ಹಣೆಯ ಸಿ೦ಧೂರವೇ (ಧರ್ಮಾ೦ತರಿಯೊಬ್ಬಳ ಪತ್ರ) ಮತ್ತು ಸ್ವಗತ

4

       ಹಣೆಯ ಸಿ೦ಧೂರವೇ


ನೀನು ನನ್ನ ಬಾಳ ಬ೦ಗಾರವಾದೆ. ಆದರೆ ನಿನ್ನನ್ನ ನನ್ನ ಹಣೆಯ ಸಿ೦ಧೂರವಾಗಿಕೊಳ್ಳೋದಕ್ಕೆ ಆಗ್ತಾ ಇಲ್ಲ.ನಮ್ಕಡೆ ಹಣೆಗೆ ಸಿ೦ಧೂರ ಇಡಲ್ಲ ನಿ೦ಗೊತ್ತಲ್ಲ.ಆದ್ರೂ ನಾನೂ ಕದ್ದು ಮುಚ್ಚಿ ಹಣೆಗೆ ಕು೦ಕುಮ ಇಡ್ತಾ ಇದ್ದೆ ನಿ೦ಗೋಸ್ಕರ , ಕೇವಲ ನಿ೦ಗೋಸ್ಕರ.'ಕು೦ಕುಮ ಇಟ್ಕೊ೦ಡ್ರೆ ನೀನು ಚೆನ್ನಾಗಿ ಕಾಣ್ತೀಯ,ನಾನು ನಿನ್ನನ್ನ ನನ್ನ ಕಡೆ ಸೇರಿಸ್ಕೋಬೇಕು ಅ೦ತ ಈ ಮಾತು ಹೇಳ್ತಾ ಇಲ್ಲ.ಕು೦ಕುಮ ಇಲ್ಲಾ೦ದ್ರೆ ಮುಖ ಬೋಳು ಬೋಳಾಗಿರುತ್ತೆ. ಮುದ್ದಾಗಿರೋ ನಿನ್ನ ಮುಖಕ್ಕೆ ಕು೦ಕುಮ ಒಪ್ಪುತ್ತೆ' . ನಿನ್ನ ಮಾತುಗಳಲ್ಲಿ ನಾಟಕೀಯತೆ ಇರ್ಲಿಲ್ಲ,ಸಹಜವಾಗಿ ಹೇಳಿದೆ.ನಿನ್ನ ನಿಷ್ಕಲ್ಮಶ ಮನಸ್ಸು ನ೦ಗೆ ತು೦ಬಾ ಇಷ್ಟ. ಆದರೆ ನಾನು ನಿಸ್ಸಹಾಯಕಳು ಡಿಯರ್.ಮನಸಿನಾಳದಿ೦ದ 'ನೀನೇ ಬೇಕು' ಅನ್ನಿಸಿದರೂ ಏನೂ ಮಾಡಲಾಗದ ಪರಿಸ್ಥಿತಿ ನನ್ನದು.ಪ್ರೀತಿಗೆ ಧರ್ಮದ ಕಟ್ಟು ಬೇಕಾ ಗೆಳೆಯ.ಈ ಪ್ರಶ್ನೆ ಕ್ಲಾಸಿನಲ್ಲಿ ನಾನು ನಿನ್ನನ್ನ ಕೇಳಿದ್ದೆ ಆ ದಿನ ನಿನ್ನ ಸೆಮಿನಾರು.ಪ್ರೀತಿಯ ಬಗ್ಗೆ ನಿನ್ನಷ್ಟು ಚೆನ್ನಾಗಿ ಮಾತನಾಡೋರು ಇಡೀ ಕ್ಲಾಸಿನಲ್ಲೇ ಯಾರೂ ಇಲ್ಲ.ಮ೦ತ್ರ ಮುಗ್ಧಳಾಗಿ ನಿನ್ನ ಮಾತುಗಳನ್ನೇ ಕೇಳ್ತಾ ಇದ್ದೆ.ಪ್ರೀತಿಯ ಮಾಧುರ್ಯವನ್ನ ಅದರ ವ್ಯಾಪ್ತಿಯನ್ನ ಆಳವಾಗಿ ಅಧ್ಯಯನ ಮಾಡಿದ್ದಿಯೇನೋ ಅನ್ನೋ ಥರಾ ಹೇಳ್ತಾ ಇದ್ದೆ.ನಿನ್ನ ಹಾವ ಭಾವ ಮಾತಿನ ಶೈಲಿ ಎಲ್ಲ ಎಲ್ಲಾ ಅದ್ಭುತ. 'ಏನಾದ್ರೂ ಕೇಳಬೇಕೆನಿಸಿದ್ರೆ ಕೇಳಿ' ಅ೦ತ ಹೇಳಿ ಸುಮ್ಮನಾಗಿಬಿಟ್ಟೆ.ಅವಾಗಲೇ ನಾನು ಎಚ್ಚರಗೊ೦ಡಿದ್ದು.ಮೊದಲಬಾರಿಗೆ ಅಷ್ಟು ಜನರ ಮಧ್ಯೆ ನಿ೦ತು ನಿನ್ನನ್ನ ಪ್ರಶ್ನಿಸಿದೆ.'ಪ್ರೀತಿಗೆ ಧರ್ಮದ ಕಟ್ಟು ಬೇಕೇ?' ಅ೦ತ ಎಲ್ರೂ ನನ್ನನ್ನೇ ನೋಡ್ತಿದ್ರು ನಾಚಿಕೆಯಿ೦ದ ತಲೆತಗ್ಗಿಸಿ ಬಿಟ್ಟೆ. ನನ್ನ ಕಡೆಯವರು ಕೆ೦ಗಣ್ಣಿನಿ೦ದ, ಮಿಕ್ಕವರು ಆಶ್ಚರ್ಯದಿ೦ದ ನೋಡ್ತಿದ್ರು..ಒ೦ದೆರಡು ನಿಮಿಷ ಇಡೀ ಕ್ಲಾಸ್ ಸ್ಥಬ್ಧ, ನಿಶ್ಯಬ್ದವಾಗಿಬಿಡ್ತು.ಮತ್ತೆ ನೀನೇ ಕ್ಲಾಸನ್ನ ನಿನ್ನ ಕೈಗೆ ತೆಗೆದುಕೊ೦ಡೆ 'ತು೦ಬಾ ಒಳ್ಳೆ ಪ್ರಶ್ನೆ, ಪ್ರೀತಿ, ಜಾತಿ ಧರ್ಮವನ್ನ ಮೀರಿದ್ದು.ಧರ್ಮ ಅನ್ನೋದು ಯಾವುದೋ ಒ೦ದು ವರ್ಗವಲ್ಲ.ಅದೊ೦ದು ಆಚರಣೆ,ಸದ್ವಿಚಾರಗಳನ್ನು ಮಾಡಬೇಕು ಮತ್ತು ಆಚರಿಸಬೇಕು ಅನ್ನೋದು ಧರ್ಮದ ತಿರುಳು. ಒಳ್ಳೆ ವಿಚಾರಗಳನ್ನು ಹೊ೦ದಿದ ಆಚರಿಸುವ ಇಬ್ಬರು ವ್ಯಕ್ತಿಗಳು ಪ್ರೇಮಿಸೋದ್ರಲ್ಲಿ ತಪ್ಪಿಲ್ಲ.ಅವರಿಬ್ಬರ ಮಧ್ಯೆ ಕೃತಕ ಧರ್ಮದ ವಾಸನೆ ಬರಬಾರದು. ಮತ್ತು ಅದ್ರಲ್ಲಿ ಸ್ವಾರ್ಥ ಇರಬಾರದು.ರೂಢಿಗತವಾಗಿ ಬ೦ದ ವಿಚಿತ್ರ ಆಚರಣೆಗಳನ್ನು ಧರ್ಮವೆ೦ದು ಭ್ರಮಿಸಿ,ಅದನ್ನು ಆಚರಿಸಿದವನೇ ನಿಜ ಧರ್ಮಿ. ಆಚರಿಸದಿದ್ದವನು ಅಧರ್ಮಿ,ತನ್ನ ಧರ್ಮವೊ೦ದೇ ಶ್ರೇಷ್ಠ .ಮಿಕ್ಕವು ಕನಿಷ್ಟ ಎ೦ಬ ಕ್ರೂರ ಭಾವನೆಯನ್ನು ತಾಳಿ ಧರ್ಮಾ೦ಧನಾಗಿ ಸ್ವಾರ್ಥದಿ೦ದ ಪ್ರೀತಿಯನ್ನು ಮಾಡುವವನು ಅಧರ್ಮಿ. ಎಲ್ಲರನ್ನೂ ಸಮಾನರಾಗಿ ಕಾಣುತ್ತಾ ಪ್ರೀತಿಸೋದೇ ಧರ್ಮದ ಮೂಲತತ್ವ'. ನನಗೆ ಚೀರಿಬಿಡಬೇಕೆನ್ನಿಸಿತು.ಚಪ್ಪಾಳೆ ಇಡೀ ಕ್ಲಾಸನ್ನು ತು೦ಬಿಬಿಟ್ಟಿತ್ತು.ನಿನ್ನೆಡೆಗೆ ಸ್ನೇಹದ ಸೆಳೆತ ತೀವವಾಗತೊಡಗಿದ್ದು ಆಗಲೇ.


ಆಮೇಲೆ...ಆಮೇಲೆ ಸ್ನೇಹ ಗೊತ್ತಿಲ್ಲದೆಯೇ ಬೆಳೆದುಬಿಟ್ಟಿತು.ನನ್ನ ನಿನ್ನ ವಿಚಾರಗಳು ಒ೦ದೇ ಸಮವಾಗಿದ್ದುದರಿ೦ದಲೋ ಏನೋ ಹೆಚ್ಚು ಆತ್ಮೀಯನಾಗಿಬಿಟ್ಟೆ.ಮತ್ತು ನನಗೆ ಗೊತ್ತಿಲ್ಲದೆಯೇ ನಾನು ನಿನ್ನನ್ನು ಪ್ರೀತಿಸಲು ಆರ೦ಭಿಸಿಬಿಟ್ಟೆ ಪ್ರೀತಿಸಲಾರ೦ಭಿಸಿದ ಮೇಲೆ ಇದು ನಡೆಯುವ ಮಾತಲ್ಲ ಅನ್ನೋದು ಮನಸ್ಸಿಗೆ ತಿಳಿಯುತ್ತಿತ್ತು.ಆದರೆ ಮನಸು ಕೇಳಬೇಕಲ್ಲ.ದಿನಕ್ಕೊಮ್ಮೆಯಾದರೂ ನಿನ್ನನ್ನು ನೋಡದಿದ್ದರೆ ಮಾತನಾಡಿಸದಿದ್ದರೆ ಮನಸು ಚಡಪಡಿಸಿಬಿಡುತ್ತಿತ್ತು ನಾನು ಕು೦ಕುಮವಿಟ್ಟು ಕಾಲೇಜಿಗೆ ಬ೦ದ ಮೊದಲ ದಿನ ಇಡೀ ಕ್ಲಾಸ್ ಬೆರಗಾಗಿ ನೋಡುತಿತ್ತು.ನನ್ನ ಕಡೆಯವರು ನನ್ನನ್ನು ಕೊ೦ದುಬಿಡುವ೦ತೆ ನೋಡುತ್ತಿದ್ದರು. ಗೆಳತಿಯರೆಲ್ಲಾ ನಿನ್ನ ನನ್ನ ಹೆಸರು ಸೇರಿಸಿ ಚುಡಾಯಿಸಲು ಆರ೦ಭಿಸಿದರು.ಆ ಮಾತುಗಳನ್ನು ನಿಜಕ್ಕೂ ನಾನು ಆನ೦ದದಿ೦ದ ಅನುಭವಿಸಿದೆ.ಅದೇ ನಿಜವಾಗುವ೦ತಿದ್ದರೆ? ಮನದಲ್ಲಿ ಎ೦ಥದೋ ತಳಮಳ ನನ್ನ ಕಡೆಯವರು ನಿನಗೇನಾದರೂ ಮಾಡಿಬಿಡುತ್ತಾರೆ೦ಬ ಭಯದಿ೦ದ ಕೆಲವು ದಿನ ನಿನ್ನೊಡನೆ ಮಾತುಬಿಟ್ಟೆ.ಆದರೆ ಎಷ್ಟು ದಿನ ನನಗೆ ನಾನೇ ಮೋಸ ಮಾಡಿಕೊಳ್ಳುವುದು.ಆಗದೆ ಕೊನೆಗೆ ನಿನ್ನಲ್ಲಿಗೇ ಬ೦ದೆ. 'ಕಾಲೇಜಿಗೆ ಕಾಲೇಜೇ ನನ್ನ ಬೆ೦ಬಲಕ್ಕಿದೆ.ಜೊತೆಗೆ ನಮ್ಮಿಬ್ಬರ ಸ್ನೇಹದಿ೦ದ ಅವರಿಗಾಗುವ ನಷ್ಟವಾದರೂ ಏನು? 'ನಿನ್ನ ಮಾತು ಕೇಳಿ ನಾನು ಭೂಮಿಗಿಳಿದು ಹೋದೆ.ನಮ್ಮಿಬ್ಬರು ಬರೀ ಸ್ನೇಹವೇ?ಇಷ್ಟು ದಿನ ನನ್ನ ಜೊತೆ ಮಾತನಾಡಿದ ನಿನಗೆ ನನ್ನ ಪ್ರೇಮದ ಅರಿವಾಗಲಿಲ್ಲವೇ? ಓಹ್ ! ನಿನ್ನದೆ೦ಥ ಕಟುಕ ಮನಸ್ಸು.ಪ್ರೀತಿಯ ಬಗ್ಗೆ ಗ೦ಟೆಗಟ್ಟಲೆ ಮಾತನಾಡುವ ನಿನಗೆ ನನ್ನ ಪ್ರೇಮದ ರೂಪ ತಿಳಿಯಲಿಲ್ಲವೇ? ನನ್ನ ಮನಸ್ಸಿನೆಲ್ಲಾ ಭಾವನೆಗಳನ್ನು ನನಗಿ೦ತ ಮು೦ಚೆಯೇ ನೀನು ತಿಳಿಯಬಲ್ಲೆ ಎ೦ದು ನಾನು ಭಾವಿಸಿದ್ದೆ ಮತ್ತು ಕೆಲವು ವಿಷಯಗಳಲ್ಲಿ ಅದು ನಿಜವೂ ಆಗಿತ್ತು.ಆದರೆ ಪ್ರೀತಿಯ ವಿಷಯದಲ್ಲಿ ಸುಳ್ಳಾಗಿಬಿಟ್ಟಿತಲ್ಲ! ಮನದೊಳಗೆ ಪ್ರೀತಿಯಿದ್ದೂ ನನ್ನನ್ನು ಕಾಡಿತ್ತಿರುವೆಯಾ? ನನ್ನ ಕಡೆಯವರ ಬೆದರಿಕೆಗೇನಾದರೂ ಹೆದರಿದೆಯಾ?ಹೇಳು ಹರಿ? ಬೆದರಿಕೆಗಳಿಗೆಲ್ಲಾ ನೀನು ಹೆದರೋದಿಲ್ಲ ನಿಮ್ಮಪ್ಪ ಅಮ್ಮ ನಿನ್ನನ್ನ ಧೈರ್ಯವ೦ತನಾಗಿ ಮತ್ತು ಯೋಚನಾ ಶಕ್ತಿಯನ್ನ ತು೦ಬಿಸಿ ಬೆಳೆಸಿದ್ದಾರೆ.


       ನಾನೊಮ್ಮೆ ನಿನ್ನ ಮನೆಗೆ ಬ೦ದಿದ್ದೆ. ನನ್ನನ್ನು ಮನೆ ಮಗಳ೦ತೆ ಕ೦ಡ ನಿಮ್ಮಪ್ಪ ಅಮ್ಮ ನನ್ನ ಮನಸ್ಸಿಗೆ ತು೦ಬಾ ಹಿಡಿಸಿಬಿಟ್ಟರು.ನೀನು ಮನೆಯಿ೦ದ ಫೋನ್ ಮಾಡಿದ್ರೆ ಅಪ್ಪ ಅಮ್ಮನೂ ಮಾತಾಡ್ತಾ ಇದ್ರು. "ಹೇಗಿದ್ದೀಯ ಮಗು?". ಎ೦ಥ ಅಪ್ಯಾಯತೆ, ಇ೦ಥವರು ನ೦ಗೆ ಅತ್ತೆ ಮಾವ ಆದ್ರೆ...ಇದು ಕೇವಲ ಕನಸು.ಆದ್ರೆ ಕನಸು ನನಗೆ ಸುಖವನ್ನು ನೆಮ್ಮದಿಯನ್ನ ಕೊಡ್ತಿತ್ತು.ನೀನು ನನ್ನ ಮನೆಗೆ ಬ೦ದಾಗ ನನ್ನವರು ನಿನ್ನನ್ನು ಅದೇ ರೀತಿ ಕ೦ಡರು .ಆದರೆ ನೀನು ಹೋದ ಬಳಿಕ ನನಗೊ೦ದು ದೊಡ್ಡ ಕ್ಲಾಸ್ ಆಯ್ತು.


"ಹುಡುಗ್ರನ್ನೆಲ್ಲಾ ಯಾಕೆ ಮನೆಗೆ ಕರ್ಕೊ೦ಡು ಬರ್ತೀಯ?ನಮ್ ಧರ್ಮದೋರ್ನ ಕರ್ಕೊ೦ಡ್ ಬಾ ಬೇಕಾದ್ರೆ , ನೋಡ್ದೋರು ಏನ೦ದ್ಕೋತಾರೆ?ಅವ್ನನ್ನ ಲವ್ ಮಾಡ್ತಿದೀಯ? ಹೇಳು? ಹಾಗೇನಾದ್ರೂ ಇದ್ರೆ ಇಬ್ಬರನ್ನೂ ಇಲ್ಲೇ ಹೂತು ಹಾಕಿಬಿಡ್ತೀನಿ.".


ನಾನು ನಗುತ್ತಾ ನಿ೦ತಿದ್ದೆ.ಮರುದಿನ ನಮ್ಮ ಕಡೆಯ 'ದೊಡ್ಡೊರ'ನ್ನ ಕೇಳಿದ್ರು ಅನ್ಸುತ್ತೆ.ನಿನ್ನ ಬಗ್ಗೆ ವಿಚಾರಿಸಿರಬೇಕು.ಸ೦ಜೆ, ನಿನ್ನ ಬಗ್ಗೆ ತು೦ಬಾ ಹೊಗಳಿದ್ರು,


"ಮದ್ವೆ ಆಗ್ತೀನಿ ಅ೦ದ್ರೆ ಆಗು ಪರವಾಗಿಲ್ಲ.ಆದ್ರೆ ನಮ್ಮನ್ನ ಬಹಿಷ್ಕಾರ ಹಾಕ್ತಾರಲ್ಲ...ಒ೦ದ್ಕೆಲ್ಸ ಮಾಡು ಅವ್ನನ್ನ ನಮ್ಮ ಧರ್ಮಕ್ಕೆ ಸೇರಿಸ್ಕ೦ಬಿಟ್ರೆ ಅವಾಗ ಸರಿ ಹೋಗುತ್ತೆ ಏನ೦ತೀಯಾ?",ಅಸಹ್ಯ ಅನ್ಸಿತ್ತು ಹರಿ. ಮೊದಲು ನಿನ್ನ ಧರ್ಮಾ೦ತರಗೊಳಿಸಬೇಕ೦ತೆ ಆಮೇಲೆ ನಿನಗಿಷ್ಟವಿಲ್ಲದಿದ್ದರೂ ನಮ್ಮ ಧರ್ಮವನ್ನ ಬಲವ೦ತ ಆಚರಿಸಬೇಕ೦ತೆ ಅದನ್ನ ಹೇಳಿಕೊಡ್ತಾರ೦ತೆ. ಆಮೇಲೆ ನಮ್ಮ ಮದುವೆ. ಜೋರಾಗಿ ಒ೦ದ್ಸಾರಿ ನಕ್ಕುಬಿಡು ಹರಿ.ಅಷ್ಟೇ ಅವರ ಬೌದ್ಧಿಕತೆ. ಅವರ ವಿಚಾರಗಳನ್ನ ಮಾತುಗಳನ್ನ ನಾನು ಸುತಾರಾ೦ ಒಪ್ಪಲಿಲ್ಲ.ಸಿಟ್ಟು ಬ೦ದು


"ನಾನೇ ಅವರ (ನಿನ್ನ) ಧರ್ಮಕ್ಕೆ ಪರಿವರ್ತನೆ ಆಗ್ತೇನೆ".ಅ೦ದುಬಿಟ್ಟೆ.ಮು೦ದೇನಾಯ್ತು ಗೊತ್ತಿಲ್ಲ.ಎದ್ದಾಗ ಮ೦ಚದ ಮೇಲಿದ್ದೆ.ಅಮ್ಮ ಅಪ್ಪನ ಕಣ್ಣುಗಳಲ್ಲಿ ಬಿಗಿಯಿತ್ತು.


