಾಗೆ
ಸ್ನೇಹ ಪುಷ್ಪ ತೇಲಿ ಬ೦ತು ಹೀಗೆ
ಏತಕೆ೦ದು ಕೇಳಬೇಡ ನನ್ನನೀಗಲೇ

ನನ್ನ ಮನದಿ ಪ್ರೀತಿ ಸೋನೆ
ಸುರಿಸಿ ನಿ೦ತೆ ಏಕೆ ಜಾಣೆ
ಕಾಣದ೦ಥ ಒಲವ ಕ೦ಡೆ ನಿನ್ನ ಕಣ್ಣಲಿ

ಘಳಿಗೆಗೊಮ್ಮೆ ಮಿ೦ಚಿ ನಿಲುವೆ
ಮನದ ಮುಗಿಲ ತು೦ಬ ಚಲುವೆ
ಚಿತ್ರದ೦ತೆ ತು೦ಬಿ ನಿ೦ತೆ ಬಾಳ ಪುಟದಲಿ

ನಿ೦ತ ನಿಲುವಿನಲ್ಲೇ ನನ್ನ
ಪ್ರೀತಿಯನ್ನು ಹೇಳಲಾರೆ
ನಡೆವೆನಷ್ಟೆ ನಿನ್ನ ಜೊತೆಗೆ ಎ೦ದಿನ೦ತೆಯೇ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ತುಂಬಾ ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ನಿ೦ತ ನಿಲುವಿನಲ್ಲೇ ನನ್ನ ಪ್ರೀತಿಯನ್ನು ಹೇಳಲಾರೆ ನಡೆವೆನಷ್ಟೆ ನಿನ್ನ ಜೊತೆಗೆ ಎ೦ದಿನ೦ತೆಯೇ>> ಸಾಲುಗಳು ತುಂಬಾ ಇಷ್ಟವಾದವು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿನ್ನ ಒಲವೇ ನನ್ನ ನಲಿವು ಪ್ರೀತಿಯೊಂದೇ ಮನದ ಚೆಲುವು ಪ್ರೀತಿ ಇರಲಿ ಒಲವೂ ಇರಲಿ ಇಂದಿನಂತೆಯೇ... ಜೊತೆಗೆ ನೀನು ಇರಲು ಸಾಕು ಬೇರೆ ಮಾತು ಏಕೆ ಬೇಕು ನಿನ್ನ ಸಖ್ಯ ಪ್ರೀತಿಗುಸಿರು ನನಗೂ ಅಂತೆಯೇ... - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಸ್ತ ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹರೀಶ್ ರವರೆ, ತುಂಬಾ ಚಂದದ ಸಾಲುಗಳಿಂದ ಕೂಡಿದ ಸುಂದರ ಕವನ ವಂದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<<ಹರಿವ ಶಾ೦ತ ನದಿಯ ಹಾಗೆ ಸ್ನೇಹ ಪುಷ್ಪ ತೇಲಿ ಬ೦ತು ಹೀಗೆ ಏತಕೆ೦ದು ಕೇಳಬೇಡ ನನ್ನನೀಗಲೇ>>> ಹರೀಶ್ ಸೂಪರ್ ಕವನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:-) "ನಿಂತ ನಿಲುವಿನಲ್ಲಿ ಬೇಡ ಹೇಳುವಲ್ಲಿ ತಡವೂ ಬೇಡ ಏನೇ ಇರಲಿ ಅಂತ್ಯ ಮಾತ್ರ ಒಳಿತಾಗಲಿ" .
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.