ಕಾಮಾs ಬಿಡು (ಚತುರೋಕ್ತಿ ೨)

0

ಮ೦ಗ ಮೂಸಿ ನೋಡಿ ಒಗೆದಿತ್ತುಮಮಕಾರದ ಡೊ೦ಕ ಸಿಕ್ಕಿದರೆ ಸಿಕ್ಕ೦ತೆ (?)

ಪ್ರೀತಿಗಾಗಿ ಟೊ೦ಕ ಕಟ್ಟಿದರೆ ಕೆಟ್ಟ೦ತೆ (?)ಓಡಿದವ ನುಲಿಯುತ ನಿ೦ತ ಯಾಕೋ

ತಿರುವು ಮುರುವು ಕ೦ಡು ಮರೆವು ಬ೦ತು

ಸೊರಗಿಹೋದನೋ ಸುರಗಿ ಹಾಕಿಸಿಕೊ೦ಡವಕಾಯಿ ಕೆಟ್ಟಿದೆ ಒಳಗೆ, ಕೊಳಕು ಹೊರಗೆ

ಮಿರಿ ಮಿರಿ ಬಣ್ಣ, ಮೂಸಿ ಒಗೆಯೋ ಅಣ್ಣ

ಗೂಡು ನೋಡು. ಓಡು, ಹಿ೦ದೆ ಕಾಮsದ ಕಾಡು

ತರಲೆ, ತರಳೆ ಕೊರಳ ಮರುಳಿನಾಟ ಬಿಡು ಬಿಡು

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಬಿಡುವೆನೆಂದರೂ ಬಿಡದು...? ಕಾಮಕ್ಕೆ, "ಕಾಮಾ" ಬಿಟ್ಟು, "ಫುಲ್ ಸ್ಟಾಪ್" ಹಾಕಬೇಕಿದೆ. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಎಲ್ಲಿ ಫುಲ್ ಸ್ಟಾಪ್ ಹಾಕ್ಬೇಕು ಸರ್ ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮನುಜನ ಆಸೆಗಳಿಗೆಲ್ಲಾ ಅಲ್ಪ ವಿರಾಮ ಹಾಕುವ ಬದಲು, ಪೂರ್ಣವಿರಾಮ ಹಾಕುವುದೇ ಮೇಲು, ಇಲ್ಲವಾದರೆ, ಅಲ್ಪ ವಿರಾಮದ ನಂತರ ಮತ್ತೆ ತಲೆಎತ್ತಿ ಕಾಡುತ್ತವೆ, ಪೀಡಿಸುತ್ತವೆ ಯಾವಾಗಲೂ! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹರೀಶ್ ಸ್ವಲ್ಪ ನಿಧಾನವಾಗಿ ಅರ್ಥೈಸಿಕೊಳ್ಳಬೇಕಿದೆ ಅಲ್ಲ ಹೆಗಡೆಯವರೇ ಇನ್ನೂ ಶುರುವೇ ಆಗಿಲ್ಲ ಆಗಲೇ ಫುಲ್ ಸ್ಟಾಫಾ? ಚತುರೋಕ್ತಿಯು ಸಹಜೋಕ್ತಿಯಾ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಕವನದ ಶೈಲಿ ಬೇ೦ದ್ರೆಯವರದ್ದು. ಕವನದ ಮೊದಲನೆ ಸಾಲು ಇಡೀ ಕವನದ ವಸ್ತುವಾಗಿರುತ್ತದೆ. ಆ ಮೊದಲನೆ ಸಾಲನ್ನು ಎರಡು, ಮೂರು ಮತ್ತು ನಾಲ್ಕನೆಯ ಸಾಲುಗಳು ವಿಸ್ತಾರಗೊಳಿಸುತ್ತಾ ಹೋಗುತ್ತೆ. ಹೀಗೆ ೧+೨+೩+೪= ೧೦ ಎ೦ಬ೦ತೆ ಪರಿಪೂರ್ಣವಾಗುತ್ತೆ. ಇಲ್ಲಿ ಕಾಮ ಎ೦ದರೆ ಆಸೆ, ಇಷ್ಟ. ಕಾಮವನ್ನು ನಿಗ್ರಹಿಸಿದಾಗ ಸಿಗುವ ಆನ೦ದ ಅತೀತವಾದುದ್ದು. ಮ೦ಗ ಮೂಸಿ ನೋಡಿ ಒಗೆದಿತ್ತು. ಒಗೆದ ಹಣ್ಣು ಕಾಮವಾಗಿತ್ತು. ಮೂಸಿ ನೋಡಿದಾಗಲೇ ಕೆಟ್ಟದ್ದೆನಿಸಿದರೆ ಅದನ್ನು ತಿ೦ದಮೇಲೆ ಆಗುವ ಪರಿಣಾಮ! ಮ೦ಗನ ಸ್ವಭಾವವೇನು? ಚಾಷ್ಟಿ ಮಾಡೋದು. ಚ೦ಚಲ ಸ್ವಭಾವವನ್ನು ಮ೦ಗನಿಗೆ ಹೋಲಿಸಿದರೆ ಅದರ ಕೈಲಿ ಸಿಕ್ಕ ಇಷ್ಟ ಎನ್ನುವ ಹಣ್ಣು ಅದನ್ನು ಆಡಿಸಬಹುದಿತ್ತು. ಆದರೆ ಮ೦ಗನ೦ಥ ಮ೦ಗನೇ ಆ ಹಣ್ಣನ್ನು ಮೂಸಿ ನೋಡಿ ಒಗೆದುಬಿಟ್ಟಿದೆ. ಮಮಕಾರ ಪ್ರೀತಿಗಳು ಸ್ವಾಭಾವಿಕ ಆದರೆ ಅದರಮೇಲಿನ ಮೋಹ ಹೆಚ್ಚಾದರೆ ತಲುಪುವಗುರಿ ಮಸುಕಾಗುತ್ತೆ. ಸುರಗಿ ಹಾಕಿಸಿಕೊ೦ಡವ- ಮಲನೀರು ಹಾಕಿಸಿಕೊ೦ಡವ ಶುದ್ಧನೆ೦ದು ಹೇಳಬಹುದು. ಮನುಷ್ಯ ಹುಟ್ಟುವಾಗ ಮಲನೀರು ಹಾಕಿಸಿಕೊ೦ಡು ಮಲ ತೊಳಿದುಕೊ೦ಡು ಶುಚಿರ್ಭೂತನಾಗಿ ಬರುವ. ಆದರೆ ಬೆಳೆಯುತ್ತಾ ಕೊಳಕು ಯೋಚನೆಯನ್ನು ತು೦ಬಿಸಿಕೊಳ್ಳುತ್ತಾನೆ. ಒಟ್ಟಿನಲ್ಲಿ ಬೇ೦ದ್ರೆಯವರೆ೦ದರೆ ’ಕಾಮಾ ಈಶಾರ್ಪಿತವಾಗಬೇಕು’ ಇದನ್ನೇ ಈ ಕವನ ಹೇಳುತ್ತೆ. ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ನಾನೂ ಅದೇ ಎಣಿಸಿಕೊಂಡಿದ್ದೆ ನಿಮ್ಮ ವಿವರಣೆ ("ಪಂಕ್ತಿಯ" ಯ) ಗೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹರೀಶ ಆತ್ರೇಯ, ಅನಿಸಿಕೆ ಚೆನ್ನಾಗಿ ಮೂಡಿಸಿದ್ದೀರಿ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.