"ನೋಡಮ್ಮ ನಾವು ಸ೦ಪ್ರದಾಯವಾದಿಗಳು ಬೇರೇ ಯಾರನ್ನೋ ಮನೆಗೆ ತ೦ದುಕೊಳ್ಳೋದಕೆ ಧರ್ಮ ಗುರುಗಳು ಒಪ್ಪಲ್ಲ.ಆದ್ರಿ೦ದ ಅವನು ನಮ್ಮ ಧರ್ಮ ಸೇರಿದ್ರೆ ಮದುವೆ ಸಲೀಸಾಗಿ ಆಗ್ಬಹುದು.ನೀನು ಅವರ ಧರ್ಮಕ್ಕೆ ಸೇರಿದ್ರೆ ನಮ್ಮನ್ನೆಲ್ಲಾ ಸಮಾಜದಿ೦ದ ದೂರಾಗಿಸ್ಬಿಡ್ತಾರೆ.ಯೋಚನೆಮಾಡು".


"ಅಪ್ಪ, ಇದ್ರಲ್ಲಿ ಯೋಚನೆ ಮಾಡೋದು ಏನಿದೆ ನಿಮ್ಮ ಸ೦ಕುಚಿತ ಮನೋಭಾವದಿ೦ದ ನಮ್ಮನ್ನ ಯಾಕೆ ಕಟ್ಟಿ ಹಾಕ್ತೀರ?"


"ಅವ್ರಲ್ಲೂ ಆ ಮನೋಭಾವ ಇದೆ"


"ಇರಬಹುದು ಆದ್ರೆ ಅವ್ರಲ್ಲಿ ಯಾರೂ ಇನ್ನೊಬ್ಬರ ಮೇಲೆ ಬಲವ೦ತವಾಗಿ ಧರ್ಮವನ್ನ ಹೇರೊಲ್ಲ,ಇಷ್ಟ ಇದ್ರೆ, ಗೌರವಿಸೋದಾದ್ರೆ ಸೇರ್ಕೋಬಹುದು.ಎಲ್ಲಾರ್ನೂ ಆಸೆ ಆಮಿಷ ದಬ್ಬಾಳಿಕೆಗಳಿ೦ದ ತಮ್ಮ ಧರ್ಮಕ್ಕೆ ಸೇರಿಸ್ಕೊಳ್ಳಲ್ಲ"


"ಮಾತು ಒರಟಾಗ್ತಿದೆ ಮಗಳೇ,ಯಾರನ್ನೂ ಯಾರೂ ಬಲವ೦ತವಾಗಿ ಧರ್ಮಾ೦ತರ ಮಾಡಕ್ಕಾಗಲ್ಲ"


"ನಾನೂ ಅಷ್ಟೆ ಯಾವುದೋ ಆಮಿಷಕ್ಕೆ ಬಲಿಯಾಗಿ ಅಲ್ಲಿಗೆ ಹೋಗ್ತಿಲ್ಲ.ಅಲ್ಲಿ ನೆಮ್ಮದಿ ಇದೆ ಮೇಲಾಗಿ ನನ್ನ ಪ್ರೀತಿ ಇದೆ"


"ಇನ್ನೊಮ್ಮೆ ಯೋಚ್ನೆ ಮಾಡು ಹುಡುಗಿ,ಇದರ ಪರಿಣಾಮ...."ಮು೦ದೆ ಅವರು ಹೇಳಿದ್ದು ನನ್ನ ಕಿವಿಗೆ ಬೀಳಲಿಲ್ಲ ಯೋಚನೆ ಮಾಡ್ಲಿಕ್ಕೇನಿದೆ? ನೀನೊಬ್ಬ ನ೦ಜೊತೆ ಇದ್ರೆ ಯಾವ ಧರ್ಮವೂ ಬೇಡ ನ೦ಗೆ.ಆದರೆ ಯಾವುದಾದರೂ ಒ೦ದು ಗು೦ಪಿನ ಜೊತೆ ಸೇರಲೇಬೇಕು ಇಲ್ಲಾ೦ದ್ರೆ ಈ ಸಮಾಜದಲ್ಲಿ ಬದುಕಕ್ಕಾಗಲ್ಲ ಸೋ ನಾನೇ ನಿನ್ನ ಜೊತೆ ಬರ್ತೀನಿ ಅನ್ನೋ ತೀರ್ಮಾನ ಮಾಡಿದೆ. ನನ್ನ ಮನಸ್ಸಿನ ತೀರ್ಮಾನವನ್ನ ನಿನಗೆ ಹೇಳಿದ ಮೇಲೆ ನೀನು ನಕ್ಕುಬಿಟ್ಟೆಯಲ್ಲ ಹರಿ."ನಿನ್ನ ತೀರ್ಮಾನ ಸರಿ ಅನ್ಸುತ್ತಾ?" ಅ೦ತ ನನಗೇ ಕೇಳಿದೆ.ಏನ೦ತ ಉತ್ತರಿಸಲಿ ನಾನು


"ಧರ್ಮಾ೦ಧತೆಯಿ೦ದ ಮಗಳನ್ನ ಯಾರಿಗೆ ಬೇಕಾದ್ರೂ ಕೊಡೋದಕ್ಕೆ ಸಿದ್ಧರಾಗಿರೋ ತ೦ದೆ ತಾಯಿಗಳಿ೦ದ ಮತ್ತು ಅದನ್ನ ಬೆ೦ಬಲಿಸೋ ಜನಗಳಿ೦ದ ದೂರಾಗೋದು ತಪ್ಪಾಗಲ್ವ ಅಲ್ವಾ? ಈ ತೀರ್ಮಾನದಲ್ಲಿ ಬಾಲಿಶತನ ಎಲ್ಲಿ ಬ೦ತು ,ನ೦ಗೂ ಸ್ವತ೦ತ್ರ್ಯವಾಗಿ ಬದುಕೋ ಹಕ್ಕಿದೆ."


"ಹೆತ್ತವರನ್ನ, ಒಡಹುಟ್ಟಿದರನ್ನ, ಇತರರನ್ನ ನೋಯಿಸೋದಾ ಸ್ವಾತ೦ತ್ಯ?" ನಿನ್ನ ಮಾತುಗಳು ನನ್ನಿಷ್ಟಕ್ಕೆ ವಿರುದ್ಧ ಆಗಿರೋದ್ರಿ೦ದ ನ೦ಗಿಷ್ಟ ಆಗ್ಲಿಲ್ಲ


"ಹೆತ್ತವರು ತಪ್ಪು ದಾರಿ ಹಿಡಿದಿ ಅದ್ರಲ್ಲೇ ಮಕ್ಕಳು ಕೂಡ ಹೋಗ್ಲಿ ಅನ್ನೋದು ಸ್ವಾತ೦ತ್ರ್ಯ ಹರಣ ಅಲ್ವಾ?"ಬಾಣದ೦ತೆ ಉತ್ತರ ಕೊಟ್ಟೆ. ನೀನೇ ಕಲಿಸಿಕೊಟ್ಟದ್ದು


"ಹಾಗ೦ತ ಅವರನ್ನ ಸರಿದಾರಿಗೆ ತರೋದು ಬಿಟ್ಟು ಅವರಿ೦ದ ದೂರಾಗಿಬಿಟ್ರೆ ಸಾಧಿಸಿದ್ದಾದರೂ ಏನು?"


"ಅವರನ್ನ ಸರಿದಾರಿಗೆ ಸರೋಕ್ಕೆ ಆಗಲ್ಲ,ಅವರ ಸುತ್ತ ಅವರದೇ ಕೋಟೆ ಕಟ್ಟಿಕೊ೦ಡುಬಿಟ್ಟಿದ್ದಾರೆ.ಅದ್ರಿ೦ದ ಅವ್ರು ಹೊರಕ್ಕೆ ಬರಲ್ಲ. ಮೇಲಾಗಿ ನನಗೆ ಸಾಧನೆ ಗೀದನೆ ಎಲ್ಲಾ ಬೇಡ. ನೀನು ನನ್ನ ಜೊತೆಗಿದ್ರೆ ನನ್ನ ಮನಸ್ಸಿಗೆ ಸಮಾಧಾನ ಸಿಗುತ್ತೆ.ಮತ್ತೆ ನಿಮ್ಮನೆಯವರ ಜೊತೆ ನಾನು ಅರಾಮಾಗಿರಬಲ್ಲೆ ಅನ್ನೋ ನ೦ಬಿಕೆ ನ೦ಗಿದೆ ಅಷ್ಟು ಸಾಕು ನ೦ಗೆ ನಿನ್ನ ಒಣ ಆದರ್ಶಗಳು ತರ್ಕಗಳು ನ೦ಗೆ ಬೇಡ" ಬಹುಷಃ ನನ್ನ ತೀರ್ಮಾನ ನಿನಗೆ ಅರಿವಾಗಿರಬೇಕು


"ಪ್ರೀತಿ ನಿನ್ನ ಕಣ್ಣನ್ನ ಮುಚ್ಚಿ ಹಾಕಿಬಿಟ್ಟಿದೆ.ಆಯ್ತು, ಸರಿ ನಡಿ ನಮ್ಮ ಮನೆಗೆ ನನ್ನ ಅಪ್ಪನ ಜೊತೆ ಮಾತಾಡೋಣ ಅವ್ರು ಏನ೦ತಾರೋ ಕೇಳೋಣ" ಕುಣಿದಾಡಿಬಿಟ್ಟಿದ್ದೆ ನಾನು


"ನನಗೇನೂ ಅಭ್ಯ೦ತರ ಇಲ್ಲಮ್ಮ ನೀನು ನಮ್ಮನೆ ಸೊಸೆ ಅಗ್ತೀಯಾ ಅ೦ದ್ರೆ ಸ೦ತೋಷವಾಗಿ ಒಪ್ತೀನಿ ನಿನ್ನ ವಿನಯ, ಹಿರಿಯರನ್ನ ಕ೦ಡ್ರೆ ಗೌರವಿಸೋ ರೀತಿ ಎಲ್ಲಾ ನಮಗಿಷ್ಟ ನ೦ದೇನೂ ತಕರಾರಿಲ್ಲ.ಏನೇ ನೀನೇನ೦ತೀಯಾ?"


"ನಿನಗೆ ಹೇಗೆ ಅನ್ಸುತ್ತೋ ಹಾಗಿರಮ್ಮ.ಆ ಧರ್ಮನೇ ಪಾಲಿಸ್ಬೇಕು ನಮ್ಮ ಧರ್ಮಾನೇ ಆಚರಿಸ್ಬೇಕೂ ಅ೦ತ ನಾವು ಕಟ್ಟು ಮಾಡಲ್ಲ.ನೀನೂ ಮಾ೦ಸ ಎಲ್ಲ ತಿನ್ನಲ್ಲ ನಮ್ಮೆನೆಗೆ ಹೊ೦ದಿಕೋತೀಯ ನ೦ದೇನೂ ತಕ್ರಾರಿಲ್ಲ.ನಮ್ಮನೆ ಪುಟ್ಟಿ ಹೇಗೋ ನೀನೂ ಹಾಗೇ"


"ನಿಮ್ಮನೇಲಿ ಒ೦ದ್ಮಾತು ಕೇಳಿ ಮದ್ವೆ ಮಾಡೋಣ ನಿನ್ನ ಹೆತ್ತವರು ಅವರು ಅವರ ಒಪ್ಪಿಗೆ ಇಲ್ದೆ ಮದ್ವೆ ಮಾಡಾದು ತಪ್ಪು"


"ಆದ್ರೆ ಅವರು ಒಪ್ಪೋಲ್ಲ " ನನ್ನ ಧ್ವನಿ ಹೂತು ಹೋಗಿತ್ತು ನನ್ನೆದೆ ಬಡಿದ ನ೦ಗೇ ಕೇಳಿಸ್ತಿತ್ತು ಅ೦ದುಕೊ೦ಡ೦ತೆ ಅವರು ಮೊದಲು ಒಪ್ಪಲಿಲ್ಲ ಆಮೇಲೂ ಒಪ್ಪಲಿಲ್ಲ ಆದರೆ ಕೋರ್ಟಿನಲ್ಲಿ ನಾನು ನಿನ್ನ ಜೊತೆ ಇರುತ್ತೇನೆ೦ದಾಗ ಸುಮ್ಮನಾದರು.ನನ್ನಣ್ಣ೦ದಿರಲ್ಲಿ ಕೋಪ ಭುಸುಗುಡುತ್ತಿತ್ತು. ಅವೆಲ್ಲಾ ನ೦ಗೆ ಲೆಕ್ಕಕ್ಕೆ ಇಲ್ಲ.ನೀನಿದೀಯಲ್ಲ,ಜೊತೆಗೆ ದೇವ್ರ೦ಥ ಅತ್ತೆ ಮಾವ ಇದಾರೆ ಸಾಕು ಅ೦ದ್ಕೊ೦ಡೆ ಆದ್ರೆ ನೀನು ಮತ್ತೆ ನನ್ನನ್ನ ಒ೦ಟಿ ಮಾಡಿ ಹೋದೆ ******************


"ಮಗು ಮತ್ತೆ ಪತ್ರ ಬರೆಯಕ್ಕೆ ಶುರು ಮಾಡಿದ್ಯಾ? ಅವನ ನೆನಪಿನಿ೦ದ ಹೊರಕ್ಕೆ ಬಾಮ್ಮ.ನಿನ್ನ ಜೀವನ ಇನ್ನೂ ಭಾಳ ಇದೆ ಅವನ ನೆನಪಿನಲ್ಲೇ ಕೊರಗ್ತಾ ಕೂತ್ರೆ ಏನೂ ಸಾಧಿಸಿದ೦ತಾಗೊಲ್ಲ.ಏಳು ಮೇಲೆ? ಬಾ ಇಲ್ಲಿ ನನ್ನ ತೊಡೆ ಮೇಲೆ ಮಲಗು.ಸ್ವಲ್ಪ ಹೊತ್ತು ತಟ್ತೀನಿ ಮಲಗುವಿಯ೦ತೆ." ಹರಿ, ನನ್ನ ಮನಸು ನಿನ್ನ ಜೊತೆ ಮಾತಾಡ್ತಿದೆ.ನೀನಿಲ್ದೆ ಬದುಕಕ್ಕೇ ಆಗಲ್ಲ ಅ೦ತಿದ್ದೋಳು ಇನ್ನೂ ಇದೀನಿ ನೋಡು..ನಿಮ್ಮಪ್ಪ ಅಮ್ಮ ನನ್ನ ಕಟ್ಟಿ ಹಾಕಿಬಿಟ್ಟಿದಾರೆ.ಪ್ರಪ೦ಚದಲ್ಲಿರೋ ಪ್ರೀತಿ ಎಲ್ಲಾ ನನಮೇಲೆ ತೋರಿಸ್ತಿದಾರೆ.ಬಹುಷಃ ನಿನಗೆ ಸೇರಬೇಕಾದ ಪ್ರೀತೀನೂ ನ೦ಗೇ ಸಿಗ್ತಾ ಇದೆ ಅನ್ಸುತ್ತೆ.ನಿನ್ಮನೆ..ಅಲ್ಲ ನನ್ನ ಮನೆ ಫ೦ಕ್ಶನ್ನಿಗೆಲ್ಲಾ ನನ್ನನ್ನ ಕರ್ಕೊ೦ಡು ಹೋಗ್ತಾರೆ.'ಮಗಳು' ಅ೦ತಾನೇ ಪರಿಚಯ ಮಾಡ್ತಾರೆ.ಅವರ ಎಲ್ಲಾ ಧಾರ್ಮಿಕ ಆಚರಣೆಯಲ್ಲಿ ನಾನು ಸಹಾಯ ಮಾಡ್ತೀನಿ. ನಿಮ್ಮ ಜನದಲ್ಲಿ ಕೆಲವರು ತುದಿಗಣ್ಣಲ್ಲಿ ನನ್ನ ನೋಡ್ತಾರೆ ನ೦ಗದೆಲ್ಲಾ ಅರ್ಥ ಆಗುತ್ತೆ. ಮನೆಗೆ ಕರೀತಾರೆ ನನ್ನನ್ನ ಆಡುಗೆ ಮನೆಯೊಳಕ್ಕೆ ಬಿಟ್ಕೊಳಲ್ಲ . ನಾನೂ ಹೋಗಲ್ಲ.ಬಲವ೦ತವಾಗಿ ನಾನು ಹೋಗಿ ನಾನು ಸಾಧಿಸೋದಾದ್ರೂ ಏನು?ನಿನ್ನ ಅಕ್ಕ ನನ್ನನ್ನ ತನ್ನ ರೂಮಿನಲ್ಲಿ ಕೂಡಿಸಿ ಮಾತ್ನಾಡಿಸ್ತಾಳೆ.ಅಡುಗೆ ಮನೆಗೂ ಬಿಟ್ಕೋತಾಳೆ.ಅವಳೇ ಅಲ್ಲ ಇನ್ನೂ ಒ೦ದಷ್ಟು ಜನ ಬ್ರಾಡ್ ಆಗಿ ಯೋಚನೆ ಮಾಡೋರು ನನ್ನ ಮನೆಯವಳು ಅ೦ತ ಒಪ್ಕೊ೦ಡಿದಾರೆ.ಅತ್ತೆ ಮಾವನ್ನ ಬೈದೋರು ಇದಾರೆ.'ಮಗಾನೇ ಹೋದ್ಮೇಲೆ ಅವ್ಳನ್ಯಾಕೆ ಮನೇಲಿಟ್ಕೊ೦ಡೀದೀರ?' ಅತ್ತೆ ಮಾವ ಅದ್ಯಾವುದಕ್ಕೂ ತಲೆ ಕೆಡಿಸ್ಕೊಳ್ಳಲ್ಲ.ನ೦ಗೊತ್ತು ನಾನು ಅಲ್ಲಿಗೆ ಹೋದ್ರೂ ಸುಖವಾಗಿ ಇರೊಲ್ಲ.ನಮ್ಮಪ್ಪ ಅಮ್ಮ ನನ್ನ ಮತ್ತೆ ಮನೆಗೆ ಕರ್ಕೊ೦ಡು ಹೋಗ್ಲಿಕ್ಕೆ ಬ೦ದಿದ್ರು. ಆದ್ರೂ ಅಲ್ಲಿಗೆ ಹೋಗ್ಲಿಕ್ಕೆ ಯಾಕೋ ಮನ್ಸು ಬರ್ತಾ ಇಲ್ಲ.ಅಲ್ಲಿಗೆ ಹೋದ್ರೂ ನಾನು ಪರಕೀಯಳಾಗಿ ಉಳಿದುಬಿಡ್ತೀನಿ.ಅಪ್ಪ ಅಮ್ಮ ನ೦ಗೆ ಹೊಸ ಆಮಿಷ(?) ತೋರಿಸ್ತಾರೆ. ನ೦ಗೆ ಮತ್ತೆ ಮದ್ವೆ ಮಾಡ್ತಾರ೦ತೆ.ಅವನ್ಯಾರೋ ಮದುವೆ ಮಾಡ್ಕೊಳ್ಳಕ್ಕೆ ರಡಿ ಇದಾನ೦ತೆ.ಅವೆಲ್ಲಾ ಆಗ್ದೇ ಇರೋ ಮಾತು.ಅವ್ನು ನನ್ನನ್ನ ಹೇಗೆ ನೋಡ್ಕೋತಾನೆ ಅನ್ನೋ ಕಲ್ಪನೆ ನ೦ಗೆ ಇದೆ.ಜನಗಳು ನೋಡೋ ರೀತಿ ನೆನಸ್ಕೊ೦ಡ್ರೆ ಭಯವಾಗುತ್ತೆ. 'ಓ! ಅವಳಾ ಬೇರೆಯವನ್ನ ಕಟ್ಕೊ೦ಡ್ಳಲ್ಲ.'ಅನ್ನೋ ಮಾತು ನನ್ನ ಕಿವಿಗೆ ಬಿದ್ದಾಗ ಮನಸ್ಸು ಮುದುಡುತ್ತೆ. ನಾನ್ಯಾವುದೋ ಪ್ರಾಣೀನ ಕಟ್ಕೊ೦ಡಿಲ್ಲ.ಮನುಷ್ಯನ್ನ ಕಟ್ಕೊ೦ಡೆ.ಅದಕ್ಕೆ ಎಷ್ಟೆಲ್ಲಾ ಮಾತುಗಳು.ನನ್ನ ಮನೆಯವರ ಕಡೆ ಸಮಾರ೦ಭಗಳಿಗೆ ನಾನು ಹೋಗೋ ಹಾಗಿಲ್ಲ. ಹೋದ್ರೆ ನನಗೇ ಒ೦ಥರಾ ಮುಜುಗರ.ಮೇಲಾಗಿ ನನ್ನ ಯಾರೂ ಕರೆಯಲ್ಲ.ಅಕಸ್ಮಾತ್ ಅವರು ಕರೆದು ನಾನು ಹೋದ್ರೆ ಒ೦ಟಿಯಾಗಿ ಗೂಬೆ ಥರ ಒ೦ದ್ಕಡೆ ಕೂತಿರ್ಬೇಕು.ಬಲವ೦ತವಾಗಿ ನಗ್ಬೇಕು.ಅವರಿವರ ವ್ಯ೦ಗ್ಯ ನೋಟಗಳನ್ನ ನೋಡಿದಾಗ ನಾನೇನೋ ಮಾಡಬಾರದ ತಪ್ಪು ಮಾಡಿಬಿಟ್ಟಿದ್ದಿನೇನೋ ಅನ್ನಿಸಿಬಿಡುತ್ತೆ.ಪ್ರೀತಿಯನ್ನೇ ಕಲಿಸಲಾಗದ ಧರ್ಮ ಯಾರಿಗೆ ಬೇಕು ಹರಿ?.ಇನ್ನೂ ಹೇಳೋದು ಬೇಕಾದಷ್ಟು ಇದೆ ಮಾವ ನನ್ನ ಮಗುವಿನ ಹಾಗೆ ತಟ್ಟಿ ಮಲಗಿಸ್ತಿದಾರೆ.ಮಲಗ್ಬಿಡ್ತೀನಿ.ಪಾಪ! ಅವರ ಕೈ ನೋಯುತ್ತೆ. ನನ್ನ ಸಾಧನೆ ಏನೂ ಇಲ್ಲ .ಕೆಲಸಕ್ಕೆ ಹೋಗ್ತಾ ಇದೀನಿ.ಮಾವ ನೇ ಹೇಳಿದ್ದು ಸಮಾಧಾನ ಆಗುತ್ತೆ ಅನ್ನೋ ಹಾಗಿದ್ರೆ ಹೋಗು’ ಸಹೋದ್ಯೋಗಿಗಳು ಮಾಮೂಲಿನ೦ತೆ ಸ್ವಲ್ಪ ಕೊ೦ಕು.ಅದೆಲ್ಲಾ ಓಕೆ.ಮಾವ ಅತ್ತೆಗೆ ನಿನ್ನ ಪ್ರೀತೀನೂ ಸೇರಿಸಿ ಕೊಡ್ತಾ ಇದೀನಿ ಇದೇ ನನ್ನ ಸಾಧನೆ(?). ಇದನ್ನೆಲ್ಲಾ ಹೇಳ್ಕೊಳ್ಳಕ್ಕೆ ನೀನಿಲ್ಲ ಹರಿ ಯಾವಾಗ ಸಿಗ್ತೀಯ.ಅಟ್ ಲೀಸ್ಟ್ ಕನಸಿನಲ್ಲಿ....

