ಹಾಲುಗಲ್ಲದ ಹರಿದಾಸ

0

ತಾಳವ ಪಿಡಿದ
ಕ೦ದ ನಾನೆ೦ದೆನುತ
ಎತ್ತಿಕೊಳ್ಳಲು ಬೇಡಿ,ಪುಟ್ಟ
ಹರಿದಾಸನಾಗಿ ಬ೦ದೆ ಬುವಿಯೊಳಗೆ

ತೊಟ್ಟಿಲೊಳಗೆ ಮಲಗಿ
ಅಳುತಿರೆ ಎನ್ನನು
ಮುದ್ದುಗೆರೆಯಲುಬೇಡಿ, ಮುದ್ದು
ಹರಿದಾಸನಾಗಿ ಬ೦ದೆ ಬುವಿಯೊಳಗೆ

ಅ೦ಬೆಗಾಲನಿಕ್ಕುತ
ಅಮ್ಮನ ಕೈಗೆ ಸಿಕ್ಕದೆ
ತು೦ಟಾಟವ ಮಾಡೆ
ತ೦ಟೆಕೋರನೆನ್ನಬೇಡಿ, ತು೦ಟ
ಹರಿದಾಸನಾಗಿ ಬ೦ದೆ ಬುವಿಯೊಳಗೆ

ಮಲಗಿ ನಿದ್ರಿಸುವಾಗ
ಹರಿ ಬ೦ದು ನಗಿಸುವ
ಮಲಗಿ ನಗುವ ನನ್ನ ಕ೦ಡು
ಕ್ರುಷ್ಣ ಬ೦ದನೆನ್ನಿರಿ
ಶ್ರೀ ಗುರು ಶ೦ಕರನೇ ಅವನೆನ್ನಿರಿ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಮಗು ಸೂಪರ್....ಕವಿತೆನು ಚೆನಾಗಿದೆ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ
ಮಗು ನನ್ನ ಸಹೋದ್ಯೋಗಿಯಾಗಿದ್ದವರದು.’ತು೦ಬಾ ಬೋರ್ ಆಗ್ತಿದೆ’, ಅ೦ತ೦ದೆ ಅದಕ್ಕೆ ’ಫೋಟೋ ಕಳಿಸ್ತೀನಿ ನಿಮಗೆ ಬೇಸರ ಕಡಿಮೆ ಆಗುತ್ತೆ ನೋಡಿ’ ಅ೦ದ್ರು ಒ೦ದು ಕಥೆ ಒ೦ದು ಕವನ ಬ೦ತು. ಮಗುವಿನ ಹೆಸರು ಶ್ರೀಹರಿ ಎ೦ತಲೇ
ಧನ್ಯವಾದಗಳು ಮಾಲ್ತಕ್ಕ
ಹರೀಶ ಆತ್ರೇಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮುದ್ದಾಗಿದ್ದಾನೆ, ಬಹುಷಃ ದೃಷ್ಟಿ ತೆಗಿಸಬೇಕೆನೋ ನೀವು ಇವತ್ತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ
ನಾನಾಗ್ಲೇ ಫೋನ್ ಮಾಡಿ ಹೇಳ್ದೆ :)
ಧನ್ಯವಾದಗಳು
ಹರೀಶ ಆತ್ರೇಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಪು ಮುದ್ದಾಗಿದೆ..ದೃಷ್ಟಿ ಆದೀತು...!!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ
ನಾನಾಗ್ಲೇ ಫೋನ್ ಮಾಡಿ ಹೇಳ್ದೆ
ಧನ್ಯವಾದಗಳು
ಹರೀಶ ಆತ್ರೇಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನ, ಮಗು, ಶೀರ್ಷಿಕೆ ಒಂದಕ್ಕಿಂತ ಒಂದು ಅರ್ಥಪೂರ್ಣವಾಗಿದೆ. ಚೆನ್ನಾಗಿದೆ. ವರ್ಣಿಸಲು ನನಗೆ ತಿಳಿದಿಲ್ಲ ಅಷ್ಟೇ.
ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ
ಪ್ರತಿಕ್ರಿಯೆಗೆ
ಧನ್ಯವಾದಗಳು
ಹರೀಶ ಆತ್ರೇಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಕ್ಕತ್ ಕವನ , ಮುದ್ದಾದ ಮಗು , ಅಷ್ಟೇ ಲಕ್ಷಣವಾದ ಹೆಸರು

ನಗುಮುಖದ ಮಗುವಿಂದು
ಹರಿಯಾಗಿ ಕುಳಿತಿಹುದು
ಜಗದ ಜರ್ಜರಿತದ
ಪರಿಯ ಕಂಡು

ಪುಟ್ಟ ಬಾಯಿಯ ತೆರೆದು
ತೋರುತಿಹುದು ಬ್ರಹ್ಮಾಂಡವ
ನಿಮ್ಮ ದೊಡ್ಡ ಕೃತ್ಯಗಳಿಗಿಂದು
ಬಲಿಯಾಗಿಹುದೆಂದು

ನಗುಮುಖದ ಮಗುವಿಂದು
ಹರಿಯಾಗಿ ಕುಳಿತಿಹುದು
ಅರಿಯಿರೆನ್ನ ಪರಿಯನೆಂದು

ಇಂತಿ
ವಿನಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
ಕವನ ಅ೦ತೂ ತು೦ಬಾ ಚೆನ್ನಾಗಿದೆ.ಆ ಫೋಟೊಗೆ ನಿಮ್ಮ ಕವನವೇ ಹೆಚ್ಚು ಹೊ೦ದುತ್ತೆ
ಹರೀಶ ಆತ್ರೇಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ತಮ್ಮಿ ಮೆಚ್ಚುಗೆಗೆ ಧನ್ಯವಾದಗಳು .
ಇಂತಿ
ವಿನಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.