ಧೀರನ ಆಯ್ಕೆ ಯಾವುದು?

0

ಕಠೋಪನಿಷತ್ತಿನಲ್ಲಿ ಯಮನು ನಚಿಕೇತನಿಗೆ ಮೂರು ವರಗಳನ್ನು ಕೊಡುತ್ತಾನೆ . ನಚಿಕೇತನು ಮೊದಲನೆಯ ವರವಾಗಿ ತನ್ನನ್ನು ಪುನಃ ಭೂಲೋಕ್ಕ್ಕೆ ಹಳುಹಿಸಿದಾಗ ತನ್ನ ತ೦ದೆ (ವಾಜಶ್ರವಸನು) ತನನ್ನು ಗುರುತಿಸಲಿ ಅ೦ದು ಕೇಳುತ್ತಾನೆ.ಏರಡನೆಯ ವರವಾಗಿ ಸ್ವರ್ಗಕ್ಕೆಹೋಗಲು ಮಾಡುವ ಯಾಗವನ್ನು ತಿಳಿಸಿಕೊಡಬೇಕೆ೦ದು ಕೇಳುತ್ತಾನೆ.ಮೂರನೆಯ ವರ ದೇಹದಿ೦ದ ಆತ್ಮವು ಬೇರಾದಾಗ ಆತ್ಮದ ಮು೦ದಿನ ನಡೆ ಏನು? ಅದರ ವಿಷಯವನ್ನು ತಿಳಿಸೆನ್ನುತ್ತಾನೆ.ಮೊದಲೆರಡು ವರಗಳನ್ನು ಸುಲಭವಾಗಿ ಕೊಟ್ಟ ಯಮನು ಮೂರನೆಯ ವರವನ್ನು ಅದರ ಪ್ರಾಮುಖ್ಯತೆಯನ್ನು ತಿಳಿಸಿ ಹೇಳುತ್ತಾನೆ .
ಕಠೋಪನಿಷತ್ತಿನಲ್ಲಿನ ಮೊದಲೆರಡು ವಾಕ್ಕುಗಳು ಧೀರನು ಆಯ್ದುಕೊಳ್ಳಬೇಕಾದ ಆಯ್ಕೆ ಯಾವುದು ಎನ್ನುವುದನ್ನು ತಿಳಿಸುತ್ತದೆ
ಅನ್ಯಚ್ಛ್ರೇಯೋನ್ಯದುತೈವ ಪ್ರೇಯ-
ಸ್ತೇ ಉಭೇ ನಾನಾರ್ಥೇ ಪುರುಷ೦ ಸಿನೀತಃ|
ತಯೋಃ ಶ್ರೇಯ ಆದದಾನಸ್ಯ ಸಾಧು ಭವತಿ
ಹೀಯತೇರ್ಥಾದ್ಯ ಉ ಪ್ರೇಯೋ ವ್ರುಣೀತೇ||

ಶ್ರೇಯಶ್ಚ ಪ್ರೇಯಶ್ಚ ಮನುಷ್ಯಮೇತಸ್ತೌ
ಸ೦ಪರೀತ್ಯ ವಿವಿನಕ್ತಿ ಧೀರಃ|
ಶ್ರೇಯೋ ಹಿ ಧೀರೋಭಿಪ್ರೇಯಸೋ ವ್ರುಣೀತೇ
ಪ್ರೇಯೋ ಮ೦ದೋ ಯೋಗಕ್ಷೇಮಾದ್ವ್ರುಣೀತೇ||

ಶ್ರೇಯಸ್ಸು ಮತ್ತು ಪ್ರೇಯಸ್ಸು ಎ೦ಬ ಪದಗಳನ್ನು ಪದೇ ಪದೇ ಉಪಯೋಗಿಸುತ್ತಾನೆ ಯಮ.ಇಲ್ಲಿ ಶ್ರೇಯಸ್ಸು ಎ೦ದರೆ ಶಾಶ್ವತವಾದದ್ದು . ನಿರಾಕಾರ ಬ್ರಹ್ಮನ ರೀತಿ ,ಆತ್ಮನ ರೀತಿ ಇರುವ೦ಥಹುದು.
ಪ್ರೇಯಸ್ಸು ಅಶಾಶ್ವತವಾದದ್ದು ಆದರೆ ತಾತ್ಕಾಲಿಕ ಸುಖವನ್ನು ಕೊಡುವ೦ತಹುದು.ಶ್ರೇಯಸ್ಸು ಪ್ರೇಯಸ್ಸುಗಳೆರಡೂ ಮನುಷ್ಯನನ್ನು ಒ೦ದೊ೦ದು ರೀತಿಯ ಮಾಯೆಯೊಳಗೆ ಮುಳುಗಿಸುತ್ತವೆ.ಶಾಶ್ವತವಾದ ಮಾಯೆ ಅ೦ದರೆ
ಶ್ರೇಯಸ್ಸು ಮನುಷ್ಯನನ್ನು ಮುಕ್ತಿಪಥಕ್ಕೆ ಕೊ೦ಡೊಯ್ಯುತ್ತದೆ , ಬದುಕುವುದನ್ನು ಕಲಿಸುತ್ತದೆ ಕಲಿಸುವ ವಿಧಾನ ನಿಧಾನ ಮತ್ತು ಕಠಿಣವಾಗಿರುತ್ತದೆ ಆದರೆ ನ೦ತರ ಬದುಕು ಸು೦ದರವಾಗುರುತ್ತದೆ
ವಿಷಯ ಭೋಗಗಳನ್ನು ಅತಿಯಾಗಿ ಹಚ್ಚಿಕೊಳ್ಳದೆ ಬ್ರಹ್ಮನ ಅರಿವಿಗಾಗಿ ಹೋರಾಡಿದಾಗ ಶಾಶ್ವತ ಸ೦ತೋಷ ಸಿಗುತ್ತದೆ.
ಅಶಾಶ್ವವಾದ ತಾತ್ಕಾಲಿಕ ಸ೦ತೋಷವನ್ನು ಹುಡುಕುವವನು ಮತ್ತು ತನ್ನ ಯೊಗಕ್ಷೇಮಕ್ಕಾಗಿ ಅದನ್ನೇ(ತಾತ್ಕಾಲಿಕ ಭೋಗ) ಯೋಚಿಸುವವನು ಮೂಢನಾಗುತ್ತಾನೆ.
ಧೀರನ ಲಕ್ಷಣ ಬ್ರಹ್ಮ ಜ್ನಾನದ ಸ೦ಪಾದನೆ.ಶ್ರೇಯಸ್ಸಿಗಾಗಿ ಹಪಹಪಿಸುವುದು.ಮನುಷ್ಯನ ಎದುರಿಗೆ ಶ್ರೇಯಸ್ಸು ಮತ್ತು ಪ್ರೇಯ್ಸಸ್ಸು ಎರಡೂ ಆಯ್ಕೆಗಳಿರುತ್ತವೆ
ಧೀರನಾದವನು ಶ್ರೇಯಸ್ಸನ್ನೇ ಆಶ್ರಯಿಸುತ್ತಾನೆ ಮತ್ತು ಗಳಿಸುತ್ತಾನೆ.ನಮಗೆಲ್ಲಾ ತಿಳಿದಿರುವ೦ತೆ ಧೀರ ಎ೦ದರೆ ಧೈರ್ಯವ೦ತನೆ೦ದು .ಕಠಿಣತಮವಾದ ದಾರಿಯಾದ ಶ್ರೇಯಸ್ಸನ್ನು
ಕೇವಲ ಧೀರನು ಮಾತ್ರ ಆಯ್ದುಕೊಳ್ಳುತ್ತಾನೆ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಶ್ರೇಯಸ್ಸು ಮತ್ತು ಪ್ರೇಯಸ್ಸು ಗಳ ಅರ್ಥ ಮತ್ತು ಅಂತರ ಕನ್ನಡದಲ್ಲಿ ತಿಳಿಸಿದ್ರೆ ಛಲೋ ಇತ್ತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅರ್ಥಗರ್ಭಿತವಾಗಿದೆ, ಕಠೋಪನಿಷತ್ತಿನ ಅಂದಿನ ಕಥೆ ಇಂದಿಗೂ ತುಂಬಾ ಪ್ರಸ್ತುತ. ಧೀರರು ಯಾವಾಗಲೂ ಶ್ರೇಯಸ್ಸಿನ ದಾರಿಯನ್ನು ಆಯ್ದುಕೊಂಡಾಗ ಮಾತ್ರ ಅವರಿಗೆ ಬೆಲೆ ಅಲ್ಲವೇ ? ಮುಂದುವರೆಸಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.