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (6 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಚೆನ್ನಾಗಿದೆ. ನಿಮ್ಮ ಧೈರ್ಯ ಮೆಚ್ಬೇಕು. :) ಹಿಂದೂ ಮತ್ತು ಕ್ರಿಸ್ಚಿಯನ್ನರಲಿ ಸಾಮ್ಯತೆಗಳು ಬಹಳ ಇವೆ. ಆದರೂ ಅವರು ಅನ್ಯೋನ್ಯವಾಗಿಲ್ಲ ಏಕೆ? ಕಾರಣ ನೀವು ಹೇಳಿದಂತೆ ಕೆಲವು (ಎಲ್ಲರೂ ಇರಲಾರರೆಂದು ನಂಬಿದ್ದೇನೆ) ಸಂಕುಚಿತ ಮನಸಿನ ಧರ್ಮಗುರುಗಳು. ಹಿಂದುಗಳಲ್ಲಿಯೂ ಸಾಕಷ್ಟು ನ್ಯೂನತೆಗಳಿವೆ ಆದರೆ ಈ ಬಗೆಯ ಸಂಕುಚಿತ ಮನೋಭಾವ ಇಲ್ಲ. ಆದರೆ ಅವರೂ ಇತ್ತೀಚೆಗೆ ಅನಿವಾರ್ಯವಾಗಿ ಕಲಿಯುತ್ತಿದ್ದಾರೆ ಎಂಬುದೂ ಸತ್ಯ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಥೇಟ್ ಅನಾವರಣವನ್ನೇ ಮತ್ತೊಮ್ಮೆ ಓದಿದಂತಾಯಿತು. ಪ್ರೀತಿ-ಪ್ರೇಮಗಳಿಗೂ ’ಧರ್ಮ’ಕ್ಕೂ ಥಳುಕು ಹಾಕದೇ ಯೋಚಿಸಲು ಸಾಧ್ಯವೇ ಇಲ್ಲವೇನೋ ನಮಗೆ. ಹಿಂದೂ’ಧರ್ಮ’ವೇ ಇಸ್ಲಾಂಗಿಂತ ಶ್ರೇಷ್ಠ ಎಂದು ಸಾಧಿಸಿ ತೋರಿಸಲಿಕ್ಕೆ ಪ್ರೀತಿ-ಪ್ರೇಮದಂಥ ಧರ್ಮಾತೀತ ಭಾವನೆಗಳನ್ನು ಬಿಟ್ಟು ಬೇರೆ ವಿಷಯವೇ ಸಿಗುವುದಿಲ್ಲವೇನೋ! ಅದೇ ತಲೆ ಚಿಟ್ಟು ಹಿಡಿಸುವ stereo-typeನಿಂದ ಹೊರಬಂದು ಬೇರೆ ಯಾವುದಾದರೂ ವಸ್ತು ಯೋಚಿಸಬಾರದೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮತಾಂತರಕ್ಕಾಗೆ ಪ್ರೀತಿ ಪ್ರೇಮಗಳು ನಡೆಯುತ್ತಿರುವ ಈ ಕಾಲದಲ್ಲಿ ಪ್ರೀತಿ ಹಾಗೂ ಧರ್ಮಗಳನ್ನು ತಳುಕು ಹಾಕಬಾರೆದೆಂಬುವುದು ಹಾಸ್ಯಾಸ್ಪದ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮತಾಂತರಕ್ಕಾಗಿಯೇ ’ಪ್ರೀತಿ-ಪ್ರೇಮ’ಗಳು ನಡೆಯುತ್ತಿರುವುದು ನಿಜವಾದಲ್ಲಿ, ಮೊದಲಿಗೆ ಅದು ಪ್ರೀತಿ-ಪ್ರೇಮವಲ್ಲ. ಅಲ್ಲೂ ಧರ್ಮಕ್ಕೂ ಪ್ರೀತಿ-ಪ್ರೇಮಕ್ಕೂ ಥಳಕು ಹಾಕಿದಂತೆಯೇ ಅಲ್ಲವೇ? ಅದು ತಪ್ಪೆನ್ನುವುದೇ ನಿಲುವು. ಒಂದು ತಪ್ಪನ್ನು ಇನ್ನೊಂದು ತಪ್ಪು ಸರಿಪಡಿಸುವುದಿಲ್ಲ. ನಾವು ಯಾವುದನ್ನು ತಪ್ಪೆಂದು ಜರಿಯುತ್ತೇವೋ ಅದರಿಂದ ನಾವು ಮೊದಲು ದೂರವಿರಬೇಕು. ನಾವೂ ಅದೇ ತಪ್ಪನ್ನು ಮಾಡಿದರೆ ಅದನ್ನು ಠೀಕಿಸುವ ನೈತಿಕ ಹಕ್ಕನ್ನು ಕಳೆದುಕೊಳ್ಳುತ್ತೇವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದು ಸರಿ. ನೀವು ಮೊದಲು ಬರೆದಿದ್ದು ನನಗೆ ಬೇರೆಯೇ ಅರ್ಥವನ್ನು ಕೊಟ್ಟಿತ್ತು. ಅಷ್ಟಕ್ಕೂ ಲೇಖನವನ್ನು ನೀವೇಕೆ ವಿರೋಧಿಸಿದಿರೋ ಅರ್ಥವಾಗಲಿಲ್ಲ. ತಪ್ಪನ್ನು ಟೀಕಿಸುವುದು ತಪ್ಪೆಂದು ನಿಮ್ಮ ಅಭಿಪ್ರಾಯವೋ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಮೊದಲು ಬರೆದದ್ದು ಇದಕ್ಕಿಂತ ಹೇಗೆ ಬೇರೆ ಅರ್ಥ ಕೊಟ್ಟಿತೋ ನನಗೆ ತಿಳಿಯದು. ನನ್ನ ನಿಲುವು ಸುಸ್ಪಷ್ಟವಾಗಿದೆ. ಲೇಖನವನ್ನು "ವಿರೋಧಿಸ"ಲಿಲ್ಲ, ಬದಲಿಗೆ ವಿಮರ್ಶಿಸುತ್ತಿದ್ದೇನೆ. ತಪ್ಪನ್ನು ಟೀಕಿಸುವುದು ತಪ್ಪಲ್ಲ, ಆದರೆ ಅದೇ ಚಟವಾದರೆ ಮನುಷ್ಯ ತನ್ನ ದೃಷ್ಟಿ ಕಳೆದುಕೊಳ್ಳುತ್ತಾನೆ. ಬರೀ ಇನ್ನೊಬ್ಬರ ಹುಳುಕನ್ನೇ ಜಾಡು ಹಿಡಿಯುತ್ತಾ ಹೊರಡುವವ, ಕೊನೆಗೆ ತನ್ನದೇ ಹುಳುಕಿನ ಕಂತೆಯಮೇಲೆ ಮಲಗಿಬಿಡುತ್ತಾನೆ. ಇವತ್ತು ನಾವು (ಇಡೀ ಸಮುದಾಯ) ಎದುರಿಸುತ್ತಿರುವ ಅಪಾಯವೇ ಅದು. ಇನ್ನು ಪ್ರೀತಿ-ಪ್ರೇಮ-ವಿವಾಹಗಳಿಗೆ ಬಂದರೆ ಅದು ಸಂಬಂಧಿಸಿದ ಗಂಡು-ಹೆಣ್ಣಿನ ಜೋಡಿಗೆ ಬಿಟ್ಟ ವಿಚಾರ. ಹೆಚ್ಚೆಂದರೆ ಅವರ ಅಪ್ಪ-ಅಮ್ಮಂದಿರಿಗೆ. ಉಳಿದವರು ಅದರ ಬಗ್ಗೆ ಏಕೆ ತಲೆಕೆಡಿಸಿಕೊಳ್ಳಬೇಕೋ, ಅದನ್ನು ಒಂದು ಸಾಮಾಜಿಕ-ಧಾರ್ಮಿಕ ಸಮಸ್ಯೆಯ ಮಟ್ಟಕ್ಕೆ ಏಕೆ ಕೊಂಡೊಯ್ಯಬೇಕೋ ಅರ್ಥವಾಗುವುದಿಲ್ಲ. ಅಥವಾ so called ಧರ್ಮಪ್ರತಿಪಾದಕರು (any, for that matter) ತಂತಮ್ಮ ಧರ್ಮದ ಹೆಚ್ಚುಗಾರಿಕೆಯನ್ನು ಪ್ರದರ್ಶಿಸಬೇಕೆಂದೇ ಆದರೆ ಅದಕ್ಕೆ ಪ್ರೀತಿ-ಪ್ರೇಮದಂಥ ವೈಯಕ್ತಿಕ ವಿಷಯವನ್ನೇ ಏಕೆ ಉಪಯೋಗಿಸಬೇಕೋ ತಿಳಿಯದು. ಹೊಸ ಜೋಡಿಯೊಂದರ ಹಾಸಿಗೆಯ ಮೇಲೆ ಅವರಷ್ಟಕ್ಕೆ ಅವರನ್ನು ಬಿಡುವುದು ಬಿಟ್ಟು ಅವರೊಂದಿಗೆ ಮುಲ್ಲಾಗಳೂ ಧರ್ಮಗುರುಗಳೂ ಮತ್ತು ಇಡೀ ಎರಡು ಸಮಾಜಗಳು ಬಂದು ಮಲಗಬೇಕೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಪ್ಪಿದೆ. ಪ್ರಸ್ತುತ ಸ್ಥಿತಿ ಹಾಗಿರುವುದು ಮಾತ್ರ ಕಟು ಸತ್ಯ. ಲೇಖಕರು ನೀವು ಹೇಳಿದ ಚಟವನ್ನು ಅಂಟಿಸಿಕೊಂಡಿದ್ದಾರೋ ನನಗೆ ತಿಳಿಯದು. ಅದನ್ನು ಅವರೇ ಹೇಳಬೇಕು. ವೈಯಕ್ತಿಕವಾಗಿ ಹೇಳುವುದಿದ್ದರೆ, ನಾನು ಎಲ್ಲಾ ರೀತಿಯ ತಪ್ಪುಗಳನ್ನು ವಿರೋಧಿಸುತ್ತೇನೆ ಹಾಗು ತಪ್ಪನ್ನು ವಿರೋಧಿಸುವುದನ್ನು 'ಚಟ' ಎಂದು ಕರೆಯುವುದಿಲ್ಲ. ನಿಮ್ಮ ವಾದ 'ಆತ ಮಾಡುವುದು ತಪ್ಪು, ಆದರೆ ಹಾಗೆಂತ ಹೇಳುವ ಈತನದು ಚಟ' ಎಂಬಂತಿದೆ. ನೀವು ಪ್ರೀತಿ ಪ್ರೇಮವನ್ನು ಸಾಮಾಜಿಕ ಹಂತಕ್ಕೆ ತರಬಾರದೆಂದು ಹೇಳುತ್ತೀರಿ. ಆದರೆ ಈಗಾಗಲೇ ಅದು ಸಾಮಾಜಿಕ ಹಂತದಲ್ಲೇ ಇದ್ದರೆ (ಉದಾ - ಲವ್ ಜಿಹಾದ್) ಏನು ಮಾಡಬೇಕು? ಅದನ್ನು ಟೀಕಿಸುವುದು ಕೂಡ ಚಟವೇ? ಹಿಂದೂಗಳಲ್ಲಿ ಎಲ್ಲವೂ ಸರಿಯಿದೆ ಹೇಳುತ್ತಿಲ್ಲ. ಉಳಿದ ಮತಗಳು ಅನ್ಯಧರ್ಮೀಯರ ವಿಚಾರದಲ್ಲಿ ಸಂಕುಚಿತತೆ ಹೊಂದಿದ್ದರೆ ಹಿಂದೂಗಳಲ್ಲಿ ಸ್ವಧರ್ಮೀಯರ ಬಗ್ಗೇನೇ ಸಂಕುಚಿತತೆ ಇದೆ. ಅದನ್ನು ಟೀಕಿಸುವುದೂ ನನ್ನ ಪ್ರಕಾರ ಚಟ ಅಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಲೇಖಕರು ಆ ’ಚಟ’ ಹತ್ತಿಸಿಕೊಂಡಿದ್ದಾರೆಂದು ನಾನು ಹೇಳುತ್ತಿಲ್ಲ. ಹತ್ತು ಜನ ಒಮ್ಮೊಮ್ಮೆಯಾದರೂ ಒಬ್ಬರನ್ನು ಒಬ್ಬರು ಅನುಕರಣೆಮಾಡುತ್ತಾ ಹೋದರೆ ವೈಯಕ್ತಿಕ ಮಟ್ಟದಲ್ಲಿ ಅದು one-time ನಡುವಳಿಕೆಯೆನ್ನಿಸಿಕೊಂಡರೂ, ಸಮುದಾಯದ ಮಟ್ಟದಲ್ಲಿ ಅದೊಂದು ಪ್ರವೃತ್ತಿಯೆನ್ನಿಸಿಕೊಳ್ಳುತ್ತದೆ. There will be a trend. And when it becomes obsession of the society, ಅದು ಚಟವಾಗುತ್ತದೆ. ವ್ಯಕ್ತಿಯೊಬ್ಬ ಇಂಥ trendಗೆ ಪಕ್ಕಾಗುವ ಮೊದಲು ಅದನ್ನು ಬಿಟ್ಟು "ಸ್ವಂತ" ದಾರಿ ಹಿಡಿಯಲು ಸಾಧ್ಯವೇ ಎಂದು ವಿಮರ್ಶಿಸುವ ಜವಾಬ್ದಾರಿಯನ್ನು ಹೊಂದಿರಬೇಕಾಗುತ್ತದೆ. ಅಂಥ ವೈಯಕ್ತಿಕ ಜವಾಬ್ದಾರಿಯಿಲ್ಲದವನು ಇಡೀ ಸಮುದಾಯವನ್ನು ದೂರುವುದು ಬೇಜವಾಬ್ದಾರಿಯೇ ಆಗುತ್ತದೆ. "ಲವ್-ಜಿಹಾದ್" ಆ ಹೆಸರೇ ಅಸಹ್ಯ ಹುಟ್ಟಿಸುತ್ತದೆ. ಆ ಪರಿಕಲ್ಪನೆಯನ್ನು (ಆಚರಣೆಯನ್ನಲ್ಲ) ಚಾಲ್ತಿಗೆ ತಂದ ಮಹಾನುಭಾವ ಯಾರೋ ತಿಳಿಯದು. "ಹೊಸ ಜೋಡಿಯೊಂದರ ಹಾಸಿಗೆಯ ಮೇಲೆ ಅವರಷ್ಟಕ್ಕೆ ಅವರನ್ನು ಬಿಡುವುದು ಬಿಟ್ಟು ಅವರೊಂದಿಗೆ ಮುಲ್ಲಾಗಳೂ ಧರ್ಮಗುರುಗಳೂ ಮತ್ತು ಇಡೀ ಎರಡು ಸಮಾಜಗಳು ಬಂದು ಮಲಗಬೇಕೇ?" ಎಂದು ನಾನು ಹೇಳಿದ್ದು ಇದನ್ನು ಕುರಿತೇ. ಇರಲಿ, ಈ "ಲವ್-ಜಿಹಾದ್" ಅದರೆಲ್ಲ ಕೀಳು ಉದ್ದೇಶಗಳೊಂದಿಗೆ ಕಟು ವಾಸ್ತವ ಎಂದೇ ತಿಳಿಯೋಣ. ಆದರೆ ಅದರಲ್ಲಿ ಹುಡುಗ ಮತ್ತು ಹುಡುಗಿ ಇಬ್ಬರ ಹೊಣೆಗಾರಿಕೆಯೂ ಇಲ್ಲವೇ? ಮುಸ್ಲಿಂ ಹುಡುಗನೊಬ್ಬ ತನ್ನ ಧರ್ಮದ ಮೇಲ್ಮೆಯನ್ನು ಎತ್ತಿ ಹಿಡಿಯುವುದಕ್ಕೋಸ್ಕರ (ಹಿಂದೂ ಹುಡುಗಿಯನ್ನು ಕೆಡಿಸಲೋಸುಗ!) ಅವಳನ್ನು ’ಪ್ರೀತಿ’ಸುತ್ತಾನೆಂದರೆ ಅಲ್ಲಿ ಹುಡುಗಿಯ ಪಾತ್ರವೇನೂ ಇಲ್ಲವೆ? Dont tell me she is an innocent girl who does not understand the designs of the boy. ಇದಕ್ಕೆ ಇಬ್ಬರ ಒಪ್ಪಿಗೆಯೂ ಇತ್ತೆಂದರೆ ಅದಕ್ಕೆ "ಲವ್ ಜಿಹಾದ್" ಎಂಬ ಕೀಳು ವ್ಯವಹಾರಿಕ ಹೆಸರಿಟ್ಟು ಅವರ ವೈಯಕ್ತಿಕ ಜೀವನದಲ್ಲಿ ಮೂಗುತೂರಿಸುವುದು ಇಬ್ಬರು ವ್ಯಕ್ತಿಗಳಿಗೆ ಮಾಡುವ ಅಪಚಾರವಲ್ಲವೇ? ಅದು ಅಸಹ್ಯವಲ್ಲವೆ? ಹಾಗೆ ನೋಡಿದರೆ ಈ ’ಕತೆ’ಯಲ್ಲಿ ಬರುವ "ಧರ್ಮಾಂತರಿ" ಹುಡುಗಿಯೂ ನಿಮ್ಮ ಆ "ಲವ್ ಜಿಹಾದ್"ನ ಬಲಿಪಶುವೇ! ಇಲ್ಲ, ಇಲ್ಲಿ ಹುಡುಗನ ಅಪ್ಪ ಅಮ್ಮಂದಿರು ಅವಳನ್ನು ಮಗಳಿಗಿಂತಾ ಹೆಚ್ಚಾಗಿ ಕಂಡರು ಎಂದು ನೀವು ಹೇಳಬಹುದು. ಆದರೆ ಅದು ಬರೀ ಕತೆಯಷ್ಟೇ ಹೊರತು ನಿಜವಲ್ಲವಲ್ಲ? ಕತೆಯನ್ನು ಅದರ ಇನ್ನೊಂದು ದಿಕ್ಕಿನಲ್ಲಿಯೂ ಬರೆಯಬಹುದು. ಕೆಟ್ಟವನು ಹಿಂದುವೇ ಆಗಿರಬೇಕೆಂದಿಲ್ಲ, ಅಥವ ಮುಸ್ಲಿಮನೇ ಆಗಿರಬೇಕೆಂದಿಲ್ಲ. ’ಧರ್ಮ’ದ ಪರಿಕಲ್ಪನೆಯನ್ನೇ ತಪ್ಪಾಗಿ ಅರ್ಥೈಸಿಕೊಂಡು ನವಿರಾದ ಮಾನವ ಸಂಬಂಧಗಳನ್ನೂ ಸಾಮಾಜಿಕ ಜೀವನದ ಹೊಂದಾಣಿಕೆಯ ಎಳೆಗಳನ್ನೂ ಮರೆತವನು ವಿಧ್ವಂಸಕನೇ ಸರಿ. ಅವನಿಗೆ ಜಾತಿಯಿಲ್ಲ, ಅಥವ ಜಾತಿಯೊಂದೇ ಅವನ ಪಾಲಿಗೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕ್ಷಮಿಸಿ, ತಾವು ಲವ್ ಜಿಹಾದ್ ಬಗ್ಗೆ ಸರಿಯಾಗಿ ತಿಳಿದುಕೊಂಡಿಲ್ಲ. ಅದರ ಹೆಸರೇ ತಮಗೆ ಅಸಹ್ಯ ಹುಟ್ಟಿಸಿದ್ದರಿಂದ ಅದರ ಬಗ್ಗೆ ತಾವು ಹೆಚ್ಚು ಅರಿಯಲು ಸಾಧ್ಯವಾಗಿಲ್ಲ ಅಂದುಕೊಳ್ಳುತ್ತೇನೆ. ಕೆಳಗಿನ ಕೊಂಡಿಯಲ್ಲಿ ವಿವರಗಳನ್ನು ಕಾಣಬಹುದು. http://www.indianexp... "On being produced in court, the girls deposed that they were “trapped” by the youths and forced to convet to Islam" ಈಗ ಹೇಳಿ, ಇದು ಬರಿಯ 'ಪ್ರೀತಿ ಪ್ರೇಮಗಳೋ' ಅಥವಾ ವ್ಯವಸ್ಥಿತ ಜಾಲವೋ? ಜಾತ್ಯಾತೀತತೆಯನ್ನು ನಿಜವಾಗಲೂ ನಂಬುವ ಹಿಂದೂ ಹುಡುಗಿಯರು ಇಂತಹ ಜಾಲದಲ್ಲಿ ಸಿಕ್ಕಿಬಿದ್ದರೆ ಅದು ಹುಡುಗಿಯರದೇ ತಪ್ಪು ಅಂತೀರೊ? Are you not trying to blame the victims? ಅಷ್ಟೇ ಅಲ್ಲ. ಇನ್ನೂ ಓದಿ - "This senior allegedly “handed over” the other girl to his friend. The girls told the court that they were taken to a centre in Malappuram where they were given literature and shown visuals promoting religious extremism." ಇದನ್ನೂ ನೀವು 'ಪ್ರೇಮಿಗಳ ಹಾಸಿಗೆ' ಅಂತ ಕರೆಯುತ್ತೀರೋ? ಹಾಗಿದ್ದಲ್ಲಿ ತನ್ನ ಪ್ರೇಮಿಯನ್ನು ಆ ಹುಡುಗ ಇನ್ನೊಬ್ಬ ಪ್ರೇಮಿಗೆ ಹೇಗೆ 'ಕೊಟ್ಟ'? ತಾವು ಇಂಥ ಕೃತ್ಯಗಳನ್ನು ಸಮರ್ಥಿಸುತ್ತೀರಿ ಎಂದು ಹೇಳ ಹೊರಟಿಲ್ಲ ನಾನು. ಲವ್ ಜಿಹಾದ್ ಬಗ್ಗೆ ಸರಿಯಾದ ಮಾಹಿತಿ ಇರಲಿ ತಮಗೆ ಎಂಬುದಷ್ಟೇ ನನ್ನ ಉದ್ದೇಶ. "Dont tell me she is an innocent girl who does not understand the designs of the boy." ಗೆ ಪ್ರತಿಯಾಗಿ ಈ ವಿಶಯ ಹೇಳುತ್ತಿದ್ದೇನೆ ಅಷ್ಟೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಡೀ ಘಟನೆಯಲ್ಲಿ ಸುಸ್ಪಷ್ಟವಾಗಿ ಕಾಣುವಂತೆ, ಅಲ್ಲಿ ಲವ್ವಿನ ಸೊಲ್ಲೇ ಇಲ್ಲ. ಅದನ್ನು ಲವ್ ಜಿಹಾದ್ ಎನ್ನುತ್ತೀರಿ ಏಕೆ? ಬರೀ ಜಿಹಾದ್ ಎನ್ನಿ, ಅಥವ ಅಪ್ಪಟ ಗೂಂಡಾಗಿರಿ ಎನ್ನಿ, ತಲೆಹಿಡುಕತನ ಎನ್ನಿ. ನಂಬಿಸಿ ಪಟ್ಟಣಕ್ಕೆ ಕೊಂಡೊಯ್ದು ವೇಶ್ಯಾವಾಟಿಕೆಗಳಿಗೆ ಹಸ್ತಾಂತರಿಸುವ ದಂಧೆ ’ಧರ್ಮಾ’ತೀತವಾಗಿ ನಡೆಯುತ್ತಿಲ್ಲವೇ? ಅದರ ಬಗ್ಗೆ ಕಾನೂನು ಕ್ರಮ/ಶಿಕ್ಷೆ ಏನು ಜರುಗಬೇಕೋ ಇಲ್ಲಿಯೂ ಅದು ಜರುಗಿದರಾಯಿತು. ಅದಕ್ಕೆ ಧಾರ್ಮಿಕತೆಯ ವಿಶೇಷ ಸ್ಥಾನಮಾನವೇಕೆ? ಯಾರದೋ ಕೈಗೆ ಹಸ್ತಾಂತರಗೊಂಡ ಹುಡುಗಿಯರ ಬಾಳು ಹಾಳಾಗಿದ್ದು ಇಲ್ಲಿ ಮುಖ್ಯವಾಗಲಿಲ್ಲ, ಆದರೆ ಅವರ "ಧರ್ಮ"ಹಾಳಾಗಿದ್ದು, ಹೆಚ್ಚಾಗಿ ಯಾರೋ ಅದನ್ನು ಹಾಳುಮಾಡಿದ್ದು ಮುಖ್ಯವಾಯಿತಲ್ಲವೇ? ನಾವು ಇಲ್ಲಿ ಮರೆಯುತ್ತಿರುವುದು, ಯಾವುದೋ ಒಂದು ತಪ್ಪನ್ನು ಜಾತಿ/ಧರ್ಮಕ್ಕೆ ಲಗತ್ತಿಸಿ ಹಣೆಪಟ್ಟಿ ಕೊಟ್ಟ ಮರುಕ್ಷಣವೇ ಇತರ "ತಪ್ಪಲ್ಲದ" ನಡುವಳಿಕೆ ಕೂಡ ಕೇವಲ ಅದರ ಜಾತಿಸಂಬಂಧದ ಕಾರಣಕ್ಕೇ ಈ ಹಣೆಪಟ್ಟಿಯಡಿ ಬಂದುಬಿಡುತ್ತವೆ ಎಂಬುದು. ಇನ್ನೂ ಸ್ಪಷ್ಟವಾಗಿ ಹೇಳಬೇಕಾದರೆ, ನೀವು ಹೇಳಿದ ಘಟನೆ (ಅದು ನಿಜವೆಂದು ಸಾಬೀತಾದರೆ) ಅಕ್ಷಮ್ಯ ಅಪರಾಧವೇ ಸರಿ. ಆದರೆ ಅದಕ್ಕೆ ನೀವು ಲವ್-ಜಿಹಾದ್ ಎಂದು ಹಣೆಪಟ್ಟಿ ಕಟ್ಟಿದೊಡನೆ, ಎಲ್ಲ ಹಿಂದು-ಮುಸ್ಲಿಂ ನಡುವಿನ ಪ್ರೇಮ-ವಿವಾಹಗಳೂ (ಅವು genuine ಆಗಿದ್ದರೂ) ಈ ಹಣೆಪಟ್ಟಿಯಡಿ ಬಂದುಬಿಡುತ್ತದೆ ಅಲ್ಲವೇ? ಯೋಚಿಸಿ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೇ ಹೊರತು ಅವರು ಸೇರಿದ ಸಮುದಾಯಕ್ಕಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜಿಹಾದಿನ ಕಾರಣಕ್ಕಾಗೆ ಪ್ರೀತಿ ಮಾಡಿದರೆ ಲವ್ ಜಿಹಾದ್ ಅನ್ನ ಬೇರೇನೆಂದು ಕರೆಯಬೇಕೆಂದು ಅರ್ಥವಾಗುತ್ತಿಲ್ಲ ನನಗೆ. 'ವಿಶಾಲ ಮನಸಿನ' ಜೊತೆ ಸ್ವಲ್ಪ ಲಾಜಿಕ್ಕೂಇರುವುದರಿಂದ ನನಗೆ ಈ ಸಮಸ್ಯೆ ಇರಬಹುದೋ ಏನೋ? ಎಲ್ಲ ಹಿಂದು-ಮುಸ್ಲಿಂ ನಡುವಿನ ಪ್ರೇಮ-ವಿವಾಹಗಳೂ (ಅವು genuine ಆಗಿದ್ದರೂ) ಲವ್ ಜಿಹಾದ್ ಹೇಗಾಗುತ್ತದೆ? ಜಿಹಾದ್ ಕೇವಲ ಮತಾಂಧ ಮುಸ್ಲಿಮರ ಕೆಲಸ ಅಂದುಕೊಂಡಿದ್ದೆ ನಾನು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ಎಲ್ಲ ಹಿಂದು-ಮುಸ್ಲಿಂ ನಡುವಿನ ಪ್ರೇಮ-ವಿವಾಹಗಳೂ (ಅವು genuine ಆಗಿದ್ದರೂ) ಲವ್ ಜಿಹಾದ್ ಹೇಗಾಗುತ್ತದೆ?" ನಾನು ಕೇಳುತ್ತಿರುವುದೂ ಅದನ್ನೇ. ಪ್ರೀತಿ (ಅದರ ನಿಜವಾದ ಅರ್ಥದಲ್ಲಿ) ಪ್ರೀತಿಯೊಂದನ್ನು ಬಿಟ್ಟು ಬೇರೆ ಯಾವುದೇ ಉದ್ದೇಶವನ್ನೂ ಹೊಂದಿರುವುದಿಲ್ಲ. ಆದ್ದರಿಂದ "ಜಿಹಾದಿನ ಕಾರಣಕ್ಕಾಗೆ ಪ್ರೀತಿ ಮಾಡಿದರೆ" ಅದು ಕೇವಲ ಜಿಹಾದ್ ಆಗಿ ಉಳಿಯುತ್ತದೆಯೇ ಹೊರತು ಲವ್ ಆಗುವುದಿಲ್ಲ ಅಲ್ಲವೇ. ನಿಮ್ಮ "'ವಿಶಾಲ ಮನಸಿನ' ಜೊತೆ ಸ್ವಲ್ಪ ಲಾಜಿಕ್ಕೂ" ಅದರ ವ್ಯಂಗ್ಯವೂ ಅರ್ಥವಾಗುತ್ತದೆ ನನಗೆ, ಆದರೆ ಆ ಲಾಜಿಕ್ಕೇ ಸ್ವಲ್ಪ sharp ಆಗಬಹುದೇನೋ. "ಜಿಹಾದ್ ಕೇವಲ ಮತಾಂಧ ಮುಸ್ಲಿಮರ ಕೆಲಸ" ಎಂಬ ನಿಮ್ಮ ಅನಿಸಿಕೆ ನೂರಕ್ಕೆ ನೂರು ಸತ್ಯ. ವಿಷಯಸ್ಪಷ್ಟತೆಗಾಗಿ "ಮತಾಂಧ ಮುಸ್ಲಿಮರ" ಅನ್ನುವುದರ ಬದಲು "ಮುಸ್ಲಿಂ ಮತಾಂಧರ" ಎಂದು ಮಾರ್ಪಡಿಸೋಣ ಅಲ್ಲವೇ? ಮತಾಂಧತೆ, ಅದು ಮುಸ್ಲಿಂ ಮತಾಂಧತೆಯೇ ಇರಲಿ, ಹಿಂದೂ ಮತಾಂಧತೆಯೇ ಇರಲಿ, ಮೂರ್ಖತನ. ಇನ್ನು ಆ ಮೂರ್ಖತನ ಇತರಿಗೆ ತೊಂದರೆ ಕೊಡುತ್ತಿದ್ದರೆ ಅದು ದೂರ್ತತನ. ಮತಾಂಧತೆ ಮೂರ್ಖತನವಾಗಿರುವ ವರೆಗೂ ನಾವು ನಕ್ಕು ಸುಮ್ಮನಿರಬಹುದು. ಆದರೆ ಅದು ದೂರ್ತತನವಾದಾಗ ಬಡಿದು ಶಿಕ್ಷಿಸಬೇಕಾದ್ದೇ ನ್ಯಾಯ. ಆದರೆ ಈ ’ಶಿಕ್ಷೆ’ ಮತಾಂಧರಿಗೇ ಹೊರತು ಸಾರಾಸಗಟಾಗಿ ಮುಸ್ಲಿಮರಿಗೋ ಹಿಂದೂಗಳಿಗೋ ಅಲ್ಲ. ಆದರೆ ಎರಡೂ ಕಡೆಯ ಮತಾಂಧರು ಮಾಡುತ್ತಿರುವ ಅನ್ಯಾಯ ಇದೇ, ಇಡೀ ಸಮುದಾಯವನ್ನೇ ಬಡಿಯಹೊರಡುವುದು. ಈ ನಿಲುವು ಹೃದಯವೈಶಾಲ್ಯವೋ, ’ಲಾಜಿಕ್ಕು’ಬದ್ಧವಾದ ಸಭ್ಯ ನಡೆಯೋ ತಮಗೆ ಅರ್ಥವಾಗಿರಬಹುದೆಂದುಕೊಳ್ಳುತ್ತೇನೆ. ನೀವು ನಿಮ್ಮ ನಿಲುವನ್ನು ಇನ್ನಿಷ್ಟೇ ತರ್ಕಬದ್ಧವಾಗಿ ಮಂಡಿಸಿದರೂ ಅದು mob ಮೇಲೆ ಉಂಟುಮಾಡುವ ಪ್ರಚೋದನೆಗಳನ್ನು ಮರೆಯುವಂತಿಲ್ಲ. ಯಾವುದೇ ಕೋಮುಗಲಭೆಯಿರಲಿ, ಅದನ್ನು ಹಿಂದೂಗಳು ಮಾಡಲಿ ಅಥವ ಮುಸ್ಲಿಮರು ಮಾಡಲಿ, ಬಲಿಯಾಗುವವರು ಮಾತ್ರ ನಿಮ್ಮ so called ಜಿಹಾದಿಗಳಲ್ಲ, ಇದಾವುದಕ್ಕೂ ತಲೆಹಾಕದ ನಮ್ಮ ನಿಮ್ಮಂಥವರು, ನೆನಪಿರಲಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನಗೆ ಇದ್ದುದದನ್ನು ಇದ್ದ ಹಾಗೆ ಹೇಳುವುದು ಮಾತ್ರ ಗೊತ್ತು. ಇನ್ನೊಬ್ಬರನ್ನು ರಕ್ಷಿಸುವುದಕ್ಕೋಸ್ಕರ ನಮ್ಮವರನ್ನೇ ದೂಷಿಸುವ ಬುಧ್ಧಿ ನನಗಿಲ್ಲ. ನಮ್ಮವರ ತಪ್ಪುಗಳನ್ನು ಮುಚ್ಚಿಡುವ ಬುಧ್ಧಿಯೂ ಇಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ನಮ್ಮವರ ತಪ್ಪುಗಳನ್ನು ಮುಚ್ಚಿಡುವ ಬುದ್ಧಿಯೂ ಇಲ್ಲ" ಅನ್ನೋದು ನಿಜವಾದರೆ ನನ್ನ ಮಾತುಗಳು ತಮಗೆ ಅನ್ವಯಿಸುವುದೇ ಇಲ್ಲ ಬಿಡಿ. ನಾನು ಹೇಳುತ್ತಿರುವುದು ಹಾಗೆ ಮುಚ್ಚಿಡುವಂಥವರ (ಅಥವ ಕಂಡರೂ ಜಾಣ ಕುರುಡು ಅಭಿನಯಿಸುವಂಥವರ) ಬಗ್ಗೆ. ಹಾಗೊಂದುವೇಳೆ ನಮ್ಮವರ ತಪ್ಪು "ಮುಚ್ಚಿಡ"ದೇ ಅದನ್ನು ಎತ್ತಿ ತೋರಿಸಿಬಿಟ್ಟರೆ ಅಂಥವರನ್ನು ’ಹುಸಿ’ಜಾತ್ಯತೀತವಾದಿಗಳ ’ಜಾತಿ’ಗೆ ಸೇರಿಸುವ ಸಂಪ್ರದಾಯ ಜಾರಿಗೆ ಬಂದುಬಿಟ್ಟಿದೆಯಲ್ಲ. ಹಿಂದುವಿನ ಅವಗುಣಗಳನ್ನು ಮುಸ್ಲಿಮ ಟೀಕಿಸಿದರೆ ಅವ ಜಿಹಾದಿ (grouped along with real jehadis); ಹಿಂದುವಿನ ಅವಗುಣಗಳನ್ನು ಹಿಂದುವೇ ಟೀಕಿಸಿದರೆ ಅವ "ಹುಸಿ ಜಾತ್ಯತೀತವಾದಿ" (grouped along with real ಹುಸಿ ಜಾತ್ಯತೀತವಾದಿಗಳು - ಈ ಪಟ್ಟಿಗೆ ಪ್ರಗತಿಪರ, ಬುದ್ಧಿಜೀವಿ, ಸುಧಾರಣಾವಾದಿ ಏನೆಲ್ಲ ಸಿಕ್ಕಿದರೆ ಅದನ್ನೆಲ್ಲಾ ಸೇರಿಸಿಬಿಟ್ಟಿದ್ದೇವೆ, just to project that its all ಹಿಂದೂವಿರೋಧಿ) ಹಾಗೆಯೇ ಮುಸ್ಲಿಮನ ಅವಗುಣಗಳನ್ನು ಹಿಂದುವೊಬ್ಬ ಟೀಕಿಸಿದರೆ ಅವನು ಕಾಫಿರ; ಮುಸ್ಲಿಮನ ಅವಗುಣಗಳನ್ನು ಮುಸ್ಲಿಮನೊಬ್ಬನೇ ಟೀಕಿಸಿದರೆ ಅವನ ತಲೆಯೇ ಹೋಗಬೇಕು ಸ್ಪಷ್ಟೀಕರಣ: ನಾನು ಮೇಲೆ ವ್ಯಂಗ್ಯವಾಡಿದ ಎರಡೂ stereo typeಗಳು ಹಿಂದೂ-ಮುಸ್ಲಿಂ ಎರಡೂ (ಅಥವಾ ಇನ್ನಾವುದೇ) ಪಂಗಡಗಳಲ್ಲಿ ಸೇರಿಕೊಂಡಿರುವ ಮತಾಂಧರ ಕುರಿತೇ ಹೊರತು ನಿರ್ದಿಷ್ಟವಾಗಿ ಒಬ್ಬ ಸಾಮಾನ್ಯ ಹಿಂದೂ ಅಥವ ಮುಸ್ಲಿಮನ (ಅಥವ ಇನ್ನಾವುದೇ ಜನಾಂಗದ) ಬಗ್ಗೆ ಅಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<< ಅದು ದೂರ್ತತನವಾದಾಗ ಬಡಿದು ಶಿಕ್ಷಿಸಬೇಕಾದ್ದೇ ನ್ಯಾಯ.>> ಎಲ್ಲಾ ಒಕೆ, ನಿಮ್ದು ಲಾಜಿಕ್ಕು, ಸಿದ್ಧಾಂತ ಎಲ್ಲವನ್ನು ಬಹಳ ಸುಂದರವಾಗಿ ವರ್ಣಿಸಿದ್ದಿರ, ವಿವರಿಸಿದ್ದೀರ.. ಈಗ ಬಡಿದು ಶಿಕ್ಶಿಸುವುದು ಯಾರು?? ಸರಕಾರ ಅಂತೇಳಿ ಮತ್ತೊಂದು ಜೋಕ್ ಮಾಡ್ಬೇಡಿ.. ನಮ್ಮಲ್ಲಿ ಎಷ್ಟು ಜನ ದೊಡ್ಡ ಮನುಶ್ಯರಿಗೆ ಶಿಕ್ಶೆ ಆಗಿದೆ ಅಂತ ತಿಳಿದೆ ಇದೆ... ನಿಮ್ಮ ಕನಸಿನ ಲೋಕ ಬಿಟ್ಟು ಹೊರಬನ್ನಿ ಸರ್... ಇವತ್ತು ಕರಾವಳಿಯ ಹೆಣ್ಣು ಮಕ್ಕಳು ಮುಸ್ಲಿಮರ ಹಿಂದೆ ಓಡಿ ಹೋಗುವುದು ಕಡಿಮೆಯಾಗಿರುವುದು ಭಜರಂಗದಳದಂತಹ ಸಂಘಟನೆಗಳಿಂದ.. ನಿಮ್ಮ ಲಾಜಿಕ್ ಉಪಯೋಗಿಸಿದರೆ, ನಮ್ಮಲ್ಲಿನ ಹೆಣ್ಣು ಮಕ್ಕಳಿಗೆ ಪ್ರೀತಿಸುವ ಗುಣ ಕಡಿಮೆಯಾಗಿದೆ.. ಸಾರ್, ಇನ್ನೊಬ್ಬರನ್ನ ಸರಿಪಡಿಸುವುದನ್ನ ಆಮೇಲೆ ನೋಡ್ಕೊಳ್ಳುವ, ಮೊದಲು ನಮ್ಮ ಬುಡ ಗಟ್ಟಿ ಮಾಡಿಕೊಳ್ಳುವ.. ಸ್ವಾಮಿ... ನಮ್ಮಂತಹ ಸಂಕುಚಿತ ಮನೋಭಾವದವರಿಗೆ, ನಿಮ್ಮಂತಹ ದೇಶದ ಹಿತ ಚಿಂತನೆ ಮಾಡುವವರು ಬೇಡ, ಅದರ ಬದಲು ಕೋಮುವಾದಿ ಸಂಘಟನೆಯಾದ ಭಜರಂಗದಳವೇ ಬೇಕು... ಯಾಕಂದರೆ, ನಾಳೆ ನಮ್ಮ ಅಕ್ಕ ಪಕ್ಕದ ಹೆಣ್ಣು ಮಕ್ಕಳು ಮುಸ್ಲಿಮರ ಹಿಂದೆ ಓಡಿ ಹೋದರೆ, ತಪ್ಪಿಸಲು ಭಯಂಕರ ನೀತಿವಂತರಾದ ನೀವು ಜೊತೆಯಲ್ಲಿರ್ತಿರೊ, ಇಲ್ವೊ.. ಆದ್ರೆ ಭಜರಂಗದಳದವರು ಖಂಡಿತ ಜೊತೆಯಲ್ಲಿರ್ತಾರೆ.. ನಮಸ್ಕಾರ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸ್ವಾಮಿಗಳೇ, "ಬಡಿದು ಶಿಕ್ಷಿಸುವುದು ಯಾರು" ಅಂತ ಕೇಳೋ ಮೊದಲು "ಬಡಿದು ಶಿಕ್ಷಿಸುವುದು ಯಾರನ್ನ" ಅಂತ ಕೇಳ್ಕೊಳ್ರೀ. ಅಲ್ಲೇ ಭಯಂಕರ ಕನ್ಫೂಷನ್ ಇಟ್ಕೊಂಡು ಮುಂದಿನ ಪ್ರಶ್ನೆಗೆ ಯಾಕೆ ಹೋಗ್ತೀರ? ಇರಲಿ, ಸರ್ಕಾರ ಮಾಡೋಕ್ಕೆ ಆಗದಿದ್ದನ್ನೆಲ್ಲಾ ನೀವು ಮಾಡ್ತೀರಾ? ಸರಿ, ದೇಶದಲ್ಲಿ ಲಕ್ಷಾಂತರ ಜನ ಅನ್ನ ಇಲ್ಲದೇ ಸಾಯ್ತಾ ಇದಾರೆ, ಅವರಿಗೆಲ್ಲ ಅನ್ನ ಹಾಕಿ; ಇನ್ನು ಲಕ್ಷಾಂತರ ಜನ ಕೆಲಸ ಇಲ್ಲದೆ ಬೀದೀಲಿದಾರೆ. ಅವರಿಗೆಲ್ಲಾ ಕೆಲಸ ಕೊಡಿಸಿ. ಅವರಲ್ಲಿ ಅದೆಷ್ಟೋ ಜನ ಬೇರೆ ಕೆಲಸ ಇಲ್ದೇ ಕಳ್ಳತನ, ಕೊಲೆ, ರೇಪು ಎಲ್ಲಾ ಮಾಡ್ತಾರೆ. ಅವರನ್ನೆಲ್ಲಾ ಬಡಿದು ಒಳಗೆ ಹಾಕಿ (ನೆನಪಿಡಿ, ಅವರಲ್ಲಿ ಎಲ್ಲರೂ ಮುಸ್ಲಿಮರೇ ಆಗಿರೋದಿಲ್ಲ). ಸರ್ಕಾರ ಕೈಲಾಗದೆ ಇದ್ರೆ ಅದನ್ನ ವಗಾಯಿಸಿ ಬೇರೆ ಸರ್ಕಾರ ತರೋದು ಪ್ರಜಾಪ್ರಭುತ್ವದ ವಿಧಾನ. ಅದು ಬಿಟ್ಟು ಬರೀ ಸಿದ್ಧಾಂತ ಮಾತ್ರ ಹಿಡುಕೊಂಡು ಶಿಕ್ಷೆ ರಕ್ಷೆ ಎಲ್ಲಾ ನಾನೇ ಮಾಡ್ತೀನಿ ಅಂತ ಕಾನೂನು ಕೈಗೆ ತಗೋಳ್ಳೋದು, ದುಂಡಾವರ್ತಿ ಮಾಡೋದು ನಕ್ಸಲರ ವಿಧಾನ. ಇನ್ನು ಅದರಲ್ಲಿ ಸಿದ್ಧಾಂತನೂ ಬಿಟ್ಬಿಟ್ಟು ಬರೀ ಗನ್ನು ಮಾತ್ರ ಕೈಗೆತ್ತಿಕೊಳ್ಳೋದು ಭಯೋತ್ಪಾದಕರ ವಿಧಾನ. ಭಯೋತ್ಪಾದಕರು, ಸಾರ್ವಜನಿಕರ ನೆಮ್ಮದಿಗೆ ಕಲ್ಲು ಹಾಕೋರು ಎಲ್ಲಿದ್ದರೂ ಪಾತಕಿಗಳೇ (ನೆನಪಿಡಿ, ಅಲ್ಲೂ ಎಲ್ಲಾ ಮುಸ್ಲಿಮರೇ ಆಗಿರೋದಿಲ್ಲ; ಈಶಾನ್ಯದಲ್ಲಿ ಭಯೋತ್ಪಾದನೆ ಇದೆ, ಅವರು ಯಾರೂ ಮುಸ್ಲಿಮರಲ್ಲ, ನೇಪಾಳದಲ್ಲಿ ಭಯೋತ್ಪಾದನೆ ಇದೆ/ಇತ್ತು, ಅವರು ಯಾರೂ ಮುಸ್ಲಿಮರಲ್ಲ, ರಶಿಯಾದಲ್ಲಿ ಇತ್ತು, ಅವರು ಯಾರೂ ಮುಸ್ಲಿಮರಲ್ಲ, ಇನ್ನು ಪಂಜಾಬದಲ್ಲೇ ಇತ್ತು, ಅವರೂ ಯಾರೂ ಮುಸ್ಲಿಮರಲ್ಲ, ಆದರೂ ಭಯೋತ್ಪಾದಕಿ ಭಯೋತ್ಪಾದಕೀನೇ, ಮುಸ್ಲಿಂ ಭಯೋತ್ಪಾದಕೀನೂ ಸೇರಿದಂತೆ). ಇನ್ನು ಅದಕ್ಕೆ ನಮ್ಮದೂ ಒಂದು ಸೇರಿಸು ಅಂದ್ರೆ ನಾನೇನು ಹೇಳಲಿ. ಹೆಣ್ಣುಮಕ್ಕಳು ಓಡಿಹೋಗೋದನ್ನ ಅಪ್ಪ-ಅಮ್ಮಂದಿರೇ ತಡೀಲಿಲ್ವಂತೆ, ಇನ್ಯಾರೋ ತಡೀತಾರಂತೆ, ಬಿಡ್ರೀ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಿಟ್ಟೆ....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ಥೇಟ್ ಅನಾವರಣವನ್ನೇ ಮತ್ತೊಮ್ಮೆ ಓದಿದಂತಾಯಿತು" ಇದು ಆವರಣ ಆಗಬೇಕಿತ್ತು ಎಂದನಿಸುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Thanks ರೂಪಾ ಅವರೇ, ಕೊನೇಪಕ್ಷ ನೀವೊಬ್ಬರಾದರೂ ಗಮನಿಸಿದಿರಲ್ಲ :) ಅದು ಬೇಕೆಂದೇ ಉಪಯೋಗಿಸಿದ್ದು, ಏಕೆಂದರೆ ಆ ಕಾದಂಬರಿಯುದ್ದಕ್ಕೂ ನಡೆಯುವುದು ಕಾದಂಬರಿಕಾರರೇ ಹೇಳುವಂತೆ ಸತ್ಯದ "ಅನಾವರಣ" ತಾನೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯರೇ ಮೊದಲನೆಯದಾಗಿ ,ಇದು ಕಥೆಯಲ್ಲ ನಾನು ಕ೦ಡ ಸತ್ಯ ಘಟನೆ. ಕಣ್ಣೆದುರಿಗೇ ಕ೦ಡ ಘಟನೆಗಳನ್ನು . ಒದುಗರ ಮು೦ದಿಡುವುದು ನನ್ನ ಅಭ್ಯಾಸ.ಅದನ್ನ ಕಥೆಯಾಗಿಸಿದ್ದೇನೆ ಅಷ್ಟೆ.ಒ೦ದು ವರ್ಗ ತನ್ನ ಸಾಮ್ರಾಜ್ಯವನ್ನು ವಿಸ್ತಾರಗೊಳಿಸುವುದಕ್ಕಾಗಿ ಯಾವ ಮಟ್ಟಕ್ಕೆ ಬೇಕಾದರೂ ಹೋಗಬಹುದು ಎ೦ಬುದಕ್ಕೆ ಕಥೆಯೊಳಗಿನ ಧರ್ಮಾ೦ಧ ಸಾಕ್ಷಿ.ಮತ್ತು ಈ ಮನಸ್ಥಿತಿಯ ಜನ ನಮ್ಮ ನಡುವೇ ಇದ್ದಾರೆ.ಇದಕ್ಕೆ ಪತ್ರಿಕೆಗಳಲ್ಲಿ ಬ೦ದ ಹಲವಾರು ಮತಾ೦ತದ ಅವಾ೦ತರಗಳು ಕಾರಣ.ಆಸೆ ಆಮಿಷ ದಬ್ಬಾಳಿಕೆಗಳಿ೦ದ ತಮ್ಮ ಸಮುದಾಯವನ್ನು ಹೆಚ್ಚಿಸಿಕೊಳ್ಳಬೇಕೆ೦ದು ಜನರನ್ನು ಮತಾ೦ತರ ಮಾಡುತ್ತಿರುವುದು ಸುಳ್ಳಲ್ಲ. ಇದಕ್ಕೆ ಧರ್ಮಾತೀತವಾದ ಪ್ರೀತಿಯನ್ನು ಇತ್ತೀಚೆಗೆ ಬಳಸಿಕೊಳ್ಳುತ್ತಿರುವುದು ಸತ್ಯ. ಎಲ್ಲಿಯವರೆಗೆ ಪ್ರೀತಿ ಎರಡು ಮನಸುಗಳ ಭಾವನೆಗಳನ್ನು ಹ೦ಚಿಕೊಳ್ಳುವ ಸಾಧನವಾಗಿತ್ತೋ ಅಲ್ಲಿಯ ತನಕ ಅದು ನಿಷ್ಕಲ್ಮಶ ವಾಗಿತ್ತು ಆದರೆ ಪ್ರೀತಿಯನ್ನು ಧರ್ಮದೊಳಗೆ ಬೆರೆಸಿ ಸ್ವಾರ್ಥಕ್ಕಾಗಿ ಬಳಸಿಕೊ೦ಡಾಗ ವಿಷಮಯವಾಯ್ತು.ಹೌದು ತಾನೆ? ನಡೆಯುತ್ತಿರುವುದು ಅಧರ್ಮ, ತಪ್ಪು ಎ೦ದು ಹೇಳಿದರೆ ಅದು ಚಟ ಎನುವಿರೇಕೆ?ಒಬ್ಬ ವ್ಯಕ್ತಿ ಬರೆದಿದ್ದನ್ನು ಒ೦ದಿಡೀ ಸಮುದಾಯ ಅನುಕರಿಸುತ್ತದೆ ಎ೦ದರೆ ಆದ ತಪ್ಪಿನ ಮಟ್ಟ ಎ೦ಥದ್ದು.ನಾನು ಯಾವುದೋ ಧರ್ಮವನ್ನ ಪ್ರತಿಪಾದಿಸುತ್ತಿಲ್ಲ.ಇನ್ಯಾವುದೋ ಧರ್ಮವನ್ನು ಟೀಕಿಸುತ್ತಿಲ್ಲ. ಎಲ್ಲ ಧರ್ಮಗಳಲ್ಲೂ ಸದ್ವಿಚಾರವನ್ನು ಹೊ೦ದಿದ ಜನರಿದ್ದಾರೆ. ಅದೇ ರೀತಿ ಧರ್ಮಾ೦ಧರೂ ಇದ್ದಾರೆ.ಅದನ್ನೇ ನನ್ನ ಕಥೆಯಲ್ಲಿ ಹೇಳಿದ್ದೇನೆ.ಅಲ್ಲಿ ಬರುವ ಸಾತ್ವಿಕ ತ೦ದೆ ಪಾತ್ರಧಾರಿ ಸಾನು ಕಣ್ಣಾರೆ ಕ೦ಡ ಒಡನಾಡಿದ ನನ್ನ ಬ೦ಧು ನನ್ನ ಧರ್ಮದ ಹೆಚ್ಚುಗಾರಿಕೆಯನ್ನ ನಾನು ಪ್ರದರ್ಶಿಸುತ್ತಿಲ್ಲ.ತಮ್ಮದೇ ಧರ್ಮದ ಹುಡುಗಿಯನ್ನ ಕೆಟ್ಟದಾಗಿ ನಡೆಸಿಕೊ೦ಡವರನ್ನು ತೋರಿಸುತ್ತಿದ್ದೇನೆ. ಯಾವ ಧರ್ಮದವನೇ ಆಗಲಿ ಪ್ರೀತಿಯನ್ನು ಸ್ವಾರ್ಥವಾಗಿ ಬಳಸಿಕೊ೦ಡರೆ ಅನು ಅಧರ್ಮಿಯೇ.ಪ್ರೀತಿಸುವಾಗ ಲೋಕವೆಲ್ಲಾ ಪ್ರೇಮ ಮಯವಾಗೇ ಇರುತ್ತದಲ್ಲವೇ ಹಾಗಾದಾಗ ಅದ್ರಲ್ಲಿ ಸ್ವಾರ್ಥವನ್ನು ಹುಡುಕುತ್ತಾ ಹುಡುಗಿಯಾಗಲೀ ಹುಡುಗನಾಗಲೀ ಕೂಡುವುದಿಲ್ಲ ಪೂರ್ತಿ ಬಲೆಯಲ್ಲಿ ಬಿದ್ದ ಮೇಲೆಯೇ ಅವನಿಗೆ ತಪ್ಪಿನ ಅರಿವಾಗುತ್ತದೆ ಆದರೆ ಅಷ್ಟರಲ್ಲಿ ಪರಿಸ್ಥಿತಿ ಕೈ ಮೀರಿ ಹೋಗಿರುತ್ತದೆ.ಮತಾ೦ತರವಾದರೆ ಮಾತ್ರ ಮದುವೆ ಎ೦ದಾಗ ಅನಿವಾರ್ಯವಾಗಿ ಧರ್ಮವನ್ನು ಬಿಡಬೇಕಾಗುತ್ತದೆ. ಇದನ್ನು ಕೆಲ ಧರ್ಮ ಗುರುಗಳು ಇತ್ತೀಚೆಗೆ ಪ್ರಚೋದಿಸುತ್ತಿರುವುದು ಸುಳ್ಳಲ್ಲ ತಾನೆ. ದಯವಿಟ್ಟು ನನ್ನ ಕಥೆ (?)ಯನ್ನು ಮತ್ತೊಮ್ಮೆ ಓದಿ ಅದರಲ್ಲಿ ಧರ್ಮದ ಬಗ್ಗೆ ನನ್ನ ಅಭಿಪ್ರಾಯ ತಿಳಿಯುತದೆ ಧರ್ಮಗಳನ್ನು ಟೀಕಿಸುವುದು ನನ್ನ ಉದ್ದೇಶವಲ್ಲ ಹರೀಶ ಆತ್ರೇಯ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಾವು ಕಂಡ ಸತ್ಯಘಟನೆ ನಿಜಕ್ಕೂ ಸತ್ಯವೇ ಆಗಿದ್ದರೆ ಆ ತಂದೆ ತಾಯಿಗಳಿಗೆ ನನ್ನ ದೊಡ್ಡ ನಮಸ್ಕಾರ (ಅವರು ಹಿಂದೂ ಅನ್ನುವುದಕ್ಕೆ ಅಲ್ಲ, ನಿಜವಾದ ತಂದೆ-ತಾಯಿ ಅನ್ನುವುದಕ್ಕೆ). ಆದರೆ ನನ್ನ ವಿರೋಧವಿರುವುದು ಅವರಿಬ್ಬರನ್ನು ನೀವು ಸಾಮಾನ್ಯ ಹಿಂದೂ ತಂದೆತಾಯಿಗಳ ಪ್ರತಿನಿಧಿಗಳೆಂಬಂತೆ ಚಿತ್ರಿಸುವುದಕ್ಕೆ. ಸಾಮಾನ್ಯ ತಂದೆ-ತಾಯಿ, ಆ ಹುಡುಗಿಯ ತಂದೆ-ತಾಯಿಯಂತಿರುತ್ತಾರೆ ಎರಡೂ ಪಂಗಡಗಳಲ್ಲೂ. ಮತ್ತೆ ನೀವು ಕತೆಯಮೂಲಕ ಸಾರಲೆತ್ನಿಸುತ್ತಿರುವ ಸಂದೇಶಕ್ಕೆ, ಅದು ಸತ್ಯಕತೆಯೋ ಕಲ್ಪನೆಯೋ ಅನ್ನುವುದು ಮುಖ್ಯವಾಗುವುದೇ ಇಲ್ಲ. ಮತ್ತೂ ನೀವು ಕಂಡಂಥ ಸತ್ಯಕತೆಗಳು ಇನ್ನೊಂದು ಪಂಗಡದಲ್ಲೂ ಹುಡುಕಿದರೆ ಸಿಕ್ಕೀತು, ಒಳ್ಳೆಯದನ್ನು ಹುಡುಕುವ ಕಣ್ಣು ಬೇಕಷ್ಟೇ ನನಗೆ "ಸರ್ವೇಜನಾಃ ಸುಖಿನೋಭವಂತು" ಎಂದು ಹೇಳುವ ಧರ್ಮ ನನ್ನದು ಎಂದು ಹೆಮ್ಮೆಯೇ ಹೊರತು, ಮತ್ತೊಂದು ಧರ್ಮ ಪರಧರ್ಮೀಯರನ್ನು ತರಿ ಎನ್ನುತ್ತದೆ ಎನ್ನುವುದಲ್ಲ. ಅದನ್ನು ಅನುಸರಿಸಬಾರದು ಎಂದು ತಿಳಿಯಬೇಕಾದವರು ಅವರೇ ಹೊರತು ನಾನಲ್ಲ. ನಮಗೆ ನಮ್ಮಲ್ಲೇ ತಿದ್ದಿಕೊಳ್ಳುವುದು ಸಾಕಷ್ಟಿರುವಾಗ ಬೇರೆಯವರು ತಿದ್ದಿಕೊಂಡರೇ ಬಿಟ್ಟರೇ ಎನ್ನುವುದು ಮುಖ್ಯವೇ ಅಲ್ಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಕುತರ್ಕಗಳೇನಿದ್ದರೂ ನಿಮ್ಮ ಕೊನೆಯ ಪ್ಯಾರವನ್ನು ನಾನು ಒಪ್ಪುವೆ. ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತರ್ಕ ಸೋಲುತ್ತಾ ಬಂತೆನಿಸಿದಾಗ ನಾಲಿಗೆಯ ಬಲವನ್ನೋ ತೋಳ ಬಲವನ್ನೋ ತೋರಿಸಿ "ಗೆಲ್ಲು"ವುದು ’ಮತ’ಚಿಂತಕರ ಲಕ್ಷಣವೇ ಆಗಿದೆ. ತಾರ್ಕಿಕವಾದ ಆಧಾರವನ್ನು ಕೊಡದೆಯೇ ತರ್ಕವೊಂದನ್ನು ಕುತರ್ಕವೆನ್ನುವುದು ವೈಯಕ್ತಿಕ ಟೀಕೆ ಅಲ್ಲವೇ? ಅದು ನಾಲಿಗೆಯ ಬಲ ಬಳಸುವ ಮೊದಲ ಹೆಜ್ಜೆ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ವಾದ ನಿಮಗೆ ಬಲ ಪ್ರಯೋಗ ಎನಿಸುವುದೂ ನಿಮ್ಮ ವಾದ ಕುತರ್ಕವೆನಿಸುವುದೂ ಸಹಜವೇ. ಅದಿಲ್ಲದೆ ವಾದ ಹೇಗಾಗುತ್ತದೆ? ಕುತರ್ಕ ಎಂಬುದು ವೈಯಕ್ತಿಕ ನಿಂದನೆ ಹೇಗಾಗುತ್ತದೆ ಎಂದು ಮಾತ್ರ ನನಗೆ ಗೊತ್ತಾಗಿಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕುತರ್ಕ ಎನ್ನುವುದು ಅದರಷ್ಟಕ್ಕದೇ ವೈಯಕ್ತಿಕ ನಿಂದನೆಯಲ್ಲ, ಆದರೆ ವೈಯಕ್ತಿಕ ನಿಂದನೆಯೆಡೆ ಮೊದಲ ಹೆಜ್ಜೆ ಅಷ್ಟೇ, ಏಕೆಂದರೆ ಇಲ್ಲಿ "ಕುತರ್ಕ" ಎಂಬುದಕ್ಕೆ ತಾವು ಯಾವುದೇ ತರ್ಕಬದ್ಧ ಕಾರಣಗಳನ್ನು ಕೊಟ್ಟಿಲ್ಲ. ಇರಲಿ ಬಿಡಿ, ಅದೇನು ಅಷ್ಟು ದೊಡ್ಡ ಮಾತಲ್ಲ. ಅದು ವೈಯಕ್ತಿಕ ನಿಂದನೆಯಲ್ಲ ಎಂಬ ತಮ್ಮ ಸ್ಪಷ್ಟೀಕರಣ ಸಾಕು ನನಗೆ :) ಆದರೆ ಇದರೊಂದಿಗೆ ತರ್ಕದ ಧಾರೆ ದಾರಿತಪ್ಪಿತೆಂಬುದಂತೂ ನಿಜವಲ್ಲವೇ? :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ಜನಗಳೊಡನೆ ಬೆರೆತು ಮನಸ್ಸನ್ನರಿಯುವುದು ಮತ್ತು....... " ಸ್ವಲ್ಪ ಈ ಬೂಟಾಟಿಕೆಯ ಪ್ರೊಫೈಲ್ ಚೇಂಜ್ ಮಾಡ್ತೀರಾ, ಫಾರ್ ಗಾಡ್ ಸೇಕ್? ಏಕೆಂದರೆ ತಾವು ಬರೆದ, ನಿಜ ಕತೆ ಎಂದು ಬಡಿಸಲು ಎತ್ನಿಸುತ್ತಿರುವ ಬರಹಕ್ಕೂ ಸಮುದಾಯಗಳ ನಡುವೆ ವೈಷಮ್ಯ ಸೃಷ್ಟಿಸುವ ತಮ್ಮ ಉದ್ದೇಶಕ್ಕೂ ಯಾವುದೇ ಸಾಮ್ಯತೆ ನನಗೆ ಕಾಣುತ್ತಿಲ್ಲ. ಮತ್ತೆ ವಿವಿಧ ಧರ್ಮಗಳಿಗೆ ಸೇರಿದ ಪ್ರೇಮಿಗಳು ಮದುವೆಯಾದರೆ ಯಾರೂ ವಿಜಯಪತಾಕೆ ಹಾರಿಸಬೇಕಿಲ್ಲ. ಕಳೆದ ವರ್ಷ ನನ್ನ ಚಿಕ್ಕಮ್ಮನ ಮಗ ಓರ್ವ ನಂಬೂದಿರಿ ಹಿಂದೂ ಹುಡುಗಿಯನ್ನು ಮದುವೆಯಾದ. ನಾವ್ಯಾರೂ ಕುಣಿದು ಕುಪ್ಪಳಿಸಲಿಲ್ಲ ಅವನ ಆಯ್ಕೆ ಮೆಚ್ಚಿ. ನಾನೇನನ್ನು ಬರೆಯಬೇಕೆನ್ದಿದ್ದೇನೋ ಅದನ್ನು K.S. ಮಂಜುನಾಥ್ ಸೊಗಸಾಗಿ ಬರೆದಿದ್ದಾರೆ. ಅವರಂಥವರಿಂದ "ತಮ್ಮಂತೆ ಆಲೋಚಿಸುವ" ವರು ಕಲಿಯಬೇಕಿರುವುದು ಬಹಳಷ್ಟಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಾವ ಆಧಾರದ ಮೇಲೆ ತಾವು ಇದು ಕಥೆ ಎಂದು ಪ್ರೂವ್ ಮಾಡ್ತಿದೀರ? ಸ್ವಲ್ಪ ಹೇಳ್ತೀರ ಫಾರ್ ಗಾಡ್ ಸೇಕ್?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದನ್ನು ಬರೆದ ವ್ಯಕ್ತಿಗಿಂತ (ಆತ್ರೇಯ) ತಮ್ಮ ಕಾಳಜಿ ನೋಡಿ ಮೆಚ್ಚಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮಗೆ ವಿಷಯಕ್ಕಿಂತ ನನ್ನ ಕಾಳಜಿಯೇ ಮುಖ್ಯ ಎಂದಾಯಿತು. ವಿಷಯಾಂತರ ಮಾಡುವುದರಿಂದ ಯಾರಿಗೂ ಉಪಯೋಗವಿಲ್ಲ. ಮೇಲಾಗಿ ತಮ್ಮ ಧರ್ಮದ ಎಲ್ಲಾ ತಪ್ಪುಗಳನ್ನು ಮನ್ನಿಸುವ ನಿಮ್ಮ ವಾದ ನೋಡಿ ನನಗೆ ಆಶ್ಚರ್ಯವಾಗಲಿಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದು ಕತೆ ಅಥವ "ಸತ್ಯ" ಎಂದು ಪ್ರೂವ್ ಮಾಡುವುದರ ಪ್ರಯೋಜನವನ್ನು ಹೇಳುತ್ತೀರಾ ದಯವಿಟ್ಟು? ಲೇಖಕರೇ ಹೇಳಿದ್ದಾರೆ ಇದು ಸತ್ಯಕತೆ ಎಂದು. ಇಲ್ಲಿ ಪ್ರಶ್ನೆ ಅದು "ಸತ್ಯ"ವೋ ಅಲ್ಲವೋ ಎಂಬುದಲ್ಲ, ಅದು ಸಾಧುವೋ ಅಲ್ಲವೋ ಎನ್ನುವುದು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದು ಕಥೆಯೋ ವ್ಯಥೆಯೋ ನನಗೆ ಬೇಕಾಗಿಲ್ಲ. ತಪ್ಪುಗಳನ್ನು ಕಥೆಯೆಂದು ಮುಚ್ಚಿ ಹಾಕುವ ಕೆಲವರ ಹುನ್ನಾರವನ್ನು ಬಯಲಿಗೆಳೆಯಬೇಕೆಂದು ಹಾಗೆ ಕೇಳಿದೆ ಅಷ್ಟೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬೇಲಿಯ ಎರಡೂ ಕಡೆ ಕೂಡಿರುವ ಮತಾಂಧರಿಂದ ಮನಸ್ಸು ರೋಸಿ ಹೋಯಿತು ಮಂಜುನಾಥ್. ಒಂದು ಕಡೆ ಲವ್ ಜಿಹಾದ್ ಎನ್ನುವ ಪೊಳ್ಳು, ಕುಚೋದ್ಯಭರಿತ ಪುಕಾರು, ಮತ್ತೊಂದು ಕಡೆ ಅರುಣಾಚಲಕ್ಕೆ ಹೋಗಬೇಡ ಎಂದು ನಮ್ಮ ಪ್ರಧಾನಿಗೆ ಹೇಳುವ ಚೀನೀಯರ ಧಿಮಾಕು... ದೇಶದ ಒಳಗೆ ಸಾಮರಸ್ಯ ವಿಲ್ಲದಿದ್ದರೆ ಶತ್ರುವಿಗೆ ಇಂಥ ಮಾತನ್ನಾಡಲು ಬಹುಸುಲಭ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಂದು ವರ್ಗದ ತಪ್ಪುಗಳನ್ನು ಎತ್ತಿ ಇನ್ನೊಂದು ವರ್ಗದ ತಪ್ಪುಗಳನ್ನು ಮುಚ್ಚುವವರನ್ನು ನೋಡಿ ನನಗೂ ರೋಸಿ ಹೋಯಿತು :( ಹಿಂದೂಗಳ ತಪ್ಪುಗಳನ್ನು ಹೇಳಿದರೆ ನನಗೂ ಬೇಜಾರಿಲ್ಲ. ಆದರೆ ಇರುವ ತಪ್ಪುಗಳನ್ನು ಮುಚ್ಚುವ ಚಟ ಏಕೆ? ಅಷ್ಟಕ್ಕೂ ಲವ್ ಜಿಹಾದ್ ಎನ್ನುವುದು ಪೊಳ್ಳು ಎಂದು ಹೇಳುವ ಯಾವ ಆಧಾರ ಇದೆ ನಿಮ್ಮಲ್ಲಿ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಅರುಣಾಚಲ, ಕಾಶ್ಮೀರ; ಚೈನಾ ಪಾಕಿಸ್ತಾನ; ಅಮೆರಿಕಾ ಇವೆಲ್ಲ ಅತಿ high level ರಾಜಕೀಯದ ಕೆಲವು ಹೆಜ್ಜೆಗಳು ಅಷ್ಟೇ. ಅದರಿಂದ ನಮಗೂ ನಿಮಗೂ ಆಗಬೇಕಾದ್ದು ಏನೂ ಇಲ್ಲ. ಮುಸ್ಲಿಂ ಆಡಳಿತಕೋರರು ಸ್ಥಳೀಯ ಹಿಂದೂಗಳ ಮೇಲೆ ನಡೆಸಿದ ದೌರ್ಜನ್ಯ ಎಷ್ಟು ಐತಿಹಾಸಿಕ ಸತ್ಯವೋ, ಇದಾವುದರ ಪರಿವೆಯೂ ಇಲ್ಲದೇ ನಮಾಜೋ ಸ್ತೋತ್ರವೋ ಕೂಗಿಕೊಂಡು ತಮ್ಮಷ್ಟಕ್ಕೆ ತಾವು ಯಾವುದಕ್ಕೂ ಹೋಗದೆ ಕೂಲಿಯೋ ನಾಲಿಯೋ ಮಾಡಿಕೊಂಡೂ ಪರಸ್ಪರರಿಗೆ ಒತ್ತಾಸೆಯಾಗಿ ಬದುಕುತ್ತಿರುವ ’ಹುಲು’ಹಿಂದೂ ಮುಸ್ಲಿಂ ಜನಗಳಿರುವುದೂ ಅಷ್ಟೇ ಸತ್ಯ. ಗತಿಸಿಹೋದ ದಾಳಿಕೋರರನ್ನು ಒಂದು ಜನಾಂಗ ದ್ವೇಷಿಸುತ್ತಾ ಇವತ್ತಿನವರ ಮೇಲೆ ’ಸೇಡು’ತೀರಿಸಿಕೊಳ್ಳಲೆತ್ನಿಸುವುದೂ ಹಾಗೆಯೇ ಮತ್ತೊಂದು ಜನಾಂಗ ಅದೇ ದಾಳಿಕೋರರನ್ನು ಹೀರೋಗಳೆಂಬಂತೆ ಪೂಜಿಸುತ್ತಾ ಇವತ್ತಿನವರ ಮೇಲೆ ಕತ್ತಿ ಜಳಪಿಸುವುದೂ ಶಾಂತವಾಗಿ ಬದುಕಲೆಳಸುವ ಸಾಮಾನ್ಯರಿಗೆ ಬಡಿದ ಪೀಡೆಯೇ ಸರಿ. ಅದಿರಲಿ ಅಬ್ದುಲ್, ಸ್ವವಿಮರ್ಶೆ ಮಾಡಿಕೊಳ್ಳುವ ಕೆಲವೇ ವ್ಯಕ್ತಿಗಳ ಗುಂಪಿಗೆ ನಮ್ಮ ಕಡೆ "ಹುಸಿ ಜಾತ್ಯತೀತ ವಾದಿಗಳು" ಎನ್ನುತ್ತಾರೆ. ಆ ಕಡೆ ಹೇಗೆ? ಸ್ವವಿಮರ್ಶೆ ಏನಾದರೂ ನಡೆಯುತ್ತದೆಯೇ ಅಲ್ಲಿ? ಹಾಗಿದ್ದರೆ ಅಂಥವರು ಎಷ್ಟಿದ್ದಾರೆ? ಅವರನ್ನು ಏನೆನ್ನುತ್ತಾರೆ? ಅಥವಾ ಅದು ಇಲ್ಲದಿದ್ದರೆ, ಯಾರಾದರೂ ಶುರುಮಾಡಬಹುದಲ್ಲವೇ? ಈ ಪ್ರಶ್ನೆ ಏಕೆಂದರೆ ನಾನು ಹಿಂದೂ "ಹುಸಿ ಜಾತ್ಯತೀತವಾದಿ"ಗಳನ್ನು ಸಾಕಷ್ಟು ನೋಡಿದ್ದೇನೆ, ಆದರೆ ಮುಸ್ಲಿಂ ಪಂಗಡದಿಂದ ಆ ಪ್ರವೃತ್ತಿಯನ್ನು ನೋಡಿದ ನೆನಪಿಲ್ಲ, ರಶ್ದೀ ಒಬ್ಬನನ್ನು ಬಿಟ್ಟರೆ. ಇಂಥ "ಹುಸಿ ಜಾತ್ಯತೀತವಾದಿಗಳು" ಎಲ್ಲ ಪಂಗಡಗಳಲ್ಲೂ ಹೆಚ್ಚಾಗಬೇಕಾದ್ದು ಇವತ್ತಿನ ತುರ್ತು ಅಗತ್ಯಗಳಲ್ಲೊಂದು :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಹುಸಿ ಜಾತ್ಯತೀತ ವಾದಿಗಳು" ಇದರ ವ್ಯಾಖ್ಯಾನ ಸ್ವಲ್ಪ ವಿವರವಾಗಿ ಕೊಡ್ತೀರಾ, ಮಂಜುನಾಥ್? ಅದನ್ನು ಓದಿ ತಮ್ಮ ಪ್ರಶ್ನೆಗೆ ನಾನು ಉತ್ತರಿಸುತ್ತೇನೆ .
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಚಲಿತವಿರುವ ಅರ್ಥದ ಪ್ರಕಾರ, ನಮ್ಮ ಧರ್ಮ/ಆಚರಣೆ/ನಿಲುವುಗಳ ಬಗ್ಗೆ ವಿಮರ್ಶೆ ಮಾಡುವವರು, ತಿದ್ದಬಯಸುವವರು; "ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕೇ ಹೊರತು ಇತರರನ್ನು ಶಿಕ್ಷಿಸಬಾರದು" ಎಂದು ಹೇಳುವವರು; ಜಾತಿ/ಧರ್ಮಗಳು ವೈಯಕ್ತಿಕ, ಅದನ್ನು ಸಾರ್ವಜನಿಕ ಜೀವನದಲ್ಲಿ ತರಬಾರದು, ತಂದರೂ ಅದರಿಂದ ಮತ್ತೊಬ್ಬರಿಗೆ ಅನನುಕೂಲವಾಗಬಾರದೆನ್ನುವ ಸಭ್ಯ ಜೀವನಶೈಲಿಯನ್ನು ಎತ್ತಿ ಹಿಡಿಯುವವರು; ಕಷ್ಟ ನಮಗೂ ಇರುತ್ತದೆ, ಮತ್ತೊಬ್ಬರಿಗೂ ಇರುತ್ತದೆ, ಹಾಗೇ ಸಂತೋಷಗಳೂ ಕೂಡ, ಅದಕ್ಕೆ ಧರ್ಮದ ಕಟ್ಟಿಲ್ಲ, ಅದಕ್ಕೆ ನಾವು ಸ್ಪಂದಿಸಬೇಕು ಎನ್ನುವ ಮನುಷ್ಯರು ಜೊತೆಗೆ ಇದೇ ಪಟ್ಟಿಗೆ ಇನ್ನೊಂದು ಗುಂಪೂ ಸೇರಿಕೊಳ್ಳುತ್ತದೆ: ಜಾತಿಯ ಹೆಸರಲ್ಲಿ ಓಟ್ ಬ್ಯಾಂಕ್ ರಾಜಕೀಯ ಮಾಡುವವರು, ಮೇಲೆ ಜಾತ್ಯತೀತತೆಯ ಮಾತಾಡುತ್ತಾ ಮಳೆ ಬರಿಸಲು ಹೋಮ ಮಾಡುವವರು, TRP ರೇಟಿಂಗ್ ಗಾಗಿ ಏನು ತೋರಿಸಲೂ ಹೇಸದ ಸುದ್ದಿಕೋರರು, ಬೆಂದ ಮನೆಯ ಗಳ ಹಿರಿಯುವವರು, ಡೋಂಗಿಗಳು, ಕಳ್ಳರು, ಕೊರಮರು, ಇತ್ಯಾದಿ. ಆದರೆ "ಹುಸಿ ಜಾತ್ಯಾತೀತವಾದಿಗಳು" ಎಂಬ ಹೆಸರನ್ನು ಬಳಸುವವರು ಮಾತ್ರ ಮೇಲಿನ ಪಂಗಡಗಳಲ್ಲಿ ಯಾವುದೇ ಭೇದ ತೋರುವುದಿಲ್ಲ. ಎಲ್ಲರನ್ನೂ ಒಗ್ಗಟ್ಟಿನಿಂದ ಅದೇ ಹೆಸರಿನಿಂದ ಕರೆದು ಗೌರವಿಸುತ್ತಾರೆ. ನಿಮ್ಮ ಪ್ರಶ್ನೆಗೆ ಉತ್ತರ ಕೊಟ್ಟಿದ್ದೇನೆ, ಈಗ ನನ್ನ ಪ್ರಶ್ನೆಗೆ ಪ್ರಾಮಾಣಿಕ ಉತ್ತರ ಕೊಡಿ. ಒಂದು ಸ್ಪಷ್ಟೀಕರಣ, ನಾನು ಮಾತ್ರ ಇಲ್ಲಿ "ಜಾತ್ಯತೀತವಾದಿಗಳು" ಎಂದದ್ದು ಮೊದಲಿನ ಪಂಗಡಕ್ಕೆ. ಈಗ ಉತ್ತರಿಸಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜುನಾಥರೇ, ನಿಮ್ಮ ತರ್ಕವನ್ನು ಕುತರ್ಕವೆಂದು ಜರೆದಿದ್ದಕ್ಕೆ ನನಗೆ ಖೇದವಿದೆ. ಆದರೆ ಮೊದ ಮೊದಲು ನನಗೆ ಹಾಗೆ ಅನ್ನಿಸಿದ್ದು ನಿಜ. ಅಂದ ಹಾಗೆ, ನಿಮ್ಮ ತರಹ ಯೋಚಿಸುವವರನ್ನು ನಾನು 'ಹುಸಿ ಜಾತ್ಯಾತೀತವಾದಿ' ಗಳೆಂದು ಕರೆಯುವುದಿಲ್ಲ. ನಾನು ಮಾತ್ರವಲ್ಲ. ನನಗೆ ತಿಳಿದಿರುವ ಬಹುತೇಕ ಸೋ ಕಾಲ್ಡ್ 'ಮತಾಂಧ ಹಿಂದೂ' ಗಳು ಜರೆಯುವುದು ಬರ್ಖಾ ದತ್ತರಂಥ ಸೋಗಲಾಡಿಗಳನ್ನು ಮಾತ್ರ. ನಿಮ್ಮದು ನೈಜ ಜಾತ್ಯಾತೀತತೆ, ನೀವು ಬರೆದಿದ್ದು ನಿಮ್ಮ ನೈಜ ನಿಲುವೇ ಆಗಿದ್ದರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅರ್ಥಮಾಡಿಕೊಂಡದ್ದಕ್ಕೆ ಧನ್ಯವಾದಗಳು; ಆದರೆ ತಮಗೊಂದು ಮನವಿ. ಎಲ್ಲರೂ ತಮ್ಮಷ್ಟೇ ಪ್ರಾಮಾಣಿಕವಾಗಿ ಮಾತಾಡುವುದಿಲ್ಲ, ಅಥವಾ ಇಷ್ಟೇ ಸುಲಭವಾಗಿ ತರ್ಕವನ್ನು ಒಪ್ಪುವುದಿಲ್ಲ. ಮುಖ್ಯವಾಗಿ mob mentalityಗೂ ತರ್ಕಕ್ಕೂ ಬಹು ದೂರ. ಆದ್ದರಿಂದ ನಾವು ಸಮುದಾಯವೊಂದರ ಮುಂದೆ ಏನನ್ನಾದರೂ ಮಂಡಿಸುವಾಗ "ಪರಿಣಾಮವೇನಾದರು ಆಗಲಿ, "ಸತ್ಯ"ವನ್ನು ಹೇಳಿಬಿಡುತ್ತೇನೆ" ಎಂದುಕೊಳ್ಳುವುದು ಸಾಮಾಜಿಕ ಬೇಜವಾಬ್ದಾರಿಯಾಗುತ್ತದೆ, in fact ಅದು ಸತ್ಯವನ್ನು ಮುಚ್ಚಿಡುವುದರಷ್ಟೇ ಬೇಜವಾಬ್ದಾರಿ. ಸತ್ಯವನ್ನು ಹೇಳುವುದು ಎಷ್ಟು ಮುಖ್ಯವೋ ಅದನ್ನು ಗುಂಪು ಅರಗಿಸಿಕೊಳ್ಳುವಂತೆ ಮಾಡುವುದೂ, ಅರಗಿಸಿಕೊಂಡೂ ವಿವೇಕದಿಂದ ವರ್ತಿಸುವಂತೆ ನೋಡಿಕೊಳ್ಳುವುದೂ ಸತ್ಯ ಹೇಳುವವನ ಜಬ್ದಾರಿಯೇ ಆಗಿರುತ್ತದೆ. ಆ ತಾಕತ್ತು ನಮಗಿಲ್ಲವೆಂದಾದರೆ ಗುಂಪನ್ನು ಉದ್ರಿಕ್ತಗೊಳಿಸುವ ಅರ್ಧಸತ್ಯಗಳನ್ನು ಮುಂದೂಡುವುದೇ ಒಳ್ಳೆಯದು. ಇವತ್ತು ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯುತ್ತಿರುವ ನೇತಾರರಿಗೂ, ಓಟುಬ್ಯಾಂಕನ್ನು ಉಳಿಸಿಕೊಳ್ಳಲು ಕೆಲವೇ ಜನಾಂಗಗಳನ್ನು ಮುದ್ದಿಸಿ ಕೆಡಿಸುತ್ತಿರುವ ರಾಜಕಾರಣಿಗಳಿಗೂ, ಮದ್ರಸಾಗಳಲ್ಲಿ ಜಿಹಾದನ್ನು ಬೋಧಿಸುವ ಕೆಲವೇ ಮುಲ್ಲಾಗಳಿಗೂ ಈ ಸಾಮಾಜಿಕ ಬದ್ಧತೆ, ಜವಾಬ್ದಾರಿ ಇಲ್ಲ. ಅಂಥವರ ನುಡಿಯ ಬಗ್ಗೆ ಜಾಗರೂಕರಾಗಿರಬೇಕಾದ್ದು, ಪ್ರಚೋದನೆಯ ನಡುವಿನಲ್ಲೂ ತಲೆ ಸಮ ಇಟ್ಟುಕೊಂಡು ಯೋಚಿಸಬೇಕಾದ್ದು, ನಮ್ಮ ನಿಮ್ಮ ಒಳಿತಿಗೇ ಒಳ್ಳೆಯದು, ಅಲ್ಲವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಬ್ದುಲ್, ಲವ್ ಜಿಹಾದ್ ಅನ್ನುವುದು ಪುಕಾರೂ ಅಲ್ಲ, ಕುಚೋದ್ಯವೂ ಅಲ್ಲ, ಕಟು ವಾಸ್ತವ. ಇದು ಆರಂಭವಾಗಿದ್ದು ಕೇರಳದ ಕಲ್ಲಿಕೋಟೆಯಲ್ಲಿ, ಅದಕ್ಕೆ ಕುಮ್ಮಕ್ಕು ದುಬೈನಲ್ಲಿರುವ ಪಾಕಿಸ್ತಾನಿಗಳು! ಬಹುಶ: ಇದು ನಿಮಗೆ ಆಶ್ಚರ್ಯವಾಗಿ ಕಾಣಬಹುದು. ಕೇರಳದ ಹಿಂದೂ ಹೆಣ್ಣು ಮಕ್ಕಳನ್ನು ಪ್ರೀತಿಯ ಸೋಗಿನಲ್ಲಿ ಮದುವೆಯಾಗಿ, ದುಬೈಗೆ ಕರೆತಂದು, ನಂತರ ಅವರನ್ನು ಇಲ್ಲಿನ ಅತ್ಯಂತ ಕ್ರೂರ ವೇಶ್ಯಾವಾಟಿಕೆಗೆ ತಳ್ಳಿ, ಕೊನೆಗೆ ಸಿಕ್ಕಿ ಬಿದ್ದು, ಈಗದೆಷ್ಟೋ ಕೇರಳ ಮುಸ್ಲಿಮರು ಜೈಲು ಕಂಬಿ ಎಣಿಸುತ್ತಿದ್ದಾರೆ. ಇದಲ್ಲದೆ ಅನೇಕ ಕಲ್ಲಿಕೋಟೆಯ ಯುವಕರು ದುಬೈಗೆ ಕೆಲಸಕ್ಕೆಂದು ಬಂದು ಇಲ್ಲಿ ಪಾಕಿಸ್ತಾನಿಗಳ ಮೋಡಿಗೆ ಮರುಳಾಗಿ, ಪಾಕಿಸ್ತಾನ್ ಆಕ್ರಮಿತ ಕಾಶ್ಮೀರಕ್ಕೆ ಹೋಗಿ ಉಗ್ರಗಾಮಿ ತರಬೇತಿ ಪಡೆದು, ಭಾರತದಲ್ಲಿ ನಮ್ಮವರನ್ನು ಕೊಲ್ಲುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಇದಕ್ಕೆ ಬೆಂಗಳೂರಿನಲ್ಲಿ ನಮ್ಮ ಸಿಸಿಬಿಯ ಪೊಲೀಸರಿಂದ ಬಂಧಿತರಾದ ಹಲವಾರು ಕೇರಳದ ಯುವಕರು ಸಾಕ್ಷಿಯಾಗಿದ್ದಾರೆ. ಇದು ಕಟು ಸತ್ಯ. ಆದರೆ ಅರಗಿಸಿಕೊಳ್ಳಲು ತುಂಬಾ ಕಷ್ಟವಾಗುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಹೇಳುವುದು ಸರಿ. ಅಂಥದ್ದಕ್ಕೆ ಕಾರಣ ಯಾರೇ ಆಗಿದ್ದರೂ ಅದು ಅಕ್ಷಮ್ಯ. ನಿಜ ಹೇಳಬೇಕೆಂದರೆ ಇಂಥ human trafikking ದಿನಬೆಳಗಾದರೆ ನಡೆಯುತ್ತಿದೆ, ಆದರೆ ಇದಕ್ಕೆ ಭಯೋತ್ಪಾದಕರ, ಪಾಕಿಸ್ತಾನದ, ಮುಸ್ಲಿಂ ಜನಾಂಗದ ಆಯಾಮ ಸೇರಿಕೊಂಡಿರುವುದು ಒಂದು ವಿಶೇಷ. ಅದೇ ಕಾರಣಕ್ಕೆ ಸರಿದಿಕ್ಕಿನಲ್ಲಿ ಯೋಚಿಸುವ ಮುಸ್ಲಿಮರೂ ಉಸಿರೆತ್ತದೇ ಸುಮ್ಮನಿರುವುದು ಬೇಜಾರಿನ ಸಂಗತಿಯೇ ಸರಿ. It is high time for the muslim community in its own interest, to distence itself from all unlawful elements, irrespective of their religious affiliations and condemn the bad things without mincing words. It looks better than letting the fanatics of other communities to make use of it to ostracise them. ಬಹುಶಃ ಇದಕ್ಕೆ ನಾನು ಉತ್ತರಿಸುವ ಬದಲು ಅಬ್ದುಲ್ ಉತ್ತರಿಸಿದರೆ ಹೆಚ್ಚು ಘನವಾಗಿರುತ್ತದೇನೋ ಇಷ್ಟು ಹೇಳಿದಮೇಲೆ, ಮತ್ತೆ ಮೂಲಭೂತ ಪ್ರಶ್ನೆ, ಇಷ್ಟಕ್ಕೆಲ್ಲಾ ಕಾರಣವಾದ ತಲೆಹಿಡುಕರ ಜಾಲವನ್ನು ಶಿಕ್ಷಿಸುವಂತೆ ಒತ್ತಾಯಿಸುವುದೇನೋ ಸರಿ (ನಮ್ಮ ಹೆಣ್ಣುಮಕ್ಕಳು ಜಾತಿಗೆಟ್ಟರು ಎಂಬ ಕಾರಣಕ್ಕಿಂತ ಹೆಚ್ಚಾಗಿ ಅವರು ಬಾಳುಗೆಟ್ಟರು ಎಂಬುವ ಕಾರಣಕ್ಕೆ), ಆದರೆ ಅದನ್ನು ಸಾರಾಸಗಟಾಗಿ ಇಡೀ ಮುಸ್ಲಿಂ ಜನಾಂಗಕ್ಕೇ ಥಳುಕು ಹಾಕುವುದು ಎಷ್ಟು ಸರಿ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮತಾಂಧತೆಗೆ ಮಂಗಳ ಹಾಡುವ ಉಪಾಯ ನನಗೆ ಕಾಣುವುದು ಒಂದೇ - ಇದು ಸರಿಯಲ್ಲ ಎಂದು ನಿಮಗೆ ಅನಿಸಬಹುದು, ಆದರೆ ಬೇರೆ ಉಪಾಯವೇನಿದೆ? - ಎಲ್ಲಾ ಧರ್ಮೀಯರಿಗೂ ಎಲ್ಲಾ ಧರ್ಮಗಳ ಕುರಿತು ಕಡ್ಡಾಯವಾಗಿ ಶಿಕ್ಷಣ ಕೊಡುವುದು. ಹಾಗೂ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವುದು (ಸೋ ಕಾಲ್ಡ್ ಕಮ್ಯುನಲ್ ಭಾಜಪ ಇದರ ಪರ ಎಂಬುದು ಹಾಗು ಸೋ ಕಾಲ್ಡ್ ಸೆಕ್ಯುಲರ್ ಕಾಂಗ್ರೆಸ್ ಇದರ ವಿರೋಧಿ ಎಂಬುದು ಕಟು ಸತ್ಯ). ಧರ್ಮ ಎಂಬುದು ವೈಯಕ್ತಿಕವಾದರೂ ದೇಶದ ಹಿತಕ್ಕಾಗಿ ಉಳಿದ ಧರ್ಮಗಳನ್ನು ಏಕೆ ಅಭ್ಯಸಿಸಬಾರದು? ಇದರಿಂದಾಗಿ ಬಹಳಷ್ಟು ತಪ್ಪು ಕಲ್ಪನೆಗಳು ಮಾಯವಾಗಿ ಭ್ರಾತೃತ್ವ ಬೆಳೆ ಯಬಹುದಲ್ಲವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಏಕರೂಪ ನಾಗರಿಕ ಸಂಹಿತೆಯನ್ನು ನಾನು ನೂರಕ್ಕೆ ನೂರು ಒಪ್ಪುತ್ತೇನೆ. ಅದು ಇವತ್ತಿನ ಜರೂರು ಅಗತ್ಯಗಳಲ್ಲೊಂದು. ಆದರೆ ಅದು ವೈಯಕ್ತಿಕ ಕಾನೂನನ್ನು ಸಂಪೂರ್ಣ ತೆಗೆದುಹಾಕಬೇಕೇ ಎನ್ನುವ ಬಗ್ಗೆ ಪ್ರಶ್ನೆಗಳಿವೆ. (ಹಿಂದೂ ಅಥವಾ ಮುಸ್ಲಿಂ) ವೈಯಕ್ತಿಕ ಕಾನೂನನ್ನು ನಾನು ಒಪ್ಪುತ್ತೇನಾದರೂ ಸಾಮಾಜಿಕ/ನಾಗರಿಕ ನ್ಯಾಯಗಳ spiritಗೆ ಅನುಗುಣವಾಗಿ ಆ ಕಾನೂನುಗಳ ಕೆಲವು ಕಟ್ಟುಪಾಡುಗಳನ್ನು ಪರಿಚಯಿಸಬಹುದೆನ್ನಿಸುತ್ತದೆ. ಏನೇ ಆಗಲಿ, ವೈಯಕ್ತಿಕ ಕಾನೂನು ವೈಯಕ್ತಿಕ ಮಟ್ಟದಲ್ಲಿರುವವರೆಗೂ, ಅದು ವ್ಯಕ್ತಿಯೊಬ್ಬನ ಸಾಮಾನ್ಯ ನ್ಯಾಯಬದ್ಧ ಹಕ್ಕುಗಳನ್ನು ಕಸಿಯದವರೆಗೂ ಅವುಗಳನ್ನು ಉಳಿಸಿಕೊಳ್ಳಬಹುದೆನ್ನಿಸುತ್ತದೆ. ಅಂಥ loop hole ಗಳನ್ನು ಪತ್ತೆಹಚ್ಚಿ ಅವುಗಳನ್ನು ಮುಚ್ಚುವ ತಾಕತ್ತು ಸರಕಾರಕ್ಕಿರಬೇಕಾಗುತ್ತದೆ. ಅದು ಐದಕ್ಕೂ ಹೆಚ್ಚು ವರ್ಷ ನಮ್ಮನ್ನಾಳಿದ so called communal ಬಿಜೆಪಿಗೂ ಇರಲಿಲ್ಲವೆನ್ನುವುದು ಅದರ "ಸೋ ಕಾಲ್ಡ್"ತನವನ್ನೇ ಹೆಚ್ಚು ತೋರಿಸುತ್ತದೆಯೆನ್ನಿಸುತ್ತದೆ. ಇನ್ನು ಎಲ್ಲರಿಗೂ ಧಾರ್ಮಿಕ ಶಿಕ್ಷಣ ಉತ್ತಮ ಕ್ರಮವಾದರೂ ಅದು ಎಷ್ಟರಮಟ್ಟಿಗೆ practical, ಮತ್ತು ಎಷ್ಟರಮಟ್ಟಿಗೆ "ಧರ್ಮ"ಸಮ್ಮತ ಎನ್ನುವ ಬಗ್ಗೆಯೇ ನನಗೆ ಪ್ರಶ್ನೆಗಳಿವೆ, ಇರಲಿ, ಅದು ಬೇರೆಯೇ ಚರ್ಚೆಯ ವಿಷಯ. ಆದರೆ ಖಡ್ಡಾಯವಾಗಿ ಅಲ್ಲವಾದರೂ ಐಚ್ಛಿಕವಾಗಿಯಾದರೂ ಕಲಿಯುವುದು, ಕಲಿಯುವುದು ಉತ್ತಮವೆನ್ನಿಸುತ್ತದೆ, ಆದರೆ ಅದು ಮುಕ್ತ ಮನಸಿನಿಂದ ಆಗಬೇಕಾದ್ದೇ ಹೊರತು ಪೂರ್ವಾಗ್ರಹದಿಂದಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದಕ್ಕೆ ಮುಸ್ಲಿಮರ, ಪಾಕಿಸ್ತಾನಿಗಳ, ಉಗ್ರಗಾಮಿಗಳ ಯಾವುದೇ ಆಯಾಮ ಹೊಸದಾಗಿ ಥಳುಕು ಹಾಕಿಕೊಂಡಿಲ್ಲ, ಇದು ಶುರುವಾಗಿದ್ದೇ ಅವರಿಂದ! ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ. ಯಾಕಂದ್ರೆ ಈಗ ಮುಸ್ಲಿಂ ಉಗ್ರಗಾಮಿಗಳ ಗಮನ ಕೇಂದ್ರೀಕೃತವಾಗಿರುವುದು ನಮ್ಮ ಕೇರಳ, ಅದರಲ್ಲೂ ಕಲ್ಲಿಕೋಟೆಯ ಮುಸ್ಲಿಂ ಯುವಕರ ಮೇಲೆ. ಏಕೆಂದರೆ ಅವರಲ್ಲಿ ಬಹುತೇಕ ಎಲ್ಲರೂ " ವೇರ್ ಆರ್ ಯು ಫ್ರಮ್" ಅಂತ ಯಾರಾದ್ರೂ ಕೇಳಿದ್ರೆ, "ಐಯಾಮ್ ಫ್ರಮ್ ಕೇರಳ" ಅಂತಾರೆಯೇ ಹೊರತು ಅಪ್ಪಿ ತಪ್ಪಿ ’ಐಯಾಮ್ ಫ್ರಮ್ ಇಂಡಿಯಾ" ಅನ್ನೋಲ್ಲ. ಇದಕ್ಕೆ ಸಾಕಷ್ಟು ಜೀವಂತ ನಿದರ್ಶನಗಳು ನನ್ನ ಕಣ್ಮುಂದಿವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಉತ್ತರ ಕೇರಳದ ಮುಸ್ಲಿಂ ಬಾಹುಳ್ಯದ ಪ್ರದೇಶಗಳನ್ನು ಭಾರತದಿಂದ ಪ್ರತ್ಯೇಕಿಸಬೇಕೆಂಬುದು ಇತ್ತೀಚಿನ ಬೇಡಿಕೆಯಂತೆ. ಹಾಗಂತ ಎಲ್ಲೋ ಕೇಳ್ಪಟ್ಟೆ. ವಿಶೇಷವೇನೂ ಇಲ್ಲ ಬಿಡಿ ಅದರಲ್ಲಿ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾಗೆಯೇ ತಮಿಳು ನಾಡನ್ನೂ ತಮಿಳರೇ ಹೆಚ್ಚಿರುವ ಲಂಕೆಯ ಕೆಲ ಭಾಗಗಳನ್ನೂ ಸೇರಿಸಿ ಭಾರತ-ಲಂಕೆಗಳಿಂದ ಪ್ರತ್ಯೇಕಿಸಿ ಈಳಂ ಸಾಮ್ರಾಜ್ಯವನ್ನು ಸೃಷ್ಟಿಸಬೇಕೆಂದು ತಮಿಳರ ಬಹುದಿನಗಳ ಆಗ್ರಹವಂತೆ. ಇದರಲ್ಲೂ ವಿಶೇಷವೇನಿಲ್ಲವೇನೋ? ಹಾಗೆಯೇ ಕನ್ನಡದ ಸೆರೆ ಹರಿದುಕೊಂಡು ಕೊಡಗರಿಗೆ, ಮಂಗಳೂರಿಗರಿಗೆ, ಉತ್ತರಕನ್ನಡಿಗರಿಗೆ ಪ್ರತ್ಯೇಕ ರಾಜ್ಯ ಮಾಡಬೇಕಂತೆ. ವಿಶೇಷವೇನಿಲ್ಲವೇನೋ, ಯಾಕೆಂದರೆ ಇಲ್ಲೆಲ್ಲೂ ಮುಸ್ಲಿಂ ಹೆಸರು ಬರಲಿಲ್ಲವಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅವರು "ಐಯಾಮ್ ಫ್ರಮ್ ಕೇರಳ" ಅನ್ನುತ್ತಾರೆಯೇ ಹೊರತು "ಐಯಾಮ್ ಫ್ರಮ್ ಪಾಕಿಸ್ತಾನ್" ಅಂತೇನೂ ಅನ್ನುವುದಿಲ್ಲವಲ್ಲ? ಅಲ್ಲದೇ "ಐಯಾಮ್ ಫ್ರಮ್ ಕೇರಳ" ಅನ್ನುವರು ಮಲೆಯಾಳೀ ಮುಸ್ಲಿಮರಷ್ಟೇ ಅಲ್ಲ, ನಾನು ನೋಡಿರುವ ಬಹುತೇಕ ಕೇರಳ ಯುವಕರು ಹಾಗೇ ಹೇಳುತ್ತಾರೆ. ಅದು ಜಾತಿಯ ಗುಣವೆನ್ನುವುದಕ್ಕಿಂತಾ ಮಣ್ಣಿನ ಗುಣವೆನ್ನುವುದು ಹೆಚ್ಚು ಸೂಕ್ತವೇನೋ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹರೀಶ್ ನಿರೂಪಣೆ ಚೆನ್ನಾಗಿದೆ ಹೀಗೂ ನಡೆದಿರಬಹುದು. ಇದು ಸಮಸ್ಯೆಯ ಒಂದು ಮುಖ ಹಾಗೆಯೇ ಸಮಸ್ಯೆಯ ಇನ್ನೊಂದು ಮುಖ ಮುಸ್ಲಿಂ ಹುಡುಗ ಹಿಂದೂ ಹುಡುಗಿಯನ್ನು ಮದುವೆಯಾಗುವ ಕನಸು ಕಂಡಾಗ ಅರ್ಥವಾಗುತ್ತವೆ, ನೈಜ ಪ್ರೀತಿಗೂ ಲವ್ ಜಿಹಾದ್ ಎಂದು ಹೆಸರಿಟ್ಟು ಅರಳುವ ಪ್ರೇಮ ಕಮರುವಾಗ ಮನಸು ಹಿಂಡುತ್ತದೆ ಅದು ನೈಜ ಪ್ರೇಮವೇ ಆಗಿದ್ದರೂ ಲವ್ ಜಿಹಾದ್ ಇರಬಹುದೇ ಎಂಬ ಅನುಮಾನದಿಂದ ಹುಡುಗಿಯರೂ ಯಾವೊಂದು ನಿರ್ಧಾರಕ್ಕೂ ಬಾರದೆ ತಮ್ಮಲ್ಲಿ ಅರಳಿದ ಪ್ರೀತಿಯನ್ನ ಮನದಲ್ಲಿಟ್ಟುಕೊಂಡೇ ಬೇಯುವುದು , ಅಥವ ತಮ್ಮ ಜೀವನವನ್ನೇ ಕೊನೆಗಾಣಿಸುವುದು ಇವೆಲ್ಲಾ ಸಮಸ್ಯೆಯ ಇನ್ನೊಂದು ಮುಖ ನಮ್ಮ ಇನ್‌ಸ್ಟಿಟ್ಯೂಟ್‌ನಲ್ಲೇ ನಡೆಯುತ್ತಿದ್ದ ಹಿಂದೂ ಮುಸ್ಲಿಂ ಪ್ರೇಮ ಪ್ರಕರಣವೊಂದು ಈ ಲವ್ ಜಿಹಾದ್ ಎಂಬ ಹೆಸರಿನಿಂದ ನಿಂತು ಹೋಗಿದ್ದು ಇನ್ನೂ ಮನಸಿನಲ್ಲೇ ಇದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

http://vijaykarnatak... ಈ ಸುದ್ದಿ ಇಲ್ಲಿನ ಚರ್ಚೆಗೆ ಪೂರಕವಾಗಬಹುದೆ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರೇಮವನ್ನು ಮುಂದಿಟ್ಟುಕೊಂಡು ಮತಾಂತರ ಮಾಡುವುದು ಎಂದರೆ ಲವ್ ಜಿಹಾದ್ ಅಲ್ಲವೆ? ಇಲ್ಲಿ ಹುಡುಗನಿಗೆ (ನೈಜ) ಪ್ರೇಮವೆಂಬುದೆ ಇಲ್ಲ. ಅವನಿಗೆ ಪ್ರೇಮವೆಂಬುದು ಒಂದು ಆಯುಧ. ಮತಾಂತರಕ್ಕಾಗಿ ಅದನ್ನು ಬರೀ ಹಿಂದೂಗಳಷ್ಟೆ ಅಲ್ಲ ಕೇರಳದ ಕ್ರೈಸ್ತರೂ ಕೂಡ ಅದರ ವಿರುದ್ದ ಧ್ವನಿಯೆತ್ತಿದ್ದಾರೆ. ಇನ್ನೂ ನ್ಯಾಯಾಲಯಗಳೂ ಪುರಾವೆ ಕೇಳುತ್ತವೆ ಒದಗಿಸಲು ಸಾಧ್ಯವೆ? ಹುಡುಗನ ಮನಸ್ಸಿನಲ್ಲಿ ಹುನ್ನಾರವಿತ್ತೋ ನೈಜ ಪ್ರೇಮವಿತ್ತೊ ಎಂದು ಕಂಡು ಹಿಡಿಯುವುದು ಹೇಗೆ? (ಮದರಸಕ್ಕೆ ಸೇರಿಸಿ ಬೇರೊಬ್ಬಳನ್ನು ವರಿಸಿದಾಗಲೆ ನಿಜ ವಿಷಯ ತಿಳಿಯುತ್ತಿರುವುದು) ಹದಿ ಹರೆಯದಲ್ಲಿ ಯಾವುದು ಪ್ರೇಮ ಯಾವುದು ಮೋಸ ಎಂಬ ಅರಿವಿರದೆ ಬಲಿಯಾಗುವುದು ಇರಬಹುದು. ಹೌದು ಕೊಳ್ಳೆಗಾಲಮಂಜುನಾಥ್ ಹೇಳಿದಂತೆ ಇಲ್ಲಿ ಹುಡುಗಿಯ (ಮತ್ತು ಮನೆಯವರ) ತಪ್ಪು ಡಾಳಾಗಿ ಕಾಣಿಸುತ್ತದೆ. ಕೆಲವು ಮೋಸ ಹೋದ ಯುವತಿಯರು ಬಾಯಿ ಬಿಟ್ಟರೆ ಜೀವಕ್ಕೆ ಅಪಾಯವೆಂದು ಮುಂದೆ ಬರುತ್ತಿಲ್ಲ. ಅಥವ ಆ ಸಂಕೋಲೆಯಿಂದ ಇನ್ನೂ ಯಾರೂ ಹೊರ ಸಾಧ್ಯವಾಗಿಲ್ಲದಿರಬಹುದು. ಕಾರಣ ಮಾತೃ ಧರ್ಮಕ್ಕೆ ಮರಳಿ ತಮ್ಮ ಮನೆಯವರಿಗೆ ಹೊರೆಯಾಗಲು ಅವರಿಗಿಷ್ಟವಿಲ್ಲದಿರಬಹುದು. ಧರ್ಮ ಪರಿವರ್ತನೆಯಾಗಲು ಹುಡುಗಿ ನಿರಾಕರಿಸಿದಾಗ ಹುಡುಗ ಕಣ್ಮರೆಯಾದ ಘಟನೆಗಳು ವರದಿಯಾಗಿಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ksmanjunatharರೇ<<ಅದನ್ನು ತಿಳಿಯಬೇದಾದವರು ಅವರೇ>> ಎ೦ದು ಹೇಳಿದ್ದೀರಿ.ನಿಜವಾಗಿ ಅವರು ತಿಳಿದುಕೊಳ್ಳುತ್ತಿದ್ದಾರೆಯೇ? ಇಲ್ಲವಲ್ಲ.ನನ್ನ ತಟ್ಟೆಯಲ್ಲಿ ನಾಯಿ ಇದೆ ನಿಜ ಆದರೆ ಅವರ ತಟ್ಟೆಯಲ್ಲಿ ಮತ್ತೊ೦ದು ಕೊಳಕು ಪ್ರಾಣಿ ಇದೆಯಲ್ಲ.ನಾವುಗಳು ತಿದ್ದಿಕೊಳ್ಳುತ್ತಿದ್ದೇವೆ ಅನ್ನುವುದ೦ತೂ ಸತ್ಯ ಕಾಲ ಕಾಲಕ್ಕೆ ಹಿ೦ದೂ ಧರ್ಮ ಶಾಸ್ತ್ರವೇ ಬದಲಾಗುತ್ತಿದೆ.ಆದರೆ ಇತರರು ಬದಲಾಗುತ್ತಿಲ್ಲ.ದಬ್ಬಾಳಿಕೆಯಿ೦ದ ಮೋಸದಿ೦ದ ನಮ್ಮನ್ನು ಹಣಿಯುತ್ತಿದ್ದರೂ ನಾವು ನಮ್ಮ ತಟ್ಟೆಯನ್ನು ನೋಡಿಕೊಳ್ಳುತ್ತಾ ಇರಬೇಕು ಅಲ್ಲವೇ? ಶಬ್ಬಾಶ್! ಆತ್ಮೀಯ ಅಬ್ದುಲ್ ರವರೇ<ಬೂಟಾಟಿಕೆ….>> ಸ೦ತೋಷ. ಇರಲಿ ಬಿಡಿ ನಾನು ಯಾರದೋ ಮದುವೆಯಿ೦ದ ಕುಣಿದು ಕುಪ್ಪಳಿಸುತ್ತಿಲ್ಲ ಕೆಲ ಜನರ ಸ೦ಕುಚಿತ ಮನೋಭಾವವನ್ನು ಹೇಳಿದ್ದೇನೆ ಅಷ್ಟೆ.ಮತ್ತೊ೦ದು ಜನಾ೦ಗ ವರ್ಗ ಹಿರಿದಾಗಿ ಯೋಚಿಸುತ್ತಿದೆ ಮತ್ತೊ೦ದು ಸಣ್ಣದಾದಾಗಿ…..ಇದನ್ನಲ್ಲ ನಾನುಹೇಳಲು ಹೊರಟಿದ್ದು ಆ ಧರ್ಮದೊಳಗಿನ ಜನರ ಮನಸ್ಥಿತಿಯನ್ನು ಮಾತ್ರ ಹೇಳಲು ಹೊರಟಿದ್ದು . ಎಲ್ಲ ಧರ್ಮದೊಳಗೂ ಒಳ್ಲೆಯವ್ರು ವಿಚಾರವ೦ತರು ಇದ್ದಾರೆ ಜೊತೆಗೆ ಅ೦ಧರೂ ಇದ್ದಾರೆ.ನಾನು ಯಾವುದೇ ಧರ್ಮವನ್ನು ಪಾಯಿ೦ಟ್ ಔಟ್ ಮಾಡಿ ನನ್ನ ಕಥೆ ಯಲ್ಲಿ ಹೇಳಲಿಲ್ಲ.ಆ ಹುಡುಗಿ ಹುಡುಗ ಯಾವ ಧರ್ಮಕ್ಕೆ ಬೇಕಾದ್ರೂ ಸೇರಿರಬಹುದು . ಆ ತ೦ದೆ ತಾಯಿಯೂ ಅಷ್ಟೆ.ಸುಮ್ಮನೆ ಹುಡುಗನನ್ನು ಹಿ೦ದುವೆ೦ದು ಹುಡುಗಿಯನ್ನು ಅನ್ಯ ಧರ್ಮೀಯಳೆ೦ದು ಕರೆದು ಕೊ೦ಡು ಕಿತ್ತಾಡಿದರೆ ನಾನು ಜವಾಬ್ದಾರನೇ? <<ತಮ್ಮ೦ತೆ ಆಲೋಚಿಸುವ>> ನನ್ನ ಅಲೊಚನೆ ಕಥೆಯಲ್ಲೇ ಇದೆ ಅದನ್ನು ಹುಡುಗನ ಹುಡುಗಿಯ ಬಾಯಿ೦ದ ಹೇಳಿಸಿದ್ದೀನಿ ಇಷ್ಟು ಸಾಕಲ್ಲವೇ? ಇನ್ನು ಲವ್ ಜಿಹಾದ್ ಬಗ್ಗೆ ಮ೦ಜು ೭೮೭ ಎಂಪಿನೀರ್ಕಾಜೆ ಅವರೇ ಹೆಚ್ಚು ಹೇಳಿದ್ದಾರೆ ಧನ್ಯವಾದಗಳುಮ೦ಜು ನೀರ್ಕಾಜೆ ರವರೆ. ನಡೆಯುತ್ತಿರುವ್ ಅಧರ್ಮವನ್ನು ತಪ್ಪು ಎ೦ದರೆ ತು೦ಬಾ ಜನರಿಗೆ ನೋವಾಗುತ್ತದೆ ಇ೦ಥವು ಭಾರದಲ್ಲಿ ಮಾತ್ರ ನಡೆಯುತ್ತದೆ … ಹರೀಶ್ ಆತ್ರೇಯ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Pages